ವೀಣಾ: ಶ್ರೀಮಂತ್ ಎಮ್. ಯನಗುಂಟಿ

’ಏ ಮಾಮು ಏಳೋ ಇನ್ನು ಎಷ್ಟೊತ್ತು ಮಲಗ್ತೀಯಾ’ ರಾತ್ರಿಯೆಲ್ಲಾ ಸೀಟು ಸಿಗದೆ ನಿಂತುಕೊಡಿದ್ದವನಿಗೆ ನಸುಕಿನ ಮೂರು ಗಂಟೆಯಲ್ಲೊಂದು ಸೀಟು ಸಿಕ್ಕಿತ್ತು. ನಿದ್ದೆಬರುವುದಿಲ್ಲ ಅಂತ ಗೊತ್ತಿತ್ತು. ಆದರೂ ಸುಮ್ಮನೆ ಬೋರಲಾಗಿ ಮಲಗಿದ್ದೆ. ಯಾರೋ ಚಪ್ಪಾಳೆ ಹಾಕುತ್ತಾ ಮೈದಡವಿದಂತಾಯ್ತು. ಎದ್ದು ಸಮಯ ನೋಡಿದೆ ಇನ್ನೂ ಗಂಟೆಯ ಮುಳ್ಳು ಐದನ್ನೆ ದಾಟಿರಲಿಲ್ಲ. ಸ್ವಲ್ಪ ಹಿಂತಿರುಗಿ ನೋಡಿದೆ. ಮಂಗಳಮುಖಿಯೊಬ್ಬಳು ಬಹಳ ಸಹಜವೆಂಬಂತೆ ಮಾಮೂಲಿ ಕೇಳಲು ಬಂದಿದ್ದಳು.  "ರೀ ನಿಮಗೆ ಹೊತ್ತು ಗೊತ್ತು ಏನೂ ಇಲ್ವಾ. ಇಗಲಾದ್ರೂ ಮಲಗಿದ್ದಿನಿ ನಿಮ್ಮದೊಳ್ಳೆ ಸಹವಾಸ" ಎಂದು ನಿದ್ದೆಯಲ್ಲಿ ಗೊಣಗುತ್ತಲೇ … Read more

ಬದುಕು ಬಣ್ಣದ ಸಂತೆ: ಹೃದಯಶಿವ

ಹೋಳಿ ಹಬ್ಬದ ಸಂಭ್ರಮ, ಖುಷಿಗಳನ್ನು ನೀವೂ ಅನುಭವಿಸಿರುತ್ತೀರಿ.  ಹೋಳಿಹಬ್ಬ ಕೂಡ ದೀಪಾವಳಿಯಂತೆಯೇ ಭಾರತೀಯರ ಮನಸ್ಸಿನಲ್ಲಿ ವರ್ಣಮಯವಾಗಿ, ಮನರಂಜನಾತ್ಮಕವಾಗಿ ಆವರಿಸಿರುತ್ತದೆ. ವರ್ಷವೆಲ್ಲಾ ಅಪ್ಪಟ ಗಂಭೀರ ವ್ಯಕ್ತಿಗಳಂತೆ ಟಿಪ್ ಟಾಪ್ ಡ್ರೆಸ್ ಮಾಡಿಕೊಂಡು ಆಫೀಸಿಗೆ ಹೋಗಿ ಬರುವ ಸೀರಿಯಸ್ ಮನುಷ್ಯರೂ ಹೋಳಿ ಹೋಳಿಹಬ್ಬದಂದು ಮಕ್ಕಳಾಗಿಬಿಡುತ್ತಾರೆ. ಬಣ್ಣ ಎಚ್ಹರಿ ಖುಷಿ ಪಡುತ್ತಾರೆ. ಮುಖದಲ್ಲಿ ಗಂಭೀರ ಗೆರೆಗಳು ಮಾಯವಾಗಿ ಉಲ್ಲಾಸ ಮಡುಗಟ್ಟುತ್ತದೆ.  ಹೋಳಿಯ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದ ಒಂದೆರಡು ಅಂಶಗಳನ್ನು ಹೇಳುತ್ತೇನೆ… ಮನುಷ್ಯನ ಮನಸ್ಸು ರಂಗುಮಯವಾದದ್ದು. ಬಹುತೇಕ ಜನ ಪರಸ್ಪರ ಬಣ್ಣ … Read more

“ಕಾರ್ಮೋಡ” ಮಳೆಯಾಗಿ ಸುರಿದ ನಂತರ ತಡರಾತ್ರಿಗೆ ಮುಕ್ತಿ: ಅಮರ್ ದೀಪ್ ಪಿ.ಎಸ್.

