ಧೀಮಂತ ಚೇತನ ಕವಿ ಕಯ್ಯಾರರಿಗೊಂದು ನುಡಿನಮನ: ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ

ನಮ್ಮನ್ನಗಲಿದ ತುಳು-ಕನ್ನಡಿಗರ ಹೆಮ್ಮೆಯ ಧೀಮಂತ ಚೇತನ ಕವಿ ಕಯ್ಯಾರರಿಗೊಂದು ನುಡಿನಮನ ದುಡಿತವೇ ನನ್ನ ದೇವರು, ಲೋಕ ದೇವಕುಲ ಬೆವರೆ ಹೂ ಹಣ್ಣು ಕಾಯ್, ಕಣ್ಣೀರ ತೀರ್ಥಂ ಎಮ್ಮೊಂದಿಗರ ಬಾಳ ಸಾವು ನೋವಿನ ಗೋಳ ಉಂದಿಹೆನು ಸಮಪಾಲ-ನನಗದುವೆ ಮೋಕ್ಷಂ ದುಡಿತಕ್ಕೇ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದ ಕಾಯಕವೇ ಕೈಲಾಸಂ ಎಂ¨ ಬಸವಣ್ಣನವರ ಸತ್ಪಥದಲ್ಲಿ ಸಾಗಿ ಅದರಂತೆ ಬಾಳಿದವರು ಹಿರಿಯ ಧೀಮಂತ ಚೇತನ, ಕನ್ನಡಾಂಬೆಯ ಪುತ್ರರತ್ನ ಹಿರಿಯ ಚೇತನ ಕೈಯ್ಯಾರ ಕಿಞ್ಞಣ್ಣ ರೈ. ಕಾಸರಗೋಡಿನ ಕನ್ನಡ ಪರ ಹೋರಾಟದಲ್ಲಿ ಕೇಳಿ ಬರುವ … Read more

ಒಂದು ದಿನ ಆರು ಸುತ್ತಾಣ: ವಸಂತ ಬಿ ಈಶ್ವರಗೆರೆ

ಸೂರ್ಯ ಪುತ್ರರಾಗಿ ಬಿಟ್ಟಿರುವ ನಮಗೆಲ್ಲ, ಸಿಗೋದು ಒಂದೇ ಒಂದು ದಿನ ವಾರಾಂತ್ಯ ರಜೆ. ಆ ರಜೆಯನ್ನೇ ಹೊಂದಿಸಿಕೊಂಡ ಪ್ರವಾಸಕ್ಕೆ ಸಿದ್ದವಾದರೇ, ಖಂಡಿತ ಒಂದೇ ದಿನದಲ್ಲಿ ಆರು ಸುತ್ತಾಣಗಳನ್ನ ಬೆಂಗಳೂರಿಗೆ 75 ಕಿಲೋ ಮೀಟರ್ ದೂರದ ಚಿನ್ನದ ನಾಡು ಕೋಲಾರ ಜಿಲ್ಲೆಯ ಸುತ್ತಮುತ್ತಲಿನಲ್ಲಿ ನೋಡಬಹುದು. ಧಾರ್ಮಿಕ ಸ್ಥಳಗಳಾದ ಈ ಪ್ರವಾಸಿತಾಣಗಳಿಗೆ ಭೇಟಿ ಕೊಟ್ಟು, ಭಕ್ತಿಯ ಭಾವನೆಯನ್ನ ಮನದಲ್ಲಿ ತುಂಬಿಕೊಳ್ಳುತ್ತಾ, ಸಂಭ್ರಮದಲ್ಲಿ ಒಂದೇ ಒಂದು ರಜೆಯ ಮಜೆಯನ್ನ ಅನುಭವಿಸಬಹುದು.  ಜಾಲೀ ರೈಡ್ ಮಾಡೋ ಪ್ರವಾಸ ಹೊರಟರೂ, ಸಂಸಾರ ಸಮೇತರಾಗಿ ಹೊರಟರೂ, … Read more

