ಭೌತ ವಿಜ್ಞಾನದ ಬೆನ್ನೇರಿ, ನಿಸರ್ಗದಲ್ಲೊಂದು ಸವಾರಿ: ರೋಹಿತ್ ವಿ. ಸಾಗರ್

ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸುವು ಜನಜೀವನಕೆ ಎಂದು ಡಿ.ವಿ.ಜಿಯವರು ’ಮಂಕುತಿಮ್ಮನಕಗ್ಗ’ದಲ್ಲಿ ಹೇಳಿರುವಂತೆ ಯಾವ ಆಚರಣೆ, ಸಂಪ್ರದಾಯ ಮತ್ತು ತಿಳುವಳಿಕೆಗಳು ವಿಜ್ಞಾನದೊಂದಿಗೆ ಬೆಸೆಯುತ್ತವೆಯೋ ಅವುಗಳಿಂದ ಮಾತ್ರ ಮನುಕುಲದ ಉನ್ನತೀಕರಣ ಸಾಧ್ಯ. ಆದರೆ ಈ ವಿಜ್ಞಾನವನ್ನು ಜನರಿಗೆ ತಲುಪಿಸುವುದು ಪ್ರಯಾಸದ ಕೆಲಸ ಏಕೆಂದರೆ ಎಲ್ಲಾ ಜನರಿಗೂ ಇಂಗ್ಲೀಷ್ ಬರುವುದಿಲ್ಲ ; ವಿಜ್ಞಾನದ ಪದಗಳು ಕನ್ನಡದಲ್ಲಿ ಸಿಗುವುದೇ ಇಲ್ಲ ಎನ್ನುವುದು ಕೆಲವು ಜ್ಞಾನಿಗಳ ಆಂಬೋಣ. ಇಂತಹವರ ಬಗ್ಗೆ ಜಗದೀಶ್ಚಂದ್ರ ಬೋಸ್ ಹಿಂದೊಮ್ಮೆ ಹೇಳಿದ್ದರಂತೆ ನಿಮಗೆ ಬಂಗಾಳಿ ಬಾಷೆಯಲ್ಲಿ ವಿಜ್ಞಾನವನ್ನು … Read more

ನೆನಪುಗಳ ಮಾತು ಮಧುರ!: ರುಕ್ಮಿಣಿ ನಾಗಣ್ಣನವರ

ಎಷ್ಟು ಹೊತ್ತಾಯಿತು ಬಸ್ಸಿನಲ್ಲಿ ಕುಳಿತು. ಯಾವಾಗ ಬಿಡುತ್ತೀರಿ? ನಮಗಿನ್ನೂ ತುಂಬ ಮುಂದೆ ಹೋಗಬೇಕಿದೆ. ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಅಸಮಾಧಾನ ವ್ಯಕ್ತಪಡಿಸುತ್ತ ಕಂಡಕ್ಟರ್ನನ್ನು ದಬಾಯಿಸಿ ಕೇಳುತ್ತಿದ್ದ. ಬೇಗ ಬಿಡಿ ಸರ್ ತುಂಬ ಹೊತ್ತಾಯಿತಲ್ಲ ಎಂದು ಇನ್ನೇನು ನಾನೂ ಹೇಳಬೇಕು ಎನ್ನುವಷ್ಟರಲ್ಲಿ ಅಪ್ಪಯ್ಯನ ಕಾಲು ಬಂತು. ಹೊರಟ್ರ ಅಂತ ಕೇಳುತ್ತಿದ್ದರು. ಹೌದು. ಬಸ್ಸಿನಲ್ಲಿದ್ದೇನೆ. ಅವರಿಗೆ ರಜೆ ಸಿಕ್ಕಿಲ್ವಂತೆ ನಾಳೆ ಬರ್ತಾರೆ ಅಪ್ಪ ಅಂದೆ. ಆಯ್ತು. ಹುಷಾರಾಗಿ ಬಾ ಅಂತ ಹೇಳಿ ಕಾಲ್ ಕಟ್ ಮಾಡಿದ್ರು. ಕಿಟಕಿ … Read more

