ನವದಂಪತಿಗಳನ್ನು ಉದ್ದೇಶಿಸಿ: ಹೃದಯಶಿವ ಅಂಕಣ

ನೀವು ಈ ಜಗತ್ತಿನ ರಮ್ಯಜೀವಿಗಳು, ನೂತನ ಜಗತ್ತಿಗೆ ಮೈಮನಸುಗಳನ್ನು ತೆರೆದುಕೊಳ್ಳುತ್ತಿರುವ ಆಸೆಗಣ್ಣುಗಳ ಕೋಮಲ ಹೃದಯವಂತರು… ನಿಮ್ಮೊಟ್ಟಿಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳುವ ತುಡಿತ ನನ್ನದು . ನೀವು ಅಂದರೆ, ಇನ್ನಷ್ಟೇ ದಾಂಪತ್ಯ ಬದುಕಿಗೆ ಪ್ರವೇಶ ಪಡೆಯುತ್ತಿರುವ, ಆದರೆ ಹುಡುಗುತನದ ಗಡಿಯನ್ನು ಮೀರಿದ, ಕುಂಟೋಬಿಲ್ಲೆ, ಮರಕೋತಿ ಆಟಗಳನ್ನು ಬಿಟ್ಟು ಈಗಷ್ಟೇ ಮದುವೆಯಾಗಿರುವ ತರುಣ ಅಥಾ ತರುಣಿ. ನೀವು ಜನ ತುಂಬಿದ ಎಲ್ಲಾ ಊರುಗಳಲ್ಲಿ, ಚಿತ್ರಮಂದಿರಗಳಲ್ಲಿ, ದೇವಸ್ಥಾನಗಳಲ್ಲಿ ಕಣ್ಣಿಗೆ ಬೀಳುತ್ತೀರಿ. ಮುಂಬಯಿಯ ಇಂಡಿಯಾ ಗೇಟಿನ ಬಳಿ, ಊಟಿಯ ಚಳಿಯ ನಡುವೆ, ಕೇರಳದ … Read more

ಭ್ರಮೆ? (ಅತೀಂದ್ರಿಯ ಅನುಭವದ ಕಥೆಗಳು – ಭಾಗ ೪): ಗುರುಪ್ರಸಾದ ಕುರ್ತಕೋಟಿ

(ಈ ಕಥೆ ನನ್ನ ಗೆಳೆಯ ವಿಟ್ಠಲ ಕುಲಕರ್ಣಿಗಾದ ಅನುಭವದ ಮೇಲೆ ಹೆಣೆದಿದ್ದು. ನಂಬುವಿರೋ ಇಲ್ವೊ ಗೊತ್ತಿಲ್ಲ… ಇದನ್ನು ಅವನ ಬಾಯಿಂದ ಕೇಳುತ್ತಿದ್ದಾಗ ಹಾಗೂ ಈ ಕಥೆಯನ್ನ ರಾತ್ರಿ ಬರೆಯುತ್ತಿರುವಾಗ ನನ್ನ ಮೈಯಲ್ಲಿ ಭಯದ ಕಂಪನಗಳೆದ್ದಿದ್ದಂತೂ ನಿಜ! ಅಂದ ಹಾಗೆ, ಕಥೆಯಲ್ಲಿ ಬಳಸಿರುವ  ಹೆಸರು ನಿಜವಾದ ವ್ಯಕ್ತಿಯದಲ್ಲ.) —  ಸುಮಾರು ಹದಿನೈದು ವರ್ಷಗಳ ಹಿಂದೆ, ನಾನಿನ್ನೂ ಹುಬ್ಬಳ್ಳಿಯಲ್ಲೇ ಕೆಲಸ ಮಾಡುತ್ತಿದ್ದೆ. ಸ್ಟುಡಿಯೋ ಒಂದರಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಆರು . ಆದರೂ ಒಂದೊಂದು ಸಲ … Read more

