ಹಸಿವು ಮತ್ತು ಊಟ: ಅನಿತಾ ನರೇಶ್ ಮಂಚಿ.

             ‘ಒಂದು ಎರಡು  ಬಾಳೆಲೆ ಹರಡು      ಮೂರು ನಾಲ್ಕು  ಅನ್ನ ಹಾಕು  ಐದು ಆರು  ಬೇಳೆ ಸಾರು  ಏಳು ಎಂಟು  ಪಲ್ಯಕೆ ದಂಟು  ಒಂಬತ್ತು ಹತ್ತು  ಎಲೆ ಮುದುರೆತ್ತು ಒಂದರಿಂದ ಹತ್ತು ಹೀಗಿತ್ತು  ಊಟದ ಆಟವು ಮುಗಿದಿತ್ತು ..’ ಈ ಪದ್ಯವನ್ನು ಚಿಕ್ಕಂದಿನಲ್ಲಿ ನಾವೆಲ್ಲಾ ಕಂಠಪಾಠ ಮಾಡಿದವರೇ .. ಆಗೇನೋ ಇದು ಲೆಕ್ಕ ಕಲಿಸುವ ಹಾಡು ಅನ್ನಿಸುತ್ತಾ ಇದ್ದರೆ ಈಗ ಈ ಹಾಡಿಗೆ ಬೇರೆ0iÉುೀ ಅರ್ಥ ಕಟ್ಟುವ … Read more

ಅವಳು ಮತ್ತು ಅಂಗಡಿ: ಅಕ್ಷಯ ಕಾಂತಬೈಲು

     ಮೊಬೈಲಿನ ಕರೆನ್ಸಿ ಖಾಲಿಯಾದರೆ, ರೀಚಾರ್ಚ್ ಮಾಡುವ ಅಂಗಡಿ ಎಷ್ಟು ದೂರವಿದ್ದರೂ ಅಲ್ಲಿಗೆ ದಾಪುಗಾಲಿಡುತ್ತೇವೆ. ದೇವಸ್ಥಾನದಲ್ಲಿ ಮಂಗಳಾರತಿಯ ಹೊತ್ತು ತಪ್ಪಬಾರದೆಂದು ತುರಾತುರಿಯಿಂದ ಹೊರಡುತ್ತೇವೆ. ಇನ್ನೇನು ಕೆಲವೇ ನಿಮಿಷದಲ್ಲಿ ಬಸ್ಸು ಹೊರಡುತ್ತದೆಂದು ಓಡೋಡಿ ಹೋಗುತ್ತೇವೆ. ಹಾಗೆಯೇ ನಾನಿಲ್ಲಿ ಅವಳನ್ನು ನೋಡಲು, ಉನ್ಮತ್ತನಾಗಿ ಬೆಳಗ್ಗೇ ತಪ್ಪದೆ ಅವಳು ಹೊರಡುವ ಹೊತ್ತ ಗೊತ್ತು ಮಾಡಿ ಹೋಗುತ್ತಿರುವೆ. ನಾನು ಹೋಗುವುದಕ್ಕೆ ಪವಿತ್ರ ಉದ್ದೇಶವಿದೆ ಮತ್ತು ಭಾರಿ ತೃಪ್ತಿಯಿದೆ.  ಅವಳೇನು ನೋಡಲು ಚಿತ್ರ ಸುಂದರಿಯರಾದ ಕತ್ರೀನಾ ಅಲ್ಲ, ಐಶ್ವರ್ಯ ರೈನೂ ಅಲ್ಲ. ಒಬ್ಬಳು; … Read more

ಮಲೆನಾಡಿನ ಕಂದರಗಳ ನಡುವೆ: ವಿನೋದ್ ಕುಮಾರ್

..ಹೇ.. ಆಶೋಕ..ರಾಘು.. ಕವಿತಾ.. ಬೇಗ ಬನ್ರೇ.. ಇಲ್ಲಿದೆ ಅದು.. ಬೇಗ ಬನ್ನಿ.. ಸಕತ್ತಾಗಿದೆ ನೋಡೋಕೆ.. ಅಂತ ಕೂಗಿದಳು ವೀಣಾ.. ಮಲೆನಾಡಿನ ಕಾಡಿನ ಆ ಕಡಿದಾದ ಹಾದಿಯಲ್ಲಿ.. ಅದೂ ಜಾರು ರಸ್ತೆ ಬೇರೆ.. ವೀಣಾಳ ಕೂಗಿಗೆ.. ಕವಿತಾ ಮತ್ತು ರಾಘು ಕೂಡಲೇ ವೀಣಾ ಇದ್ದ ಸ್ಥಳಕ್ಕೆ ತಲುಪಿದರು.. ಎಲ್ಲೇ ವೀಣಾ.. ಎಲ್ಲೇ ತೋರಿಸೇ ಬೇಗ.. ಅದೋ ಅಲ್ಲಿ ನೋಡಿ.. ಆ ಮತ್ತಿ ಮರದ ಬಲಭಾಗದ ದೊಡ್ಡ ಕೊಂಬೆ ಇದೆಯಲ್ಲ.. ಅದರ ತುದಿಯಲ್ಲಿ.. ಕೆಂಪು ಕಾಣ್ತಿದೆ ನೋಡಿ ಅದೇ.. ಮಲಬಾರ್ … Read more

