ಪಂಜು ಕಾವ್ಯಧಾರೆ

ಹೆದ್ದಾರಿ ಹೊದ್ದು ಮಲಗಿದವರು. ಬೆವತ ಚಂದಮಾಮನಂತ ಮೊಗದಿಂದ ಕಮಲೆಲೆಯಿಂದ ಜಾರುವ ಹನಿಯಂತೆ ಬೆವರಹನಿಗಳು ಸಾಲುಗಟ್ಟಿವೆ.! ಸಮನಾಂತರವಾಗಿ ಜೊಲ್ಲುರಸವೂ ತುಟಿಯಂಚಿಂದ ಜೋಗದಂತೆ ಸುರಿದು ತಲೆದಿಂಬಾಗಿ ಮಡಿಚಿಟ್ಟ ಮೆತ್ತನೆಯ ಅಮ್ಮನ ಸೀರೆ ಒದ್ದೆಯಾಗಿದೆ.!! ಗುಡಾರವು ನಾಲ್ದೆಸೆಯ ಗೂಟಗಳಿಗೆ ಬಿಗಿದಪ್ಪಿಕೊಂಡಿದೆ. ಬೀಸುವ ಗಾಳಿಯನ್ನು ನಿರ್ಭಂದಿಸಿ ಬೆರಗು ಮೂಡಿಸಿದೆ.! ಅಮ್ಮ ಕಣ್ಣುಬ್ಬುಗಳಿಗೆ ಕೈಯಡ್ಡಿ ಗುಡಾರದ ದ್ವಾರದಲ್ಲಿ ಸಿರಿವಂತರ ಸಿಂಗರಿಸಿ ಕಪಾಟಿನಲ್ಲಿಡುವ ಅಲಂಕಾರದ ವಸ್ತುಗಳ ಮಾರಾಟ ಮಾಡುತ್ತಿದ್ದಾಳೆ.!! ಅದು ರಾಜಪಥ ಇಬ್ಬದಿಯುದ್ದಕ್ಕೂ ಸುಂದರ ಮರಗಳ ಸಾಲು, ಪ್ರತಿ ಕ್ಷಣವೂ ರಾಜಾರಥಗಳ ಪಯಣ ನೋಡಲು ಇಕ್ಕಣ್ಣುಗಳು … Read more

ಕೆಂಪು ನೆರಳು!: ಎಸ್.ಜಿ.ಶಿವಶಂಕರ್

ವಾಸುದೇವರಿಗೆ ಗಾಢ ನಿದ್ರೆ. ಅಂತಾ ನಿದ್ರೆಯನ್ನು ಎಂದೂ ಮಾಡಿಲ್ಲ ಎನ್ನಿಸುವ ನಿದ್ರೆ. ಮೂರು ದಿನದಿಂದ ನಿದ್ರೆಯಿಲ್ಲದೆ ಹೈರಾಣಾಗಿದ್ದಕ್ಕೋ ಏನೋ..ಗಾಢ ನಿದ್ರೆ ಅವರಿಸಿತ್ತು! ಅಸ್ತಿತವನ್ನೇ ಮರೆಸಿದ ನಿದ್ರೆ! ದೇಹದ ಅರಿವಿಲ್ಲದ ನಿದ್ರೆ! ದೇಹದ ಭಾರವೇ ಇರಲಿಲ್ಲ! ತನಗೆ ಶರೀರವೇ ಇಲ್ಲ-ಎನ್ನುವಷ್ಟು ಹಗುರ, ನಿರಾಳ ಭಾವನೆ! ತಾನು ಬದುಕಿರುವೆನೋ? ಇಲ್ಲವೋ? ಜಾಗ, ಜಾವಗಳ ಅರಿವೇ ಇಲ್ಲದ ವಿಚಿತ್ರ ಹೊಚ್ಚ ಹೊಸ ಅನುಭವ! ಇಂತದು ಹಿಂದೆಂದೂ ಆಗಿರಲೇ ಇಲ್ಲ! ಎಲ್ಲಿರುವೆ? ಸಮಯ ಎಷ್ಟು? ಹಗಲೋ? ರಾತ್ರಿಯೋ? ಎಚ್ಚರವೇ ಇಲ್ಲ ಎಂದರೆ ಅದು … Read more