ಹಗಲು ರಾತ್ರಿಗಳ ಗೊಂದಲದಲ್ಲಿ…: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ವೆಂಕಣ್ಣ ಯಾರೋ ಒದ್ದೆಬ್ಬಿಸಿದಂತೆ ನಿದ್ದೆಯಿಂದ ಎದ್ದು ಕೂತಿದ್ದ. ಅವನ ನಿದ್ರಾ ಭಂಗಕ್ಕೆ ಕಾರಣವಾಗಿದ್ದು ಗಾಳಿಕುಳಿ ಗೆ ಸಿಕ್ಕು ನಡುಗುತ್ತಿದ್ದ ವಿಮಾನವೋ ಅಥವಾ ಅದರ ಪರಿಣಾಮ ಬಿದ್ದ ಕನಸಿನಿಂದಲೋ ಅವನಿಗೆ ಅರ್ಥವಾಗದಾಯ್ತು. ಆದರೂ ಅವನು  ಕಂಡ ಆ ಕನಸು ಭಲೆ ವಿಚಿತ್ರವಾಗಿತ್ತು. ಅದರಲ್ಲಿ, ಅ ದೊಡ್ಡ ವಿಮಾನದ ತುಂಬಾ ಇವನು ಹಾಗೂ ಜರ್ಮನ್ ವಿಮಾನ ಸಖಿ ಇಬ್ಬರೇ ಇದ್ದರು. ಇವನಿಗೆ ಖುಷಿಯಾಯ್ತಾದರೂ ಆಕಾಶದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ತಮ್ಮಿಬ್ಬರ ಬಿಟ್ಟು ಉಳಿದವರೆಲ್ಲಿ ಎಂಬ ಆತಂಕದಲ್ಲಿ, ಎಲ್ರೂ ಎಲ್ಲಿಗೆ ಹೋದ್ರು? … Read more

ವೇದ ಸುಳ್ಳಾದರೂ ಗಾದೆ ಸುಳ್ಳಾಗದು!: ಎಸ್.ಜಿ.ಶಿವಶಂಕರ್

   "ಹಲೋ ?" ಮಾಮೂಲಿಗಿಂತ ತುಸು ಏರಿದ ವಿಶ್ವನ ದ್ವನಿ ಟೆಲಿಫೋನಿನಲ್ಲಿ ಮೊಳಗಿತು. "ಹೇಗಿತ್ತು ಒಥೆಲೋ ನಾಟಕ" ಹಿಂದಿನ ದಿನ ನಾಟಕ ನೋಡುವುದಾಗಿ ವಿಶ್ವ ಹೇಳಿದ್ದು ನೆನಪಾಗಿ ಕೇಳಿದೆ. "ನಾಟಕದ ಮನೆ ಹಾಳಾಯಿತು! ನನ್ನ ಜೀವನ ನಾಟಕದ ದುರಂತ ದೃಶ್ಯ ನೆನ್ನೆ ನಡೆಯಿತು!" ವಿಶ್ವನ ಧ್ವನಿ ಭಾರವಾಗಿತ್ತು. ಶುದ್ಧ ವೇದಾಂತಿಯ ಮಾತಿನ ಧಾಟಿ ಕಂಡಿತು. ವಿಶ್ವನ ಮಾತಿಗೆ ವಿವರಣೆ ಬೇಕಾಗಿರಲಿಲ್ಲ. ಅವನು ಹೆಂಡತಿಯೊಂದಿಗೆ ಜಗಳವಾಡಿದ್ದಾನೆ ಎಂದು ನನಗಾಗಲೇ ತಿಳಿದುಹೋಗಿತ್ತು! ಎರಡು ದಶಕಗಳ ಸ್ನೇಹದಲ್ಲಿ ವಿಶ್ವನ ವಿಶ್ವದರ್ಶನವಾಗಿತ್ತು. ನನ್ನ … Read more

