ಊಟಕ್ಕೇನು?: ಅನಿತಾ ನರೇಶ್ ಮಂಚಿ

’ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?’ ಅನ್ನೋ ಪದ್ಯ ಎಲ್ಲರಿಗೂ ತಿಳಿದಿದೆ. ಅದರಲ್ಲಿ ನಾಯಿ ಮರಿಯನ್ನು ’ನಾಯಿ ಮರಿ ನಿನಗೆ ತಿಂಡಿ ಏಕೆ ಬೇಕು’  ಎಂದು ಕೇಳಿದಾಗ ಅದು ’ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು’ ಎಂಬ ಉತ್ತರ ನೀಡುತ್ತದೆ ಅಲ್ವಾ..! ಅಂದರೆ ನಾಯಿ ಮರಿಗೂ ಆಹಾರ ಎಂದರೆ  ಹೊಟ್ಟೆ ತುಂಬಲು, ಶರೀರವನ್ನು ಪೋಷಿಸಲು ಇರುವಂತಹುದು ಎಂದು ತಿಳಿದಿದೆ ಎಂದಾಯಿತಲ್ಲ.  ಆದರೆ ನನ್ನಂತ ಹುಲು ಮಾನವಳ ದೃಷ್ಟಿಯಲ್ಲಿ ತಿಂಡಿ ಎಂಬುದು ’ಪ್ರೆಸ್ಟಿಜ್’ ಪ್ರಶ್ನೆಯಾಗಿದ್ದ ಕಾಲವೊಂದಿತ್ತು.  ಆಗಷ್ಟೇ ಹೈಸ್ಕೂಲಿಗೆ … Read more

ಮೆಸೇಜೆಂಬ ಅಂಚೆ: ಪ್ರಶಸ್ತಿ ಪಿ.

  ನಮ್ಮ ಗುಂಡಣ್ಣ ಏನೋ ಬರೀತ ಕುತ್ಕಂಡಿದ್ದಾಗ ಅವ್ನ ಗೆಳೆಯರೆಲ್ಲ ಒಬ್ಬೊಬ್ರಾಗಿ ಅಲ್ಲಿ ಬಂದು ಸೇರ್ಕಂಡ್ರು. ಅವ್ನ ಬರೆಯೋ ಪ್ಯಾಡೂ ಕಸ್ಕಂಡು ಅದ್ರ ತಲೆಬರಹ ಓದಿದ ಟಾಂಗ್ ತಿಪ್ಪ ಅಲಿಯಾಸ ತಿಪ್ಪೇಶಿ.. "ಮೆಸೇಜೆಂಬ ಅಂಚೆ" .. ಎಂತ ಮಾರಾಯ ಪಂಚೆ ಅಂದ್ಯ? ಅದು ನನ್ನ ಮೆಚ್ಚಿನ ಉಡುಪು ಗುತ್ತುಂಟಾ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಪಂಚೆ ಅಲ್ಲ ಮುಂಜು ಅವ್ರೆ ಅಂಚೆ.. ಪೋಸ್ಟು ಅಲ್ವಾ ಮಿಸ್ಟರ್ ರೌಂಡ್ ಅಂತ ಬಂದ್ಳು ಇಳಾ ಅಲಿಯಾಸ್ ಇಳಾದೇವಿ. … Read more

ನಿನ್ನೆಡೆಗೆ ನೆಟ್ಟ ನನ್ನ ದೃಷ್ಟಿ ಕದಲದಿರಲಿ: ಸಚಿನ್ ನಾಯ್ಕ ಅಂಕೋಲ

ನನ್ನ ಬದುಕಿನ ಹಾದಿಯಲ್ಲಿ ನಗುವಿನ ಹೂ ಚೆಲ್ಲಿನಿಂತ  ನಿನಗಾಗಿ…..                                             ನಿನ್ನವನಿಂದ…. ಡಿಸೆಂಬರ್ ತಿಂಗಳ ಚಮುಚುಮು ಚಳಿಗಾಳಿ….. ಮೆಲ್ಲನೆ, ಹರಿವ ಸದ್ದೂ ಕೇಳದಷ್ಟು ಶಾಂತತೆ ಕಾಪಾಡಿಕೊಂಡು ಈ ನದಿ ಚಂದ್ರನ ಹಾಲು ಬೆಳಂದಿಗಳು ಜೊತೆಗೊಂದಿಷ್ಟು ನಿನ್ನ ನೆನಪುಗಳು  ಎದೆಯಲ್ಲಿ ಮಲ್ಲಿಗೆ ಬಿರಿದಂತೆ ಉಲ್ಲಾಸ ಉತ್ಸಾಹ ಅಹಾ….! ನಾನೇ ಈ ಜಗದ  ಪರಮ ಸುಖಿ…. ನಂಗೊತ್ತು ನೀನು ನೆನಪಾಗ್ತ ಇದ್ದೆ ಎಂದ್ರೆ ನಿಂಗೆ ಕೆಟ್ಟ … Read more