ಸಾಫಲ್ಯ: ಉಮೇಶ್‌ ದೇಸಾಯಿ

ಅದು ಅಖಿಲ ಭಾರತ ಮಟ್ಟದ ಸಂಗೀತದ ಅಂತಿಮ ಕಾರ್ಯಕ್ರಮ. ಕನ್ನಡದ ಆ ವಾಹಿನಿ ಅನೇಕ ವರ್ಷಗಳಿಂದ ಈ ಸ್ಫರ್ಧೆ ಏರ್ಪಡಿಸುತ್ತ ಬಂದಿದೆ. ಇಂದು ಅಂತಿಮ ಸುತ್ತು. ಎಲ್ಲ ಸ್ಫರ್ಧಿಗಳಲ್ಲೂ ವಿಚಿತ್ರ ತಳಮಳ ಈಗಾಗಲೇ ಈ ವಾಹಿನಿಯ ಈ ಅಂತಿಮಸ್ಫರ್ಧೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಂತೆಯೇ ಇತರೇ ಸುದ್ದಿವಾಹಿನಿಗಳಲ್ಲಿ ಈ ಕುರಿತು ಅನೇಕ ಚರ್ಚೆಗಳಾಗಿವೆ…ಯಾರು ಗೆಲ್ಲಬಹುದು ಪ್ರಶಸ್ತಿಯನ್ನು ಈ ಕುರಿತಾಗಿ ಅಲ್ಲಲ್ಲಿ ಬೆಟಿಂಗ್ ಕೂಡ ನಡೆಯುತ್ತಿದೆ ಎಂಬ ಸುದ್ದಿಯೂ ಅನೇಕ ವಾಹಿನಿಗಳಲ್ಲಿ ಹರಿದಾಡುತ್ತಿತ್ತು. ಸ್ಫರ್ಧಿಗಳಲ್ಲಿ ತಳಮಳವಿತ್ತು ನಿಜ ಅಂತೆಯೇ … Read more

ತಲಾಖ್: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

ಊರಿನ ಮುಂಭಾಗದಲ್ಲೇ ಶತಮಾನಗಳಷ್ಟು ಹಳೆಯದಾದ ಹುಣಸೀಮರದ ಬುಡದಲ್ಲಿ ಪೇಚು ಮಾರಿ ಹಾಕಿಕೊಂಡು ತಲೆ ಮೇಲೆ ಕೈ ಹೊತ್ತು ಕೂತ ಕರವೀರನನ್ನು ಸಮಾಧಾನ ಮಾಡಲು ಯಾರೊಬ್ಬರೂ ಮುಂದೆ ಬರಲಿಲ್ಲ. ಅಷ್ಟಕ್ಕೂ ಅಲ್ಲೇನಾಗಿತ್ತು ಎಂದು ಅದಾರಿಗೂ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಎಲ್ಲರ ಮುಖದಲ್ಲೂ ಭಯ, ಸಂಶಯ, ಆಶ್ಚರ್ಯ, ಸಂದೇಹವೇ ಮನೆ ಮಾಡಿದಂತಿತ್ತು. ಆಗಷ್ಟೇ ಕಚೇರಿಯಿಂದ ಬಂದ ಮಂಜನಿಗೆ ಇದಾವುದರ ಪರಿವೆಯೂ ಇರಲಿಲ್ಲವಾದರೂ ಅಲ್ಲಿ ಏನೋ ಒಂದು ದುರ್ಘಟನೆ ಜರುಗಿರಬಹುದೆಂಬ ಗುಮಾನಿಯಂತೂ ಮಂಜನ ತಲೆಯಲ್ಲಿ ಓಡುತ್ತಿತ್ತು. “ ಹಾಂ,, ನನ್ ಮಗಳು ಅಂಥಾದ್ದೇನು … Read more

ಭಾರತ ಭಾಗ್ಯವಿಧಾತನಿಗೊಂದು ಸಲಾಂ: ನಾಗರಾಜನಾಯಕ ಡಿ.ಡೊಳ್ಳಿನ

ಇತ್ತ ಧಾರವಾಡದ ಕೆ.ಸಿ.ಡಿ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರ ಭಾರತ ಭಾಗ್ಯವಿಧಾತ ಕಾರ್ಯಕ್ರಮ ಧ್ವನಿ ಬೆಳಕು ಎಲ್ಲ ಕಲಾಪ್ರಕಾರಗಳನ್ನೊಳಗೊಂಡ ಕಾರ್ಯಕ್ರಮ ಉತ್ತಮವಾಗಿ ಮೂಡಿಬರುತ್ತಿತ್ತು. ಆ ಅದ್ಧೂರಿ ಸೆಟ್, ಝಗಮಗಿಸುವ ಬೆಳಕು, ಹಿನ್ನೆಲೆ ಧ್ವನಿ, ಗೊರವರ ಕುಣಿತ, ಪುರವಂತಿಕೆ, ಯಕ್ಷಗಾನ, ಗೀಗಿ ,ತಮಾಷಾ ,ಡೊಳ್ಳು ಇನ್ನಿತರ ಕಲಾಪ್ರಕಾರಗಳ ಕಾರ್ಯಕ್ರಮ ಅದ್ಭುತವಾಗಿದ್ದ ಈ ಕಾರ್ಯಕ್ರಮ ನೋಡುತ್ತಿದ್ದಂತೆಯೇ ನನ್ನ ಮನಸ್ಸು 2008 ರಲ್ಲಿ ಬುದ್ಧವಿಹಾರದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಅಂತರ ಮಹಾವಿದ್ಯಾಲಯದ ಶಿಬಿರದ ಘಟನೆಗಳತ್ತ ಮನಸ್ಸು … Read more

