ಪಂಜು ಕಾವ್ಯಧಾರೆ

ದಾನಾ ಮಾಂಝಿ ಮೂಲ : ವಿಶ್ವನಾಥ ಪ್ರಸಾದ ತಿವಾರಿ (ಅಧ್ಯಕ್ಷರು, ಕೇಂದ್ರ ಸಾಹಿತ್ಯ ಅಕಾಡೆಮಿ, ದಿಲ್ಲಿ)  ಬರೀ ದಾನಾ ಮಾಂಝಿಯದಲ್ಲ ಈ ದೈನ್ಯತೆಯ ಕಥೆ..! ಭ್ರಮೆಯಿರಲಿಲ್ಲ ‘ದಾನಾ’ನಿಗೆ ಇರಲಿಲ್ಲ ಯಾರಿಂದಲೂ ಆಸೆ ಇರಲಿಲ್ಲ ಯಾರ ಮೇಲೂ ಸಿಟ್ಟು ಭಾವನೆಗಳಿದ್ದವು, ವೇದನೆಗಳಿದ್ದವು ಸೋಲು ಇತ್ತು ಹಾಗೂ ಮೌನವೂ ದಾನಾ ತನ್ನ ಹೆಂಡತಿ ‘ಅಮಂಗ’ಳ  ಹೆಣವನ್ನು ಚಾಪೆಯಲ್ಲಿ ಸುತ್ತುವಾಗ ಭೂಮಿಯೂ ನಾಚಿ ನೀರು ನೀರಾಗಿ ಭೂಮಿಗಿಳಿದಿತ್ತು ತಲೆತಗ್ಗಿಸಿತ್ತು ಕಲ್ಲೂ ತನ್ನ ಕಲ್ಲೆದೆಯ ಮೇಲೆ ಕಲ್ಲು ಹೊತ್ತುಕೊಂಡಿತ್ತು ಅವಳ ನಿರ್ಜೀವ ದೇಹವನ್ನೆತ್ತಲು … Read more

ಹಿಮಾಲಯವೆಂಬ ಸ್ವರ್ಗ (ಭಾಗ 1): ವೃಂದಾ ಸಂಗಮ್

ದೇಶ ನೋಡು ಅಥವಾ ಕೋಶ ಓದು ಅಂತಾರೆ. ಈಗೆಲ್ಲ ವರ್ಷಕ್ಕೊಂದು ಫಾರಿನ್ ಟ್ರಿಪ್ ಜಸ್ಟ ಕಾಮನ್ ಆಗಿದೆ. ಊರು ಸುತ್ತೋದು ಅಥವಾ ದೇಶ ಸುತ್ತೋದು ತುಂಬಾ ಅನುಭವಗಳನ್ನ ನೀಡುತ್ತವೆ ಅಂತನೇ ಈ ಮಾತು ಹಿರಿಯರು ಹೇಳುವುದು. ಈ ಅನುಭವಗಳನ್ನು ಪಡೆಯುವುದಕ್ಕಾಗಿಯೇ ಈಗಿನ ಕಾಲದವರಿಗಾಗಿ ಟ್ರೆಕ್ಕಿಂಗ್ ರಾಫ್ಟಿಂಗ ಎಲ್ಲಾ ಇವೆ. ಆದರೂ ಕೂಡಾ ಹಿಂದಿನ ಕಾಲದ ಪವಿತ್ರ ಯಾತ್ರೆಗಳೂ ಇನ್ನೂ ಚಾಲ್ತಿಯಲ್ಲಿವೆ. ಅಮರನಾಥ ಯಾತ್ರೆ ಮುಂತಾದವುಗಳಿಗೆ ಎಷ್ಠೋ ದಿನ ಕಾಯಬೇಕಾಗುತ್ತದೆ.  ಕಾಶೀಯಾತ್ರೆ ಎಂದರೆ ನೆನಪಾಗುವುದು, ತ್ರಿವೇಣಿಯವರು ತಮ್ಮ ಕಾಶೀಯಾತ್ರೆ … Read more

