ಬೆಳದಿಂಗಳ ಬಾಲೆ: ಸುಬ್ರಹ್ಮಣ್ಯ ಹೆಗಡೆ

೧.           ಪ್ರತೀ ದಿನದಂತೆ, ಕೋರಮಂಗಲದ ನಮ್ಮ ಮನೆಯಿಂದ ಬನಶಂಕರಿಯ ಕಾಲೇಜಿಗೆ ಹೊರಟವನು ಹಾಗೇ JP ನಗರದ ವೈಷ್ಣವಿಯ ಮನೆಯ ಕಡೆಗೆ ಗಾಡಿಯನ್ನು ತಿರುಗಿಸಿದೆ, ಅದೇನೂ ಕಾಲೇಜಿಗೆ ಹೋಗುವ ದಾರಿಯಲ್ಲಿ ಇಲ್ಲದಿದ್ದರೂ, ವೈಷ್ಣವಿ ಇಷ್ಟು ಹೊತ್ತಿಗೆ ಕಾಲೇಜು ಬಸ್ ನ್ನು ಹಿಡಿಯಲು ಮನೆಯಿಂದ ಹೊರಟಾಗಿರುತ್ತದೆ ಎಂದು ತಿಳಿದಿದ್ದರೂ. ಪ್ರೀತಿಸಿದ ವ್ಯಕ್ತಿ ಇದ್ದ ಜಾಗ ಎಂಬ ವಿಷಯ ಇದೆಯಲ್ಲಾ, ಅವಳು ನಡೆದ ದಾರಿಯ ಘಮ ಇಲ್ಲೇ ಹಬ್ಬಿದೆ ಎಂಬ ಭ್ರಮಾಭರಿತ ಸೊಗಸು ಮಾತಿನ ಅಗತ್ಯವಿಲ್ಲದೇ, ಕಾಲದೇಶಗಳ ಹಂಗಿಲ್ಲದೇ, ವ್ಯಕ್ತವಾಗುವ … Read more

ಕಾಗೆ ಪಕ್ಷ! ಕೋಗಿಲೆ ಪಕ್ಷ!! : ಎಸ್.ಜಿ.ಶಿವಶಂಕರ್

ಅಲೆಅಲೆಯಾಗಿ ತೇಲಿ ಬಂತು ಕೋಗಿಲೆಯ ಮಧುರ ಸ್ವರ. ಕೇಳುತ್ತಲೇ ವಿಶಾಲೂ ಮುಖ ಅರಳಿತು, ಮಂದಹಾಸ ಮಿನುಗಿತು. ಉಲ್ಲಸಿತಗೊಂಡಳು! ಪೇಪರಿನಿಂದ ತಲೆ ಎತ್ತಿ ಸ್ವರ ಬಂದ ದಿಕ್ಕನ್ನು ಗುರುತಿಸಲು ಪ್ರಯತ್ನಿಸಿದಳು. ’ದರಿದ್ರ, ಮತ್ತೆ ಬಂದು ವಕ್ಕರಿಸಿತು’ ವಿಶ್ವ ಶಪಿಸಿದ! ವಿಶಾಲೂ ಬೆಚ್ಚಿದಳು! ಇಂತವರೂ ಇರ್ತಾರ? ಅಚ್ಚರಿಪಟ್ಟಳು! ಕೋಗಿಲೆಯ ಇಂಪಾದ ರಾಗವನ್ನು ದರಿದ್ರ ಎಂದು ಭಾವಿಸ್ತಾರಾ..? ಬೆಳ್ಳಂಬೆಳಿಗ್ಗೆ ಗಡ್ಡ ಮೀಸೆಗಳಿರುವ ಜಾಗದಲ್ಲಿ ಚೂರುಚೂರೇ ಬೆಳೆದು ’ನೀನು ಮುದುಕನಾಗುತ್ತಿರುವೆ’ ಎಂಬುದನ್ನು ಜಗಜ್ಜಾಹೀರು ಮಾಡಲು ಹವಣಿಸುತ್ತಿದ್ದ ಬಿಳಿಕೂದಲುಗಳನ್ನು ನಿರ್ದಯದಿಂದ ಬೋಳಿಸುವ, ನವನಾಗರೀಕ ಭಾಷೆಯಲ್ಲಿ … Read more

