ಡಿಜಿಟಲ್ ಕನ್ನಡ: ಡಾ. ಹೆಚ್ಚೆನ್ ಮಂಜುರಾಜ್

ಹರಿತವಾದ ಆಯುಧದಿಂದ ಹಣ್ಣನ್ನೂ ಕೊಯ್ಯಬಹುದು; ಜೀವವನ್ನೂ ತೆಗೆಯಬಹುದು ಎಂಬ ಮಾತು ಕ್ಲೀಷೆಯೆನಿಸಿದರೂ ಆಧುನಿಕ ಡಿಜಿಟಲ್ ಮಾಧ್ಯಮಗಳಿಗೆ ಇದಕ್ಕಿಂತ ಸೂಕ್ತವಾದ ವ್ಯಾಖ್ಯಾನ ಬೇರೊಂದಿರಲಾರದು! ನಮ್ಮೆಲ್ಲರ ಕೈಯಲ್ಲೂ ಮೊಬೈಲು; ಮನೆಯಲ್ಲಿ ಕಂಪ್ಯೂಟರು ಇರುವಾಗ ಯಾರಾದರೂ ಹೀಗೆ ಹೇಳಲೇಬೇಕು. ಅದರಲ್ಲೂ ಇಂಥವನ್ನು ಬಳಸಿಕೊಂಡು ಯುವಜನತೆ ದಾರಿ ತಪ್ಪುವುದಿರಲಿ ದಿಕ್ಕೇ ತಪ್ಪುತ್ತಿದೆ ಎಂದು ಬೈಯ್ಯುವವರ ಕೈಯಲ್ಲೂ ಇವೇ ಇವೆ! ಆದರೆ ಇವನ್ನು ಸದ್ಬಳಕೆ ಮಾಡಿಕೊಂಡು ಬದುಕಿನ ಸಂವೇದನೆಯನ್ನು ಇನ್ನಷ್ಟು ನೇರ್ಪುಗೊಳಿಸಿಕೊಳ್ಳಬಹುದು; ದೈವತ್ವವನ್ನು ಧರಿಸಬಹುದು ಅಥವಾ ಅದರತ್ತ ಚಲಿಸಬಹುದು ಎಂದು ಆಲೋಚಿಸುವವರು ವಿರಳ. ಕವಿ … Read more

ಯೋಗ್ಯತೆ ಇಲ್ಲದವರದೂ ಒಂದು ಯೋಗ: ಅಮರದೀಪ್ ಪಿ.ಎಸ್.

ರೈಲ್ವೆ ಸ್ಟೇಷನ್ ನಿಂದ ಹೊರಗೆ ಬಂದರೆ ಗೌಜೋ ಗೌಜು. ಚಾಯ್ ವಾಲಾಗಳ ಸ್ಟಾಲುಗಳು, ಗಿಜಿಗಿಜಿ ರಸ್ತೆ, ಬದಿಯಲ್ಲಿ ತಳ್ಳುಗಾಡಿಗಳನ್ನು ಬೆಳಿಗ್ಗೆಯಿಂದ ಸಂಜೆವರೆಗೂ ತಳ್ಳಿಯೇ ಜೀವ ಮೆತ್ತಗಾದವರ ಬದುಕನ್ನು ಢಾಳಾಗಿ ಬಿಂಬಿಸುತ್ತದೆ… ಎರಡುವರೆ ಅಡಿ ಜಾಗ ಸಿಕ್ಕುಬಿಟ್ಟರೆ ಸಾಕು, ಬೀಡಿ ಸಿಗರೇಟು ಮಾರಿಯಾದರೂ ಹೆಂಗೋ ಬದುಕು ಸಾಗುತ್ತದೆನ್ನುವ ನಿರೀಕ್ಷೆಯ ಮುಖಗಳು… ದಾರಿಗುಂಟ ರೈಲಲ್ಲಿ ಬ್ಯಾಗನ್ನೇ ಕಳೆದುಕೊಂಡ ಜೋತುಬಿದ್ದ ಕಣ್ಣುಗಳು.. ಪರ್ಸು, ದುಡ್ಡು ಇರಲಿ ಜೊತೆಗಿದ್ದವರೇ ಕಾಣದ ಊರಲ್ಲಿ ಇಳಿಸಿ ಮರೆಯಾದವರನ್ನು , ಅವರ ಅಡ್ರೆಸ್ಸನ್ನೂ ಹೇಳಲು ತಡಬಡಾಯಿಸುವ ಅತ್ತ … Read more

ಕಣ್ಮರೆಯಾದ ಗೆಳತಿಯರು: ಸಿಂಧು ಭಾರ್ಗವ್.

