“ಕುವೆಂಪು ರಾಷ್ಟ್ರೀಯ ಪುರಸ್ಕಾರ-2019” ಘೋಷಣೆ

2019 ನೇ ಸಾಲಿನ “ಕುವೆಂಪು ರಾಷ್ಟ್ರೀಯ ಪುರಸ್ಕಾರ”ಕ್ಕೆ ಪಂಜಾಬಿ ಭಾಷೆಯ ಇಬ್ಬರು ಸುಪ್ರಸಿದ್ಧ ಸಾಹಿತಿಗಳು ಆಯ್ಕೆ ಆಗಿರುತ್ತಾರೆ. ಇದೇ ನವೆಂಬರ್ 16ನೆ ತಾರೀಕು‌ (16-11-2019) ಶನಿವಾರ ಬೆಂಗಳೂರಿನಲ್ಲಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ನಾಡೋಜ ಪ್ರೊ. ಹಂಪ. ನಾಗರಾಜಯ್ಯನವರ ಅಧ್ಯಕ್ಷತೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯ ಸಭೆ ನಡೆದಿತ್ತು. ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ‌ ಹಾಗೂ ಸಾಹಿತಿಗಳಾದ ಶ್ರೀ ಚಿರಂಜೀವಿ ಸಿಂಗ್, ಜೆ.ಎನ್.ಯು. (ನವದೆಹಲಿ) ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರೂ ಪಂಜಾಬಿ ಲೇಖಕರೂ ಆದ ಪಟಿಯಾಲದ ಪ್ರೊ. … Read more

ಕನ್ನಡ ಉಳಿಯಲಿ, ಕನ್ನಡ ಸಾಹಿತ್ಯ ಬೆಳಗಲಿ, ಬೆಳೆಯಲಿ: ಚಂದ್ರಿಕಾ ಆರ್ ಬಾಯಿರಿ

“ಹಾಯ್! ಸುಶೀಲಾ ‘ಹವ್ ಆರ್ ಯೂ’?. ಎಲ್ಲಿಗೆ ಹೋಗ್ತಾ ಇದೀಯಾ?” “ಹಾಯ್! ಸಹನಾ ಟ್ಯೂಷನ್ ಕ್ಲಾಸ್ ಗೆ ಹೋಗ್ತಾ ಇದೀನಿ.” “ಟ್ಯೂಷನ್ ಕ್ಲಾಸ್ ಗೆ ಹೋಗ್ತಾ ಇದೀಯಾ. ಯಾಕೆ? ಯಾರಿಗೆ ಟ್ಯೂಷನ್?” “ಅಯ್ಯೋ! ನನ್ನ ಮಗನಿಗೆ ಇನ್ನೂ ಕನ್ನಡ ಓದೋದಕ್ಕೆ ಬರೆಯೋದಕ್ಕೆ  ಸರಿಯಾಗಿ ಬರಲ್ಲ ಕಣೇ. ಅದಕ್ಕೆ ಟ್ಯೂಷನ್ ಗೆ ಹಾಕೋಣ ಅಂತ.” “ಏನು? ಟ್ಯೂಷನ್ ಗೆ ಹಾಕ್ತೀಯಾ. ನಿನ್ನ ಮದರ್ ಟಂಗ್ ಯಾವುದು ಸುಶೀಲಾ?” “ಕನ್ನಡ” “ಮತ್ತೆ ನೀನೇ ಹೇಳಿ ಕೊಡಬಹುದಿತ್ತಲ್ವ.” “ಇಲ್ಲ ಕಣೇ. ನಾನು … Read more

