ಪಂಜು ಕಾವ್ಯಧಾರೆ

ತುಣುಕು ಧೂಪ . . . : ಮನದ ಬಾಗಿಲ ನಡುವೆ ಯಾವ ರೂಪವದು/ ಅಂತರಾಳದಿ ಇರಲಿ ಒಲವ ದೀಪವದು// ಬರಿದೆ ಬೇಸರವೇಕೆ ಇರುಳ ಉರುಳಿನಲಿ/ ಹಗುರವಾಗಲಿ ಎದೆಯು ಆರಿ ತಾಪವದು// ಒಳ ಬಿಕ್ಕ ಹಾವಳಿಗೆ ಒಡಲುರಿಯು ಬೇರೆ/ ಎಲ್ಲಿ ಕರಗಿತು ಹೇಳು ಸುಖದ ಲೇಪವದು// ಸಪ್ಪೆ ಸೂರ್ಯನ ಆಟ ಕತ್ತಲೆಯ ಕಾಟ/ ಯಾಕೆ ಸರಿಯದು ಮುಗಿಲು ಕವಿದ ಶಾಪವದು// ನೂರು ದೇವರ ಪೂಜೆ ಸಲ್ಲಿಸಿದ ಫಲವೇ/ ಕುದಿಯುವುದು ಕಡೆಯಿರದೆ ಮಡಿಲ ಕೋಪವದು// ಚೂರು ಘಮಿಸದೆ ಹೇಳು … Read more

ಜಾಣಸುದ್ದಿ 14: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ಚೆಂದನೆ ಗಡಿಯಾರ ಮತ್ತು 4.20 ಸಮಯ: ಅಮರದೀಪ್.ಪಿ.ಎಸ್.

ಮನುಷ್ಯನಿಗೆ ಸಮಯ ಅನ್ನೋದು ಅಮೂಲ್ಯ. ಈ ಕ್ಷಣ ಕಳೆದುಕೊಂಡರೆ ಅದನ್ನು ಮತ್ತಿನ್ನೆಂದೂ ಪಡೆಯಲು ಸಾಧ್ಯವಿಲ್ಲ. ಬಹಳಷ್ಟು ಸಾಧಕರು ಸಮಯವನ್ನು ತಮ್ಮ ತಮ್ಮ ಕೌಶಲ್ಯ, ಕ್ರಿಯೇಟಿವಿಟಿಗೆ, ನೈಪುಣ್ಯತೆಗೆ ಓರೆ ಹಚ್ಚುವ ಗೀಳಿಗೆ ಹಠಕ್ಕೆ ಬಿದ್ದು ಬಳಸಿಕೊಳ್ಳುತ್ತಾರೆ. ಇರುವ ಇಪ್ಪತ್ನಾಲ್ಕು ಗಂಟೆಯಲ್ಲಿ ಹದಿನೆಂಟು ತಾಸು ಕೆಲಸ ಮಾಡುತ್ತಲೇ, ಓದು, ಬರಹ, ಸಂಗೀತ, ಸುತ್ತಾಟ, ಗೆಳೆಯರು, ಹರಟೆ ಎಲ್ಲವನ್ನೂ ಹದವಾಗಿ ಅನುಭವಿಸಿ ಖುಷಿಯಿಂದಿರುವ ಎಷ್ಟು ಜನರಿಲ್ಲ ಹೇಳಿ? ಬಾಲ್ಯದಲ್ಲಿ ನನ್ನದೊಂದು ಅಂದಾಜೇ ಇರದ ದಿನಗಳಿದ್ದವು. ಆ ಸಮಯದಲ್ಲಿ ನನ್ನ ಮನಸ್ಸಿಗೆ ನೋವಾಗುವಂಥ … Read more