ಗೃಹ ಬಂಧನದ ಸದ್ಬಳಕೆ: ಸೂರಿ ಹಾರ್ದಳ್ಳಿ

ಕೊರೋನಾ ಮಾರಿಯಿಂದಾಗಿ ಭಾರತದಲ್ಲಿ ಲಾಕ್‍ಡೌನ್ ಅನುಭವಿಸಬೇಕಾಗಿ ಬಂದಿದೆ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರಬೇಕಾಧ ಇಂತಹ ಸಂದರ್ಭಗಳಲ್ಲಿಯೂ ನಮ್ಮ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದಕ್ಕೆ ಕೆಲ ಟಿಪ್ಸ್‍ಗಳು ಇಲ್ಲಿವೆ. ನಿಮ್ಮ ಸಂಬಂಧಿಕರ, ಗೆಳೆಯರ, ಶತ್ರುಗಳ ಹೆಸರಿನ ಪಟ್ಟಿ ಮಾಡಿ. ಅವರ ವಿಳಾಸಗಳು, ದೂರವಾಣಿ ಸಂಖ್ಯೆಗಳು, ಇ-ಮೈಲ್ ಐಡಿಗಳು, ಇವನ್ನೆಲ್ಲಾ ಸಂಗ್ರಹಿಸಿ ನಿಮ್ಮ ಕಂಪ್ಯೂಟರಿನಲ್ಲಿ ಅಥವಾ ಪುಸ್ತಕಗಳಲ್ಲಿ ಬರೆದಿಡಿ. ಅರೆರೆ, ಇವರ ಸಂಖ್ಯೆ ಇಷ್ಟೊಂದಿದೆಯೇ ಎಂಬ ಅಚ್ಚರಿ ನಿಮಗಾಗಿಯೇ ಆಗುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಅವಶ್ಯಕ ಕೆಲಸಗಳಿಗೆ ಬೇಕಾದವರ ಹೆಸರನ್ನು … Read more

ಇಳಾ ಕಾದಂಬರಿ: ಚಂದ್ರು ಪಿ ಹಾಸನ್

ಕರೋನಾದ ಹಿನ್ನೆಲೆಯಲ್ಲಿ ರಜೆಯೊಂದಿಗೆ ಮಜಾ ಮಾಡುತ್ತಿದ್ದ ಸಂದರ್ಭದಲ್ಲಿ , ದಿನದ ಕೆಲಕಾಲ ಸಾಹಿತ್ಯದಲ್ಲಿ ಒಲವು ಮೂಡುತ್ತಿತ್ತು. ಇಂದಿನ ಸಾಹಿತ್ಯಾಸಕ್ತಿಯ ಆ ಕಾಲದಲ್ಲಿ ನನ್ನ ಹಿತಚಿಂತಕರು, ಮಾರ್ಗದರ್ಶಕರು ಆದಂತಹ ಶ್ರೀಮತಿ ವಾಣಿ ಮಹೇಶ್ ರವರು ಒಮ್ಮೆ ಪರಿಚಯಿಸಿದ ಪುಸ್ತಕ ಶ್ರೀಮತಿ ಶೈಲಜಾ ಹಾಸನ ಇವರ ಇಳಾ ಕಾದಂಬರಿಯನ್ನು ಓದಿದೆ ಎಂದು ಹೇಳಲು ಹರ್ಷಿಸುತ್ತೇನೆ. ಸಕಲ ಸದ್ಗುಣಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಭೂಮಿಯಂತೆ, ಒಂದು ಹೆಣ್ಣಿನ ಕಥೆ ಇಳಾ. ತನ್ನ ತಂದೆಯ ಸಾವಿನಿಂದ ಕೃಷಿ ಜಗತ್ತಿಗೆ ತಿಳಿಯಬೇಕಾದ ಇಳಾ ತಂದೆಯನ್ನು ದೂಷಿಸದೆ … Read more

