ಪಂಜು ಕಾವ್ಯಧಾರೆ

ಗುರುದಕ್ಷಿಣೆ ಬಿಳುಪಿಗೂ ಬಿಲ್ಲಿಗೂ ಹೊಸ್ತಿಲಾದ ಹನಿಗೆ ಹುದುಗಿದ್ದ ಚೈತನ್ಯದ ಗುರು ಕಿರಣವೇನೇ? ಮಳೆಹನಿಯ ರಭಸಕ್ಕೆ ತಾಳಿಕೆಯ ತೋರಿಸಿದ ಮರದೆಲೆಯು ಹನಿಗೆ ಗುರು ತಾನೇ? ಹರಿವ ಆಸೆಗೆ ತಗ್ಗಿಗೆ ನುಗ್ಗಿದೊಡೆ ಸಾಗರದ ಹಾದಿಗೊಯ್ದ ಗುರುವು ಭುವಿ ತಾನೇ? ಕಣ್ಣಹನಿ ಮುತ್ತೆಂದು ಒಡನೆ ಚಾಚಿದ ಬೊಗಸೆ ಮೌಲ್ಯದ ಮತಿಹೇಳೋ ಗುರು ತಾನೇ? ರಕ್ತ ಮಾಂಸವಂತೆ ಬುದ್ಧಿ ಭಾವಗಳಂತೆ ಪಂಚಭೂತಗಳಂತೆ ಜೀವದಾ ರಚನೆಗೆ. ಜೀವಿಯ ಜೀವಂತಿಕೆಗೆ ಪಂಚವೆಲ್ಲಾ ಕೊಂಚ! ಕಣಕಣದೊಳೊಕ್ಕಿ ಕಲಿಕೆ ಹುಚ್ಚ ಹಚ್ಚೋ ಅಸಂಖ್ಯಾಣು ಅದ್ಭುತಗಳೇ ಶಿಲ್ಪಿ ಬದುಕೀಗೆ. ದಕ್ಷಿಣೆಯ … Read more

ಜಾಣಸುದ್ದಿ 16: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ತೆರೆದಿದೆ ಮನೆಯೋ…: ಅಶ್ಫಾಕ್ ಪೀರಜಾದೆ

ಬದುಕಿನ ಮುಸ್ಸಂಜೆಯಲ್ಲಿ ಕುಳಿತು ನನ್ನ ಜೀವನದ ಮರಳು ಗಾಡಿನಲ್ಲಿ ನನಗಾಗಿ ನನ್ನತ್ತ ನಡೆದು ಬಂದವರ ಹೆಜ್ಜೆಗಳ ಗುರುತು ಹುಡುಕಲು ಪ್ರಯತ್ನಿಸುತ್ತೇನೆ. ಹೃದಯದಲ್ಲಿ ಎದ್ದ ಬಿರುಗಾಳಿಗೆ ಸರಿದು ಹೋದ ಮರಳಿನಲ್ಲಿ ಗುರುತು ಸಿಗದಂತೆ ಅವಶೇಷವಾಗಿ ಅಳಿದುಳಿದ ಗುರತುಗಳೇ!. ಒಂದೇ ಒಂದು ಸ್ಥಿರವಾದ ಹೆಜ್ಜೆ ಅಲ್ಲಿ ಮೂಡಿದ್ದು ಗೋಚರಿಸುವುದೇ ಇಲ್ಲ. ನಾನು ನನ್ನ ಮನೆಯಲ್ಲಿ ಒಂಟಿಯಾಗಿ ಕುಳಿತು ಇವುಗಳನ್ನೆಲ್ಲ ಅವಲೋಕಿಸುತ್ತ ಮತ್ತೇ ನನ್ನತ್ತ ಯಾರಾದರೂ ಬರಬಹುದೇ ಎಂದು ಬರುವವರ ಹೆಜ್ಜೆ ಸಪ್ಪಳ ಆಲಿಸಲು ಮೈಯಲ್ಲ ಕಿವಿಯಾಗಿಸುತ್ತೇನೆ. ಗಾಳಿಗೆ ಹಾರಿ ಹೋದ … Read more

ಬಣ್ಣದ ನೆರಳು ……: ಸತೀಶ್ ಶೆಟ್ಟಿ, ವಕ್ವಾಡಿ.