ಅಂದು ಸಂಜೆ ಹೊಸಪೇಟೆಯಿಂದ ರೈಲು ಹತ್ತಿದಾಗ ಸಂಜೆ ಏಳು ಗಂಟೆ.  ನನ್ನ ಜನ್ಮ ಜಾತಕದಲ್ಲಿ ಅಮವಾಸ್ಯೆ ದಿನ ಪ್ರಯಾಣದಲ್ಲಿ ಅಪಘಾತದ ಸೂಚನೆ ನೀಡಿದ್ದ ಜ್ಯೋತಿಷಿಯ ನೆನಪಾಯಿತು.  ಪ್ರತಿ ದಿನವೂ ಕತ್ತಲಂತೇ ದೂಡುತ್ತಿದ್ದ ಬದುಕಿನಲ್ಲಿ ಒಂದು ದಿನದ ಅಮವಾಸ್ಯೆಯು ತನಗೇನೂ ಕೇಡು ಬಗೆಯುವುದಿಲ್ಲವೆಂಬದು ನನ್ನ ದಿಟ್ಟ ನಂಬಿಕೆ.  ರೈಲು ಭೋಗಿಯಲ್ಲಿ ಹೆಜ್ಜೆಯಿಡಲೂ ಜಾಗವಿರದಂಥ ಜನರಲ್ ಕಂಪಾರ್ಟ್ ಮೆಂಟ್. ಅದರಲ್ಲೂ ಹೆಂಗಸರು ಮಕ್ಕಳು ಜಾಗ ಅಲ್ಲಲ್ಲಿ ಹುಡುಕಿ ಕೂಡುತ್ತಿದ್ದರು. ಪಾಸ್ ಮಾಡಿಸಿಕೊಂಡು ದಿನವೂ ಓಡಾಡುವ ಸಂಭಾವಿತ ಗಂಡಸರು ವಯಸ್ಸಾದವರಿಗೆ ಜಾಗ … Read more

ಗಿಣಿಶಾಸ್ತ್ರದ ಸ೦ಚು: ಆದರ್ಶ ಸದಾನ೦ದ ಅರ್ಕಸಾಲಿ

ಮೂರು ತಿ೦ಗಳ ಹಿ೦ದೆ ಮಾರಿಯಮ್ಮನ ಜಾತ್ರೆಯಲ್ಲಿ, ನನಗೆ ಆಸಕ್ತಿ ಇಲ್ಲದಿದ್ದರೂ, ವಯಸ್ಸಾದ ಗಿಣಿಶಾಸ್ತ್ರ ಹೇಳುವ ಅಜ್ಜಿಯೊ೦ದು ನನ್ನ ಹತ್ತಿರ ಕರೆದು, ನನ್ನ ಕಿವಿಯಲ್ಲಿ ನನಗೊ೦ದು ಒಳ್ಳೆಯ ಸುದ್ಧಿಯೊ೦ದು ಕಾದಿದೆಯೆ೦ದು, ಅದರಿ೦ದ ನನ್ನ ಏಳ್ಗೆಯಾಗುವುದೆ೦ದು ಹಿತವಚನ ನುಡಿದಾಗ, ನನಗೆ ಕುತೂಹಲ ತಡೆಯಲಾಗಲಿಲ್ಲ. ಯಾವ ಜೋತಿಷಿಯೇ ಆಗಲಿ, ಭವಿಷ್ಯ ಹೇಳುವ ಮುನ್ನ ಅವರ ಫೀಸನ್ನು ಮು೦ದುಗಡೆ ಇರುವ ದೇವರ ಫೋಟೋದಡಿ ಇಡಲು ಹೇಳುತ್ತಾರೆ. ಭವಿಷ್ಯ ಕೇಳಿ ಜನ ದುಡ್ಡು ಕೊಡದೆ ಓಡಿ ಬಿಟ್ಟರೆ? ದೇವರ ಫೋಟೋದ ಮು೦ದೆ ದುಡ್ಡಿಡುವಾಗ ಒ೦ದು … Read more

