ಪಂಜು ಕಾವ್ಯಧಾರೆ

ಸಂಕೋಲೆಯೊಳಗಿನ ನೀನು! ನೀನು ಬಂದಾಗ ನಿಜವಾಗಿ ಬೆಳದಿಂಗಳು ಹಾಲಿನಂತೆ ಸುರಿದಿತ್ತು ನೋಡಿದ್ದಷ್ಟೇ ಭಾಗ್ಯ! ಅದನ್ನು ತುಂಬಿಡಲು ಯಾವ  ಬಟ್ಟಲಿಗೂ ಸಾದ್ಯವಾಗಿರಲಿಲ್ಲ ನಿನ್ನ ಕಣ್ಣುಗಳೊಳಗೆ ಅಂತಹುದೇ  ಬೆಳಕಿರಬಹುದೆಂದು ಕಾದಿದ್ದೇ ಬಂತು: ಒಂದು ತಣ್ಣನೆಯ ಸಂಜೆ ನಿನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ ಬೆವೆತು ಹೋದೆ ನಿನ್ನ ಕಣ್ಣುಗಳ ತುಂಬ ಬೆಂಕಿ ಕೆನ್ನಾಲಿಗೆಗಳು ನಿನ್ನ ತುಟಿಗಳಿಗೆ ಬಂದೆ ಹೊರಬಂದದ್ದೆಲ್ಲ ನಿಗಿನಿಗಿ ಕೆಂಡದಂತ ಶಬ್ದಗಳು ನಿನ್ನ  ಎದೆಗೆ ಬಂದೆ ಕೊತಕೊತ ಕುದಿಯುವ ಲಾವಾರಸದ  ಕಡಲು ನಿನ್ನ ಸೊಂಟಕ್ಕೆ ಬಂದೆ ಮಿರಮಿರ ಮಿಂಚುವ ಬಿಳಿ … Read more

ಕನ್ನಡ ಭಾಷೆ ಮತ್ತು ಸಂಸ್ಕೃತಿ -ಮುಂದಿನ ದಿನಗಳಲ್ಲಿ!: ಎಸ್.ಜಿ.ಶಿವಶಂಕರ್

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದ್ದಲ್ಲೇ ಉಜ್ವಲವಾದ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ. ಈ ನಾಡು ಕಾವೇರಿಯಿಂದ ಗೋದಾವರಿಯವರೆಗೂ ವ್ಯಾಪಿಸಿತ್ತು ಎಂದು ಇತಿಹಾಸ ಹೇಳುತ್ತದೆ. ಈ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿರುವ ಬಗೆಗೆ ವಿದ್ವಾಂಸರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವನ್ನು ಮೊದಲಿಗೆ 'ಕರಿಯ ಮಣ್ಣಿನ ನಾಡು' ಎಂದೂ, 'ಕರುನಾಡು' ಎಂದರೆ ಎತ್ತರದ ಪ್ರದೇಶದಲ್ಲಿರುವ ನಾಡು ಎಂದೂ, 'ಕಮ್ಮಿತ್ತು ನಾಡು' ಎಂದರೆ … Read more

ಅಂಧಕಾರ ಅಳಿಸುವ ಬೆಳಕಿನ ಅರಿವು ದೀಪಾವಳಿ: ವೈ.ಬಿ.ಕಡಕೋಳ

ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು ಇರುಳು ಕತ್ತಲೆಯ ಗವಿ:ಮನೆ ದೂರ; ಕನಿಕರಿಸಿ ಕೈಹಿಡಿದು ನಡೆಸೆನ್ನನು ಹೇಳಿ ನನ್ನಡಿಯಿಡಿಸು;ಬಲುದೂರ ನೋಟವನು ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ   ಅಜ್ಞಾನದ ಕತ್ತಲೆಯನ್ನು ಕಳೆಯಲು ಜ್ಞಾನದ ದೀಪ ಅಗತ್ಯ. ದೀಪಾವಳಿ ದೀಪಗಳ ಬೆಳಕಿನ ಹಬ್ಬ. ನರಕಚತುರ್ದಶಿಯಿಂದ ಆರಂಭಿಸಿ ಮೂರು ದಿನಗಳವರೆಗೆ ಆಚರಿಸುವುದುಂಟು. ಭಾರತದ ಎಲ್ಲೆಡೆಯಲ್ಲಿಯೂ ದೀಪಾವಳಿಯನ್ನು ಆಚರಿಸುತ್ತಾರೆ.      ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಸ್ತಾಪಗೊಳ್ಳುವ ಎರಡು ಮುಖ್ಯ ಹೆಸರುಗಳು. ನರಕ ಹಾಗೂ ಬಲಿ. ನರಕನು ಭೂದೇವಿಯ … Read more

