ಮಾನಸಿ: ಮಹಾದೇವ ಹಡಪದ

        ಬರೋ…. ಬಂಧು ಬಳಗ ದೊಡ್ಡದು, ಆದ್ದರಿಂದ ಮದುವಿ ಮನಿ ತುಂಬ ಬರೇ ಹೊಯ್ಯ-ನಯ್ಯ ಮಾತುಕತೆ ಜೋರಾಗಿ ನಡೆದಿತ್ತು. ಅತ್ತಿ ಮಾವ ಬಂದ ಮಂದೀನ ಸಂಭಾಳಸಲಿಕ್ಕ ಮತ್ತು ಯಾವ ಅನಾನುಕೂಲ ಆಗಧಂಗ ನೋಡಕೊಳ್ಳಲಿಕ್ಕ ಒದ್ದಾಡೊ ಆ ಹೊತ್ತಿನಾಗ ಮನುಕುಮಾರ ಮತ್ತವನ ವಿಧವೆ ತಾಯಿ ಶಿವಕ್ಕ ಧೂಳಸಂಜಿ ಅಷ್ಟೊತ್ತಿಗೆ ಬಂದ್ರು. ‘ಇದೇನವಾ ಬೆಂಗ್ಳೂರು ಸೇರಿದ್ದ ಮಗರಾಯ ಅಪರೂಪಕ್ಕ ಅತ್ತಿ ಮನೀಗೆ ಬಂದನಲ’್ಲ ಸಣ್ಣತ್ತಿ ಚಾಷ್ಟಿ ಮಾಡಿದಳು. ಹೌದು ನಾಟಕ, ಹಾಡು, ಕುಣಿತ ಅಂತ ತಿರುಗೋ … Read more

ಕಿವಿ ಕಚ್ಚುವುದು!: ಎಸ್.ಜಿ.ಶಿವಶಂಕರ್

ಅರೆ..ಹಾಗಂದರೇನು? ಎಂದು ಹುಬ್ಬೇರಿಸಿದ್ದೀರೇನು? ನೀವು ಈ ಮಾತು ಈವರೆಗೆ ಕೇಳಿಯೇ ಇಲ್ಲವೆ?  ‘ಇಲ್ಲ’ ಎಂಬ ನಿಮ್ಮ ಮಾತನ್ನು ನಾನು ಖಂಡಿತಾ ನಂಬುವುದಿಲ್ಲ! ಎಲ್ಲಿಯಾದರೂ ಅಪರೂಪಕ್ಕಾದರೂ ಈ ಮಾತು ನೀವು ಕೇಳಿಯೇ ಇರುತ್ತೀರಿ. ಕೇಳಿದಾಗ ಈ ಪದದ ಅರ್ಥವಾಗಿರಬಹುದು ಇಲ್ಲ ಅರ್ಥವಾಗದೆ ಮರೆತಿರಬಹುದು!  ಕಿವಿಕಚ್ಚುವುದು ಎಂದಾಕ್ಷಣ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಕಿವಿಯನ್ನು ಕಚ್ಚುತ್ತಿರುವುದನ್ನು ಕಲ್ಪಿಸಿಕೊಳ್ಳಬೇಡಿ! ಈ ಪದ ನನ್ನ ಕಿವಿಯ ಮೇಲೆ ಬಿದ್ದುದು ಕೇವಲ ವಾರದ ಹಿಂದೆ. ಆಗಿನಿಂದಲೂ ಇದರ ಅರ್ಥ, ವ್ಯಾಪ್ತಿಗಳ ಬಗೆಗೇ ಚಿಂತಿಸುತ್ತಿರುವೆ ಎಂದರೆ … Read more

ಗುಜರಿ ಬದುಕಿನ ದಾರಿ: ಅಮರ್ ದೀಪ್ ಪಿ.ಎಸ್.