ಮಲೆನಾಡಿನ ಸ್ಥಿತಿ-ಗತಿಯೂ ಕೊರೋನ-ಮಂಗನ ಖಾಯಿಲೆಯಂತಹ ಮಹಾಮಾರಿಯೂ. . . . : ವಿಜೇತ ಎಂ. ವಿ

ಮಲೆನಾಡು ಹಚ್ಚ ಹಸಿರು ಹೊದಿಕೆಯ ಮೇಲ್ಮೈ,ದಟ್ಟ ಕಾನನದ ನಡುವೆ ಅಲ್ಲಲ್ಲಿ ಒಂದೋ ಎರಡೋ ಮನೆಗಳು ಮತ್ತೆಲ್ಲೋ ಚಿಕ್ಕ ಹಳ್ಳಿ ಊರು ಕೇರಿ ಇತ್ಯಾದಿ. ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿರುವ ಪ್ರಕೃತಿಯ ಮಡಿಲು . ಕೆರೆ ನದಿ ಹಳ್ಳ ಕೊಳ್ಳಗಳಿಂದ ಸಮೃದ್ಧ ಗಾಳಿ ಬೀಸುತ್ತಿದೆ. ಬೇಸಿಗೆಯಲ್ಲೂ ಮರದ ನೆರಳು ರಸ್ತೆಗಳನ್ನು ಮುಚ್ಚುವಷ್ಟು ತಂಪಾಗಿರುತ್ತದೆ. ಹಲವು ಹಣ್ಣು ಹೂಗಳು ಹಾಗೇ ಪ್ರಾಣಿ ಪಕ್ಷಿಗಳು ಹೀಗೆ ವೈವಿಧ್ಯಮಯವಾಗಿದೆ ಮಲೆನಾಡು. ಮಾನವರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ವಿವಿಧತೆಯ ತಾಣವಾಗಿದೆ. ಇಷ್ಟೆಲ್ಲಾ ಸಕಲ ಸಮೃದ್ಧ … Read more

ಒಡಲಾಳದ ಪದ್ಯಗಳು: ಎಚ್.‌ ಷೌಕತ್‌ ಅಲಿ, ಮದ್ದೂರು

ಕ್ರಿಯಾಶೀಲ ಬರಹಗಾರ ಕವಿ ವಿಮರ್ಶಕ ಕಥಾಸಂಕಲನಕಾರ ನಾಗೇಶ್ ನಾಯಕ್ ಬೆಳಗಾವಿ ಜಿಲ್ಲೆಯ ಸವದತ್ತಿ ಹುಟ್ಟೂರು. ಶಿಕ್ಷಕರಾಗಿ ಮಡಿಕೇರಿಯಲ್ಲಿ ಸೇವೆ. ಜೊತೆ ಜೊತೆಯಲ್ಲಿ ಕಥೆ-ಕವನಗಳನ್ನು ನಾಡಿನ ಪತ್ರಿಕೆಗಳಲ್ಲಿ ಪ್ರಕಟಿಸಿ ತೃಪ್ತಿಯಿಂದ ಸ್ಪೂರ್ತಿಗೊಂಡು ಹತ್ತು ಹಲವು ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ಮತ್ತು ಪ್ರಮುಖ ಬರಹಗಾರರಲ್ಲಿ ಗುರುತಿಸಿಕೊಂಡ ಆತ್ಮೀಯ ಲೇಖಕ. ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು ಅನೇಕ ಸಮ್ಮೇಳನಗಳಲ್ಲಿ ಆಕಾಶವಾಣಿಯಲ್ಲಿ ಮತ್ತು ಚಂದನ ವಾಹಿನಿಯ ಸಂದರ್ಶನದ ಮೂಲಕ ಕನ್ನಡಿಗರಿಗೆ ಚಿರಪರಿಚಿತ ನಾಗೇಶ್ ನಾಯಕ್. ಪ್ರಸ್ತುತ ಇವರ ಕವನ ಸಂಕಲನ ‘ಒಡಲ … Read more

ವೈಷಮ್ಯ ಮತ್ತು ಒಪ್ಪಂದದ ಮೇಲಿನ ಕಥಾನಕ –The Merchant Of Venice : ನಾಗರೇಖ ಗಾಂವಕರ

ಆಂಟೋನಿಯೋ ಇಟಲಿಯ ವೆನಿಸ್‍ನ ನಿವಾಸಿ. ಪ್ರಸಿದ್ಧ ವ್ಯಾಪಾರಿ. ಆತ ವ್ಯಾಪಾರಿಯಾಗಿದ್ದರೂ ಸದಾಚಾರ ಸಂಪನ್ನ, ಸ್ನೇಹಜೀವಿ, ದಯಾಳುವಾದ ಆತನ ಸ್ನೇಹ ಬಳಗ ದೊಡ್ಡದಾಗಿತ್ತು. ಬಸ್ಸಾನಿಯೋ, ಗ್ರೇಸಿಯಾನೋ, ಲೊರೆಂಜೋ, ಸಲೆರಿಯೋ, ಸಲಾನಿಯೋ ಇವರೆಲ್ಲರ ಅಚ್ಚುಮೆಚ್ಚಿನ ಗೆಳೆಯನಾತ. ಅವರಿಗಾಗಿ ತನ್ನೆಲ್ಲ ಆಸ್ತಿ ಸಂಪತ್ತು, ಜೀವವನ್ನು ಕೊಡಲು ಸಿದ್ದನಿದ್ದ. ಆತನ ವ್ಯಕ್ತಿತ್ವ, ವೈಚಾರಿಕತೆ,ಕರುಣಾಪೂರಿತ ವ್ಯಕ್ತಿತ್ವ ಇತರರಿಗೆ ಮಾದರಿ. ಆತ ಮಮತೆ ಕರುಣೆಗಳ ಕ್ರೈಸ್ತ ತತ್ವಕ್ಕೆ ಮತ್ತೊಂದು ರೂಪಕವೆಂಬಂತೆ ಕಂಡುಬರುತ್ತಾನೆ. ಆದರೆ ಆತ ಅದೇನೋ ಉದ್ವಿಗ್ನತೆಯಲ್ಲಿ ಮಾನಸಿಕ ಕ್ಲೇಶದಿಂದ ನೋಯುತ್ತಿದ್ದಾನೆ. ಆಂಟೋನಿಯೋ ಅದಕ್ಕೆ ನಿರ್ದಿಷ್ಟ … Read more

