ಗೂಗಲ್ಡೂಡಲ್ ಪುರಾಣ: ಪ್ರಶಸ್ತಿ ಪಿ.

ಮೊನ್ನೆ ಎಂದಿನಂತೆ ಗೂಗಲ್ ತೆರೆತಿದ್ದೋನಿಗೆ ಸಿಕ್ಕಾಪಟ್ಟೆ ಖುಷಿ ಆಯ್ತು. ಕಾರಣ ಏನಪ ಅಂದ್ರೆ ನಮ್ಮ ಭಾರತದ ಕೋಗಿಲೆ(nightangle of india) ಎಂದೇ ಖ್ಯಾತ ಸರೋಜಿನಿ ನಾಯ್ಡು ಅವರ ಮುಖಚಿತ್ರ ಗೂಗಲ್ನಲ್ಲಿ ರಾರಾಜಿಸ್ತಾ ಇತ್ತು. ಸಣ್ಣವರಿದ್ದಾಗ ಪಠ್ಯದಲ್ಲಿ ನೋಡಿದ ಅವರ ಮುಖ ಇವತ್ತು ಗೂಗಲ್ನಲ್ಲಿ ಕಂಡಾಗ ಏನೋ ಖುಷಿ. ಗೂಗಲ್ನಲ್ಲಿ ಭಾರತೀಯರ ಬಗ್ಗೆ ಬಂದೇ ಇಲ್ವಾ ಅಂತಲ್ಲ. ಬಂದಿದೆ. ಶ್ರೀನಿವಾಸ ರಾಮಾನುಜಂ ಜನ್ಮದಿನ, , ಜಗತ್ ಸಿಂಗ್, ಜಗದೀಶ ಚಂದ್ರ ಬೋಸ್ ಜನ್ಮದಿನ, ಗಾಂಧೀಜಯಂತಿ, ಹೋಳಿ, ದೀಪಾವಳಿ, ಪ್ರತೀವರ್ಷದ … Read more

ಮನರಂಜನಾ ಮಾಲಿನ್ಯ: ಅಖಿಲೇಶ್ ಚಿಪ್ಪಳಿ

ಎಲ್ಲಾ ನಕ್ಕ ಮೇಲೆ ದಡ್ಡ ನಕ್ಕನಂತೆ. ಈ ಭುವಿಯ ಮೇಲೆ ಲಕ್ಷಾಂತರ ಸಸ್ಯ-ಪ್ರಾಣಿ-ಪಕ್ಷಿ ಪ್ರಭೇದಗಳಿವೆ. ಆಧುನಿಕ ಮಾನವನ ಅತಿಲಾಲಸೆ, ದುರಾಸೆ, ಅಭಿವೃದ್ಧಿಯ ಹಪಾಹಪಿ, ತಂತ್ರಜ್ಞಾನದ ಅವಲಂಬನೆ, ಸುಖಲೋಲುಪತೆ, ಕೂಡಿಡುವ ಪ್ರವೃತ್ತಿ, ಸೋಮಾರಿತನ, ಶೊಂಬೇರಿತನ, ಹುಂಬತನ, ಮೋಜು-ಮಸ್ತಿ, ಕ್ರೌರ್ಯ ಇತ್ಯಾದಿಗಳಿಂದಾಗಿ ಹಲವು ಪ್ರಭೇದಗಳು ನಾಶವಾಗಿವೆ. ನಾಶವಾಗುವ ಹೊಸ್ತಿಲಿನಲ್ಲಿ ಮತ್ತಷ್ಟಿವೆ. ಅಷ್ಟೇಕೆ ಖುದ್ದು ಭೂಮಿಯೇ ಅಳಿವಿನಂಚಿನಲ್ಲಿ ಬಂದು ನಿಂತಿದೆ. ಪರಿಸರ ಪ್ರಾಜ್ಞರು, ಪರಿಸರ-ವಿಜ್ಞಾನಿಗಳು, ಭೂಪುತ್ರರು ಸೇರಿ ಭೂಮಿಯನ್ನುಳಿಸುವ ಪ್ರಯತ್ನ ಮಾಡುತ್ತಾರೆ. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆಯಂತೆ, ಭೂಮಿಯ … Read more

