Facebook

Archive for 2019

ಪಂಜು ಕಾವ್ಯಧಾರೆ

ಈ ಜಗದಾಗೆ ದೊಡ್ಡೋರು ಯಾರಿಲ್ಲ ಚಿಕ್ಕೋರು ಯಾರಿಲ್ಲ ಎಲ್ಲಾರೂ ಒಂದೇನೆ ಈ ಜಗದಾಗೆ ದೇವ್ರಾಟ ಆಡ್ಕೋತ ಬದುಕನ್ನ ಬೇಯಿಸ್ಕೊತ ಕಡೆಗೆಲ್ಲಾ ಮಣ್ಣು ಈ ಜಗದಾಗೆ || ಲೋಕಾನೆ ಗೆಲ್ಬೇಕು ಅಂದ್ಕೊಂಡು ಬಂದವ್ರು ಬರಿಗೈಲಿ ಹೋದ್ರಂತೆ ಇತಿಹಾಸ್ದಾಗೆ ಅಂತಸ್ತು ಬಿದ್ದೋಯ್ತು ನೆಲವೆಲ್ಲಾ ಮುಳುಗೋಯ್ತು ಗೊತ್ತಿಲ್ಲಾ ಬರ್ದದ್ದು ಹಣೆಬರ್ದಾಗೆ || ಕಷ್ಟಾನೂ ಬರ್ತಾದೆ ಸುಖಾನೂ ಬರ್ತಾದೆ ಬಂದದ್ದು ತಗೋಬೇಕು ಜೀವಂದಾಗೆ ಕಷ್ಟದಲಿ ಕುಗ್ಗದಂಗೆ ಸುಖದಲ್ಲಿ ಹಿಗ್ಗದಂಗೆ ದೇವ್ರೌನೆ ಅಂದ್ಕೊಂಡ್ರೆ ನೆಮ್ಮದಿತಾನೆ || ಗೆದ್ದದ್ದು ಗೆಲುವಲ್ಲ ಸೋತದ್ದು ಸೋಲಲ್ಲ ಜಿದ್ದಾಜಿದ್ದಿಯ ಕಾಣೆ […]

ಅಮ್ಮ ಹೀಗೆ ಇರಬೇಕು: ಗಿರಿಜಾ ಜ್ಞಾನಸುಂದರ್

ಪುಟ್ಟ ಪುಟ್ಟ ಕೈಗಳು ಅಮ್ಮನನ್ನು ಹಿಡಿದಿದ್ದವು. ೮ ದಿನದ ಮಗು ಬಹಳ ಸಣ್ಣದಾಗಿ ಹುಟ್ಟಿದ್ದು, ಆ ಮಗುವನ್ನು ಹೇಗೆ ಎತ್ತಿಕೊಳ್ಳಬೇಕೆಂಬುದು ಸಹ ತಿಳಿದಿರಲಿಲ್ಲ ಅಮ್ಮನಿಗೆ. ಸರಸ್ವತಿ ತನ್ನ ೨೨ ನೇ ವರ್ಷಕ್ಕೆ ಮಗುವಿಗೆ ಜನನ ನೀಡಿದ್ದಳು. ಅವಳಿಗೆ ಇದೆಲ್ಲ ಹೊಸತು. ಮಗು ಅಳುತ್ತಿದ್ದರೆ ಏನು ಮಾಡಬೇಕೆಂಬುದೇ ಅವಳಿಗೆ ತಿಳಿಯುತ್ತಿರಲಿಲ್ಲ. ಯಾವ ಕಾರಣಕ್ಕೆ ಅಳುತ್ತಿದೆ ಎಂದು ಯೋಚಿಸುತ್ತಿದ್ದಳು. ಮಗು ತುಂಬ ಅಳುತ್ತಿತ್ತು, ಅವಳಿಗೆ ಅದನ್ನು ಸಮಾಧಾನ ಮಾಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಅವಳ ನಿದ್ದೆಗೆ, ಊಟಕ್ಕೆ ಪ್ರತಿಯೊಂದಕ್ಕೂ ಮಗು […]

