“ಹಾ! ಪುರುಷ ಜಗತ್ತೇ…”:ರೇಷ್ಮಾ ಎ.ಎಸ್.

ಸೀರೆಯ ನಿರಿಗೆಗಳನ್ನು ಜೋಡಿಸುತ್ತಾ ಹಾಸಿಗೆಯಲ್ಲಿ ಮಲಗಿದ್ದ ಪುಟ್ಟ ಮಗುವನ್ನಾಕೆ ನೋಡಿದಳು. ಮಗುವಿನ ಮುಖ ಬಾಡಿದ ಹೂವಿನಂತೆ ಸೊರಗಿತ್ತು. ಕಣ್ಣುಗಳು ಜ್ವರದ ತಾಪದಿಂದ ಬಸವಳಿದು ಒಣಗಿದ ಗುಲಾಬಿ ದಳದಂತಾಗಿದ್ದವು. ಜ್ವರ ಬಿಟ್ಟ ಸೂಚನೆಯಾಗಿ ಹಣೆಯ ಮೇಲೆ ಮೂಡಿದ್ದ ಬೆವರ ಹನಿಗೆ ಹಣೆಯಂಚಿನ ಗುಂಗುರು ಕೂದಲು ತೊಯ್ದು ಅಂಟಿಕೊಂಡಿತ್ತು. ಅವಳು ಸೆರಗಿನಿಂದ ಬೆವರನ್ನು ಹಗುರವಾಗಿ ಮಗುವಿಗೆ ಎಚ್ಚರವಾಗದಂತೆ ಒರೆಸಿದಳು. ರಾತ್ರಿಯಿಡೀ ಮಗು ಮಲಗಿರಲಿಲ್ಲ. ಜ್ವರದಿಂದ ಚಡಪಡಿಸುತ್ತಿತ್ತು. ಹನ್ನೊಂದು ಘಂಟೆಯವರೆಗೆ ಹೇಗೋ ಕುಳಿತಿದ್ದ ಅವಳ ಪತಿ "ಇನ್ನು ನಂಗಾಗೋಲ್ಲ, ನಿದ್ರೆ ಕೆಟ್ರೆ … Read more

ಡುಂಡಿ ಅರಣ್ಯಕನೊಬ್ಬ ಗಣಪತಿಯಾದ ಕಥೆ: ಮಂಜು ಅರ್ಕಾವತಿ

ಸುರರು ಹರಸಲೆಂದು ನಾನು ಕರಗಳೆತ್ತಿ ಬೇಡಿದೆ. ಅಸುರರು ಕೈಹಿಡಿದು ನನ್ನ ಜತನದಿ ಕಾಪಾಡಿದರು ಕಾಣದೆಲ್ಲೋ ಅವಿತಿರುವ ದೇವರುಗಳ ವಂದಿಸಿದೆ ಎದುರಿರುವ ನನ್ನಂತಹ ನರರುಗಳನೇ ನಿಂದಿಸಿದೆ ದೇವರುಗಳನು ಮಾಡಲು ಹೋದೆ ಅತಿಸನ್ಮಾನ ನನ್ನ ನಾನು ಮಾಡಿಕೊಂಡಿದ್ದು ಅತಿ ಅವಮಾನ ಸಾಕಿನ್ನು ಬೇಡುವ, ಕಾಡುವ ವ್ಯರ್ಥ ಕೆಲಸಗಳು ಜೋಡಣೆಯಾಗಲಿ ಹರಿದಿರುವ ಬದುಕುಗಳು  ತಾನು ಪೂಜಿಸಿದ ಆರ್ಯರ ಪಡೆಯಿಂದ ಸಾವಿನಂಚಿಗೆ ಹೋಗಿ ಡುಂಡಿಯ ಗಣದಿಂದ ಕಾಪಾಡಲ್ಪಟ್ಟ ಯಾಜ್ಞಿಕನ ನುಡಿ.  ಶಂಬರನೆನ್ನುವ ಅರಣ್ಯಕನೊಬ್ಬ ಯಾಜ್ಞಿಕನೆಂಬ ಭ್ರಾಹ್ಮಣನೊಬ್ಬನ ಜೊತೆ ಮರಣ ಶಯ್ಯೆಯಲ್ಲಿರುವ ಡುಂಡಿಯನ್ನು ನೋಡಲು … Read more

ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸ (ಕೊನೆಯ ಭಾಗ): ಗುರುಪ್ರಸಾದ ಕುರ್ತಕೋಟಿ

  ಕಾಲಿಮ್ ಫಾಂಗ್ ನಿಂದ ಗ್ಯಾಂಗ್ ಟಾಕ್ ಗೆ ಹೋಗುತ್ತಿದ್ದಾಗ ಮಧ್ಯೆ ದಾರಿಯಲ್ಲಿ ನಮಗರಿವಿಲ್ಲದಂತೆ ಒಮ್ಮೆಲೆ ಬೆಂಗಳೂರಿನ ನೆನಪಾಯಿತು. ಅದಕ್ಕಿದ್ದ ಒಂದೇ ಕಾರಣವೆಂದರೆ… ಈ ಪ್ರವಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅರ್ಧ ಗಂಟೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕೊಂಡಿದ್ವಿ! ಅಂತೂ ಪೋಲಿಸರಿಲ್ಲದಿದ್ದರೂ ಹೇಗೋ ಆ ಜಾಮ್ ಕರಗಿ ನಮ್ಮ ಪಯಣ ಮುಂದುವರಿಯಿತು.    ಗ್ಯಾಂಗ್ ಟಾಕ್, ಸಿಕ್ಕಿಂ ಎಂಬ ಪುಟ್ಟ ರಾಜ್ಯದ ರಾಜಧಾನಿ. ಆ ಊರಿಗೆ ಪ್ರವೇಶಿಸುವುದಕ್ಕೆ ಮೊದಲು, ಬಂಗಾಲ ಹಾಗೂ ಸಿಕ್ಕಿಂ ನ ಗಡಿಯಲ್ಲಿ ಅಗಸೆ … Read more

ಕುದುರೆ ಧ್ಯಾನದ ಚಿತ್ರಸಂತ: ಆನಂದ್ ಕುಂಚನೂರು

ಚಿತ್ರಕಲೆಯಲ್ಲಿ ತೊಡಗಿರುವವರದು ಒಂದೊಂದು ರೀತಿಯ ಯಶಸ್ಸು, ಸಾಧನೆ. ಬಣ್ಣಗಳ ಮೂಲಕ ತಮ್ಮ ವಿಶಿಷ್ಟ ಅಭಿವ್ಯಕ್ತಿ, ಸಂವೇದನೆಗಳಿಂದ ಗಮನ ಸೆಳೆದವರು ಹಲವಾರು ಜನ. ಅಂತಹ ಕೆಲವು ಕಲೆಗಾರರಲ್ಲಿ ಇತ್ತೀಚಿನ ದಿನಗಳಲ್ಲಿ ಕೊಂಚ ಭಿನ್ನವಾಗಿ ನಿಲ್ಲುವ ಹಾಗೂ ಚಿತ್ರಕಲೆಯ ಇನ್ನೊಂದು ಆಯಾಮದಂತೆ ತಮ್ಮ ಕಲೆಯಿಂದ ಚಿತ್ರ ರಸಿಕರ ಗಮನ ಸೆಳೆದಿರುವ ಕಲಾವಿದ, ರವಿ ಪೂಜಾರಿ. ಕುದುರೆ ಇವರ ಕಲೆಯ ಮೂಲದ್ರವ್ಯ. ಕುದುರೆಯ ವಿವಿಧ ಭಂಗಿ, ಆಕಾರ, ಭಾವನೆಗಳನ್ನು ಸೆರೆಹಿಡಿಯುವ ಮೂಲಕ ಅದನ್ನೇ ಧ್ಯಾನಿಸುತ್ತಾ ತಮ್ಮ ಕಲಾ ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿಕೊಂಡಿದ್ದಾರೆ. … Read more

