ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸದ ಅನುಭವ (ಭಾಗ ೨): ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ಇಷ್ಟು ಬೇಗ ಬೆಳಕಾಯ್ತೆ!? ಒಂದೊಂದು ಸಲ ನಿದ್ದೆ ಸಾಲದಾದಾಗ, ಏಳಲೇಬೇಕಾದ ಅನಿವಾರ್ಯತೆಯಿದ್ದಾಗ ಹಾಗನ್ನಿಸಿಬಿಡುತ್ತದೆ! ಇನ್ನೂ ಹಳೆಯದರಂತೇ ಗೋಚರಿಸುವ ಬಂಗಾಲದ  New Jalpaiguri ಎಂಬ ಊರಿನಲ್ಲಿ ಗಂಟು ಮೂಟೆಗಳೊಂದಿಗೆ ಬೆಳ್ಳಂ ಬೆಳಿಗ್ಗೆ ಟ್ರೇನಿನಿಂದ ಇಳಿದಾಗ, ಇಲ್ಲಿ ಹೊಸ (New) ದೇನಿರಬಹುದು ಅಂತ ಯೋಚಿಸುತ್ತಲೇ ಹೊರಗೆ ಬಂದಾಗ ಎರಡು ಝೈಲೋ ಗಾಡಿಗಳು ಹಾಗೂ ಇಬ್ಬರು ಸಾರಥಿಗಳು ನಮಗಾಗಿ ಕಾಯ್ದಿದ್ದರು. ಒಬ್ಬನ ಹೆಸರು ಸರೋಜ್ ಇನ್ನೊಬ್ಬ ನೀ ಮಾ. ಇಬ್ಬರೂ ನೇಪಾಳಿಗಳು. ನೀ ಮಾ ಅಂದರೆ  ನೇಪಾಳೀ ಭಾಷೆಯಲ್ಲಿ ಸುರ್ಯೋದಯವಂತೆ.  … Read more

ಸಾಮಾನ್ಯ ಜ್ಞಾನ (ಭಾಗ 1): ಮಹಾಂತೇಶ್ ಯರಗಟ್ಟಿ

೧. ಕನ್ನಡದ ಮೊದಲ ರಾಷ್ಟ್ರಕವಿ ಯಾರು? ೨. ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು? ೩. ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ ಸಂಸದ ಯಾರು? ೪. ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು? ೫. ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಶಿಸಿಕೊಂಡ ಗ್ರಾಮ ಯಾವುದು? ೬. ಸಾವಿರ ಹಾಡುಗಳ ಸರದಾರ ಯಾರು? ೭. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ? ೮. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು? ೯. … Read more

ಕ್ಯಾಮೆರಾ ಖರೀದಿ ಕತೆ: ಪ್ರಶಸ್ತಿ ಅಂಕಣ

  ಹಬ್ಬಕ್ಕೊಂದು ಹೊಸ ಕ್ಯಾಮೆರಾ ಖರೀದಿಸಬೇಕೆಂಬ ಹಂಬಲ ಸ್ವಲ್ವ ಜಾಸ್ತಿಯೇ ಅನ್ನುವಷ್ಟು ಮೂಡತೊಡಗಿತ್ತು.ಹೊಸ ಕ್ಯಾಮೆರಾ ಅಂದ ತಕ್ಷಣ ಈಗೊಂದು ಕ್ಯಾಮೆರಾ ಇತ್ತೆಂದಲ್ಲ. ಮುಖಹೊತ್ತಿಗೆಯಲ್ಲಿ. ಟ್ರಿಪ್ಪು, ಗ್ರೂಪುಗಳಲ್ಲಿ ಎಲ್ಲರ ಕೈಯಲ್ಲೂ ತರಾವರಿ ಥಳಥಳಿಸೋ ಕ್ಯಾಮೆರಾ ಕಂಡು ಕರುಬುವ ಮನಕ್ಕೆ ಸ್ವಂತದ್ದೊಂದು ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕೆಂಬ ಆಸೆ ನಿಧಾನಕ್ಕೆ ಮೂಡಿತ್ತು. ಪದವಿಯ ಕೊನೆಯ ವರ್ಷದಿಂದಲೂ ಪದವಿಯಾಗಿ ಎರಡು ವರ್ಷವಾಗೋವರೆಗೂ ಇದ್ದ ನೋಕಿಯಾ ೨೭೦೦ ಕ್ಲಾಸಿಕ್ ಮೊಬೈಲಿನ ೨ ಮೆಗಾಪಿಕ್ಸಲ್ ಕ್ಯಾಮೆರಾದಲ್ಲೇ ಸಂತೃಪ್ತವಾಗಿದ್ದ  ಮನಸ್ಸು ಇದ್ದಕ್ಕಿದ್ದಂತೆ ಡಿಜಿಟಲ್ ಕ್ಯಾಮೆರಾದತ್ತ ಹೊರಳಿದ್ದೇಕೆ ? … Read more