ಓಯಸಿಸ್: ನಿನಾದ

ಅಂದು ಶನಿವಾರ ನಿನಾದಳಿಗೆ ಮನೆಯಲ್ಲಿ ಒಬ್ಬಳೆ  ಕೂತು ಸಾಕಾಗಿ ಹೋಗಿತ್ತು. ಸಾಮಾನ್ಯವಾಗಿ ನಿಶಾಂತ್ ಗೆ ಶುಕ್ರವಾರ, ಶನಿವಾರ ವಾರದ ರಜೆ. ಆದರೆ ಅವನ ಟೀಂ ಲೀಡರ್ ಒಂತರಾ ವಿಚಿತ್ರ ಮನುಷ್ಯ. ರಜೆ ಅಂದ್ರು ಮನೆಯಲ್ಲಿ ಇರೋಕೆ ಬಿಡುತ್ತಿರಲಿಲ್ಲ. ಹೀಗಾಗಿ ಎಲ್ಲ ಶನಿವಾರಗಳು ಆಫೀಸ್ ಗೆ ಹೋಗೋದು ಅನಿವಾರ್ಯ ಆಗಿತ್ತು. ಇತ್ತ ನಿನಾದ ಕಿರಿ ಕಿರಿ ಮಾಡಿದ್ದಕ್ಕೆ ಸರಿ ನೀನು ಬಾ ನನ್ನ ಜೊತೆಗೆ ಅಂದು ನಿಶಾಂತ್ ಆಫೀಸ್ ಗೆ ಹೊರಟ. ಹೀಗೆ ನಿನಾದ ನಿಶಾಂತ್ ಜೊತೆ ಆಫೀಸ್ … Read more

ಹನಿಮೂನ್: ಅನಿತಾ ನರೇಶ್ ಮಂಚಿ

ಸಂಜೆಯ ಹೊತ್ತು.. ಹೂಗಿಡಗಳ ಮೇಲಿನಿಂದ ಬೀಸಿ ಬರುವ ಗಾಳಿ ಪಾರಿಜಾತದ ಕಂಪನ್ನು ಒಳ ಹೊತ್ತು ಬರುತ್ತಿತ್ತು.ಅಂಗಳದ ಮೂಲೆಯಲ್ಲಿ ಅರಳಿದ ಸಂಜೆ ಮಲ್ಲಿಗೆಯನ್ನು ನೇವರಿಸುತ್ತಾ ’ಜೀವ ತುಂಬಿ ಭಾವ ತುಂಬಿ ಮನದ ದೀಪ ಬೆಳಗಿ ಬಾ..’ ಎಂದು ಹಾಡುತ್ತಿರುವಾಗಲೇ  ದೀಪ ಹೊತ್ತಿಸುವ ಹೊತ್ತಾಯಿತೆಂದು ನೆನಪಾಗಿದ್ದು. ಒಳಗಡಿಯಿಟ್ಟೆ. ಮಬ್ಬುಗತ್ತಲಲ್ಲಿ ತಲೆ ತಗ್ಗಿಸಿ ಕೂತಿದ್ದ ಆಕಾರವೊಂದನ್ನು ಕಂಡು ಅಲ್ಲಿಯವರೆಗಿದ್ದ ರೋಮ್ಯಾಂಟಿಕ್ ಮೂಡ್   ಒಮ್ಮೆಲೇ ಮಾಯವಾಗಿ  ಹೃದಯ ಹಾರಿ ಬಾಯಿಗೆ ಬರುವಂತಾಯಿತು. ನನ್ನನ್ನು ಕಂಡು ಪಕ್ಕನೇ ಎದ್ದ ಆಕಾರ ಪರಿಚಯದ್ದು ಅನ್ನಿಸಿ … Read more