ಮುಂಗಾರಿಗೆ ಯಾಕಿಷ್ಟು ಅವಸರವೋ ಗೊತ್ತಿಲ್ಲ. ಊರಲ್ಲಿ ಯಕ್ಷಗಾನ ಮೇಳಗಳು ತಮ್ಮ ತಿರುಗಾಟಕ್ಕೆ ಮಂಗಳ ಹಾಡುವ ಮುನ್ನವೇ ಮಳೆ ತನ್ನ ಒಡ್ಡೋಲಗ ಆರಂಭಿಸಿಬಿಟ್ಟಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರಾವಳಿಗೆ ಕಾಲಿಡುತ್ತಿದ್ದ ಮುಂಗಾರು ಈ ಬಾರಿ ಹೆಚ್ಚು ಕಡಿಮೆ ಇಪ್ಪತ್ತು ದಿನಗಳ ಮೊದಲೇ ನೆಲೆಯೂರವ ಲಕ್ಷಣ ಹೆಚ್ಚಾದಂತಿದೆ. ನಿನ್ನೆ ರಾತ್ರಿಯಿಂದ ಧೋ ಅಂತ ಬ್ರೇಕ್ ಇಲ್ಲದೆ ಸುರಿಯುತ್ತಿದ್ದ ಮಳೆ ಊರಲ್ಲಿ ನೆರೆಯನ್ನೇ ಸೃಷ್ಟಿಸಿತ್ತು. ಕಡಲ ಶಬ್ದ ಮತ್ತು ಕಪ್ಪುಗಟ್ಟಿದ ಆಕಾಶ ಭಾರೀ ಮಳೆಯ ಮುನ್ಸೂಚನೆ ನೀಡುತ್ತಿತ್ತು. “ಥತ್, ಎಂತ … Read more

ಸುಂದರ ಊರಿನಲ್ಲೀಗ …: ಸ್ಮಿತಾ ಅಮೃತರಾಜ್. ಸಂಪಾಜೆ

ನಿಮ್ಮ ಊರು ಅದೆಷ್ಟು ಚೆಂದ; ನೀವೆಲ್ಲಾ ಪುಣ್ಯವಂತರು ಕಣ್ರೀ, ಸ್ವರ್ಗ ಅಂದರೆ ಇದೇ ನೋಡಿ. ಅಲ್ಲಿಯ ಬೆಟ್ಟ,ಗುಡ್ಡ,ನದಿ ,ಧುಮ್ಮುಕ್ಕಿ ಹರಿಯುವ ಜಲಧಾರೆ, ತುಂತುರು ಜುಮುರು ಮಳೆ..ನೆಮ್ಮದಿಯಿಂದ ಬದುಕೋದಿಕ್ಕೆ ಇನ್ನೇನು ಬೇಕು ಹೇಳಿ?. ನಾವೂ ನಿಮ್ಮೂರಿನಲ್ಲೇ ಬಂದು ಠಿಕಾಣಿ ಹೂಡ್ತೀವಿ, ಕೆಲಸಕ್ಕೆ ಜನ ಇಲ್ಲ ಅಂತೀರಿ ನಾವೇ ಬಂದು ಬಿಡ್ತೀವಿ, ನಮಗೆ ನಿಮ್ಮ ತೋಟಗಳಲ್ಲಿ ಕೆಲಸ ಕೊಟ್ರೆ ಅಷ್ಟೇ ಸಾಕು . ಈ ಬಯಲು ಸೀಮೆಯ ಒಣ ಹವೆ, ರಾಚುವ ಬಿಸಿಲು, ಇವೆಲ್ಲಾ ಅನುಭವಿಸಿ ಸಾಕಾಗಿ ಹೋಗಿದೆ ಅಂತ … Read more