ಪಟಾಕಿ: ಸಂತೋಷ್ ಕುಮಾರ್ ಎಲ್. ಎಂ.

ಅದು ಬೃಹದಾಕಾರವಾಗಿ ಬೆಳೆದ ನಗರದ ಮೂಲೆಯಲ್ಲಿ, ಇನ್ನೂ ತಲೆಯೆತ್ತಿ ನಿಲ್ಲಲೂ ಕಷ್ಟಪಡುತ್ತಿರುವ ಒಂದು ಬಡವರ್ಗದವರ ಏರಿಯಾ. ನಾಲ್ಕು ಗಂಟೆಗೆಲ್ಲ ಎದ್ದು ಕೂಲಿಗೆ ಹೊರಡುವ ಶ್ರಮಜೀವಿಗಳು ಮತ್ತೆ ವಾಪಸ್ಸು ಬರುವುದೇ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ.  ಮನೆಯೊಳಗೆ ಅಜ್ಜಿಯ ಕೈತುತ್ತು ತಿಂದು ಮಲಗಿದ ಪುಟ್ಟಿ ದೀಪಳಿಗೆ ನಿದ್ರೆ ಬರುತ್ತಿಲ್ಲ. ಅಜ್ಜಿ ನಾಳೆಯ ದಿನ ದೀಪಾವಳಿ ಅಂತ ಹೇಳಿದ್ದಾಳೆ. ಅಪ್ಪ ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಯಾವತ್ತಿಗೂ ಪಟಾಕಿ ತರುವುದನ್ನು ಮರೆತಿಲ್ಲ. ಯಾವುದಕ್ಕೂ ದುಡ್ಡಿಲ್ಲದಿದ್ದರೂ ಪ್ರತೀ ತಿಂಗಳು ಪಟಾಕಿಗೆಂದೇ ಇಂತಿಷ್ಟು ಅಂತ ಒಂದಷ್ಟು … Read more

ಬಿಸಿಲು ಬಸಪ್ಪ ಮತ್ತು ಉನ್ನಾವ್ ಕೋಟೆ: ಅಖಿಲೇಶ್ ಚಿಪ್ಪಳಿ ಅಂಕಣ

  ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಐತಿಹಾಸಿಕ ಸ್ಥಳಗಳು ಸಾಕಷ್ಟಿವೆ. ಇಕ್ಕೇರಿ, ಕೆಳದಿ, ಕಲಸಿ, ಹಳೆಇಕ್ಕೇರಿಯ ಕೋಟೆ ಇತ್ಯಾದಿ ಇತ್ಯಾದಿ. ನಮ್ಮ ಊರಿನಲ್ಲಿ ಇರುವುದೊಂದೇ ವೀರಶೈವರ ಮನೆ ಮತ್ತು ಅವರಿಗೊಂದು ವೀರಭದ್ರ ದೇವಸ್ಥಾನ. ದೇವಸ್ಥಾನದಿಂದ ಕೊಂಚ ದೂರದಲ್ಲಿ ಒಂದು ಬಸವಣ್ಣ. ಅದರ ಹೆಸರು ಬಿಸಿಲು ಬಸಪ್ಪ. ಪ್ರತಿವರ್ಷ ಆಯ್ದ ದಿನಗಳಲ್ಲಿ ಅದಕ್ಕೆ ಪೂಜೆ. ವಿಶೇಷವಾಗಿ ತುಳಸಿಪೂಜೆ, ದೀಪಾವಳಿಗಳಂದು ವರ್ಷವಿಡೀ ಬಿಸಿಲಿನಲ್ಲೇ ಮಲಗಿದ ಬಸಪ್ಪನಿಗೆ ಪೂಜೆ. ಬಿಸಿಲು-ಮಳೆಗಳಿಂದ ರಕ್ಷಿಸಲು ಆ ಬಸಪ್ಪನಿಗೆ ಕಟ್ಟಡವಿರಲ್ಲಿಲ್ಲ. ಬಿಸಿಲಿನಲ್ಲೇ ಇರುವುದರಿಂದಾಗಿ ಬಿಸಿಲು ಎಂಬುದು … Read more

