ಪಂಜು ಕಾವ್ಯಧಾರೆ

ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ ಬಂಧಿಯಾಗಲು ಕಾಯುತಿರುವೆ ಚಿನ್ನ ನನ್ನ ಚಿನ್ನ   ಕಣ್ಣಂಚಿನ ನೋಟದಲಿ ಸೆರೆ ಹಿಡಿರುವೆ ನನ್ನ ಮನ ಮೋಹಿಸುವ ನಿನ್ನ ಪಿಸು ಮಾತುಗಳೆ  ಚೆನ್ನ ನೀ ತಿರುಗೆ ನೋಡುವ ಆ ನೋಟ ಬಹು ರೋಮಾಂಚನ ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ ಸದಾ ನಿನ್ನ ನೋಡುವ ಆಸೆ ಮುಚ್ಚದೆ ಕಣ್ಣ ರೆಪ್ಪೆಯನ್ನ ಸವಿಯಲು ಕಾತುರ ನಿನ್ನ ತುಟಿ ಅಂಚಿನ ಸಿಹಿ ಜೇನನ್ನ ಸೆರೆ ಹಿಡಿದು ಬಂಧಿಸು ನಿನ್ನ ಮನಸಲಿ ನನ್ನ ಬಂಧಿಯಾಗಲು ಕಾಯುತಿರುವೆ ಚಿನ್ನ … Read more

ಹನ್ನೊಂದು ದಿನಗಳ ವನವಾಸ (ಭಾಗ ೧): ಪ್ರಸಾದ್ ಕೆ.

ಅವಳು ಮೆಲ್ಲನೆ ತನ್ನ ಕಣ್ಣುಗಳನ್ನು ತೆರೆಯಲು ಪ್ರಯತ್ನಿಸಿದಳು. ಕಣ್ಣೆಲ್ಲಾ ಮಂಜು. ಎದ್ದೇಳಲು ಎಷ್ಟು ಪ್ರಯತ್ನಿಸಿದರೂ ಶಕ್ತಿಯೇ ಸಾಲುತ್ತಿಲ್ಲ. ಒದ್ದೆ ನೆಲವು ತನ್ನ ದೇಹದ ಶಕ್ತಿಯನ್ನೆಲ್ಲಾ ಹೀರಿ ಕಚ್ಚಿ ಹಿಡಿದಿರುವಂತೆ.  ಹೀಗೆ ಅದೆಷ್ಟು ಬಾರಿ ಪ್ರಯತ್ನಿಸಿದಳೋ ಏನೋ ಆ ಹುಡುಗಿ. ಕೊನೆಗೂ ಹಲವು ಘಂಟೆಗಳ ನಂತರ ಪ್ರಜ್ಞೆಯು ಮರಳಿ ಬಂದಾಗ ತಾನು ದಪ್ಪನೆಯ ಕುಚರ್ಿಯಂತಿರುವ ಆಕೃತಿಯ ಕೆಳಗೆ ಮುದುಡಿ ಮಲಗಿರುವುದು ಅವಳಿಗೆ ಗೊತ್ತಾಗಿದೆ. ಮಲಗಿದ ಭಂಗಿಯಲ್ಲೇ ಪ್ರಯಾಸದಿಂದ ಕಣ್ಣನ್ನಾಡಿಸಿದರೆ ಸುತ್ತಲೂ ಕಾಡೇ ಕಾಡು. ಪ್ರಯಾಸದಿಂದ ತಲೆಯೆತ್ತಿ ನೋಡಿದರೆ ತಲೆಯ … Read more

