ಮೈಸೂರು ದಸರಾ ಎಷ್ಟೊಂದು ಸುಂದರ: ಪ್ರಶಸ್ತಿ ಅಂಕಣ

ಮೈಸೂರು ದಸರಾ. ಎಷ್ಟೊಂದು ಸುಂದರ.. ಎಂಬ ಹಾಡನ್ನು ಕೇಳಿದ್ನೇ ಹೊರತು ಅದ್ನ ಕಣ್ಣಾರೆ ನೋಡೋ ಭಾಗ್ಯ ಇತ್ತೀಚೆಗಿನವರೆಗೂ ಸಿಕ್ಕಿರಲಿಲ್ಲ. ತೀರಾ ಸಣ್ಣವನಿದ್ದಾಗ ನನ್ನಪ್ಪ, ನನ್ನ ಮುತ್ತಜ್ಜ(ಅಜ್ಜಿಯ ಅಪ್ಪ) ಮೈಸೂರು ದಸರಾಕ್ಕೆ ಹೋದ ಕತೆ, ಅಲ್ಲಿ ನನ್ನ ಮುತ್ತಜ್ಜನ ಒಳಜೇಬನ್ನೇ ಕತ್ತರಿಸಿದ ಕಳ್ಳರ ಕಥೆ , ಮೈಸೂರಿಗೆ ದಸರಾ ಸಮಯದಲ್ಲಿ ಹೋದ್ರೆ ಕಾಲಿಡೋಕೂ ಆಗಲ್ಲ ದಸರಾನಾ ರಸ್ತೆ ಮೇಲೆ ನೋಡೋದು ಹೋಗ್ಲಿ ಮನೆ ಮಹಡಿ ಮೇಲೆ ನಿತ್ತು ನೋಡೋದಕ್ಕೂ ಕಷ್ಟಪಡ್ಬೇಕು ಎಂಬ ಮಾತುಗಳೇ ದಸರಾಕ್ಕೆ ಹೋಗದಂತೆ ತಡೀತಿದ್ವಾ ಅಥವಾ … Read more

ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಕೊನೆಯ ಭಾಗ): ಶಿವು ಕೆ.

(ಇಲ್ಲಿಯವರೆಗೆ)  ಮೂರನೇ ದಿನ ಸಂಜೆ ಮತ್ತೆ ದುರಂತೋ ರೈಲಿನಲ್ಲಿ ಹೊರಟು ಹೌರಾ ತಲುಪುವ ಹೊತ್ತಿಗೆ ಸಂಜೆ ಏಳುಗಂಟೆ.  ಹೂಗ್ಲಿ ನದಿಯ ಮೇಲೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಅಲ್ಲಿ ದೊಡ್ದ ದೊಡ್ದ ಬೋಟುಗಳ ವ್ಯವಸ್ಥೆಯಿದೆ.  ನಾವು ಆ ಬೋಟಿನೊಳಗೆ ಸೇರಿಕೊಂಡೆವು. ಬೋಟ್ ನಿದಾನವಾಗಿ ಚಲಿಸುತ್ತಾ ದೊಡ್ದದಾದ ಹೌರ ಬ್ರಿಡ್ಜ್ ಕೆಳಗೆ ಸಾಗುತ್ತಾ…ಅದನ್ನು ದಾಟಿ ಮುಂದೆ ರವಿಂದ್ರ ನಾಥ್ ಠಾಕೂರ್ ಸಮಾಧಿ, ಧಾಟಿಕೊಂಡು ಮುಂದೆ ಸಾಗಿದಾಗ ನಾವೆಲ್ಲ ಬಲಗಡೆಗೆ ಇಳಿದುಕೊಂಡೆವು. ಅಲ್ಲಿಗೆ ನಮ್ಮ ಜೊತೆಯಲ್ಲಿ ಬಂದಿದ್ದ ಪಶ್ವಿಮ … Read more

