ಮಗು ಹುಟ್ಟಿದ ಖುಷಿಗೋ, ಸತ್ತವರ ನೆನಪಿಗೋ ಒಂದೊಂದು ಗಿಡ ನೆಡುತ್ತಾ ಬಂದಿದ್ದರೆ…

  ಅರಳೀ, ಹೊಂಗೆ, ಮಾವು, ಬೇವು, ನೇರಳೆ, ತೆಂಗು, ಹುಣಸೇ, ಸೀಬೆ, ಹೀಗೆ ಸಾಮಾನ್ಯವಾಗಿ ಕಾಣಸಿಗುವ ಕಾಣ ಸಿಗುತ್ತಿದ್ದ ಮರಗಳನ್ನು ಹೆಸರಿಸುತ್ತಾ ಹೋದರೆ ಆ ಮರಗಳ ಬರೀ ಚಿತ್ರಗಳಷ್ಟೇ ನಮ್ಮ ಕಣ್ಣ ಮುಂದೆ ಬರುವುದಿಲ್ಲ. ಬದಲಿಗೆ ಅವುಗಳ ಎಲೆ ಹೂವು ಹಣ್ಣು ನೆರಳು ತಂಪು ಹೀಗೆ ಏನೆಲ್ಲಾ ನಮ್ಮ ಅನುಭವಕ್ಕೆ ಬರುತ್ತದೆ. ಮರಗಳು ನಮ್ಮ ಬಾಲ್ಯದಲ್ಲಿ ನಮ್ಮೊಡನೆ ಬೆರೆತು ಹೋಗಿದ್ದ ಅನನ್ಯ ಜೀವಿಗಳು. ಮರಕೋತಿ ಆಟಗಳಿಂದ ಹಿಡಿದು ದೆವ್ವದ ಕತೆಗಳವರೆಗೆ, ಪಠ್ಯ ಪುಸ್ತಕದ ಪಾಠಗಳಲ್ಲಿ "ಅಶೋಕನು ಸಾಲು … Read more

ಮಳ್ಳೋ ಮಬ್ಬೋ…: ಗೋಪಾಲ ವಾಜಪೇಯಿ

  ಬಟ್ಟ ಬಯಲ ನಟ್ಟ ನಡವ ಒಂದು ಬೇಲಿಯು… ಬೇಲಿ ಮ್ಯಾಲೆ ನಗುವ ಹೂವು ಬೇಲಿ ಒಳಗ ಚಿಣಿಗಿ ಹಾವು – ಬೇಲಿ ಆಚಿ ನನ್ನ ಕರೆಯೋ ಚೆಲುವಿ ಬಾಲಿಯು                           II೧II   ಬಾಲಿ ಹಿಂದ ಬಲಿತು ನಿಂತ ಕೆಟ್ಟ ರಾಕ್ಷಸ ಹಲ್ಲುಹಲ್ಲು ಮಸಿಯುತಾನ ಕಲ್ಲಿ ಮೀಸಿ ತಿರುವುತಾನ – ಕೊಲ್ಲತೀನಿ ಅಂತ ಅಟ್ಟಹಾಸ ಮೆರೆಯುತ     … Read more

ಹೀಗೊಂದು ಕಥೆ : ಪ್ರಶಸ್ತಿ ಪಿ.

ಗುಂಡಣ್ಣಂಗೆ ಕಥೆ ಬರೀಬೇಕು ಅನ್ನೋದೊಂದು ಕನಸು. ಮಾಲಳ್ಳಿ ಮಾಲಜ್ಜಿ ಮತ್ತು ಮಾಳ ಬೆಕ್ಕು, ಕುಂದಾಪ್ರುದ ಕಥೆ, ಮೂರಳ್ಳಿ ಕೋಟೆಯಲ್ಲೊಂದು ರಾತ್ರಿ, ನೀರ ರಾಣಿ ಮತ್ತು ನಂಜುಳ್ಳೆ.. ಹೀಗೆ ಹಲವಾರು ಶೀರ್ಷಿಕೆಗಳು, ಅರ್ಧಂಬರ್ದ ಐಡಿಯಾಗಳು ಹೊಳೆದರೂ ಅದ್ಯಾವ್ದೂ ಕಥೆಯ ಮೂರ್ತ ರೂಪ ತಾಳ್ತಿರಲಿಲ್ಲ. ನಾಳೆ ಕಥೆ ಬರ್ದೇ ಬರೀತೀನಿ ಅಂತ ಪ್ರತೀದಿನ ರಾತ್ರೆ ಮಲಗೋವಾಗ ನಿರ್ಧಾರ ಮಾಡಿದರೂ ಮಾರ್ನೇ ದಿನ ಬೆಳಗಾಗಿ, ಮಧ್ಯಾಹ್ನ ಆಗಿ ಮತ್ತೆ ರಾತ್ರೆ ಆಗೇ ಬಿಡ್ತಿತ್ತು ! ಹೀಗೆ ದಿನಗಳು, ತಿಂಗಳುಗಳು ಉರುಳುತ್ತಿರಲು ಅವನ … Read more