ಶೃತಿ ನೀ ಮಿಡಿದಾಗ (ಭಾಗ ೨): ವರದೇಂದ್ರ.ಕೆ ಮಸ್ಕಿ

ಸುಶಾಂತನ ಪ್ರೇಮ ಪತ್ರ ಓದುತ್ತ ಓದುತ್ತ ಶೃತಿಯ ಅಂತರಂಗದಿ ಪ್ರೇಮದ ಬೀಜ ಮೊಳಕೆ ಒಡೆದು ಬಿಟ್ಪಿತು. ಇದು ಪ್ರೇಮವೋ, ಅಥವಾ ಪ್ರಥಮಬಾರಿಗೆ ಒಬ್ಬ ಹುಡುಗನ ಮನದ ಭಾವಕೆ ಸ್ಪಂದಿಸುವ ವಯೋಸಹಜ ಆಕಾಂಕ್ಷೆಯೋ ತಿಳಿಯದ ದ್ವಂದ್ವಕ್ಕೆ ಶೃತಿಯ ಮನಸು ಹೊಯ್ದಾಡಿ ವಯೋಸಹಜವಾಗಿ ಮೂಡುವ ಭಾವನೆಯೇ ಪ್ರೀತಿ ಅಲ್ಲವೆ? ಹೌದು ಎಂದುಕೊಂಡಳು. ಯವ್ವನ ದೇಹಕ್ಕೆ ಮಾತ್ರ ಆಗಿದ್ದ ಶೃತಿಯ ಮನಸಿಗೂ ಯವ್ವನ ಬಯಸುವ ಪ್ರೀತಿ, ಪ್ರೀತಿ ನೀಡುವ ಹೃದಯ ಒಂದಿದೆ ಎಂದು ತೋರಿಸಿದ ನಿಜ ಪ್ರೇಮಿ ಸುಶಾಂತ. ಅವನ ಪ್ರೇಮವನ್ನು … Read more

ಕನಸಿನ ಮಾಯಾಲೋಕಕ್ಕೆ ಡ್ರೀಮ್ ಕ್ಯಾಚರ್ ನ ಕೊಡುಗೆ..: ಚೈತ್ರಭೂಲಕ್ಷ್ಮಿ ಬೆಂಗಳೂರು

ಕೆಲವು ಸ್ಥಳೀಯ ಅಮೆರಿಕನ್ ಸಂಸ್ಕೃತಿಗಳಲ್ಲಿ, ಡ್ರೀಮ್‌ಕ್ಯಾಚರ್ ಗಳನ್ನು ಕೆಲವು ಗರಿಗಳು ಅಥವಾ ಮಣಿಗಳಂತಹ ಪವಿತ್ರ ವಸ್ತುಗಳನ್ನ ಬಳಸಿ ತಯಾರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಅವುಗಳನ್ನು ಹೆಚ್ಚಾಗಿ ತೊಟ್ಟಿಲಿನ ಮೇಲೆ ರಕ್ಷಣೆಯಾಗಿ ನೇತುಹಾಕಲಾಗುತ್ತದೆ. ಇದು ಒಜಿಬ್ವೆ ಸಂಸ್ಕೃತಿಯಲ್ಲಿ ಬಹಳ ಶ್ರೇಷ್ಠವಾದ ತಾಯತರೂಪವಾಗಿದೆ. ಡ್ರೀಮ್ ಕ್ಯಾಚರ್ ರಾತ್ರಿಯ ದುಃಸ್ವಪ್ನಗಳನ್ನು ಗೊಂದಲಗೊಳಿಸುತ್ತದೆ ಮತ್ತು ಆಹ್ಲಾದಕರ ಕನಸುಗಳೊಂದಿಗೆ ಒಳ್ಳೆಯದನ್ನು ಆಕರ್ಷಿಸುತ್ತದೆ. ಒಂದು ಕಾಲದಲ್ಲಿ, ಕನಸಿನ ಕ್ಯಾಚರ್ ಅನ್ನು ಆಸಕ್ತಿ ಹೊಂದಿರುವ ಜನರ ಮನೆಗಳಲ್ಲಿ ಮಾತ್ರ ಕಾಣಬಹುದಾಗಿತ್ತು. ಇತ್ತೀಚಿನ ದಿನಗಳಲ್ಲಿ, ಸಂಪೂರ್ಣವಾಗಿ ವಿಭಿನ್ನ ಜನರು ಇದನ್ನು ಆಯ್ಕೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 15 & 16): ಎಂ. ಜವರಾಜ್