ಅವ್ವ: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

“ಅವ್ವ ಇದ್ದರೇ ಸಾಕು    ಅವಳಿರದ ಸಿರಿವಂತಿಕೆ ಯಾರಿಗೆ ಬೇಕು   ಅವಳಿರದ ಏಕಾಂತ ಯಾರಿಗೆ ಬೇಕು   ಅವಳಿರದ ಅರಮನೆಯದಾರಿಗೆ ಬೇಕು   ಅವಳಿರದ ಸಂತಸ, ಹಬ್ಬ, ಹರಿದಿನಗಳದಾರಿಗೆ ಬೇಕು   ಅವ್ವ ಇದ್ದರದೇ ಕ್ರಿಸ್‍ಮಸ್, ಅದೇ ಯುಗಾದಿ ಅದೇ ರಮ್ಜಾನ್   ಅವ್ವ ಇರಬೇಕು ಅವಳ ಜೊತೆ ನಾನೂ ಇರಬೇಕು”     ಅವ್ವನನ್ನು ಮಮ್ಮಿಯೆಂದು ಕರೆಯಲು ನನಗೆ ತುಂಬಾ ಮುಜುಗುರ ಯಾಕೆಂದರೆ ಮಮ್ಮಿ ಎಂದರೆ ಕೇವಲ ಶಬ್ದವಾದೀತು. ಅವ್ವ ಎಂದರೆ ಆಹಾ ಅದೇನೋ ಸೊಗಸು. … Read more

ಬಿಸಿಲ ನಾಡಿನಲ್ಲಿ ಸೋಂಪಾಗಿ ಬೆಳೆಯುತ್ತಿರುವ ಶಿಲ್ಪ ಅಂತರಗಂಗೆ: ವೀರೇಶ ಗೋನವಾರ

ಹೈದರಬಾದ್ ಕರ್ನಾಟಕ ಎಂದಾಕ್ಷಣವೇ ಮೂಗು ಮುರಿಯುವ ಇಂದಿನ ಜಾಯಮಾನದಲ್ಲಿಯೇ ರಾಯಚೂರು ಜಿಲ್ಲೆಯ ಭತ್ತದ ಕಣಜ ಎಂದೇ ಖ್ಯಾತಿಯನ್ನು ಪಡೆದಿರುವ ಸಿಂಧನೂರು ತನ್ನ ಒಡಲಲ್ಲಿ ಭತ್ತದ ಜೊತೆ-ಜೊತೆಗೆ ಅನೇಕ ಪ್ರತಿಭೆಗಳನ್ನು ಅಡಗಿಸಿಟ್ಟುಕೊಂಡಿದೆ. ಅಂತಹ ಪ್ರತಿಭೆಗಳ ಸಾಲಿಗೆ ನನ್ನೂರಿನ ಹೆಮ್ಮೆಯ ಯುವತಿ ಶಿಲ್ಪ ಅಂತರಗಂಗೆ ನಮ್ಮ ಇಂದಿನ ಯುವ ಸಮುದಾಯಕ್ಕೆ ಹೊಸ ಭರವಸೆಯ ಪ್ರತಿಭೆಯಾಗಿ ನಿಲ್ಲುತ್ತಾರೆ. ಇಂತಹ ಭರವಸೆಯ ಕಣ್ಮಣಿಗೆ ಪ್ರಸ್ತುತ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡಲಾಗುವ 2014-15ನೇ ಸಾಲಿನ ರಾಜ್ಯ ಮಟ್ಟದ ‘ಸ್ವಾಮಿ … Read more

ಸರಸವಾಡದಿರಿ ಪುಟಾಣಿಗಳೇ ಪಟಾಕಿಗಳ ಜೊತೆ!: ಹೊರಾ.ಪರಮೇಶ್ ಹೊಡೇನೂರು

             ಮತ್ತೊಮ್ಮೆ ದೀಪಾವಳಿ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಹಬ್ಬದ ಸಡಗರವನ್ನು ಹೆಚ್ಚಿಸುವುದು ವೈವಿಧ್ಯಮಯವಾದ ಪಟಾಕಿಗಳು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಮನೆಯಲ್ಲಿ ದೊಡ್ಡವರು ಪೂಜಾದಿ ಕಾರ್ಯಗಳು, ತಳಿರು ತೋರಣ, ಹೊಸ ಬಟ್ಟೆಗಳು, ದೇಗುಲ ದರ್ಶನ, ಮುಂತಾದ ವುಗಳ ಕಡೆ ಗಮನ ನೀಡಿದರೆ, ಪುಟಾಣಿ ಮಕ್ಕಳಿಗೆ ಪಟಾಕಿಗಳನ್ನು ಸುಟ್ಟು, ಸುರ್ ಸುರ್ ಬತ್ತಿ ಉರಿಸಿ, ಕೃಷ್ಣ ಚಕ್ರ ತಿರುಗಿಸಿ, ಹೂ ಕುಂಡ ಚಿಮ್ಮಿಸಿ, ಆಟಂಬಾಂಬ್ ಸಿಡಿಸಿ ಖುಷಿಪಡುತ್ತಾರೆ. ಮುಗ್ಧ ಮಕ್ಕಳು ಹಬ್ಬದ … Read more