ಅಲ್ಲಿ ನನಗೊಂದು ಹೊಸ ಬಟ್ಟೆಯಿಂದ ಮುಖ ಒರೆಸಿ ಒರೆಸಿ ಇಕ್ಕಟ್ಟಾದ ಜಾಗದಲ್ಲಿ ಮಲಗಿಸಿದ್ದರು.  ಆ ಜಾಗದಲ್ಲಿ ನನ್ನಂತೆ ಇತರರಿಗೂ ಅದೇ ಸ್ಥಿತಿ.   ಅಲ್ಲಿ ಬಂದು ಹೋಗುವ ನೂರಾರು ಮಂದಿ ನಮ್ಮನ್ನೆಲ್ಲಾ ಮುಟ್ಟಿ, ತಟ್ಟಿ, ತಲೆ ಹಿಡುದು, ತಿರುವ್ಯಾಡಿ, ಕಾಲು ಜಗ್ಗಿ, ಮೈ ಬೆಂಡು ಮಾಡಿ, ನೋಡಿ “ಉಹ್ಞೂಂ. ಬ್ಯಾಡ” ಅನ್ನೋ ಮಂದಿ. ಇನ್ನೂ ಕೆಲವರು “ಇಷ್ಟಕ್ಕಾದ್ರ ಕೊಡು, ಇಲ್ಲಾಂದ್ರ ಬ್ಯಾಡ, ದುಬಾರಿಯಾತು”, ಅನ್ನುವವರು. ಅವರೆಲ್ಲಾ ಬರೀ ಹೆಂಗಸರು.  ಹಿಂಡು ಮಂದಿ ಕಲೆಯುವ ಜಾತ್ರಯೊಳಗೆ ಕೆಟ್ಟ ಬಿಸಿಲಲ್ಲಿ ನನ್ನಂಥವರನ್ನು ಮಲಗಿಸಿ, ಕುಕ್ಕರಗಾಲಲ್ಲಿ ಕುಂದ್ರಿಸಿ … Read more

ಪ್ರಾಣಿಗಳಿಂದ ಪಾಠ ಕಲಿಯುವ ಕಾರ್ಪೋರೇಟ್ ಪ್ರಪಂಚ: ಅಖಿಲೇಶ್ ಚಿಪ್ಪಳಿ

ಬಿರುಬಿಸಿಲಿನ ಈ ದಿನದಲ್ಲಿ ಕಾಗೆಯೊಂದಕ್ಕೆ ಬಾಯಾರಿಕೆಯಾಗಿತ್ತು. ಮಡಿಕೆಯಲ್ಲಿ ಅರ್ಧ ಮಾತ್ರ ನೀರು. ಬುದ್ಧಿವಂತ ಕಾಗೆ ಹತ್ತಿರದಲ್ಲಿದ್ದ ಕಲ್ಲುಗಳನ್ನು ಕೊಕ್ಕಿನಿಂದ ಕಚ್ಚಿಕೊಂಡು ಬಂದು ಮಡಿಕೆಗೆ ಹಾಕುತ್ತದೆ. ಮಡಿಕೆಯಲ್ಲಿದ್ದ ನೀರು ಮೇಲೆ ಬರುತ್ತದೆ. ಕೊಕ್ಕಿನಿಂದ ಆ ನೀರನ್ನು ಹೀರಿ ತನ್ನ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತದೆ. ಇಂತದೊಂದು ಕತೆಯಿತ್ತು. ಈ ಕತೆ ಕಲ್ಪನೆಯದ್ದೇ ಇರಬಹುದು. ಆದರೂ ನಮ್ಮ ಕಲ್ಪನೆಗೂ ಮೀರಿ ಪ್ರಾಣಿಲೋಕ ತನ್ನ ಮಿತಿಯಲ್ಲಿ ಬುದ್ಧಿವಂತಿಕೆ ತೋರುತ್ತವೆ. ಈಗೀಗ ಕಾರ್ಪೋರೇಟ್ ವಲಯದಲ್ಲಿ ಮ್ಯಾನೇಜ್‍ಮೆಂಟಿನದ್ದೇ ಸವಾಲಾಗಿದೆ. ಒಂದು ಕಂಪನಿಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುವುದು ಪೈಪೋಟಿಯ … Read more

ಮೂವರ ಕವನಗಳು: ಅಜ್ಜೀಮನೆ ಗಣೇಶ್, ನಗೆಮಲ್ಲಿಗೆ, ಕಮಿ (ಪುಟ್ಟಕ್ಕ)