ಸೌಮ್ಯ ನಾಯಕಿ ಸ್ನೇಹ ಮಹೋತ್ಸವ: ವೃಂದಾ. ಸಂಗಮ

ನಿಜವಾಗಿಯೂ ಇದು ಸೌಮ್ಯ ನಾಯಕಿಯ ಕಥೆಯೂ ಅಲ್ಲ. ಬೇಲೂರಿನ ಅಂತಃಪುರ ಗೀತೆಗಳ ವಾಚನವೂ ಅಲ್ಲ. ‘ಹಂಗಾದ್ರೆ ಇನ್ನೇನು?’ ಅಂತ ನೀವು ಕೇಳೋದಿಕ್ಕೆ ಮೊದಲೇ ಹೇಳುವ ಕತೆಯಿದು. ಕಥಾ ನಾಯಕಿಯ ಹೆಸರು ಸೌಮ್ಯ. ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊಳು, ಸರ್ಕಾರೀ ನೌಕರಿಯೆಂದು ಹೆಸರಾದ ಒಂದು ಖಾಯಂ ನೌಕರಿಯೊಳಗಿದ್ದ ಒಬ್ಬ ಸಾಮಾನ್ಯ ನೌಕರನ ಮಗಳು. ಯಾವುದೇ ಮಹತ್ವಾಕಾಂಕ್ಷೆಗಳಿಲ್ಲದ ಸಾಮಾನ್ಯ ಹುಡುಗಿ. ನೋಡಲು ಗೋಧಿ ಬಣ್ಣ ಸಾಧಾರಣ ಮೈಕಟ್ಟು. ಹುಟ್ಟಿದ್ದಕ್ಕೆ ಬೆಳೆದಳು. ಬೆಳೆದಿದ್ದಾಳೆಂದು ಅಂಗನವಾಡಿಯ ಟೀಚರ್ ಎಳಕೊಂಡು ಹೋದರು, … Read more

ಮಂದಾಕಿನಿ : ಪ್ರವೀಣಕುಮಾರ್ ಗೋಣಿ

ಅಷ್ಟಕ್ಕೂ ಇವರು ಹೊರಟಿದ್ದಾದರೂ ಎಲ್ಲಿಗೆ !? ಕುರಿಮಂದೆಯ ಹಿಂಡೊಂದು ಎಲ್ಲಿಗೆ ? ಯಾವುದರ ಕಡೆಗೆ ? ಯಾವುದಕ್ಕೆ ಎನ್ನುವ ಪರಿವೆಯೇ ಇಲ್ಲದಂತೆ ಕತ್ತು ನೆಲಕ್ಕೆ ಹಾಕಿಕೊಂಡು ಸಾಗುವಂತೆ ನಡೆಯುತ್ತಲೇ ಇದ್ದಾರೆ. ಕುಂತು ಭೂಮಿಗೆ ಭಾರವಾಗಬೇಡ ಎದ್ದು ನಡೆಯುತ್ತಿಲಿರೆಂದು ಹಿರೀಕರು ಹೇಳಿದ್ದೇನೋ ನಿಜ. ನಡೆಯುತ್ತಲೇ ಇರು ಎಂದ ಮಾತ್ರಕ್ಕೆ ನಡೆಯುವುದಾದರೊ ಎಲ್ಲಿಗೆ ? ಬೆಳಗಿನಿಂದ ಅರಳುವ ನಡಿಗೆ ಇರುಳಿನವರೆಗೆ ದಾಪಿಡುತ್ತಲೇ ಸಾಗುತ್ತದೆ, ಮತ್ತೆ ಬೆಳಗು ಮೂಡಿ ಮತ್ತೆ ಕಾಲನ ಕಾಲೊಳಗೆ ಕಾಲಿರಿಸಿ ಸಾಗುವುದಷ್ಟೇ ಗಾಣದ ಎತ್ತಿನಂತೆ ತಿರುಗುತ್ತಲೇ ಇರುವಂತಾಗಿಬಿಡುತ್ತದೆ. … Read more

