ಯಮಕಿಂಕರರು: ಒಂದು ಭಯಾನಕ ಸತ್ಯಕಥೆ: ಪ್ರಸಾದ್ ಕೆ.

  1987 ರ ದಿನಗಳು ಕೆನಡಾದ ಓಂಟಾರಿಯೋ ಪ್ರೊವಿನ್ಸಿನ ಸ್ಕಾರ್-ಬೋರೋ ಭಾಗದಲ್ಲಿ ಸೂರ್ಯ ಎಂದಿನಂತೆ ಮುಳುಗುತ್ತಾ ಕತ್ತಲೆಯ ಚಾದರವನ್ನು ಮೆಲ್ಲಗೆ ಎಳೆಯುತ್ತಿದ್ದ. ಅತ್ತ ಸಂಜೆಯೂ ಅಲ್ಲದ, ಇತ್ತ ಪೂರ್ಣ ಪ್ರಮಾಣದ ರಾತ್ರಿಯೂ ಇಲ್ಲದ ಈ ಹೊತ್ತಿನಲ್ಲಿ ಕೈ-ಕೈ ಹಿಡಿದು ಪಾರ್ಕುಗಳಿಗೆ ಹೋಗುವ ಜೋಡಿಗಳು, ವಾಕಿಂಗಿಗೆ ತೆರಳುವ ವೃದ್ಧರು, ಬಿಯರ್ ಕುಡಿಯುವ ನೆಪದಲ್ಲಿ ಸಂಗಾತಿಗಳನ್ನು ಅರಸಿಕೊಂಡು ಹೋಗುವ ಹದಿಹರೆಯದ ಯುವಕ-ಯುವತಿಯರು ಹೀಗೆ ಹಲವು ಬಗೆಯ ಜನರು ತಮ್ಮದೇ ಗುಂಗಿನಲ್ಲಿ ಅಡ್ಡಾಡುವುದು ಇತರರಂತೆ ಸ್ಕಾರ್-ಬೋರೋ ನಿವಾಸಿಗಳಿಗೂ ಹೊಸದೇನಲ್ಲ. ಆದರೆ ಕಳೆದ … Read more

ಹೊಸ ಸ್ನೇಹ: ಅನಂತ ರಮೇಶ್

ಬೆಳಿಗ್ಗೆ ಬೆಡ್ ಕಾಫ಼ಿ ಕುಡಿಯುವ ಅಭ್ಯಾಸ ಅಪ್ಪನ ರಗಳೆಯ ಮಾತುಗಳಿಂದ ನೆನ್ನೆಯಿಂದಲೆ ವಿನೀತ ನಿಲ್ಲಿಸಿದ್ದಾನೆ. ಹಲ್ಲುಜ್ಜಿ,  ಕೈಕಾಲು ಮುಖ ತೊಳೆದು ದೇವರ ಮನೆ ಎದುರು ನಿಂತು ಕೈ ಮುಗಿದ ನಂತರವೆ ಅಮ್ಮ ಅವನಿಗೆ ಹಾಲು ತರುತ್ತಾಳೆ.  ಕೈಗೆ ಸಿಕ್ಕಿದ ಪುಸ್ತಕ ನೋಡುತ್ತ ಕುಳಿತ ಸ್ವಲ್ಪ ಹೊತ್ತಿಗೆ, " ವಿನೂ, ಬೇಲಾನನ್ನು ಹೊರಗೆ ಕರೆದುಕೊಂಡು ಹೋಗು" ಅನ್ನುತ್ತಾಳೆ ಅಮ್ಮ. ಬೇಲಾನ ಕೊರಳಿಗೆ ಸರಪಳಿ ಹಾಕಿ ಹವಾಯಿ ಮೆಟ್ಟಿ ವಿನೀತ ಬೆಳಗಿನ ಬಿಸಿಲಿಗೆ ಮೈಯೊಡ್ಡಿ ನಡೆಯುತ್ತಾ ಇವತ್ತು ಕ್ಲಾಸಲ್ಲಿ ಯಾವ … Read more

ಮರಳಿ ಬಂದನೆ ದೀಪು: ನಾಗರತ್ನಾ ಗೋವಿಂದನ್ನವರ.