ದಿಬ್ಬಣದ ಸೂತಕ ಸೇರನೊದೆಯುವ ಹೊತ್ತಲ್ಲಿ ಹೊಸ್ತಿಲಲ್ಲೇ ಸತ್ತು ಬಿದ್ದಿತ್ತು.. ಸುಡುವ ಮನೆ ಹುಡುಗನಿಗೆ ಹೂಳುವ ವಂಶದ ಹೆಣ್ಣನು ಬೆಸದಿದ್ದ ಪ್ರೇಮ.. ಸಂಭ್ರಮ ಸರಿದಲ್ಲೀಗ ಸೂತಕ ಹೊಕ್ಕಿದೆ, ಮೌನ ಮಿಕ್ಕಿದೆ, ಅನುಕಂಪವೂ ಸಾಕಷ್ಟಿದೆ ದುಃಖವೊಂದೇ ಕಾಣುತ್ತಿಲ್ಲ.. ಅಂಗಳದಿ ಸೌದೆ ಸುಟ್ಟು ಚಪ್ಪರದ ಗಳಕಿತ್ತು ಚಟ್ಟಕ್ಕಿಟ್ಟು ತೋರಣವ ತಳದಿ ತುಂಬಿಟ್ಟು ಅಳುವವರ ಕರೆಸಿ ಡಂಕನಕ ಹಾಡಿತು ಬ್ಯಾಂಡ್ಸೆಟ್ಟು.. ಹೂವಿನ ಖರ್ಚಿಲ್ಲ, ಮೈಲಿಗೆಯ ಹಂಗಿಲ್ಲ ಬರುವವರಿಲ್ಲ,ಬಂಧುಗಳ್ಯಾರಿಲ್ಲ ಏನು ಬಂತು ಫಲ ಸಂಜಿಯೊಳಗೆಲ್ಲಾ, ಮುಗಿವ ಲಕ್ಷಣವಿಲ್ಲ ಹೊತ್ತು ಮೀರಿದೆ ಹೊರಡಬೇಕಿದೆ ಮೆರವಣಿಗೆ ಅರಸುತಿಹರಿನ್ನೂ … Read more

ವೈರಸ್ಸಿಲ್ಲದ ಲೋಕದಲ್ಲಿ: ಪ್ರಶಸ್ತಿ

ಏ ನನ್ನ ಕಂಪ್ಯೂಟರ್ ಸಿಕ್ಕಾಪಟ್ಟೆ ನಿಧಾನವಾಗ್ಬಿಟ್ಟಿದೆ, ಒಂದು ಫೋಲ್ಡರ್ ತೆರೆಯೋಕೆ ೨-೩ ನಿಮಿಷ ಬೇಕು. ಅದೆಂತದೋ ವೈರಸ್ ಬಂದು ಕೂತ್ಬಿಟ್ಟಿದೆ ಕಣೋ ಅಂತಿದ್ದ ಫ್ರೆಂಡು.ಹೂಂ, ಇವ ಯಾವುದೇ ಜಾಲತಾಣ ತೆರೆದ್ರೂ ಅದೆಂತದೋ ಜಾಹೀರಾತು ಬಂದು ಕುಣ್ಯತ್ತೆ ಮಾರಾಯ. ವೈರಸ್ಸು, ಟ್ರೋಜನ್ನು, ಮಾಲ್ವೇರು.. ಇನ್ನೆಂತೆಂತ ಹಾಳು ಮೂಳು ಬಂದು ಕೂತಿದ್ಯೋ ಇದ್ರಲ್ಲಿ ಅಂದ ಇನ್ನೊಬ್ಬ.ಈ ವಿಂಡೋಸು, ಇದ್ರ ದುಬಾರಿ ದುಡ್ಡು ಕೊಟ್ರೂ ಕೆಲಸ ಮಾಡದ . ಎಂಥದದು ? ಆಂಟಿ ವೈರಸ್ಸಾ ? ಅದ್ನ ಹಾಕೂ ಈ ಕತೆ … Read more

ವರದಕ್ಷಿಣೆ ಎಂಬ ಉರುಳು: ಲಾವಣ್ಯ ಆರ್.

ಹೀಗೆ ವಾರದ ಹಿಂದೆ ನಡೆದ ಘಟನೆ ನನ್ನ ಹೊಸ ಸೀರೆಗೆ ರವಿಕೆ ಹೊಲೆಸಲು ಬೋಟಿಕ್ ಗೆ ಹೋಗಿದ್ದೆ. ಅಲ್ಲಿಗೆ ಒಂದು ನಡುವಯಸ್ಸಿನ ಹುಡುಗಿ ಮತ್ತು ಆಕೆಯ ತಾಯಿ ಬಂದರು. ಆ ಹುಡುಗಿಯ ನಿಶ್ಚಿತಾರ್ಥಕ್ಕೆ ರವಿಕೆ ಹೊಲಿಸಲು ಬಂದವರು ಸುಮಾರು ತರಹದ ಡಿಸೈನ್ಗಳನ್ನೂ ನೋಡಿ ಅವನ್ನು ಆಕೆ ಮದುವೆಯಾಗುವ ಹುಡುಗನಿಗೆ ವಾಟ್ಸ್ ಆಪ್ನಲ್ಲಿ ಫೋಟೋ ಕಳುಹಿಸಿ ಸೆಲೆಕ್ಟ್ ಮಾಡಲು ಹೇಳಿದಳು.  ನಾನೆಂದುಕೊಂಡೆ ಇಬ್ಬರದು ಲವ್ ಮ್ಯಾರೇಜ್ ಇರಬಹುದು ಅದಕ್ಕಾಗಿಯೆಂದು. ಆದರೆ ನಂತರ ಆತ ಅವರಮ್ಮನ ನಂಬರ್ ಕೊಟ್ಟು ಕೇಳಲು ಹೇಳಿದ. ಆಗಲು ನಾನು ಸಾಮಾನ್ಯವಾಗಿ … Read more