ಮಣ್ಣಿಗೆ ಬಿದ್ದ ಹೂಗಳು ಕವನ ಸಂಕಲನ ವಿಮರ್ಶೆ: ನೂರುಲ್ಲಾ ತ್ಯಾಮಗೊಂಡ್ಲು

ನವ್ಯೋತ್ತರ ಕಾವ್ಯಮಾರ್ಗದಲ್ಲಿ, ಮತ್ತೆ ದಲಿತೀಯ ನೆಲೆಯಲ್ಲಿ ಅಂಥದೇ ಸಿಟ್ಟು, ಹತಾಶೆ,ರೋಷ, ಸಮಾಜಿಕ ಶೋಷಣೆಯ ಹಾಗೂ ತಾಯಿ ಮಮತೆ, ಗೆಳತಿಯ ಒಲವು, ಚೆಲುವು, ಮಗುವಿನ ಅಕ್ಕರೆ, ರಾಜಕೀಯ ವಿಡಂಬನೆಗಳನ್ನು ಶಿಲ್ಪವಾಗಿಸಿಕೊಂಡು ಮೈತಳೆದ ಕೃತಿ” ಮಣ್ಣಿಗೆ ಬಿದ್ದಹೂಗಳು” ಬಿದಲೋಟಿ ರಂಗನಾಥ್‍ರ ಇದು ಪ್ರಥಮ ಕವನ ಸಂಕಲನ. ಈ ಸಂಕಲದಲ್ಲಿ ಒಟ್ಟು 51 ಕವನಗಳಿಗೆ ಇವುಗಳಲ್ಲಿ ಬಹುಮುಖ್ಯವಾಗಿ ದಲಿತೀಯಾ ನಿಲುವನ್ನೇ ತಾತ್ವಿಕವಾಗಿರಿಸಿಕೊಂಡು ರಚನೆ ಮಾಡಿದಂತಹ ಕವನಗಳು. ಇಲ್ಲಿ ಮುಖ್ಯವಾಗುತ್ತವೆ. ಸಂಕಲನದ ಶೀರ್ಷಿಕೆಯ ಕವನವೇ ‘ಮಣ್ಣಿಗೆ ಬಿದ್ದ ಹೂಗಳು-ಇಲ್ಲಿ ಕವಿ, ದಲಿತನಾಗಿ ತನಗಾದ … Read more

ಆಗಂತುಕ: ಪಾರ್ಥಸಾರಥಿ ಎನ್

ಬಾಗಿಲಲ್ಲಿ ನಿಂತ ಕುಮುದಳಿಗೆ  ಮನೆಯ ಎದುರಿಗೆ  , ಶಂಕರ ಯಾರ ಜೊತೆಗೋ ಮಾತನಾಡುತ್ತಿರುವುದು ಗಮನ ಸೆಳೆಯಿತು.  ದಿಟ್ಟಿಸಿ ನೋಡಿದಳು, ಯಾರೋ ಬಿಕ್ಷುಕನಿರಬೇಕು ಅಂದುಕೊಂಡಳು. ಅವನ ಮಾಸಿದ ಕಾವಿಯ ನಿಲುವಂಗಿ, ಬಲಹೆಗಲಿಗೆ ಜೋತುಬಿದ್ದ ಬಟ್ಟೆಯ ಜೋಳಿಗೆ. ಹಾಗೆ ಕೈಯಲ್ಲಿ  ಆಸರೆಗೆ ಹಿಡಿದು ನಡೆಯುವಂತ ಉದ್ದನೆಯ ನಯಮಾಡಿದ ಕೋಲು.  ಸಾಕಷ್ಟು ಉದ್ದ ಎನ್ನಬಹುದಾದ ಬಿಳಿ ಕರಿ ಬಣ್ಣ ಮಿಶ್ರಿತ ಗಡ್ಡ ಅವಳ ಗಮನ ಸೆಳೆಯಿತು.   ಶಂಕರ ಆಗುವದಿಲ್ಲ  ಅನ್ನುವಂತೆ ತಲೆ ಅಡ್ಡಡ್ಡ ಆಡಿಸುತ್ತಿದ್ದ. ಕುಮುದ ಹೊರಗೆ ಬಂದು ನಿಂತಿದ್ದು … Read more