ಮುಸ್ಸಂಜೆಯ ಸಮಯ ಕಡಲಿನ ಅಲೆಗಳು ಜೋರಾಗಿ ದಂಡೆಗೆ ಅಪ್ಪಳಿಸುತ್ತಾ ಇದ್ದರೂ ಅವುಗಳ ಕಡೆ ಗಮನ ಕೊಡದೆ ತನ್ನ ಇರುವನ್ನೆ ಮರೆತು ಮರಳಿನಲ್ಲಿ ಏನೆನೊ ಚಿತ್ತಾರಗಳನ್ನು ಬರೆಯುವುದರಲ್ಲಿ ಮಗ್ನಳಾಗಿದ್ದಳು ಸರೋಜಾ. ಅದೆಷ್ಟು ಹೊತ್ತು ಹಾಗೆ ಬರೆಯುತ್ತಿದ್ದಳೊ ತಕ್ಷಣ ಏನೊ ನೆನಪಾದವಳಂತೆ ಮೆಲಕ್ಕೆದ್ದು ವೇಗವಾಗಿ ನಡೆಯುತ್ತಾ ಲಾಡ್ಜ್‍ನ್ನು ತಲುಪಿದಳು. ಎದುರಿಗೆ ಬರುತ್ತಿದ್ದ ಸರೋಜಾಳನ್ನು ನೋಡಿದ ಕಿರಣಗೆ ವಿಪರೀತ ಕೋಪಬಂದು ಎಲ್ಲಿ ಹೋಗಿದ್ದೆ ನಿನಗಾಗಿ ಅದೆಷ್ಟೊತ್ತು ಅಂತ ಕಾಯೋದು. ಎಲ್ಲಿಯೂ ಹೋಗಿಲ್ಲಾ ನಡಿರಿ ಎನ್ನುತ್ತಾ ಅವನೊಡನೆ ಹೆಜ್ಜೆ ಹಾಕಿ ರೂಮಿನೊಳಗೆ ಹೋದಳು. … Read more

ಆಹಾ..ಬೆಂಗಳೂರು!!: ಎಸ್.ಜಿ.ಶಿವಶಂಕರ್,

ಪದೇಪದೇ ನಿಟ್ಟುಸಿರುಬಿಡುತ್ತಿದ್ದ್ದ್ದೆ! ಏನೋ ಒಂದು ರೀತಿಯ ಅಧೀರತೆ! ದುಗುಡ! ಯಾವ ಕೆಲಸವನ್ನೂ ಮಾಡಲಾರದೆ ಟಿವಿಯತ್ತ ನೋಡುತ್ತಿದ್ದೆ. ಜನಪ್ರಿಯ ಸೀರಿಯಲ್ಲಿನ ನಾಲ್ಕುನೂರ ಇಪ್ಪತ್ತನೆಯ ಎಪಿಸೋಡು ಬಿತ್ತರವಗುತ್ತಿತ್ತು! ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಮೂಲ ಕತೆ ಹಳ್ಳ ಹಿಡಿದಿದೆ ಎನ್ನುವುದು ಗೊತ್ತಿದ್ದರೂ ರಬ್ಬರಿನಂತೆ ಎಳೆಯುತ್ತಿದ್ದರು! ನನ್ನವಳು ಹುರಿಳಿಕಾಯಯನ್ನು ಚಟಚಟನೆ ಮುರಿಯುತ್ತಾ, ತುಟುಪಿಟಿಕ್ಕನ್ನದೆ ಸೀರಿಯಲ್ಲಿನಲ್ಲಿ ಕಣ್ಣು ನೆಟ್ಟಿದ್ದಳು. ನಾಲ್ಕು ನಿಮಿಷ ಸೀರಿಯಲ್ಲಿನ ನಂತರ ಐದು ನಿಮಿಷದ ಜಾಹೀರಾತು! ಮತ್ತೆ ನಾಲ್ಕು ನಿಮಿಷ ಸೀರಿಯಲ್ಲು ಹೀಗೆ ಸಾಗಿತ್ತು ಸೀ..ರಿ..ಯಲ್ಲು! ದೀರ್ಘ ಜಾಹೀರಾತಿನ ನಡುವೆ ಮನೆಯವಳು … Read more