“ಆರೋಗ್ಯದ ಮೇಲೆ ಸಕಾರಾತ್ಮಕ ಮನೋಭಾವದ ಪರಿಣಾಮ “: ಶುಭ.ಆರ್ ದೀಪು

ಆರೋಗ್ಯವೇ ಭಾಗ್ಯ  ಎಂಬ ನಾಣ್ನುಡಿಯಂತೆ  ಮನುಜನಾದವನ  ದೇಹಕ್ಕೆ  ಉತ್ತಮ ಆರೋಗ್ಯ ಮುಖ್ಯ. ಎಷ್ಟೇ ಸಿರಿಸಂಪತ್ತಿದ್ದರೂ  ಅದನ್ನು ಅನುಭವಿಸಲು ಉತ್ತಮ ಆರೋಗ್ಯಬೇಕು. ಉತ್ತಮ ಆರೋಗ್ಯವನ್ನು  ಹೊಂದಿರಲು, ಚೈತನ್ಯವನ್ನು  ಪಡೆಯಲು ನಾವು ಸೇವಿಸುವ ಗಾಳಿ, ಕುಡಿಯುವ ಶುದ್ದನೀರು,ವಾಸಿಸುವ  ಶುದ್ದ ವಾತಾವರಣ ಹಾಗೂ  ಪೌಷ್ಟಿಕ ಆಹಾರ ಹೇಗೆ ಮುಖ್ಯವೋ  ಅದೇರೀತಿಯಲ್ಲಿ  ಮನುಷ್ಯನಲ್ಲಿ ಸಕಾರಾತ್ಮಕ ಮನೋಭಾವನೆ ಕೂಡಾ ಅತಿ ಮುಖ್ಯ.  ಸಕಾರಾತ್ಮಕ ಮನೋಭಾವನೆ ಎಂದರೆ ಸದಾ ಒಳಿತನ್ನೇ ಆಲೋಚಿಸುವುದು. ಜೀವನದಲ್ಲಿ ಎಷ್ಟೇ  ಬೆಟ್ಟ ಗುದ್ದದಂತಹ ಕಷ್ಟಗಳೂ ಎದುರಾದರೂ ಅದಕ್ಕಾಗಿ ದೃತಿಗೆಡದೆ  ಸಕಾರಾತ್ಮಕವಾಗಿ ಯೋಚಿಸಿ … Read more

“ಕೇಳಿ ಕಥೆಯ” ಅನ್ನುವ ಒಂದು ವಿನೂತನ ಪ್ರಯತ್ನ: ವಾಸುಕಿ ರಾಘವನ್

ಕೆಲವು ಸಲ ನಮ್ಮ ಊಹೆ ಸರಿಯಿರಲಿಲ್ಲ ಅಂತ ಪ್ರೂವ್ ಆದಾಗ ಒಂದು ಥರಾ ಖುಷಿ ಆಗುತ್ತೆ… ವಿಷಯ ಇಷ್ಟೇ…ನಾನು ಮತ್ತು ಗೆಳೆಯ ಮುಕುಂದ್ ಒಂದು ಸಲ ಹರಟೆ ಹೊಡೆಯುತ್ತಾ ನಿಂತಿರುವಾಗ ಅವರು “ನಾನು ಒಂದು ಆಡಿಯೋ ಬುಕ್ ಪ್ರಾಜೆಕ್ಟ್ ಮಾಡ್ತಿದೀನಿ ಕಣೋ” ಅಂತಂದ್ರು. ನಾನು “ಒಹ್ ಹೌದಾ, ಏನದು?” ಅಂತ ಕೇಳಿದೆ ಕುತೂಹಲದಿಂದ. ಮುಕುಂದ್ ತಮ್ಮದೇ ಶೈಲಿಯಲ್ಲಿ “ನೋಡೋ, ಏನು ಗೊತ್ತಾ, ಇವತ್ತು ಯಾರಿಗೂ ಟೈಮ್ ಇಲ್ಲ, ಹಾಗಾಗಿ ಪುಸ್ತಕ ಓದೋರೇ ಕಮ್ಮಿ ಆಗಿಬಿಟ್ಟಿದ್ದಾರೆ, ಹಾಗಾಗಿ ಕಥೆಗಳನ್ನ … Read more