ಮರಣ ತರುವ ಬಿಸಿಗಾಳಿ!: ಅಖಿಲೇಶ್ ಚಿಪ್ಪಳಿ

ಮೇ ತಿಂಗಳೆಂದರೆ ಎಲ್ಲೆಡೆ ಬಿಸಿಲು-ತೀರಲಾರದ ಬೇಸಿಗೆ. ಮುಂಗಾರು ಶುರುವಾಗುವ ಮುಂಚಿನ ತಿಂಗಳು. ಒಂಥರಾ ಅನಾಹುತಗಳ ತಿಂಗಳು. ಕೆಲವಡೆ ಹಿಂಗಾರಿನ ಹೊಡೆತಕ್ಕೆ ಸಿಕ್ಕು ನಲುಗುವವರು, ಮತ್ತೆ ಕೆಲವೆಡೆ ಬಿಸಿಲಿನ ತಾಪಕ್ಕೆ ಕರಗುವವರು. ಫಸಲು ಕೈಗೆ ಬರುವಷ್ಟರಲ್ಲಿ ವರುಣನ ಅವಕೃಪೆಯಿಂದಾಗಿ ಬೆಳೆ ನಷ್ಟ, ರೈತನ ಇಡೀ ಶ್ರಮ ನೀರಿನಲ್ಲಿ ಹೋಮ. ಪ್ರತಿವರ್ಷ ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿವೆ. ದಕ್ಷಿಣ ಭಾರತದಲ್ಲೇ ಎರಡು ರೀತಿಯ ನೈಸರ್ಗಿಕ ವಿಕೋಪಗಳ ತಾಂಡವ ನೃತ್ಯ ನಡೆಯಿತು. ಬಳ್ಳಾರಿಯಂತಹ ಬಿರುಬೇಸಿಗೆ ನಾಡಿನಲ್ಲಿ ಆಲಿಕಲ್ಲು ಮಳೆ ಬಂದು ಇಳೆ ಕೊಂಚ … Read more

ದೇಹವೆಂದರೆ………..: ಅಮರ್ ದೀಪ್ ಪಿ.ಎಸ್.

ಸಮಾಧಿ ******  ಮಾಂಸ ಮಣ್ಣಲ್ಲಿ ಕರಗಿ  ಬಳಿಕ ಬಿಕರಿಯಾಗದೇ ಉಳಿವ ಸವೆಯದ ಬಿಡಿ ಮೂಳೆಗಳ ಮುಚ್ಚಿದ ದುಖಾನು …. ಒಂದೆರಡು ವರ್ಷಗಳ ಹಿಂದೆ ಈ ಸಾಲುಗಳನ್ನು ಬರೆದಿದ್ದೆ. ಈ ಸಾವು, ಸಮಾಧಿ ಮತ್ತು ಸುಡುಗಾಡು ಅನ್ನುವಾಗೆಲ್ಲಾ ಒಂದು ಬಗೆಯ ಮನಸ್ಥಿತಿಗೆ ಒಳಗಾಗುತ್ತಲೇ ಇರುತ್ತೇನೆ. ನಾವು ಕೆಲವು ಮಾತಿಗೆ ಕೆಟ್ಟ ಬೇಸರ ಮಾಡಿಕೊಂಡು “ಇದೇನ್ ಸುಡುಗಾಡಲೇ” ಅನ್ನುತ್ತಿರುತ್ತೇವೆ.   ಯಾರಾದರೂ ಸತ್ತರೆ ಮಾತ್ರ ಮಣ್ಣು ಮಾಡಲು ನೆನಪಾಗುವ ಸ್ಥಳ.  ಅದು ಬಿಟ್ಟು ಇಷ್ಟ ಪಟ್ಟು ಖುಷಿಯಲ್ಲಿ ಹೋದಂತೆ ಪಾರ್ಕು, … Read more