ಕಿಟ್ಟುಮಾಮಾನ ದೀಪಾವಳಿ: ಸುಮನ್ ದೇಸಾಯಿ ಅಂಕಣ

  ಚುಮುಚುಮು ಛಳಿಗಾಲದಾಗ  ಬರೊ ದೀಪದ ಹಬ್ಬ ದೀಪಾವಳಿ ನೆನಿಸಿಕೊಂಡ್ರನ ಎನೊ ಒಂಥರಾ ಖುಷಿ ಆಗತದ. ನರಕಚತುರ್ದಶಿ ಹಿಂದಿನ ದಿನದಿಂದನ ದೀಪಾವಳಿ ಹಬ್ಬದ ಸಂಭ್ರಮ ಸುರು ಆಗತದ. ಅಂದ್ರ ನಮ್ಮ ಉತ್ತರ ಕರ್ನಾಟಕದ ಕಡೆ ನರಕಚತುರ್ದಶಿ ಹಿಂದಿನ ದಿನಾ ನೀರು ತುಂಬೊ ಹಬ್ಬ ಅಂತ ಮಾಡತೇವಿ. ಅವತ್ತ ಸಂಜಿಮುಂದ ಎಲ್ಲಾರು ಅಂಗಳಾ  ಸಾರಿಸಿ ಥಳಿ ಹೋಡದು ಛಂದನ ದೊಡ್ಡ ದೊಡ್ಡ ರಂಗೋಲಿ ಹಾಕಿ,ಮನಿಮುಂದ ಬಣ್ಣ ಬಣ್ಣದ ಆಕಾಶಬುಟ್ಟಿ ಕಟ್ಟಿರತಾರ. ಮನ್ಯಾಗಿನ ಹಿತ್ತಾಳಿ ತಾಮ್ರದ ಹಂಡೆ ಮತ್ತ ಕೊಡಗೊಳನ … Read more

ಮೂವರ ಕವಿತೆಗಳು: ಪ್ರವೀಣ, ನಳಿನಾ ಡಿ., ಶಶಿಕಿರಣ್

ಎದ್ದಾಗ ಸುತ್ತೆಲ್ಲ ಕತ್ತಲು ಸಾಯುವ ದಿನ ನಿಕ್ಕಿಯಿಲ್ಲವೆಂದು ನಾಳೆ ನಾಡಿದ್ದುಗಳ ಚಾಪೆಯ ಮೇಲೆ ಸುರಿದು ತಿಂದುಬಿಡುವ ಕಾತುರಕೆ ಹಸಿವು ಸಾಯುವುದಿಲ್ಲ.   ಇದ್ದ ಎಣ್ಣೆಯನೆಲ್ಲ ದೀಪಕೆ ಸುರುವಿ ಬೆಳಕನು ಹೊದ್ದು ಗಡದ್ದು ನಿದ್ದೆ ಎದ್ದಾಗ ಸುತ್ತೆಲ್ಲ ಕತ್ತಲು.   ನಿರ್ದಯ ದೈವದೆದುರು ಮುಗಿದ ಕೈಗಳು ನೈವೇದ್ಯದ ಸಕ್ಕರೆ ಇರುವೆ ತಿಂದು ಖಾಲಿ ಎದೆಯ ಬೇಗೆ ಶಬ್ದಗಳ ಮುಷ್ಠಿಗೆ ಸಿಗದೆ ಖಾಲಿ ಪುಟದ ತುಂಬೆಲ್ಲ ರಾಡಿ.   ಅತಿರಥ ಮಹಾರಥ ಭಗೀರಥ ಪ್ರಯತ್ನ ಆಗಸ ಮುಟ್ಟುವ ಹುತ್ತಿನ ಪರ್ವತದ … Read more