ಕತ್ತೆಯ ಸಂಗೀತ ಕಛೇರಿ (ಆಡಿಯೋ ಕತೆ): ಸುಮನ್ ದೇಸಾಯಿ

ಹೀಂಗೊಂದ ಕಾಡಿನೊಳಗ ಒಂದು ಕತ್ತೆ, ಒಂದು ನರಿ ಇದ್ದುವಂತ. ಅವು ಭಾಳ ಪ್ರಾಣದ ಗೆಳೆಯರಾಗಿದ್ರಂತ. ಯಾವಾಗಿದ್ರು ಜೋಡಿ ಜೋಡಿನ ಇರ್ತಿದ್ದುವಂತ. ಯಾವಾಗ್ಲು ಕೂಡಿನ ಆಟಾ ಆಡತಿದ್ದುವಂತ. ಆಹಾರ ಹುಡಕತಿದ್ದುವಂತ.  ಹಿಂಗಿರಬೇಕಾದ್ರ ಒಂದ ದಿನ ಕತ್ತೆಗೆ ಕಲ್ಲಂಗಡಿ ಹಣ್ಣು ತಿನಬೇಕನಿಸ್ತಂತ. ಅಷ್ಟನಿಸಿದ್ದ ತಡಾ,” ದೊಸ್ತ ಇವತ್ತ ನಂಗ ಕಲ್ಲಂಗಡಿ ಹಣ್ಣು ತಿನಬೇಕನಸೇದ, ನಡಿ ಕಲ್ಲಂಗಡಿ ತೋಟಕ್ಕ ಹೋಗೊಣು” ಅಂತ ನರಿ ಗೆ ಹೇಳ್ತಂತ. ಅದಕ್ಕ ನರಿ, ಆತ ನಡಿ ಹಂಗಂದ್ರ ಅಂತ, ನರಿ ಮತ್ತ ಕತ್ತೆ ಇಬ್ಬರು ಕಲ್ಲಂಗಡಿ … Read more

ಎನ್ನರಸಿ, ಚೆನ್ನರಸಿ ಎಲ್ಲಿರುವೆ ? ಹೇಗಿರುವೆ ?: ನಂದೀಶ್ ಟಿ.ಜಿ.

ಕೆಲವು ವ್ಯಕ್ತಿಗಳು ನಮ್ಮ ಪಾಲಿಗೆ  ಎಂದಿಗೂ ನಿಲುಕದ ನಕ್ಷತ್ರವಾಗಿ ಉಳಿದುಬಿಡುತ್ತಾರೆ. ಮೊದಲಿಂದಲೂ ನಮ್ಮಿಂದ ಒಂದು ತೆರನಾದ ಅಂತರ ಕಾಯ್ದುಕೊಂಡು, ನಮ್ಮ ಬೇಕು ಬೇಡಗಳಿಗೆ ಸ್ಪಂದಿಸದೆ ಹಾಗೆಯೇ ಇದ್ದರೆ, ತೀರಾ ಈ ಪರಿ ನೋವು ಕಾಡುತ್ತಿರಲಿಲ್ಲ. ಒಂದು ಹೊತ್ತಲ್ಲಿ ನಮ್ಮಿರುವನ್ನೇ ಮರೆಸುವಷ್ಟು ನಮ್ಮವರಾಗಿ ಎಲ್ಲವು ಹಾಯೇನಿಸುವಂತಿರುವಾಗ ಸಂಬಂಧವನ್ನು ಕಳಚಿಕೊಂಡು  ಎದ್ದು ನಡೆದು ಬಿಡುತ್ತಾರೆ. ಒಂದಿನಿತು ಸುಳಿವು ಕೊಡದೆ, ಒಂದಿಷ್ಟು ನೊಂದುಕೊಳ್ಳದೆ ನಮ್ಮಿಂದ ನಮ್ಮವರು ದೂರ ದೂರಕ್ಕೆ ಹೆಜ್ಜೆ ಹಾಕುವಾಗ ನಮ್ಮೀ ಮನಸು ಅಕ್ಷರಶಃ  ಬೆಂಕಿಗೆ ಮೈಯೊಡ್ಡಿದ ಕಾವಲಿ.  ಮರೆತುಬಿಡಬೇಕು … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಪ್ರತಿಯೊಂದು ಕ್ಷಣವೂ ಝೆನ್‌ ಝೆನ್‌ ವಿದ್ಯಾರ್ಥಿಗಳು ತಾವು ಇತರರಿಗೆ ಬೋಧಿಸುವ ಮುನ್ನ ತಮ್ಮ ಗುರುಗಳೊಂದಿಗೆ ಕನಿಷ್ಠ ಎರಡು ವರ್ಷ ಕಾಲ ತರಬೇತಿ ಪಡೆಯಬೇಕಿತ್ತು. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿ ಬೋಧಕನಾಗಿದ್ದ ಟೆನ್ನೋ ಗುರು ನ್ಯಾನ್‌-ಇನ್ ಅನ್ನು ಭೇಟಿ ಮಾಡಿದ. ಆ ದಿನ ಮಳೆ ಬರುತ್ತಿತ್ತು, ಟೆನ್ನೋ ಮರದ ಚಡಾವುಗಳನ್ನು ಹಾಕಿದ್ದ ಮತ್ತು ಛತ್ರಿಯನ್ನೂ ಒಯ್ದಿದ್ದ. ಕುಶಲ ಪ್ರಶ್ನೆ ಮಾಡಿದ ನಂತರ ನ್ಯಾನ್‌-ಇನ್ ಹೇಳಿದ: “ನೀನು ನಿನ್ನ ಮರದ ಚಡಾವುಗಳನ್ನು ಮುಖಮಂಟಪದಲ್ಲಿ ಬಿಟ್ಟಿರುವೆ ಎಂಬುದಾಗಿ ಭಾವಿಸುತ್ತೇನೆ. ನಿನ್ನ ಛತ್ರಿಯು … Read more