 ಅಕ್ಷರ, ಅನ್ನ, ಕುಬೇರ: ಸೋಮಶೇಖರ ಬಿದರೆ

                                      ಬೆಳಗಿನ ಸೂರ್ಯ ಆಗಲೇ ತೇಲಿ ಬಂದು ೩ನೇಅಂತಸ್ತಿನಲ್ಲಿರೊ ಅವನ ಮನೆಯ ಕಿಟಕಿಯಲ್ಲಿ ಇಣುಕುತ್ತಿದ್ದ, ಹೆಂಡತಿ ಮಗ ಇನ್ನೂ ಸುಖ ನಿದ್ರೆಯಲ್ಲಿದ್ರು. ಬ್ರಾಹ್ಮೀ ಮಹೂರ್ತದಲ್ಲಿ ಏಳಬೇಕಂದು ಎಷ್ಟೋ ಸಲ ಅನ್ನಿಸಿದರೂ ಸಾಧ್ಯವಾಗಿಲ್ಲ. ತಿಂಗಳದ ಮೊದಲ ವಾರವಾದ್ದರಿಂದ ಖುಷಿಯಾಗಿದ್ದ. ರೂಡಿಯಂತೆ ತನ್ನ ಮೊಬೈಲಿನ ಸ್ಕ್ರೀನ್ ಆನ್ ಮಾಡಿದ ಸಾಲು ಸಾಲಾಗಿ ಸಂದೇಶಗಳು ಬಂದಿದ್ವು … Read more

 ಬೆಳಕು ಕಂಡ ಕಣ್ಣು: ಅನಂತ ರಮೇಶ್

ಉಪಗ್ರಹದಿಂದ ಬರುವ ಛಾಯಾ ಚಿತ್ರಗಳು ವಿನೀತನ ಮನಸ್ಸನ್ನು ತುಂಬಾ ಸೆಳೆಯುತ್ತವೆ. ಆಗಾಗ ಅಂತರ್ಜಾಲದಲ್ಲಿ ಭೂಮಿಯ ವೈವಿಧ್ಯದ ಚಿತ್ರಗಳನ್ನು ಅವನು ಅಪ್ಪನ ಜೊತೆ ಕುಳಿತು ನೊಡುತ್ತಿರುತ್ತಾನೆ. ಬಣ್ಣದ ಓಕುಳಿಯಲ್ಲಿ ಈಜುವಂತೆ ಕಾಣುವ ಭೂಮಿಯನ್ನು ನೋಡಲು ಅವನಿಗೆ ತುಂಬಾ ಇಷ್ಟ.  "ಅಪ್ಪಾ.. ನಮ್ಮ ದೇಶದ ಕಡೆ ಜೂಮ್ ಮಾಡು. ಎಷ್ಟೊಂದು ಹಸಿರು ಕಾಣುತ್ತೆ ಅಲ್ವ !   ಈ ಥರ ಹಸಿರು ನಾನು ನೋಡೆ ಇಲ್ಲ " "ನಾಗರಹೊಳೆ ಅಥವ ಅಗುಂಬೆ ಕಡೆಗೆ ಈ ರಜಾದಲ್ಲಿ ಹೋಗೋಣ…. ಹಸಿರು ಕಾಡಿಗೆ" … Read more

ಆ ದೀಪಾವಳಿ: ದಿವ್ಯಾಧರ ಶೆಟ್ಟಿ ಕೆರಾಡಿ

ದೀಪಾವಳಿ ಮತ್ತೆ ಬಂದಿದೆ ಇಡೀ ಜಗತ್ತೇ ಸಂಭ್ರಮ ದಿಂದ ಆಚರಿಸುವ ಬೆಳಕಿನ ಹಬ್ಬದ ಗಮ್ಮತ್ತೆ ಬೇರೆ ತರಹದ್ದು. ಇಂದಿನ ಅಬ್ಬರದ ದೀಪಾವಳಿಯ ಜೋರು ಶಬ್ದಗಳ ನಡುವೆ ಚೈನಾಪಟಾಕಿಗಳ ಸದ್ದಿನ ಎದುರು ನಾವು ಬಾಲ್ಯದಲ್ಲಿ ಹೊಡೆಯುತ್ತಿದ್ದ ಲಕ್ಷ್ಮೀ ಪಟಾಕಿಯ ಸದ್ದೇ ಕೇಳಿಸುತ್ತಿಲ್ಲ ಈಗ.. ಏಲ್ಲೋ ಮರೆಯಾಗಿ ಹೋದ ಹಳೆಯ ನೆನಪುಗಳ ಹಣತೆಯನ್ನು ಒಂದಿಷ್ಟು ಸಾಲಾಗಿ ಜೋಡಿಸುವ ಆಸೆಯಾಗಿದೆ. ಒಮ್ಮೆ ನಮ್ಮ ಹಳ್ಳಿ ಬಾಲ್ಯದ ಕಡೆಗೆ, ಕಳೆದು ಹೋದ ಆ ಕಾಲದ ದೀಪಾವಳಿ ಯ ನೆನಪುಗಳ ಮನೆಯೊಳಗೊಮ್ಮೆ ಮೆಲ್ಲಗೆ  ಹೋಗಿ ಹಣತೆ … Read more

