ಮೂರು ಗ್ರಾಮದ ಪರಿಸರ ಸಮಸ್ಯೆ: ಅಕ್ಷಯ ಕಾಂತಬೈಲು

ಪರಿಸರವು ಸಕಲ ಜೀವಗಳ ಚಟುವಟಿಕೆಯ ಮಡಿಲು. ಹಗಲು- ಇರುಳು ಮರಳಿ ಮರಳಿ ಮುರಳಿಯ ನಾದದ ತೆರದಿ ಬರುತ್ತಾ ಹೊಗುತ್ತಾ ಇದ್ದರೂ ಪರಿಸರ ಮಾತ್ರ  ಧ್ಯಾನಸ್ಥ ಸ್ಥಿತಿಯಿಂದ ತನ್ನೊಡಲ  ಸಕಲ ಜೀವಗಳ ಬೇಕು ಬೇಡಗಳನ್ನು  ಅದಾವುದೋ ಮಾಯೆಯ ರೀತಿಯಲ್ಲಿ ನೋಡಿಕೊಳ್ಳುತ್ತಿದೆ. ಉಲ್ಕೆಯೊಂದು ನಭವ ಛಿದ್ರಿಸಿ ಧರೆಗಪ್ಪಳಿಸಿದಂತೆ ಪರಿಸರಕ್ಕೆ ಸಮಸ್ಯೆಯೊಂದು ಬಂದೊದಗಿದರೆ ಸಾಕು ಅಪಾಯದ ಸಂಕೋಲೆ ಬೆಳೆಯತೊಡಗುತ್ತದೆ. ಸಂಕೊಲೆ ಬೆಳೆದು ಬೆಳೆದು ಜೀವಸಂಕುಲಕ್ಕೆ ಬಿಗಿಯಾಗಿ ಬಂಧಿಸಲ್ಪಡುತ್ತದೆ.   ಹಸಿರು ಸೀರೆಯುಟ್ಟ ದೇವತೆಯ ಹಾಗೆ ಕೊಡಗಿನ ಚೆಂಬು, ಸಂಪಾಜೆ ಜೊತೆಗೆ ಪೆರಾಜೆ … Read more

ಗುರುತ್ವದ ಅಂಕಿತವಿರಬಹುದೇನೋ..? ಬ್ರಹ್ಮನೆಂಬ ಹೆಸರು…: ರೋಹಿತ್ ವಿ. ಸಾಗರ್

’ಕಾಲು ಜಾರಿದರೆ ಸೊಂಟ ಮುರಿಯುತ್ತದೆ’ ಎಂಬುವುದರಿಂದ ಹಿಡಿದು ’ಆಕಾಶಕ್ಕೆ ಉಗಿದರೆ ಮುಖಕ್ಕೆ ಬೀಳುತ್ತದೆ’ ಎಂಬ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದರೆ, ಮೇಲಿದ್ದ ವಸ್ತು ಅಥವಾ ಮೇಲಕ್ಕೆಸೆದ ವಸ್ತು ಕೆಳಗೇ ಬೀಳಬೇಕು ಅನ್ನುವುದು ಎಷ್ಟೊಂದು ಸಹಜಕ್ರಿಯೆಯಲ್ಲವೇ ಎನಿಸಿಬಿಡುತ್ತದೆ. ನಾವು ಹುಟ್ಟಿದಾಗಿನಿಂದಲೂ ನೋಡುತ್ತಿರುವ, ನಾವು ಆಗಬಾರದೆಂದುಕೊಂಡರೂ ಆಗೇ ಆಗುವ ಹಲವು ಕ್ರಿಯೆಗಳಲ್ಲಿ ಇದೂ ಒಂದಾದ್ದರಿಂದ, ಇಂತಹ ವಿಷಯಗಳು ನಮ್ಮ ಕುತೂಹಲದಿಂದ ಪ್ರಾಯಶಃ ದೂರ ಸರಿದು ಬಿಟ್ಟಿವೆ. ಆದರೆ ನ್ಯೂಟನ್ ಎಂಬ ಭೌತಶಾಸ್ತ್ರಜ್ಞ ನಮ್ಮ ಹಾಗೆ ಸಹಜವಾಗಿ ನೋಡದೆ ಆ ಕ್ರಿಯೆಯಲ್ಲಿ ಅಡಗಿಕೊಂಡಿದ್ದ ವಿಶೇಷತೆಯನ್ನು … Read more