ಮೊಸರಾಯಣ: ಶ್ರೀನಿಧಿ ರಾವ್

ಆಗಿನ್ನೂ ಸಂಜೆ ಗೋಧೂಳಿ ಸಮಯ ಮರುಭೂಮಿಗೆ ಪಾದಾರ್ಪಣೆ ಮಾಡಿತ್ತು ಅಷ್ಟೇ. ರಾತ್ರಿ ಊಟಕ್ಕೆ  ಊರಿನಿಂದ ಬರೋವಾಗ ಎಲ್ಲ ತಂದಿದ್ದೆ, ಅನ್ನ ಮೊಸರು ಬಿಟ್ಟು ! ಅನ್ನ ಮಾಡಿದ್ದೂ ಆಯಿತು. "ಮೊಸರು ಬೇಕು ಇಲ್ಲಾಂದ್ರೆ ನಂಗೆ ಊಟ ಮಾಡಿದ್ದು  ಮಾಡಿದ ಹಾಗೆ ಆಗುವುದಿಲ್ಲ" ಅಂದಿದ್ದಕ್ಕೆ 'ಸರಿ' ಎಂದು ನನ್ನ  ರಾಯರು ತಂದು ಕೊಟ್ರು. ಅಯ್ಯಬ್ಬಾ !! ಅದು ಬರಿ ಸಪ್ಪೆ. ನಂಗೆ ಬರೀ ಕೆನೆ ಹುಳಿ ಹುಳಿ ಮೊಸರು  ತಿಂದೇ ಗೊತ್ತು!! 'ಥೂ! ಇದೂ ಒಂದು ಮೊಸರಾ ?' … Read more

ಕವಿ ನಾಗರಾಜರವರ ಆದರ್ಶದ ಬೆನ್ನು ಹತ್ತಿ : ಪಾರ್ಥಸಾರಥಿ ನರಸಿಂಗರಾವ್

ಪುಸ್ತಕ ಪರಿಚಯ : ಆದರ್ಶದ ಬೆನ್ನು ಹತ್ತಿ….. ಪ್ರಕಾಶನ : ಕವಿಪ್ರಕಾಶನ, ಶಿವಮೊಗ್ಗ. 'ನಾನು ದೊಡ್ಡವನಾದ ಮೇಲೆ ಪೋಸ್ಟ್ ಕಾರ್ಡ್ ಮಾರುತ್ತೀನಿ" ಒಬ್ಬ ಪುಟ್ಟ ಬಾಲಕನ ಕನಸು ಆ ಕನಸಿಗೆ ಇರುವ ಪ್ರಾಮುಖ್ಯತೆ ಅರ್ಥವಾಗಿಯೋ ಏನೊ ದೇವರು ತಥಾಸ್ತು ಅನ್ನುತ್ತಾನೆ. ಆ ಬಾಲಕ ಯುವಕನಾದಾಗ ಪೋಸ್ಟ್ ಆಫೀಸಿನಲ್ಲಿಯೇ ಕೆಲಸವು ದೊರಕುತ್ತದೆ. ಬಹುಷಃ ಅಲ್ಲಿಯೇ ಮುಂದುವರೆಯುತ್ತಿದ್ದಲ್ಲಿ , ಪ್ರಾಮಾಣಿಕವಾಗಿ ದುಡಿಯುತ್ತ. ತನ್ನ ಕೆಲಸದಲ್ಲಿಯೆ ತೃಪ್ತಿ ಕಾಣುತ್ತ ಒಬ್ಬ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತನಾಗಿ ಶಾಂತ ಜೀವನ ನಡೆಸುತ್ತ ಇದ್ದನೇನೊ ಅವನು. ಆದರೆ ವಿಧಿಬಿಡಬೇಕಲ್ಲ, … Read more

ಪಶ್ಚಾತಾಪ ಮತ್ತು ಕ್ಷಮೆ: ರುಕ್ಮಿಣಿ ಎನ್.