ಇತಿ ತಮ್ಮ ವಿಶ್ವಾಸಿ: ಪ್ರಣವ್ ಜೋಗಿ

ಬಹುಶಃ ಶಾಲೆಯ ದಿನಗಳು ಇರಬೇಕು. ಯಾವುದೋ ಒಂದು ಪರೀಕ್ಷೆಯಲ್ಲಿ ಬರೆದ ಪತ್ರ. ಅದೇ ಕೊನೆಯ ಪತ್ರವಾಗಲಿದೆ ಎಂಬ ಸುಳಿವು ಆಗಲೇ ದೊರೆತ್ತಿದ್ದಿದ್ದರೆ, ಇನ್ನೂ ಒಂದಷ್ಟು ಸಾಲುಗಳನ್ನು ಬರೆದು ಬಿಡುತ್ತಿದ್ದೆ. ಆ ನಂತರ ಎಂದೂ ಪತ್ರ ಬರೆಯಲೇ ಇಲ್ಲ. ಕ್ಷಣ ಮಾತ್ರದಲ್ಲಿ ಸಂದೇಶ ತಲುಪುವ ತಂತ್ರಜ್ಞಾನ ಇರುವಾಗ, ಪತ್ರವೇಕೆ ಬರೆಯಬೇಕು ಎಂಬ ಆಲೋಚನೆ ಇದರ ರೂವಾರಿ. ದುರಂತರವೆಂದರೆ, ಮುಂಚೆ ಬರೆದ ಪತ್ರಗಳೂ ಕೂಡ ಪರೀಕ್ಷೆಗಳಲ್ಲೇ. ನಿಜ ಜೀವನದಲ್ಲಿ, ದೂರದ ಸಂಬಂಧಿಕರೊಬ್ಬರಿಗೆ ಒಂದೆರಡು ಬಾರಿ ಪತ್ರ ಬರೆದಿರಬಹುದಷ್ಟೇ. ಇಂದಿನ ಕಾಲದಲ್ಲಿ […]

ಮಕ್ಕಳ ಕವನ: ವರದೇಂದ್ರ ಕೆ

ಪ್ರಾರ್ಥನೆ ನಾವೆಲ್ಲ ಮಕ್ಕಳು ನಿನ್ನ ಚರಣ ಪುಷ್ಪಗಳು| ಜ್ಞಾನ ಅರಸಿ ಬಂದಿಹೆವು ವಿದ್ಯೆ ಬುದ್ಧಿ ನೀಡಮ್ಮ, ಹೇ ಮಾತೆ ಶಾರದಾಂಬೆ|| ನಾವೆಲ್ಲ ಮಕ್ಕಳೂ…. ವಿದ್ಯಾದಾಯಿನಿ ವೀಣಾಪಾಣಿ| ರಾಗ ತಾಳ ಎಲ್ಲ ನಾವೆ ಜ್ಞಾನ ವೀಣೆ ನುಡಿಸು ತಾಯೆ|೧| ನಾವೆಲ್ಲ ಮಕ್ಕಳೂ… ನಿತ್ಯವೂ ನಿನ್ನ ಸ್ಮರಣೆ ಮಾಡುವೆವು ಭಕ್ತಿಯಿಂದ| ಕರುಣೆ ತೋರಿ ಒಲಿಯಮ್ಮ ಸತ್ಯವನ್ನೆ ನುಡಿಸು ತಾಯೆ|೨| ನಾವೆಲ್ಲ ಮಕ್ಕಳೂ…. ಜ್ಞಾನ ದೀಪ ಹಚ್ಚುವೆವು ನಿನ್ನ ಚರಣ ಕಮಲಕ್ಕೆ| ಜ್ಯೋತಿ ಆಗಿ ಬಾರಮ್ಮ ನಮ್ಮ ಬಾಳ ಬೆಳಗು ತಾಯೆ|೩| […]