ವಿದ್ಯುತ್ ಅಪವ್ಯಯ ಬಿಟ್ಟುಬಿಡಿ , ಎಲ್.ಇ.ಡಿ ಬಂತು ದಾರಿ ಬಿಡಿ: ರೋಹಿತ್ ವಿ. ಸಾಗರ್

ವಿದ್ಯುತ್ ಅಥವಾ ಕರೆಂಟ್ ನಮಗೆ ತುಂಬಾ ಪರಿಚಿತವಾಗಿರುವ, ಅದಿಲ್ಲದೆ ಜೀವನವನ್ನು ಊಹಿಸಿಕೊಳ್ಳಲೂ ಆಗದಿರುವಂತಹ ಒಂದು ಮೂಲಭೂತ ಅಗತ್ಯತೆಯಾಗಿಬಿಟ್ಟಿದೆ. ಅದು ಹೇಗೆ ಎಂಬುದನ್ನ ಇಪ್ಪತ್ತೊಂದನೇ ಶತಮಾನದವರಾದ ನಮಗೆ ಬಿಡಿಸಿ ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ನಿತ್ಯ ಜೀವನದ ಹೆಚ್ಚು ಕಡಿಮೆ ಎಲ್ಲಾ ಕ್ರಿಯೆಗಳಿಗೂ ನಾವೀಗ ವಿದ್ಯುತ್ತನ್ನೇ ಅವಲಂಬಿಸಿದ್ದೇವೆ. ಯಾವುದೇ ಶೋಕಿಗಳಿಲ್ಲದಿದ್ದರೂ ಕನಿಷ್ಟ ಬೆಳಕಿಗಾಗಿಯಾದರೂ ನಮಗೆ ವಿದ್ಯುತ್ ಬೇಕೇ ಬೇಕು. ಸುತ್ತಲಿನ ಪರಿಸರದ ಅಂದ-ಚೆಂದಗಳನ್ನು, ಆಗು ಹೋಗುಗಳನ್ನು ಕಣ್ತುಂಬಿಕೊಳ್ಳಲು ಬೆಳಕು ಬೇಕು. ಹಗಲಿನಲ್ಲಿ ಸೂರ್ಯ ಪುಗಸಟ್ಟೆಯಾಗಿ, ಧಾರಾಕಾರವಾಗಿ ಬೆಳಕನ್ನು ನೀಡಿಬಿಡುತ್ತಾನೆ. ಆದರೆ … Read more

ಕೆಂಗುಲಾಬಿಯೂ, ಊರ ಗುಬ್ಬಿಯೂ: ಪ್ರಶಸ್ತಿ

ಒಂದೂರಲ್ಲೊಂದು ಗುಬ್ಬಿಯಿತ್ತಂತೆ. ಆ ಗುಬ್ಬಿಗೆ ಸಿಕ್ಕಾಪಟ್ಟೆ ಗೆಳೆಯರು. ಗುಬ್ಬಿ ಪ್ರತೀ ಸಾರಿ ಚೀಂವ್ಗುಟ್ಟಿದಾಗಲೂ ಆಹಾ ಎಂತಾ ಮಧುರ ಗಾನ. ನಿನ್ನ ಚೀಂಗುಟ್ಟುವಿಕೆಯ ಮುಂದೆ ಕೋಗಿಲೆಯ ಗಾಯನವನ್ನೂ ನಿವಾಳಿಸಿ ಎಸೆಯಬೇಕೇನೋ ಎಂದು ಹೊಗಳುತ್ತಿದ್ದರಂತೆ. ಮೊದಮೊದಲು ಸುಮ್ಮನೇ ಹೊಗಳುತ್ತಿದ್ದಾರೆಂದುಕೊಂಡಿದ್ದ ಗುಬ್ಬಿಗೆ ನಿಧಾನಕ್ಕೆ ಅವರು ಹೇಳಿದ ಮಾತುಗಳೇ ಸತ್ಯವೆನಿಸಲಾರಂಭಿಸಿತು. ಅಷ್ಟೆಲ್ಲಾ ಜನ ಸುಳ್ಳು ಹೇಳುತ್ತಾರಾ ಅಂತ. ನಾನೆಂದ್ರೇನು ? ನಾ ಚೀಂಗುಟ್ಟುವುದೆಂದ್ರೇನು.. ಆಹಾ ಯಾರಾದ್ರೂ ನನಗೆ ಸಾಟಿಯುಂಟೆ ಅನ್ನೋ ಭಾವ ಅದಕ್ಕೇ ಅರಿವಿಲ್ಲದಂತೆ ಅದರೊಳಗೆ ಬೆಳೆಯಲಾರಂಭಿಸಿತು. ಒಂದಿನ ಹಿಂಗೇ ಆಹಾರ ಹುಡುಕುತ್ತುಡುಕುತ್ತಾ … Read more