ನಮ್ಮ ದಸರಾ Exhibition ಸವಾರಿ: ವಿಭಾ ಶ್ರೀನಿವಾಸ್

“Exhimition…Exhimition…” ಪದವನ್ನು ಸರಿಯಾಗಿ ಉಚ್ಚರಿಸಲೂ ಬಾರದ ಆ ದಿನಗಳಲ್ಲಿ ವರ್ಷಕ್ಕೊಮ್ಮೆ ಎದುರಾಗುತಿದ್ದ ಸ೦ತಸವೇ ಮೈಸೂರು ದಸರಾ Exhibition (ದಸರಾ ವಸ್ತುಪ್ರದರ್ಶನ). ಎಲ್ಲಾ ವರ್ಗದ, ಎಲ್ಲಾ ಭಾಷೆಗಳನ್ನು ಮಾತನಾಡುವ ಜನ ಕಾಣಸಿಗುತಿದ್ದ mini world !! ಪ್ರವೇಶ ಟಿಕೆಟ್ ನ ದರ ರೂ5 ಇದ್ದ ಕಾಲ. ನಾ ಮುಂದು ತಾ ಮುಂದು ಎ೦ದು ಟಿಕೆಟ್ ಪಡೆದು, ಮುಖ್ಯದ್ವಾರದ ಕನ್ನಡಿಯಲ್ಲಿ ಮುಖವನ್ನೊಮ್ಮೆ ನೋಡಿ ಹಲ್ಲುಕಿರಿದ ನ೦ತರವೇ ಪ್ರವೆಶಿಸಿದೆವೆ೦ಬ ಖುಷಿ. ಮು೦ದಿನ ೨-೩ ಗಂಟೆಗಳ ಕಾಲ ಅಣ್ಣ/ಚಿಕ್ಕಪ್ಪನ ಮಗಳ ಕೈ ಹಿಡಿದೇ … Read more

ಕಾಯಕಲ್ಪವಾಗಿ ಪ್ರವಾಸೋದ್ಯಮ: ಎಂ.ಎಚ್.ಮೊಕಾಶಿ

“ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬ ಗಾದೆ ಮಾತಿದೆ. ಇದು ತನು ಮನದ ಜ್ಞಾನಕ್ಕಾಗಿ ನಮ್ಮ ಹಿರಿಯರು ಹೇಳಿದ ಮಾತಾಗಿದೆ. ಅನುಭವ, ತನ್ಮೂಲಕ ಅನುಭಾವಕ್ಕೆ ಬಾರದ ಜ್ಞಾನವನ್ನು ಪುಸ್ತಕದ ಬದನೇಕಾಯಿ ಎಂದು ಹೇಳುವುದೂ ಇದೆ. ಒಂದೇ ಒಂದು ಸುತ್ತಾಟ ಪುಸ್ತಕ ನೀಡುವ ಜ್ಞಾನಕ್ಕಿಂತ ಹೆಚ್ಚಿನ ಜ್ಞಾನ ನೀಡುವುದೆಂಬುದು ಅನುಭವದ ಮಾತಾಗಿದೆ. “ವಿಶ್ವ ಒಂದು ಪುಸ್ತಕವಿದ್ದಂತೆ, ಸುತ್ತಾಡಲಾರದವ ಯಾವ ಜ್ಞಾನವನ್ನೂ ಗಳಿಸಲಾರ” ಎಂದು ಸೇಂಟ್ ಆಗಸ್ಟಿನ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಯು 1980 ರಿಂದಲೂ … Read more

ಅಸಹಾಯಕತೆ: ನಾವೆ

ಅದೊಂದು ದಿನ ಮಟ ಮಟ ಮಧ್ಯಾಹ್ನ. ಸೂರ್ಯ ನೆತ್ತಿಯ ಮೇಲೆ ಪ್ರಖರ ಕಿರಣಗಳಿಂದ ಸುಡುತ್ತಿದ್ದ. ಗ್ರಾಮೀಣ ಪ್ರದೇಶವಾದ್ದರಿಂದ ಅದಾಗಲೇ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳ ಹೊರಬಾಗಿಲುಗಳೆಲ್ಲ ಮುಚ್ಚಲ್ಪಟ್ಟಿದ್ದವು. ಅಂಗಡಿ ಮಾಲಿಕರು, ಕಾರ್ಮಿಕರೆಲ್ಲ ಹಸಿವೆಂಬ ರಕ್ಕಸನ ಅಬ್ಬರ ತಣಿಸಲು ಅವರವರ ಮನೆಯತ್ತ ಪಯಣಿಸಿಯಾಗಿತ್ತು. ಹಾಗಾಗಿ ಆ ಸಮಯದಲ್ಲಿ ಮನೆಗೆ ಹೋಗದೇ ಊಟ ಹೊತ್ತು ತರುವ ನನ್ನ ಅಂಗಡಿಯೊಂದೇ ತೆರೆದಿತ್ತು.ಊಟದ ಸಮಯದಲ್ಲಿಯೂ ಅಂಗಡಿಯು ತೆರೆದೇ ಇರುತ್ತಾದ್ದರಿಂದ ಅದರ ಗೋಜಿಗೆ ಹೋಗದೆ ನಾನೂ ಕೂಡ ಊಟದ ತಯಾರಿ ನಡೆಸುತ್ತಿದ್ದೆ. ಹಸಿವೆಂಬ ಬ್ರಹ್ಮರಾಕ್ಷಸನ ತೃಪ್ತಿ … Read more