ಕಿರು ಲೇಖನಗಳು: ಅಮರ್ ನಾಥ್ ಪಿ.ಸಿ., ಗಣೇಶ್ ಭಟ್

ಎಂದೆಂದೂ ನಿನ್ನವನು………… ಕಣ್ಣು ಬಿಟ್ಟರೂ ನೀನೆ ಕಣ್ಣು ಮುಚ್ಚಿದರೂ ನೀನೆ! ಯಾಕೇ ಹೀಗೆ ಕಾಡ್ತಿದಿಯಾ..? ಅದ್ಯಾವ ಘಳಿಗೇಲಿ ನಿನ್ನ ನೋಡಿದ್ನೋ ನಿನ್ ರೂಪ ನನ್ ಕಣ್ಣಲ್ಲಿ ಹಾಗೆ ತುಂಬಿಕೊಂಡು ಬಿಟ್ಟಿದೆ. ಆಚೆ ಈಚೆ ಸುಳಿತಾನು ಇಲ್ಲ ಕಣೇ. ಒಂಥರಾ ಸನ್ಯಾಸಿ, ಹೆಚ್ಚೆಚ್ಚು ವನವಾಸಿಯಾಗಿದ್ದೆ ನಾನು. ಕಣ್ಣುಗಳಿಗೂ ಕನಸುಗಳಿಗೂ ಎಣ್ಣೆ ಸೀಗೆಕಾಯಿ ಸಂಬಂಧ ಇತ್ತು. ಎದೆ ಗೂಡು ಹಳೆ ಕಾಲದ ಪಾಳು ಮನೆಯಂತಾಗಿತ್ತು. ಮನಸಂತೂ ಬೆಳಕೇ ಬೀಳದಿರೊ ಕಗ್ಗತ್ತಲ ಕಾಡಾಗಿತ್ತು. ಎಲ್ಲೆಂದರಲ್ಲಿ ಅಲೀತಾ, ಕಾರಣಗಳಿಲ್ಲದ ಕೆಲಸ ಮಾಡ್ತಾ, ಕನಸುಗಳ … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿನ್ನ ಬಟ್ಟಲನ್ನು ತೊಳೆ ಹೊಸದಾಗಿ ಸಂನ್ಯಾಸತ್ವ ಸ್ವೀಕರಿಸಿದವನೊಬ್ಬ ಗುರು ಜೋಶುವಿನ ಬಳಿಗೆ ಬಂದು ಕೇಳಿದ, “ನಾನು ಈಗ ತಾನೇ ಈ ಆಶ್ರಮಕ್ಕೆ ಸೇರಿದ್ದೇನೆ. ಝೆನ್‌ನ ಮೊದಲನೇ ತತ್ವವನ್ನು ಕಲಿಯಲು ನಾನು ಕಾತುರನಾಗಿದ್ದೇನೆ.” ಜೋಶು ಕೇಳಿದ, “ನಿನ್ನ ಊಟವಾಯಿತೇ?”  ನವಶಿಷ್ಯ ಉತ್ತರಿಸಿದ, “ನನ್ನ ಊಟವಾಯಿತು.” ಜೋಶು ಹೇಳಿದ, “ಸರಿ ಹಾಗದರೆ, ಈಗ ನಿನ್ನ ಬಟ್ಟಲನ್ನು ತೊಳೆ.” ***** ೨. ದಣಿದಾಗ ವಿದ್ಯಾರ್ಥಿಯೊಬ್ಬ ಗುರುವನ್ನು ಕೇಳಿದ, “ಗುರುಗಳೇ, ನಿಜವಾದ ಅರಿವು ಅಂದರೇನು?” ಗುರುಗಳು ಉತ್ತರಿಸಿದರು, “ಹಸಿವಾದಾಗ ಊಟ ಮಾಡು, … Read more