ಕುಂಡೆಕುಸ್ಕ ಬಂತು: ಅಖಿಲೇಶ್ ಚಿಪ್ಪಳಿ

ಹವಾಮಾನ ಬದಲಾವಣೆಯ ಪರಿಣಾಮವೋ ಏನೋ ಮಲೆನಾಡಿನಲ್ಲಿ ಇನ್ನೂ ಮಳೆ ಬಿಟ್ಟಿಲ್ಲ. ಮೇಲಿಂದ ಮೇಲೆ ಚಂಡಮಾರುತಗಳು ರುಧ್ರನರ್ತನಗೈಯುತ್ತಿವೆ. ಪ್ರಕೃತಿವಿಕೋಪಕ್ಕೆ ಸಿಕ್ಕ ಮಾನವನ ಬದುಕು ಮೂರಾಬಟ್ಟೆಯಾಗಿದೆ. ಸ್ವಯಂಕೃತಾಪರಾಧವೆನ್ನಬಹುದೆ? ಮಳೆಗಾಲ ಕ್ಷೀಣವಾಗಿ ನಿಧಾನವಾಗಿ ಚಳಿ ಹೆಜ್ಜೆಯ ಮೇಲೆ ಹೆಜ್ಜೆಯಿಡುತಾ ಬರುವಾಗಿನ ಸಂಭ್ರಮ ಮತ್ತು ಅದರ ಮಜ ಬೇರೆ. ತೆಳ್ಳಗಿನ ಇಬ್ಬನಿ ಎಲೆಗಳ ಮೇಲೆ ಹುಲ್ಲಿನ ಮೇಲೆ, ಜೇಡದ ಬಲೆಯಲ್ಲಿ ಮುತ್ತು ಪೋಣಿಸಿದಂತೆ ಅತ್ಯಾಕರ್ಷಕವಾಗಿ ತೋರುತ್ತದೆ. ಚಳಿಗಾಲದ ಮುಂಜಾವಿನ ಸೊಗಸನ್ನು ಅನುಭವಿಸಿದವನೇ ಧನ್ಯ. ಸೂರ್ಯವಂಶಿಗಳಿಗೆ ಈ ಭಾಗ್ಯವಿಲ್ಲ. ಇವರೆದ್ದು ವಾತಾವರಣದ ಸಂಪರ್ಕಕ್ಕೆ ಬರುವ … Read more

ಕಾಲೇಜ್ ಕಹಾನಿ: ಪ್ರಶಸ್ತಿ ಅಂಕಣ

ನೀರವ ರಾತ್ರಿ. ಜೀವನವೇ ಜಿಗುಪ್ಸೆಯಾಗಿ , ಮನಶ್ಯಾಂತಿಯನ್ನು ಹುಡುಕಿ ಅಲೆಯುತ್ತಿರೋ ಅಲೆಮಾರಿಯಂತೆ ಒಬ್ಬ ಕೆರೆಯನ್ನೇ ದಿಟ್ಟಿಸುತ್ತಾ ಅದರ ದಡದಲ್ಲಿ ಕುಳಿತಿದ್ದ. ಬೆಳದಿಂಗಳ ರಾತ್ರಿ. ಕೆರೆಯ ಅಲೆಗಳಲ್ಲಿ ಪ್ರತಿಬಿಂಬಿಸುತ್ತಿದ್ದ ಚಂದ್ರನ ಬಿಂಬ ನೋಡುತ್ತಿದ್ದರೆ ಆಗಸದ ಆ ಶಶಿ ಈತನಿಗೆ ಸಾಂತ್ವನ ಹೇಳಲೆಂದೇ ಭುವಿಗಿಳಿದು ಬಂದು ಕೆರೆಯಲ್ಲಿ ಈಜಾಡುತ್ತಿದ್ದಾನೇನೋ ಅನಿಸುತ್ತಿತ್ತು. ರೋಹಿಣೀಪತಿ ಪ್ರಭೆಯ ರಾತ್ರಿ ಸಭೆಗೆ ಆಗಮಿಸಿದ್ದ ತಾರೆಗಳೆಲ್ಲಾ ಮಿಂಚುತ್ತಾ ಆಗಸದಲ್ಲಿ ಚಿತ್ರ ವಿಚಿತ್ರ ಆಕೃತಿಗಳನ್ನು ಮೂಡಿಸುತ್ತಿದ್ದವು. ಸೃಷ್ಟಿಕರ್ತನ ಚುಕ್ಕಿಯಾಟಕ್ಕೋ , ರಂಗೋಲಿಗೋ ಅಂಗಳವಾದಂತಿದ್ದವು. ತಂಗಾಳಿಗೆ ಗತ್ತು ಬಂದಂತೆ ಕೊಂಬೆಗಳನ್ನು … Read more