ಶಕ್ತಿಸ್ವರೂಪಿಣಿ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಸನ್ನಿದಿ: ಶ್ರೀ ಜಗದೀಶ ಸಂ.ಗೊರೋಬಾಳ

ಮಂದಾರ್ತಿ ಎಂದಾಕ್ಷಣ ಕುಂದ ಮಂದಾರಾದಿಗಳ ಗಂಧ ಮಕರಂದವನ್ನು ಆಗ್ರಾಣಿಸುವ ಆಸ್ವಾದಿಸುವ ವೃಂದಾರಕ ವೃಂದವೇ ಬಂದು ನೆಲೆಸಿರುವ ಪುಣ್ಯಭೂಮಿಯೇ ಮಂದಾರ್ತಿ ಎಂದು ಯಕ್ಷಗಾನದಲ್ಲಿ ಕೇಳಿದ ಮಾತು ನಮಗೆ ನೆನಪಾಗುತ್ತದೆ. ದಕ್ಷಿಣ ಭಾರತದ ಪ್ರಮುಖ ಹಿಂದೂ ದೇವಳಗಳಲ್ಲಿ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನವು ಬಹಳ ವಿಶಿಷ್ಟವಾದುದು. ಸರ್ವಮುನಿಜನ ಪೂಜಿತೆ, ಸಂಕಷ್ಟ ಕಳೆಯುವ ಅಂಬಿಕೆ ಶಕ್ತಿಸ್ವರೂಪಿಣಿ ಸನ್ನದಿಗೆ ರಾಜ್ಯ ಹೊರರಾಜ್ಯಗಳಿಂದ ಅಸಂಖ್ಯಾತ ಭಕ್ತರು ಶ್ರೀಕ್ಷೇತ್ರ ಮಂದಾರ್ತಿಗೆ ಆಗಮಿಸಿ ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಾರೆ. ನಮ್ಮ ಕರ್ನಾಟಕದ ರಮ್ಯಮನೋಹರ ತಾಣ ಮಂದಾರ್ತಿಯ ಕಿರು ಪರಿಚಯ … Read more

ನಿಯತ್ತಿಗೆ ಮತ್ತೊಂದು ಹೆಸರೇ ಹನುಮಂತಣ್ಣ: ಜೆಪಿ.ಅಡೂರ್

ಎಪ್ಪ ಏನೋ ಇದು ಅಷ್ಟೊಂದು ದೊಡ್ದುದು ಗುಡ್ಡ ಇದ್ದಂಗೆ ಇದೆಯಲ್ಲೋ ಮಾರಾಯ ಅಂದ ನಮ್ಮ ಹನುಮಂತಣ್ಣ ಜೆರೋಸಿಕ್ ಪಾರ್ಕ್ ಸಿನಿಮಾನ ಟಿವಿ ನಲ್ಲಿ ನೋಡುತ. ಹೇ ಹನುಮಂತಣ್ಣ ಅಂತವು ಎರಡು ತರೋನು ನಾವು ಹೊಲ ಹಸನು ಮಾಡೋಕೆ ಬರುತ್ತೆ ಅಂದೆ ಅದಕೆ ಥಟ್ಟಂತ ಉತ್ತರ ಬಂತು ಹನುಮಂತಣ್ಣನಿಂದ “ಬೇಡ ಚಿಕ್ಕ ಧಣಿಯಾರೇ ನಮಗೆ ತಿನ್ನಾಕೆ ಏನು ಸಿಗ್ತಿಲ್ಲಾ ಈ ಮಳೆ ನಂಬಕಂಡು ಇರೋ ಎರಡು ಎತ್ತು ಸಾಕೋದಕ್ಕೆ ಅವರ ಕಾಲು ಇವರ ಕಾಲು ಹಿಡಿದು ಮೇವತಗೊಂಡು ಬರ್ತಾಇದಿವಿ” … Read more