ಸಂ-ಜನ: ಹೆಚ್. ಷೌಕತ್ ಆಲಿ, ಮದ್ದೂರು

ಒಂದು ತಾಲ್ಲೋಕಿನಿಂದ ಮತ್ತೊಂದು ತಾಲ್ಲೋಕಿನ ಒಂದು ಕಾಲೇಜಿನಲ್ಲಿ ನಾನು ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದಿನಾ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಹೋಗಿ ಬರುವುದು ಮಾಮೂಲಿಯಾಗಿತ್ತು. ಸಮಯಕ್ಕೆ ಅರ್ಧಘಂಟೆ ಮುಂಚೆ ನಾನು ಬಸ್ಸ್ಟ್ಯಾಂಡ್ ನಿಂದ ಇಳಿದು ಕಾಲೇಜಿಗೆ ನಡೆದುಕೊಂಡೆ ಹೋಗುತ್ತಿದ್ದೆ. ನನ್ನ ಕೈಯಲ್ಲಿ ಟೀಫಿನ್ ಬಾಕ್ಸ್, ವಾಟರ್ ಬಾಟಲ್ ಅವುಗಳನ್ನು ಹೊತ್ತಿರೋ ಒಂದು ಬ್ಯಾಗ್ ಆ ಬ್ಯಾಗ್ ನನ್ನ ಕೈಯಲ್ಲಿ. ಆ ಬ್ಯಾಗ್ ಹಿಡಿದುಕೊಂಡು ನಾನು ಕಾಲೇಜಿಗೆ ಬರುವಾಗ, ಹೋಗುವಾಗ ನನ್ನ ವಾಕಿಂಗ್ ಸ್ಟೈಲ್ […]

ದೇಹವೆ ದೇವಾಲಯ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ದೇವಾಲಯ ಎಂಬುದು ನೆಮ್ಮದಿಯ ತಾಣ. ದೇವರು ಎಂಬುದು ಒಳ್ಳೆಯದರ ಸಂಕೇತ! ಮಾನವರು ದೇವರನ್ನು ಪೂಜಿಸುವುದು ಆರಾಧಿಸುವುದು ಎಂದರೆ ಒಳ್ಳೆಯತನದ ಆರಾಧನೆ ಎಂದು ಅರ್ಥ ! ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆಂದರೆ ಒಳ್ಳೆಯದನ್ನು ಬಯಸುತ್ತಿದ್ದಾರೆಂದು ಅರ್ಥ. ಒಳ್ಳೆಯತನ ಸದಾ ಮಾನವರಿಗೆ ನೆಮ್ಮದಿ ನೀಡುತ್ತದೆ! ಅದಕ್ಕಾಗಿ ಅನೇಕರು ಅದನ್ನು ಅರಸಿ ದೇವಾಲಯಗಳಿಗೆ ಹೋಗುತ್ತಾರೆ. ಆದರೆ ಅದನ್ನು ಕೆಲವರು ಅರ್ಥೈಸುವಲ್ಲಿ ಆಚರಿಸುವಲ್ಲಿ ಪ್ರಮಾದಗಳಾಗಲು ಕಾರಣರಾಗಿರುವುದರಿಂದ ರೌದ್ರ ಭೀಭತ್ಸ ವಾತಾವರಣ ಉಂಟಾಗುತ್ತಿದೆ. ನೆಮ್ಮದಿಯ ತಾಣವಾಗಬೇಕಾದವು ನೆಮ್ಮದಿಯ ಕದಡಲು ಕಾರಣವಾಗುತ್ತಿವೆ. ಕೆಲವು ಮಹನಿಯರು ದೇಹವೆ ದೇವಾಲಯವಾಗಬೇಕೆಂದಿರುವರು. […]