ಪಾದಗಟ್ಟಿ: ಆನಂದ ಈ. ಕುಂಚನೂರ

    II ಶ್ರೀ ಕಾಡಸಿದ್ಧೇಶ್ವರ ಪ್ರಸನ್ನ II ದಿ: 13-09-2010 ಮಾನ್ಯರೇ, ನಮ್ಮೂರಿನ ಮಗನಂತಿದ್ದ ಶ್ರೀ ಕಾಡಸಿದ್ಧೇಶ್ವರರ ವರಪುತ್ರನೆನೆಸಿದ್ದ ಕಾಡಪ್ಪನು  ನಿನ್ನೆ ರಾತ್ರಿ 2 ಗಂಟೆಗೆ ವಿಧಿವಶನಾಗಿರುತ್ತಾನೆ ಎಂದು ತಿಳಿಸಲು ವಿಷಾದವೆನಿಸುತ್ತದೆ. ಇಂದು ಮುಂಜಾನೆ 10 ಗಂಟೆಗೆ ನಡೆಯುವ ಅವನ ಅಂತ್ಯಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬೇಕೆಂದು ವಿನಂತಿ.   –  ಬನಹಟ್ಟಿಯ ದೈವಮಂಡಳಿ. ಹೀಗೊಂದು ಸಂಗತಿ ಊರಿನ ಪ್ರಮುಖ ನಾಮಫಲಕಗಳ ಮೇಲೆ ರಾರಾಜಿಸುತ್ತಲೇ ಎಲ್ಲರ ಗಂಟಲು ಉಬ್ಬಿಬಂದಿದ್ದುವು. 'ಯವ್ವಾs, ದೈವದ ಮಗಾsನ ಹ್ವಾದಲ್ಲಬೇ…' ಎಂದು ಹೆಂಗಸರು ಜಮಾಯಿಸುವುದರೊಂದಿಗೆ, 'ಈ … Read more

ಕನ್ನ: ಅನಿತಾ ನರೇಶ್ ಮಂಚಿ

ಇದೊಂದು ವಿದ್ಯೆ ಮನುಷ್ಯರು ಸ್ವತಃ ಕಲಿತದ್ದಾಗಿರಲಿಕ್ಕಿಲ್ಲ. ಯಾಕೆಂದರೆ ಹೆಚ್ಚಾಗಿ ಇಂತಹ ಕೆಲಸಗಳ ಕ್ರೆಡಿಟ್ಟನ್ನು ಇಲಿಗಳೋ, ಹೆಗ್ಗಣಗಳೋ, ಏಡಿಗಳೋ ತೆಗೆದುಕೊಂಡು ಮನುಷ್ಯರ ಗುರುಗಳು ನಾವೇ ಎಂದು ಫೋಸ್ ಕೊಡುತ್ತವೆ. ಅಂತಹ ಅತ್ಯುತ್ತಮ ವಿದ್ಯೆ  ಯಾವುದೆಂದರೆ ’ಕನ್ನ ಹಾಕುವುದು ಅಥವಾ ಕೊರೆಯುವುದು’… ಹಾಗೆ ನೋಡಿದರೆ ಯಾವ ವಿದ್ಯೆಯೂ ಮನುಷ್ಯನ ಸ್ವಂತದ್ದಲ್ಲವೇ ಅಲ್ಲ ಬಿಡಿ. ’ಎಲ್ಲವಂ ಬಲ್ಲಿದರಿಂದ ಕೇಳಿ, ನೋಡಿ, ಮಾಡಿ’ಯೇ ಕಲಿತದ್ದು. ಆದರೆ ಆ ವಿದ್ಯೆಗಳಲ್ಲಿ ಮನುಷ್ಯ ಎಷ್ಟು ಪಳಗಿಬಿಡುತ್ತಾನೆ ಎಂದರೆ ಕಲಿಸಿದ ಗುರುವೇ ತಲೆಬಾಗಿ ಪ್ರಣಾಮ ಮಾಡುವಷ್ಟು. ಇರಲಿ … Read more