ಮೂವರ ಕವಿತೆಗಳು: ಮೇಗರವಳ್ಳಿ ರಮೇಶ್, ಮಹೇಶ್ ಕಲಾಲ್, ರಾಜ ಹಂಸ

          ತು೦ಬಿ ಹರಿದಿದ್ದಳ೦ದು ತು೦ಗೆ…..! (ಮಿ೦ಚಿ ಮಾಯವಾದವಳಿಗೊ೦ದು ನೆನಪಿನ ಒಸಗೆ)      ಅ೦ದು ಆಗಸದಲ್ಲಿ ಕರಿ ಮುಗಿಲುಗಳ ಜಾತ್ರೆ. ತಟ ಪಟನೆ ಸುರಿವ ಮಳೆಯ ಹನಿಗಳ ನಡುವೆ ತೂರಿ ಬ೦ದು ನನ್ನ ಕಣ್ಣ ಕೋರೈಸಿದ್ದು ಮುಗಿಲೊಡಲ ಮಿ೦ಚಲ್ಲ  ನಿನ್ನ ಕಣ್ಣ೦ಚು! ಮೌನ ಮೊಗ್ಗೆಯನೊಡೆದು ಅರಳದ ಮಾತು ಘಮ ಘಮಿಸಿತ್ತು ನಿನ್ನೊಳಗೆ. ಅದ ಹೊತ್ತು ತ೦ದ ಶ್ರಾವಣದ ತ೦ಗಾಳಿ ಹೊಸ ಪುಳಕಗಳನೆಬ್ಬಿಸಿತ್ತು ನನ್ನೊಳಗೆ! ಒದ್ದೆ ನೆಲವನು ಗೆಬರುತ್ತ ನಿ೦ತಿದ್ದೆ ನಿನ್ನ ಕಾಲ್ಬೆರಳ … Read more

ನಿಮ್ಮ ಹೆಸರು ನಮ್ಮ ಮನದಲ್ಲಿದೆ: ಅಮರ್ ದೀಪ್ ಪಿ.ಎಸ್.

ವರ್ಷದ ಕನಿಷ್ಠ ಆರು ತಿಂಗಳಾದರೂ ಮದುವೆ ಸೀಜನ್ನು ಮುಂದುವರೆದಿರುತ್ತದೆ. ಸೀಜನ್ನು ಬಂತೆಂದರೆ ಲಗ್ನ ಪತ್ರಿಕೆಗಳನ್ನು ಜೋಡಿಸಿಟ್ಟು ಕುಟುಂಬ ಸಮೇತವಾಗಿ ಹೋಗುವಂಥವು, ಒಬ್ಬರೇ ಹೋದರೂ ನಡೆಯುತ್ತದೆನ್ನುವಂಥವುಗಳನ್ನೂ ಲೆಕ್ಕ ಹಾಕಿ ಓಡಾಡಲಿಕ್ಕೆ ಒಂದಷ್ಟು ದುಡ್ಡು ಎತ್ತಿಟ್ಟು ಅನಣಿಯಾಗಲೇಬೇಕು. ಹೋಗದಿದ್ದರೆ ಏನಂದುಕೊಂಡಾರೋ ಎನ್ನುವ ಮುಲಾಜು ಅಥವಾ ಸಂಭಂಧ ಗಳ ನವೀಕರಣಕ್ಕೆ, ಖುಷಿಯ ಸಂಧರ್ಭದಲ್ಲಿ ಎಲ್ಲರನ್ನು ಭೇಟಿಯಾಗುವ ಅವಕಾಶಕ್ಕಾದರೂ ಹೊರಡು ತ್ತೇವೆ. ಮೊನ್ನೆ ನೆಂಟರೊಬ್ಬರು ಬಂದು ತಮ್ಮ ಮನೆಯಲ್ಲಿ ನಡೆಯಲಿರುವ ಮದುವೆ  ಸಮಾರಂಭಕ್ಕೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು.  ಹೆಸರು ಬರೆದರೂ ನಿಮ್ಮ … Read more