ಸಾಲದ ವಿಷಯ (ಭಾಗ 2): ಸೂರಿ ಹಾರ್ದಳ್ಳಿ

(ಇಲ್ಲಿಯವರೆಗೆ) ಈಗಿನ ಕಾಲದಲ್ಲಿ ಕ್ರೆಡಿಟ್ ಕಾರ್ಡಿಲ್ಲದವನು, ಮೊಬೈಲ್ ಫೋನಿರದವನು ಶ್ವಾನಕಿಂತ ಕಡೆಯೆಂದ ಸರ್ವಜ್ಞ! ದೂರವಾಣಿ ಮಾಡಿ ತಲೆ ತಿನ್ನುವ ಕ್ರೆಡಿರ್ಟ್ ಕಾರ್ಡು ಕಂಪನಿಯವರನ್ನು ನಾನು ಒಮ್ಮೆ ಸತಾಯಿಸಿದ್ದು ಹೀಗೆ. ’ಸರ್, ದಯವಿಟ್ಟು ನಿಮ್ಮ ಕೆಲ ನಿಮಿಷಗಳನ್ನು ಬಳಸಿಕೊಳ್ಳಲೇ?’ ಕರ್ಣಾನಂದಕರ ದನಿ, ಆಂಗ್ಲ ಭಾಷೆಯಲ್ಲಿತ್ತು. ’ಸರಿ, ಹೇಳಿ,’ ’ನಾವು… ಬ್ಯಾಂಕಿನವರು. ನಿಮಗೆ ಕ್ರೆಡಿಟ್ ಕಾರ್ಡನ್ನು ಫ್ರೀಯಾಗಿ ಕೊಡುತ್ತೇವೆ.’ ನಾನು ಅವಳ ಮಾತು ಮುಂದುವರಿಸುವ ಮೊದಲೇ ಹೇಳಿದೆ, ’ಹೌದಾ? ನನಗೆ ನಿಜವಾಗಿಯೂ ಕ್ರೆಡಿಟ್ ಕಾರ್ಡಿನ ಅವಶ್ಯಕತೆ ಇದೆ. ನಾನು ಈಗಾಗಲೇ … Read more

ಭೂತಯ್ಯನ ಮಗ ಅಯ್ಯು: ವಾಸುಕಿ ರಾಘವನ್ ಅಂಕಣ

“ಗ್ರಾಮೀಣ ಚಿತ್ರ”ಗಳಲ್ಲಿ ಬರುವ ಕ್ಲೀಷೆಗಳಿಗೆ ಲೆಕ್ಕವಿಲ್ಲ. ಹಸಿರು ಹಸಿರಾಗಿ ಉದ್ದಗಲಕ್ಕೂ ಹರಡಿಕೊಂಡಿರುವ ಗದ್ದೆಗಳು, ಲಂಗ ದಾವಣಿ ಹಾಕಿರೋ ನಾಯಕಿ, ಹೆಗಲ ಮೇಲೆ ಬಿಳೀ ಮೇಕೆಮರಿಯನ್ನು ಎತ್ತಿಕೊಂಡು “ಅಯ್” ಅನ್ನುವ ಮುಖಭಾವ, ಸದಾ ಎಲೆಯಡಿಕೆ ಜಗಿಯುವ ಹುಳುಕಲು ಹಲ್ಲಿನ ಅಜ್ಜಿ, ಆ ಅಜ್ಜಿ ಒಮ್ಮೆಯಾದರೂ “ಬೋ ಪಿರುತಿ” ಅನ್ನುವ ಕೃತಕ ವಾಕ್ಯಪ್ರಯೋಗ, ಹಳ್ಳಿಯವರೆಲ್ಲಾ ಒಳ್ಳೆಯವರು, ಹೊರಗಿಂದ ಬಂದ ಪಟ್ಟಣದವರು ಮಾತ್ರ ಕೆಟ್ಟವರು ಅನ್ನುವ ಧೋರಣೆ ಇತ್ಯಾದಿ ಇತ್ಯಾದಿ. ಈ ಪ್ರಕಾರದಲ್ಲಿ ಬಂದಿರುವ ಲೆಕ್ಕವಿಲ್ಲದಷ್ಟು ಕೆಟ್ಟ ಚಿತ್ರಗಳನ್ನು ನೋಡಿದ್ದ ನನಗೆ, … Read more