ಯಾರಾದರೂ ನಮಗೆ ಕೆಡುಕನ್ನು ಮಾಡಿದಲ್ಲಿ ಅಥವಾ ತಪ್ಪು ರೀತಿಯಲ್ಲಿ ನಮ್ಮೊಂದಿಗೆ ವರ್ತಿಸಿದಲ್ಲಿ, ನಾವವರನ್ನು ಕ್ಷಮಿಸುವುದರಲ್ಲಿ ಒಳಿತಿದೆ. ಕಹಿ ಘಟನೆಯ ಕುರಿತು ಇಲ್ಲವೇ ಕೆಡುಕು ಬಯಸಿದ ವ್ಯಕ್ತಿಯ ಕುರಿತು ಪದೇ ಪದೇ ಯೋಚಿಸಿದರೆ  ಸೇಡಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಪ್ರತಿಕಾರದ ಮನೋಭಾವ ನಮ್ಮಲ್ಲಿ ಹುಟ್ಟುತ್ತದೆ. ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ, ನಮ್ಮ ಸುತ್ತೆಲ್ಲ ಸಂತಸದ ಹೊನಲಿದ್ದರೂ ಅದನ್ನು ನಾವು ಗುರುತಿಸುವುದೇ ಇಲ್ಲ.  ಇದಕ್ಕೆಲ್ಲ ಒಂದೇ ಪರಿಹಾರ ಸ್ನೇಹಿತರೆ, ತಪ್ಪು ಮಾಡಿದವರ ಎದುರಲ್ಲಿಯೇ ಕುಳಿತು ಮಾತನಾಡಿ.  “ನೀನೆಷ್ಟೇ ತಪ್ಪು ಮಾಡಿದರೂ, ನನಗೆ … Read more

ಸೆಂಟ್ ನರಸಿಂಹ : ವಿ.ಆರ್.ಕಾರ್ಪೆಂಟರ್

ನಾನಾಗ ಎಂಟನೇ ತರಗತಿ ಓದುತ್ತಿದ್ದೆ. ನಮ್ಮ ಮನೆಯ ಪಕ್ಕದಲ್ಲಿರುವ ದುಬ್ಬಪ್ಪನ ಹೊಲ ಕಟಾವು ಮುಗಿಸಿ ಇನ್ನೊಂದು ಬಿತ್ತನೆ ಶುರುವಾಗುವವರೆಗೂ ಊರಿನ ತಿಪ್ಪೆಯಂತೆ ಕಂಗೊಳಿಸುತ್ತದೆ. ನಾನು ನನ್ನ ಸ್ನೇಹಿತರೊಡನೆ ಅಲ್ಲಿಯೇ ಕ್ರಿಕೆಟ್, ಗೋಲಿ, ಸೈಕಲ್ ರೇಸ್, ಚಿಲ್ಲೀ ದಾಂಡು, ಬಂಗ್ರ (ಬುಗರಿ), ಪ್ಯಾಕೇಟ್ (ಸಿಗರೇಟ್ ಪ್ಯಾಕ್), ಲಗೋರಿ ಆಡುತ್ತಲೇ ಅಲ್ಲಿನ ತಿಪ್ಪೆಗಳಲ್ಲಿ ಸಿಗುವ ನಾಣ್ಯ, ಕಬ್ಬಿಣ, ತಾಮ್ರದ ವಸ್ತುಗಳನ್ನು ತಡಕುತ್ತಿದ್ದೆವು. ಒಂದೊಂದು ಸಾರಿ ಇಡೀ ತಿಪ್ಪೆಯನ್ನೇ ಬುಡಮೇಲು ಮಾಡಿ! ಅದರಿಂದ ಸಿಗುವ ಹಣದಲ್ಲಿ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದೆವು. ಅಲ್ಲಿ … Read more