ಕಿರು ತೆರೆಯಲ್ಲಿ ಕನ್ನಡ: ಶಿದ್ರಾಮ ಸುರೇಶ ತಳವಾರ

ಪ್ರಸಕ್ತ ದಿನಗಳಲ್ಲಿ ಮಹಿಳೆಯರೂ ಸೇರಿದಂತೆ ಹಲವಾರು ಪುರುಷರೂ ಕೂಡಾ ಕಿರುತೆರೆಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ದಾಸರಾಗಿದ್ದಾರೆ. ಮುಂಚೆ ಅದೆಷ್ಟೋ  ಕೌಟುಂಬಿಕ  ಎಂಬ ಶೀರ್ಷಿಕೆಯಡಿ ಧಾರಾವಾಹಿಗಳು ಬರುತ್ತಿದ್ದವು. ಅವುಗಳನ್ನು ಚಿಕ್ಕಂದಿನಲ್ಲಿದ್ದಾಗ ನಾವೂ ನೋಡಿದ್ದೇವೆ. ಆ ನಿರ್ದೇಶಕರ ಹೆಸರುಗಳನ್ನು  ನಾವು ಸರಿಯಾಗಿ ನೆನಪಿಟ್ಟುಕೊಳ್ಳದೇ ಹೋದರೂ ಆ ಧಾರಾವಾಹಿಗಳಿಂದ ನಾವು ಸಾಕಷ್ಟು ವಿಷಯಗಳೊಂದಿಗೆ ಕನ್ನಡ, ಕನ್ನಡದ ಪದಗಳನ್ನು ತಿಳಿದುಕೊಂಡು ಕಲಿತುಕೊಂಡಿದ್ದೇವೆ. ಇದು ಸಂತಸದ ವಿಷಯವಷ್ಟೇ. ಇತ್ತೀಚಿನ ಕೆಲ ವರ್ಷಗಳಿಂದ ಕನ್ನಡದ ಸುಮಾರು ಚಾನೆಲ್‌ಗಳು ದೃಶ್ಯ ಮಾಧ್ಯಮದಲ್ಲಿವೆಯಾದರೂ ಯಾವ ಮಾಧ್ಯಮವೂ ಸ್ಪಷ್ಠ ಕನ್ನಡದ ಉಚ್ಛಾರಣೆಯನ್ನು … Read more

ಸಾಮಾನ್ಯ ಜ್ಞಾನ (ವಾರ 15): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತದಲ್ಲಿ ಇಂಗ್ಲೀಷ್ ವಿಧ್ಯಾಭ್ಯಾಸವನ್ನು ಜಾರಿಗೆ ತಂದವರು ಯಾರು? ೨.    ’ನೆಲಗಡಲೆ’ ಇದು ಮೂಲತಃ ಯಾವ ದೇಶದ ಬೆಳೆ? ೩.    ಭಾರತದಲ್ಲಿ ಅತ್ಯಂತ ಹೆಚ್ಚು ಪ್ರಸಾರ ಸಂಖ್ಯೆಯುಳ್ಳ (Combined net sales) ದಿನ ಪತ್ರಿಕೆ ಯಾವುದು? ೪.    ಹತ್ತು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ? ೫.    ಭಾರತದ ನೈಟಿಂಗೇಲ್ ಎಂದು ಯಾರನ್ನು ಕರೆಯುತ್ತಾರೆ? ೬.    ರೋಮಿಯೋ ಜೂಲಿಯೆಟ್ ನಾಟಕದ ಕರ್ತೃ ಯಾರು? ೭.    ನೇತ್ರಾದಾನದಲ್ಲಿ ಕಣ್ಣಿನ ಯಾವ ಭಾಗವನ್ನು ಬೇರೆಯವರಿಗೆ ಅಳವಡಿಸಬಹುದು? ೮.   … Read more

ಕಲಿಕೆ ಮತ್ತು ಶಿಕ್ಷಣ (ಕೊನೆಯ ಭಾಗ): ನಾರಾಯಣ ಎಂ.ಎಸ್.