ಕಪ್ಪು ಮಣ್ಣಿನಲಿ ಹೂತಿಟ್ಟ ಕರುಣೆ: ಸಚೇತನ

ಬಂದೂಕಿನಿಂದ ಹೊರಟ ಕಾಡತೂಸು ಕೊಲ್ಲುವದು ಕೇವಲ ಗುರಿಯಾಗಿ ನಿಂತ ಮನುಷ್ಯನನ್ನು ಮಾತ್ರವಲ್ಲ, ಒಂದು ಜನಾಂಗದ ಬದುಕನ್ನು. ಸತ್ತವರು ಬೂದಿಯಾದರು ಬದುಕಿ ಉಳಿದವರು ಸತ್ತವರ ಪ್ರೇತಗಳಾಗುವರು. ಹಿಂಸೆ ಕೋಣೆಯೊಳಗೆ ಕಿಟಕಿಗಳಿಲ್ಲ, ಒಳ ಹೊಕ್ಕರೆ ಹೊರಬರಲು ಬಾಗಿಲುಗಳಿಲ್ಲ.  "ನಿನ್ನ ಬಂದೂಕುಗಳನ್ನು ಗೌರವಿಸು, ಇವತ್ತಿನಿಂದ ಅವು ನಿನ್ನ ತಂದೆ ತಾಯಿ. "  ಆಟದ ಬಂದೂಕಿನಲ್ಲಿ, ಆಟದ ವಯಸ್ಸಿನಲ್ಲಿನ ಮಕ್ಕಳನ್ನುದ್ದೇಶಿಸಿ ಹೇಳಲಾಗುತ್ತಿದೆ. ಆಫ್ರಿಕಾದ ಯಾವುದೋ ಮೂಲೆಯ ಹಳ್ಳಿಯೊಂದರ ಪುಟ್ಟ  ಜೀವಗಳು ಥರಗುಟ್ಟುತ್ತ ಈ ಮಾತನ್ನು ಕೇಳುತ್ತಿವೆ. ಎದುರಿಗೆ ನಿಂತ, ಬಂದೂಕು ಹಿಡಿದ  ವ್ಯಕ್ತಿಗಳ … Read more

ಪಂಜು ಕಾವ್ಯ

ನೀ ಬಂದು ನಿಂತಾಗ ಎಂದಾದರೊಮ್ಮೆ  ಬಳಿ ನೀನು ಬಂದರೆ  ಕೊಡಲೇನ ನಿನಗಾಗಿ ಹೇಳು ಚಂದದ ಚೆಲುವಿನ   ಮನದಾಗಿನ ಭಾವನೆಗಳ ಸಾರುವ ಅಂದದ ಕಾಣಿಕೆಯು  ನಿನಗಾಗಿ ಕಾದಿಹುದು ಕೇಳು ಪ್ರತಿದಿನವು ಮೂಡಿಹುದು  ಒಲವಿನ ರಂಗವಲ್ಲಿ ನಿನ್ನ ಆಗಮನಕ್ಕಾಗಿ ಕಾದು ಪ್ರತಿಸಾಲು ಸಾರಿಹುದು ಅಭಿಮಾನವ ರಂಗುಚೆಲ್ಲಿ ನನ್ನೆಲ್ಲಾ ಗಮನವ ನಿನ್ನೆಡೆಗೆ ಸೆಳೆದು ತಂಪಾದ ತಂಗಾಳಿ ಚಾಮರವ ಬೀಸಲು ಅಣಿಯಾಗಿದೆ ಬಳಿ ನೀನು ಬರಲು ದಣಿದು ಮುಗಿಲಿನ ಮೋಡವು ಪನ್ನೀರ  ಎರಚಲು ಸುತ್ತೆಲ್ಲಾ ಕವಿದಿದೆ ಖುಷಿಯಿಂದ ಕುಣಿದು ಮತ್ತಷ್ಟು ಉಡುಗೊರೆಗಳು … Read more