ಕಪ್ಪು ಚಿಮಣಿಯ ಹಿಂದೆ ಕಳೆದು ಹೋದ ಗೆರೆಗಳು: ಸಚೇತನ

ಬರ್ಲಿನ್ ನಗರದ ಎಲ್ಲ ರಸ್ತೆಗಳಲ್ಲಿ 'ಬ್ರೂನೋ' ಎನ್ನುವ ಪುಟ್ಟ ಬಾಲಕ ಮತ್ತವನ ಗೆಳೆಯರ  ಗಾಡಿ ಹಾದು ಹೋಗುತ್ತದೆ. ಮಳೆ ಸುರಿದ ಬೀದಿಗಳಲ್ಲಿ, ಮಹಿಳೆಯರು ಮತ್ತವರ ಪುರುಷರು ಆರಾಮವಾಗಿ ಚಹಾ ಹೀರುತ್ತಿರುವ ಕೆಫೆಗಳ ಬಳಿ, ಹೊಸದಾಗಿ ತಂದ ಕೈ ಚೀಲದಂತ ಬಟ್ಟೆ ಧರಿಸಿದ ಸೈನಿಕರನ್ನು ಹೊತ್ತು ಕುಳಿತ ಮೋಟಾರಿನ ಬಳಿ,  ಬಟ್ಟೆ ಅಂಗಡಿಯ ಎದುರಿನಲ್ಲಿ ನಿಲ್ಲಿಸಿದ ಬೊಂಬೆಯಂತೆ ಒಂದೆ ಸಮನೆ ನಿಂತೆ ಇರುವ ದ್ವಾರಪಾಲಕರ ಬಳಿ  ಹಾದು ಮನೆಯ  ಎದುರು ಗೆಳೆಯರನ್ನು ಬೀಳ್ಕೊಟ್ಟು ಕೈ ತೋಟದ ಮೂಲಕ ಮನೆ … Read more

ದೇವರಿಗೆ ಮುಡಿಸಿ ತೆಗೆದ ಬಾಡಿದ ಹೂಗಳು: ಅಮರ್ ದೀಪ್ ಪಿ.ಎಸ್.

ದೇವರ ಮೇಲೆ ಭಕ್ತಿಗಿಂತ ಭಯ ಜಾಸ್ತಿ ಇರುತ್ತೇ ಮಕ್ಕಳಿಗೆ.  ದೊಡ್ಡವರೂ ಅಷ್ಟೇ. ಮಕ್ಕಳ ಶ್ರದ್ಧೆ, ಶಿಸ್ತು, ಒಳ್ಳೆಯ ನಡತೆ, ಕಲಿಕೆ ಎಲ್ಲದರ ನಿಯಂತ್ರಣಕ್ಕಾಗಿ ಮತ್ತು ಬೆಳವಣಿಗೆಗಾಗಿ ಪ್ರಸ್ತಾವನೆಗಳನ್ನು “ದೇವರು” ಅನ್ನುವ  ಅಗೋಚರನ ಮುಂದಿಟ್ಟೇ ಜೀವನ ನಡೆಸುತ್ತಿರುತ್ತಾರೆ.   ನಾವೂ ಅಷ್ಟೇ, ತಿಳುವಳಿಕೆ ಬರುವವರೆಗೂ ಅಥವಾ ಬಂದ ಮೇಲೂ “ದೇವ”ರೆನ್ನುವ ಫೋಟೋ ಮತ್ತು ಆತನ ಕೋಣೆಗೆ ಒಮ್ಮೆ ಭೇಟಿಯಾಗಿಯೇ ಮುಂದಿನ ಹೆಜ್ಜೆ ಇಡುತ್ತೇವೆ.   ತಪ್ಪು ಮಾಡಿದಾಗ, ಬರೆದ  ಉತ್ತರ ತಪ್ಪಾಗಿ ಒದೆ ಬೀಳುವಾಗ, ರಿಜಲ್ಟು ಶೀಟ್ ನೋಡುವಾಗ, … Read more

