ಮಾತಿಗೊಂದು ಗಾದೆ, ಗಾದೆಗೊಂದು ಬೋಧೆ: ವಿಶ್ವನಾಥ ಸುಂಕಸಾಳ

’ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎನ್ನುವಂತೆ ಹಿರಿಯರ ಅನುಭವ ವೇದಾಂತವಾದ ಗಾದೆ ಮಾತುಗಳು ಕನ್ನಡದ ಸುಭಾಷಿತಗಳಿದ್ದಂತೆ. ”ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಗಾದೆ ತಲುಪದ ಕ್ಷೇತ್ರವಿಲ್ಲ. ಗಾದೆ ಮಾತುಗಳು ನಮ್ಮ ಅರಿವನ್ನು ವಿಸ್ತರಿಸುತ್ತವೆ. ’ಆರಕ್ಕೇರಿಲ್ಲ ಮೂರಕ್ಕೆ ಇಳೀಲಿಲ್ಲ” ಎಂಬಂಥ ಜೀವನದಲ್ಲಿ ಗಾದೆಗಳು ಜೀವನೋತ್ಸಾಹವನ್ನು ತುಂಬಿ ಮಾರ್ಗದರ್ಶನವನ್ನು ಮಾಡಬಲ್ಲವು. ’ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬಂತೆ ಒಂದೇ ವಾಕ್ಯದಲ್ಲಿ ಚುಟುಕಾಗಿ ಜೀವನ ಸಂದೇಶವನ್ನು ಬಿತ್ತರಿಸಬಲ್ಲವು. ನಮ್ಮ ಹಿರಿಯರು ಬಾಯಿ ತೆರೆದರೆ ಒಂದು ಗಾದೆ ಮಾತು ಹೇಳುತ್ತಿದ್ದರು. ಅಷ್ಟೇ ಅಲ್ಲ. … Read more

ಓ ಬಾಲ್ಯವೇ ಮರಳಿ ಬರಲಾರೆಯಾ?:ಪದ್ಮಾ ಭಟ್

ಹಾಸ್ಟೇಲಿನ ಬಳಿ ಬಂದಿದ್ದ ಪುಟ್ಟ ಹುಡುಗಿಯ ಹತ್ತಿರ ನಿನಗೆ ಲಗೋರಿ ಆಟ ಆಡೋಕೆ ಬರುತ್ತಾ ಎಂದು ಕೇಳಿದಾಗ  ಅವಳಿಂದ ಬಂದ ಉತ್ತರ ನಂಗೆ ಕಾರ್ ರೇಸ್ ಬರುತ್ತೆ, ಹಂಗ್ರಿ ಬರ್ಡ್ ಬರುತ್ತೆ, ಛೋಟಾ ಭೀಮ್ ಬರುತ್ತೆ ಎಂದು ಒಂದೇ ಸಮನೆ ಕಂಪ್ಯೂಟರಿನ, ಮೊಬೈಲ್ ನ ಆಟಗಳನ್ನು ಹೇಳಹೊರಟಿದ್ದಳು.. ಮಣ್ಣಿನಲ್ಲಿ ನಾನು ಆಟ ಆಡೋಲ್ಲ. ನನ್ನ ಡ್ರೆಸ್ ಗಲೀಜ್ ಆಗುತ್ತೆ ಎಂದು ಅಮ್ಮ ಬೈತಾಳೆ ಎಂದಳು..ಇದನ್ನೆಲ್ಲಾ ಕೇಳುತ್ತಿದ್ದಂತೆ ಮನಸ್ಸು ಹೇಳದೇ ಕೇಳದೆ ನೆನಪಿನ ಕದವನ್ನು ತಟ್ಟಿಯೇ ಬಿಟ್ಟಿತು..ಬಾಲ್ಯದ ನೆನಪುಗಳು … Read more