ಆತ್ಮಹತ್ಯೆ; ಒಂದು ಚಿಂತನೆ: ದಿವ್ಯಾ ಆಂಜನಪ್ಪ

ಇತ್ತೀಚೆಗೆ ನಾಲ್ಕನೇ ತರಗತಿಯಲ್ಲಿ ವಿಜ್ಞಾನ ಪಾಠವೊಂದರ ಕುರಿತು ಚರ್ಚಿಸುತ್ತಿದ್ದ ಸಮಯ. ಪಾಠದ ಹೆಸರು "ಮಣ್ಣು". ಮಕ್ಕಳಿಗೆ ಮಣ್ಣು ಹೇಗಾಯಿತು? ಮಣ್ಣಿನ ರಚನೆ, ಮಣ್ಣಿನ ಉಪಯೋಗಗಳನ್ನು ಹೇಳುವಾಗ, ಇಂಧನವಾದ ಕಲ್ಲಿದ್ದಲು ಕುರಿತು ಚರ್ಚೆ ಬೆಳೆಯಿತು. ಹಾಗಾಗಿ ಪಾಠಕ್ಕೆ ಹೊರತಾಗಿದ್ದು ಹೆಚ್ಚಿನ ಮಾಹಿತಿಯೆಂದೇ ತಿಳಿದು ವಿಷಯಾಂತರವಾದರೂ ಸರಿಯೇ ಎಂದು ಅದರ ಬಗ್ಗೆಯೂ ಮಾಹಿತಿ ನೀಡುತ್ತಿದ್ದೆ. ಈಗಿನ ಶಿಕ್ಷಣ ಕ್ರಮದಲ್ಲಿ ವಿಷಯಾಂತರ ಎಂಬ ಮಾತಿಲ್ಲ. ಕನ್ನಡ ಪಾಠದಲ್ಲಿ ವಿಜ್ಞಾನದ ವಿಷಯಾಂಶ ಬಂದರೂ ಅದನ್ನು ಭೋದಿಸಿಯೇ ಮುಂದೆ ನಡೆಯಬೇಕು. ಮಕ್ಕಳಲ್ಲಿ ಯಾವುದೊಂದು ಪ್ರಶ್ನೆಯೂ … Read more

ಸ್ನೇಹ ಭಾಂದವ್ಯ (ಭಾಗ 2): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ…) ಮರುದಿನ ಎಂದಿನಂತೆಯೆ ಗೆಳತಿಯರಿಬ್ಬರು ಅಂದುಕೊಂಡಂತೆಯೇ ಅದೇ ಮಾವಿನ ಮರದ ಕೆಳಗೆ ಭೇಟಿಯಾದರು. ಆಗ ರೇಖಾಳೆ ಮಾತಿಗಾರಂಭಿಸಿದಳು. ಏ ಸುಧಾ ಈಗಾಗಲೇ ಕಾಲೇಜ್ ಅಡ್ಮೀಷನ್ ಶುರು ಆಗಿ ನಾಲ್ಕೈದು ದಿನಗಳಾಗಿವೆ. ಇನ್ನು ಹತ್ತು ದಿನದೊಳಗಾಗಿ ನಾವು ಪಟ್ಟಣಕ್ಕೆ ಹೋಗಿ ಅಡ್ಮೀಷನ್ ಮಾಡಿಸಿ ಬರಬೇಕು. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಹೌದು ಕಣೆ ರೇಖಾ ಆದಷ್ಟು ಬೇಗ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾವು ಕಾಲೇಜನ್ನ ಮರೆತು ಮನೆಯಲ್ಲಿದ್ದ ಬಿಡಬೇಕಾಗುತ್ತದೆ ಎಂದಳು. ಈಗೇನು ಮಾಡೋದು ಅಂತ ಮೊದಲು ಹೇಳು ಸುಧಾ … Read more