ಆಲ್ ನ್ಯಾಚುರಲ್ ಎಂಬ ಮರಾಮೋಸ:ಅಖಿಲೇಶ್ ಚಿಪ್ಪಳಿ ಅಂಕಣ

  ಮನುಷ್ಯನ ಬುದ್ಧಿ ಒಂದೊಂದು ಬಾರಿ ಪೂರ್ವಜನುಮದ ಸ್ಮರಣೆಗೆ ಹೋಗುತ್ತದೆ. ಕೋತಿ ಬುದ್ಧಿ. ಮೊನ್ನೆ ನಮ್ಮ ಹಿರಿಯ ಸ್ನೇಹಿತರೊಬ್ಬರು ಬೆಂಗಳೂರಿಗೆ ಹೋಗಿದ್ದರು. ಈಶಾನ್ಯ ಭಾಗದಿಂದ ಬಂದ ಒಂದಿಷ್ಟು ಜನ ಬಿದಿರಿನಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಇದೇನು ಹೊಸ ವಿಷಯವಲ್ಲ. ಗುಡಿ ಕೈಗಾರಿಕೆಗಳಲ್ಲಿ ತಯಾರಿಸಿದ ವಸ್ತುಗಳನ್ನು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಮಾರಾಟ ಮಾಡುತ್ತಾರೆ. ರಸ್ತೆ ಬದಿಗಳಲ್ಲಿ ಗಿಡಮೂಲಿಕೆ ಔಷಧಗಳನ್ನು ಮೈಕಿನಲ್ಲಿ ಕೂಗುತ್ತಾ ಮಾರಾಟ ಮಾಡುವ ಜನ ಆಗಾಗ ಕಾಣ ಸಿಗುತ್ತಾರೆ. ಇವರು ಕೊಡುವ ಮೂಲಿಕೆಗಳಿಂದ ಎಲ್ಲಾ … Read more

ಒಂಟಿಬುಡಕ! :ಪ್ರಶಸ್ತಿ ಅಂಕಣ

ನಮ್ಕಡೆ  ಒಂದು ಪದ ಇದೆ "ಒಂಟಿಬುಡುಕ" ಅಂತ. ಪದ ಅನ್ನೋದಕ್ಕಿಂತ ಅದನ್ನೊಂದು ಸ್ವಭಾವ ಅನ್ನಬಹುದು. ಏನನ್ನೂ, ಯಾರಿಗೂ ಹಂಚದೇ ತಿನ್ನುವ, ಅನುಭವಿಸೋ ಸ್ವಭಾವದವನು/ದವಳಿಗೆ ಒಂಟಿಬುಡುಕ ಆಗ್ಬೇಡ. ಒಳ್ಳೇದಲ್ಲ ಅದು ಅಂತ ಅಪ್ಪ-ಅಮ್ಮ, ಹಿರಿಯರು ಕಿವಿ ಮಾತು ಹೇಳ್ತಿರುತ್ತಾರೆ. ಆ ಸ್ವಭಾವವಿದ್ದವರಿಗೆ ಏನೂ ಅನಿಸದಿದ್ದರೂ, ಹೊರಗಿನವರ ದೃಷ್ಟಿಯಲ್ಲಿ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತಿರುತ್ತೆ. ಇಂದು ಅದೇ ಸ್ವಭಾವದ ಬಗ್ಗೆ ಒಂದಿಷ್ಟು ಮಾತುಗಳು..ಯಾರದೋ ವ್ಯಕ್ತಿಗತ ನಿಂದೆ ಅಂತಲ್ಲ. ನಮ್ಮ ನಿಮ್ಮೊಳಗೂ ಅರಿಯದೇ ಅವಿತಿರುವ ಈ ಮರಿ ರಾಕ್ಷಸನ ಗುರುತಿಸಿ ಹೊರಗಾಕಲನುವಾಗಲೊಂದು ಪ್ರಯತ್ನ … Read more