ಕಪ್ಪು ಹುಡುಗಿ: ಸುನೀತಾ ಕುಶಾಲನಗರ

     “ಮಡಿಕೇರಿ ಮಂಗಳೂರು ರಾಜ್ಯ ಹೆದ್ದಾರಿಯ ನಡುವೆ ಸಿಗುವ ಸುಳ್ಯದ ಸಮೀಪದ ಕಲ್ಲುಗುಂಡಿ ಎಂಬ ಸಣ್ಣಪೇಟೆಯಿಂದ ಒಂದಿಷ್ಟು ಊರೊಳಗೆ ಹೋದರೆ ಸಿಗುವ ಚೆಂಬು ಎಂಬ ಪುಟ್ಟ ಹಳ್ಳಿಯ ಹೊಸೂರು ಎಂಬಲ್ಲಿ ಕುಳಿತುಕೊಂಡು ಜಗತ್ತಿಗೆ ಪ್ರತಿಕ್ರಿಯಿಸುತ್ತಿರುವ ಶ್ರೀಮತಿ ಸಂಗೀತಾ ರವಿರಾಜ್ ಅವರಿಗೆ ಸಾಹಿತ್ಯವೆಂದರೆ ಒಂದು ರೀತಿಯ ಭರವಸೆ” ಎನ್ನುತ್ತಾರೆ ಬೆನ್ನುಡಿಸುತ್ತಾ ಡಾ|| ಪುರುಷೋತ್ತಮ ಬಿಳಿಮಲೆಯವರು.  ದಿಟ! ಬೆರಗುಗೊಳಿಸಿದ ಕಾಲ  ತಲ್ಲಣಗಳ ರಂಗಲ್ಲಿಯ ಚುಕ್ಕಿ ಉತ್ಸಾಹದ ಮೂಟೆ ಸಕ್ಕರೆಯ ಸಾಲು ಬಿತ್ತುತ್ತಾ ನಡೆಯುವೆನು ಹೆಜ್ಜೆ ಹಾಕಿ ಎಂಬ ಮೆಲುದನಿಯ … Read more

ಪಾಪದ ನಾಗರಿಕನೂ, ಪಾಲಿಟಿಕ್ಸೂ…: ಪ್ರಸಾದ್ ಕೆ.

ಆಗ ನಾನು ನಾಲ್ಕನೇ ಅಥವಾ ಐದನೇ ತರಗತಿಯಲ್ಲಿದ್ದೆ ಅನಿಸುತ್ತೆ.  ಆ ದಿನ ನಮ್ಮ ಶಾಲಾಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಸ್ಥಳೀಯ ರಾಜಕಾರಣಿಯೊಬ್ಬರು ಬಂದಿದ್ದರು. ಉಡುಪಿ ಕ್ಷೇತ್ರದಲ್ಲಿ ತಕ್ಕಮಟ್ಟಿನ ಹೆಸರು ಮಾಡಿದ್ದ ರಾಜಕಾರಣಿ ಅವರು. ಪ್ರಾರ್ಥನೆ, ಉದ್ಘಾಟನೆ ಇತ್ಯಾದಿಗಳನ್ನು ಮುಗಿಸಿ ಅಧ್ಯಕ್ಷೀಯ ಭಾಷಣವು ಶುರುವಾಯಿತು ನೋಡಿ. ಅಚ್ಚರಿಯೆಂದರೆ ಆ ವಯಸ್ಸಿನಲ್ಲೂ ನಾನು ಭಾಷಣಗಳನ್ನು ಆಸಕ್ತಿಯಿಂದ ಕೇಳುತ್ತಿದ್ದೆ. ತೀರಾ ನೀರಸವಾಗಿದ್ದ ಉದಾಹರಣೆಗಳನ್ನು ಬಿಟ್ಟರೆ ಸಾಮಾನ್ಯವಾಗಿ ಭಾಷಣಗಳು ನನಗೆ ಬೋರುಹುಟ್ಟಿಸುತ್ತಿರಲಿಲ್ಲ. ಹೀಗೆ ವೇದಿಕೆಯಲ್ಲಿ ಮಾತನಾಡುತ್ತಲೇ “ನಾನು ಹಲವಾರು ಶಾಲೆಗಳಿಗೆ ವಿವಿಧ ಕಾರ್ಯಕ್ರಮಗಳಿಗೆಂದು ಹೋಗುತ್ತಿರುತ್ತೇನೆ. … Read more