ಮೂರು ಕವಿತೆಗಳು: ಜಯಶ್ರೀ ದೇಶಪಾಂಡೆ, ಶ್ರೀದೇವಿ ಕೆರೆಮನೆ, ರಮೇಶ್ ನೆಲ್ಲಿಸರ

ಪ್ಯಾರಾಡೈಸ್ ಲಾಸ್ಟ್….!                                                               ಜುಳುಜುಳು ಹರಿದ ಮಳೆಯ ತಿಳಿ ನೀರಲ್ಲಿಳಿದ     ಹಳೇ ಪೇಪರಿನ ಹಡಗು, ಆ ದಂಡೆ ಈ ದಂಡೆ ವಾಲಿ ತೇಲಿ ಕೊನೆಗೆ ಹೊಡೆದ ಗೋತ, ಕಳಕೊಂಡ ಹಡಗಿನ ದ:ಖ ಮರೆಸಲು … Read more

ಕನಸುಗಳು ನೆನಪುಳಿಯೋದು ಹೇಗೆ ?: ಪ್ರಶಸ್ತಿ ಪಿ.

ಹಗಲುಗನಸು, ರಾತ್ರಿಯ ಸೊಗಸಾದ ಕನಸು, ಬೆಚ್ಚಿಬೀಳಿಸೋ ಕನಸು, ಬೆಳಗು ಯಾವಾಗಾಗತ್ತೋ ಎಂದು ಕನವರಿಸುವಂತೆ ಮಾಡೋ ಸಾಧನೆಯ ಕನಸು..ಹೀಗೆ ಕನಸಲ್ಲೂ ಎಷ್ಟು ವಿಧ ಅಲ್ವಾ ?  ಆಫೀಸಲ್ಲೇ ಕೂತು ತೂಕಡಿಸಿ ತೂಕಡಿಸಿ ಬೀಳೋ ತಿಮ್ಮನಿಗೆ ಬೀಳಬಹುದಾದ ಹಗಲುಗನಸ ಬಗ್ಗೆಯಲ್ಲ ನಾ ಹೇಳಹೊರಟಿರುವುದು ಈಗ. ರಾತ್ರಿಯ ಸೊಗಸಾದ ಪರಿಸರದಲ್ಲಿ, ಕರ್ಲಾನೋ, ಕಂಬಳಿಯೋ, ಚಾಪೆಯೋ,ಜಡ್ಡಿಯೋ, ಜಮಖಾನವೋ,  ಕೊನೆಗೆ ಬರಿನೆಲದ ಮೇಲೇ ಮಲಗಿ ನಿರ್ದಿಸುತ್ತಿರುವಾಗ ನಮಗೆ ಬೀಳೋ ಸಹಜಗನಸುಗಳ ಬಗ್ಗೆ ನಾ ಹೇಳಹೊರಟಿದ್ದು. ಕನಸೆಂದರೇನು ?  ಈ ಕನಸೆಂಬುದು ನಾವು ನಿತ್ಯಜೀವನದಲ್ಲಿ ಕಂಡುಕೇಳಿದ … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೭): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . ಮಾಧವ ಗಾಡ್ಗಿಳ್ ವರದಿ: ಉದ್ದೇಶಿತ ಜನವಸತಿ ಪಾರಿಸಾರಿಕ ಸೂಕ್ಷ್ಮ ಪ್ರದೇಶಗಳ ಪ್ರಸ್ತಾವನೆ: ತಮಿಳುನಾಡು: ವಾಲ್‌ಪರಿ, ಕೊಡೈಕೆನಾಲ್ ಮತ್ತು ನೀಲಗಿರಿ ಜಿಲ್ಲೆ ಕೇರಳ: ಮಂಡಕೋಲ್, ಪನತಾಡಿ, ಪೈತಾಲ್‌ಮಾಲ, ಬ್ರಹ್ಮಗಿರಿ-ತಿರುನೇಲಿ, ವಯನಾಡ್, ಬನಸುರ-ಕುಟ್ಟಿಯಾಡಿ, ನೀಲಂಬರ್-ಮೇಪಾಡಿ, ಸೈಲೆಂಟ್‌ವ್ಯಾಲಿ, ಅಮರಂಬಲಂ, ಸಿರುವಾಣಿ, ನೀಲಂಪತೈ, ಅತ್ರಿಪಳ್ಳಿ, ಕಾರ್ಡ್‌ಮಮ್ ಹಿಲ್ಸ್, ಪೆರಿಯಾರ್, ಅಗಸ್ತ್ಯಮಾಲ. ಆರು ರಾಜ್ಯಗಳ ವಿವಿಧ ಜಿಲ್ಲೆಗಳ ತಾಲ್ಲೂಕುವಾರು ಪ್ರಸ್ತಾವಿತ ಸೂಕ್ಷ್ಮಪ್ರದೇಶಗಳ ಪಟ್ಟಿ ರಾಜ್ಯ ಜಿಲ್ಲೆ ತಾಲ್ಲೂಕು ಇಎಸ್‌ಝಡ್1 ತಾಲ್ಲೂಕು ಇಎಸ್‌ಝಡ್2 ತಾಲ್ಲೂಕು ಇಎಸ್‌ಝಡ್3 ಗುಜರಾತ್ 3 1 1 … Read more