ಇಲ್ಲಿಯವರೆಗೆ ಇಷ್ಟೆಲ್ಲಾ ಹೇಳಲು ಕಾರಣಗಳಿಲ್ಲದಿಲ್ಲ. ಇತ್ತೀಚೆಗೆ ಪ್ರತಿಷ್ಠಿತವೆಂದು ಭಾರೀ ಹೆಸರು ಮಾಡಿರುವ ವ್ಯವಹಾರ ನಿರ್ವಹಣಾ ಶಾಸ್ತ್ರದ ಕಾಲೇಜೊಂದರ ಸಮಾರಂಭಕ್ಕೆ ಹೋಗಿದ್ದೆ. ಅಲ್ಲಿ ನಾನು ಕೇಳಿದ ಹೆಸರಾಂತ ಶಿಕ್ಷಣ ತಜ್ಞರೊಬ್ಬರ ಅದ್ಭುತವಾದ ಭಾಷಣವೊಂದು, ಯಾವುದೇ ಸಾಮಾಜಿಕ ಹೊಣೆಗಾರಿಕೆ ಹಾಗೂ ಬದ್ಧತೆಯಿಲ್ಲದ ಅತಿ ಬುದ್ಧಿವಂತರು ಸಮಾಜದ ಸ್ವಾಸ್ಥ್ಯಕ್ಕೆ ಹೇಗೆ ಮಾರಕವಾಗಬಲ್ಲರೆಂಬುದಕ್ಕೆ ಜ್ವಲಂತ ನಿದರ್ಶನದಂತಿತ್ತು.  ಕಾಕತಾಳೀಯವೆಂಬಂತೆ ಅವರೂ ಸಹ ಈ ಮೇಲೆ ಹೇಳಿದ ಆನೆಯ ಕಥೆಯನ್ನೇ ಬಳಸುತ್ತಿದ್ದರು. ಆದರೆ ಅದರ ಹಿಂದಿನ ಉದ್ದೇಶ ಮಾತ್ರ ಒಳ್ಳಯದಿದ್ದಂತೆ ನನಗೆ ತೋರಲಿಲ್ಲ. ಅವರ ಮಾತಿನ … Read more

ಮಸಣದಲ್ಲಿ ಮಿಲನ: ಸುಮನ್ ದೇಸಾಯಿ

ಫೆಬ್ರುವರಿ ತಿಂಗಳ ಒಂದು ಸಂಜೆ. ಇತ್ಲಾಗ ಬ್ಯಾಸಗಿನು ಅಲ್ಲ, ಅತ್ಲಾಗ ಚಳಿಗಾಲನು ಅಲ್ಲಾ ಅಂಥ ದಿನಗಳವು. ಒಂಥರಾ ನಸುಸೆಖೆ ಬರೆತ ತಂಪಿನ ವಾತಾವರಣ. ಹುಣ್ಣಿವಿ ಇತ್ತಂತ ಕಾಣಸ್ತದ ಸಂಜಿ ಸರಿಧಂಗ ಬೆಳದಿಂಗಳ ಹೂವು ಹಾಸಲಿಕತ್ತಿತ್ತು. ಊರ ಹೊರಗಿನ ಸುಡಗಾಡಿನ್ಯಾಗ ಒಂದ ನಮೂನಿ ಅತೃಪ್ತಭಾವದ ತಂಗಾಳಿಯೊಂದು ಮಂದವಾಗಿ ಬಿಸಲಿಕ್ಕೆ ಶೂರುವಾತು. ಮಸಣದೊಳಗ ಹರಡಿದ್ದ ತರಗೆಲಿಗೊಳು ಹವರಗ ಸರಿದಾಡಲಿಕತ್ವು. ಸೂಂಯ್ಯನ್ನೊ ಸುಳಿಗಾಳಿ ಮಲಗಿದ ಆತ್ಮಗಳನ್ನ ಎಬ್ಬಿಸೊ ಅಲಾರಾಂನಂಗ ಅನಿಸ್ತಿತ್ತು. ಅದಕ್ಕಾಗಿನ ಕಾಯ್ಲಿಕತ್ತಿತ್ತು ಅನ್ನೊಹಂಗ ಸುಡಗಾಡಿನ ನಡುವಿದ್ದ ಸಮಾಧಿಯಿಂದ ಒಂದು ಆಕೃತಿ … Read more