ಬೆಂಗಳೂರ ಅತೀ ಹಳೆಯ ದೇಗುಲದ ಬಗ್ಗೆಯೊಂದಿಷ್ಟು: ಪ್ರಶಸ್ತಿ

ಜೀ ಕನ್ನಡ ವಾಹಿನಿಯ ಡಿವೈಡೆಡ್ ಅನ್ನೋ ಕಾರ್ಯಕ್ರಮದಲ್ಲೊಂದು ಪ್ರಶ್ನೆ. ದೊಮ್ಮಲೂರಲ್ಲಿರೋ ಚೊಕ್ಕನಾಥಸ್ವಾಮಿ ದೇವಸ್ಥಾನ ಕಟ್ಟಿಸಿದರು ಯಾರು ? ೧)ಯಲಹಂಕ ನಾಡ ಪ್ರಭುಗಳು ೨)ಚೋಳರು ೩)ಮೈಸೂರ ಅರಸರು. ಅವತ್ತು ನಾನಂದುಕೊಂಡತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೂ ಹೇಳಿದ ಉತ್ರ ಯಲಹಂಕ ನಾಡ ಪ್ರಭುಗಳು. ಬೆಂಗ್ಳೂರಿಗೆ ಚೋಳರೆಲ್ಲಿಂದ ಬರಕ್ಕಾಗುತ್ತೆ ? ಮೈಸೂರರಸರು ಬೆಂಗ್ಳೂರಿಗೆ ಬಂದ್ಯಾಕೆ ದೇವಸ್ಥಾನ ಕಟ್ಟುಸ್ತಾರೆನ್ನೋ ಲಾಜಿಕ್ಕು. ಆದ್ರೆ ಅದು ತಪ್ಪು. ! ಚೊಕ್ಕನಾಥಸ್ವಾಮಿ ಅಥವಾ ಚೊಕ್ಕಪೆರುಮಾಳ್ ದೇವಸ್ಥಾನವನ್ನು ಸುಮಾರು ಕ್ರಿ.ಶ ೧೨೦೦ ರ ಸುಮಾರಿಗೆ  ಕಟ್ಟಿಸಿದ್ದು ಚೋಳರಸ ರಾಜರಾಜ ಚೋಳ … Read more

ಕವಿತೆಗಳು: ಸಿಪಿಲೆ ನಂದಿನಿ, ಸಂತೆಬೆನ್ನೂರು ಫೈಜ್ನಟ್ರಾಜ್, ನವೀನ್ ಮಧುಗಿರಿ, ನಾಗರಾಜ ಎಸ್. ಹಣಗಿ