ನನ್ನ ಮೊದಲ ಲೇಖನ: ಶೀತಲ್

ಮೊದಲ ಬಾರಿಗೆ ಬ್ಯಾಟ್ ಹಿಡಿದು, ಮೊದಲ  ಬಾಲ್ ನಲ್ಲೇ ಸಿಕ್ಸರ್ ಹೊಡೆದ ಖಿಲಾಡಿಗಳು ಬಹುಶಃ ಯಾರೂ ಇಲ್ಲವೇನೋ, ಹಾಗೆಯೇ ಮೊದಲ ಬಾರಿಗೆ ಪತ್ರಿಕೆಯಲ್ಲೊಂದು ಲೇಖನ ಎಲ್ಲಾ ಸಣ್ಣ-ಪುಟ್ಟ ಬರಹಗಾರರಂತೆ ನನ್ನದೂ ಒಂದು ಕನಸಾಗಿದೆ. ಹೇಗೆ ಸಿಕ್ಸರ್ ಹೊಡೆಯಲು ಆ ಮೊದಲ ಬಾರಿ ಬ್ಯಾಟ್ ಹಿಡಿದ ಖಿಲಾಡಿಗೆ ಆಗಲಿಲ್ಲವೋ ಹಾಗೆಯೇ ನನ್ನ ಲೇಖನವೂ  ಪ್ರಕಟವಾಗಲಿಲ್ಲ … ಸಿಕ್ಸರ್ ಹೊಡೆಯಲಾಗಲಿಲ್ಲ ಎಂದ ಮಾತ್ರಕ್ಕೆ ಪ್ರಯತ್ನವನ್ನು ಬಿಡಲು ಸಾಧ್ಯವೇ? ಖಂಡಿತಾ ಇಲ್ಲ …. ಬರೆಯುತ್ತಲೇ ಇದ್ದೇನೆ ಆದರೆ ಯಾವ ಬಾಲ್ ಗೆ … Read more

ಅವರವರ ಭಾವಕ್ಕೆ: ಅಭಿಲಾಷ್ ಟಿ ಬಿ

"ಮಾನವ ಮೊದಲಿನಿ೦ದಲೂ ನಿಸರ್ಗದ ಜೊತೆಯಲ್ಲಿ ಅವಿನಾಭಾವ ಸ೦ಬ೦ಧವನ್ನು ಬೆಳೆಸಿಕೊ೦ಡಿದ್ದಾನೆ. ಜಗದ್ಗುರು ಶ೦ಕರಚಾರ್ಯರು ಆನ೦ದಲಹರಿಯಲ್ಲಿ "ಶಿವಾ ಶಕ್ತ್ಯಾ" ಎ೦ದು ಉಲ್ಲೇಖಿಸಿದ ಹಾಗೆ ಪ್ರಕೃತಿ ಪುರುಷ ಮತ್ತು ಶಕ್ತಿಯ ಸಮಾಗಮ. ಈ ವಿಚಾರಗಳು ನಮ್ಮ ಗ್ರಾಮೀಣ ಜನರಲ್ಲಿ ಹೇಗೆ ಮೂಡಿಬ೦ದಿದೆ ಎ೦ಬುದನ್ನು ನಾನು ಇಲ್ಲಿ ಸ೦ಕ್ಷಿಪ್ತವಾಗಿ ಚಿತ್ರಿಸಲು ಪ್ರಯ್ನತಿಸಿದ್ದೇನೆ" -ಅಭಿಲಾಷ್ ಟಿ ಬಿ                  ಎಲ್ಲೋ ದೂರದಲ್ಲಿ ಅರ ಬಡೆಯುವ ಶಬ್ದ ಕೇಳುತಿತ್ತು. ಬರುಬರುತ್ತಾ ಕ್ಷೀಣ ದನಿ ಏರುತ್ತಾ ಹೋಯಿತು.  ಸಿಟಿಯಿ೦ದ ಬ೦ದಿದ್ದ ನನ್ನ … Read more