ಕೆಂಪುಕೋಟೆಯ ಮೇಲಿಂದ ತಿರಂಗದ ಕೆಳಗಿಂದ ಕಂಡ ಕನಸಗಳ ಕುರಿತು: ಪ್ರಶಸ್ತಿ

ಇಂದು ಆಗಸ್ಟ್ ಹದಿನೈದು. ಭಾರತಕ್ಕೆ ಸ್ವಾತಂತ್ರ್ಯ ಬಂದು ೬೮ ವರ್ಷ ತುಂಬಿದ ಅಥವಾ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ೬೯ ನೇ ದಿನ. ರಜೆಯೆಂದು ಹೊದ್ದು ಮಲಗೋ ಬದಲು ಬೆಳಗಾಗೆದ್ದು ಟಿ.ವಿಯ ಮುಂದೆ ಪ್ರತ್ಯಕ್ಷನಾಗಿ ಕೆಂಪುಕೋಟೆಯ ಮೇಲೆ ನಮ್ಮ ಹೆಮ್ಮೆಯ  ತ್ರಿವರ್ಣ ಧ್ವಜ ರಾರಾಜಿಸುವ ಗಳಿಗೆಗಾಗಿ ಕಾಯೋದು ಈ ದೇಶದ ಅದೆಷ್ಟೋ ಕೋಟಿ ಜನರಲ್ಲೊಬ್ಬ ನಾನು. ಬಿಳಿಬಿಳಿಯ ಸಮವಸ್ತ್ರ ತೊಟ್ಟು ಕೈಗೊಂದು ತ್ರಿವರ್ಣದ ಬ್ಯಾಂಡೋ ಜೇಬಿಗೊಂದು ತ್ರಿವರ್ಣದ ಪಿನ್ನೋ ಚುಚ್ಚಿಕೊಂಡು ಬೋಲೋ ಭಾರತ್ ಮಾತಾ ಕೀ ಜೈ ಎನ್ನುತ್ತಾ ಶಾಲಾ … Read more

ಇಲ್ಲಗಳ ನಡುವೆ..: ಅನಿತಾ ನರೇಶ್ ಮಂಚಿ

ಎರಡೂ ಕೈಯಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನು ಹಿಡಿದು ಬ್ಯಾಲೆನ್ಸ್ ಮಾಡ್ತಾ ಕಾರು ಪಾರ್ಕ್ ಮಾಡಿದ ಜಾಗಕ್ಕೆ ನಡೆದುಕೊಂಡು ಬರ್ತಾ ಇದ್ದೆ. ಒಂದು ಕೈಯ ಅವಸ್ಥೆ ಹೇಳತೀರದಾಗಿತ್ತು.ಅದರ  ಎಲ್ಲಾ ಬೆರಳುಗಳೂ ಒಂದೊಂದು ಚೀಲವನ್ನು ಹಿಡಿದುಕೊಂಡಿತ್ತು. ಕಾರು ತಲುಪುವಷ್ಟರಲ್ಲಿ ಕೈ ಬೆರಳುಗಳು ಮುರಿದೇ ಹೋಗಬಹುದೇನೋ ಎನ್ನುವ ಹೆದರಿಕೆಯಲ್ಲಿ ಹೆಜ್ಜೆಗಳು ಓಡಿದಂತೆ ಸಾಗುತ್ತಿತ್ತು. ಇನ್ನೇನು ಕಾರು ತಲುಪಲು ಒಂದು ನೂರು ಹೆಜ್ಜೆಗಳು ಇದೆ ಎನ್ನುವಾಗ ಹಿಂದಿನಿಂದ ಪರಿಚಿತ ಸ್ವರವೊಂದು ನನ್ನನ್ನು ಹಿಡಿದು ನಿಲ್ಲಿಸಿತು. “ಹಬ್ಬದ ಶಾಪಿಂಗಾ?”  ಹೌದೆಂದು ತಲೆಯಾಡಿಸುತ್ತಾ ಅವರೊಡನೆಯೂ ಪ್ರಶ್ನೆ … Read more