ಒಳಿತು, ಕೆಡುಕು ಹಾಗು ಮನಸ್ಥಿತಿ: ಸಹನಾ ಪ್ರಸಾದ್

ಎಲ್ಲರಂತೆ ನನ್ನ ಬೆಳಗ್ಗಿನ ಕಾಫಿಗೆ ಜತೆಗೂಡುವುದು ಅಂದಿನ ಪತ್ರಿಕೆ. ಎದ್ದ ತಕ್ಷಣ ಅದರ ಮೇಲೆ ಕಣ್ಣಾಡಿಸಿಯೇ ಬ್ರಶ್ ಮಾಡಲು ಹೋಗುವುದು. ಅದರಲ್ಲಿಯ ಸುದ್ದಿಗಳಿಗೆ ಮನ ಬಹಳ ಬೇಗ ಅಂಟಿಕೊಂಡು ಅದರ ಬಗ್ಗೆಯೇ ಯೊಚಿಸಿ, ಚಿಂತನೆಗೆ ಶುರು ಆಗುತ್ತದೆ. ಅಚ್ಚಾಗಿರುವ ವಿವರಗಳ ಮೇಲೆ ಅಂದಿನ ಮನಸ್ಥಿತಿ ರೂಪಗೊಳ್ಳುವುದು. ಅದೇ ರೀತಿ ಒಳ್ಳೆ ಹಾಡು ಕೇಳಿದರೆ, ಏನಾದರು ಖುಶಿಯಾಗಿರುವುದನ್ನು ನೋಡಿದರೆ/ ಓದಿದರೆ ಮನಸ್ಸು ಪ್ರಫ಼ುಲ್ಲವಾಗುವುದು. ಆದುದರಿಂದ ನನ್ನ ಬೆಳಗ್ಗಿನ ” ಆಹಾರ” ನನಗೆ ಬಹಳ ಮುಖ್ಯ. ಅದೊಂದೇ ಅಲ್ಲ, ದಿನವಿಡೀ … Read more

ನ್ಯಾನೋ ಕತೆಗಳು: ವೆಂಕಟೇಶ ಚಾಗಿ

  ೧) ಸ್ವಚ್ಛ ಭಾರತ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಇಬ್ಬರು ಸ್ನೇಹಿತರು ಸರಕಾರದ ಮಹತ್ತರ ಯೋಜನೆಯ ಸಾಧಕ-ಬಾಧಕಗಳ ಕುರಿತು ಮಾತನಾಡುತ್ತಾ ಕುಳಿತಿದ್ದರು. ಸಮಯ ಕಳೆಯಲು ಬಾಯಿ ಚಟಕ್ಕಾಗಿ ಶೇಂಗಾ, ಪ್ಯಾಕೆಟ್ ತಿಂಡಿ, ಬಾಳೆಹಣ್ಣು ಇನ್ನಿತರೆ ವಸ್ತುಗಳನ್ನು ತಿನ್ನುತ್ತಾ ಮಾತನಾಡುತ್ತಿದ್ದರು. “ಛೇ, ಈ  ಜನರಿಗೆ ಸರಕಾರದ ಈ ಮಹಾ ಯೋಜನೆ ಅರ್ಥವಾಗುವುದೇ ಇಲ್ಲ.  ಇವರಿಗೆ ಯಾವಾಗ ಬುದ್ಧಿ ಬರುತ್ತೋ ” ಎನ್ನುತ್ತಾ ಹೊರಟುಹೋದರು. ಅವರಿದ್ದ ಜಾಗದ ಸುತ್ತಮುತ್ತ ಶೇಂಗಾ ಸಿಪ್ಪೆ,  ಪ್ಲಾಸ್ಟಿಕ್ ಹಾಳೆಗಳು, ಬಾಳೆ ಸಿಪ್ಪೆ ಹರಡಿದ್ದವು. … Read more

ಅಂತರಾಗ್ನಿ (ಭಾಗ ೬): ಕಿರಣ್. ವ್ಹಿ

ಇಲ್ಲಿಯವರೆಗೆ ರೂಮಿಗೆ ಬಂದ ಹರಿ, ಹೊಸ ಅನುಭವದಲ್ಲಿ ತೇಲಾಡುತ್ತಿದ್ದ. ಒಂದು ಬಗೆಯ ಎಲ್ಲದರಿಂದ ವಿಮುಕ್ತನಾದಂತಹ ಭಾವನೆ ಅವನಲ್ಲಿ ಮೂಡಿತ್ತು. ಅದೇ ವೇಳೆಗೆ, ಗೋಪಾಲ ವರ್ಮಾರನ್ನು ಎಷ್ಟೊಂದು ಬೈಕೊಂಡು ಬಿಟ್ಟೆ ಅಂತ ಬೇಜಾರಾದ. ನಿಜವಾಗಿಯೂ, ವರ್ಮಾರವರು ಅವನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದರು. ಅದು ಹೇಳಲಾಗದಷ್ಟು ಗಾಢವಾದ ಪರಿಣಾಮ. ಆದರೂ, ಒಂದು ಮೂಲೆಯಲ್ಲಿ ಹಳೆಯ ನೆನಪು ಅವನನ್ನು ಕಾಡುತ್ತಿತ್ತು. ಒಂದೇ ದಿನಕ್ಕೆ ಹೋಗುವುದಿಲ್ಲ ನೋಡಿ, ಮತ್ತೆ ಅದೇ ಮೂಡ್ ಗೆ ಹೋಗಿಬಿಟ್ಟರೆ ಕಷ್ಟ ಎಂದು, ಬಿಯರ್ ಬಾಟಲ್ ಕೈಗೆತ್ತಿಕೊಂಡು … Read more