ಲಾಸ್ಟ್ ಬೇಂಚ್: ಪದ್ಮಾ ಭಟ್

ಲೇ ಮಚ್ಚ ಇವತ್ತಾದ್ರೂ ಬೇಗ ಕ್ಲಾಸಿಗೆ ಹೋಗೋಣ  ಇಲ್ಲಾಂದ್ರೆ ಹಿಂದಿನ ಬೇಂಚಿನಲ್ಲಿ ಯಾರಾದ್ರೂ ಕೂತ್ಕೊಂಡ್ ಬಿಡ್ತಾರೆ.. ಆಮೇಲೆ ದಿನವಿಡೀ ಮುಂದಿನ ಬೇಂಚೆ ಗತಿ.. ಎಂದು ಆತ ಹೇಳುತ್ತಿದ್ದ.. ಅರೇ! ಹಿಂದಿನ ಬೇಂಚಿಗೆ ಇಷ್ಟೆಲ್ಲಾ ಕಾಂಫೀಟೇಶನ್ನಾ? ಎಂದು ಅಂದ್ಕೋಬೇಡಿ ಕಾಲೇಜಿನಲ್ಲಿ ಯಾವಾಗಲೂ ಮುಂದಿನ ಬೇಂಚಿಗಿಂತ ಹಿಂದಿನ ಬೇಂಚಿಗೆ, ಕಾಂಫೀಟೇಶನ್ ಜಾಸ್ತಿ.. ಇಷ್ಟವಿಲ್ಲದ ಪ್ರೊಫೆಸರ್ ಪಾಠವನ್ನು ಮುಂದಿನ ಬೇಂಚಿನಲ್ಲಿ ಕೂತರೆ ಕಷ್ಟಪಟ್ಟು ಕೇಳಲೇಬೇಕಾಗುತ್ತದೆ. ಆದರೆ ಹಿಂದಿನ ಬೇಂಚು ಎನ್ನುವುದು ಒಂಥರಾ ಮನೆ ಇದ್ದಂಗೆ, ಡೆಸ್ಕಿನ ಒಳಗೆ ಪತ್ತೇದಾರಿ ಕಾದಂಬರಿಯನ್ನು ಓದಬಹುದು, … Read more

ಸಾಮಾನ್ಯ ಜ್ಞಾನ (ವಾರ 65): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು? ೨.    ಕೆ.ಎಸ್.ಎಸ್.ಐ.ಡಿಸಿ (KSSIDC)ನ ವಿಸ್ತೃತ ರೂಪವೇನು? ೩.    ಕಬುಕಿ ನೃತ್ಯ ಶೈಲಿ ಯಾವ ದೇಶದ್ದಾಗಿದೆ? ೪.    ಜೀತ ಪದ್ಧತಿಯ ನಿರ್ಮೂಲನಕ್ಕಾಗಿ ೧೯೭೬ರಲ್ಲಿ ಜಾರಿಗೊಳಿಸಲಾದ ಶಾಸನ ಯಾವುದು? ೫.    ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ ಯಾರ ಆಸ್ಥಾನದಲ್ಲಿದ್ದಳು? ೬.    ಭಾರತದ ಮೊಟ್ಟಮೊದಲ ಮೀನುಗಾರಿಕೆಯ ಕಾಲೇಜನ್ನು ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು? ೭.    ಆರ್ಯುವೇದದ ಪಿತಾಮಹ ಯಾರು? ೮.    ವಿಜಯನಗರದ ವಾಟರ್ ಲೂ ಎಂದು ಕರೆಯಲ್ಪಡುವ ಸ್ಥಳ ಯಾವುದು? … Read more