‘ಜಾಲದಲ್ಲಿ ಸಮಾನತೆ’ (ಕೊನೆಯ ಭಾಗ): ಜೈಕುಮಾರ್.ಹೆಚ್.ಎಸ್

ಭಾರತದಲ್ಲಿ ಜಾಲದಲ್ಲಿ ಸಮಾನತೆ ಕುರಿತ ಪರಿಸ್ಥಿತಿ: ಸ್ಪರ್ಧಾತ್ಮಕ ವ್ಯವಹಾರ ಆಯೋಗವು ಜಾಲದಲ್ಲಿ ಸಮಾನತೆಯನ್ನು ಭಾರತೀಯ ಟೆಲಿಕಾಂ ಆಪರೇಟರ್ ಗಳು ಉಲ್ಲಂಘಿಸುತ್ತಿದ್ದಾರೆಯೇ ಎಂದು ಪರಿಶೀಲನೆ ನಡೆಸುತ್ತಿತ್ತು. ಅದೇ ಸಮಯದಲ್ಲಿ ದುರದೃಷ್ಟವಶಾತ್, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ವು ಇತ್ತೀಚೆಗೆ ಬಿಡುಗಡೆ ಮಾಡಿರುವ ಒವರ್-ದಿ-ಟಾಪ್ (ಒಟಿಟಿ) ಸೇವೆಗಳನ್ನು ನಿಯಂತ್ರಿಸುವ ಕುರಿತಾದ ಸಮಾಲೋಚನ ಡಾಕ್ಯುಮೆಂಟ್ ಕೇವಲ ಎರಡು ಆಯ್ಕೆಗಳನ್ನು ಮಾತ್ರವೇ ಮುಂದಿಟ್ಟಿದೆ: ಒಂದೋ ಇಂಟರ್ ನೆಟ್ ಸೇವೆಗಳಿಗೆ ಪರವಾನಗಿ ವಿಧಿಸುವುದನ್ನು ಒಪ್ಪುವುದು ಅಥವಾ ಜಾಲದಲ್ಲಿ ಸಮಾನತೆ ಕುರಿತು ರಾಜಿಯಾಗುವುದು. ಟ್ರಾಯ್ … Read more

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ ಭಾಗ – 2: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ [ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ … Read more

ಆತ್ಮೀಯ ಎಂದರೆ soulmate ಅಂತ: ಲಾವಣ್ಯ ಆರ್.

ಹಾಯ್ ಆತ್ಮೀಯ, ತಪ್ಪು ತಿಳಿಯಬೇಡ ನಾನಂದದ್ದು ಆತ್ಮೀಯ ಎಂದು ಪ್ರೇಮಿಯೆಂದಲ್ಲ, ನೀನೆಂದು ನನ್ನ ಪ್ರೇಮಿಯಾಗಿರಲಿಲ್ಲ. ಆತ್ಮೀಯ ಎಂದರೆ soulmate ಅಂತ. ಇದೇನು ಇದ್ದಕಿದ್ದ ಹಾಗೆ ನೀನು ಅನ್ನುತ್ತಿದ್ದಾಳೆ ಅಂತ ಹುಬ್ಬು ಗಂಟಿಕ್ಕಬೇಡ ಇದು ಮನಸಿನ ಮಾತು ಇಲ್ಲಿ ಏಕವಚನ ಬಹುವಚನದ ಲೇಪನ ಅನವಶ್ಯಕ. ಅದು ಎಲ್ಲಿದ್ದೊ ತಿಳಿಯದು, ದಿಢೀರನೆ ಪ್ರತ್ಯಕ್ಷವಾದೆ ನನ್ನಲ್ಲಿ ನೂರಾರು ಬದಾಲಾವಣೆ ತಂದೆ, ಯಾರನ್ನು ಕುಡಿ ನೋಟದಲ್ಲು ನೋಡದವಳು ನಿನ್ನ ಕಿರುಗಣ್ಣಿನ ಕೊನೆಯಲ್ಲಿ ನೋಡುವ ಹಾಗೆ ಮಾಡಿದೆ, ಮಾತಿಗಿಂತ ಮೌನವನ್ನೆ ಆಶ್ರಯಿಸುವವಳಲ್ಲಿ ಆಡಿದರು ಮುಗಿಯದಷ್ಟು … Read more