ಮನಸ್ವಿನಿ: ಅಭಿಲಾಷ್ ಟಿ ಬಿ

ಕುರಿಗಾಹಿಯೊಬ್ಬನು ತನ್ನ ಎಲ್ಲಾ ಕುರಿಗಳನ್ನು ಒ೦ದೇ ಕಡೆ ಮೇಯಿಸಲು ಹೊರಟನೆ೦ದರೆ ಅದು ಬಯಲುಸೀಮೆಯೇ ಆಗಿರುತ್ತದೆ. ಬರ, ಕ್ಷಾಮ, ಅನಾವೃಷ್ಠಿ, ಅಭಾವ, ಇವರಿಗೆ ಸಾಮಾನ್ಯವಾಗಿ ಹೋಗಿದೆ. ಈ ಕಾರಣಕ್ಕಾಗಿ ಬಯಲುಸೀಮೆಯ ಕೆರೆಗಳಿಗೆ  ಸರ್ಕಾರ ಅಣೆಕಟ್ಟುಗಳಿ೦ದ ನಾಲೆಗಳ ಮುಖಾ೦ತರ ಜೀವಜಲವನ್ನು ಒದಗಿಸುತ್ತಿದೆ. ಕಲ್ಲೂರು, ಗ೦ಗರ, ಚ೦ದ್ರಾಪುರ, ಬೆಣ್ಣೆನಹಳ್ಳಿ,..ಒ೦ದೇ ಎರಡೇ, ಇ೦ತಹ ನೂರಾರು ಹಳ್ಳಿಯ ಜನರು, ಜಾನುವಾರುಗಳು ರಾಮನಿಗಾಗಿ ಶಬರಿ ಕಾಯುವ ಹಾಗೆ ನೀರಿಗಾಗಿ ಕಾಯುತ್ತಿರುತ್ತಾರೆ. ಈ ನೀರಿಗಾಗಿ ಕಾಯುತ್ತಿರುವ ಜನರು, ಎಮ್ಮೆಗಳೂ, ಹೋತಗಳು, ಬಸವಿಗಳು, ಟಗರುಗಳು, ಹಸುಗಳ ಪೈಕಿ ಸತ್ಯವೇ … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿಜವಾದ ಮಾರ್ಗ ನಿನಕಾವಾ ಸಾಯುವುದಕ್ಕೆ ತುಸು ಮುನ್ನ ಝೆನ್‌ ಗುರು ಇಕ್ಕ್ಯು ಅವನನ್ನು ಭೇಟಿ ಮಾಡಿದ. “ನಾನು ನಿನಗೆ ದಾರಿ ತೋರಿಸಲೇನು?” ಕೇಳಿದ ಇಕ್ಕ್ಯು. ನಿನಕಾವಾ ಉತ್ತರಿಸಿದ: “ನಾನು ಇಲ್ಲಿಗೆ ಒಬ್ಬನೇ ಬಂದೆ ಮತ್ತು ಒಬ್ಬನೇ ಹೋಗುತ್ತೇನೆ. ನೀನು ನನಗೆ ಏನು ಸಹಾಯ ಮಾಡಬಲ್ಲೆ?” ಇಕ್ಕ್ಯು ಉತ್ತರಿಸಿದ: “ ನಿಜವಾಗಿಯೂ ನೀನು ಬಂದಿದ್ದೇನೆ ಮತ್ತು ಹೋಗುತ್ತೇನೆ ಎಂಬುದಾಗಿ ಆಲೋಚಿಸುತ್ತಿರುವೆಯಾದರೆ ಅದು ನಿನ್ನ ಭ್ರಮೆ. ಬರುವಿಕೆ ಮತ್ತು ಹೋಗುವಿಕೆ ಇಲ್ಲದೇ ಇರುವ ದಾರಿಯನ್ನು ತೋರಿಸಲು ನನಗೆ ಅವಕಾಶ … Read more

