ಆಪರೇಷನ್ ಡೆಂಗ್ಯೂ ಮೊದಲ ಭಾಗ: ನಟರಾಜು ಎಸ್ ಎಂ

ಆಗಷ್ಟ್ ತಿಂಗಳ ಮೊದಲ ವಾರದಲ್ಲಿ ತಾಲ್ಲೂಕು ಮಟ್ಟದ ಆಸ್ಪತ್ರೆಯೊಂದರ ರಿಪೋರ್ಟ್ ನಲ್ಲಿ 3 ಡೆಂಗ್ಯೂ ಜ್ವರದ ಕೇಸ್ ಗಳು ಹಳ್ಳಿಯೊಂದರಲ್ಲಿ ಪತ್ತೆಯಾಗಿವೆ ಎಂಬ ಈ ಮೇಲ್ ನಮ್ಮ ಪಬ್ಲಿಕ್ ಹೆಲ್ತ್ ವಿಭಾಗದ ಈ ಮೇಲ್ ಗೆ ಬಂದಿತ್ತು. ಮೂರ್ನಾಲ್ಕು ಡೆಂಗ್ಯೂ ಜ್ವರದ ಕೇಸ್ ಗಳು ಒಂದೇ ಊರಿನಲ್ಲಿ ಕಾಣಿಸಿಕೊಂಡಿರುವುದು ಡೇಂಜರ್ ಸಿಗ್ನಲ್ ಎಂದರಿತ ನಾವು ತಕ್ಷಣ ಆ ತಾಲ್ಲೂಕಿನ ವೈದ್ಯಾಧಿಕಾರಿಗೆ ಕರೆ ಮಾಡಿ ಕೇಸ್ ಗಳು ಪತ್ತೆಯಾಗಿರುವುದನ್ನು ದೃಢಪಡಿಸಿಕೊಂಡೆವು. ಮಾರನೆಯ ದಿನ ನಮ್ಮ ಟೀಮ್ ಆ ಹಳ್ಳಿಯನ್ನು … Read more

ಇದು ಜೈಲು ಹಕ್ಕಿಗಳ ಮಾದರಿ ಕಾಯಕ: ಹನಿಯೂರು ಚಂದ್ರೇಗೌಡ

ಅತಿಕಡಿಮೆ ಬಂಡವಾಳ-ಹೆಚ್ಚು ಆದಾಯದ ಉದ್ಯೋಗ; ಹಂದಿಸಾಕಾಣಿಕೆ       ಮನಸು ಮಾಡಿದರೆ ಏನು ಬೇಕಾದರೂ ಮಾಡಿ ತೋರಿಸಬಹುದೆನ್ನುವುದಕ್ಕೆ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳ ಕೆಲಸ ಮಾದರಿಯಾಗಿದೆ. ಇತರ ಉದ್ಯೋಗಕ್ಕಾಗಿ ಅಲೆಯುವ ನಿರುದ್ಯೋಗಿ ಯುವಕರ ಪಾಲಿಗೆ ಇಲ್ಲಿನ ಕೈದಿಗಳು, “ಕೆಲಸ ತಮ್ಮ ಕೈಯಲ್ಲಿಯೇ ಇದೆ; ಆದರೆ, ಮನಸು ಮಾಡಬೇಕು” ಎಂಬುದನ್ನು ಬಂದಿಖಾನೆಯಲ್ಲಿ ಬಂಧಿಯಾಗಿದ್ದರೂ ಸ್ವತಃ ಹಂದಿಸಾಕುವ ಮೂಲಕ ಇಲಾಖೆಗೆ ಆದಾಯ ತಂದುಕೊಡುತ್ತಿದ್ದಾರೆ. ಆ ಮೂಲಕ ಪರಿಸ್ಥಿತಿ, ಸನ್ನಿವೇಶಕ್ಕೆ ಬಲಿಯಾಗಿ ಒಂದಿಲ್ಲೊಂದು ಅಪರಾಧವೆಸಗಿ ಜೈಲುಪಾಲಾಗಿರುವ ಇವರು, … Read more