ಮೊನಾರ್ಕ್ ಚಿಟ್ಟೆ ಹಾಗೂ ಮಿಂಚುಳ: ಅಖಿಲೇಶ್ ಚಿಪ್ಪಳಿ

ಮಲೆನಾಡಿನಲ್ಲಿ ಸತತ ಮೂರನೇ ವರ್ಷದ ಬರಗಾಲ ಧಾಂಗುಡಿಯಿಡುತ್ತಿದೆ. ನಿಜಕ್ಕೂ ಇದಕ್ಕೆ ಮರಗಾಲವೆಂದೇ ಕರೆಯಬೇಕು. ಪಶ್ಚಿಮಘಟ್ಟದ ಕಾಲಬುಡದಲ್ಲಿರುವ ನಮಗೆ ವಾಸ್ತವಿಕವಾಗಿ ಬರವೆಂಬ ಶಬ್ಧದ ಅರಿವೇ ಇರಬಾರದು. ಆದರೂ ಅದರ ಅರಿವಾಗುತ್ತಿದೆ, ನಿಧಾನಕ್ಕೆ ಇಲ್ಲಿಯ ಜನರ ಬದುಕನ್ನು ನುಂಗಲು ಹೊರಟಿರುವ ಈ ಮರದ ಅಭಾವದಿಂದಾಗುತ್ತಿರುವ ಈ ಪರಿಸ್ಥಿತಿಗೆ ಮರಗಾಲವೆಂದೇ ಹೇಳಬಹುದು. ಪಕ್ಕದ ಹೊಸನಗರದಲ್ಲಿ, ತೀರ್ಥಹಳ್ಳಿಯಲ್ಲಿ ಮಳೆಯಾದರೆ, ರಾಜ್ಯಕ್ಕೆ ವಿದ್ಯುತ್ ನೀಡುವ ಲಿಂಗನಮಕ್ಕಿ ಜಲಾಶಯ ತುಂಬುತ್ತದೆ. ಜೋಗದ ಸಿರಿ ಹೆಚ್ಚುತ್ತದೆ. ಆ ಎರಡೂ ತಾಲ್ಲೂಕುಗಳಲ್ಲೂ ಮಳೆಯಿಲ್ಲ. ಜೋಗದಲ್ಲಿ ನೀರಿಲ್ಲದ ಹೊತ್ತಿನಲ್ಲೇ ಜೋಗದ … Read more

ಜೋಗದ ಜಾಲ: ಪ್ರಶಸ್ತಿ

ಮಳೆಗಾಲದಲ್ಲಿನ ಮಲೆನಾಡು ಅಂದ್ರೆ ಎಲ್ಲೆಡೆ ಹಚ್ಚ ಹಸಿರು. ಬಿಟ್ಟೂ ಬಿಡದೇ ಸುರಿಯೋ ಮಳೆಗೆ ಕಗ್ಗಲ್ಲುಗಳ ನಡುವೆ ಬೈತಲೆ ತೆಗೆದಂತಹ ಜಲಪಾತಗಳು, ಹಸಿರು ಹೊದ್ದ ಕಾನನಗಳು. ಇವುಗಳನ್ನು ಕಣ್ತುಂಬಿಕೊಳ್ಳೋಕೆ ಎಲ್ಲೆಡೆಯಿಂದ ಬರ್ತಿರೋ ಪ್ರವಾಸಿಗರಿಗೆ ರೆಕ್ಕೆಬಿಚ್ಚಿದ ನವಿಲುಗಳ, ಇಂಪು ಕಂಠದ ಕೋಗಿಲೆಗಳ ಸ್ವಾಗತ. ಮಳೆ ಹೆಚ್ಚಾದಂತೆಲ್ಲಾ ಹೆಚ್ಚಾಗೋ ಜಲಪಾತಗಳ ಭೋರ್ಗರೆತಕ್ಕೆ ಸುತ್ತಲಿನ ಜಾಗದಲ್ಲೆಲ್ಲಾ ಮಂಜು ಮುಸುಕಿ ಜಲಪಾತದ ನೋಟವೇ ಮುಚ್ಚಿಹೋಗೋದೂ ಉಂಟು. ಅಂತಹ ಸಂದರ್ಭದಲ್ಲೆಲ್ಲಾ ಬೀಸೋ ಗಾಳಿಯ ಜೊತೆ ತೆರೆತೆರೆಯಾಗಿ ಸರಿವ ಮಂಜ ಪರದೆಯ ಹಿಂದಿನ ಜಲಪಾತವನ್ನು ಕಣ್ತುಂಬಿಕೊಳ್ಳೋ ಅನುಭವವೇ … Read more