ಕಾಕ ಸ್ಪರ್ಷ: ಸುಮನ್ ದೇಸಾಯಿ ಅಂಕಣ

ಮುಂಝಾನಿಂದ ಯಾಕೊ ಮನಸ್ಸು ಭಾಳ ತಳಮಳಸ್ಲಿಕತ್ತಿತ್ತು. ಇವತ್ತ ಆಂವಾ ಬರಾಂವ ಇದ್ದಾ. ಯಥಾಪ್ರಕಾರ ಕೈ ತಮ್ಮ ಕೆಲಸಾ ಮಾಡಲಿಕತ್ತಿದ್ವು. ಆದ್ರ ಮನಸ್ಸು ಮಾತ್ರಾ ಆಂವನ್ನ ನೆನಿಕೊಳ್ಳಿಕತ್ತಿತ್ತು. ಆಂವಗ ಇಷ್ಟ ಆಗೊ ಅಡಿಗಿ ಎಲ್ಲಾ ಮಾಡಿದ್ದೆ. ಆಂವಗ ನನ್ನ ಕೈ ಅಡಿಗಿ ಅಂದ್ರ ಭಾಳ ಸೇರತದ. ಊರಾಗ ಇದ್ದಾಗ ಎಷ್ಟ ಹೊತ್ತಾದ್ರು , ಹಸಿವ್ಯಾದ್ರು ಹೊರಗ ಏನು ತಿನ್ನಲಾರದ ಉಪವಾಸ ಮನಿಗೆನ ಊಟಕ್ಕ ಬರತಿದ್ದಾ. ನನ್ನ ಮುಂದ ಕೂಡಿಸಿಕೊಂಡು ನನ್ನ ಜೋಡಿ ಸರಸವಾಡಕೊತ ಊಟಾ ಮಾಡೊದಂದ್ರ ಆಂವಗ ಭಾಳ … Read more

ಕೆಲವು ಚಿಕ್ಕ ಪದ್ಯಗಳು: ಉರ್ಬಾನ್ ಡಿ’ಸೋಜ, ಮೇಗರವಳ್ಳಿ ರಮೇಶ್

                                     ಚುಟುಕ -೧   ಪ್ರೇಮಿಕಾ ನಿನ್ನೆಯವರೆಗೆ ಸಿಹಿ ಮಾತುಗಳನ್ನಾಡದ ನನ್ನ ನಲ್ಲೆ ಇ೦ದಿನಿ೦ದ ಅದನ್ನೇ ಮಾತಾನಾಡುತ್ತಿದ್ದಾಳೆ… ನಿನ್ನೆ ನಮ್ಮ ಮೊದಲ ರಾತ್ರಿ ಅವಳು ಜೇನು ಕುಡಿದಿದ್ದಾಳೆ.    ಚುಟುಕ:೨  – ಬುದ್ದಿ ಅವರು ಇವರು ಜಾರಿ ಬಿದ್ದಾಗ ನಕ್ಕವಳು ತಾನು ಬಿದ್ದಾಗ ಅವರು ಇವರು ನಕ್ಕಾಗ ಸಿಡಿಮಿಡಿಗೊ೦ಡಳು.    ಚುಟುಕ:೩  – ನಗು ಮಗಳು ನಕ್ಕಾಗ … Read more

ಒಲವ ಒಳಗಣ ಮಥನ: ಸಂತೆಬೆನ್ನೂರು ಫೈಜ್ನಟ್ರಾಜ್

ನಿನ್ನ ಕಣ್ಣ ಕಡಲಲೀ…………… ನನ್ನ ಬಾಳಿದು ಬೆಳಗಲಿ, ಸರಿದು ಹೋಗೋ ಭಾವದಿ ಪ್ರೀತಿ ದೋಣಿ ತೇಲಲಿ……………………. ಇಡೀ ಪದ್ಯದಿ ಇದೊಂದು ಚರಣ ಅಲ್ವೇ ನಿಮ್ಮೆಡೆಗೆ ತಿರುಗುವಂತೆ ಮಾಡಿದ್ದು ನಿಮ್ಮ ವಿಳಾಸ ಪ್ರಕಟವಾಗಿದ್ದ ಸಾಪ್ತಾಹಿಕದಿಂದಲೇ ಪಡೆದು ನಿಮ್ಮ ಈ ಕವಿತೆಗಾಗಿ ಹಂಬಲಿಸಿ ಅಭಿನಂದನೆ ತಿಳಿಸಿದ್ದು. ಕಾಣದ ನಿಮ್ಮ ಕಾಣುವ ಬರಹದ ತನಕ ತಂದು ನಿಲ್ಲಿಸಿದ್ದು ತಿಂಗಳಿಗೆರಡರಂತೆ ನಮ್ಮ-ನಿಮ್ಮ ಪತ್ರ ವಿನಿಮಯ ಭಾವ ಬಂಧುರದ ತನಕ ತಂದು ನಿಲ್ಲಿಸಿದೆ ಕೊನೆಗೆ ಈ ಪತ್ರ ತಾನತೆ ಎಲ್ಲಿ ಒರೆಗೆ ? ನಿಮ್ಮೆಲ್ಲಾ … Read more