ಹೀಗೊಂದು ಪರ್ಯಟನೆ: ದಿವ್ಯ ಆಂಜನಪ್ಪ

ಈ ಗಿಜಿಬಿಜಿ ಜಂಜಾಟದ ಬದುಕಿನಲ್ಲಿ ವಯಸ್ಸಿಗೂ ಮೀರಿದ ವೈರಾಗ್ಯಗಳು ಮನೆ ಮಾಡಿ ನಾನೇ ನಾನಲ್ಲವೇನೋ ಎಂದೆನಿಸುವಷ್ಟು ಈ ಐದಾರು ವರ್ಷಗಳನ್ನು ಹೀಗೆಯೇ ಕಳೆದುಬಿಟ್ಟಿದ್ದೆ. ಉತ್ತಮವಾದ ಅಂಶವೆಂದರೆ ಅನಿಸಿದ್ದೆಲ್ಲವನ್ನೂ ಬರೆದುಬಿಡುವುದು ಒಂದು ಖಯಾಲಿಯಾಗಿ ಜೀವನಕ್ಕೊಂದು ಹೊಸ ಹುರುಪನ್ನು ಕಂಡುಕೊಂಡಿದ್ದೆ. ಈ ಅಕ್ಷರ ದಾರಿ ಕಾಣಿಸಿದ ಆ ಎಲ್ಲಾ ಸ್ನೇಹಿತರನ್ನೂ ನಾನು ಎಂದಿಗೂ ನೆನೆಯುವೆನು. ಹೀಗಿರುವಾಗ ನನ್ನ ಬಾಲ್ಯ ಸ್ನೇಹಿತೆಯೊಬ್ಬಳು ಕಳೆದ ತಿಂಗಳು ಜುಲೈನ ಒಂದು ದಿನ ಸಂಜೆ ಕರೆ ಮಾಡಿ, ''ಒಂದು ದಿನದ ಟ್ರಿಪ್ ಕಣೆ, ನಾವು ನಮ್ಮ … Read more

ತುಪ್ಪದ ರುಚಿ ನಂತರವೂ ಸಾಲ ಮಾಡಲೇಬೇಕಾ?: ಅಮರ್ ದೀಪ್ ಪಿ.ಎಸ್.

ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದ್ದರೆನ್ನಲಾದ  ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಒಂದು ಘಟನೆ. ದಲಿತ ಸಮುದಾಯದವರು ಸಾಮೂಹಿಕ ಭೋಜನದಲ್ಲಿ ತುಪ್ಪವನ್ನು ಬಡಿಸಿ, ಊಟ ಮಾಡುವ ವೇಳೆ ಮೇಲ್ವರ್ಗದ ಜನರು ಅಡುಗೆ ಪಾದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿ ಊಟ ಮಾಡುತ್ತಾ ಕುಳಿತ ಜನರನ್ನು ಹಿಗ್ಗಾಮುಗ್ಗಾ ಥಳಿಸಿದ್ದರಂತೆ. ಕಾರಣ, ಆ ವರ್ಗದ ಜನರು ತುಪ್ಪ ತಿನ್ನಬಾರದು.  ತಿಂದದ್ದು ಮೇಲ್ವರ್ಗದ ಜನಗಳಿಗೆ ಮಾಡಿದ ಅಪಮಾನವಂತೆ. ಇಂಥ ಪಿಡುಗುಗಳನ್ನು ಸಾಕ್ಷರತೆ ಸಾರುವ ಮೂಲಕ ಮಾತ್ರ ತೊಡಗಿಸಲು ಸಾಧ್ಯವೆಂದರಿತು ಡಾ. ಬಿ. ಆರ್. ಅಂಬೇಡ್ಕರ್ … Read more