ದೀಪಾವಳಿ: ಸುನೀತಾ ಮಂಜುನಾಥ್

ದೀಪಾವಳಿ ಎಂದರೆ ಮನೆಯನ್ನ ಸಾವರಿಸಿ, ಹಂಡೆಗೆ ಪೂಜೆ ಮಾಡಿ ಇದ್ದ ಬದ್ದ ಹಂಡೆ, ಬಿಂದಿಗೆ, ಬಕೇಟುಗಳಿಗೆಲ್ಲ ನೀರು ತುಂಬಿಟ್ಟು , ನೀರು ತುಂಬುವ "ಹಬ್ಬ' ಮುಗಿವಷ್ಟರಲ್ಲಿ ಬೆಳಗಾಗಿ ಮನೆಯ ಬಾಗಿಲಿಗೆ ಸಗಣಿಯ ಸಾರಿಸಿ, ರಂಗೋಲಿ ಹಾಕಿ, ರಂಗೋಲಿಯ ನಡುವೆ ಸಗಣಿಯ ಉಂಡೆಯನ್ನಿಟ್ಟು ಮೇಲೊಂದು ಹುಚ್ಚೆಳ್ಳಿನ ಹಳದಿ ಹೂವಿನ್ನ ಸಿಕ್ಕಿಸಿದರೆ ಹಬ್ಬದ ಕಳೆ ಬಂತೆಂದೇ.. .ನೆತ್ತಿಗೆ ಎಣ್ಣೆಯಿಟ್ಟು ಹಂಡೆಯಿಂದ ಬಿಸಿ ನೀರು ಹಾಕಿಸಿಕೊಂಡು ಒಂದು ಸರ ಪಟಾಕಿ ಹೊಡೆದರೆ ನಮ್ಮ ಹಬ್ಬ ಶುರು ಎಂದೇ ಅರ್ಥ..  ಮತ್ತೆ ಮೂರು … Read more

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 8): ಪ್ರಸಾದ್ ಕೆ.

ಇಲ್ಲಿಯವರೆಗೆ 1993 ರಲ್ಲಿ ತನಿಖಾ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಟ್ಯಾಮಿ ಹೊಮೋಲ್ಕಾಳ ಶವಪೆಟ್ಟಿಗೆಯನ್ನು ಸ್ಮಶಾನದಿಂದ ಹೊರತೆಗೆಯಲಾಯಿತು. ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವೀಡಿಯೋ ಟೇಪ್ ಗಳನ್ನು ಅಕ್ರಮವಾಗಿ, ಹದಿನೇಳು ತಿಂಗಳುಗಳ ಕಾಲ ತನ್ನ ಸುಪರ್ದಿಯಲ್ಲಿ ಬಚ್ಚಿಟ್ಟುಕೊಂಡ ತಪ್ಪಿಗಾಗಿ, ಪೌಲ್ ಬರ್ನಾರ್ಡೊನ ವಕೀಲನಾಗಿದ್ದ ಕೆನ್ ನ ತಲೆದಂಡವಾಯಿತು. ಪೌಲ್ ಬರ್ನಾರ್ಡೊನನ್ನು ಪ್ರತಿನಿಧಿಸುತ್ತಿದ್ದ ಕೆನ್ ಮುರ್ರೇ, ಕಾರೊಲಿನ್ ಮೆಕ್-ಡೊನಾಲ್ಡ್ ಮತ್ತು ಕಿಮ್ ಡಾಯ್ಲ್ ರ ತಂಡ ಅಷ್ಟೇನೂ ಅನುಭವಿ ತಂಡವಾಗಿರಲಿಲ್ಲ. ಅದರಲ್ಲೂ ಈ ಪ್ರಕರಣದಲ್ಲಿ ಪೌಲ್ ಬರ್ನಾರ್ಡೊ ಜೊತೆ ಸೇರಿ ಮಾಡಿದ … Read more

ಅಪ್ಪ ಅಂದ್ರೆ ಆಕಾಶ…: ನಾ’ನಲ್ಲ’