ಕವಿತೆಯ ಕನವರಿಕೆಗಳು: ಸಂಗೀತ ರವಿರಾಜ್

                ಸಾಹಿತ್ಯದ ಎಲ್ಲಾ ಪ್ರಕಾರಗಳಿಂದಲೂ ಕವಿತೆಯೆ ಹೆಚ್ಚು ಅನುಭೂತಿಯನ್ನು ನೀಡುವಂತದ್ದು. ಇದು ಸಾಹಿತ್ಯದ ಬಗೆಗೆ ಆಸಕ್ತಿಯಿರುವವರ ಅಂಬೋಣ. ಆದರೆ ಕವಿತೆ ಅಂದರೆ ಮಾರುದೂರ ಹೋಗುವ, ಮೂಗು ಮುರಿಯುವ ಜಾಯಮಾನದವರೆ ಹೆಚ್ಚಿರುವ ಈ ಕಾಲದಲ್ಲಿ ಕವಿತೆ ಬಗ್ಗೆ ಚೂರು ಪಾರು ಅಭಿಮಾನ ಹೊಂದಿರು ನಮ್ಮಂತವರ ಗತಿ ದೇವರಿಗೆ ಪ್ರೀತಿ! ಸಿನಿಮಾಗಳಲ್ಲಿ, ಹಾಸ್ಯ ಧಾರಾವಾಹಿಗಳಲ್ಲಿ ಬರಹಗಾರರನ್ನು ವಿದೂಷಕರನ್ನಾಗಿ ತೋರಿಸುವ ಪರಿಪಾಟಲು ಹಿಂದಿನಿಂದಲೇ ನಡೆದು ಬಂದಿದೆ. ವಾಸ್ತವವಾಗಿ ಏನಾಗುತ್ತದೆಯೆಂದರೆ ಓದುಗರ ಸಂಖ್ಯೆ … Read more

ತಿರಸ್ಕಾರ (ಭಾಗ 3): ಜೆ.ವಿ.ಕಾರ್ಲೊ, ಹಾಸನ

(ಇಲ್ಲಿಯವರೆಗೆ) ಉದ್ದೇಶ? ಅದು ಅವನಿಗೂ ಗೊತ್ತಿರಲಿಲ್ಲ. ಪ್ರೀತಿಯ ಹಸಿವು, ಕಾಡುತ್ತಿರುವ ತಬ್ಬಲಿತನ ಎಂದು ಹೇಳಲು ಅವನಿಗೆ ನಾಲಿಗೆ ಹೊರಳಲಿಲ್ಲ. ಊರ ಜನರ ತಿರಸ್ಕಾರ ಅವನನ್ನು ಉಸಿರುಗಟ್ಟಿಸಿತ್ತು. ಅವರ ಇರುವನ್ನೇ ಕಡೆಗಣಿಸಿ ಪಕ್ಕಕ್ಕೆ ಮುಖ ತಿರುಗಿಸಿ ನಡೆಯುವ ಫ್ರಾನ್ಸಿಗರ ಕತ್ತನ್ನು ಹಿಡಿದು ಮುರಿಯಬೇಕೆನ್ನಿಸುವಷ್ಟು ಕ್ರೋಧ ಅವನಲ್ಲಿ ಉಂಟಾಗುತ್ತಿತ್ತು. ಕೆಲವೊಮ್ಮೆ ಅಸಹಾಯಕತೆಯಿಂದ ಗಳಗಳನೆ ಅಳಬೇಕೆಂದು ಅವನಿಗೆ ಅನಿಸುತ್ತಿತ್ತು. ತನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ಸ್ವಾಗತಿಸುವ ಒಂದು ಮನೆಯಿದ್ದಿದ್ದರೆ! ಇದು ಅವನ ಗುಪ್ತ ಆಸೆಯಾಗಿತ್ತು. ಆನ್ನೆಟಳಂತ ಹುಡುಗಿ ತನ್ನ ಜಾಯಮಾನಕ್ಕೆ ತಕ್ಕ ಹುಡುಗಿ … Read more