ಓಜೋನ್-ವಿನಾಶ ಅನಿಲಗಳ ನಿಯಂತ್ರಣ: ಜೈಕುಮಾರ್

ದೈತ್ಯ ಕಂಪನಿಗಳ ಪರ ನಿಂತಿರುವ ಅಮೇರಿಕಾ ಅಮೇರಿಕಾ ದೇಶದ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿಸುವ ಅನಿಲಗಳನ್ನು ಮಾತ್ರವೇ ಶೀತಲೀಕರಣ (ರೆಫ್ರಿಜರೇಶನ್) ಉಪಕರಣಗಳಲ್ಲಿ ಉಪಯೋಗಿಸುವಂತೆ ಅಮೇರಿಕಾವು ಭಾರತದ ಮೇಲೆ ಒತ್ತಡ ಹಾಕುತ್ತಿದೆ. ಶೀತಲೀಕರಣಗಳಲ್ಲಿ ಬಳಸುವ ಅನಿಲಗಳು ಇತರೆ ಹಸಿರು ಮನೆ ಅನಿಲಗಳಂತೆ ಭೂಮಿಯ ತಾಪಮಾನಕ್ಕೆ ಕಾರಣವಾಗುತ್ತವೆ ಎಂಬ ಕಾರಣವೊಡ್ಡಿ ಅಮೇರಿಕಾ ತನ್ನ ಕಂಪನಿಗಳಿಗೆ ಭಾರತದಲ್ಲಿ ಮಾರುಕಟ್ಟೆ ಹುಡುಕುತ್ತಿದೆ.  ಶೀತಲೀಕರಣ ಅನಿಲಗಳನ್ನು ಎರಡು ಅಂತರಾಷ್ಟ್ರೀಯ ಒಪ್ಪಂದಗಳ ವ್ಯಾಪ್ತಿಗೆ ತರಲಾಗಿದೆ: ಮಾಂಟ್ರಿಯಲ್ ಒಡಂಬಡಿಕೆ ಮತ್ತು ಹವಾಮಾನದ ಬದಲಾವಣೆ ಕುರಿತ ವಿಶ್ವಸಂಸ್ಥೆ ಚೌಕಟ್ಟುಗಳ ಒಪ್ಪಂದ. … Read more

ಮಾನಸ ಸರೋವರದಲ್ಲಿ ವೇದತರಂಗ: ಹೃದಯಶಿವ ಅಂಕಣ

  ಶಿವರುದ್ರಪ್ಪನವರಿಗೆ ವಂದಿಸುತ್ತಾ… ಜೆಎಸ್ಸೆಸ್ ಎಂದೇ ಖ್ಯಾತರಾಗಿರುವ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಕನ್ನಡ ಸಾರಸ್ವತ ಲೋಕದ ಅಗ್ರಪಂಕ್ತಿಯಲ್ಲಿ ನಿಲ್ಲುವ ಕವಿಜೀವ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ೧೯೨೬ರ ಫೆಬ್ರವರಿ ೭ನೇ ತಾರೀಖು ಜನಿಸಿದ ಈ ಸಮನ್ವಯ ಕವಿಯ ಸಾಹಿತ್ಯಕೃಷಿ ನವೋದಯದಲ್ಲಿ ಶುರುವಾಗಿ ನವ್ಯದಲ್ಲಿ ಮುಂದುವರೆಯುತ್ತಿದೆ. ವೃತ್ತಿಯಲ್ಲಿ ಅಧ್ಯಾಪಕರಾಗಿ ಸಾವಿರಾರು ಚಿಂತನಾ ಜೀವಿಗಳನ್ನು ಹುಟ್ಟುಹಾಕಿದ ಇವರು ರಾಷ್ಟ್ರಕವಿ ಕೆ.ವಿ.ಪುಟ್ಟಪ್ಪನವರ ಪಟ್ಟಶಿಷ್ಯ. ಇದುವರೆಗೂ ಸಾಮಗಾನ, ಒಲವು-ಚೆಲುವು, ತೆರೆದಮನ, ದೀಪದ ಹೆಜ್ಜೆ, ಕಾವ್ಯಾರ್ಥ ಚಿಂತನೆ, ಕಾವ್ಯರ್ಥ ಲೋಕ, ವಿಮರ್ಶೆಯ ಪೂರ್ವಪಶ್ಚಿಮ ಒಳಗೊಂಡಂತೆ ಇನ್ನೂ … Read more

