ಪಂಜು ಕಾವ್ಯಧಾರೆ

ಶಾಂತಿಗೀತೆ ಮುಗಿಲು.. ಕೆಂಡಕಾರುವ ಅಗ್ನಿಪಾತ್ರೆ ನೆಲ.. ಕಿಚ್ಚು ಎಬ್ಬಿಸುವ ಒತ್ತಲು ಗಾಳಿ.. ಕೊಳ್ಳಿಹೊತ್ತಿಸುವ ಕಟುಕ ಮಳೆ.. ಬಾರದೆ ಕಾಡುವ ಇನಿಯ ನಾನು..  ನೆಲವಾಗಬೇಕು ಮಲೆನಾಡ ಕಾಡಂತೆ ಮುಗಿಲಾಗಬೇಕು ಹುಣ್ಣಿಮೆ ಇರುಳಂತೆ ನಾನು.. ಗಾಳಿಯಾಗಬೇಕು.. ಬೆಂದೊಡಲ ತಣಿಸಬೇಕು ಮಳೆಯಾಗಬೇಕು.. ನದಿಯಾಗಿ ಹರಿಯಬೇಕು ನಾನು.. ಹಕ್ಕಿಯಾಗಬೇಕು.. ಗಡಿಗಳಾಚೆ ಹಾರಬೇಕು ಮದ್ದುಗುಂಡು ಬರುವ ದಾರಿಹಾಯ್ದು ಆಚೆ  ಹೋಗಿ ಶಾಂತಿ ಸಾರಿ ಬರಬೇಕು ಸರಹದ್ದಿನಗುಂಟ ಮುಳ್ಳಿನ ಬೇಲಿ ನಿಬಿಡ ಸರಳುಗಳ ಪಂಜರ ಹೇಗೆ ಹಾರಲಿ? ಬೇಡ.. ಬೇಡ.. ಈ ಜೀವಾವಧಿ ಶಿಕ್ಷೆ.. ನೀಡಬೇಡ.. … Read more

ಕಲ್ಲಂಗಡಿ ಹಣ್ಣು!: ಎಸ್.ಜಿ.ಶಿವಶಂಕರ್

ಅನಂತಯ್ಯ ಬಾಗಿಲು ತೆಗೆದು ಮನೆಯೊಳಗೆ ಕಾಲಿಟ್ಟಾಗ ಮೌನ ಸ್ವಾಗತಿಸಿತು. ಅನಂತಯ್ಯನವರಿಗೆ ಹಿತವೆನಿಸಲಿಲ್ಲ. ಒಂದು ತಿಂಗಳು ಜನರಿಂದ ಗಿಜಿಗುಟ್ಟುತ್ತಿದ್ದ ಮನೆ ಖಾಲಿಖಾಲಿಯಾಗಿ ಕಂಡಿತು. ಇಪ್ಪತ್ತೈದು ವರ್ಷಗಳಿಂದ ವಾಸಿಸುತ್ತಿದ್ದ ಮನೆಯನ್ನು ಮೊದಲ ಬಾರಿಗೆ ನೋಡುತ್ತಿರುವವರಂತೆ ಅನಂತಯ್ಯ ಮನೆಯನ್ನು ನೋಡಿದರು. ಮನೆಯಲ್ಲಿನ ವಸ್ತುಗಳನ್ನು ನೋಡುವಾಗ ಅದನ್ನು ಉಪಯೋಗಿಸಿದವರ ಚಿತ್ರ ಮನಸ್ಸಿಗೆ ಬರುತ್ತಿತ್ತು. ಅನಂತಯ್ಯ  ಡ್ರಾಯಿಂಗ್ ರೂಮಿಗೆ ಬಂದರು. ಅಸ್ಥವ್ಯಸ್ಥವಾಗಿದ್ದ ದಿವಾನದ ಹಾಸುಗಳು ಕಂಡವು. ಮೊಮ್ಮಕ್ಕಳು ಅದರ ಮೇಲೆ ಹತ್ತಿ, ಇಳಿದು, ಕುಣಿದಾಡಿದ್ದು ಕಣ್ಮುಂದೆ ಬಂತು. ವರಾಂಡಕ್ಕೆ ಬಂದರೆ, ಅದರ ತುಂಬ ತುಂಬಿದ್ದ … Read more