ಮದರ್ಸ್ ಡೇ: ಪಾರ್ಥಸಾರಥಿ ಎನ್

ಸರೋಜಮ್ಮನವರಿಗೆ ಏಳುವಾಗಲೆ ಎಂತದೋ ಇರುಸುಮುರುಸು. ಎದ್ದು ಮುಖ ತೊಳೆದು ಕಾಫಿ ಕುಡಿಯಬೇಕಾದವರು,  ಎದ್ದು ಹತ್ತು ನಿಮಿಶವಾದರು ಹಾಸಿಗೆ ಮೇಲೆ ಕುಳಿತಿದ್ದರು. ನಂತರ ಎದ್ದು ಮುಖತೊಳೆದು ಅಡುಗೆ ಮನೆಗೆ ಹೋಗಿ ಸೊಸೆ ಮಾಡಿಕೊಟ್ಟ ಕಾಫಿ ಪಡೆದು, ನಡುಮನೆಗೆ ಬಂದು ಸೋಪಾ ಮೇಲೆ ಕುಳಿತರು. ಕಾಫಿ ಕುಡಿಯುತ್ತಿದ್ದರೂ, ಅದೆಂತದೋ ಹಿಂಸೆ, ಬಲಗಡೆ ಪಕ್ಕೆಯಲ್ಲಿ ಸಣ್ಣ ನೋವು.  ಅಲ್ಲಿಯೆ ಮತ್ತೊಂದು ಸೋಪದಲ್ಲಿ ಅಂದಿನ ಪತ್ರಿಕೆ ಹಿಡಿದು ಅದರಲ್ಲೆ ಮುಳುಗಿದ್ದ ಮಗ ಗೋಕುಲ್ ಕಡೆ ನೋಡಿದರು. ಅವನ ಮುಖದಲ್ಲಿ ಗಂಭೀರತೆ. ಮಗನ ಕೈಲಿ … Read more

ಪಂಜು ಕಾವ್ಯಧಾರೆ: ಪ್ರವೀಣಕುಮಾರ್. ಗೋಣಿ, ಈರಣ್ಣ ಬೆಂಗಾಲಿ, ಸುನೀತಾ ಕುಶಾಲನಗರ, ಕು.ಸ.ಮಧುಸೂದನ ನಾಯರ್

ನಾ   ಏನನ್ನಲಿ ? ಬಿಕ್ಕಳಿಸಿ  ಹೊರಹಾಕಿದ ದುಃಖದ  ಕುರುಹೇ ಇರದಂತೆ  ಮಂದಹಾಸ ಬೀರುವ ನಿನ್ನ  ಪರಿಗೆ  ನಾ  ಏನನ್ನಲಿ ? ಹೆಡೆಬಿಚ್ಚಿ  ಕುಣಿವ ನರಳಿಕೆಯ  ಬಚ್ಚಿಟ್ಟು ಅರಳಿದಾ  ಸುಮದಂತೆ ಕಂಗೋಲಿಸುವಾ ನಿನ್ನ  ಪರಿಗೆ  ನಾ  ಏನನ್ನಲಿ ? ಅಲೆಯಾಗಿ  ಬರುವ ವೇದನೆಗಳ ಒಳಗವಿತಿಟ್ಟು ಶಾಂತ  ಸಾಗರದಂತೆ ಸಹನೆಯ ಹೆಪ್ಪಾಗಿಸಿಕೊಂಡ ನಿನ್ನ  ಪರಿಗೆ  ನಾ ಏನನ್ನಲಿ ? -ಪ್ರವೀಣಕುಮಾರ್. ಗೋಣಿ           ಜೀವ ಜಲ ನೀರು ನಮಗೆ ಜೀವನಾಧಾರ ನೀರಿಗಿಲ್ಲ ಯಾವುದೇ … Read more

ಲಕ್ಷ್ಮೀ ಹಿಂಡು – ಪಂಚು ತಂಡ!: ಅಖಿಲೇಶ್ ಚಿಪ್ಪಳಿ

ರಹ! ರಹ!! ರಹ!!! ಎನ್ನುವ ಪಿಸುಧ್ವನಿಗಿಂತ ಕೊಂಚ ದೊಡ್ಡದಾದ ಧ್ವನಿ ಕೇಳಿ ನಿಂತದ್ದು ಬರೋಬ್ಬರಿ 8 ಅಡಿ ಎತ್ತರದ ಕಾಡಾನೆ ಲಕ್ಷ್ಮಿ ಮತ್ತು ಅದರ ಜೊತೆಗಿರುವ 25ಕ್ಕೂ ಹೆಚ್ಚು ಆನೆಗಳಿರುವ ಹಿಂಡು. ಧ್ವನಿಸಿದ್ದು, 5 ಅಡಿ ಎತ್ತರದ, ಶಾಶ್ವತವಾದ ನೌಕರಿಯಿಲ್ಲದ ಬರೀ 200 ರೂಪಾಯಿಗಳಿಗೆ ದಿನಗೂಲಿಗೆ ದುಡಿಯುವ ಪಂಚಾನನ್ ನಾಯಕ್ ಎಂಬ ಅರಣ್ಯ ಇಲಾಖೆಯ ವಾಚರ್!! 25ರ ಸಂಖ್ಯೆಯಲ್ಲಿರುವ ಆನೆಯ ಹಿಂಡಿಗೆ ಲಕ್ಷ್ಮೀಯೇ ನಾಯಕಿ. ಪಂಚಾನನ್ ಧ್ವನಿ ಕೇಳುತ್ತಿದ್ದಂತೆ, ಇಡೀ ಹಿಂಡು ಸ್ತಬ್ಧವಾಯಿತು. ಇಡೀ ಗುಂಪಿನ ವಯಸ್ಕ … Read more