ಟೋನಿ ಮಾರ್ಕಿಸ್‌ಯೆಂಬ ಪರಮ ಘಾತುಕ: ಅಖಿಲೇಶ್ ಚಿಪ್ಪಳಿ ಅಂಕಣ

  ಇತರೆ ಪ್ರಾಣಿಗಳಿಗೆ ಹೋಲಿಸಿದರೆ ಶಾರೀರಿಕವಾಗಿ ಬಲಿಷ್ಟನಲ್ಲದ ಮಾನವ ಇವತ್ತು ಜಗತ್ತನ್ನು ಆಳುತ್ತಿದ್ದಾನೆ ಎಂದರೆ ಅದಕ್ಕೆ ಕಾರಣ ಇವನಿಗಿರುವ ಆಲೋಚನಾ ಶಕ್ತಿ, ಬುದ್ಧಿಮತ್ತೆ ಇತ್ಯಾದಿಗಳು. ಮನುಷ್ಯನ ವಿದ್ಯೆ-ಬುದ್ಧಿಗಳು ಜಗತ್ತಿನ ಒಳಿತಿಗೆ ಪೂರಕವಾದಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ. ಇದನ್ನೇ ದುಷ್ಕಾರ್ಯಗಳಿಗೆ ಬಳಸಿದರೆ ಸಿಗುವುದು ಹಿಂಸೆ-ಅಶಾಂತಿ ಇತ್ಯಾದಿಗಳು. ಎಲ್ಲಾ ಪ್ರಾಣಿಗಳಿಗೂ ಹೊಟ್ಟೆ ತುಂಬಿದ ಮೇಲೆ ಮನೋರಂಜನೆ ಬೇಕು. ಬೆಕ್ಕು ಚಿನ್ನಾಟವಾಡುವ ಹಾಗೆ, ಆಟಗಳು ದೈಹಿಕವಾಗಿ ಬಲಿಷ್ಟವಾಗಿರಲು ಮತ್ತು ಮನಸ್ಸಿನ ನೆಮ್ಮದಿ-ಆರೋಗ್ಯಕ್ಕೆ ಪೂರಕ. ಆಧುನಿಕ ಮನುಷ್ಯ ರೂಡಿಸಿಕೊಂಡ ಆಟಗಳು ಸಾವಿರಾರು. ಇದರಲ್ಲಿ ಹೆಚ್ಚಿನವು … Read more

ಪ್ರತಿಭೆಗಿಂತ ಹುಚ್ಚು ದೊಡ್ಡದು: ವಾಸುಕಿ ರಾಘವನ್ ಅಂಕಣ

ಪ್ರತಿಭೆಗೆ ನಮ್ಮ ದೇಶದಲ್ಲಿ ಸಿಗುವಷ್ಟು ಮಾನ್ಯತೆ ಬಹುಷಃ ಪ್ರಪಂಚದ ಯಾವ ದೇಶದಲ್ಲೂ ಸಿಗಲಿಕ್ಕಿಲ್ಲ. ನನ್ನ ಹೇಳಿಕೆ ನೀವು ದೇಶಾಭಿಮಾನದ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದರೆ ಕ್ಷಮಿಸಿ, ನಾನು ಅದನ್ನು ವ್ಯಂಗ್ಯವಾಗಿ ಹೇಳಿದೆ. ನೀವು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾದವರ ಬಗ್ಗೆ ಮಾತಾಡುವಾಗ ಗಮನಿಸಿ, ನಿಮಗೆ ಕೇಳಸಿಗುವುದು ಅವರ “ಟ್ಯಾಲೆಂಟ್” ಅಥವಾ “ಬುದ್ಧಿವಂತಿಕೆ”ಯ ಬಗ್ಗೆ.   “ನೀನು ನಿನಗಿಂತ ಬುದ್ಧಿವಂತರ ಜೊತೆ ಸ್ನೇಹ ಮಾಡಬೇಕು” ಅಂತ ಸದುದ್ದೇಶದಿಂದಲೇ ಹೇಳುವ ಟಿಪಿಕಲ್ ಮಿಡ್ಲ್ ಕ್ಲಾಸ್ ಪೇರೆಂಟ್ಸ್ ಇರಬಹುದು, “ಆಶಾ ಭೋಸ್ಲೆ ಎಂತಹ ಗಿಫ್ಟೆಡ್ … Read more