ಸ್ತ್ರೀತ್ವದ ನೆಲೆ ಬೆಲೆ: ನಾಗರೇಖಾ ಗಾಂವಕರ

ಗಂಡು ವಿಸ್ತಾರವನ್ನು ಆಪೇಕ್ಷಿಸಿದರೆ ಹೆಣ್ಣು ಆಳವನ್ನು ಬಯಸುತ್ತಾಳೆ ಎಂಬ ಮಾತಿದೆ. ಹೌದಲ್ಲ. ಗಂಡು ಎಷ್ಟು ಸಲೀಸಾಗಿ ತನ್ನ ಸ್ವಗತವನ್ನು ತೋಡಿಕೊಂಡು ಬಿಡುತ್ತಾನೆ. ವಿಸ್ತಾರದ ಆಕಾಂಕ್ಷೆಯಲ್ಲಿ ಅತೃಪ್ತನಾಗುತ್ತ ಹೋಗುವುದು ಆತನ ಜಾಯಮಾನವೇ?ಅದು ಆತನ ದೈಹಿಕ ಬಯಕೆ ಮಾತ್ರವೇ ಅಥವಾ ಮಾನಸಿಕ ಬೌದ್ಧಿಕ ಚಿಂತನೆಗಳಿಗೂ ಅನ್ವಯಿಸುತ್ತದೆಯೇ ಎಂದೆಲ್ಲಾ ಚಿಂತಿಸಿದರೆ ಮೂಡುವ ಉತ್ತರ ಸ್ಪಷ್ಟ. ಹೆಣ್ಣಿನ ಸಂವೇದನೆಗಳು ತಳಮೂಲದಲ್ಲಿ ಪಲ್ಲವಿಸುತ್ತವೆ. ಆಕೆ ವಿಸ್ತಾರಕ್ಕಿಂತ ವಿಶಾಲಕ್ಕಿಂತ ತನ್ನ ನೆಲೆಯಲ್ಲಿ ನೆಲದಲ್ಲಿ  ಆಳಕ್ಕಿಳಿದು ಬೇರೂರಲು ಬಯಸುತ್ತಾಳೆ. ಗಂಡಿನ ವಿಶಾಲ ಪ್ರಪಂಚದೆದುರು ಆಕೆ ಸಂಕುಚಿತವೆನಿಸಿದರೂ ಸ್ತ್ರೀ … Read more

 ಕಾಯಕದ ಅನಿವಾರ್ಯತೆ ಮತ್ತು ಮಹತ್ವ: ಕೆ ಟಿ ಸೋಮಶೇಖರ ಹೊಳಲ್ಕೆರೆ.

        ಕಾಯಕ ಎಂದರೆ ಕೆಲಸ. ಪ್ರತಿಯೊಬ್ಬರೂ ಕೆಲಸ ಮಾಡಬೇಕಿರುವುದು ಅನಿವಾರ್ಯ. ಬ್ರಹ್ಮಾಂಡದಲ್ಲಿರುವ ಸಕಲ ಕಾಯಗಳೂ ಚಲಿಸುತ್ತಾ ಸದಾ ಕೆಲಸದಲ್ಲಿ ನಿರತವಾಗಿವೆ. ಗ್ರಹ, ಉಪಗ್ರಹ, ನಕ್ಷತ್ರ ….. ಆಕಾಶ ಕಾಯಗಳು ಭ್ರಮಿಸುತ್ತಾ, ಪರಿಭ್ರಮಿಸುತ್ತಾ ಕಾರ್ಯನಿರ್ವಹಸುತ್ತಿವೆ. ಭೂಮಿ ಒಂದು ದಿನ ಭ್ರಮಿಸದಿದ್ದರೆ ಹಗಲು – ರಾತ್ರಿಗಳು ಆಗುವುದಿಲ್ಲ. ಪರಿಭ್ರಮಿಸದಿದ್ದರೆ ಋತುಮಾನಗಳು ಸಂಭವಿಸುವುದಿಲ್ಲ. ಆಗ ಬದುಕಾಗುವುದು ಅಯೋಮಯ! ನಮಗಷ್ಟೇ ಅಲ್ಲದೆ ಭೂಮಿಗೂ ಬರುವುದು ಆಪತ್ತು! ಭೂಮಿ ನಿತ್ಯ ಕಾಯಕದಲ್ಲಿ ತೊಡಗಿರುವುದರಿಂದ ಎಂದಿನಂತೆ ಬದುಕು ಸಾಗುವುದು.     … Read more

ಅಮ್ಮಾ ಕ್ಷಮಿಸು: ನಂದಾ ಹೆಗಡೆ

ದಿನಪತ್ರಿಕೆಯೊಂದಕ್ಕೆ ನನ್ನ ಅತ್ತೆಯವರ ಅಡಿಗೆ ರೆಸಿಪಿಯನ್ನ ಕಳುಹಿಸಿದ್ದೆ. ಆದರೆ ಈಗ ಆರು ತಿಂಗಳಿನಿಂದಲೂ ಪ್ರತೀ ವಾರ ಕಾಯುತ್ತಲೇ ಇದ್ದೇನೆ. ಆದರೆ ಅದು ಪ್ರಕಟವಾಗಲೇ ಇಲ್ಲ. 83 ವರ್ಷದ ನನ್ನ ಅತ್ತೆಯವರ ಜೀವನೋತ್ಸಾಹದ ಬಗ್ಗೆ ಚಿಕ್ಕ ಮಾಹಿತಿಯನ್ನೂ ಕೂಡ ಬರೆದು ಒಪ್ಪವಾಗಿಯೇ ಕಳುಹಿಸಿದ್ದೆ ಅಂದುಕೊಂಡಿದ್ದೆ. ಆದರೂ ಯಾಕೋ ಪ್ರಕಟವಾಗಲಿಲ್ಲ. . . . . . . . . ಅವರ ಮಾನದಂಡವೇನೋ. . . . . . . . ಅಂದುಕೊಳ್ಳುತ್ತಿರುವ ಹಾಗೇ ನನ್ನ ಉದ್ಯೋಗದ … Read more