ಮೂವರ ಕವಿತೆಗಳು: ಜಾನ್ ಸುಂಟಿಕೊಪ್ಪ, ಉಷಾಲತಾ, ಜೊ. ಸಿ. ಸಿದ್ದಕಟ್ಟೆ

ಬೇಡದ ಜೀವ ಹಸಿದ ಕತ್ತಲು ಲೊಚಗುಟ್ಟುತ್ತದೆ ಹೊಸೆದ ಬಿರುಸು ಬಂಧನಕ್ಕಾಗಿ,.. ಬಿಸಿಯುಸಿರು ಅಸ್ತವ್ಯಸ್ತವಾಗುತ್ತದೆ ಕ್ರೌರ್ಯ ಕಂಡ ಗೋಡೆಗಳಿಗಾಗಿ… ಏದುಸಿರು…ಅಸಹನೆ ಸಾಕ್ಷಿಯಾಗುತ್ತದೆ ನಿಗೂಢ ಮೌನವಾಗಿ…. ಬಗಲಲಿ ಮಲಗಿದ  ಮೊದಲ ಕೂಸಿಗೂ ಆಗಲೆ ಮೊಳಕೆಯೊಡೆದ ಮುಗ್ಧ ಪಿಂಡಕ್ಕೂ ಏನು ಅಂತರ,,!? ಉತ್ತರವಿಷ್ಟೇ- ಕೆಲವೊಮ್ಮೆ ತೊಟ್ಟಿಲು ತೂಗುತ್ತದೆ, ಕೆಲವೊಮ್ಮೆ…. ತೊಟ್ಟಿ ತುಂಬುತ್ತದೆ.,… ಮೊಳಕೆಯೊಡೆದ ಪಿಂಡ ಕೆಂಪು ಕೆಂಪಾಗಿ ತೊಟ್ಟಿಕ್ಕುತ್ತದೆ… ಕಾಣದ ಜೀವದ ಮೌನರೋಧನಕೆ ಹೊಸದೊಂದು ನ್ಯಾಪ್ಕಿನ್ ಕೆಂಪಾಗುತ್ತದೆ….  –ಜಾನ್ ಸುಂಟಿಕೊಪ್ಪ.             ಕೊನೆ ಎಂದು … Read more

ಕೆಂಗುಲಾಬಿ (ಭಾಗ 16): ಹನುಮಂತ ಹಾಲಿಗೇರಿ

    (ಇಲ್ಲಿಯವರೆಗೆ) ಜನನಿಬಿಡ ಮಾರುಕಟ್ಟೆಯಲ್ಲಿ ರಸ್ತೆಯ ಎರಡು ಬದಿಗೆ ಶಾರದೆಗಾಗಿ ಕಣ್ಣು ಹಾಯಿಸುತ್ತಾ ನಡೆದಿದ್ದಾಗ ದೀಪಾಳ ಹಿಂದಿನಿಂದ ದೊಡ್ಡ ಹೊಟ್ಟೆಯ ಮುದಿ ಹೆಂಗಸೊಂದು ಧಾವಿಸಿ ಮುಂದೆ ಬಂದಿತು. ನಾವಿಬ್ಬರು ಒಂದು ಕ್ಷಣ ದಂಗುಗೀಡಾದೆವು. ಸ್ವಲ್ಪ ಹೊತ್ತಿನಲ್ಲಿ ದೀಪಾ ಸಾವರಿಸಿಕೊಂಡು ಆ ಮುದಿ ಮಹಿಳೆಯನ್ನು ಸಮಾಧಾನಿಸಿಕೊಂಡು ಬಾಗಿಲು ಮುಚ್ಚಿದ ಅಂಗಡಿ ಮುಂಗಟ್ಟೆಯ ಹತ್ತಿರಕ್ಕೆ ಕರೆದುಕೊಂಡು ಬಂದಳು. ಮುಂಗಟ್ಟೆ ಮೇಲೆ ಕುಳಿತು ನಿಮಿಷಗಳೇ ಉರುಳಿದ್ದರೂ ಆ ಮುದಿ ಹೆಂಗಸು ಜೋರಾಗಿ ಉಸಿರಾಡುತ್ತಲೆ ಇತ್ತು. ಆಕೆ ತಡಬಡಾಯಿಸುತ್ತಲೇ ಬಯ್ಯಲು ಬಾಯ್ತೆರೆದಳು. … Read more