ಎರಡು ಕವಿತೆಗಳು: ಸಂತೆಬೆನ್ನೂರು ಫೈಜ್ನಟ್ರಾಜ್, ಶ್ರೀಧರ ನಾಯಕ

          ನಾಳೆಯ ಕತೆ        ಸುಮ್ಮನಿರುವುದಕ್ಕಿಂತ  ಏನಾದರೂ ಹೇಳಿ ಬಿಡು ’ನಾಳೆ’ ಬಂದಿತೋ ಇಲ್ಲವೋ…. ಎದಯ ತಲ್ಲಣ ಕಣ್ಣ ನೀರು ಹೃದಯದ ಮಾತು ಗಳ ಮುಚ್ಚಿಡಬೇಡ ’ಇಂದೇ’ ಹೊರಹಾಕು ನಾಳೆ ಕಂಡವರ್‍ಯಾರು?   ಕಳೆದುದ ಹುಡುಕಿಯೇನು ಸುಖ ಗೆಳತಿ; ಎಲ್ಲರೂ ಏನಾದರೊಂದು ಕಳೆದು ಕೊಂಡೇ ಇರ್ತಾರೆ ನನ್ನಂತೆ, ನಿನ್ನಂತೆ! ಇರುವುದ ಕಂಡು ಸುಖಿಸು ’ನಾಳೆ’ ಗಳಿಗೆ ನಿಟ್ಟುಸಿರೇಕೆ? ಏನಾದರೂ ಮಾಡುತಿರು ಎಂಬ ಮಾತಂತೆ ಹಾಡು ಮನದ ಹಾಡು, ಕವಿತೆ … Read more

ಈ ಬಾಳ ಪುಟಗಳಲ್ಲಿ ಭಾಮಿನಿ: ಉಮೇಶ್ ದೇಸಾಯಿ

ಅವ ಬಂದಾಗ ಎದಿರಾಗಬಾರದು ಎಂಬ ಹಿಂಜರಿಕೆ ಇತ್ತು. ಹೀಗಾಗಿಯೇ ನೆವ ಮಾಡಿ ಬಾಜೂ ಮನೆಯ ಶಾಮರಾಯರ ಕಡೆ ಹೋಗಿದ್ದೆ. ವಾಸು ಮಾಮಾನ ಜೊತೆ ಅವನ ಹರಟೆ ಜೋರಾಗಿ ನಡೆದಿತ್ತು. ಸ್ವಲ್ಪ ಅನ್ನುವುದಕ್ಕಿಂತ ಪೂರ್ತಿಯೇ ಬದಲಾಗಿದ್ದ. ಕೂದಲಿಗೆ ಢಾಳಾಗಿ ಬಣ್ಣ ಬಡಿದುಕೊಂಡಿದ್ದ. ಬೊಜ್ಜು ಸ್ವಲ್ಪ ಅತಿ ಅನಿಸುವಂತಿತ್ತು. ಒಬ್ಬನೇ ಬಂದಿದ್ದಾನೆ. ಇದಾಗಲೇ ಶಾಮರಾಯರ ಮನೆಯಲ್ಲಿ ಸುದ್ದಿ ಹಬ್ಬಿತ್ತು. ಪಡಸಾಲೆಯಲ್ಲಿ ಕುಳಿತ ಅವನ ಮುಂದೆ ಹಾದೇ ಅಡಿಗೆ ಮನೆಗೆ ಹೋಗಬೇಕು. ನನ್ನ ನೋಡಿದವನೋ ಇಲ್ಲವೋ ಗೊತ್ತಾಗಲಿಲ್ಲ. ಹರಟೆ ಜೋರಾಗಿತ್ತು. ಗಮನಿಸಿರಲಿಕ್ಕಿಲ್ಲ … Read more

ನೆನಪಿನ ಜೋಕಾಲಿ: ಸುಮನ್ ದೇಸಾಯಿ ಅಂಕಣ

ಎಲ್ಲಾರ ಜೀವನದೊಳಗು ಈ ಬಾಲ್ಯ ಅನ್ನೊದು ಅಮೂಲ್ಯವಾಗಿದ್ದಿರತದ. ಯಾವ ಕಲ್ಮಷ ಇಲ್ಲದ, ನಾಳಿನ ಚಿಂತೆ, ನೋವು ಇಲ್ಲದ ಆಡಿ ಬೆಳದ ಸಮಯ ಅದಾಗಿರತದ. ಈ ಬಾಲ್ಯದೊಳಗ ಏನೆ ಮಾಡಿದ್ರು ಛಂದನ ಇರತದ.” ಬಾರಾ ಖೂನಿ ಮಾಫ” ಅಂತಾರಲ್ಲಾ ಹಂಗ ಎಂಥಾ ಮಂಗ್ಯಾನಾಟಾ ಮಾಡಿದ್ರು ನಡಿತಿರತದ. ಅದರೊಳಗ ಈ ಹತ್ತರಿಂದ ಹದಿನಾರನೇ ವಯಸ್ಸಿನೊಳಗಿನ ಮನಸ್ಸಂತು ಯಾರ ಕೈಗು ಸಿಗದ ಬೀಸೊಗಾಳಿ ಹಂಗಿರತದ ಬಿಂದಾಸಾಗಿ ಆಡಿಕೊಂಡ ಎದುರಿಗೆ ಸಿಕ್ಕಿದ್ದನ ತನ್ನ ತುಂಟಾಟದ ರಭಸಕ್ಕ ನಡುಗಿಸೊ ಹಂಗ. ಬಾಲ್ಯ ಎಷ್ಟು ದಟ್ಟವಾಗಿರತದೊ … Read more