ವೋಲ್ವೋ: ಪ್ರಶಸ್ತಿ

ವೋಲ್ವೋದ ಜಂಟಿ ಸೀಟಲ್ಲಿ ಒಂಟಿಯಾಗಿ ಕೂತು ಮಳೆಯಿಲ್ಲದ ಬೇಸಿಗೆಯ ತಂಪಾದ ಹವೆಯ ಸವಿ ಅನುಭವಿಸುತ್ತಾ ಹೆಚ್ಚು ಹೊತ್ತೇನಾಗಿರಲಿಲ್ಲ. ಪಕ್ಕದಲ್ಲೊಬ್ಳು ಮುಸುಕಿಣಿ ಅವತರಿಸಿದಳು. ವೈತರಿಣಿ, ಮಂಜೂಷಾ ಕಿಣಿ ಅನ್ನೋ ತರ ಇದ್ಯಾವ ಹುಡುಗಿ ಹೆಸ್ರಪ್ಪಾ ಅಂದ್ಕೊಂಡ್ರಾ ? ಅದು ಹೆಸರಲ್ಲ, ಮುಸುಕು ! ಈ ಮೊದ್ಲು ಹೇಳಿದ ಹೆಸ್ರು ಯಾರು ಅಂದ್ರಾ ? ಅದ್ರ ವಿಚಾರಕ್ಕೆ ಇನ್ನೊಮ್ಮೆ ಬರೋಣ. ಮುಸುಕುಧಾರಿಣಿ ಮುಸುಕು ತೆಗೆಯೋ ತನಕ ಅವಳನ್ನೇ ದುರುಗುಟ್ಟಿ ನೋಡೋದು ಸಜ್ಜನಿಕೆ ಅಲ್ಲವಂತ ಪಕ್ಕದಲ್ಲಿ ಏನೂ ಕಾಣದಿದ್ರೂ ಕಿಟಕಿಯ ಹೊರಗೆ … Read more

ಮೂವರ ಕವನಗಳು: ನೂರುಲ್ಲಾ ತ್ಯಾಮಗೊಂಡ್ಲು, ಅಜ್ಜೀಮನೆ ಗಣೇಶ್, ಬಿದಲೋಟಿ ರಂಗನಾಥ್

ಗೊಹರ್     ಮನದ ಹರಕೆಯು ಕನಸಾಗಿ ಕಾಡಿದೆ ಕಣ್ಣಿನಾಳದಲಿ ಮಗನೆ ನೀ ಬೆಳೆದು ಬಳಕುವ ಬಳ್ಳಿಯೊಡಲಲಿ ಹೂಗಳು ನಗುತಲಿರಲಿ ಘಮ್ಮನೆ. ಬೆಳೆದು ದೊಡ್ಡವನಾಗಿ ಹಾರದಿರು ನಕ್ಷತ್ರದ ಸುಳಿಗೆ  ಇಲ್ಲೆ ಕೂಡಿಬಾಳೊ ಇರುವ ಗುಡಿಯೆ ಸ್ವರ್ಗ  ನಮಗೆ. ಸಾವಿರಾರು ವ್ಯೆಭೋಗದಾಭರಣಗಳು ಸಮುದ್ರ  ದೊಡಲಿನ ಸಿಂಗಾರಕೆ? ಹೃದಯ ಸಮುದ್ರದಲ್ಲಿನ ಮುತ್ತನ್ನು (ಗೊಹರ್) ಹೊತ್ತ ಎನಗೆ ಯಾವುದೇತರಹಂಗೆ? ನಡೆ,ನಿನ್ನ ಅಂಬೆಗಾಲುಗಳಲಿ ಹೊನ್ನಕಿರಣಗಳು ಸೂಸಲಿ ನಾಳಿನಾಸೆಯ ಎಮ್ಮಮನಗಡಲಲಿ ಹರ್ಷದಲೆಗಳು ಏಳಲಿ. -ನೂರುಲ್ಲಾ ತ್ಯಾಮಗೊಂಡ್ಲು         ಜಗತ್ತು …. … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಹಂಡೆ ಸತ್ತಿದೆ ಕೋಜಿಯಾ ಒಂದು ದಿನ ಕಂಚುಗಾರನಿಂದ ಹಂಡೆಯೊಂದನ್ನು ಎರವಲು ಪಡೆದು ಮನೆಗೆ ಒಯ್ದನು. ಮರುದಿನ ಅದರೊಳಗೆ ದುಂಡನೆಯ ಪುಟ್ಟ ಬೋಗುಣಿಯೊಂದನ್ನು ಹಾಕಿ ಹಿಂದಿರುಗಿಸಿದ. ಮಾಲಿಕ ಹಂಡೆಯೊಳಗಿದ್ದ ಪುಟ್ಟ ಬೋಗುಣಿಯನ್ನು ತೋರಿಸಿ ಕೇಳಿದ, “ಇದೇನು?” ಅದನ್ನು ನೋಡಿದ ಕೋಜಿಯಾ ಉದ್ಗರಿಸಿದ, “ಇದೇನು? ಹಂಡೆ ಒಂದು ಮರಿ ಹಾಕಿದೆ!”. ಮಾಲಿಕ ಬೋಗುಣಿಯನ್ನೂ ಹಂಡೆಯನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡ. ಇನ್ನೊಂದು ದಿನ ಕೋಜಿಯಾ ಪುನಃ ಹಂಡೆಯನ್ನು ಎರವಲು ಪಡೆದು ಮನೆಗೆ ಒಯ್ದ. ಐದು ದಿನಗಳಾದರೂ ಅದನ್ನು ಕೋಜಿಯಾ ಹಿಂದಿರುಗಿಸದೇ … Read more