ಏಷ್ಟೋ ದಿನಗಳ ಹಿಂದೆ ಓದಬೇಕು ಅಂತ ತಂದಿದ್ದ ಪುಸ್ತಕವನ್ನು ಓದೋಕೆ ಇವತ್ತು ಸಮಯ ಕೂಡಿ ಬಂದಿತ್ತು. ಓದುತ್ತ ಹೋದಂತೆ ಒಂದಕ್ಕಿಂತ ಒಂದು ಲೇಖನಗಳು ಮನಸ್ಸಿನ ಆಳಕ್ಕೆ ಇಳಿಯತೊಡಗಿದವು. ಒಂದು ಲೇಖನದಲ್ಲಿ ಲೇಖಕರು ಹೇಳಿದಂತೆ "ಅಪ್ಪ ಅಂದ್ರೆ ಆಕಾಶ" ಎನ್ನುವುದು ಮನದಟ್ಟಾಗಲು ಬಹಳ ಸಮಯ ಬೇಕಾಗಲಿಲ್ಲ. ಹೌದು, ನಿಜವಾಗಲೂ ಅಪ್ಪ ಅಂದ್ರೆ ಆಕಾಶ. ನಾವು ಚಿಕ್ಕವರಿದ್ದಾಗ ಒಗಟುಗಳಿಗೆ ಉತ್ತರಿಸುವ ಪಂದ್ಯವಾಡುವಾಗ ಅನೇಕ ಬಾರಿ ಕೇಳಲ್ಪಟ್ಟ ಒಗಟೆಂದರೆ "ಅವ್ವನ ಸೀರೆ ಮಡಿಚೋಕಾಗಲ್ಲ, ಅಪ್ಪನ ರೊಕ್ಕ ಎನಿಸೊಕಾಗಲ್ಲ" ಅನ್ನೋದು. ಅದಕ್ಕೆ ಉತ್ತರ … Read more

ಕಿರು ಲೇಖನಗಳು

ಗೆಳೆತನ ಅಂದು ಡಿಗ್ರಿ ಮೊದಲ ವರ್ಷದ ಪ್ರಾರಂಭ ದಿನ, ನನ್ನವರೂ ಯಾರೂ ಇಲ್ಲವೆಂಬ ಕೊರಗು ಆಕಾಶದಲ್ಲಿನ ಒಂಟಿ ಹಕ್ಕಿಯ ತಳಮಳದಂತೆ ನನ್ನ ಮನಸ್ಸನ್ನು ಭಾರವಾಗಿಸುತ್ತಿತ್ತು. ಅಪರಿಚಿತ ಮುಖಗಳ ದರ್ಶನ.. ಗೆಳೆಯರಿಲ್ಲದ ನೋವು… ಆಗ ಕಾಲೇಜಿನ ಮೊದಲ ಮಹಡಿಯಲ್ಲಿ ನನ್ನದೇ ಭಾವಗಳ ಭಾರ ಹೊತ್ತು ಆರಡಿ ಎತ್ತರದ ತೆಳ್ಳಗೆ ಮೈಕಟ್ಟಿನ ಕೋರಳಲ್ಲಿ ಸೈಡ ಬ್ಯಾಗ ಹಾಕಿಕೊಂಡ ನಿಂತಿದ್ದ ಹೊಸ ಮುಖದವನ್ನು ಮಾತನಾಡಿಸಿದೆ, ಪರಸ್ಪರ ಪರಿಚಯ ಮಾಡಿಕೊಂಡೆ.  ಮಾತುಗಳು ಸಾಗಿ ಆತ ಬೆಳಗಾವಿಯನೆಂದು ಹೇಳಿದ, ಅವರ ತಂದೆಯ ವರ್ಗವಾಗಿ ಆ … Read more