ಮುಳುಗುತ್ತಿರುವ ಕುತುಬ್‍ದಿಯಾ!: ಅಖಿಲೇಶ್ ಚಿಪ್ಪಳಿ

ಜರ್ಮನಿಯ ಹಿಟ್ಲರ್ ಹೆಸರು ಯಾರಿಗೆ ಗೊತ್ತಿಲ್ಲ? ಖೈದಿಗಳನ್ನು ಕೊಲ್ಲಲು ವಿಷದ ಅನಿಲದ ಕೊಠಡಿಯನ್ನೇ ನಿರ್ಮಿಸಿದ್ದ ಕುಖ್ಯಾತಿ ಒಳಗಾಗಿದ್ದವ. ಹಿಂಸೆಯ ಪ್ರತಿರೂಪ! ಲಕ್ಷಾಂತರ ಯಹೂದಿಗಳು ಈ ಸರ್ವಾಧಿಕಾರಿಯ ಹಿಂಸೆಗೆ, ಕ್ರೂರತ್ವಕ್ಕೆ ಬಲಿಯಾದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಇತಿಹಾಸವೆಂದರೆ ಒಳಿತು-ಕೆಡುಕುಗಳ ಸಮಗ್ರ ಮಾಹಿತಿ. ಇದರಲ್ಲಿ ಒಳಿತನ್ನೂ ನೋಡಬಹುದು, ಕೆಡುಕನ್ನು ಕಾಣಬಹುದು. ಪ್ರಸ್ತುತ ವಿದ್ಯಮಾನಗಳು ಮುಂದೊಂದು ದಿನ ಇತಿಹಾಸದ ಪುಟದಲ್ಲಿ ಸೇರುತ್ತವೆ. ಆಧುನಿಕ ಅಭಿವೃದ್ಧಿ, ಐಷಾರಾಮಿತನಗಳು ಇಡೀ ವಿಶ್ವವನ್ನೇ ಹಿಟ್ಲರ್‍ನ ವಿಷಕಾರಕ ಕೊಠಡಿಯನ್ನಾಗಿ ಮಾಡುತ್ತಿವೆ. ಇದರಲ್ಲಿ ಮೊದಲಿಗೆ ಬಲಿಯಾಗುವವರು ಮಾತ್ರ ಬಡದೇಶದ … Read more

“ಅಭಿಮಾನಿ ದೇವರುಗಳ ಲೀಲೆಗಳು”: ಪ್ರಸಾದ್ ಕೆ.

“ಭಯ್ಯಾ… ನನ್ನ ಭಾಯಿಯ ಸಿನೆಮಾ ಬರುತ್ತಿದೆ'', ಎಂದು ಕುಣಿಯುತ್ತಾ ಹೇಳಿದ್ದ ಆತ.  ಹೀಗೆ ಉತ್ಸಾಹದಿಂದ ನನ್ನ ಜೊತೆ ಮಾತನಾಡುತ್ತಿದ್ದಿದ್ದು ದೆಹಲಿಯ ಮಯೂರ್ ವಿಹಾರ್ ನಿವಾಸಿಯೂ, ನನ್ನ ತಮ್ಮನಂತಿದ್ದ ಮಿತ್ರನೂ ಆಗಿದ್ದ ಸೋನು. ಇಲ್ಲಿ ತನ್ನ “ಭಾಯಿ'' ಎಂದು ಭುಜಕುಣಿಸುತ್ತಾ ಸೋನು ಕರೆಯುತ್ತಿದ್ದಿದ್ದು ನಟ ರಣಬೀರ್ ಕಪೂರ್ ನನ್ನು. ಸೋನು ರಣಬೀರ್ ಕಪೂರ್ ನ ಡೈ-ಹಾರ್ಡ್ ಅಭಿಮಾನಿ. ಅತ್ತ ನಟ ರಣಬೀರ್ ಕಪೂರ್ ಕೆಮ್ಮಿದರೆ ಇತ್ತ ಎದೆ ನೋವಾಗುತ್ತಿದ್ದಿದ್ದು ಸೋನುವಿಗೆ. ನಟ ರಣಬೀರ್ ಕಪೂರ್ ನ ನೆಲಕಚ್ಚಿದ ಚಿತ್ರಗಳ … Read more

ಶಶಿ (ಭಾಗ 1): ಗುರುರಾಜ ಕೊಡ್ಕಣಿ

                                                     ’ಟಿಟಿಟಿಟೀಟ್, ಟಿಟಿಟಿಟೀಟ್’ಎನ್ನುವ ಅಲಾರಾಮಿನ ಅತ್ಯಂತ ಕರ್ಕಶ ಶಬ್ದ ನನ್ನ ನಿದ್ದೆಯನ್ನು ಹಾಳುಗೆಡವಿತ್ತು. ಮಲಗಿದ್ದಲ್ಲಿಂದಲೇ ಮಂಚದ ಪಕ್ಕದ ಮೇಜಿನ ಮೇಲಿದ್ದ ಅಲಾರಾಮಿನ ತಲೆಗೊಂದು ಮೊಟಕಿ ಅದರ ಬಾಯಿ ಮುಚ್ಚಿಸಿ ಮತ್ತೆ ಮಲಗಲು ಪ್ರಯತ್ನಿಸಿದೇನಾದರೂ ನಿದ್ರೆ ಬರಲಿಲ್ಲ. ಎದ್ದು ಕುಳಿತರೆ ತಲೆಯೊಳಗೊಂದು ಸಣ್ಣ ಜೋಂಪು. … Read more