ನಿರಾಳ: ಶರತ್ ಚಕ್ರವರ್ತಿ

“ನಾನು ಹೊರಟಿದ್ದೇನೆ” ಅಂತ ಅವಳ ಮೆಸೆಜ್ ಬಂದೊಡನೆ ತರಾತುರಿಯಲ್ಲಿ ಟವಲ್ಲು, ಅಂಡರಿವೆಯನ್ನ ಹಿಡಿದುಕೊಂಡೋಗಿ ಬಚ್ಚಲ ಬಾಗಿಲು ಜಡಿದುಕೊಂಡ. ಗಡ್ಡ ಬಿಟ್ಟುಕೊಂಡು ಹೋಗುವುದೋ, ಟ್ರಿಮ್ ಮಾಡಿಕೊಂಡು ಹೋಗುವುದೋ ಎಂಬ ಮೂರು ದಿನಗಳ ಜಿಜ್ಞಾಸೆಗೆ ಕತ್ತರಿ ಬಿದ್ದು ಅವನ ಹರಕಲು ಗಡ್ಡು ನೂರು ತುಕುಡಾಗಳಾಗಿ ಉದುರಿಕೊಂಡಿತ್ತು. ಏಳು ವರ್ಷಗಳ ನಂತರ ಅವಳು ಸಿಗುತ್ತಿರುವುದು. ಅಂದು ಹನಿಮಳೆಯೊಳಗೆ ಕಣ್ಣು ತೀಡುತ್ತಾ ಹೋದವಳ ಬೆನ್ನು ನೋಡುತ್ತಾ ನಿಂತವನು ಅಲ್ಲಿಯೇ ಸ್ತಬ್ಧವಾಗಿದ್ದ. ಕಣ್ಣೀರಿಡುತ್ತಾ ಅವಳು ಸೊರಗುಟ್ಟಿದ ಸದ್ದು ಇನ್ನೂ ಕಿವಿಯ ಗೋಡೆಗಳಿಗೆ ಗುದ್ದಿಕೊಳ್ಳುತ್ತಾ ಹೊರಬರಲಾಗದೇ … Read more

ಎರಡು ಕವಿತೆಗಳು: ಅನುರಾಧ ಪಿ. ಸಾಮಗ, ಅಶೋಕ್ ಕುಮಾರ್ ವಳದೂರು

ಒಮ್ಮೊಮ್ಮೆ.. ಜಾಗೃತಾವಸ್ಥೆಯೊಂದು ರಾಜ್ಯ, ನಂಬಿಕೆಯ ನಿರಂಕುಶಪ್ರಭುತ್ವ. ಅನಭಿಷಿಕ್ತ ದೊರೆ, ಸರಾಗ ಆಳ್ವಿಕೆ. ಎಲ್ಲೋ ಒಮ್ಮೊಮ್ಮೆ ಪರಿಸ್ಥಿತಿ ದಂಗೇಳುತ್ತವೆ, ಪಟ್ಟ ಅಲ್ಲಾಡುತದೆ, ಕಿರೀಟವುರುಳಿ ಮೀಸೆ ಮಣ್ಣುಮುಕ್ಕಾಗಿ…. ಹೊರಗಿಷ್ಟೆಲ್ಲ ಆದರೂ ಒಳಸುಳಿಯಲೆಲ್ಲೋ ಅದೇ ರಾಜನುಳಿಯುತಾನೆ, ಅಹಿತಕಾಲದ ಹೆಜ್ಜೆಗೆ ಯತ್ನದ ಗೆಜ್ಜೆ ತೊಡಿಸುತಲೇ ಸಕಾಲ ಪ್ರಕಟನಾಗುತ್ತಾನೆ.   ಸ್ವಪ್ನಸಾಮ್ರಾಜ್ಯದಲೆಲ್ಲ ಬುಡಮೇಲು ತಟ್ಟೆಯ ಕಾಳು ಬಿಟ್ಟು ಭ್ರಮನಿರಸನದ ಗೊಬ್ಬರಗುಂಡಿಯಲಿ ಅಪನಂಬಿಕೆಯ ಹುಳಕೆ ಕೆದಕುವ ಕೋಳಿಕನಸ ರಾಜ್ಯಭಾರ. ಒಮ್ಮೊಮ್ಮೆ ಸಂತೃಪ್ತ, ಒಮ್ಮೊಮ್ಮೆ ಅಲ್ಲ.   ಭಯಸಂಶಯ ಕೆಡುಕೆದುರು ನೋಡುತಾವೆ ಚಂದ್ರನೂ ಸೂರ್ಯನಂತುರಿಯುತಾ, ತಾರೆಸಾಲು ಮಿಂಚೆರಗಿದಂತೆರಗುತಾ, … Read more