ಕತೆಯಾಗದ ಕತೆ: ಪ್ರಶಸ್ತಿ

ಅದೆಷ್ಟೋ ಕಥೆಗಳು ಹುಟ್ಟೋ ಮೊದಲೇ ಸತ್ತಿರುತ್ತವೆ. ಒಂಚೂರು ಕಾಯೋ ತಾಳ್ಮೆಯಿಲ್ಲದ ಕತೃವಿನಿಂದ,ಖ್ಯಾತಿಯ ಹಿಂದೇ ಕಳೆದು ಹೋದ ಸ್ಪೂರ್ತಿಯಿಂದ. ಒಮ್ಮೆ ವಾವೆನಿಸಿದ್ದನ್ನೇ ಮತ್ತೆ ಮರುಸೃಷ್ಠಿಸೋ ಧಾವಂತದಲ್ಲಿ,ಹೊಸ ಪ್ರಯತ್ನ ಮತ್ತೆ ಸೋಲಿನತ್ತ ದೂಕಬಹುದೇನೋ ಎಂಬ ಆತಂಕದಲ್ಲಿ,ಬಾರದ ಬಹುಮಾನಗಳ ಕನವರಿಕೆಯಲ್ಲಿ, ಹಾರ-ತುರಾಯಿಗಳ, ಸನ್ಮಾನದ ಶಾಲುಗಳ ಮತ್ತೆ ಮತ್ತೆ ಹೊಚ್ಚಿಕೊಳ್ಳೋ ಹಪಾಹಪಿಯಲ್ಲಿ ಮುಂಚಿನ ಕತೆಗಾರ ಕಳೆದುಹೋಗಿರುತ್ತಾನೆ. ಬಹುಪರಾಕುಗಳ ಪಟಾಕಿಯ ಸದ್ದು ಕಿವಿಯ ಕಿವುಡಾಗಿಸೋ ಮುನ್ನ ಪ್ರಸಿದ್ದಿಯ ನಗರಿಯಿಂದ ಒಂದಿಷ್ಟು ದೂರ ಬಂದು ಒಂದಿಷ್ಟು ತಣ್ಣಗಿರೋ ಬೆಟ್ಟ ಹತ್ತಿ ಒಂದರೆಗಳಿಗೆ ಕೂತರೆ, ದೂರದೂರದ ದೃಶ್ಯ … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕೋಳಿ ಮಾರಾಟಗಾರ ನಜ಼ರುದ್ದೀನ್‌ ಒಂದು ದಿನ ನಜ಼ರುದ್ದೀನ್‌ ಪೇಟೆಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಲವು ವ್ಯಾಪಾರಿಗಳು ಪುಟ್ಟಪುಟ್ಟ ಗಿಳಿಗಳನ್ನು ತಲಾ ಒಂದಕ್ಕೆ ೨೦೦ ದಿನಾರ್‌ಗಳಂತೆ ಮಾರಾಟ ಮಾಡುತ್ತಿದ್ದದ್ದನ್ನು ಗಮನಿಸಿದ. ಅವನು ಆಲೋಚಿಸಿದ: ‘ಇಷ್ಟು ಪುಟ್ಟದಾಗಿರುವ ಒಂದು ಗಿಳಿಗೆ ೨೦೦ ದಿನಾರ್‌ ಬೆಲೆ ಇದ್ದರೆ ನನ್ನ ಮನೆಯಲ್ಲಿ ಇರುವ ದೊಡ್ಡ ಕೋಳಿಯ ಬೆಲೆ ಖಂಡಿತವಾಗಿಯೂ ೨೦೦ ದಿನಾರ್‌ಗಳಿಗಿಂತ ಅನೇಕ ಪಟ್ಟು ಹೆಚ್ಚು ಇರಲೇಬೇಕು.’ ಮಾರನೆಯ ದಿನ ನಜ಼ರುದ್ದೀನ್‌ ಪೇಟೆಬೀದಿಗೆ ತನ್ನ ಕೋಳಿಯಡನೆ ಬಂದ, ದೊಡ್ಡ ಮೊತ್ತದ ಹಣಕ್ಕೆ ಅದನ್ನು … Read more

ಗೋವಿಂದಯ್ಯನವರ ಗೃಹಬಂಧನ:ಕಿರಣ್ ಕುಮಾರ್ ಕೆ. ಆರ್.