ನಿಂತ ನೆಲವೇ ಅವಳನ್ನು ಭದ್ರವಾಗಿ ಹಿಡಿದುಕೊಂಡಿತ್ತು! : ಶೈಲಜ

‘ಕೊನೆಗೂ ತನ್ನ ಕನಸು ನನಸಾಗಲಿದೆಯೆ?’ ದೀಪಾಳಿಗೆ ನಂಬಲು ಸಾಧ್ಯವಾಗಲಿಲ್ಲ… ತನ್ನ ಮೊಬೈಲಿಗೆ ಬಂದ ಸಂದೇಶವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿದಳು. “pack ur bag. chalo mumbai… aaaaa… :)”  ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಾಸ್ ಹತ್ತಿರ ಒಪ್ಪಿಗೆ ಕೇಳಿ ಮನೆಗೆ ಹೊರಟಳು. ಮನಸ್ಸು ಕೆಲವು ದಿನಗಳ ಹಿಂದಿನ ಚಿತ್ರಣವನ್ನು ಬಿಚ್ಚಿತು.  ಇದ್ದಕ್ಕಿದ್ದಂತೆ ಸುಮಿ ಪ್ರತ್ಯಕ್ಷಳಾಗಿದ್ದಳು. ಸುಮ ದೀಪಳ ಬಾಲ್ಯ ಸ್ನೇಹಿತೆ. ಹೆಚ್ಚು ಕಡಿಮೆ ನಿತ್ಯವೂ ಅಂತರ್ಜಾಲ ಅಥವಾ ಮೊಬೈಲ್ ಮೂಲಕ ಸಂಪರ್ಕವಿರುವುದಾದರೂ ಊರ ಕಡೆ ಅವಳು ಬರದೇ … Read more

ಅತ್ತು ಹಗುರಾಗುವ ಭಯ : ರಘುಚರಣ್

ಎದುರಾದ ಕಣ್ಣುಗಳೆಲ್ಲ ಬತ್ತಿದ ಕೊಳಗಳು.. ನೀರಿಲ್ಲವೆಂದಲ್ಲ.. ಪ್ರತಿ ಹನಿಯೂ ಅಂತರ್ಗಾಮಿ..   ನೋವು ದುಃಖದ ಹೊಳೆಗಳಬ್ಬರಿಸುತಿದ್ದರೂ ಅಹಮಿಕೆಯ ಪರದೆಯಡಿ ಮಡುಗಟ್ಟಿ ನಿಂತಿವೆ..   ಪರದೆ ಹರಿಯುವ ತವಕ ಪ್ರತಿಯೊಂದು ಹನಿಗೆ.. ಸೋತ ಭಾವದ ನಡುಕ ಗರ್ವಗಳ ದನಿಗೆ..   ಒಳಗೊಳಗೆ ಕುಸಿದಿಹುದು ಆಂತರ್ಯ ಸೌಧ ಮುಖದ ನಗುವಿಗೆ ತಪ್ತ  ಮನಸೇ ವಿರೋಧ   ಇನ್ನಾದರೂ ಕಳಚಿ ಬೀಳಲಿ ಬಿಗುಮಾನದ ಬೆರಗು ಕಣ್ಣ ಹನಿಯೇ ಹೊರಬಂದು ಕಪೋಲದಲಿ ಕರಗು….     -ರಘುಚರಣ್

ಎಡ್ ವುಡ್ – ಹೀಗೂ ಒಬ್ಬ ನಿರ್ದೇಶಕ: ವಾಸುಕಿ ರಾಘವನ್

ನಿಮ್ಮ ಪ್ರಕಾರ ಅತ್ಯುತ್ತಮ ನಿರ್ದೇಶಕರು ಯಾರು ಅಂತ ಯಾರನ್ನಾದ್ರೂ ಕೇಳಿ. ಥಟ್ ಅಂತ ಉತ್ತರ ಸಿಗುತ್ತೆ ನಿಮ್ಗೆ – ಪುಟ್ಟಣ್ಣ ಕಣಗಾಲ್ ಅಂತಲೋ, ಸತ್ಯಜಿತ್ ರೇ ಅಂತಲೋ, ಸ್ಪೀಲ್ಬರ್ಗ್, ಕ್ಯೂಬ್ರಿಕ್, ಬರ್ಗ್ಮನ್, ನೋಲನ್ ಅಂತಲೋ – ಅವರವರ ಆಸಕ್ತಿ, ಅಭಿರುಚಿ, ವಯೋಮಾನ, ಚಿತ್ರವೈವಿಧ್ಯಗಳ ಪರಿಚಯಕ್ಕೆ ತಕ್ಕಂತೆ ಉತ್ತರಿಸುತ್ತಾರೆ. ಅದೇ ನಿಮ್ಮ ಪ್ರಕಾರ ಅತ್ಯಂತ ಕಳಪೆ ನಿರ್ದೇಶಕ ಯಾರು ಅಂತ ಕೇಳಿ ನೋಡಿ, ತಕ್ಷಣ ಉತ್ತರ ಕೊಡೋದು ಕಷ್ಟ ಆಗುತ್ತೆ. ಆದರೆ ಬಹಳಷ್ಟು ಚಿತ್ರಪ್ರೇಮಿಗಳು ಹಾಗು ವಿಮರ್ಶಕರ ಪ್ರಕಾರ … Read more