ಸಿಂಗಿನ್ ಇನ್ ದ ರೈನ್:ವಾಸುಕಿ ರಾಘವನ್ ಅಂಕಣ

ಜಾಗತಿಕ ಸಿನಿಮಾಗಳಲ್ಲಿ “ಮ್ಯೂಸಿಕಲ್” ಅನ್ನುವ ಪ್ರತ್ಯೇಕ ಪ್ರಕಾರವುಂಟು. ಅದರ ವಿಶೇಷವೆಂದರೆ ಚಿತ್ರಗಳಲ್ಲಿ ಹೆಚ್ಚಾಗಿ ಹಾಡು-ಕುಣಿತದ ಬಳಕೆ. ಹಲವು ಬಾರಿ ಈ ಹಾಡುಗಳು ಪಾತ್ರಗಳನ್ನು ಪರಿಚಯಿಸಲೋ ಅಥವಾ ಕಥೆಯನ್ನು ಮುಂದುವರಿಸಲೋ ಸಹಾಯ ಮಾಡಿದರೆ, ಕೆಲವು ಸಲ ಕಥೆಗೆ ಸಂಬಂಧವಿರದಿದ್ದರೂ ಬರೀ ರಂಜನೆಯ ದೃಷ್ಟಿಯಿಂದ ಇರುತ್ತದೆ. ಭಾರತೀಯ ಚಿತ್ರಗಳನ್ನು ನೋಡಿ ಬೆಳೆದಿರುವವರಿಗೆ ಇದೂ ಒಂದು ಚಿತ್ರಪ್ರಕಾರವೇ ಅಂತ ತಮಾಷೆಯಾಗಿ ಕಾಣಬಹುದು. ನಮ್ಮ ಸಿನಿಮಾಗಳಲ್ಲಿ ಹಾಡು-ಕುಣಿತ ಅಷ್ಟೊಂದು ಅವಿಭಾಜ್ಯ ಅಂಗಗಳಾಗಿವೆ. ಅವಿಲ್ಲದೆಯೂ ಚಿತ್ರಗಳನ್ನು ಮಾಡಬಹುದು ಅನ್ನುವ ಆಲೋಚನೆಗಳೂ ಕೂಡ ಇತ್ತೀಚಿನವರೆಗೆ ಅಪರೂಪವಾಗಿದ್ದವು. … Read more

ಸ್ನೇಹ ಭಾಂದವ್ಯ (ಭಾಗ 7): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ರೇಖಾ ಶಿವಮೊಗ್ಗಕ್ಕೆ ಹೋದಳು. ಅವಳಿಗೆ ಮಾತ್ರ ತಾನು ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುವ ಹಕ್ಕಿ ತಾನಾಗಬೇಕು ಎಂದೆನಿಸಿತು. ಸುಧಾಳ ಬಗ್ಗೆ ಅವಳಿಗೆ ಅತೀವ ದುಃಖವಾಯಿತು. ತನ್ನ ಗೆಳತಿಯ ಜೀವನ ಹೀಗೇಕಾಯಿತು ಅಂದು ಚಿಂತಿಸುತ್ತಿದ್ದಳು.       ಈ ಸಲ ದೀಪಾವಳಿ ಹಬ್ಬಕ್ಕೆ ಅಳಿಯ-ಮಗಳನ್ನು ಮನೆಗೆ ಕರೆದುಕೊಂಡು ಬರಬೇಕು ಎಂದು ವೆಂಕಟಗಿರಿಗೆ ಕಾವೇರಮ್ಮ ಹೇಳಿದರು. ಅದರಂತೆ ಹೌದು ಕಣೆ ಮರೆತುಬಿಟ್ಟಿದ್ದೆ. ಇವತ್ತೆ ಹೋಗಿ ಹೇಳಿ ಬರುತ್ತೇನೆ ಎಂದು ವೆಂಕಟಗಿರಿ ಸುಧಾಳ ಮನೆಗೆ ಹೋದರು. ಬಾಗಿಲಲ್ಲಿ ಕುಳಿತಿದ್ದ ರಮಾನಂದರು ವೆಂಕಟಗಿರಿಯನ್ನು … Read more