ಮೂವರ ಕವನಗಳು: ಸಿರಿ, ಶ್ರೀಶೈಲ ಮಗದುಮ್ಮ, ವಿನಾಯಕ ಭಟ್

ಸದ್ದಿಲ್ಲದೇ ಒಳ ನುಗ್ಗಿದವನಿಗೆ ಭದ್ರವಾಗಿ ಮುಚ್ಚಿ, ಕೀಲಿ ಹಾಕಿದ್ದ ನನ್ನೆದೆಯ ಗುಬ್ಬಿ ಬಾಗಿಲನು ನಿನ್ನದೇ ಸ್ವಂತ ಸ್ವತ್ತೆಂಬಂತೆ ರಾಜ ಗಾಂಭೀರ್ಯದಲ್ಲಿ ತೆರೆದು  ಸದ್ದಿಲ್ಲದೇ ಒಳನುಗ್ಗಿ,  ಸಿಂಹಾಸನಾರೂಢನಾದೆಯಲ್ಲೋ ನಿನಗದೆಂತಹ ಸೊಕ್ಕು…? ಇಷ್ಟಾದರೆ ಸಹಿಸಿಕೊಳ್ಳುತ್ತಿದ್ದೆ ಪಾಪ, ಸುಸ್ತಾಗಿದ್ದಿರಬಹುದೇನೋ ಕುಳಿತು ಕೊಂಚ ಸುಧಾರಿಸಿಕೊಳ್ಳಲಿ ಎಂದು ಆದರೆ ಸುಮ್ಮನಿರದ ನೀನು ನನ್ನ ಕನಸುಗಳನ್ನೆಲ್ಲ  ವಶ ಪಡಿಸಿಕೊಂಡೆಯಲ್ಲೋ ನಿನಗದೆಂತಹ ಛಾತಿ…? ಇರಲಿ, ಜುಜೂಬಿ ಕನಸುಗಳಿಗಾಗಿ ಕೊರಗುವುದೇ..? ಹಾಳಾಗಲಿ  ಹೊಸ ಕನಸು ಹೆಣೆದರಾಯಿತು ಎಂದು ನನ್ನ ಮನಸಿಗೆ ಸಮಾಧಾನ ಹೇಳಿ ತಿರುಗಿ ನೋಡುವಷ್ಟರಲ್ಲಿ ನೀನು ನನ್ನ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ದತ್ತು ಹಕ್ಕಿಮರಿಯ ಕತೆ ಒಂದಾನೊಂದು ಕಾಲದಲ್ಲಿ ಹಾರಲಾರದ ಹೆಣ್ಣು ಪಕ್ಷಿಯೊಂದಿತ್ತು. ಕೋಳಿಯಂತೆ ನೆಲದ ಮೇಲೆ ನಡೆದಾಡುತ್ತಿದ್ದ ಅದಕ್ಕೆ ಕೆಲವು ಪಕ್ಷಿಗಳು ನಿಜವಾಗಿಯೂ ಹಾರುತ್ತಿದ್ದವು ಎಂಬುದು ತಿಳಿದಿತ್ತು. ಒಂದು ದಿನ ಅದು ಹಾರುವ ಪಕ್ಷಿಯ ಪರಿತ್ಯಕ್ತ ಮೊಟ್ಟೆಯೊಂದನ್ನು ನೋಡಿತು. ಮೊಟ್ಟೆಯೊಡೆದು ಮರಿ ಹೊರಬರುವ ವರೆಗೆ ಅದಕ್ಕೆ ಕಾವು ಕೊಡಲು ತೀರ್ಮಾನಿಸಿತು. ಯುಕ್ತ ಸಮಯಾನಂತರ ಮೊಟ್ಟೆಯನ್ನು ಒಡೆದುಕೊಂಡು ಮರಿ ಹೊರಬಂದಿತು. ಅದು ಹಾರುವ ಸಾಮರ್ಥ್ಯವಿದ್ದ ಪಕ್ಷಿಯ ಮೊಟ್ಟಯಿಂದ ಹೊರಬಂದ ಮರಿಯಾದ್ದರಿಂದ ಅದಕ್ಕೂ ಹಾರುವ ಸಾಮರ್ಥ್ಯ ಹುಟ್ಟುವಾಗಲೇ ಇತ್ತು. ತುಸು … Read more

ಇವು ನಮ್ಮ ಕನ್ನಡ ಸಿನೆಮಾಗಳ ಹೆಸರುಗಳು!: ಸೂರಿ ಹಾರ್ದಳ್ಳಿ

ತಮ್ಮದು ಕನ್ನಡ ಸಿನೆಮಾ ಎಂದು ತಾವೇ ಕರೆದುಕೊಳ್ಳುವ ಸಿನೆಮಾಗಳಲ್ಲಿ ಭಾಷೆ ಹೇಗಿದೆಯೋ ಗೊತ್ತಿಲ್ಲವಾದರೂ ಅವು ಹೊಂದಿರುವ ಹೆಸರುಗಳು ಹೇಗಿರುತ್ತವೆ ಗೊತ್ತಾ? ಈ ಕೆಳಗಿನವನ್ನು ಓದಿ. 1.    ಪೂರ್ತಿ ಬೇರೆ ಭಾಷೆಯ ಹೆಸರುಗಳು ದುನಿಯಾ, ಲಾಕಪ್ ಡೆತ್, ಮಾಸ್ಟರ್ ಮೈಂಡ್, ರೈನ್ ಕೋಟ್, ಕೇರ್ ಆಫ್ ಫುಟ್‍ಪಾತ್, ಐ ಆ್ಯಮ್ ಇನ್ ಲವ್, ಲವ್ ಯು ಆಲಿಯಾ, ಲವ್ ಬ್ಯಾಂಡ್, ಫೇರ್ ಅಂಡ್ ಲವ್ಲಿ, ಲವ್ ಈಸ್ ಪಾಯ್ಸನ್, ಲವ್ ಇನ್ ಮಂಡ್ಯ, ಡಾರ್ಲಿಂಗ್, ಕ್ರೇಜಿ ಸ್ಟಾರ್, ಲಿಟಲ್ … Read more