ನನ್ನವಳು: ಗಿರಿಜಾ ಜ್ಞಾನಸುಂದರ್

   ಎಲ್ಲೋ ತುಂಬಾ ಸದ್ದು ಕೇಳಿಸುತ್ತಿರುವಂತೆ ಅನುಭವ. ಕಣ್ಣು ತೆರೆಯಲು ಆಗುತ್ತಲೇ ಇಲ್ಲ. ರೆಪ್ಪೆಗಳು ತುಂಬಾ ಭಾರ. ತನ್ನ ಮೈ ತನ್ನ ಮತ್ತೆ ಕೇಳುತ್ತಿಲ್ಲ ಅನ್ನಿಸುತ್ತಿದೆ. ತನ್ನಷ್ಟಕ್ಕೆ ತಾನು ಅತಿ ನೋವು ಅನುಭವಿಸುತ್ತಿದೆ. ಸುತ್ತಲೂ ಮಷೀನ್ ಗಳ ಶಬ್ದ. ತನಗೇನಾಗುತ್ತಿದೆ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತಿದೆ. ಸ್ವಲ್ಪ ಸಮಯ ತೆಗೆದುಕೊಂಡ ಮೇಲೆ ತಿಳಿಯುತ್ತಿದೆ ನಾನು ಆಸ್ಪತ್ರೆಯಾ ಐ ಸೀ ಯು ವಾರ್ಡ್ನಲ್ಲಿದ್ದೀನಿ ಎಂದು. ಎದೆನೋವೆಂದು ಹೇಳಿದ್ದೊಂದೇ ನೆನಪು. ಆಮೇಲೇನಾಯಿತೋ ಗೊತ್ತಿಲ್ಲ. ಆಸ್ಪತ್ರೆ ನನ್ನನ್ನು ಆಲಂಗಿಸಿದೆ. ತನ್ನ ಅರೋಗ್ಯ ಹದಗೆಟ್ಟಿದೆ … Read more

ಶಶಿ (ಕೊನೆಯ ಭಾಗ): ಗುರುರಾಜ ಕೊಡ್ಕಣಿ

ಇಲ್ಲಿಯವರೆಗೆ ಮರುದಿನ ಬೆಂಗಳೂರಿಗೆ ತೆರಳಿದ ನನಗೆ ಒಂದು ಗಳಿಗೆಯೂ ಪುರುಸೊತ್ತು ಇಲ್ಲದಂತಾಗಿತ್ತು. ಕಂಪನಿಯ ವಾರ್ಷಿಕ ಸಮ್ಮೇಳನದ ಸಮಾರಂಭದಲ್ಲಿ ನನಗೆ ಬೆಸ್ಟ್ ರೆಪ್ರಸೆಂಟಿಟಿವ್ ಆಫ್ ದಿ ಇಯರ್’ ಪ್ರಶಸ್ತಿ ಬಂದಾಗ ನನ್ನ ಸಂತೋಷ ಹೇಳತೀರದು. ಕಂಪನಿಗೆ ಸೇರಿದ ಎರಡೇ ವರ್ಷಗಳಲ್ಲಿ ಇಂಥದ್ದೊಂದು ಪ್ರಶಸ್ತಿ ಪಡೆದುಕೊಳ್ಳುವುದು ನಿಜಕ್ಕೂ ಹೆಮ್ಮೆಯ ಸಂಗತಿಯೇ ಆಗಿತ್ತು. ಪ್ರಶಸ್ತಿ ಫಲಕ , ಪ್ರಶಸ್ತಿಪತ್ರ ಸ್ವೀಕರಿಸಿ ಕಂಪನಿಯ ರೀಜನಲ್ ಮ್ಯಾನೇಜರಿನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವಷ್ಟರಲ್ಲಿ ರಿಂಗಣಿಸಿದ ಫೋನಿನ ತೆರೆಯ ಮೇಲೆ ’ಅಮ್ಮ’ಎಂದು ತೋರಿಸುತ್ತಿತ್ತು. ತಕ್ಷಣ ಕರೆಯನ್ನು ಕಟ್ ಮಾಡಿ … Read more