ಬೆಳೆಯುವ ಸಿರಿ ಮೊಳಕೆಯಲ್ಲಿ: ಡಾ. ವಾಣಿ ಸುಂದೀಪ್

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಮಕ್ಕಳ ಒಲವು ಯಾವ ಕಡೆ ಎಂಬುದು ಪೋಷಕರಿಗೆ ಮಕ್ಕಳು ಚಿಕ್ಕವರಿರುವಾಗಲೇ ಅರ್ಥವಾಗಬೇಕು.  ಮಕ್ಕಳನ್ನು ಬೆಳೆಸುವುದು, ಪಾಲಿಸುವುದು ಸುಲಭದ ಕೆಲಸವಲ್ಲ. ಮಕ್ಕಳ ಆಟ, ಹಟ, ನಗು, ಬಾಲ್ಯತನ ಎಲ್ಲವೂ ಹಿತ ನೀಡುತ್ತವೆ. ಆದರೆ ಮಕ್ಕಳ ಜವಾಬ್ದಾರಿಯ ವಿಚಾರ ಬಂದಾಗ ಎಲ್ಲ ತಂದೆ-ತಾಯಿಯರೂ ಜಾಗೃತರಾಗಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿ, ಅದರ ಜೊತೆಗೆ ಹೊರ ಜಗತ್ತಿನ ಅನುಭವವನ್ನು ಮಾಡಿಸಬೇಕು. ಮಕ್ಕಳ ಆಸೆಗಳನ್ನೂ ಪೂರೈಸಬೇಕು.   ಮಗು ಹಠ ಮಾಡುತ್ತಿದೆ ಎಂದು ಕೈಲಾಗದ ವಸ್ತುಗಳನ್ನು ತರಲು ಸಾಧ್ಯವಿಲ್ಲ. ಮೊದಲನೆಯದಾಗಿ … Read more

ಹೃದಯದ ಹಂದರದಲ್ಲೊಂದು ಸ್ನೇಹ ಸಿಂಚನಾ: ರಾಮು ಗುಂಡೂರು

                                 ಈ ನೆನಪೆ ಶಾಶ್ವತವು ಮಿಂಚಿದ ಶಾಲದಿನವು ಈ ಹಾಡು ನಮ್ಮ ಕಥೆಗೆ ಎಷ್ಟು ಸಾಮ್ಯತೆಯಿದೆಯೆಂದರೆ….? ನನ್ನ ನೆನಪಿನ ಸಂಚಿಯ ಪ್ರತಿ ನೆನಪಿಗೂ ಜೀವ ತುಂಬಬಲ್ಲ ಶಕ್ತಿಯಿದೆ ಎಂದರೆ ಅತಿಯೋಶಕ್ತಿಯಾಗಲಾರದು. ನನ್ನ ಮನದಾಳದ ವ್ಯತೆಯನ್ನು ಕಥೆಯಾಗಿ ಹೇಳುವೆ ಗೆಳತಿ ಮನಸಾರೆ ಕೇಳುವೆಯೆಂಬ ನಿರೀಕ್ಷೆಯೊಂದಿಗೆ ನನ್ನ ಪತ್ರವನ್ನು ಆರಂಭಿಸುತ್ತೇನೆ. ಡಿಯರ್ ಗೆಳತಿ ನಿನ್ನೊಂದಿಗೆ ಕಳೆದ ಶಾಲಾದಿನಗಳು ಎಷ್ಟೊಂದು … Read more