ಕಾಲೇಜು ದಿನಗಳಲ್ಲಿ ಲವಲವಿಕೆಯಿಂದ ತುಂಟತನ ತರಲೆ ಮಾಡಿಕೊಂಡು ದಿನಕಳೆಯುತ್ತಿದ್ದ ನಾವು ಎಷ್ಟು ಸಂತೋಷದಿಂದ ಇರುತ್ತಿದ್ದೆವು. ಓದು , ಆಟದ ಜೊತೆಗೆ ಜಗಳ, ಗಲಾಟೆ, ಮುಷ್ಕರ, ಪ್ರೀತಿ-ಪ್ರೇಮ ಸಂತೆ ಎಲ್ಲವನ್ನೂ ಅಲ್ಲಿ ಇಲ್ಲಿ ನೋಡಿ, “ನಾವೆಲ್ಲ ಹಾಗಿಲ್ಲಪ್ಪ…” ನಮ್ಮದು “ಓನ್ಲೀ ಫ್ರೆಂಡ್ ಶಿಪ್ ” ಓದು, ಮನೆ… ಅಷ್ಟೇ ಎಂದು ಎಂಜಾಯ್ ಮಾಡುತ್ತಿದ್ದೆವು. ರಕ್ತ ಸಂಬಂಧಗಳ ಮೀರಿದ ಬಂಧವಿದು ಎಂದು ಹಾಡು ಹೇಳುತ್ತ ಖುಷಿ-ಖುಷಿಯಾಗಿದ್ದೆವು. ಆಮೇಲೆ? ಮುಂದೇನು? ಕಾಲೇಜು ಜೀವನದ ಕೊನೆಯ ವರುಷ ಎರಡು ಸೆಮಿಸ್ಟರ್, ಪ್ರೊಜೆಕ್ಟ್ ಮಾಡಿ … Read more

ಎತ್ತ ಸಾಗುತ್ತಿದ್ದೇವೆ ನಾವು?: ಸಹನಾ ಪ್ರಸಾದ್

ಪ್ರತಿದಿನ ದೃಶ್ಯ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಜನರ ನುಡಿಗಳಲ್ಲಿ, ಹೆಂಗಸರ ಮೇಲೆ ದೌರ್ಜನ್ಯ, ಮಾನಭಂಗ ಇತ್ಯಾದಿಗಳ ಸುದ್ದಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಸಮೀಕ್ಷೆಗಳ ಪ್ರಕಾರ, ನಮ್ಮ ಮೆದುಳು ಕೆಲವು ಶಬ್ಢಗಳು, ವಿಷಯಗಳನ್ನು ತಕ್ಷಣ ಗುರುತಿಸುತ್ತಂತೆ. ಆದುದರಿಂದಲೇ ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳನ್ನು ಅತ್ಯಂತ ಆಸಕ್ತಿಯಿಂದ(!!) ರೋಚಕವಾಗಿ ಚಿತ್ರಿಸುತ್ತಾರೆ. ಅದರಲ್ಲಿ ಅವರ ಕಾಳಜಿ, ಕಳಕಳಿಗಿಂತ ಸುದ್ದಿಯನ್ನು ಜನರ ಮನಸ್ಸಿಗೆ ಹೊಡೆಯುವಂತೆ ಸೃಷ್ಟಿಸುವುದೇ ಉದ್ದೇಶ. ದೌರ್ಜನ್ಯದ ಘಟನೆಗಳು ನಡೆದಾಗ ನಮ್ಮ ಮನ ರೊಚ್ಚಿಗೇಳಬೇಕು, ಕಷ್ಟಪಡಬೇಕು. ಆಗ ಉಂಟಾದ ಹಿಂಸೆಯಿಂದ ನಮ್ಮ ಮನಸ್ಸಲ್ಲಿ ಒಂದು ನಿಲುಮೆ ಜನ್ಮತಾಳಬೇಕು. … Read more

ಗಿಳಿ ಕಲಿಸಿದ ಪಾಠ: ವರದೇಂದ್ರ ಕೆ.