ಥ್ಯಾಂಕ್ಯೂ ಫಾರ್ ಸ್ಮೋಕಿಂಗ್: ವಾಸುಕಿ ರಾಘವನ್ ಅಂಕಣ

ಜನರನ್ನ ನಗಿಸೋದು ಕಷ್ಟ. ಯಾವುದೋ ಒಂದಷ್ಟು ಜೋಕುಗಳನ್ನ ಹೇಳಿ ಒಂದೈದು ನಿಮಿಷ ನಗಿಸಿಬಿಡಬಹುದು. ಆದರೆ ಎರಡು ಮೂರು ಗಂಟೆಗಳ ಚಿತ್ರದುದ್ದಕ್ಕೂ ನಗಿಸುವುದು ಸುಲಭವಲ್ಲ. ಕಾಮಿಡಿ ಚಿತ್ರಗಳ ಒಂದು ವಿಭಾಗ ಸಟೈರ್ ಅಥವಾ ವಿಡಂಬನೆ. ಒಂದು ಗಂಭೀರವಾದ ವಿಷಯ ತೆಗೆದುಕೊಂಡು, ಎಲ್ಲೂ ಸಿಲ್ಲಿ ಅನ್ನಿಸದಂತೆ, ವ್ಯಂಗ್ಯವನ್ನು ಹದವಾಗಿ ಬೆರೆಸಿ, ಹುಳುಕುಗಳನ್ನು ಎತ್ತಿತೋರಿಸುವ ಕೆಲಸ ಇನ್ನೂ ಕಷ್ಟದ್ದು. ವಿಡಂಬನೆ ಅಂದಾಗ ಹೆಚ್ಚು ಕಂಡುಬರುವುದು ರಾಜಕೀಯ, ಮೂಢನಂಬಿಕೆ, ಸಾಮಾಜಿಕ ಸಮಸ್ಯೆಯ ವಿಷಯಗಳ ಬಗ್ಗೆ. “ಡಾರ್ಕ್ ಕಾಮಿಡಿ” (ಕನ್ನಡದಲ್ಲಿ ಇದಕ್ಕೆ ಸಮಾನವಾದ ಪದ … Read more

ಸಂಸ್ಕೃತಿ: ನೇಮಿನಾಥ ತಪಕೀರೆ

ಪುರಾತನ ಇತಿಹಾಸ, ಅನನ್ಯವಾದ ಭೌಗೋಳಿಕ ರಚನೆ, ವೈವಿಧ್ಯಮಯವಾದ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು, ಆಚರಣೆಗಳು, ಪ್ರಾಚೀನ ಪರಂಪರೆ ಹಾಗೂ ನೆರೆಹೊರೆಯ ರಾಷ್ಟ್ರಗಳ ಪ್ರಭಾವಗಳು ಇವೆಲ್ಲ ಒಟ್ಟುಗೂಡೆ ಭಾರತೀಯ ಸಂಸ್ಕೃತಿಯನ್ನು ಅನನ್ಯವಾಗಿಸಿವೆ. ಸಿಂಧು ಕಣಿವೆಯ ನಾಗರಿಕತೆ ಅಥವಾ ಅದಕ್ಕೂ ಪೂರ್ವದಲ್ಲಿಯೇ ಆರಂಭಗೊಂಡ ಭಾರತೀಯ ಭವ್ಯ ಸಂಸ್ಕೃತಿ ವೇದಗಳ ಕಾಲದಲ್ಲಿ ಅಶಾಧಾರಣ ವಿಕಸನವನ್ನು ಕಂಡಿತು. ಸದನಂತರದಲ್ಲಿ ಬೌದ್ಧ, ಜೈನಧರ್ಮಗಳ ಉನ್ನತಿ ಮತ್ತು ಅವನತಿ, ಮುಸ್ಲಿಂ ಆಳ್ವಿಕೆ, ಯುರೋಪಿಯನ್ನರ ವಸಾಹತು ಆಳ್ವಿಕೆ ಈ ಸಂಸ್ಕೃತಿಯ ವಿಕಸನಕ್ಕೆ ಇನ್ನಷ್ಟು ಇಂಬು ನೀಡಿತು. ವೈವಿಧ್ಯಮಯವಾಗಿಸಿತು. … Read more