ಕೆಂಪು ನಕ್ಷತ್ರದ ಹೂ ತೇಲುವ  ಬೆಳ್ಳಿ ಮೋಡಗಳ  ಜೀವಗಳಲಿ ಸಂಗ್ರಾಮ ಕೆಂಪುಮಳೆ ಬಿದ್ದರೆ ತರಗೆಲೆ ತುಂತುರ ಹನಿಯೊಳಗೆ ಬೆಳಕು..! ನಕ್ಷತ್ರದ ಹೂಗಳಲಿ ಸಂಭ್ರಮ ಎದೆಯ ನೋವ ರಕ್ತದೊಳಗೆ ಕಾಡು ಜನರಿಗೆ ಹರ್ಷ ಕೆಂಪು ನಕ್ಷತ್ರದ ಹೂವು ಮಳೆ ಇಬ್ಬನಿಗಳ ರಂಬಿಸುವ  ಅನಂತ  ಆಕಾಶವೇಕೆ ಶೂನ್ಯ? ಪ್ರಭುತ್ವ ಜೀವಗಳಲಿ ಬಿನ್ನತೆ ಏತಕೆ?  ಹಸಿರುಬೇಟೆ ಹೆಸರಲಿ ನಿತ್ಯ ಮಾರಣ ಹೋಮ ತರಗಲೆಯೊಳಗೆ  ಬಲಿಯಾದವರೆಲ್ಲ ಮಳೆಕಾಡ ನೆಲದೆದೆಯ ಒಂದೇ  ರಕ್ತದ ಸಹೋದರರು    ಕಾಡು ಮಲೆಗಳಲಿ ವಿಶಿಷ್ಟತೆಯ ಸೊಗಸು ದಮನಿಯೊಳಗೆ ಲುಪ್ತವಾಗಿ … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಶಿಷ್ಯನಾದ ಕಳ್ಳ ಒಂದು ಸಂಜೆ ಶಿಚಿರಿ ಕೋಜುನ್‌ ಶ್ಲೋಕಗಳನ್ನು ಪಠಿಸುತ್ತಿದ್ದಾಗ ಹರಿತವಾದ ಖಡ್ಗಧಾರೀ ಕಳ್ಳನೊಬ್ಬ ಒಳಕ್ಕೆ ಪ್ರವೇಶಿಸಿ ಹಣ ಅಥವ ಪ್ರಾಣ ಎರಡರಲ್ಲೊಂದು ನೀಡಬೇಕೆಂಬ ಒತ್ತಾಯಪೂರ್ವಕ ಬೇಡಿಕೆ ಮುಂದಿಟ್ಟ. ಶಿಚಿರಿ ಅವನಿಗೆ ಇಂತು ಹೇಳಿದ: “ನನ್ನ ನೆಮ್ಮದಿ ಕೆಡಿಸಬೇಡ. ಆ ಪೆಠಾರಿಯ ಒಳಗೆ ಹಣವಿದೆ, ನೋಡು.” ಆನಂತರ ಅವನು ಪಠನವನ್ನು ಮುಂದಿವರಿಸಿದ. ತುಸು ಸಮಯದ ನಂತರ ಪಠನ ನಿಲ್ಲಿಸಿ ಕರೆದು ಇಂತು ಹೇಳಿದ: “ಅಲ್ಲಿರುವುದೆಲ್ಲವನ್ನೂ ತೆಗೆದುಕೊಳ್ಳ ಬೇಡ. ನಾಳೆ ತೆರಿಗೆ ಕಟ್ಟಲೋಸುಗ ನನಗೆ ಸ್ವಲ್ಪ ಹಣ … Read more

ಮುಗಿಲಿನ ತುಂಬ ಮುತ್ತಿನ ಬೀಜ: ಸಚೇತನ

ನೀಲ ಪಟದ ಮೇಲೆ ಚಿತ್ರಗಳು ಸಾಕಷ್ಟಿದ್ದರೂ ಕೆಲವೊಮ್ಮೆ ದಟ್ಟ ವಿಷಾದವೊಂದು ತೆಳ್ಳಗೆ ಆವರಿಸಿರುತ್ತದೆ. ಅಂಕಿಯ ಲೆಕ್ಕಕೆ ಸಿಗದ ಚುಕ್ಕಿಗಳನ್ನೆಲ್ಲ  ಕಪ್ಪು ಮೋಡ ಮುಚ್ಚಿಟ್ಟಿರುತ್ತದೆ. ಆಕಾಶ ಕಪ್ಪಲ್ಲ, ಕಡು ನೀಲ, ಚುಕ್ಕಿ  ಖಾಲಿಯಾಗದ ಕಾಲ.   ಸು ರಂ ಎಕ್ಕುಂಡಿ ಕವನವೊಂದರ ಕೆಲವು ಸಾಲುಗಳು : ಮುಗಿಲಿನ ತುಂಬ ಮುತ್ತಿನ ಬೀಜ  ಬಿತ್ತುವವರೇ ಇಲ್ಲ  ಬಣ್ಣದ ಲೋಕದ ಬೆಳಕಿನ ತೇರ  ಎಳೆಯುವವರೇ ಇಲ್ಲ  ನಂದನವನದ ರೆಕ್ಕೆಯ ಕುದುರೆಯ  ಹತ್ತುವವರೆ ಇಲ್ಲ  ಕಡಲಿನ ಭಗವದ್ಗೀತೆಗೆ ಭಾಷ್ಯವ  ಬರೆಯುವವರೇ ಇಲ್ಲ  ನಮಗೂ … Read more

ಇದುವೇ ಜೀವನ: ಪಾರ್ಥಸಾರಥಿ ಎನ್.

