ಪಂಜು ಕಾವ್ಯಧಾರೆ

ಮೌನಿ, ಗಿಜಿಗಿಡುವಂತೆ ಜನ ಸುತ್ತಲೆಲ್ಲರಿದ್ದರೂ ನಾ ನನ್ನೊಳು ಮಾತ್ರ ಮೌನಿ, ನನಗೆ ನಾನೇ ಮಿತ್ರ ನಾನೇ ಶತ್ರು ಏರಿಳಿತಗಳಲ್ಲೆಲ್ಲಾ ನನ್ನದು ಒಂದೇ ವೇಗ ಏರಿಗೆ ಕುಗ್ಗೇನು ಇಳಿವಿಗೆ ಹಿಗ್ಗೇನು ಜಾರಿದರೂ ಅಷ್ಟೇ ನೇಪಥ್ಯಕ್ಕೆ ಸರಿದರೂ ಅಷ್ಟೇ,, ಒಂಟಿ ದಾರಿಯಲಿ ನನಗೆ ನಾನೇ ಜಂಟಿ  ಒಬ್ಬೊಬ್ಬನೇ ಮಾತನಾಡಿಕೊಳ್ಳುತ್ತೇನೆ ಅಳುತ್ತೇನೆ, ನಗುತ್ತೇನೆ ಒಮ್ಮಮ್ಮೆ  ದು:ಖದಲಿ ಬಿಕ್ಕಿ ಬಿಕ್ಕಿ ಅಳುತ್ತೇನೆ, ಗೊತ್ತು ! ಈ ಜನರೆಲ್ಲ ನನ್ನ ಹಿಂದೆ ಆಡಿಕೊಳ್ಳುವರೆಂದು, ಹುಚ್ಚುಡುಗನೆಂದು ಲೊಚಗುಟ್ಟುವರೆಂದು, ಹರಿದ ಪ್ಯಾಂಟಿಗೆ ದಾರ ಕಟ್ಟಿ ಗೇಲಿ ಮಾಡುವರೆಂದು, … Read more

ಉಬ್ಬಿಯ ಸ್ವಗತ……..: ಅಮರ್ ದೀಪ್ ಪಿ.ಎಸ್.

ಗೆಳೆಯ, ಮೇರೆ ಬಾತೋ ಮೇ ತೇರಿ ಫಿಕರ್ ಸದಾ…………………. ಮೇರೆ ಯಾದೋಂ ಮೇ ತೇರಿ ಫಿಕರ್ ಸದಾ………………..   ಖುಷಿಯಾಗಬೇಡ, ನಿನ್ನ ನೆನಸ್ಕೊಂಡು ಈ ಹಾಡು ಗುನುಗುತ್ತಿಲ್ಲ.  ತುಂಬಾ ಹಾಯಾಗಿದ್ದೆ ಕಣೋ ನಾನು, ಸ್ವಾಭಿಮಾನಿ.  ಚಿಕ್ಕಂದಿನಲ್ಲಿ ನನ್ನಿಬ್ಬರು ಗೆಳತಿಯರೊಡನೆ ಹರಟುತ್ತಾ, ನಗುತ್ತಾ ಶಾಲೆಗೆ, ಕಾಲೇಜಿಗೆ ಹೋಗುವುದು ಓದು ಕಲಿಯಲು ಎನ್ನುವುದನ್ನೇ ಮರೆತು ತುಂಬಾ ನಲಿಯುತ್ತಿದ್ದೆ. ಕಾಲೇಜಿನಲ್ಲಿ ಚೂಡಿ ಹಾಕಿದರೆ ವೇಲ್ ಹಾಕದೇ ಹೊರಟರೆ, ಇದ್ದರೂ ಕೊರಳಿಗಷ್ಟೇ ಸುತ್ತಿಕೊಂಡು ತಿರುಗುವುದನ್ನು ನೋಡಿ ಫ್ಯಾಮಿಲಿ ಫ್ರೆಂಡ್ಸ್ ಥರವಿದ್ದ ಹುಡುಗನೊಬ್ಬ ಗದರಿಸಿ … Read more