ಒಂದು ಕಾಡು ಇತ್ತು. ಆ ಕಾಡಿಗೆ ಬೆಂಕಿ ಬಿದ್ದು ಎಲ್ಲ ಗಿಡ ಮರಗಳೂ ಸುಟ್ಟು ಕರಕಲಾಗಿದ್ದವು. ಹೇಗೋ ತಪ್ಪಿಸಿಕೊಂಡ ಪ್ರಾಣಿ ಪಕ್ಷಿಗಳು ದಿಕ್ಕಾಪಾಲಾಗಿ ಹೋದವು. ಅದರಲ್ಲಿ ಒಂದು ಮರಿ ಗಿಳಿ ತಾಯಿ, ತಂದೆಯಿಂದ ಬೇರ್ಪಟ್ಟು ದೂರವಾಯಿತು. ಎಲ್ಲ ಕಡೆ ಸುತ್ತಿ ಸುತ್ತಿ ದಣಿವಾಯಿತು. ಹೊಟ್ಟೆ ಹಸಿದರೂ ತಿನ್ನಲು ಯಾವ ಹಣ್ಣು ಸಿಗದೆ ಬಳಲಿತು. ಆಹಾರ ಮತ್ತು ವಾಸಕ್ಕಾಗಿ ಅಲೆಯತೊಡಗಿತು. ಎಷ್ಟು ದೂರ ಸಾಗಿದರೂ ಏನು ಸಿಗದೆ ಸತ್ತೇ ಹೋಗುತ್ತೇನೋ ಎನ್ನುವಷ್ಟು ನಿರಾಸೆಯಿಂದ ಚಿಂತಿಸತೊಡಗಿತು. ಅಷ್ಟರಲ್ಲಿ ದೂರದಲ್ಲಿ ಒಂದು … Read more

ಹೃದಯ ಸ್ಪರ್ಶಿ ಬರಹಗಳಿಂದ ಮಾತ್ರ ಸುಂದರವಾದ ಸಮತಾ ಸಮಾಜ ನಿರ್ಮಾಣ: ಈಶ್ವರ ಚ ಮಗದುಮ್ಮ

ಹೌದು! ಎಷ್ಟೋಬಾರಿ ಆತನ ಬಗ್ಗೆ ಬರೆದಿದ್ದೇನೆ. ಆದರೂ ಮತ್ತೇ ಮತ್ತೇ ಅವನ ವ್ಯಕ್ತಿತ್ವದ ಕುರಿತು ಬರೆಯಬೇಕೆನಿಸುತ್ತದೆ. ಅವನ ಬಗ್ಗೆ ಎಷ್ಟು ಬರೆದರೂ ಕಮ್ಮಿ ಅನಿಸಲು ಕಾರಣವೂ ಇದೆ. ಅವನ ಮತ್ತು ನನ್ನ ಸ್ನೇಹ-ಒಡನಾಟ ಹಾಗೇ ಇದೆ. ನಮ್ಮಿಬ್ಬರ ನಡುವೆ ಕೇವಲ ಸ್ನೇಹವಿದ್ದರೆ ಬಹುಶಃ ನಾನು ಅವನ ಕುರಿತು ಪದೆ ಪದೆ ಬರೆಯುತ್ತಿರಲಿಲ್ಲವೇನೋ? ಆದರೂ ಸ್ನೇಹಕ್ಕೂ ಮೀರಿದ ಅದ್ಯಾವುದೋ ಒಂದು ಶಕ್ತಿ ನಮ್ಮನ್ನು ಬೆಸೆದಿದೆ ಎನಿಸಿತ್ತದೆ. ಅದ್ಯಾವದೋ ಒಂದು ತಂತು ನಮ್ಮ ಮನಗಳಲ್ಲಿ ಸಮಾನವಾಗಿ ಮಿಡಿಯುತ್ತಿದೆ ಅನಿಸುತ್ತದೆ. ಅದಕ್ಕಾಗಿಯೇ … Read more

ಕೌಟುಂಬಿಕ ಮೌಲ್ಯ ಮತ್ತು ವಿಶ್ವಭ್ರಾತೃತ್ವ: ಡಿ. ಪಿ. ಭಟ್, ಪುತ್ತೂರು.