ಬೀ ಪ್ರಾಕ್ಟಿಕಲ್ ಮ್ಯಾನ್,  ನೋಡಿ ಇದಕ್ಕಿಂತ ಬೇರೆ ನಿರ್ದಾರ ತೆಗೆದುಕೊಳ್ಳುವುದು ಸಾದ್ಯವಿಲ್ಲ, ಯೋಚಿಸಿ ಡಾ!!ಜೋಷಿ ಹೇಳುತ್ತಿರುವಾಗ , ಮಧು ಗರಬಡಿದವನಂತೆ ಕುಳಿತಿದ್ದ,  ಏನಾಯಿತು ?  ತನ್ನ ಹಾಗು ಕೀರ್ತಿಯ ಕನಸುಗಳೆಲ್ಲ ಕರಗಿ ಹೀಗೆ ವಿಕಾರವಾಗುವದೆಂಬ ನಿರೀಕ್ಷೆಯು ಅವನಿಗಿರಲಿಲ್ಲ.  ಅಪ್ಪ ಅಮ್ಮ ನೋಡಿ ತಾನು ಮೆಚ್ಚಿ ಮದುವೆಯಾದ ಪ್ರೀತಿಯ ಪತ್ನಿ ಕೀರ್ತಿ. ಮದುವೆಯಾಗಿ ಆರು ವರ್ಷಗಳ ನಂತರ ತಾನು ತಂದೆಯಾಗುತ್ತಿರುವ ಸಮಾಚಾರ ತಿಳಿದಾಗ ಕುಣಿದಾಡಿಬಿಟ್ಟಿದ್ದ. ಮದುವೆಯಾದ ಮೊದಲು ಮೂರುವರ್ಷ ಮಕ್ಕಳು ಬೇಡವೆಂದು ಮುಂದೆ ಹಾಕಿದ್ದಾಗಿತ್ತು, ನಂತರ ಮೂರು ವರ್ಷ … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೮): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಈ ವರದಿಯು ಇಎಸ್‌ಝಡ್೧ರಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡುವುದನ್ನು ನಿರಾಕರಿಸುತ್ತದೆ. ಕರ್ನಾಟಕ ಪವರ್ ಕಾರ್ಪೊರೇಷನ್‌ನವರು ಗುಂಡ್ಯ ಜಲವಿದ್ಯುತ್ ಯೋಜನೆಯಲ್ಲಿ ಮುಳುಗಡೆಯಾಗಲಿರುವ ಪ್ರದೇಶದ ವ್ಯಾಪ್ತಿಯನ್ನು ೮೦% ಕಡಿಮೆ ಮಾಡುವುದಾಗಿ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಹೊಂಗದಹಳ್ಳ ಆಣೆಕಟ್ಟು ಕಟ್ಟುವುದನ್ನು ಕೈ ಬಿಡಲಿದೆ. ಆದಾಗ್ಯೂ ಬೆಟ್ಟದ ಕುಮರಿ ಪ್ರದೇಶವೂ ಇಎಸ್‌ಝಡ್೧ರ ಅಡಿಯಲ್ಲೇ ಬರುತ್ತದೆ. ಹೀಗೆಯೇ ಅತಿರಪಳ್ಳಿ ಜಲವಿದ್ಯುತ್ ಯೋಜನೆಯ ವ್ಯಾಪ್ತಿಯೂ ಇಎಸ್‌ಝಡ್೧ರ ಅಡಿಯಲ್ಲೇ ಬರುತ್ತದೆ. ಇದರಿಂದಾಗಿ ವರದಿಯು ಕೇಂದ್ರ ಪರಿಸರ ಇಲಾಖೆಗೆ ಯಾವುದೇ … Read more

ಸಾಮಾನ್ಯ ಜ್ಞಾನ (ವಾರ 66): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚಿಗೆ ೨೦೧೪ರ ಸಾಲಿನ ಪಂಪ ಪ್ರಶಸ್ತಿ ಯಾರಿಗೆ ನೀಡಲಾಯಿತು? ೨.    ಕಿಮ್ಸ್ (KIMS)ನ ವಿಸ್ತೃತ ರೂಪವೇನು? ೩.    ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು? ೪.    ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ? ೫.    ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ ಸಂಬಂಧಿಸಿದಾಗಿದೆ? ೬.    ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕನಾರು? ೭.    ಕೇಳು ಕಿಶೋರಿ ಎಂಬ ವೈದ್ಯಕೀಯ ಪುಸ್ತಕವನ್ನು ಬರೆದವರು ಯಾರು? ೮.    ಭಾರತದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಯಾವುದು? ೯.    ವಿಶ್ವ ಹವಮಾನ … Read more