ಸಮಸ್ಯೆಗಳಿಗೆಲ್ಲಾ ಆತ್ಮಹತ್ಯೆಯೊಂದೇ ಪರಿಹಾರವೇ ?: ಕೆ ಟಿ ಸೋಮಶೇಖರ, ಹೊಳಲ್ಕೆರೆ.

       ಸಮಸ್ಯೆಗಳು ಇಲ್ಲದ ಮನೆ, ಕುಟುಂಬ, ಜೀವನ ಇರಲು ಸಾಧ್ಯವಿಲ್ಲ! ಇದನ್ನು ಅರಿಯದೆ ಸಮಸ್ಯೆಗಳಿಗೆಲ್ಲಾ ಆತ್ಮಹತ್ಯೆಯೇ ಪರಿಹಾರ ಎಂದು ಜಗತ್ತು ಭಾವಿಸಿದಂತಿದೆ. ಪ್ರಯುಕ್ತ ಆತ್ಮಹತ್ಯೆ ಮಾಡಿಕೊಳ್ಳಲು ಜಗತ್ತು ತುದಿಗಾಲಲಿ ನಿಂತಂತೆ ತೋರುತ್ತಿದೆ. ತಂದೆಯೋ ತಾಯಿಯೋ ಶಿಕ್ಷಕರೋ ಬುದ್ದಿ ಹೇಳಿದುದನ್ನು ಅವಮಾನವೆಂದು ಭಾವಿಸಿ, ಉತ್ತಮ ಅಂಕ ಗಳಿಸಲಿಲ್ಲವೆಂದು, ಬಯಸಿದ ವಸ್ತು ಕೊಡಿಸಲಿಲ್ಲವೆಂದು, ಇಷ್ಟವಾದವಳು ಪ್ರೀತಿಸಲಿಲ್ಲವೆಂದು  ಇನ್ನೂ ಅನೇಕ ಚಿಕ್ಕ ಚಿಕ್ಕ ಕಾರಣಗಳಿಂದ ಚಿಕ್ಕವರು, ಯುವಕರು ಅತ್ಯಮೂಲ್ಯ ಆತ್ಮವ ಹತ್ಯೆ ಮಾಡಿಕೊಂಡರೆ, ವ್ಯಪಾರಿಗಳು, ರೈತರು, ಅಧಿಕಾರಿವರ್ಗ, ಪೋಲಿಸರು, … Read more

ಗಾದೆಗಳು- ರೂಪದಲ್ಲಿ ವಾಮನ, ಅರ್ಥದಲ್ಲಿ ತ್ರಿವಿಕ್ರಮ: ಹೊರಾ.ಪರಮೇಶ್ ಹೊಡೇನೂರು

         ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಜನಪದ ಸಾಹಿತ್ಯವೂ ಪ್ರಮುಖವಾದುದಾಗಿದೆ. ಜನಪದರ ಅನುಭವ ಜನ್ಯವಾಗಿ ಉದಯಿಸಿದ ಈ ಸಾಹಿತ್ಯ ಪ್ರಕಾರದಲ್ಲಿ "ಗಾದೆಗಳು" ವಿಶೇಷವಾಗಿ ಗಮನ ಸೆಳೆಯುತ್ತವೆ. "ವೇದ ಸುಳ್ಳಾದರೂ ಗಾದೆ ಸುಳ್ಳಾಗದು" ಎಂಬ ಜನಜನಿತವಾದ ಗಾದೆಯೆ ಗಾದೆಗಳ ಮಹತ್ವ, ಅರ್ಥವಂತಿಕೆಯನ್ನು ಎತ್ತಿ ತೋರಿಸುತ್ತದೆ.          ಗಾದೆಗಳು ಜನಸಾಮಾನ್ಯರ ಪ್ರತ್ಯಕ್ಷ ಅನುಭವಗಳ ಮೂಸೆಯಿಂದ ರೂಪುಗೊಂಡಿರುವುದರಿಂದ ಅವುಗಳ ಅರ್ಥ ಸುಲಭವಾಗಿ ತಿಳಿಯುವುದರ ಜೊತೆಗೆ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡುತ್ತವೆ. ದೈನಂದಿನ ಸಂದರ್ಭಗಳಲ್ಲಿ ಇಕ್ಕಟ್ಟುಗಳು … Read more