ಅನೇಕ ತೀರ್ಥ ಕ್ಷೇತ್ರಗಳನ್ನು, ಹಲವು ಪರಿಶುದ್ಧ ಪಾವಿತ್ರ್ಯತೆಯಿಂದ ಕೂಡಿದ ಕಲ್ಯಾಣಿಗಳನ್ನು, ಮಠ ಮಂದಿರಗಳನ್ನು, ವಿದ್ಯಾ ದೇಗುಲಗಳನ್ನು ಸೇರಿದಂತೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಒಳಗೊಂಡಿರುವ ಹಲವು ಪ್ರಕೃತಿ ವಿಸ್ಮಯಾತ್ಮಕ ರಮಣೀಯ ಸ್ಥಳಗಳ ಮೂಲಕ ಪ್ರವಹಿಸುತ್ತಿರುವ ಆಧ್ಯಾತ್ಮಿಕತೆಯ ಅಭಿವ್ಯಕ್ತಿಯಿಂದ ನಮ್ಮ ಭಾರತವು ಕಂಗೊಳಿಸುತ್ತಿದೆ. ಪರಮೋತ್ಕಟ ಭಕ್ತಿಭಾವೋನ್ಮಾದಸ್ನಾತರಾದ ರಾಮ, ಸೀತಾ, ಕೃಷ್ಣ,  ಶಂಕರರು, ರಾಮಾನುಜರು, ಮಾಧ್ವರು, ಶೀರಾಮಕೃಷ್ಣರು, ಶ್ರೀಮಾತೆ ಶಾರದಾದೇವಿ, ಸ್ವಾಮೀ ವಿವೇಕಾನಂದರಂತಹ ಭಗವದ್ ಸತ್ಪುರುಷರು, ಸಂತರು, ಶರಣರು, ದಾರ್ಶನಿಕರು ಓಡಾಡಿದ ದೇಶವಿದು. ಆಧ್ಯಾತ್ಮಿಕ ಶಕ್ತಿಯ ಪ್ರಬಲತೆಯಿಂದ ಕೂಡಿದ ಭರತ ಭೂಮಿಯಲ್ಲಿಂದು ಕೊಲೆ, … Read more

ಮರೆಯಾಗದಿರಲಿ ನೋವು ಮರೆಸುವ ನಗು!: ಜಯಶ್ರೀ.ಜೆ. ಅಬ್ಬಿಗೇರಿ

ಬಹುತೇಕ ನಮ್ಮೆಲ್ಲರ ಇತ್ತೀಚಿನ ದೈನಂದಿನ ಜೀವನ ಒತ್ತಡದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದೆ. ಒತ್ತಡ ಹಾಗೂ ಬದ್ಧತೆಗಳ ಆರ್ಭಟಕ್ಕೆ ಮಣದಿರುವ ನಾವು ಅಕ್ಷರಶಃ ನಗುವುದನ್ನೇ ಮರೆತಿದ್ದೇವೆ. ಅಲ್ಲೊಮ್ಮೆ ಇಲ್ಲೊಮ್ಮೆ ಆಗೊಮ್ಮೆ ಈಗೊಮ್ಮೆ ನಕ್ಕರೂ ಅದು ಗೊಂಬೆ ನಗುವಿನಂತಿರುತ್ತದೆ. ಹೃದಯ ತುಂಬಿದ ನಗು ಅದೆಲ್ಲಿ ಮಾಯವಾಗಿದೆಯೋ ಹುಡುಕ ಬೇಕಿದೆ. ಕಿವಿಯಿಂದ ಕಿವಿಯವರೆಗಿನ ನಗು ಮರೆತು ಅದೆಷ್ಟೋ ವರ್ಷಗಳು ಕಳೆದವು ಅನಿಸುತ್ತಿದೆ ಅಲ್ಲವೇ? ನಗು ಮಾನವನ ಸಹಜ ಪ್ರಕ್ರಿಯೆ ಅದನ್ನೇ ಮರೆತು ಬಾಳುತ್ತಿರುವುದು ನಿಜಕ್ಕೂ ಖೇದಕರ ಸಂಗತಿಯೇ ಸರಿ. ಒಂದು ಅಧ್ಯಯನದ … Read more