ಬಹು ಮುಖದ ‘ ಚಿಲುಮೆ’: ಅರವಿಂದ ಚೊಕ್ಕಾಡಿ

ಸ್ನೇಹಿತ ಲಕ್ಷ್ಮೀಕಾಂತ ಮಿರಜಕರ ಮೊಳಕಾಲ್ಮೂರಿನ ದೇವಸಮುದ್ರದ ಇಂದಿರಾ ಗಾಂಧಿ ವಸತಿ ಶಾಲೆಯ ಪ್ರಾಂಶುಪಾಲರು. ನನ್ನ ಇಲಾಖಾ ಸನ್ಮಿತ್ರರು. ನಮ್ಮದು ಬಹಳ ಸಣ್ಣ ವ್ಯವಸ್ಥಾಪನೆಯಾದುದರಿಂದ, ಸಂಕಷ್ಟಗಳು ಮತ್ತು ಅನುಭವಗಳು ಉಳಿದೆಲ್ಲ ಇಲಾಖೆಯವರಿಗಿಂತ ಭಿನ್ನವಾಗಿರುವುದರಿಂದ ಬೃಹತ್ ವ್ಯವಸ್ಥೆಯಲ್ಲಿ ಕಣ್ಣಿಗೆ ಕಾಣದಷ್ಟು ಸಣ್ಣ ಸಂಖ್ಯೆಯವರು ಇಟ್ಟಾಗಿ ಬಡಿದಾಡಬೇಕಾದ್ದರಿಂದ ಸಂಬಂಧಗಳು ಬಿಗಿಯಾಗಿರುತ್ತವೆ. ಇಂತಿಪ್ಪ ಲಕ್ಷ್ಮೀಕಾಂತರು ಇತ್ತೀಚೆಗೆ ನನಗೊಂದು ಪುಸ್ತಕವನ್ನು ಕಳಿಸಿಕೊಟ್ಟರು. ಅದು ತಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಬರೆದ ಬರಹಗಳ ಸಂಕಲನ-‘ಚಿಲುಮೆ’. ‘ಚಿಲುಮೆ’ಯ ವೈವಿಧ್ಯ ಬಹಳ ಮುದ ನೀಡಿತು. ಒಬ್ಬ ವಿದ್ಯಾರ್ಥಿ ಕವನ […]

ಹೋರಾಟದ ಹೆಜ್ಜೆ ಮೂಡಿಸಿ ಮರೆಯಾದ ಮಿತ್ರ ಈಶ್ವರ ಮಗದುಮ್: ಅಶ್ಫಾಕ್ ಪೀರಜಾದೆ

ಈಗ ಬರೆಯುತ್ತಿರುವ ಒಂದೊಂದು ಅಕ್ಷರಕೂಡ ನೇರವಾಗಿ ನನ್ನ ಹೃದಯದಿಂದ ತೊಟ್ಟಿಕುತ್ತಿರುವಂತೆ ಭಾಸವಾಗುತ್ತಲಿದೆ. ಅಂತಿಮವಾಗಿ ಅವನ ಮುಖದರ್ಶನ ಮಾಡಿಕೊಂಡು ಬಂದಾಗಿನಿಂದಲೂ ಮನಸ್ಸಿಗೆ ಸೊಗಸೇ ಇಲ್ಲದಂತಾಗಿದೆ. ಏನೋ ಕಳೆದುಕೊಂಡಿದ್ದು ಅಲ್ಲ ಎಲ್ಲವನ್ನು ಕಳೆದುಕೊಂಡಂತೆ ಹೃದಯ ತಬ್ಬಲಿಯಾಗಿ ಆಕ್ರಂದಿಸುತ್ತಲಿದೆ. ಜೀವ ಸಮಾಧನವಿಲ್ಲದೆ ಒದ್ದಾಡುತ್ತಿದೆ. ನನ್ನೊಳಗಿನ ತಬ್ಬಲಿತನದ ಭಾವನೆ ಶಬ್ಧಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಅನಿಸುತ್ತಲಿದೆ. ಅಣ್ಣ ಸಯಿದ ಮತ್ತು ಸ್ನೇಹಿತ ವಿಠ್ಠಲ ಕರೆ ಮಾಡಿ ನಮ್ಮ ಈಶ್ವರ ಇನಿಲ್ಲವೆಂದಾಗ ಒಂದು ಕ್ಷಣ ನನ್ನ ಕಾಲ ಕೆಳಗಿನ ಭೂಮಿಯೇ ಬಾಯ್ದೆರೆದು ನುಂಗಿದಂತೆ ಭಾಸವಾಯಿತು ನನಗೆ. […]