ಬಾಡಿಗೆ ದೇಹ: ನಾಗರಾಜ್ ಹರಪನಹಳ್ಳಿ

          ಇಡೀ ನಗರ ತಲ್ಲಣಿಸಿದಂತೆ ಕಂಡಿತು. ದೇಹಗಳನ್ನ ಬಾಡಿಗೆ ನೀಡಲು ಅವರು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಒಂದು ಕಾಲದಲ್ಲಿ ನಗರದ ಯೌವ್ವನವನ್ನೇ ಆಳಿದವರು ಈಗ ಗಿರಾಕಿಗಳಿಲ್ಲದೇ ಅಂಡಲೆದು ಹೊಸಬರನ್ನ ದಂಧೆಗೆ ಇಳಿಸುತ್ತಿದ್ದರು. ದೇಹದ ಸೌಂದರ್ಯ, ಎಳಸುತನ ನೋಡಿ ದೇಹಗಳು ಗಂಟೆ ಲೆಕ್ಕದಲ್ಲಿ ಬಾಡಿಗೆ ನೀಡಲಾಗುತ್ತಿತ್ತು. ದೊಡ್ಡ ದೊಡ್ಡ ಕುಳಗಳು ತಿಂಗಳಿಗೊಮ್ಮೆ ಮೋಜಿಗಾಗಿ ಬಾಡಿಗೆ ಪಡೆದವರನ್ನು ಹೂವಿನಷ್ಟೆ ಮೃದುವಾಗಿ ಎತ್ತಿಕೊಂಡು ಹೋಗುತ್ತಿದ್ದರು. ಇದಕ್ಕಾಗಿ ನಗರದ ರಸ್ತೆಗಳು ಸಾಕ್ಷಿಯಾಗುತ್ತಿದ್ದವು. ಎಷ್ಟು ಸಲೀಸಾಗಿ ಈ ವ್ಯಾಪಾರ ನಡೆದುಹೋಗುತ್ತಿತ್ತು. … Read more

“ಕಳೆದು ಹೋಗು”ವ, ಮತ್ತೆ ಮತ್ತೆ “ಹುಡುಕು”ವ ಪರಿ: ಅಮರ್ ದೀಪ್ ಪಿ. ಎಸ್.

  ಹಳೆಯ ಸಿನೆಮಾಗಳಲ್ಲಿ ನಾವು ನೋಡುತ್ತಿದ್ದೆವು. ಬಾಲ್ಯದಲ್ಲಿ ತಂದೆ ತಾಯಿಯೊಂದಿಗಿರುವ ಮಕ್ಕಳು ಜಾತ್ರೆಯಲ್ಲೋ, ಭಯಂಕರ ಗಿಜಿಗುಡುತ್ತಿರುವ ರೈಲಿನ ಭೊಗಿಯಲ್ಲೋ, ಗಲಭೆಯಲ್ಲೋ … ಆಟಿಕೆ ಆಡುತ್ತಾ,  ಐಸ್  ಕ್ರೀಮ್ ತರಲು ಹೋಗಿಯೋ , ಆಗುವ ಅನಾಹುತದಿಂದ ತಪ್ಪಿಸಿಕೊಳ್ಳಲು  ಅವಸರವಸರ ವಾಗಿ ಓಡಿ ಹೋಗುವ ಭರಾಟೆಯಲ್ಲೋ ಮಕ್ಕಳ ಪುಟ್ಟ ಪುಟ್ಟ ಕೈಗಳನ್ನು ಭಧ್ರತೆ ಫೀಲ್  ಕೊಟ್ಟು ಹಿಡಿದಿಟ್ಟುಕೊಂಡ ತಂದೆ ತಾಯಿಯು ಅದಾವ ಮಾಯೆಯಲ್ಲೋ ಕೈ ಬಿಟ್ಟು  ತಂದೆ ತಾಯಿ ಅವರನ್ನು "ಕಳೆದುಕೊಂಡು" ಮಕ್ಕಳನ್ನು ಹುಡುಕುತ್ತಾರೆ, ಮಕ್ಕಳು ಅಳುತ್ತಾ ಅತ್ತಿತ್ತ  ಸಾಗುತ್ತಿರುತ್ತಾರೆ.  … Read more