ಒಲವಿನ ಶಾಪ:ಸುಮನ್ ದೇಸಾಯಿ ಅಂಕಣ

ಮೂರುಸಂಜಿ ಆರು ಘಂಟೆ ಆಗಿತ್ತು. ಮಾಗಿಯ ಕಾಲ ಇದ್ದದ್ದರಿಂದ ಲಗೂನ ಕತ್ತಲಿ ಆವರಿಸಲಿಕತ್ತಿತ್ತು. ಎಂಟು ದಿನದಿಂದ ಒಂದ ಸಮನಾ ಕಾಯ್ದ ಜ್ವರದಿಂದ ಮೈಯ್ಯಾಗ ನಿಶಕ್ತಿ, ಆಯಾಸ ತುಂಬಿದ್ವು. ಮಕ್ಕಳು ಇನ್ನು ಟ್ಯೂಶನ್ ನಿಂದ ಬಂದಿರಲಿಲ್ಲ. ಅವರು ಕೆಲಸದ ಮ್ಯಾಲೆ ಊರಿಗೆ ಹೋಗಿದ್ರು. ಏಕಾಂಗಿಯಾಗಿರೊದು ನಂಗ ಹೊಸದೆನಲ್ಲಾ. ಆದ್ರ ಯಾಕೊ ಇವತ್ತ ಈ ಏಕಾಂಗಿತನ ಅಸಹನೀಯ ಆಗಿತ್ತು. ಸಣ್ಣಾಗಿ ತಲಿಶೂಲಿ ಶುರುವಾಗಿತ್ತು. ಬಿಸಿ ಚಹಾ ಬೇಕನಿಸಿತ್ತು. ಎದ್ದು ಕೂತ್ರ ಕಡಕೊಂಡ ಬಿಳತೇನೊ ಅನ್ನೊ ಅಷ್ಟು ಆಯಾಸ. ಯಾರರ ಹತ್ರ … Read more

ಭಾರತೀಯರಾಗಿ ನಮಗೂ ಭಯವಿದೆ .. ಆದರೆ ಎಲ್ಲದರಲ್ಲ: ಸಂತೋಷ್ ಗುರುರಾಜ್

ಸ್ನೇಹಿತರೇ ,   ಈ ಶೀರ್ಷಿಕೆ ಕೊಡಲು ಒಂದು ಮುಖ್ಯ ಉದ್ದೇಶವಿದೆ. ಭಾರತೀಯರಾದ ಮತ್ತು ದೇಶಭಕ್ತರಾದ ನಾವು ಕೆಲ ವಿಷಯಗಳಿಗೆ ಹೆದರುತ್ತೇವೆ ಮತ್ತು ಹೆದರುತ್ತಲೇ ಇರುತ್ತೇವೆ. ಆದರೆ ಅದು ಯಾರೋ ಏನೋ ಮಾಡುವರೆಂದು ಅಲ್ಲ ಅಥವಾ ಎಲ್ಲಿಂದಲೋ ಆಪತ್ತು ಬರುವುದು ಎಂದೂ ಅಲ್ಲ. ನಮ್ಮ ದೇಶದಲ್ಲಿರುವ ಕೆಲವು ಬೆಲೆಬಾಳುವ ವಸ್ತು ಅಥವಾ ಆ ಮಾಹಾನ್ ಶಕ್ತಿಗಳನ್ನು ಎಲ್ಲಿ ಕಳೆದು ಕೊಳ್ಳುತ್ತವೋ ಎನ್ನುವ ಭಯ ಅಷ್ಟೇ. ಅದನ್ನು ವಿವರವಾಗಿ ತಿಳಿಸುವುದಾದರೆ ಕೇವಲ ಒಂದು ಲೇಖನದಲ್ಲಿ ಆಗುವುದಿಲ್ಲ. ಆದರೆ ಸಾಧ್ಯವಾದಷ್ಟು … Read more

ಸಾಮಾನ್ಯ ಜ್ಞಾನ (ವಾರ 4): ಮಹಾಂತೇಶ್ ಯರಗಟ್ಟಿ

೧. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ? ೨. ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು? ೩. ’ಮಾಲ್ಗುಡಿ ಡೇಸ್’ ಕೃತಿ ಬರೆದವರು ಯಾರು? ೪. ಏಷ್ಯಾದಲ್ಲೇ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು? ೫. ಬಿ.ಡಿ.ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು? ೬. ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ ಎಲ್ಲಿದೆ? ೭. ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ? ೮. ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು? ೯. ಪಟ್ಟದ … Read more