ಬೆಳಕು: ರೋಹಿತ್ ಶೆಟ್ಟಿ ಮೇಲಾರಿಕಲ್ಲ್

'ಬೆಳಕು' ಅನಂತ. ಅನಿಯಮಿತ. ಅದಕ್ಕೆ ಗಡಿ-ಗೆರೆಗಳಿಲ್ಲಾ. ನಮ್ಮ ಬೇಕುಗಳ ಸರತಿಸಾಲಿನ ಮೊದಲಿನ ಶಬ್ದವೆ ಬೆಳಕು ಎನ್ನಬಹುದು ಅಲ್ವ. ಬೆಳಕು ಏ೦ಧಾಕ್ಷಣ ಯಾರ ಮುಖಾರವಿ೦ದ ಅರಳದು ಹೇಳಿ? ಬೆಳಕ ವರ್ಣಿಸದ ಕವಿಯಿಲ್ಲ, ಬಣ್ಣಸದ ಮಾತುಗಾರನಿಲ್ಲಾ, ಬೆಳಗದ ಮನುಷ್ಯನಿಲ್ಲಾ, ಮನುಕುಲವಿಲ್ಲಾ, ಅದು ಜಗತ್ತಿನ ಚೈತನ್ಯದ ಸ೦ಕೇತ. ಪ್ರಾಣಿಪಕ್ಷಿ, ಸಸ್ಯಸ೦ಕುಲದ ಜೀವಾದಾರ, ಜೀವವು ಹೌದು! ಬೆಳಕು ಗೋಚರ ರೂಪದಲ್ಲಿದ್ದರೂ ಅಗೋಚರ ಸ್ಥಿತಿಯ ಪ್ರತಿಪಾದಕ. ಜಗತ್ತಿನ ಎಲ್ಲಾ ಆಗು ಹೊಗುಗಳಿಗು ಕಾರಣೀಕರ್ತ. ಸುಡುವುದು, ಬೆಳಗುವುದು ಎಲ್ಲವು ಅದೇ. ಕಣ್ಮುಚ್ಚಿದರೂ ಕಣ್ತೆರೆದರೂ ಕಾಣುವುದು ಬೆಳಕೆ. … Read more

ವಿಶೇಷತೆಗಳ ಆಗರ;  ಗೂಳೂರು ಗಣೇಶ: ದಂಡಿನಶಿವರ ಮಂಜು

                                ಗೂಳೂರು ಗಣೇಶನಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಈ ಗಣಪತಿ ಆಕಾರ ಮತ್ತು ಗಾತ್ರಗಳಲ್ಲಿ ತನ್ನದೇ ಆದ ವಿಶೇಷ ಶೈಲಿಯನ್ನು ಹೊಂದಿದೆ. ಎಲ್ಲಾ ಕಡೆಗಳಲ್ಲಿ ಗಣೇಶ ಚತುರ್ಥಿಯ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿದರೆ ಗೂಳೂರಿನಲ್ಲಿ ಅಂದು ಮಣ್ಣಿನಿಂದ ಗಣಪತಿ ಮೈಳೆದಯಲು ಆರಂಭಿಸುತ್ತಾನೆ. ದೀಪಾವಳಿ ಹಬ್ಬದ ದಿನ ಈ ಗಣೇಶ ಪ್ರಥಮ ಪೂಜೆಗೆ ಸಿದ್ಧಗೊಳ್ಳುತ್ತಾನೆ. ಅಂದಿನಿಂದ ನಲವತ್ತೈದು … Read more

ರಾಗಿ’ಮುದ್ದೆ’ ತಿಂದವ ನಿರೋಗಿ. .: ಪ. ನಾ. ಹಳ್ಳಿ. ಹರೀಶ್ ಕುಮಾರ್

ಕನಕದಾಸರು ರಚಿಸಿದ ‘ರಾಮಧಾನ್ಯಚರಿತೆ’ ಯನ್ನು ನೀವು ಓದಿರಬೇಕು. ಅದರಲ್ಲಿ ಬರುವ ಅಕ್ಕಿ ಹಾಗೂ ರಾಗಿ ಧಾನ್ಯಗಳ ನಡುವಿನ ವಾದವಿವಾದ ಹಾಗೂ ಅದು ರಾಮನ ಆಸ್ಥಾನದಲ್ಲಿ ಬಗೆಹರಿದ ವಿಚಾರ,ಅಲ್ಲದೇ ಅಕ್ಕಿಗಿಂತಲೂ ರಾಗಿಯೇ ಶ್ರೇಷ್ಠ ಧಾನ್ಯ ಎಂದು ರಾಮನು ತೀರ್ಪಿತ್ತಿದ್ದನ್ನು ಓದಿ ಅಥವಾ ಕೇಳಿ ತಿಳಿದಿರಬೇಕಲ್ಲವೇ?. ಈಗ ಅದೆಲ್ಲಾ ಏಕೆ ಎಂದಿರಾ? ಕಾರಣ ಇದೆ. ನಾವೀಗ ಧಾನ್ಯಗಳಲ್ಲೇ ಶ್ರೇಷ್ಠವಾದ ರಾಗಿ ಹಾಗೂ ಅದರ ಉತ್ಪಾದಿತ ಆಹಾರ ಪದಾರ್ಥವಾದ ರಾಗಿಮುದ್ದೆಯ ಬಹುಪಯೋಗಿ ಗುಣಗಳ ಬಗ್ಗೆ ಚರ್ಚಿಸೋಣ. . ತನ್ನಲ್ಲಿ ಅಡಗಿಸಿಕೊಂಡಿರುವ ಪೋಷಕಾಂಶಗಳ … Read more