ಮರೆಯಾಗುತ್ತಿರುವ ಮದುವೆಮನೆಯ ಸಂಭ್ರಮಗಳು: ಸುಮನ್ ದೇಸಾಯಿ

ಮೊನ್ನೆ ಸಂಜಿಮುಂದ ಮನಿ ಹತ್ರ ಇರೊ ವೇಂಕಪ್ಪನ ಗುಡಿಗೆ ಹೋಗಿದ್ವಿ. ಅಲ್ಲೆ ಇದ್ದ ಕಲ್ಯಾಣಮಂಟಪದಾಗ ಮದುವಿ ಇತ್ತಂತ ಕಾಣಸ್ತದ. ಬ್ಯಾಂಡ ಭಂಜಂತ್ರಿಯವರು ಮಸ್ತ ಯಾವದೊ ಒಂದ ಸಿನೇಮಾ ಹಾಡಿನ ಬಾಜಾ ಬಾರಿಸ್ಲಿಕತ್ತಿದ್ರು. ಈಗೆಲ್ಲಾ ಕಡೆ ಒಂದ ಹೊಸಾ ಪಧ್ಧತಿ ಎದ್ದದ ಎನಂದ್ರ ಈ ಉತ್ತರಭಾರತದ ಕಡೆ ಮದುವಿಗೊಳೊಳನ್ಯಾಗ ಹೆಂಗ ವರನ್ನ ಕುದರಿಮ್ಯಾಲೆ ಕೂಡಿಸಿಕೊಂಢ ಬ್ಯಾಂಡ ಬಾಜಾ ಬಾರಿಸ್ಕೊತ, ಡ್ಯಾನ್ಸ ಮಾಡ್ಕೊತ ಕರ್ಕೊಂಡ ಬರತಾರ ಹಂಗ ಇಲ್ಲೆನು ವೇಂಕಪ್ಪನ ಗುಡಿಯಿಂದ ಕುದರಿಮ್ಯಾಲ ವರನ್ನ ಕುಡಿಸಿ ಬ್ಯಾಂಡ ಬಾಜಾ ಬಾರಿಸ್ಕೋತ,ಸಣ್ಣ … Read more

ಪ್ರೀತಿಯ ಭಾವನೆಗಳನ್ನ ಬದಿಗೊತ್ತಿ ಸ್ನೇಹಕ್ಕೆ ಕೈ ಚಾಚುತ್ತಿರುವೆ: ಶುಭ ಆರ್.

  ನನ್ನ ಆತ್ಮೀಯ ಹುಡುಗನಿಗೆ,  ಮರೆಯಲಾಗದು ನಿನ್ನೊಡನೆ ಕಳೆದ ಆ ಸುಂದರ ದಿನಗಳು. ಮನದ ತುಂಬಾ ಮೂಡಿದ  ನೂರಾರು ಕನಸಿನ ಚಿತ್ತಾರಗಳು. ಖಾಲಿಯಿದ್ದ ನಮ್ಮ ಪಕ್ಕದ ಮನೆಗೆ ಬಂದ  ಹುಡುಗ ನೀನು. ಅಪರಿಚನಾಗಿದ್ದವನು ಸ್ವಲ್ಪ ದಿನಗಳ ಬಳಿಕ ಪರಿಚಯವಾಗಿ ಆತ್ಮೀಯ ಒಡನಾಟ ಬೆಳೆಯಿತು. ನಿನ್ನ ಮುದ್ದಾದ ನಗು ನನ್ನನ್ನು ನಾಚುವಂತೆ ಮಾಡುತ್ತಿತ್ತು. ನಿನ್ನ ಸುಂದರ ನೋಟದಲ್ಲೇ ನನ್ನ ಸೆರೆ ಹಿಡಿದ. ಸುಮಧುರ ಮಾತುಗಳಲ್ಲೇ ನನ್ನ ಹೃದಯವನ್ನೇ ಗೆದ್ದ. ಒಟ್ಟಿನಲ್ಲಿ ಗುಣದಲ್ಲಿ ಅಪರಂಜಿಯಂತಹ  ಹುಡುಗ, ನಿನ್ನ ಚೆಲುವಿಗೆ ನಾ … Read more