ವ್ಯಕ್ತಿ – ದೇಶಭಕ್ತಿ- ಭೂಶಕ್ತಿ: ಅಖಿಲೇಶ್ ಚಿಪ್ಪಳಿ

ಪಶ್ಚಿಮಘಟ್ಟಗಳ ತಪ್ಪಲಿನಲ್ಲಿಂದ ಹಿಡಿದು ಪ್ರಪಂಚದ ಬಹುತೇಕ ಎಲ್ಲಾ ಭಾಗಗಳಲ್ಲೂ ಅದೆಷ್ಟೋ ಪ್ರಭೇದಗಳು ನಾಶವಾಗಿವೆ. ಋತುಮಾನಗಳ ಬದಲಾವಣೆಯಿಂದಾಗಿ ಹೊಸ-ಹೊಸ ಪ್ರಭೇದಗಳು ಸೃಷ್ಟಿಯೂ ಆಗುತ್ತಿವೆ. ಸ್ಟೀಫನ್ ಹಾಕಿಂಗ್ಸ್‍ನಂತಹ ಮೇಧಾವಿಗಳು ಮಾನವನ ಕಾರಣಕ್ಕಾಗಿ ಬದಲಾವಣೆಯಾಗುತ್ತಿರುವ ಹವಾಗುಣದಿಂದ ಮನುಷ್ಯಕುಲಕ್ಕೇ ಆಪತ್ತು ಬಂದಿದೆ. ಇನ್ನೊಂದು ಸಾವಿರ ವರ್ಷದ ಒಳಗೆ ನಮ್ಮಗಳ ವಾಸಕ್ಕೆ ಬೇರೆ ಗ್ರಹವನ್ನು ಹುಡುಕಿಕೊಳ್ಳದಿದ್ದರೆ ನಮ್ಮ ಅವಸಾನ ಖಂಡಿತ ಎನ್ನುವ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕುವ ವಿಜ್ಞಾನವನ್ನು ಕಂಡುಕೊಳ್ಳುವ ಹಂತದಲ್ಲಿ ನಮ್ಮ ವೈಜ್ಞಾನಿಕ ಕಾರ್ಯಕ್ಷೇತ್ರ ತ್ವರಿತವಾಗಿ ಬದಲಾಗಬೇಕಿದೆ.  ವ್ಯಕ್ತಿಗಳನೇಕರು ಸೇರಿ … Read more

ಸಹನೆಯೇ ಸ್ತ್ರಿ ಅರಿವು: ನಾಗರೇಖಾ ಗಾಂವಕರ

“ಅಲ್ಲೊಂದು ಕಾಗೆಗಳ ಆಕ್ರಮಣಕ್ಕೆ ಗುರಿಯಾದ ಸಾಯುತ್ತ ಬಿದ್ದಿರುವ ಹದ್ದು. ಸೀತಾ ಅದನ್ನು ಉಳಿಸುವ ಪ್ರಯತ್ನ ಮಾಡುತ್ತಾಳೆ ಆದರೆ ಉಪಯೋಗವಾಗುವುದಿಲ್ಲ. ಗಾಯಗೊಂಡು ಜೀವಕ್ಕಾಗಿ ಅಸಹಾಯಕತೆಯಲ್ಲೆ ಗುದ್ದಾಡುತ್ತಿರುವ ಆ ಹದ್ದು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ ಆದರೆ ಸಾಧ್ಯವಾಗದೇ ಕಾಗೆಗಳಿಗೆ ಆಹಾರ ವಾಗುತ್ತದೆ. ”ಈ ಸ್ಥಿತಿಯೇ ಸೀತಾಳ ಮನಸ್ಥಿತಿ ಕೂಡ. ಅನಿತಾ ದೇಸಾಯಿಯ shall we go this summer? ಕಾದಂಬರಿಯ ಕೇಂದ್ರ ಪಾತ್ರ ಸೀತಾ. ಒತ್ತಡದ ದಬ್ಬಾಳಿಕೆಯ ಬದುಕಿನಿಂದ ಆಕೆ ಪಲಾಯನ ಮಾಡ ಬಯಸುತ್ತಾಳೆ ಹದ್ದಿನಂತೆ. ಆದರೆ ಸಂಸಾರದ ಬಂಧನದಲ್ಲಿ … Read more