'ನಾಳೆ ಅಪ್ಪನಿಗೆ ಟೌನಿಗೆ ಹೋಗ್ಲಿಕ್ಕೆ ಹೇಳ್ಬೇಕು.', ಎಂದುಕೊಂಡ ರಾಜಮೂರ್ತಿ. ಅಪ್ಪ ಗೋವಿಂದಯ್ಯನವರಿಗೆ ಎಂಬತ್ತರ ಆಸುಪಾಸು. ಅವರದು ಮೊದಲಿನಿಂದಲೂ ಸ್ವಲ್ಪ ದುರ್ಬಲ ಶರೀರ. ಶಾರೀರವೂ ಅಷ್ಟೆ, ದುರ್ಬಲ. ಆದರೂ ಅವರದು ಬಿಡುವಿಲ್ಲದ ಓಡಾಟ. ಒಂದೆಡೆ ಸುಮ್ಮನೆ ಕುಳಿತವರಲ್ಲ. ಎಲ್ಲೋ ಒಂದು ಮದುವೆ ಎಂದರೆ ಅಡಿಗೆಗೆ ಸಹಾಯಕ್ಕೆ, ಇನ್ನೆಲ್ಲೋ ಪೂಜೆ ಎಂದರೆ ಅಲ್ಲಿಗೆ 'ಸುಧಾರಿಸಲಿಕ್ಕೆ', ಮತ್ತೆಲ್ಲೋ ಶ್ರಾದ್ಧವೆಂದರೆ ಅಲ್ಲಿಗೂ ಕೆಲಸದಲ್ಲಿ ಕೈ ಜೋಡಿಸಲಿಕ್ಕೆ – ಒಟ್ಟಿನಲ್ಲಿ ಯಾವ ಸಮಾರಂಭವಾದರೂ ಗೋವಿಂದಯ್ಯ ಅಲ್ಲಿರುತ್ತಿದ್ದರು. ಅವರ ಜೀವನವಿಡೀ ಅವರು ಮಾಡಿದ್ದು ಇದನ್ನೇ. 'ಈ … Read more

ಪ್ರಾಯ.. ಪ್ರಾಯ..ಪ್ರಾಯ..: ಪ.ನಾ.ಹಳ್ಳಿ.ಹರೀಶ್ ಕುಮಾರ್

ಹರೆಯದ ಮಾತು ಬಲು ಸೊಗಸು, ಅಂದವಾಗಿರುವುದೆಲ್ಲ ನನ್ನದೆಂಬ ಭಾವನೆ, ಮೀಸೆ ಚಿಗುರುವ ವಯಸು, ನಾವೀನ್ಯತೆಗೆ ಚಡಪಡಿಸುವ ಮನಸು, ಸೊಲನ್ನೊಪ್ಪದೇ ಬರೀ ಗೆಲುವೇ ಬೇಕೆಂಬ ಹಂಬಲ, ಹದಿನೈದು ದಾಟಿ ಬಂದ ಈ ವಯಸ್ಸು ನೋಡಿದ್ದೆಲ್ಲಾ ಸುಂದರವಾಗೇ ಕಾಣಬೇಕು, ಕೇಳಿದ್ದೆಲ್ಲಾ ಸಂಗೀತವೇ ಆಗಿರಬೇಕು, ಕಷ್ಟಕಾರ್ಪಣ್ಯಗಳಿಲ್ಲದೇ ಕೇವಲ ಸುಖದಲ್ಲೇ ಒರಳಾಡಬೇಕೆಂಬ ತುಡಿತ ಈ ಹರೆಯದ್ದು. ಮನ್ಮಥನನ್ನೂ ನಾಚಿಸುವ ರಸಿಕತೆ, ಮದಕರಿಯನ್ನೂ ಮೀರಿಸುವ ಧೈರ್ಯ, ಜಗತ್ತನ್ನೇ ಗೆಲ್ಲಬಲ್ಲ ಆತ್ಮವಿಶ್ವಾಸ ಈ ಹುಚ್ಚುಕೋಡಿ ಮನಸ್ಸಿನದು. ಪರಾವಲಂಬನೆಯಿಂದ ಹೊರಬಂದು ಸ್ವಾವಲಂಬಿ ಜೀವನದತ್ತ ಮುಖಮಾಡುವ ಮಧ್ಯಂತರ ಅವಧಿಯೇ … Read more