ವಿಸ್ಮಯಭರಿತ ವಿರಾಟ ವಿಶ್ವ (ಭಾಗ 1): ನಾರಾಯಣ ಎಂ.ಎಸ್.

ನಿಮಗೆ ನೆನಪಿರಬಹುದೇನೋ? ಇಲ್ಲ, ಖಂಡಿತವಾಗಿಯೂ ನೆನಪಿದ್ದೇ ಇರುತ್ತದೆ. ಏಕೆಂದರೆ, ಬಾಲ್ಯದ ಉತ್ಕಟ ಅನುಭವಗಳ ನೆನಪು ಎಲ್ಲಕ್ಕಿಂತ ಸ್ಪಷ್ಟ ಮತ್ತು ನಿಚ್ಚಳವಾಗಿರುತ್ತದಂತೆ. ನಮ್ಮ ಕೈ ಸೋಕಿದೊಡನೆ ನಾಚಿ ಮುದುಡುವ ಆ ಮುಟ್ಟಿದರೆ ಮುನಿ ಗಿಡ, ಕತ್ತಲಲ್ಲಿ ಮಿಂಚುವ ಆ ಮಿಣಿಕೆ ಹುಳ, ಆ ಬಣ್ಣದ ಚಿತ್ತಾರದ ಪಾತರಗಿತ್ತಿ, ಪರಿಸರಕ್ಕೆ ತಕ್ಕಂತೆ ಬಣ್ಣ ಬದಲಿಸುವ ಆ ಊಸರವಳ್ಳಿ, ಕಾರ್ಮುಗಿಲಿನಲ್ಲಿ ಕಂಡ ಆ ಬೆಳ್ಳಿ ಮಿಂಚು ಮತ್ತು ಆಗಸದಲ್ಲಿನ ರಂಗು ರಂಗಾದ ಮಳೆಬಿಲ್ಲು ಇತ್ಯಾದಿಗಳನ್ನು ನಾವು ನಮ್ಮ ಬೆರಗು ಕಣ್ಗಳಿಂದ ಮನದಣಿಯೆ … Read more

ಮೂವರ ಕವಿತೆಗಳು: ಅಕುವ, ಕೃಷ್ಣಮೂರ್ತಿ ನಾಯಕ್, ಶ್ರೀವಲ್ಲಭ ಕುಲಕರ್ಣಿ.

          ದಾನಿಗಳೇ…..   ಇಲ್ಲಿ ಎಲ್ಲರೂ ದಾನಿಗಳು ಹಲವರು ಅಲ್ಪದಾನಿಗಳು ಕೆಲವರು ಮಹಾದಾನಿಗಳು ಮತ್ತುಳಿದವರು ಅಗ್ರಮಾನ್ಯರು ಆದರೂ ಯಾರೂ ಕರ್ಣನಾಗಲ್ಲಿಲ್ಲ ಶಿಬಿಯ ಮೀರಲಿಲ್ಲ !!   ದೇವರ ಹೆಸರೆತ್ತಿದ್ದರೆ ಹೇಸದೆ ಕೊಡುವರು ಸಾರ್ಥಕತೆಯ ಮಂಕಿಗೆ ಬೆರಗಾಗಿರುವರು ದಟ್ಟನೆ ಸಭೆಯಲಿ ಸಾಲು ಹೊದಿಯುವರು ಬೆನ್ನಲ್ಲಿಯೇ ಮೆತ್ತನೆ ವಾಪಾಸು ಕೇಳುವರು !!   ನನ್ನೂರ ಹಾದಿಯ ಇಕ್ಕೆಲ್ಲದಲಿ ಬಸ್ಸು ತಂಗುದಾಣಗಳು ದೇಗುಲದ ರಸ್ತೆಗೆ ಮೇಲೆದ್ದ ಸ್ವಾಗತ ಗೋಪುರಗಳು ಬುಡದಲ್ಲಿ ಕೆತ್ತಿದ ದಾನಿಗಳ ನಾಮ ಫಲಕಗಳು … Read more