ಚುಟುಕಗಳು: ಗುರುನಾಥ್ ಬೋರಗಿ

   ೧ ನಾನು ನಿನಗೆ  ಪ್ರೀತಿಸುವುದು  ಹೇಗೆಂದು  ಹೇಳಿ ಕೊಟ್ಟೆ. ನೀನದನು  ಇನ್ನೊಬ್ಬನಲಿ  ಪ್ರಯೋಗಿಸಿ ಬಿಟ್ಟೆ   ೨ ಚುಚ್ಚಿ ಗಾಯಗೊಳಿಸುವ  ದರ್ಜಿಯ ಸೂಜಿಗೆ,  ಎರಡನೊಂದಾಗಿಸುವ  ಹಿರಿಗುಣವೂ ಇದೆ.   ೩ ಬಿಳಿ ಕಾಗದ ಮೇಲೆ  ದುಂಡಾಗದೆಯೇ  ಸತಾಯಿಸಿದ ನನ್ನ  ಅಕ್ಷರಗಳು, ನಿನ್ನ ಕೆನ್ನೆ, ತುಟಿ ಮೇಲೆ  ಬರೆದಾಕ್ಷಣವೇ  ಸಾಲು ಮುತ್ತಾದವು    ೪ ಹರಯದ ಅವಸರಕ್ಕೆ ಮೊಳೆತ ಭ್ರೂಣಕೆ, ದವಾಖಾನೆ ದಾದಿಯರ ಕೈಗವುಸುಗಳದ್ದೇ ಭಯ   ೫ ಗೆಳತೀ.. ನನ್ನ ಪಾಲಿಗೆ ; ನಿನ್ನ ನೆನಪುಗಳೇ … Read more

ಕೆಂಗುಲಾಬಿ (ಭಾಗ 14): ಹನುಮಂತ ಹಾಲಿಗೇರಿ

  (ಇಲ್ಲಿಯವರೆಗೆ) ಕಾಲ ಹೀಗೆ ಬರುತ್ತೆ ಅಂತ ಹೇಳಲಿಕ್ಕಾಗುವುದಿಲ್ಲ. ಮದುವೆಯಾಗಿ ವರ್ಷ ತುಂಬಿ ಎರಡನೇ ವರ್ಷಕ್ಕೆ ಕಾಲಿಟ್ಟರಲಿಲ್ಲ. ಇನ್ನೂ ನಾನು ನನ್ನ ಹೆಂಡತಿ ಲಲಿತಾ ಪರಸ್ಪರ ಅರ್ಥ ಮಾಡಿಕೊಳ್ಳುವುದರಲ್ಲಿದ್ದೆವು. ಮದುವೆಯಾದ ತಕ್ಷಣವೇ ನಾನು ನನ್ನ ಹೆಂಡತಿಗೆ ನನ್ನ ಕೆಲಸದ ವಿಷಯ, ಶಾರಿಯ ವಿಷಯಗಳನ್ನು ಮುಕ್ತವಾಗಿ ಹೇಳಿದ್ದೆ. ಅಷ್ಟೇ ಅಲ್ಲದೆ ಅವಳನ್ನು ಶಾರಿಯ ಮನೆಗೆ ಕರೆದುಕೊಂಡು ಹೋಗಿದ್ದೆ ಕೂಡ. ಅಲ್ಲಿ ನಮ್ಮಿಬ್ಬರ ಪ್ರೀತಿ ವಿಶ್ವಾಸವನ್ನು ಗಮನಿಸಿದ ಲಲ್ಲಿ ಅಂದಿನಿಂದ ತಾನು ನನ್ನೊಂದಿಗೆ ನಡೆದುಕೊಳ್ಳುವ ಪದ್ದತಿಯನ್ನೇ ಬದಲಿಸಿದಳು. ಅವಳಲ್ಲಿ ಅನುಮಾನದ … Read more