  ನಿಜದನಿ: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ನಾವು ಯಾವುದನ್ನೂ  ಬಲವಂತವಾಗಿ  ಉಳಿಸಲಾಗದು. ಹಾಗೆ ಉಳಿಸಿದರೂ ಬಹಳ ವರ್ಷ ಬದುಕದು. ಯಾವುದನ್ನು ಬಳಸುತ್ತೇವೋ ಅದು ಬಹಳ ವರ್ಷ ಉಳಿಯುತ್ತದೆ ಬೆಳೆಯುತ್ತದೆ. ಬರಿ ಬಾಯಿಯಿಂದ ಕನ್ನಡ ಉಳಿಸಿ ಬೆಳೆಸಿ ಎಂದು ಅಬ್ಬರಿಸಿದ ಮಾತ್ರಕ್ಕೆ ಕನ್ನಡ ಉಳಿಯದು. ಕನ್ನಡ ಬಳಸಿದರೆ ಉಳಿದೀತು, ಪ್ರೀತಿಸಿದರೆ ಬೆಳೆದೀತು. ಇದು ಯಾವುದೇ ಸಂಘ, ಸಂಸ್ಥೆ,  ಒಕ್ಕೂಟಗಳ ಜವಾಬ್ದಾರಿಯಾಗಿರದೆ ಪ್ರತಯೊಬ್ಬ ಕನ್ನಡಿಗನ ಕರ್ತವ್ಯವಾಗಿರುತ್ತದೆ ಕನ್ನಡ ಸುಂದರ ಲಿಪಿಯಿರುವ ಮಧುರ ಭಾಷೆ. ಕನ್ನಡಿಗರನ್ನು, ಕನ್ನಡ ಸಂಸ್ಕೃತಿಯನ್ನು ರೂಪಿಸಿ, ದಾನ, ತ್ಯಾಗ ಉದಾತ್ತ ಗುಣಗಳಿಗೆ ಹೆಸರಾದ ಭಾಷೆ. … Read more

ಎತ್ತರಕ್ಕೆ ಬೆಳೆಯಲು ಜಾಣನೆಂಬ ಅಹಂಗೆ ಪೆಟ್ಟಾಗಲೇ ಬೇಕು..: ನಾಗರಾಜ್. ಮುಕಾರಿ (ಚಿರಾಭಿ)

        ನಾಲ್ಕನೇ ತರಗತಿಯಲ್ಲಿ ಕ್ಲಾಸ್ ಟೀಚರ್ ಆಗಿ ಇದ್ದಿದ್ದು ಒಬ್ಬರೇ ಮಾಸ್ತರು. ಅವರು ನನ್ನ ಜೀವನದಲ್ಲಿ ನೆನಪಿಟ್ಟು ಕೊಳ್ಳುವಂತಹ ವ್ಯಕ್ತಿತ್ವದವರು. ಅದು ನನ್ನ ನೆಚ್ಚಿನ ಕೊಟ್ರಪ್ಪ ಮಾಸ್ತರು. ಅವರೊಬ್ಬರೇ ಕನ್ನಡ, ವಿಜ್ಞಾನ, ಸಮಾಜ ಮತ್ತು ಗಣಿತ ಪಾಠವನ್ನು ಅತೀ ಸಂತೋಷವಾಗಿ ಹೇಳಿಕೊಡುತ್ತಿದ್ದುದು. ತಿಂಗಳಿಗೊಮ್ಮೆ ಪರೀಕ್ಷೆ, ಗರಿಷ್ಟ ಅಂಕ ಇಪ್ಪತೈದು. ಸರಿಸುಮಾರು ಎಲ್ಲಾ ವಿಷಯಗಳಲ್ಲೂ ಇಪ್ಪತ್ತರ ಮೇಲೆಯೇ ಗಳಿಸಿದ ನೆನಪು ನನಗೆ, ಅದಕ್ಕೆಂದೇ ಒಮ್ಮೆ ತರಗತಿಯ ಮಾನಿಟರ್ ಅದದ್ದೂ ಉಂಟು.  ಹಾಗೆಯೇ ಇರಲು ಒಂದು ದಿನ … Read more

ಐದ್ಸಾವರ ಫ್ರೆಂಡ್ಸು ಮತ್ತು ನಾವು: ಪ್ರಶಸ್ತಿ

ಈ ಫೇಸ್ಬುಕ್ಕಿನ ಸಾಹಿತಿಗಳೆಲ್ಲಾ, ಅಥವಾ ಬೇರೆಡೆ ಸಾಹಿತ್ಯ ಬರೆಯುತ್ತಿದ್ದು ಸದ್ಯ ಫೇಸ್ಬುಕ್ಕಿನಲ್ಲಿ ಸಕ್ರಿಯರಾಗಿರೋ ಸ್ನೇಹಿತರೆಲ್ಲಾ ಯಾವುದೋ ಪಕ್ಷದ ವಕ್ತಾರರಂತೆ, ಮತ್ಯಾವುದೋ ಕೋಮಿನ ಹರಿಕಾರರಂತೆ ಯದ್ವಾ ತದ್ವಾ ಪೋಸ್ಟುಗಳನ್ನ ಹರಿಬಿಡೋದನ್ನು ನೋಡಿದಾಗ ಖೇದವಾಗುತ್ತೆ. ಮೋದಿಯೊಬ್ಬ ಸರ್ವಾಧಿಕಾರಿಯೆಂದಾಗ್ಲೋ, ಟಿಪ್ಪು ಜಯಂತಿ ಬೇಡವೆನ್ನುವವರಿಗೆ ಬುದ್ಧಿಯಿಲ್ಲವೆಂದಾಗ್ಲೋ , ಉರುಳು ಸೇವೆಗೋ, ಉಡುಪಿ ಚಲೋಗೋ ಪ್ರಶಂಸೆ, ಧಿಕ್ಕಾರಗಳನ್ನ ಬರೆದಾಗಾದ ಬೇಸರವಲ್ಲವದು. ಆದರೆ ಎಡವೇ ಸರಿಯೆಂದೋ, ಬಲವೇ ಸರ್ವೋತ್ತಮವೆಂದೋ ದಿನಂಪ್ರತಿ ಜಗಳ ಕಾಯೋ ಪರಿಗೆ ಕಸಿವಿಸಿಯಾಗುತ್ತೆ. ವೈಯುಕ್ತಿಕವಾಗಿ ಇಷ್ಟವಾಗೋ ಅವರು ಫೇಸ್ಬುಕ್ಕಿಗೆ ಬಂದಾಗ ಹಿಂಗ್ಯಾಕೆ ಅನ್ನೋದು … Read more