ಬಿಡುವು: ಪ್ರಶಸ್ತಿ ಪಿ.ಸಾಗರ

ದಿನಾ ಆಫೀಸಿಂದ ಲೇಟಾಗಿ ಮನೆಗೆ ಬರುವವನಿಗೆ ಒಂದು ದಿನ ಬೇಗ ಮನೆಗೆ ಬಂದು ಬಿಟ್ರೆ ಎಲ್ಲಿಲ್ಲದ ಚಡಪಡಿಕೆ. ಮನೆಯಲ್ಲಿರುವರ ಮಾತಾಡಿಸುವಿಕೆಗಿಂತ ಆಫೀಸಿನದೇ ಚಿಂತೆ. ಅಲ್ಲಿ ಕೆಲಸವಿದ್ದುದ್ದನ್ನು ಬಿಟ್ಟು ಬಂದುದಕಲ್ಲ, ಏನೂ ಕೆಲಸವಿಲ್ಲದಿದ್ದರೂ ಇದೇ ತರ. ಸಮಸ್ಯೆ ಕೆಲಸದ್ದಲ್ಲ. ಅದಿಲ್ಲದಿದ್ದಾಗ ಇರೋ ಬಿಡುವಿನದು. ದಿನಾ ಶಾಲೆ. ಟ್ಯೂಷನ್ನು, ಹೋಂವರ್ಕು ಅಂತ ಓದಿನಲ್ಲೇ ಮುಳುಗಿ ಹೋಗಿ ಮನೆಗೆ ಬಂದವರನ್ನು ಮಾತಾಡಿಸಲೂ ಬಿಡುವಿಲ್ಲದ ಮಗನಿಗೆ ಓದಿನ ಒಂದು ಹಂತ ದಾಟಿದ ನಂತರ ತೀರಾ ಕಸಿವಿಸಿ. ಮುಂದಿನ ಹಂತ ಏನೆಂದು ನಿರ್ಧರಿತವಾಗಿದ್ದರೂ ಅಲ್ಲಿಯವರೆಗೆ … Read more

ಐದು ಫೇವರಿಟ್ ದೃಶ್ಯಗಳು: ವಾಸುಕಿ ರಾಘವನ್ ಅಂಕಣ

ರಿಕ್ವೀಮ್ ಫಾರ್ ಅ ಡ್ರೀಮ್  ಈ ಚಿತ್ರ ಮಾದಕ ವ್ಯಸನಕ್ಕೆ ಸಿಲುಕಿ ಛಿದ್ರಗೊಳ್ಳುವ ನಾಲ್ಕು ಜನರ ಜೀವನದ ಕಥಾನಕ. ಈ ಚಿತ್ರದ ಕೊನೆಯಲ್ಲಿ ಬರುವ ದೃಶ್ಯ ಬಹಳ ಶಕ್ತಿಶಾಲಿಯಾಗಿದೆ. ಆ ನಾಲ್ಕೂ ಜನರ ಬದುಕು ಹೇಗೆ ನರಕಸದೃಶವಾಯಿತು ಅಂತ ಒಬ್ಬೊಬ್ಬರ ಶಾಟ್ ಗಳನ್ನು ಒಂದಾದಮೇಲೊಂದು ಜೋಡಿಸಿ ತೋರಿಸಿದ್ದಾರೆ ನಿರ್ದೇಶಕ ಆರೋನಾಫ್ಸ್ಕಿ. ನಿಧಾನಗತಿಯಲ್ಲಿ ಸಾಗುವ ದೃಶ್ಯಗಳ ಜೊತೆಯಲ್ಲೇ ವಿಷಾದಭಾವದ ಸಂಗೀತ. ಬರಬರುತ್ತಾ ಸಂಕಲನ ವೇಗ ಪಡೆದುಕೊಳ್ಳುತ್ತದೆ, ಸಂಗೀತ ತಾರಕಕ್ಕೇರುತ್ತದೆ. ಅಷ್ಟೇ ಪರಿಣಾಮಕಾರಿಯಾಗಿ ಮೂಡಿರುವುದು ಇದರ ನಂತರದ ದೃಶ್ಯ. ಒಬ್ಬ … Read more