ಕಾ. ಕಾ.. ಕಾಗೆ. . . ನೀ ಏಕೆ ಹೀಗೆ?: ಅಖಿಲೇಶ್ ಚಿಪ್ಪಳಿ

ನೆನಪಿದೆಯೇ? ಸಾವಿರಾರು ವರ್ಷಗಳ ಹಿಂದೆ ಬರೆಯಲಾದ ಈಸೋಫನ ಕಾಗೆ ನೀರು ಕುಡಿದ ಕತೆ. ಹೂಜಿಯ ತಳಭಾಗದಲ್ಲಿದ್ದ ನೀರು ಕಾಗೆಗೆ ಎಟಕುತ್ತಿರಲಿಲ್ಲ. ಬುದ್ಧಿವಂತ ಕಾಗೆ ಅಕ್ಕ-ಪಕ್ಕದಲ್ಲಿರುವ ಕಲ್ಲುಗಳನ್ನು ಹೂಜಿಗೆ ಹಾಕಿ ನೀರು ಮೇಲೆ ಬಂದ ಮೇಲೆ ನೀರನ್ನು ಕುಡಿದು ಬಾಯಾರಿಸಿಕೊಂಡಿತು. ಕಾಗೆಯ ಬುದ್ಧಿಮತ್ತೆಯನ್ನು ಹೊಗಳಲು ಈ ಕತೆಯನ್ನು ಸೃಷ್ಟಿ ಮಾಡಿರಬೇಕು ಎಂದು ಕೊಂಡರೆ ತಪ್ಪು, ನಾವು ಅರ್ಥಮಾಡಿಕೊಂಡಿದ್ದಕ್ಕಿಂತ ಹೆಚ್ಚು ಬುದ್ಧಿವಂತಿಕೆ ಕಾಗೆಗಳಿಗೆ ಇದೆ.  ವಿಜ್ಞಾನಿಗಳು ಯಾವುದೆಲ್ಲಾ ವಿಷಯಗಳನ್ನಿಟ್ಟುಕೊಂಡು ಸಂಶೋಧನೆ ಮಾಡುತ್ತಾರೆ. ಭೂಮಿಯ ಮೇಲೆ ಇರುವ ಚರಾಚರಗಳನ್ನೆಲ್ಲಾ, ಹುಡುಕಿ, ಹೆರಕಿ, … Read more

ಪ್ರೀತಿಯ ಅತ್ತೆಯಾಗುವವಳಿಗೊಂದು ಪತ್ರ: ಪದ್ಮಾ ಭಟ್

                            ಪ್ರೀತಿಯ ಅಮ್ಮ.. ಅಮ್ಮನೆಂದು ಯಾಕೆ ಕರೆಯುತ್ತಿದ್ದಾಳೆ ಎಂದು ಯೋಚಿಸುತ್ತಿದ್ದೀಯಾ? ನೀನು ನನ್ನನ್ನು ಮಗಳೆಂದೇ ಕರೆದ ತಕ್ಷಣವೇ ನಿನ್ನನ್ನು ಅಮ್ಮನೆಂದು ಸ್ವೀಕರಿಸಿಬಿಟ್ಟೆ..ಅದಿರಲಿ.. ಆವತ್ತು ನೀ ಬರೆದ ಪತ್ರ ಓದುತ್ತಿದ್ದಂತೆಯೇ  ಕಣ್ಣಂಚಿನಲ್ಲಿ ಸಣ್ಣಗೆ ನೀರು ಒಸರಿತ್ತು..  ಜಗತ್ತಿನ ಎಲ್ಲರಿಗೂ ನಿನ್ನಂತಹ ಅತ್ತೆಯೇ ಸಿಕ್ಕಿದ್ದರೆ ಎಂದು ಅನಿಸಿದ್ದೂ ಹೌದು.. ನಿನ್ನಿಂದ ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದು ಅನಿಸಿತ್ತು. ನಿನ್ನ ಪತ್ರವು ಕೇವಲ … Read more

ಸಾಮಾನ್ಯ ಜ್ಞಾನ (ವಾರ 69): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಯಿತು? ೨.    ಬಿಸಿಸಿಐ (BCCI) ನ ವಿಸ್ತೃತ ರೂಪವೇನು? ೩.    ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ ಭಾಗದ ಹೆಸರೇನು? ೪.    ಕಲಾಂತಕ ಭೀಮೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ? ೫.    ತ್ರಿಪುರ ರಾಜ್ಯದ ಆಡಳಿತ ಭಾಷೆ ಯಾವುದು? ೬.    ಅಂತರರಾಷ್ರ್ಟೀಯ ಖ್ಯಾತಿ ಪಡೆದ ಕನ್ನಡದ ಶಿಕ್ಷಣ ತಜ್ಞ ಯಾರು? ೭.    ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? ೮.    ಷೇಕ್ಸ್ ಫಿಯರ್ ವಿರಚಿತ ಕಾಮಿಡಿ ಆಫ್ … Read more