– ೧೫- ಇಲ್ಲಿ ಕತ್ಲು ಅಂದ್ರ ಕತ್ಲು ಅಲ್ಲಿ ಕಾಣ್ತ ಮಾರ್ದೂದಲ್ಲಿರ ಹೆಂಡದಂಗಡಿಲಿ ಲಾಟೀನ್ ಬೆಳಕು ಇಲ್ಲಿ, ಯಾರು ಹೋದ್ರು ಯಾರ್ ಬಂದ್ರು ಗೊತ್ತಾಗದ ಹೊತ್ತು ಈ ಅಯ್ನೋರು ಅತ್ತಿಂದಿತ್ತ ಇತ್ತಿಂದತ್ತ ತಿರುಗಾಡ್ತ ಬೀಡಿ ಸೇದ್ತ ಎಳೆಯೋ ದಮ್ಮು ದಮ್ಮಿಗೂ ಬೀಡಿ ಮೊನೆಲಿ ಬೆಂಕಿನುಂಡೆ ಕಾಣ್ತಿತ್ತು ಅರೆ ಹೆಂಡದಂಗಡಿಲಿ ಜಗಳ ಅಯ್ನೋರು ದಿಟ್ಟಿಸಿ ನೋಡ್ದಾಗಾಯ್ತು ನಂಗು ದಿಗಿಲು ಯಾರ ಈ ಜಗಳ ಮಾಡ್ತ ಇರದು? ಆ ದನಿಯ ಎಲ್ಲೊ ಕೇಳಿರ ನೆಪ್ಪು ಆ ದನಿ ಜೋರಾಯ್ತು ಅರೆ … Read more

ಕನಸುಗಳಿಗೆ ರೆಕ್ಕೆ ಬಂದಾಗ: ನಿಂಗಪ್ಪ ಹುತಗಣ್ಣವರ

ಹಿಡಿಯಷ್ಟು ಕನಸುಗಳನ್ನು ಎದೆಗಪ್ಪಿಕೊಂಡು ಧಾರಾಳವಾಗಿ ಜಗತ್ತಿನ ಬಗ್ಗೆ ಒಂದಷ್ಟು ಕಾಳಜಿಯಿಲ್ಲದೆ ಬದುಕಿಬಿಡುತ್ತೇವಲ್ಲ ಅದಕ್ಕಿಂತಲೂ ನಾಚಿಕೆಗೇಡಿನ ಸಂಗತಿ ಬೇರೊಂದಿಲ್ಲ. ಬದುಕಿನ ಅಸ್ತಿತ್ವಕ್ಕಾಗಿ ಯಾವುದೇ ಸಿದ್ಧಾಂತದೊಂದಿಗೆ ಮುಲಾಜಿಲ್ಲದೆ ರಾಜಿಯಾಗುವ ನಮ್ಮ ಮನಸ್ಥಿತಿಯ ಬಗ್ಗೆಯೂ ಒಂದಷ್ಟು ತಕರಾರಿದೆ. ಏನೇ ಇರಲಿ ನೇರವಾಗಿ ವಿಷಯಕ್ಕೆ ಬಂದುಬಿಡೋಣ. ಮಕ್ಕಳ ಬಾಲ್ಯವನ್ನು ಕಸಿಯಲಾಗುತ್ತಿದೆ ಮತ್ತು ಅವರ ವರ್ತಮಾನದ ಜೀವನದೊಂದಿಗೆ ಚೆಲ್ಲಾಟವಾಡಿ, ಭವಿಷ್ಯದ ಬದುಕಿಗೆ ಕೊನೆಯ ಮೊಳೆ ಹೊಡೆದಂತೆ ಭಾಸವಾಗುತ್ತದೆ. ನಾವು ಚೆನ್ನಾಗಿ ನಟಿಸುತ್ತಿದ್ದೇವೆ ಶಿಕ್ಷಣ ಮಗುವಿನ ಮೂಲಭೂತ ಹಕ್ಕು ಎಂಬುದನ್ನು ಮರೆತು. ಇದನ್ನು ನಾನು ಹೇಳುವುದಕ್ಕೂ … Read more