ಚುಟುಕಗಳು: ನವೀನ್ ಮಧುಗಿರಿ, ನಗೆಮಲ್ಲಿಗೆ

ಕಿರು ಕವಿತೆಗಳು —————— ಅಪ್ಪನ ನೇಗಿಲ ಕಾವ್ಯಕೆ ಹೊಟ್ಟೆ ತುಂಬಿದವರ ತೇಗುಗಳೇ ಪ್ರಶಸ್ತಿ , ಪುರಸ್ಕಾರ ತಟ್ಟೆಯಲಿ ಬಿಟ್ಟ, ತಿಪ್ಪೆಗೆ ಚೆಲ್ಲಿದ ಅನ್ನ ಅಪ್ಪನ ಬೆವರಿಗೆ ನೀವು ಮಾಡಿದ ಅವಮಾನ — ಮೊನ್ನೆ ಮಹಾನ್ ದೈವಭಕ್ತ ಸಿದ್ರಾಮ ದೇವರಿಗೆ ಕೈ ಮುಗಿದು ಕಾಣಿಕೆ ಸಲ್ಲಿಸಿ ದೇವಸ್ಥಾನದಿಂದ ಹೊರ ಬರುವಷ್ಟರಲ್ಲಿ ಅವನ ಚಪ್ಪಲಿ ಕಳುವಾಗಿದ್ದವು! — ರೈತನ ಬೆವರ ಹನಿ ಹೊಳೆದಿದೆ ಎಳೆ ಬಿಸಿಲಿಗೆ ಪೈರಿನ ನೆತ್ತಿಯ ಮೇಲೆ ತೆನೆ — ಒಂದಷ್ಟು ಪ್ರೀತಿ ಮಣ್ಣಾದ ಮೇಲೆ ಈ … Read more

ಅಮರವಾಗಲಿ ನಮ್ಮ ಚೆಲುವ ಕನ್ನಡ ನುಡಿಯು: ಹೊರಾ.ಪರಮೇಶ್ ಹೊಡೇನೂರು

"ಜೇನಿನ ಹೊಳೆಯೋ ಹಾಲಿನ ಮಳೆಯೋ  ಸುಧೆಯೋ ಕನ್ನಡ ಸವಿ ನುಡಿಯೋ….  ವಾಣಿಯ ವೀಣೆಯೊ ಸ್ವರ ಮಾಧುರ್ಯವೋ  ಸುಮಧುರ ಸುಂದರ ನುಡಿಯೋ….ಆಹಾ!"         ಎಂಬ ಗೀತೆಯು ನಮ್ಮ ಕರುನಾಡಿನ ಕನ್ನಡಿಗರ ಎದೆಯಾಳದಲ್ಲಿ ಸದಾ ರಿಂಗಣಿಸುತ್ತಲೇ ಇರುತ್ತದೆ. ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ರವರ ಅಮೃತ ಕಂಠಸಿರಿಯಲ್ಲಿ ಅಜರಾಮರವಾಗಿರುವ ಈ ಗೀತೆಯು ಚಲನಚಿತ್ರಕ್ಕಾಗಿ ರಚಿಸಲ್ಪಟ್ಟರೂ ನಮ್ಮ "ಸವಿಗನ್ನಡ"ದ ಹಿರಿಮೆ-ಗರಿಮೆಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿ ಕನ್ನಡ ಭಾಷಾ ಚಳುವಳಿಯಲ್ಲಿ ಪ್ರಮುಖವಾದ ಕನ್ನಡಪರ ಕಾಳಜಿಯ ಸಂದೇಶಗೀತೆಯಾಗಿದ್ದು ಇತಿಹಾಸದ ಪುಟ … Read more

ಕರುನಾಡಿನ ದಾಸಶ್ರೇಷ್ಟ ಕನಕಕದಾಸರು: ಹಿಪ್ಪರಗಿ ಸಿದ್ಧರಾಮ

ಕರುನಾಡಿನ ದಾಸ ಪರಂಪರೆಯಲ್ಲಿ ಭಕ್ತ ಕನಕದಾಸರು (1508-1606) ವಿಶಿಷ್ಟ ವ್ಯಕ್ತಿತ್ವದ ಸಮಾಜ ಸುಧಾರಕರು. ದಾಸ ಸಾಹಿತ್ಯದ ದಿಗ್ಗಜ ದಾಸಶ್ರೇಷ್ಟ ಕನಕದಾಸರ ಕರ್ಮಭೂಮಿ ಕಾಗಿನೆಲೆಯಾಗಿದ್ದರೂ ಅವರು ಜನಿಸಿದ್ದು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ. ಇಲ್ಲಿ ಕನಕದಾಸರ ಅರಮನೆ ಇದ್ದ ಬಗ್ಗೆ ಇತ್ತೀಚಿನ ಉತ್ಖನನ ಮತ್ತು ದಾಖಲೆಗಳು ಖಚಿತಪಡಿಸಿವೆ. ತಂದೆ ಬೀರಪ್ಪ ಡಣ್ಣಾಯಕರ ಅಕಾಲ ಮರಣದಿಂದ ಕಿರಿಯ ವಯಸ್ಸಿನಲ್ಲಿಯೇ ವಿಜಯನಗರ ಆಡಳಿತಕ್ಕೊಳಪಟ್ಟ ಶಿಗ್ಗಾಂವ-ಬಂಕಾಪುರ ಪ್ರದೇಶಕ್ಕೆ ಡಣ್ಣಾಯಕರಾಗಿ, ತಾಯಿ ಬಚ್ಚಮ್ಮನ ಮಾರ್ಗದರ್ಶನದಲ್ಲಿ ಆಡಳಿತ ನಡೆಸುವ ಕನಕದಾಸರ ಮೂಲ ಹೆಸರು ತಿಮ್ಮಪ್ಪ. ಯಾವುದೋ … Read more