ಈಗ ಹಂಪಿಯೆಂದರೇ ?: ಬಿ. ಎಲ್. ಆನಂದ ಆರ್ಯ

ಹಂಪಿಯೆಂದು ಹೆಸರು ಕೇಳಿದ ಕೂಡಲೆ ನೆನಪಾಗೋದು ;   ಅಲ್ಲಿನ ಶಿಲ್ಪ-ಕೆತ್ತನೆಗಳು, ಬೆಟ್ಟ-ಗುಡ್ಡಗಳು, ದೇವಾಲಯಗಳು. ಇತ್ತೀಚಿಗೆ ನಾವು ಕಾಣುವ ಹಂಪಿಯ ಪರಿಚಯಿಸಲು ಪ್ರಯತ್ನಿಸುವೆ.  ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹೀಗಾಗಿ ಸುಮಾರು 30 ಚದರ ಕೀ. ಮೀ. ನಷ್ಟು ಈಗಲೂ ವ್ಯಾಪಕವಾದ ಗುಡಿಗುಂಡಾರ, ಶಿಲ್ಪಕೆತ್ತನೆ, ಪುಷ್ಕರಣಿ, ಕೋಟೆಗಳ ಮಾರ್ದನಿಯಿದೆ. ಹಾಗೆಯೇ ಕನ್ನಡದಷ್ಟೆ ಇಂಗ್ಲೀಷ್ ಮಾತಾಡುವ ಹಾಗೂ ಪಾಶ್ಚತ್ಯ, ಭಾರತೀಯ ಸಂಸ್ಕೃತಿಗಳ ಮಹಾಸಂಗಮತಾಣವಾಗಿ ಮಾರ್ಪಟ್ಟಿದೆ. ಪ್ರವಾಸಿಗರ ಪ್ರಭಾವದಿಂದ ಅಲ್ಲಿನ ಜನರು ಕೃಷಿಯ ಹೊರತುಪಡಿಸಿ ವ್ಯಾಪಾರವಹಿವಾಟು ನಡೆಸಿ ನಿಶ್ಚಿಂತರಾಗಿ ಹೊಟ್ಟೆ … Read more

ನೆನಪಿನ ಪಯಣ: ಬಾಗ – 2: ಪಾರ್ಥಸಾರಥಿ ಎನ್

ಇಲ್ಲಿಯವರೆಗೆ ನೆನಪಿನ ಪಯಣದ ಪ್ರಯೋಗ ಪ್ರಾರಂಭ:  ಆನಂದ ಹೇಳಿದಂತೆ ರೂಮಿನ ಮಂಚದಲ್ಲಿ ಜ್ಯೋತಿ ಮಲಗಿದಳು, ತಂಪಾಗಿರಲೆಂದೆ ಏಸಿ ಆನ್ ಮಾಡಿದೆವು. ಆನಂದನ ಪೀಯುಸಿ ಓದುತ್ತಿದ್ದ ಮಗ ಶಶಾಂಕ್ ಮನೆಯಲ್ಲಿರಲಿಲ್ಲ ಅವನ ಸ್ನೇಹಿತರ ಜೊತೆ ಯಾವುದೋ ಟೂರ್ ಅಂತ ಹೋಗಿದ್ದ. ಹಾಗಾಗಿ ನಮ್ಮಗಳದೆ ಸಾಮ್ರಾಜ್ಯ.  ಶ್ರೀನಿವಾಸಮೂರ್ತಿಗಳು ಮಾತ್ರ ಈಗಲೂ ಆತಂಕದಲ್ಲಿದ್ದರು ರೂಮಿನಲ್ಲಿ ಒಂದು ದೀಪ ಬಿಟ್ಟು ಎಲ್ಲ ದೀಪವನ್ನು ಆನಂದ ಆರಿಸಿದ. ಜ್ಯೋತಿ ಮಾತ್ರ ನಗುತ್ತಿದ್ದಳು. ಅವಳಿಗೆ ಎಂತದೊ ಮಕ್ಕಳ ಆಟದಂತೆ ತೋರುತ್ತಿತ್ತು ಅನ್ನಿಸುತ್ತೆ. ಜ್ಯೋತಿ ಆರಾಮವಾಗಿ ಅನ್ನುವಂತೆ … Read more