ಶಿಕ್ಷಕರಿಗೊಂದು ಸೆಲ್ಯೂಟ್: ಪ್ರಜ್ವಲ್ ಕುಮಾರ್

                ಶಿಕ್ಷಕರು ಅಂದ್ರೆ ದೇವರಿದ್ದಂತೆ, ಶಿಕ್ಷಕರು ಎಷ್ಟು ಒಳ್ಳೆಯವರಾಗಿರ್ತಾರೋ ಅವರ ವಿದ್ಯಾರ್ಥಿಗಳೂ ಅಷ್ಟೇ ಒಳ್ಳೆಯವರಾಗಿರ್ತಾರೆ ಅಂತೆಲ್ಲಾ ಕೊರೀತಾ ಕೂತ್ರೆ ಒಂದು ನಕ್ಷತ್ರ ಹುಟ್ಟಿ ಅದು ಕಪ್ಪು ರಂಧ್ರ ಸ್ಥಿತಿ ತಲುಪುವವರೆಗೂ ಕೊರೀಬಹುದು. ಇಂಥವೆಲ್ಲಾ ಬಿಟ್ಟು ಬೇರೆ ಏನಾದ್ರೂ ಹೇಳೋಣಾ ಅಂದ್ರೆ ಅವರನ್ನು ಬಯ್ಯೋದೋ, ಹೊಗಳೋದೋ ಅಥವಾ ಹೀಗೇ ನೆನಪು ಮಾಡ್ಕೊಳ್ತಾ ಇರೋದೋ ಗೊತ್ತಾಗ್ತಿಲ್ಲ.   ಒಂದು ಕಡೆಯಿಂದ ಶುರು ಮಾಡುವುದಾದರೆ ನಾವೆಲ್ಲಾ ಅಂಗನವಾಡಿ ಅಥವಾ ಶಿಶುವಾರಕ್ಕೆ ಹೋಗುವಾಗ … Read more

ಸಾವಿನ ವ್ಯಾಖ್ಯಾನ: ಅಜ್ಜಿಮನೆ ಗಣೇಶ್

ಅಪರೂಪಕ್ಕೆ ಎಂಬಂತೆ ಈ ವರ್ಷ ಶರಾವತಿ ಲಿಂಗನಮಕ್ಕಿ ಅಣೆಕಟ್ಟೆಯನ್ನ ದಾಟಿ ಹರಿಯುತ್ತಿದ್ದಾಳೆ. ಬೇಸಿಗೆಯಲ್ಲಿ ತನ್ನ ಪಾಲಿನ ಹದಿನೈದು ಪರ್ಸೆಂಟ್ ವಿದ್ಯುತ್ ನ್ನ ಶರಾವತಿ ಖಂಡಿತಾ ಕೊಡುತ್ತಾಳೆ. ಇದಕ್ಕೆ ಪೂರಕವಾಗಿ ಕಣಿವೆ ಪ್ರದೇಶದ ವಿದ್ಯುತ್ ತಯಾರಿಕಾ ಯಂತ್ರಗಳು ಸಹ ಕೆಲಸ ಶುರುವಿಟ್ಟುಕೊಡಿದೆ. ನಾಡು ಸಂತೋಷದಲ್ಲಿದೆ, ಸರ್ಕಾರ ತೃಪ್ತಿಯಾಗಿದೆ. ಆದರೆ ಶರಾವತಿಯ ಮಡಿಲಲ್ಲಿ ನಡೆದ ಘಟನೆಯೊಂದು ಮಾತ್ರ ನನ್ನನ್ನ, ಕಳೆದೊಂದು ತಿಂಗಳಿನಿಂದಲೂ, ಬಿಡದೆ ಕಾಡುತ್ತಿದೆ.ಅಲ್ಲಿ ನಡೆದ ಸಾವಿನ ಘಟನೆಯೊಂದು, ನನ್ನನ್ನ ಮರಣ ಚಿಂತನೆಯಲ್ಲಿ ತೊಡಗಿಸಿದೆ.  ಮನಸ್ಸಿನ ಗೂಗಲ್ ನಲ್ಲಿ ಮೃತ್ಯು … Read more