ಭವಿಷ್ಯದ ಭರವಸೆಯ ಕಥೆಗಾರ ತಿರುಪತಿ ಭಂಗಿ: ಮಹಾದೇವ ಎಸ್, ಪಾಟೀಲ

  ಬಾಗಲಕೋಟೆ ನಗರದಗೌರಿ ಪ್ರಕಾಶನದಿಂದ ಲೋಕಾರ್ಪಣೆಗೊಂಡ"ಕೈರೊಟ್ಟಿ"ಕಥಾಸಂಕಲನ,  ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆ ಪ್ರಕಾರಸಫಲ ಸಮೃದ್ಧತೆಯಿಂದ, ಉಳಿದೆಲ್ಲ ಪ್ರಕಾರಗಳನ್ನು ಮೀರಿ ನಿಂತು ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕುತ್ತಿದೆ ಎನ್ನುವ: ಶ್ರೀಇಂದ್ರಕುಮಾರ ಎಚ್,ಬಿ ದಾವಣಗೆರೆ ರವರು "ಕೈರೊಟ್ಟಿ" ಕಥಾಸಂಕಲನಕ್ಕೆ ಮುನ್ನುಡಿ  ಬರೆಯುತ್ತಾ ಹೇಳಿರುವಮಾತು' ತಿರುಪತಿ ಭಂಗಿಯಂತ ಇನ್ನು ಅನೇಕ ಹೋಸ ಕಥೆಗಾರರಿಗೆ ಬೆನ್ತಟ್ಟಿದಂತಾಗಿದೆ'. ಬಾಗಲಕೋಟೆ ಜಿಲ್ಲೆಯ ದೇವನಾಳದ ತಿರುಪತಿ ಭಂಗಿಯವರು ರ್ಬಾಲ್ಯದಲ್ಲಿಯೇಹೆತ್ತವರ ಕಳೆದುಕೊಂಡುಅಜ್ಜ- ಅಜ್ಜಿಯರ ಆಶ್ರಯದಲ್ಲಿ ಬೆಳೆಯುವ ಅನಿವಾರ್ಯದೊಂದಿಗೆ, ಕೂಲಿ- ನಾಲಿ ಮಾಡುತ್ತಲೇ ಓದುವ ಮೂಲಕ; ಅಜ್ಜ- ಅಜ್ಜಿಯರನ್ನು ಕಳೆದುಕೊಂಡು, ತಂಗಿಯನ್ನು … Read more

ಯುಗಾದಿ ಹೊಸ ವರ್ಷಾರಂಭವೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಭಾರತದ ಕೆಲವು ರಾಜ್ಯಗಳಲ್ಲಿ ಹೊಸ ವರ್ಷವನ್ನು ಯುಗಾದಿ ಅಥವಾ ಉಗಾದಿ ಎಂದು ಆಚರಿಸುತ್ತಾರೆ. ' ಯುಗ ' ಎಂದರೆ ಒಂದು ನಿಗಧಿತ ಕಾಲಾವಧಿ. ವರ್ಷ ಎಂದೂ ಅರ್ಥವಿದೆ. ' ಆದಿ ' ಎಂದರೆ ಆರಂಭ. ಯುಗಾದಿ ಎಂದರೆ ವರ್ಷದ ಆರಂಭ. ದಕ್ಷಿಣ ಭಾರತೀಯರಿಗೆ ಚೈತ್ರ ಮಾಸದ ಆರಂಭದ ದಿನವೇ ವರ್ಷದ ಆರಂಭ. ಅಂದು ಯುಗಾದಿಯನ್ನು ಕರ್ನಾಟಕ, ಆಂದ್ರಪ್ರದೇಶದಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿಪಾಡ್ಯ ಎಂದು ಆಚರಿಸುತ್ತಾರೆ. ಯಾವುದೇ ಸಂತೋಷ ಸಂಭ್ರಮಾಚರಣೆಗಳು ಬದುಕಿಗೆ ನವಚೇತನವನ್ನು ನೀಡುತ್ತವೆ. ಆದ್ದರಿಂದಾಗಿ ಅಂತಹ ಅವಕಾಶಗಳನ್ನು … Read more