ಗಾಧಿಮಾಯಿ ಹತ್ಯಾಕಾಂಡ: ಅಖಿಲೇಶ್ ಚಿಪ್ಪಳಿ

ದಕ್ಷಿಣ ನೇಪಾಳದ ಕಠ್ಮಂಡುವಿನಿಂದ ಸುಮಾರು 160 ಕಿ.ಮಿ. ದೂರದಲ್ಲಿರುವ ಜಿಲ್ಲೆಯ ಹೆಸರು ಬಾರ. ಈ ಜಿಲ್ಲೆಯ ಭರಿಯಾರ್‍ಪುರ್‍ನಲ್ಲಿರುವ ಗಾಧಿಮಾಯಿ ದೇವಸ್ಥಾನ ಇವತ್ತು ಜಗತ್ ಖ್ಯಾತವಾಗಿದೆ. 5 ವರ್ಷಗಳಿಗೊಮ್ಮೆ ಇಲ್ಲಿ ಜಾತ್ರೆ ನಡೆಯುತ್ತದೆ. ನಮ್ಮಲ್ಲೂ ಹಳ್ಳಿ-ಹಳ್ಳಿಗಳಲ್ಲಿ ಜಾತ್ರೆಗಳು ನಡೆಯುತ್ತವೆ. ಇದರಲ್ಲೇನು ವಿಶೇಷವೆಂದು ಕೇಳಬಹುದು. ಎಲ್ಲಾ ಜಾತ್ರೆಗಳಲ್ಲೂ ಮಾರಿಯನ್ನು ಸಂತೃಪ್ತಿಗೊಳಿಸುವ ಸಲುವಾಗಿ ಪ್ರಾಣಿಬಲಿಯನ್ನು ನೀಡುತ್ತಾರೆ. ಕೆಲವು ಕಡೆ ಅಕ್ರಮವಾಗಿ ನರಬಲಿಯನ್ನು ನೀಡುವುದೂ ಇದೆ. ಭಾರತದಂತಹ ದೇಶದಲ್ಲಿ ಪ್ರಾಣಿಬಲಿ ತಡೆಯುವ ಕಟ್ಟುನಿಟ್ಟಾದ  ಕಾನೂನುಗಳಿವೆ. ಈ ಕಾನೂನು ಹಲವು ಬಾರಿ ವಿಫಲವಾಗುತ್ತದೆ. ಕಾನೂನು … Read more

ಸಾಮಾನ್ಯ ಜ್ಞಾನ (ವಾರ 56): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: 1.    ವಿಶ್ವದ ಪ್ರಥಮ ಔದ್ಯೋಗಿಕ  ರಾಷ್ಟ್ರ ಯಾವುದು? 2.    ಭಾರತದಲ್ಲಿ ಆಡಳಿತ ಸುಧಾರಣಾ ಆಯೋಗದ ಪ್ರಥಮ ಅಧ್ಯಕ್ಷರು ಯಾರಾಗಿದ್ದರು? 3.    ಕರ್ನಾಟಕ ರಾಜ್ಯ ಡಾ||ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಎಲ್ಲಿದೆ? 4.    ಅಮುಗೇಶ್ವರ ಇದು ಯಾರ ಅಂಕಿತ ನಾಮವಾಗಿದೆ? 5.    ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯ ನಿರ್ವಹಿಸುವ ಭಾಗ ಯಾವುದು? 6.    ಕುವೆಂಪು ರವರ ಮೊದಲ ಕಾವ್ಯನಾಮ ಯಾವುದು? 7.    ಕಳರಿಪಟ್ ಎನ್ನುವುದು ಯಾವ ರಾಜ್ಯಕ್ಕೆ ಸಂಬಂಧಿಸಿದ ಯುದ್ಧ ಕಲೆಯಾಗಿದೆ? 8.   … Read more