ಮತ್ತೊಮ್ಮೆ ‘ವೀರ ಸಿಂಧೂರ ಲಕ್ಷ್ಮಣ’ ದರ್ಶನ: ಹಿಪ್ಪರಗಿ ಸಿದ್ಧರಾಮ

ಸಮೃದ್ಧ ಪರಂಪರೆಯುಳ್ಳ ಇಂಡಿಯಾ ದೇಶದ ಸಾಮಾಜಿಕ ಮತ್ತು ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಅವಲೋಕಿಸಿದಾಗ, ಜನನಾಯಕರ ಜನಾಂದೋಲನಗಳು, ಕಾನೂನುಬದ್ಧ ಚಳುವಳಿಗಳು ಒಂದೇಡೆಯಾದರೆ ಜಾಗೃತ ಯುವಮನಸ್ಸುಗಳು, ಶೋಷಿತರ ಮತ್ತು ಆದಿವಾಸಿಗಳ ರಕ್ತಸಿಕ್ತ ಹೋರಾಟದಲ್ಲಿ ಸ್ವತಂತ್ರ ಸಮರದ ಗಂಗೆಯ ಪ್ರವಾಹಕ್ಕೆ ಸಾವಿರ ತೊರೆಗಳು ಸೇರಿಕೊಂಡು ಬಿಸಿನೆತ್ತಿರಿನ ತರ್ಪಣದಿಂದ ನಾಡ ಮುಕ್ತಿಗಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದು ಪ್ರಾಣಾರ್ಪಣೆಗೈದಿದ್ದು ಇನ್ನೊಂದೆಡೆ. ಸುರಪುರ ವೆಂಕಟಪ್ಪ ನಾಯಕ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾಯ, ಮೈಲಾರ ಮಹಾದೇವ, ಹಲಗಲಿಯ ಬೇಡರು, ಸಂಗೊಳ್ಳಿ ರಾಯಣ್ಣ ಹೀಗೆ ಇನ್ನೂ ಅನೇಕ ಅನಾಮಿಕರ … Read more

ಹನುಮನ ವಿರಾಟ ರೂಪ ತೋರಿದ ಆ ಒಂದು ಹೂವು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಗದಾಯುದ್ದ ಎಂದರೆ ಭೀಮ! ಭೀಮಾ ಎಂದರೆ ಮಹಾಕಾಯ, ಬಲವಂತ! ಪರ್ವದಂತಹ ದೇಹದಾರಿ! ವಜ್ರಕಾಯ! ಇವನನ್ನು ವಾಯುವಿನ ಮಂತ್ರದಿಂದ ಕುಂತಿ ಮಗನಾಗಿ ಪಡೆಯುವಳು. ಬಾಲಕನಿದ್ದಾಗ ಪಾಂಡವರು ಕೌರವರ ನೂರು ಮಂದಿ ರಾಜಕುಮಾರರು ಸೇರಿ ಮರಕೋತಿ ಆಡುವಾಗ ಮರವನ್ನೇ ಅಲುಗಾಡಿಸಿ ಮರದಲ್ಲಿನ ಹಣ್ಣುಗಳನ್ನು ಉದುರಿಸಿದಂತೆ ಅವರನ್ನು ನೆಲಕುರುಳಿಸುತ್ತಿದ್ದ ಭೂಪ, ಅರಗಿನ ಮನೆಗೆ ಬೆಂಕಿಬಿದ್ದಾಗ ಎಲ್ಲರನ್ನೂ ಗುಪ್ತ ಸುರಂಗ ಮಾರ್ಗದಲ್ಲಿ ಒಬ್ಬನೇ ಹೊತ್ತೊಯ್ದ ಬಲಶಾಲಿ, ಬಂಡಿ ಭೋಜ್ಯ ಸವಿದು ಏಕಚಕ್ರ ನಗರಿಗೆ ಕಂಟಕನಾಗಿದ್ದ ಬಕಾಸುರನನ್ನು ಸಿಗಿದು ಬಾಗಿಲಿಗೆ ತೋರಣ ಕಟ್ಟಿ ಏಕಚಕ್ರ … Read more