ರೈತ (ಪುಟ್ಟ ಕತೆ): ವೆಂಕಟೇಶ ಚಾಗಿ

ಆಗ ನಾನಿನ್ನು  ಪುಟ್ಟ ಹುಡುಗ. ಎರಡೇ ತರಗತಿಯಲ್ಲಿ ಓದುತ್ತಿರುವಾಗಲೇ ಅಪ್ಪ ನನ್ನನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅಪ್ಪನಿಗೆ “ಅಪ್ಪಾ , ನಾನೂ ರೈತ ಆಗ್ಲಾ? ” ಅಂತ ಕೇಳಿದ್ದೆ.  ಅಪ್ಪನ ಕೆಲಸಗಳೋ ಒಂದಲ್ಲ ಎರಡಲ್ಲ. ನಸುಕಿನ ಜಾವ ಏಳುತ್ತಲೇ ಅಪ್ಪನ ಕಾಯಕ ಶುರುವಾಗುತ್ತಿತ್ತು. ಅಮ್ಮ ಮಾಡಿಕೊಟ್ಟ ನಾಲ್ಕೈದು ರೊಟ್ಟಿ  , ಪಲ್ಲೆ ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಬಾಯಾರಿಕೆಗಾಗಿ ಮಣ್ಣಿನ ಬಾಟಲ್ ನಲ್ಲಿ ನೀರು ತುಂಬಿಕೊಂಡು ಎರಡು ಎತ್ತುಗಳನ್ನು ಹಿಡಿದು ಹೊರಟರೆ ಮುಗೀತು ಮತ್ತೆ ಸಂಜೆ ಆರಕ್ಕೆ ಅಪ್ಪ … Read more

ಸಕಾರಾತ್ಮಕವಾಗಿಯೇ ಚಿಂತಿಸಬೇಕಲ್ಲವೆ?: ಸೋಮಶೇಖರ್ ಹೊಳಲ್ಕೆರೆ

ಬಹಳ ವರುಷ ಒಂದೇ ಸ್ಥಳದಲ್ಲಿ, ಒಂದೇ ವಾತಾವರಣದಲ್ಲಿ ವಾಸಿಸುವುದರಿಂದ, ಒಂದೇ ರುಚಿ ಆಹಾರ ಸೇವಿಸುವುದರಿಂದ ಬೇಸರ ಉಂಟಾಗುವುದು ಸಾಮಾನ್ಯ! ಅದಕ್ಕೇ ಆಗಾಗ ಹಬ್ಬಗಳು, ಜಾತ್ರೆಗಳು ಬಂದು ವಿಧವಿಧ ರುಚಿಯ ಭಕ್ಷ್ಯ ಬೋಜ್ಯಗಳ ತಂದು, ನೆಂಟರಿಷ್ಟರ ಮನೆತುಂಬಿಸಿ, ಪೂಜೆ ಪುರಸ್ಕಾರ ಗಂಟಾ ಘೋಷಗಳಲಿ ಮೀಯಿಸಿ, ಮನೆಯ ತಳಿರು ತೋರಣಗಳಿಂದ ಸಿಂಗರಿಸಿ ಮನೆಯ ವಾತಾವರಣವನ್ನು ಬದಲಾಯಿಸಿ ಏಕತಾನತೆಯ ಬೇಸರ ಕಳೆದು ಬದುಕುವ ಉತ್ಸಾಹವ ತುಂಬುವ ಹೊಸ ಹುರುಪು ತುಂಬುವ ಉಪಾಯಗಳ ನಮ್ಮ ಹಿರಿಯರು ವರುಷ ಪೂರ್ತಿ ಮಾಡಿರುವುದು! ಪ್ರವಾಸ, ತೀರ್ಥಯಾತ್ರೆಗಳು … Read more