ವಿಷಾದ-೨: ಬದುಕಿನ ಕನಸುಗಳಲ್ಲಿ ವಿಷಾದ: ಸಹನಾ ಪ್ರಸಾದ್‌

ಕಳೆದ ಲೇಖನದಲ್ಲಿ ವಿಷಾದ, ರಿಗ್ರೆಟ್ ಮ್ಯಾಟ್ರಿಕ್ಸ್ ಬಗ್ಗೆ ಚರ್ಚೆ ನಡೆಯಿತು. ಅಲ್ಲಿ ನಮ್ಮ ಸಂಬಂಧಗಳಲ್ಲಿ ವಿಷಾದದ ಕುರಿತು ಮಾತಾಯಿತು. ಸಂಬಂಧಗಳು ಬೇರೆಯವರ ಮೇಲೆ ಸಾಕಷ್ಟು ನಿರ್ಭರವಾಗಿರುತ್ತೆ. ನಾವು ಸರಿ ಇದ್ದರೂ ಅವರಿರದೆ ಇರಬಹುದು. ಇಲ್ಲಾ, ಇಬ್ಬರೂ ಸರಿ ಇಲ್ಲದಿರಬಹುದು. ಅಥವಾ ಇಬ್ಬರೂ ಸರಿ ಇದ್ದರೂ ಪರಿಸ್ಥಿತಿ, ಸುತ್ತಮುತ್ತಲಿನ ಜನ ಸರಿ ಇಲ್ಲದಿರಬಹುದು. ಹೀಗೆ ಬಹಳಷ್ಟು ನಮ್ಮ ನಿಯಂತ್ರಣಕ್ಕೆ ಮೀರಿದ ಅಂಶಗಳು ಇದ್ದಾಗ ವಿಷಾದ ಹುಟ್ಟುವ ಸಾಧ್ಯತೆ ಹೆಚ್ಚು. ವೈಯಕ್ತಿಕ ಜೀವನಕ್ಕೆ ಬಂದಾಗ ವಿಷಾದ ಉಂಟು ಮಾಡುವ ಪರಿಸ್ಥಿತಿಗೆ … Read more

ಗಣಿತದ ಸುಲಭ ಅಧ್ಯಯನಕ್ಕೆ ವೇದ ಗಣಿತ: ಶ್ರೇಯ ಕೆ.ಎಂ.

ಮೊದಲಿನಿಂದಲೂ ನನಗೆ ಗಣಿತ ಎಂದರೆ ಅಚ್ಚುಮೆಚ್ಚು, ಎಷ್ಟೇ ಕ್ಲಿಷ್ಟ ಸಮಸ್ಯೆ ಇದ್ದರು ಲೀಲಾಜಾಲವಾಗಿ ಬಿಡಿಸುವುದು ನನ್ನ ಹವ್ಯಾಸಗಳಲ್ಲಿ ಒಂದು ಹಾಗಾಗಿ ನಾ ಆಯ್ದುಕೊಂಡ ವೃತ್ತಿ ಗಣಿತದ ಶಿಕ್ಷಕಿ. ಗಣಿತ ಎಂದರೆ ಮಾರು ದೂರ ಹೋಗುವವರೇ ಹೆಚ್ಚು, ಗಣಿತ ಅಂದರೆ ಕಬ್ಬಿಣದ ಕಡಲೆ ಅಂತ ತುಂಬಾ ಜನ ಹೇಳೋದು ಕೇಳಿದ್ದೇನೆ, ಆದರೆ ಗಣಿತ ಅನ್ನುವುದು ಕಬ್ಬಿಣದ ಕಡಲೆಯಲ್ಲ ಅದನ್ನ ನಾವು ಆಸಕ್ತಿ ಹಾಗೂ ಶ್ರಮವಹಿಸಿ ಕಲಿತಾಗ ಎಂಥಹ ಕ್ಲಿಷ್ಟ ಸಮಸ್ಯೆಯನ್ನು ಕೂಡ ಸುಲಭವಾಗಿಸಬಹುದು. ಗಣಿತವು ನಮ್ಮ ದೈನಂದಿನ ಜೀವನದಲ್ಲಿ … Read more

ಅಂತ್ಯಸಂಸ್ಕಾರ: ಪ್ರಭುರಾಜ್‌ ಹೂಗಾರ್

ಮಗು ಹುಟ್ಟಿದ ನಂತರ ಎಲ್ಲರೂ ಒಳ್ಳೆಯ ಪಾಲನೆ, ಪೋಷಣೆ, ಶಿಕ್ಷಣ ಕೊಡುವ ಕುರಿತು ಯೋಚಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಒಳ್ಳೆಯ ಸಂಸ್ಕಾರಗಳನ್ನು ನೀಡುವುದು ಪಾಲಕರ ಕರ್ತವ್ಯ/ಜವಾಬ್ದಾರಿ. ಈಗ ನಾನು ಪ್ರಸ್ತಾಪಿಸಬೇಕೆಂದಿರುವುದು ಮರಣೋತ್ತರ ಸಂಸ್ಕಾರದ ಬಗ್ಗೆ, ಅಂತ್ಯಸಂಸ್ಕಾರದ ಆಸುಪಾಸಿನ ಕೆಲ ಸನ್ನಿವೇಶಗಳ ಬಗ್ಗೆ. ಕೆಲವು ವಿಷಯಗಳಲ್ಲಿ ನಂಬಿಕೆ ಇಲ್ಲದಿದ್ದಲ್ಲಿ ಧಾರ್ಮಿಕವಾಗಿ ನೋಡದೆ ಮಾನವೀಯ ದೃಷ್ಟಿಯಿಂದ ನೋಡೋಣ, ಮನಸಿದ್ದಲ್ಲಿ ಭಾವನೆಗಳು ಇರಲೇಬೇಕಲ್ಲವೇ. ದಿನಕ್ಕೆ ನೂರು ರೂಪಾಯಿ ಸಂಪಾದಿಸುವ ಒಬ್ಬ ದಿನಗೂಲಿ ನೌಕರ ದೇವಸ್ಥಾನಕ್ಕೆ ಹೋದಾಗಲೆಲ್ಲ ಹತ್ತು ರೂಪಾಯಿ ದಾನ ಮಾಡುತ್ತಿದ್ದ, ಅವನಂತೆ … Read more