ಬಾಂಧವ್ಯದ ಸಂಕೇತ ರಕ್ಷಾ ಬಂಧನ: ವೆಂಕಟೇಶ ಗುಡೆಪ್ಪನವರ ಮುಧೋಳ

ರಸ್ತೆಯಲ್ಲಿ ಶಾಲಾ ಮಕ್ಕಳು ಓರ್ವ ಪ್ರಯಾಣಿಕನಿಗೆ ರಾಕಿ ಕಟ್ಟಿ, “ನಮಗೆ ಹಾಗೆ ಬೇಡ ರಾಕಿ ಕಟ್ಟುತ್ತೇವೆ ಹಣ ಕೊಡಿ” ಎಂದು ಕಡ್ಡಾಯವಾಗಿ ಪಡೆದು ಅದನ್ನು ಒಂದು ಬಿಳಿ ಪೆಟ್ಟಿಗೆದಲ್ಲಿ ಹಾಕುತ್ತಿದ್ದರು. ಸಮೀಪಕ್ಕೆ ಹೋಗಿ ನೋಡಿದರೆ, ಅದು ಕೊಡಗು ಹಾಗೂ ಕೇರಳ ಸಂತ್ರಸ್ಥರ ಪರಿಹಾರ ನಿಧಿ ಪೆಟ್ಟಿಗೆಯಾಗಿತ್ತು. ಸಹೋದರನಿಗೆ ಸಹೋದರಿ ರಕ್ಷಾಬಂಧನ ಕಟ್ಟಿ ಮಮತೆ ತೋರಿಸಿ ಅವನ ಯೋಗಹಕ್ಷೇಮಕ್ಕಾಗಿ ಪ್ರಾರ್ಥಿಸುವುದು, ಅಷ್ಟೇ ಅಲ್ಲ ಈ ಹಣ ಈ ರೀತಿಯಿಂದ ಅಪಾಯದ ಸ್ಥಿತಿಯಲ್ಲಿರುವ ಸಂತ್ರಸ್ಥರ ಬಾಳಿಗೂ ಬೆಳಕಾಗ ಬಲ್ಲದು ಎನ್ನುವುದು, … Read more

ಕಣ್ಣೊಂದು ಕವಿತೆ ಕುಕ್ಕಿ, ಕವಿತೆಯೊಂದು ಕಣ್ಣ ಕುಕ್ಕಿ: ಶಿವಕುಮಾರ ಚನ್ನಪ್ಪನವರ

ಭಾಗ-1 “ಕಣ್ಣೊಂದು ಕವಿತೆ ಕುಕ್ಕಿ ಗುಂಜಿ, ಗುಂಜಿಯಾಗಿ, ಗುಂಪಾಗಿ ಗೂಡಾಗಿ ಕೊರಗುತ್ತಿತ್ತು ಅವಳ ಹೊಗಳದ ಪದವೊಂದು ಸಿಗದೇ” ಇನ್ನೇನು ಹೂಬಿಸಲು ಸತ್ತು ಹೋಗುತ್ತದೆನ್ನುವ ಮಾತು ಅನುವಾಗುವಂಥ ಸಮಯವಾದ್ದರಿಂದ, ಎರಡರಿಂದ ಐದಾಳ ಇರುವ ವರದೆಯ ಬದುವಿಗೆ ಬೇರು ಚಾಚಿ, ಬಾಗಿ, ವರದೆಯನ್ನೇ ಇಣುಕುವಂತ ಮರಗಳ ಮೇಲೊಂದು ಜಾತ್ರೆಯೇ ನಡೆಸಿರುವಂತೆ ಗುಬ್ಬೆ-ಕಾಗೆಗಳು ಒಂದೊಂದು ಗುಂಪು ಕಟ್ಟಿ ಪಿಸುಮಾತು ನಡೆಸುತ್ತಿವೆ. ಈಗೈದು ತಿಂಗಳ ಹಿಂದೆಯಷ್ಟೇ ಅದೇ ಕಳೆಗುಂದದ ಸೇತುವೆಯ ಮೇಲೆ ಕುಳಿತು ಕಥೆ, ಕವಿತೆ ಕಟ್ಟುತ್ತೇನೆಂದು ಹೊಯ್ದಾಡುವ ಸಂದರ್ಭಗಳನ್ನೇ ಒಟ್ಟುಗೂಡಿಸುವಲ್ಲಿ ವಿಫಲವಾಗುತ್ತಿದ್ದ … Read more