ಸಾಮಾನ್ಯ ಜ್ಞಾನ (ವಾರ 10): ಮಹಾಂತೇಶ್ ಯರಗಟ್ಟಿ

೧.    ಇಸ್ರೋದ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು? ೨.    ಸಿಖ್ಖರ ಪವಿತ್ರ ಗ್ರಂಥ ಯಾವುದು? ೩.    ಮತದಾನದ ವಯಸ್ಸನ್ನು ೨೧ ವರ್ಷದಿಂದ ೧೮ ವರ್ಷಕ್ಕೆ ಯಾವ ವರ್ಷದಲ್ಲಿ ಇಳಿಸಲಾಯಿತು? ೪.    ಮರಾಠಾ ಒಕ್ಕೂಟಕದ ಸ್ಥಾಪಕ ಯಾರು? ೫.    ವಿಶ್ವವನ್ನು ಸುತ್ತಿ ಬಂದ ಭಾರತೀಯ ನೌಕೆಯ ಹೆಸರೇನು? ೬.    ಗ್ರಾಮ್ ಸ್ವರಾಜ್ ಎಂಬ ವಿಚಾರವನ್ನು ಪ್ರತಿಪಾದಿಸಿದವರು ಯಾರು? ೭.    ಮದರ್ ತೆರೆಸ್ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ? ೮.    ’ಪೆನಾಲ್ಟಿ ಕಾರ್ನರ್’ ಯಾವ ಕ್ರೀಡೆಗೆ ಸಂಬಂಧಿಸಿದ್ದು? ೯.    ಪೋಲಿಯೋ ಕಾಯಿಲೆಯನ್ನು … Read more

ಜೇನು-ಸವಿಜೇನು: ಅಖಿಲೇಶ್ ಚಿಪ್ಪಳಿ ಅಂಕಣ

ಹಿರಿಯ ಪರ್ತಕರ್ತ ಸ್ನೇಹಿತರಾದ ಅ.ರಾ.ಶ್ರೀನಿವಾಸ್ ಫೋನ್ ಮಾಡಿದ್ದರು. ಸಮಸ್ಯೆಯೆಂದರೆ ಅವರ ಪುಟ್ಟ ತೋಟದಲ್ಲಿರುವ ಹೈಬ್ರೀಡ್ ನೆಲ್ಲಿ ಮರದಲ್ಲಿ ಹೂವಿದ್ದರೂ ಕಾಯಿಗಟ್ಟುತ್ತಿರಲಿಲ್ಲ. ಜೇನಿನ ಅಭಾವವೇ ಈ ಸಮಸ್ಯೆಗೆ ಕಾರಣವೆಂದು ಮನಗಂಡು, ತಮ್ಮಲ್ಲಿರುವ ಹಳೇ ಜೇನುಪೆಟ್ಟಿಗೆಯಲ್ಲಿ ಜೇನು ಸಾಕಬೇಕೆಂಬ ತೀರ್ಮಾನ ಮಾಡಿದ್ದರು. ಅದಕ್ಕಾಗಿ ಜೇನು ತುಂಬಿ ಕೊಡಲು ಸಾಧ್ಯವೆ? ಎಂದು ಕೇಳಿದರು. ವಿನೋಬ ನಗರದಲ್ಲಿ ದೊಡ್ಡದೊಂದು ದೂರವಾಣಿ ಕೇಬಲ್ ಸುತ್ತಿಡುವ ಪ್ಲೈವುಡ್‌ನಿಂದ ತಯಾರಿಸಿದ ಉರುಟಾದ ಗಾಲಿಯೊಂದಿತ್ತು. ಅದರ ಮಧ್ಯಭಾಗದಲ್ಲಿ ೬ ಇಂಚು ಅಗಲದ ದುಂಡನೆಯ ರಂಧ್ರ. ಒಮ್ಮೆ ಅತ್ತ ಗಮನ … Read more