ಮಗು ಮತ್ತು ಶಿಕ್ಷಣ: ಗಾಯತ್ರಿ ನಾರಾಯಣ ಅಡಿಗ

‘ವಿದ್ಯೆ ಇಲ್ಲದವನ ಮುಖ ಹಾಳೂರ ಹದ್ದಿನಂತಿಕ್ಕು ಸರ್ವಜ್ಞ’ ಎಂಬ ಸರ್ವಜ್ಞನ ನುಡಿಗಳು ವಿದ್ಯೆಯ ಮಹತ್ವವನ್ನು ತಿಳಿಸುತ್ತದೆ. ಮುಂದುವರಿದ ಈ ಯುಗದಲ್ಲಿ ಶಿಕ್ಷಣವು ತನ್ನದೇ ಆದ ವಿಶಿಷ್ಟತೆಯನ್ನು ಪಡೆದಿದೆ. ಮಗು ಇಡೀ ಶಿಕ್ಷಣ ಪ್ರಕ್ರಿಯೆಯಲ್ಲಿ ಕೇಂದ್ರಬಿಂದು. ಮಗುವಿನ ಆಸಕ್ತಿ, ಅಭಿರುಚಿಯನ್ನು ಗ್ರಹಿಸುತ್ತಾ, ಮನ್ನಣೆ ನೀಡುತ್ತಾ ಸಂಪೂರ್ಣ ಸ್ವಾತಂತ್ರ್ಯ ನೀಡಿ ಸರ್ವತೋಮುಖ ಬೆಳವಣಿಗೆಗೆ ಅನುವು ಮಾಡಿಕೊಡುವುದೇ “ಮಗು ಕೇಂದ್ರಿತ ಶಿಕ್ಷಣ ಪದ್ಧತಿ. “ “ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು”. ಪ್ರಥಮತವಾಗಿ ಮಗು ತನ್ನ ಮನೆಯಿಂದಲೇ ಶಿಕ್ಷಣ ಪಡೆಯಲು … Read more

ಬಿಸಿಲು ಮಾಗಿ ಬೆಳದಿಂಗಳಾಗುವ ಸೊಗಸಿದೆ!: ಜಯಶ್ರೀ. ಜೆ. ಅಬ್ಬಿಗೇರಿ

ದಿನವೂ ದೇವರ ಮೂರ್ತಿಗಳನ್ನು ನೀರಿನಿಂದ ತೊಳೆದು, ಹಾಲಿನ ಅಭಿಷೇಕ ಮಾಡಿ,ಮೆತ್ತನೆಯ ಬಟ್ಟೆಯಲ್ಲಿ ಒರೆಸಿ, ವಿಭೂತಿ, ಅರಿಷಿಣ, ಕುಂಕುಮ, ಗಂಧ,ಅಕ್ಷತೆ,ಬಿಲ್ವಪತ್ರೆಯನ್ನು ಏರಿಸಿ ಕೈ ಮುಗಿದರೆ ಸಾಕು ಮನದಲ್ಲಿ ಅಂದುಕೊಂಡದ್ದು ನಡೆಯುತ್ತದೆ ಎನ್ನುವುದು ನಮ್ಮಲ್ಲಿಬಹುತೇಕರ ನಂಬಿಕೆ. ದೇವರ ಪೂಜೆ ಭದ್ರತಾ ಭಾವವನ್ನು ಒದಗಿಸುವುದು ಎನ್ನುವ ಭಾವ ಸುಳ್ಳೇನಲ್ಲ. ಇಷ್ಟೇ ಅಲ್ಲ ಆಶಾಭಾವ ಲವಲವಿಕೆಯ ಮನೋಭಾವನೆಯನ್ನೂ ಹೆಚ್ಚಿಸುವುದು. ಪ್ರಯತ್ನಿಸದೇ, ಬದಲಾವಣೆಯ ಗಾಳಿಗೆ ಮೈ ಒಡ್ಡದೇ, ವಾಸ್ತವವನ್ನು ಅರಿಯದೇ, ಅದೊಂದೇ ಬದುಕಿನ ಚಿತ್ರವನ್ನು ಬದಲಿಸಿಬಿಡುವುದು ಎನ್ನುವುದು ನಾವು ಸೃಷ್ಟಿಸಿಕೊಂಡ ಮಾಯದ ಬಲೆಯಲ್ಲಿ ನಾವೇ … Read more