ಸಾಮಾಜಿಕ ಜಲತಾಣಗಳಲ್ಲಿ ಟೀಕೆ ಎದುರಿಸುವುದು ಒಂದು ಕಲೆ!: ಸಹನಾ ಪ್ರಸಾದ್

” ಯಾಕ್ರೀ ಜಾನಕಿ, ಎಫ್ ಬಿ ಯಲ್ಲಿ ಕಾಣುತ್ತಾನೇ ಇಲ್ಲ, ಈಚೀಚಿಗೆ. ನಿಮ್ಮ ನಿಲುಮೆಗಳು, ಪಟಗಳು ಇಲ್ಲದೆ ಫ಼ೇಸ್ಬುಕ್ಕು ಸೊರಗಿದೆಯಲ್ಲಾ!” ನನ್ನ ಮಾಮೂಲಿ ಹಾಸ್ಯದ ಧಾಟಿಯಲ್ಲಿ ಕಾಲೆಳೆದಾಗ ಜಾನಕಿಯ ಪ್ರತಿಕ್ರಿಯೆ ಅನಿರೀಕ್ಷಿತವಾಗಿತ್ತು. ” ಈ ಮುಖಪುಟ ಒಂದೇ ಸಾಕು, ನಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡಕ್ಕೆ ಇಲ್ಲಿ ಜನರು ಬಹಳ ಭಯಂಕರ. ನನ್ನ ಮುಂದೆ ಒಂದು ರೀತಿ, ಬೆನ್ನ ಹಿಂದೆ ಮತ್ತೊಂದೇ ತರಹ. ಅಲ್ಲಿ ಕಾಮೆಂಟ್ ಹಾಕುವುದು ಬೇರೆ, ಇನ್ಬಾಕ್ಸಲ್ಲಿ ಬರೀ ದೂಷಣೆ, ಜಾನಕಿ ಹಾಗೆ, ಅವಳ […]

ನಡುವೆ ಬಂದವರು: ಸಿಂಧು ಭಾರ್ಗವ್

ರೋಶನಿ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ. ವಯಸ್ಸು 35 ವರ್ಷವಿರಬಹುದು. ಮದುವೆಯಾಗಿ ಒಂದು ಮಗು ಇರುವ ಸಂಸಾರಸ್ಥೆ. ಹೀಗಿರುವಾಗ ರೋಹಿತ್ ಎಂಬ ಹೊಸ ಸಹೋದ್ಯೋಗಿಯ ಪರಿಚಯವಾಗಿ ಸ್ನೇಹ ಬೆಳೆದು ಪ್ರೀತಿಯ ನಾಮಕರಣ ಮಾಡಿದ್ದಳು. ಅವನೋ ಇನ್ನೂ ಯುವಕ. 23 ವರ್ಷ ವಯಸ್ಸಿರಬಹುದು. ನೋಡಲು ಸುರದ್ರೂಪಿ. ಉತ್ಸಾಹಿ ಕೆಲಸಗಾರ. ಅನುದಿನವೂ ಅವಳ ಜೊತೆ ಹರಟುವುದು, ಅವಳ ಸೌಂದರ್ಯವನ್ನು ಹೊಗಳುವುದು, ವೃತ್ತಿ ನಿಷ್ಠೆಯನ್ನು ಹೊಗಳುವುದು ಅವನ ದಿನಚರಿಯಾಗಿತ್ತು. ಹೆಣ್ಮಕ್ಕಳಿಗೆ ಸ್ವಲ್ಪ ಹೊಗಳಿದರೂ ಕರಗಿ ಹೋಗುವುದು ಅವರ ಮನೋ ದೌರ್ಬಲ್ಯ […]