ಗಾಲ್ಫ್ ಕ್ಲಬ್ ಗುಂಡುಗೋಷ್ಠಿಯೂ… ಅಲ್ಲಿನ ರೂಲ್ಸೂ…: ಎಚ್.ಕೆ.ಶರತ್

ಗೆಳೆಯನನ್ನು ಭೇಟಿ ಮಾಡಲು ಇತ್ತೀಚೆಗೆ ಮೈಸೂರಿಗೆ ಹೋಗಿದ್ದೆ. ಹೆಂಡತಿ ತವರು ಮನೆಗೆ ಹೋಗಿದ್ದ ಕಾರಣ ‘ಗುಂಡು ಪಾರ್ಟಿ’ಯಲ್ಲಿ ಪಾಲ್ಗೊಳ್ಳುವ ಅವಕಾಶ ಅವನಿಗೆ ಒಲಿದಿತ್ತು. ಅಪರೂಪಕ್ಕೆ ಸಿಗುವ ಇಂಥ ಚಾನ್ಸ್ ಮಿಸ್ ಮಾಡಿಕೊಳ್ಳಬಾರದೆಂದು ಮೈಸೂರಿನಲ್ಲಿದ್ದ ತನ್ನ ಗೆಳೆಯರಿಗೆಲ್ಲ ಕರೆ ಮಾಡಿ ಪಾರ್ಟಿ ಮಾಡುವ ಪ್ಲ್ಯಾನು ಇರುವುದಾಗಿ ತಿಳಿಸಿದ. ಗಾಲ್ಫ್ ಕ್ಲಬ್ ಮೆಂಬರ್ ಆಗಿರುವವನೊಬ್ಬ, ಕ್ಲಬ್‍ಗೆ ಹೋಗೋಣ ಹಾಗಾದ್ರೆ ಅಂತಂದ. ನಾವು ರೆಡಿಯಾದ್ವಿ. ನಮ್ಮನ್ನು ಕರೆದೊಯ್ಯಲು ಬಂದವನು, ನಮ್ಮ ಅವತಾರ ಕಂಡು ಅವಾಕ್ಕಾದ. ಈ ಡ್ರೆಸ್‍ನಲ್ಲಿ ಬಂದ್ರೆ ನಿಮ್ಮನ್ನು ಕ್ಲಬ್ … Read more

“ಮನವ ಗೆದ್ದವನೇ ಮಹಾ ಶೂರ!”: ಹೊರಾ.ಪರಮೇಶ್ ಹೊಡೇನೂರು

            ಗಾಳಿಗಿಂತಲೂ ವೇಗವಾಗಿ ಚಲಿಸುವುದು ನಮ್ಮ "ಮನಸ್ಸು" ಎಂಬುದು ಸರ್ವವಿಧಿತ. ಏಕೆಂದರೆ, ನಮ್ಮ ಮನಸ್ಸಿನಲ್ಲಿ ಒಂದು ವಸ್ತು, ನೋಡಿದ ಸ್ಥಳ, ಕಾಡುವ ಹುಡುಗಿ, ಬೇಡುವ ದೇವರು ಮೊದಲಾದವುಗಳನ್ನು ಕಲ್ಪಿಸಿಕೊಂಡು ಮನಸ್ಸನ್ನು ಹರಿಯಬಿಟ್ಟರೆ ಅಥವಾ ಅಂದುಕೊಂಡರೆ ಸಾಕು, ನಮ್ಮ ಸ್ಮೃತಿಯೊಳಗೆ ಅವುಗಳ ಚಿತ್ರಣ ಹಾದು ಹೋಗಿ ಕಣ್ಣೆದುರೇ ಬಂದಂತೆ ಭಾಸವಾಗುವುದು ಸೃಷ್ಟಿಯ ಅದ್ಭುತ ಕೊಡುಗೆಯಾಗಿದೆ. ಇದೇ ಮನಸ್ಥಿತಿಯ ಈ ಸಾಮರ್ಥ್ಯವನ್ನು ಬಳಸಿಕೊಂಡೇ ಇಂದು ನಾವೆಲ್ಲರೂ ಅಪಾರವಾದ ಜ್ಞಾನವನ್ನು, ಅದರೊಳಗೆ ಜೀವನ ಸೊಬಗನ್ನೂ … Read more