ಮಹಿಳಾ ಸಬಲೀಕರಣದತ್ತ…!: ನಸ್ರೀನ್. ಮೈ. ಕಾಖಂಡಕಿ

ದೇಶದ ಅಭಿವೃದ್ಧಿ ಸಾಧನೆಯಲ್ಲಿ ಮಹಿಳಾ ಸಶಕ್ತೀಕರಣದಷ್ಟು ಪರಿಣಾಮಕಾರಿ ಸಾಧನ ಮತ್ತೊಂದಿಲ್ಲ. ಮಹಿಳೆಯರ ಸಾಮಥ್ರ್ಯವನ್ನು ಇದಕ್ಕಿಂತ ಸರಿಯಾಗಿ ಬಣ್ಣಿಸುವ ಹೇಳಿಕೆ ಬೇರೊಂದಿಲ್ಲ ಎನ್ನಬಹುದು. ಇದು ಸಾಂಪ್ರದಾಯಿಕ ಕ್ಷೇತ್ರವಾಗಿರಲಿ ಅಥವಾ ಆಧುನಿಕ ರಂಗವಿರಲಿ, ಮಹಿಳೆ ತನ್ನ ಛಾಪು ಮೂಡಿಸದ ಕ್ಷೇತ್ರವೇ ಇಲ್ಲ. ಮಕ್ಕಳನ್ನು ಹೆತ್ತು, ಹೊತ್ತು ಭವಿಷ್ಯದ ಭವ್ಯ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಪ್ರಾಥಮಿಕ ಜವಾಬ್ದಾರಿ ಯಾವಾಗಲೂ ಅಮ್ಮನದೇ ಆಗಿದೆ. ನಾರಿ, ಮಗಳು, ಅಕ್ಕ, ತಂಗಿ, ಹೆಂಡತಿಯಾಗಿಯೂ ಪುರುಷರ ಬೆನ್ನೆಲುಬಾಗಿದ್ದಾಳೆ. ಆಧುನಿಕ ರಂಗದಲ್ಲಿ ಪ್ರಶಿಕ್ಷಕರಾಗಿ, ಪ್ರಬಂಧಕರಾಗಿ, ರಾಜಕೀಯ ಧುರೀಣೆಯಾಗಿ ಪ್ರಮುಖ … Read more

ಮರೆಯಲಾಗದ ಬಂಧುಗಳು: ವೆಂಕಟೇಶ ಚಾಗಿ

ಆ ದಿನ ರಾತ್ರಿ ಮನೆಯ ಹಿತ್ತಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ. ಇಡೀ ರಾತ್ರಿ ಅದಾವುದೋ ಬೆಕ್ಕು ಬುಸುಗುಡುವ ಶಬ್ದ. ಆಗಾಗ ನಾಯಿ ಬೊಗಳುವ ಶಬ್ದ ಬೇರೆ. ರಾತ್ರಿ ಎದ್ದು ಆ ಬೆಕ್ಕು ಮತ್ತು ನಾಯಿ ಎರಡನ್ನೂ ಓಡಿಸೋಣ ಎಂದುಕೊಂಡರೆ ಮನದಲ್ಲಿ ಅದೇನೋ ಭಯ. ಆದರೂ ದೈರ್ಯ ತಂದುಕೊಂಡು ಕೈಯಲ್ಲಿ ಟಾರ್ಚ ಹಾಗೂ ಮೂಲೆಯಲ್ಲಿದ್ದ ಕೋಲನ್ನು ಹಿಡಿದು ನಿಧಾನವಾಗಿ ಬಾಗಿಲನ್ನು ತರೆದು ಹೊರ ಬಂದೆ. ವಿದ್ಯುತ್ ಕೈ ಕೊಟ್ಟಿದ್ದರಿಂದ ಹೊರಗಿನ ಬಲ್ಬ್ ಉರಿಯುತ್ತಿರಲಿಲ್ಲ. ಧೈರ್ಯ ತಂದುಕೊಂಡು … Read more