ನಾಲ್ವರ ಕವನಗಳು: ಜಾನ್ ಸುಂಟಿಕೊಪ್ಪ, ಪರಶು ರಾಮ್, ಮುರಳಿ ತರೀಕೆರೆ, ಪವಿತ್ರ ಆಚಾರ್ಯ

ಮೂಲ ನನ್ನ ಬಯಕೆಗಳ ಮೂಲ ಈ ಎದೆಗೂಡಾಗಿದ್ದರೆ ತುರ್ತಾಗಿ ಎದೆಗೂಡನು ಕೆಡವಿ ಬಿಡುವುದು ಲೇಸು ಇಲ್ಲವಾದರೆ – ಈ ದೇಹ ಪಾಳು ಬಿದ್ದೀತು ,,.   ನನ್ನ ಬಯಕೆಗಳ ಮೂಲ ಈ ನೆತ್ತರಾದರೆ ಒಮ್ಮೆ ಎಲ್ಲವ ಬತ್ತಿಸುವುದು ಲೇಸು ಇಲ್ಲವಾದರೆ – ಮೈ ನೀಲಿಗಟ್ಟೀತು ,,,   ನನ್ನ ಬಯಕೆಗಳ ಮೂಲ ಈ ಉಸಿರಾದರೆ ಒಮ್ಮೆ ಸತ್ತುಬಿಡುವುದು ಲೇಸು ಇಲ್ಲವಾದರೆ – ಉಸಿರಿಗೆ ಉಸಿರು ಸೇರಿ ಊರು ಕೆಟ್ಟೀತು ,,,   ನನ್ನ ಬಯಕೆಗಳ ಮೂಲ ಈ … Read more

ಅಣ್ಣಾ ಎಂಬ ಕೂಗಲಿ ಕರಗಿಹೋಗುವ ಮುನ್ನ: ಪ್ರಶಸ್ತಿ ಅಂಕಣ

ಪ್ರತೀ ಪದಕ್ಕೂ ತನ್ನದೇ ಆದೊಂದು ನೆನಪ ಬುತ್ತಿಯಿರುತ್ತಾ ಅಂತ.  ಕೆಲವದ್ದು ನಲಿವ ನರ್ತನವಾದರೆ ಕೆಲವದ್ದು ನೋವ ಮೌನ ಗಾನ. ಅಕ್ಕ ಅನ್ನೋ ಎರಡಕ್ಷರದ ಮಾಧುರ್ಯ, ಗೆಳತಿ ಅನ್ನೋ ಮೂರಕ್ಷರದ ನವಿರು ಭಾವಗಳು, ಅಮ್ಮಾ ಅನ್ನೋ ಮಮತೆ, ಅಪ್ಪ ಅನ್ನೋ ಗೌರವ, ಹೆಮ್ಮೆ .. ಹೀಗೆ ಪ್ರತೀ ಪದವೂ ತಮ್ಮದೇ ಆದೊಂದು ಹೊಸಲೋಕಕ್ಕೆ ಕೊಂಡೊಯ್ಯುವಂತೆ. ಸ್ನೇಹ ಎಂಬ ಪದದ್ದೆಂತೂ ನೆನಪುಗಳ ಬುತ್ತಿಯಲ್ಲ. ಅದೊಂದು ಜಾತ್ರೆ. ತಿರುಗಿದಷ್ಟೂ ಮುಗಿಯದಷ್ಟು, ನೋಡಿದಷ್ಟೂ ದಣಿಯದಷ್ಟು , ಹೊಸ ಹೊಸ ದಿಕ್ಕಲ್ಲಿ ಹೊಸ ಹೊಸ … Read more

ಐ.ಲವ್ ಯೂ ಅಪ್ಪ: ಪದ್ಮಾ ಭಟ್, ಇಡಗುಂದಿ.