ಕಿರು ಕತೆಗಳು: ಸಿಂಧುಭಾರ್ಗವ್, ಕೃಷ್ಣವೇಣಿ ಕಿದೂರ್.

ಅಹಂಕಾರವೂ ಕರಗುವುದು. ಆಗರ್ಭ ಶ್ರೀಮಂತನ ಮಗನಿಗೆ ಐಶಾರಾಮಿಯ ಜೀವನ ನಡೆಸಲು ಏನೆಲ್ಲ ಮಾಡಬೇಕೋ ಅದನ್ನು ಚೆನ್ನಾಗಿ ತಿಳಿದಿದ್ದ.. ಕಾರು, ಬಂಗಲೆ ಜೊತೆಗೆ ಆಳುಕಾಳು ಅಲ್ಲದೆ ಕುಡಿತ ದಿನಕ್ಕೊಬ್ಬಳು ದೇಹದಾನ ಮಾಡುವವಳು ಸಿಗುತ್ತಿದ್ದಳು.. ತಂದೆ ರಾಮುವಿನ ಸವೆತ, ಬೆವರ ಹನಿ, ದೇಹದಲ್ಲಿ ಬತ್ತಿ ಹೋದ ರಕ್ತ ಇದಾವುದೂ ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ..  * ರೈತನಾಗಿದ್ದ ರಾಮುವಿನ ತಂದೆ ತನ್ನ ಕೃಷಿಭೂಮಿಯನ್ನು ಮಗನ ಕೈಗೊಪ್ಪಿಸಿ ಕಣ್ಣುಮುಚ್ಚಿಕೊಂಡರು. ಇದ್ದ ಒಂದು ಎಕರೆ ಜಾಗದಲ್ಲಿ ಮೊದಲು ಕೃಷಿ ಆರಂಭಿಸಿದ್ದ ರಾಮು ದಿನವೂ ತಾನೇ … Read more

ಕಿರು ಲೇಖನಗಳು: ಬಸವರಾಜ ಪಟ್ಟಣಶೆಟ್ಟಿ , ವೇಣುಗೋಪಾಲ್ ಹೆಚ್.

ಕನ್ನಡ ನಾಡಿನ ಅಪರೂಪದ ನೃತ್ಯತಾರೆ ಜ್ಯೋತಿ ಬಳ್ಳಾರಿ ಹಾಗೂ ಕಲಾವಿದರ ತಂಡ ಜ್ಯೋತಿ ಬಳ್ಳಾರಿ ಕರ್ನಾಟಕ ಕಂಡ ಅಪರೂಪದ ನೃತ್ಯತಾರೆ.  ಈ  ತಾರೆ ಹಿಂದೊಮ್ಮೆ ಯಾವ ಪರಿ ಪ್ರೇಕ್ಷಕರಿಗೆ ತಮ್ಮ ನೃತ್ಯದ ಮೋಹಕತೆಯಿಂದ ಹುಚ್ಚು ಹಿಡಿಸಿದ್ದರೆಂದರೆ ಅದನ್ನು ಹಿಂದಿನ ಪ್ರೇಕ್ಷಕರು ಈಗಲೂ ನೆನಪಿಸಿ ಖುಷಿ ಪಡುತ್ತಾರೆ. ಆಶ್ಚರ್ಯವೆಂದರೆ ಈಗ ಕೂಡ ಜ್ಯೋತಿ ಬಳ್ಳಾರಿಯವರು  ಅದೇ ಮೋಹಕತೆಯ ನೃತ್ಯವನ್ನು ಮಾಡಿ  ಪ್ರೇಕ್ಷಕರ ಮನದಲ್ಲಿ ಅಭಿಮಾನದ  ತರಂಗಳನ್ನು  ಎಬ್ಬಿಸುತ್ತಾರೆ. ಮೂಲತಃ ಬಳ್ಳಾರಿಯವರಾದ ಜ್ಯೋತಿಯವರು ಕರ್ನಾಟಕದ ಎಲ್ಲ ವೃತ್ತಿ ರಂಗಭೂಮಿಗಳಲ್ಲಿ  ತಮ್ಮ ಮೋಹಕ … Read more