‘ಕೊನೆಯ ದಿನದೊಳಗೊಂದು’ ಕಥೆ: ಮೊಗೇರಿ ಶೇಖರ ದೇವಾಡಿಗ

ಫಲಿತಾಂಶದ ಪಟ್ಟುಯನ್ನು ಕೂಲಂಕಷವಾಗಿ ಪರಿಶೀಲಿಸಿದ ಮೇಲೆ ಸಹಜವಾಗಿ ಸಂತೃಪಿಯ ನಗು ತೇಲಿತು. ನೋಟಿಸ್ ಬೋರ್ಡ್‍ಗೆ ಹಚ್ಚಿದ ಮೇಲಂತೂ ಮನಸ್ಸು ತುಸು ಹಗುರಾಯಿತು. 8ನೇ ತರಗತಿಯ ಮಕ್ಕಳು ಕೆಲದಿನಗಳಿಂದ ‘ಕಥೆ ಹೇಳಿ ಸಾರ್…’ ಎಂದು ಪೀಡಿಸುತ್ತಿದ್ದದ್ದು ನೆನಪಾಗಿ ‘ಕೊನೆಯ ದಿನದೊಳಗೊಂದು’ ಕಥೆ ಹೇಳಬೇಕೆಂದು ಮನ ಮಾಡಿ ಅತ್ತ ಕಾಲಿಟ್ಟಿದ್ದೆ. ತರಗತಿಯ ಲೀಡರ್ ಅಭಿಷೇಕ್ ‘ಅರುಣ್ ಸರ್ ಬಂದ್ರ… ಇವತ್ತು ಕಥೆ ಗ್ಯಾರಂಟಿ…’ ಎಂದ ತುಸು ಜೋರಾಗಿಯೇ ತರಗತಿ ಕ್ಷಣಾರ್ಧದಲ್ಲಿ ಮೌನವಾಗಿ ನನ್ನ ಕಥೆಗೊಂದು ವೇದಿಕೆ ನಿರ್ಮಿಸಿಕೊಟ್ಟಿತ್ತು. “ಮಕ್ಕಳೇ, ಇದು … Read more

ಸತ್ಯಮೇವಜಯತೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಜೀವನದಲ್ಲಿ ಸತ್ಯ ಬಹು ಅಮೂಲ್ಯವಾದುದು. ಸತ್ಯದ ನಡೆ – ನುಡಿ ಕಠಿಣವಾದರೂ, ಮೌಲ್ಯಯುತವಾದುದು. ಬದುಕನ್ನು ಪಾರದರ್ಶಕಗೊಳಿಸಿ ಸತ್ಯವಂತರನ್ನು ಪ್ರಾಕಾಶಿಸುವಂತೆ ಮಾಡುತ್ತದೆ. ಸತ್ಯಕ್ಕೆ ಪ್ರತ್ಯೇಕ ಅಸ್ಥಿತ್ವವಿಲ್ಲ. ಅದು ಅದನ್ನು ಉಳಿಸಿಕೊಳ್ಳಲು ಹೋರಾಡುವುದಿಲ್ಲ. ಅದು ಮಾನವರ ನಡವಳಿಯನ್ನು ಅವಲಂಭಿಸಿರುತ್ತದೆ. ಮಾನವರು ಸತ್ಯದ ಪರ ನಿಂತಂತೆ ಅವರ ವ್ಯಕ್ತಿತ್ವ ಉನ್ನತಿಗೇರುತ್ತಾ ಹೋಗಿ ಅವರದು ಪರಿಶುದ್ದ ಆತ್ಮ ಆಗುತ್ತಾ ಹೋಗುತ್ತದೆ. ಆದ್ದರಿಂದ ‘ ಸತ್ಯ’ ಜೀವಕ್ಕಿಂತ ಅಮೂಲ್ಯ ಎಂದು ಭಾವಿಸಿ ಅಮರರಾದವರು ನಮ್ಮ ಸುತ್ತ ಇದ್ದಾರೆ! ಸತ್ಯವನ್ನು ಬಹುಕಾಲ ಮುಚ್ಚಿಡಲಾಗದು. ಮುಚ್ಚಿಟ್ಟಷ್ಟೂ ಬಡಬಾಗ್ನಿಯಂತೆ … Read more