ಹುಟ್ಟು ದರಿದ್ರವಾಗಿದ್ದರೆ ಏನು? ಸಾವು ಚರಿತ್ರೆ ಆಗಿರಬೇಕು: ಸಂತೋಷ್ ಗುರುರಾಜ್

          ಮೊನ್ನೆ ನನ್ನ ಫೇಸ್ ಬುಕ್ ಅಕೌಂಟ್ ನ ಗೋಡೆಯ ಮೇಲೆ ಒಂದು ಸ್ಟೇಟಸ್ ಬಂದಿತ್ತು ,ಆ ಸ್ಟೇಟಸ್ ನೋಡಿ ನನಗೂ ತಕ್ಷಣ ಮನಸ್ಸಿಗೆ ಒಂದು ತರಹದ ಕುತೂಹಲ ಉಂಟಾಯಿತು . ಮತ್ತೆ ಬೇರೆ ಯಾವುದೇ ಸ್ಟೇಟಸ್ ಸಹ ಅಷ್ಟೊಂದು ಮನಸ್ಸಿಗೆ ಹಿಡಿಸಿದ್ದಿಲ್ಲ.ಮತ್ತು ಆ ಸ್ಟೇಟಸ್ ನೋಡಿದಾಗಿನಿಂದ ನಾನು ಅದನ್ನು ಅನುಸರಿಸಬೇಕು ಎಂದು ಅನಿಸತೊಡಗಿತು ಆ ಸ್ಟೇಟಸ್ ಹೀಗಿದೆ ನೋಡಿ  "ಹುಟ್ಟು ದರಿದ್ರವಾಗಿದ್ದರೆ ಏನು? ಸಾವು ಚರಿತ್ರೆ ಆಗಿರಬೇಕು" ಇದರಲ್ಲಿ ಬಹಳಷ್ಟು … Read more

ಕಾರ್ಟೂನ್ ಕಾರ್ನರ್

‘ಅಕ್ಷಯ’ ಬೆಳ್ಳಿಹಬ್ಬ ಸಾಹಿತ್ಯ ಸ್ಪರ್ಧೆಯ ವ್ಯಂಗ್ಯಚಿತ್ರ ವಿಭಾಗದಲ್ಲಿ ಸಿದ್ದಾಪುರದ ರಂಗನಾಥ ವಿ.ಶೇಟ್‌ರವರ ‘ಅಡುಗೆ ಅನಿಲ ಮಹತ್ವ’ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಪಂಜುವಿಗಾಗಿ ನಿರಂತರವಾಗಿ ತಮ್ಮ ವ್ಯಂಗ್ಯಚಿತ್ರಗಳನ್ನು ಕಳುಹಿಸಿಕೊಡುವ ರಂಗನಾಥರವರಿಗೆ ಪಂಜು ಬಳಗ ಅಭಿನಂದನೆಗಳನ್ನು ಸಲ್ಲಿಸುತ್ತದೆ.  ******