 ಮತ್ತೆ ಮತ್ತೆ ಪ್ರತಿದ್ವನಿಸುವ  ಪ್ರತ್ಯೇಕ ರಾಜ್ಯದ ಕೂಗು: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ವಿಶಾಲ ಭೂಪ್ರದೇಶ ಹೊಂದಿದ ಕೆಲವು ರಾಜ್ಯಗಳು ಪ್ರಾದೇಶಿಕವಾಗಿ ನೆಲ, ಜಲ, ಖನಿಜ, ಸಂಪನ್ಮೂಲ ಮಳೆಯ ಹಂಚಿಕೆ ಮುಂತಾದವುಗಳಲ್ಲಿ ಭಿನ್ನವಾಗಿರುತ್ತವೆ! ಅವು ಅಲ್ಲಿ ವಾಸಿಸುವ ಜನರ ಜೀವನಮಟ್ಟ ವ್ಯತ್ಯಾಸವಾಗಲು ಅಸಮಾನತೆ ಉಂಟಾಗಲು ಕಾರಣವಾಗಿರುತ್ತವೆ. ಆದರೆ ಇದನ್ನು ಗುರುತಿಸಿ ಅಸಮಾನತೆಯ ಹೋಗಲಾಡಿಸಲು ರಾಜ್ಯ ಸರ್ಕಾರಗಳು ಅಗತ್ಯ ಕಾರ್ಯಕ್ರಮ ರೂಪಿಸಬೇಕಿದೆ. ರೂಪಿಸುತ್ತವೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ಸರ್ಕಾರಗಳು ಬೇಧಭಾವ ಮಾಡುವುದಿಲ್ಲ! ಕಾರಣಾಂತರದಿಂದ ಒಮ್ಮೊಮ್ಮೆ ಸರ್ಕಾರಗಳಿಂದನೇ ಬೇಧಭಾವ ಆಗಿಬಿಡುತ್ತದೆ. ಬೇಧಭಾವ ಎಲ್ಲಾ ಕಡೆ ಇದ್ದೇ ಇರುತ್ತದೆ. ಇಲ್ಲದಂತೆ ಇರಲು ಸಾಧ್ಯವಿಲ್ಲ! ಅದು ಸ್ವಲ್ಪ … Read more

ದಾಸೋಹವೆಂಬುದು ಕಾಯಕವೆಂಬ ನಾಣ್ಯದ ಇನ್ನೊಂದು ಮುಖ: ಜಯಶ್ರೀ ಭ. ಭಂಡಾರಿ.

ದಾಸೋಹ ಕಾಯಕವೆಂಬ ನಾಣ್ಯದ ಇನ್ನೊಂದು ಮುಖ. ಸಮಾಜದಲ್ಲಿ ಸಂಪತ್ತು ಉತ್ಪತ್ತಿಯಾಗಲು ಸತ್ಯಶುದ್ಧ ಕಾಯಕ ಬೇಕು. ಆದರೆ,ಸಂಪತ್ತು ಕೇಂದ್ರೀಕತವಾದರೆ ಎಲ್ಲಾ ಬಗೆಯ ಅಸಮಾನತೆಗಳು ಹುಟ್ಟುತ್ತವೆ. ಆದ್ದರಿಂದ ಬಸವಾದಿ ವಚನಕಾರರು ದಾಸೋಹ ತತ್ವವನ್ನು ಆವಿಷ್ಕರಿಸಿ ಆಚರಣೆಯಲ್ಲಿ ತಂದರು. ಅಣ್ಣನವರ ಸುಪ್ರಸಿದ್ಧ ವಚನ “ಕಾಗೆಯೊಂದಗುಳ ಕಂಡಡೆ ಕೂಗಿ ಕರೆಯದೆ ತನ್ನ ಬಳಗವ. . . . “. ಸಮಾಜದಲ್ಲಿ ಸಂಪತ್ತಿನ ವಿತರಣೆಯಾಗಲೇಬೇಕೆಂದು ವಿಧಿಸುವ ನಿಯಮ. ಕಾಯಕ ಸಾರ್ಥಕವಾಗುವದೇ ದಾಸೋಹದಲ್ಲಿ. ಆದ್ದರಿಂದಲೇ “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ” ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ ಅಣ್ಣ. … Read more