ನನ್ನೊಳಗಿನ ಗುಜರಾತ್..!!! ಭಾಗ – 6: ಸಿ.ಎಸ್. ಮಠಪತಿ

  ನಲ್ಮೆಯ ಒಂದು ಗೆಳೆತನ, ಒಲವಿನ ಸೆಳೆತನ, ಕಣ್ಣಂಚಿನ ಅಭಯ, ಆಪತ್ತಿನ ಸಹಾಯ ಹಸ್ತ, ವಿದಾಯದಲ್ಲಿನ ಭಾವೊದ್ವೇಗದಿ ಹಚ್ಚಿಕೊಂಡ ಎರಡು ಮನಗಳ ನಡುವಿನ ಬಿಗಿಯಾದ ಆಲಿಂಗನ,  ಎಲ್ಲೋ ಒಂಟಿತನದ ದಿನಗಳಲ್ಲಿ ಜಂಟಿಯಾಗಿ, ಏಕಾಂಗಿ ಬದುಕಿನ ನೊಗಕ್ಕೆ ಹೆಗಲಕೊಟ್ಟು ಸಿಹಿ-ಕಹಿ, ಸೋಲು-ಗೆಲುವು, ಸಕಲ ಏರಿಳಿತಗಳಲ್ಲಿ ಜೊತೆಸಾಗುವ ಜೀವ. ಅಬ್ಬಾ…!!  ಹೆಕ್ಕಿ- ಹೆಕ್ಕಿ ಹೊರ ಬರಸೆಳೆದು ನೆನೆಯಲೋ ಅಥವಾ ಬರೆಯಲೋ ಕುಳಿತರೆ ಒಂದೇ ,ಎರಡೇ? ಏಕಾಂಗಿ  ಬೆತ್ತಲೆ ಹುಟ್ಟು ಸಾವಿನ ನಡುವೆ, ವ್ಯಾಖ್ಯಾನಿಸಲಾಗದಷ್ಟು ಭಾವ ತುಮುಲಗಳು. ಭಾವ ಜೀವಿಗಳಾಗಿ ಬದುಕಿದರೆ, … Read more

ಈಗ ಬೇಕಿರುವುದು ಶುದ್ಧವಾದ ಓದು: ಜೋಗಿ

  ನಿಮ್ಮ ಪತ್ರಿಕೆ ಪಂಜು ಎರಡೂ ಸಂಚಿಕೆಗಳನ್ನು ಓದಿದೆ. ಇಷ್ಟವಾಯಿತು. ತಾವು ಓದಿದ ಕಾದಂಬರಿಗಳ ಬಗ್ಗೆ ಮತ್ತು ನೋಡಿದ ಸಿನಿಮಾಗಳ ಬಗ್ಗೆ ಬರೆಯುವುದು, ತಮ್ಮ ಅನುಭವಗಳನ್ನು ದಾಖಲಿಸುವುದು ಮತ್ತು ಒಳನೋಟಗಳನ್ನು ಹಂಟಿಕೊಳ್ಳುವುದು ಪತ್ರಿಕೆಯನ್ನು ಚೆಂದಾಗಿ ಮಾಡಿದೆ. ಇದಕ್ಕಿಂತ ಹೆಚ್ಚಾಗಿ ಬರೆಯುತ್ತಿರುವ ಬಹಳಷ್ಟು ಮಂದಿ ಹೊಸಬರಾಗಿರುವುದರಿಂದ ಪತ್ರಿಕೆಗೊಂದು ಹೊಸ ನೋಟವೂ ಸಿಕ್ಕಿದೆ. ಅನುಭವಿ ಲೇಖಕರು ಬರೆಯತೊಡಗಿದೊಡನೆ, ನಮಗೆ ಅವರ ನಿಲುವು, ದೃಷ್ಟಿಕೋನ, ಸಿದ್ಧಾಂತದ ಬಗ್ಗೆ ಪೂರ್ವಗ್ರಹ ಕೂಡ ಇರುವುದರಿಂದ ನಮ್ಮ ಓದನ್ನು ಅದು ಪ್ರಭಾವಿಸುತ್ತದೆ. ಇಲ್ಲಿ ಹಾಗಾಗುವುದಿಲ್ಲ. ಹೊಸ … Read more