Facebook

Archive for 2015

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ-೩: ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . . (ಮಾಧವ ಗಾಡ್ಗಿಳ್ ವರದಿಯು ೫೭೨ ಪುಟಗಳನ್ನು ಹೊಂದಿದ್ದು, ಅದೇ ಕಸ್ತೂರಿರಂಗನ್ ವರದಿಯು ಬರೀ ೧೫೨ ಪುಟಗಳನ್ನು ಹೊಂದಿದೆಯಾದ್ದರಿಂದ, ಮಾಧವ ಗಾಡ್ಗಿಳ್ ವರದಿಯು ವಿಸೃತವಾಗಿ ವ್ಯಾಖ್ಯಾನಿಸಿದಂತೆ ತೋರಬಹುದು, ಮಾಹಿತಿಗಳ ಅಗಾಧ ವ್ಯತ್ಯಾಸವನ್ನು ಗಮನದಲ್ಲಿರಿಸಿಕೊಂಡು ಓದುಗರು ಸಹಕರಿಸಬೇಕು) ಬೆಂಗಳೂರಿನಲ್ಲಿ ೩೦ನೇ ಮಾರ್ಚ್ ೨೦೧೦ರಂದು ನಡೆದ ಸಭೆಯ ನಂತರದಲ್ಲಿ ಪ್ರೊ:ಮಾಧವ ಗಾಡ್ಗಿಳ್ ಸಮಿತಿ ರಚನೆಯಾಯಿತು. ನಂತರದಲ್ಲಿ ಈ ಸಮಿತಿಯು ೧೪ ಸಭೆಗಳನ್ನು ನಡೆಸಿ ನಿರ್ಣಾಯಕ ಸಭೆಯನ್ನು ೧೬-೧೭ ಆಗಸ್ಟ್ ೨೦೧೧ರಂದು ನಡೆಸಿತು. ಇದಕ್ಕೂ ಪೂರ್ವದಲ್ಲಿ ವಿವಿಧ ಸರ್ಕಾರಿ […]

ಚಿಂತೆಗೆ ಕೊನೆಯುಂಟೆ?: ಮಂಜು ಹಿಚ್ಕಡ್

ಒಮ್ಮೆ ಮೆದುಳಿಗೆ ಹೊಕ್ಕ ಚಿಂತೆಗಳಿಗೆ ಹೊಸತು ಹಳತು ಎನ್ನುವ ಭೇದಬಾವವಿಲ್ಲ. ಕುಳಿತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಮನಸ್ಸನ್ನು ಹೊಕ್ಕ ಚಿಂತೆಗಳು ಆಗಾಗ ಜಾಗ್ರತಗೊಂದು ಕಾಡುತ್ತಿರುತ್ತವೆ. ಇರಲಿ ಎಂದು ಹಾಗೆ ಸುಮ್ಮನೆ ಬಿಡುವಂತಿಲ್ಲ. ಹಾಗೇನಾದರೂ ಬಿಟ್ಟು ಬಿಟ್ಟರೆ ಅದು ಬೆಳೆಯುತ್ತಾ ಹೋಗಿ ಹೆಮ್ಮರವಾಗಿ ಬಿಡುತ್ತದೆ. ಆ ಚಿಂತೆಗಳಿಗೆ ಅದೆಷ್ಟು ಬೇಗ ಪರಿಹಾರ ಕಂಡುಕೊಳ್ಳುತ್ತೇವೋ ಅಷ್ಟು ಒಳ್ಳೆಯದು. ಇದು ಸೋಮನಿಗೂ ಕೂಡ ತಿಳಿದ ವಿಷಯ. ಸೋಮ ಜಾಸ್ತಿ ಓದಿದವನಲ್ಲದಿದ್ದರೂ ತನ್ನ ಅರವತ್ತು ವರ್ಷದ ಅನುಭವದಿಂದಾಗಿ ಅವನಿಗೆ ಅದೆಲ್ಲವೂ ತಿಳಿದ ವಿಚಾರವಾರವೇ. […]

ಸಾಮಾನ್ಯ ಜ್ಞಾನ (ವಾರ 61): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ರವೀಂದ್ರನಾಥ ಠಾಗೂರರ ಪ್ರಥಮ ಕವನ ಸಂಕಲನ ಯಾವುದು? ೨.    ಎಪಿಎಮ್‌ಸಿ (APMC) ನ ವಿಸ್ತೃತ ರೂಪವೇನು? ೩.    ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL) ಕರ್ನಾಟಕದಲ್ಲಿ ಎಲ್ಲಿದೆ? ೪.    ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ ಯಾರು? ೫.    ಉತ್ತರ ಕನ್ನಡ ಜಿಲ್ಲೆಯ ಯಾವ ತಾಲ್ಲೂಕನ್ನು ಗಾಂಧಿನೆಲೆ ಎಂದು ಕರೆಯುತ್ತಾರೆ? ೬.    ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು? ೭.    ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು? […]