ಮಕ್ಕಳ ಕವಿತೆ

*ಹಕ್ಕಿಯ ಮನೆ* ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಜೀವ ಜೀವಿಗಳ ಮೆಟ್ಟಿ ನಿಲ್ಲದೆ ಧರೆಯನೆಂದು ಬಿಟ್ಟು ಹೋಗದೆ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ತಂಪಾದ ಗಾಳಿ ಮನೆಯ ತೂಗಿ ಹಸಿರಾದ ಗರಿಕೆ ತುಸು ಬೆಚ್ಚಗಿರಿಸಿ ಗುಟುಕುಗಳೇ ಆಸ್ತಿ ಉಳಿದೆಲ್ಲ ನಾಸ್ತಿ ಜೋಕಾಲಿ ಜೀಕಲಿ ಜೋಗುಳದ ದೋಸ್ತಿ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಹೊಸ ಬೆಳಕಿನ ಹೊಸ ಹುಟ್ಟಿಗೆ ಜೊತೆಗಿದೆ ಭೂಮಾತೆಯ … Read more

ಶಿಕ್ಷಣವು ಕನಸಿನ ಕುದುರೆಯಾಗದಿರಲಿ!: ಆರ್.ಬಿ.ಗುರುಬಸವರಾಜ ಹೊಳಗುಂದಿ     

ಜಾಗತೀಕರಣದ ಪರಿಣಾಮವಾಗಿ ಭಾರತವು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿ ಬೆಳೆಯುತ್ತಿದೆ. ಆರ್ಥಿಕತೆ, ನವೀನ ತಂತ್ರಜ್ಞಾನ ಹಾಗೂ ಉತ್ತಮ ಮೂಲಭೂತ ವ್ಯವಸ್ಥೆಗಳ ಅಭಿವೃದ್ದಿಗಳು ದೇಶದ ಹೆಮ್ಮೆಯಾಗಿವೆ. ದೇಶವು ಎಲ್ಲಾ ಕ್ಷೇತ್ರಗಳ ಆಧುನಿಕತೆಯಲ್ಲಿ ಸಕ್ರಿಯವಾಗಿದ್ದರೂ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ಆಮೆ ವೇಗದ ಪ್ರಗತಿ ಆಗುತ್ತಿರುವುದು ದೇಶದ ಏಳಿಗೆಗೆ ಕಂಟಕವಾಗಿದೆ. ಜನಸಂಖ್ಯೆಯಲ್ಲಿ ಪ್ರಪಂಚದ ಎರಡನೇ ಸ್ಥಾನ ಇದ್ದರೂ ಪ್ರಗತಿಗೆ ಬೇಕಾದಷ್ಟು ಮಾನವ ಸಂಪನ್ಮೂಲವನ್ನು ಸೃಷ್ಠಿಸುವಲ್ಲಿ ದೇಶದ ಶಿಕ್ಷಣ ವಿಫಲವಾಗಿದೆ. ಒಂದೆಡೆ ಪ್ರತಿಭೆಗಳು ವಿದೇಶಗಳಿಗೆ ಪಲಾಯನವಾಗುತ್ತಿವೆ. ಮತ್ತೊಂದೆಡೆ ಪ್ರತಿಭೆಗಳಿಗೆ ಸೂಕ್ತ ಅವಕಾಶ ಮತ್ತು … Read more