ಕೆಂಗುಲಾಬಿ (ಭಾಗ 18): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಆಕೆಯ ಬದುಕಿನಲ್ಲಿ ಎದುರಾಗುತ್ತಿರುವ ತಿರುವು ಮುರುವುಗಳನ್ನು ನನ್ನನ್ನು ಕೂಡ ಆತಂಕಗೊಳಿಸಿದ್ದವು. ನಮ್ಮ ಆಫೀಸ್‍ನಲ್ಲಿ ಹಿರಿಯ ಲೈಂಗಿಕ ಕಾರ್ಮಿಕರನ್ನು ಕಾಂಡೋಮ್ ಹಂಚುವ 'ಸಂರಕ್ಷಾ ಸಖಿ'ಯರನ್ನಾಗಿ ನೇಮಕ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದು ನೆನಪಾಗಿ ನಾನು ಆಕೆಗೆ ವಿಷಯವನ್ನೆಲ್ಲ ತಿಳಿಸಿದೆ. ನಮ್ಮ ಕಚೇರಿಯ ವಿಳಾಸ ಕೊಟ್ಟು ಹೊರ ಬಂದೆ. ಮನೆಯ ಬಾಗಿಲಿನಲ್ಲಿ ಕುಳಿತಿದ್ದ ರಾಜಿಯ ಅರಳುತ್ತಿರುವ ಚೆಲುವನ್ನು ನೋಡಿ ನನಗೆ ಸಂತೋಷ, ಗಾಬರಿಗಳೆರಡು ಒಟ್ಟೊಟ್ಟಿಗೆ ಆದವು. ಮತ್ತೆ ಮನೆಯೊಳಗೆ ಹೋಗಿ ರಾಜಿ ಬಗ್ಗೆ ವಿಶೇಷ ಎಚ್ಚರಿಕೆವಹಿಸಬೇಕು ಎಂದು ಕಿವಿಮಾತು … Read more

ಸ್ನೇಹ ಭಾಂದವ್ಯ (ಭಾಗ 4): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಆ ದಿನ ರಾತ್ರಿ ಸುಧಾಳಿಗೆ ನಿದ್ದೆ ಹತ್ತಿರ ಸುಳಿಯದಾಯಿತು ಈ ವಿಷಯವನ್ನು ಹೇಗಾದರೂ ಮಾಡಿ ರೇಖಾಳಿಗೆ ತಿಳಿಸಬೇಕು. ಊರಿಗೆ ಬಂದು ಐದಾರು ದಿನಗಳು ಕಳೆದಿವೆ ಆದರೂ ರೇಖಾಳನ್ನು ಭೇಟಿಯಾಗಿಲ್ಲ. ಈ ಬಿಕ್ಕಟ್ಟಿನಿಂದ ಹೇಗಾದರೂ ಪಾರಾಗಬೇಕೆಂದು ಚಿಂತಿಸುತ್ತ ಮಲಗಿದವಳಿಗೆ ಬೆಳಕು ಹರಿದಿದ್ದೆ ತಿಳಿಯಲಿಲ್ಲ. ಏಳೇ ಸುಧಾ ಇನ್ನು ಮಲಗೆ ಇದ್ದೀಯಲ್ಲೆ. ಗಂಡಿನ ಕಡೆಯವರು ಬರುವುದರೊಳಗಾಗಿ ಮನೆಯ ಕೆಲಸವೆಲ್ಲ ಮುಗಿಯಬೇಕು ಎಂದು ಕಾವೇರಮ್ಮ ಎಬ್ಬಿಸಿದಾಗಲೇ ಸುಧಾಳಿಗೆ ಎಚ್ಚರ. ಸುಧಾ ಎದ್ದು ಬೇಗ ಬೇಗನೆ ಮನೆಗೆಲಸದಲ್ಲಿ ತಾಯಿಗೆ ಸಹಾಯ ಮಾಡಿ … Read more