ನೀನ್ಯಾಕೆ ನನ್ನನ್ನು ಇಷ್ಟು ಪ್ರೀತಿಸ್ತೀಯಾ.. ನೀ ನನಗಾಗಿ ಮಾಡೋ ಒಂದೊಂದು ಪ್ರೀತಿಗೂ, ತ್ಯಾಗಕ್ಕೂ, ನಿಸ್ವಾರ್ಥದ ಮನಸಿಗೊಮ್ಮೆ ಹೀಗೆ ಕೇಳಿ ಬಿಡೋಣವೆಂದೆನಿಸುತ್ತದೆ.. ನನ್ನಗೊಂದಲ ಮನಸ್ಸಿಗೆ ನೀನು ಸಂತೈಸಿದ ದಿನಗಳು ಅದೆಷ್ಟೋ.. ನನ್ನ ಖುಷಿಯಲ್ಲಿಯೇ ನಿನ್ನ ಖುಷಿಯನ್ನು ಕಂಡ ಸಮಯಕ್ಕಂತೂ ಬಹುಶಃ ಲೆಕ್ಕವೇ ಇರಲಿಕ್ಕಿಲ್ಲ..ನಾ ಸೋತಾಗ ನನ್ನ ಕಣ್ಣೀರಲ್ಲಿಯೇ, ಹೊಸ ಭರವಸೆಯನ್ನು ಹುಟ್ಟಿಸಿದವನು ನೀನು..ಯಾವುದೇ ಒಳ್ಳೆಯ ಕೆಲಸ ಮಾಡಲಿ ಅದಕ್ಕೆಲ್ಲ ಗಟ್ಟಿಯಾದ ಸಪೋರ್ಟ್‌ ಕೊಡುತ್ತಾ ಬಂದಿದ್ದೀಯ..ಮಗಳೇ ಚನ್ನಾಗಿ ಓದು ಎಂಬ ಮಾತನ್ನು ನನ್ನ ಕಿವಿಯಲ್ಲಿ ಎಂದೂ ಗುನುಗುನಿಸುತ್ತಿರುವಷ್ಟು ಬಾರಿ ನೀ … Read more

ಕೃತಕ ಮಾಂಸ-ಎಲೆ ಮತ್ತು ವಿಶ್ವಬ್ಯಾಂಕ್ ಎಂಬ ವಿಷಜಾಲ: ಅಖಿಲೇಶ್ ಚಿಪ್ಪಳಿ ಅಂಕಣ

ಮೊನ್ನೆ ಅಂದರೆ ಅಗಸ್ಟ್ ೩ ೨೦೧೪ರಂದು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ನೆರೆ ದೇಶವಾದ ನೇಪಾಳಕ್ಕೆ ಭೇಟಿ ನೀಡಿದ್ದರು. ಕಳೆದ ೧೭ ವರ್ಷಗಳಿಂದ ಯಾವುದೇ ಭಾರತದ ಪ್ರಧಾನಿ ಅಲ್ಲಿಗೆ ಭೇಟಿ ನೀಡಿರಲಿಲ್ಲ. ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ರುದ್ರಾಕ್ಷಿ ಸರ ತೊಟ್ಟು ಕೊಂಡು ಭೇಟಿ ನೀಡಿದ ಸಮಯದಲ್ಲೇ ಇತ್ತ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ರುದ್ರಾಕ್ಷಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ವರದಿ ಮಾಡಿತ್ತು. ನೆರೆಯ ಚೀನಾದ ಮಂದಿ ಕಾರಿನ ಸೀಟು ಕವರ್‌ಗಳಿಗೆ ರುದ್ರಾಕ್ಷಿಯನ್ನು ಬಳಸುತ್ತಿದೆ ಎಂದು ಹೇಳಿತ್ತು. ಇದೇ … Read more

ಸಾಮಾನ್ಯ ಜ್ಞಾನ (ವಾರ 40): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು ೧.    ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ? ೨.    ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ ಯಾರು? ೩.    ಮೀರಾಬಾಯಿ ಯಾವ ಸಂತತಿಯ ರಾಣಿ? ೪.    ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ ಯಾವುದು? ೫.    ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು? ೬.    ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖ ಜಲಪಾತಗಳು ಯಾವುವು? ೭.    ರಕ್ಕಸತಂಗಡಿಯ ಯುದ್ಧ ನಡೆದ ವರ್ಷ ಯಾವುದು? ೮.    ಮೂರು ಹಂತದ ಪಂಚಾಯತ್ … Read more