ತಂದೆ ತಾಯಿ ದೇವರ ಮುಂದೆ, ಮತ್ತಾವ ದೇವರುಂಟು !: ರವಿ ರಾ ಕಂಗಳ

ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ರೂಪಿಸುತ್ತಿರುವ ಶಿಕ್ಷಣವು ವಿಶಾಲವಾದ ಜಗತ್ತನ್ನು ಸಂಕುಚಿಸುತ್ತ ಸಾಗಿದೆ. ತಂತ್ರಜ್ಞಾನದ ಪ್ರಭಾವದಿಂದಾಗಿ ಮಾನವ ಏನೆಲ್ಲ ಸಾಧಿಸಿದ್ದಾನೆ. ಅಂಗೈಯೊಳಗೆ ವಿಶ್ವವನ್ನು ಹಿಡಿದಿಟ್ಟುಕೊಂಡಿದ್ದಾನೆ. ಆದರೆ ಸ್ವಾರ್ಥತೆಯಿಂದ ಬದುಕಿ ತನ್ನ ಕುಟುಂಬವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಅಸಹಾಯಕನಾಗಿದ್ದಾನೆ. ಕುಟುಂಬದ ಆಧಾರ ಸ್ತಂಭಗಳಂತಿರುವ ತಂದೆ ತಾಯಿಯರನ್ನು ಹೊರಹಾಕಿ ಇಲ್ಲವೇ ತಾನೆ ಹೊರಹೋಗಿ ಬದುಕುತ್ತಿದ್ದಾನೆ. ಇದರ ಮಧ್ಯೆ ತಂದೆ ತಾಯಿಯರನ್ನು ಶ್ರವಣಕುಮಾರನ ಪಿತೃಭಕ್ತಿಯಂತೆ ಪ್ರೀತಿ ವಾತ್ಸಲ್ಯದಿಂದ ಸಲುಹುತ್ತಿರುವವರು ಕಾಣಸಿಗುತ್ತಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅಷ್ಟಕ್ಕೂ ತಂದೆ ತಾಯಿಯರನ್ನು ಬಿಟ್ಟು ಬದುಕುವ ಧಾವಂತ ಹೇಗೆ ಬರುತ್ತದೆ? … Read more

ದೇವರೆ ಇಲ್ಲ ಎಂದವನ ಬದುಕಿನಲ್ಲಿ ದೇವತೆಯಾಗಿ ಬಂದೆ ನೀ…!: ಸಿದ್ದುಯಾದವ್ ಚಿರಿಬಿ…,

ಪ್ರೀತಿಯ ಪ್ರಿಯಲತೆಯೇ ಯಾಕೋ ಏನೂ ಬರೆಯಲಾಗಿರಲಿಲ್ಲ ತುಂಬಾ ದಿನ. ಇವತ್ತು ಮನಸ್ಸು ಯಾಕೋ ತಂತಾನೆ ಪ್ರಪುಲ್ಲ. ಮಂಜು ಬಿದ್ದ ಗೂಡಿನಲ್ಲಿ ಮುದುರಿ ಮಲಗಿದ ಗುಬ್ಬಿ ಮರಿಯನ್ನು ಸೂರ್ಯ ತಾಕಿ ಎಚ್ಚರಿಸಿದಂತೆ ನನ್ನ ಮುಂಗೈ ಮೇಲೆ ನಿನ್ನ ಬಿಸಿಯುಸಿರು. ನಿನ್ನ ನೆನಪುಗಳನ್ನು ಎದೆಯಂತರಾಳದಿಂದ ಎಕ್ಕಿ ಮನದ ಪುಟದ ಮೇಲೆ ತಂದು ತೋರಿಸುತ್ತಲೆ ಇತ್ತು. ಎರಡು ವಿರಹದ ಕವಿತೆಗಳನ್ನು ಬರೆದರು ಸಮಧಾನವೆನ್ನಿಸಲಿಲ್ಲ. ಈ ಸಂಜೆಯ ಶ್ರಾವಣದ ಝಡಿ ಮಳೆಯು ನಿನ್ನ ನೆನಪುಗಳ ತಂದು ಮನೆಯಂಗಳದಲ್ಲಿ ಎಡೆಬಿಡದೆ ಸುರಿಯುತ್ತಿದೆ. ಯಾಕೊ ಬೇಸರ … Read more