ದುರ್ಗಾಸ್ತಮಾನದ ನೆಪದಲ್ಲಿ ತರಾಸು ನೆನೆಯುತ್ತಾ:ರಾಘವೇಂದ್ರ ಪದ್ಮಶಾಲಿ

" …. ಇತ್ತ ಕಡೆ ಮದಕರಿನಾಯಕ ವ್ಯಾಸರಾಯಮಠದ ಮೇಲೆ ನಿಂತು, ಕೋವಿ ಹಾರಿಸುತ್ತಾ ತನ್ನ ಸೈನಿಕರ ಹೃದಯದಲ್ಲಿ ಧೈರ್ಯ ತುಂಬುತ್ತಿರುವಾಗ, ಅತ್ತ ಹೈದರಾಲಿಯೂ ಮತ್ತಷ್ಟು ಸೇನೆಯೊಂದಿಗೆ ಬಂದು, ತನ್ನ ಕಡೆಯವರನ್ನು ಹುರಿದುಂಬಿಸಲು ಯತ್ನಿಸಿದ.  ಶತ್ರುಸೈನ್ಯದ ಮಧ್ಯದಲ್ಲಿ ಹೈದರಾಲಿಯ ಖಾಸಾ ಹಸಿರು ನಿಶಾನೆಯನ್ನು ಕಾಣುತ್ತಿದ್ದಂತೆಯೇ ದುರ್ಗದ ಸೈನಿಕರಲ್ಲಿ ಮತ್ತಷ್ಟು ರಣೋತ್ಸಾಹವೇರಿ, ಇಮ್ಮಡಿ ಹುರುಪಿನಿಂದ ಶತ್ರುಗಳನ್ನು ಸದೆಬಡಿಯಲಾರಂಭಿಸಿದರು. ಏರಿದ ಬಿಸಿಲಿನಲ್ಲಿ ಸಾವಿರಾರು ಖಡ್ಗಗಳು ಮಿಂಚುಗಳಂತೆ ಹೊಳೆಯುತ್ತಿದ್ದವು. ಕೋವಿಗಳ ಗುಂಡಿನ ಚಟಪಟ ಸದ್ದು, ತೋಫಿನ ಗರ್ಜನೆ, ಸೈನಿಕರ ರಣಕೇಕೆ – ದುರ್ಗದ … Read more

ಮೂವರ ಕವಿತೆಗಳು: ವಿಲ್ಸನ್ ಕಟೀಲ್, ರಾಶೇಕ್ರ, ಶಶಿಕಿರಣ್

ವಿಷ ೧ ಮನುಜರನ್ನು ನಾನು ಬೆರಳುಗಳಿಗೆ ಹೋಲಿಸಿದೆ ಆದರೆ, ಕೆಲ ವರ್ಗಭೇದಿಗಳು "ಎಲ್ಲಾ ಬೆರಳುಗಳು ಸಮಾನವಾಗಿಲ್ಲ" ಎಂದು ಮುಷ್ಟಿ ಬಿಗಿದರು   ಮನುಜರನ್ನು ನಾನು ರೋಮಗಳಿಗೆ ಹೋಲಿಸಿದೆ ಆದರೆ, ಕೆಲವರು "ಇರುವ ಜಾಗಕ್ಕನುಗುಣವಾಗಿ ಅವುಗಳಲ್ಲಿಯೂ ಮೇಲು-ಕೀಳುಗಳಿವೆ" ಎಂದು ಮೀಸೆ ತಿರುವಿದರು   ಮನುಜರನ್ನು ನಾನು ರಕ್ತಕಣಗಳಿಗೆ ಹೋಲಿಸಿದೆ ಆದರೆ, ಕೆಲ ವರ್ಣಗೇಡಿಗಳು "ಅಲ್ಲಿಯೂ ಬಿಳಿಯರಿದ್ದಾರೆ" ಎಂದು ನಂಜು ಕಾರಿದರು   ಕೊನೆಗೆ ಮನುಜರನ್ನು ನಾನು ಕವಿತೆಯ ಪದಗಳಿಗೆ ಹೋಲಿಸಿದೆ ಆದರೆ, ಕೆಲ ಕಾವಿಯನ್ನು(ಕಾವ್ಯವನ್ನಲ್ಲ) ಉಟ್ಟವರು ಅಲ್ಲಿಯೂ ಪಂಕ್ತಿಭೇದವನ್ನು … Read more

ಚುನಾವಣೆ:ಸುಮನ್ ದೇಸಾಯಿ

ಲೊಕಲ ಎಲೆಕ್ಷನ್ ದಿನಗೊಳ ಹತ್ರ ಬರಲಿಕತ್ತಿದ್ವು.ಜಬರದಸ್ತ ಪ್ರಚಾರ ಶೂರು ಆಗಿದ್ವು. ಸಣ್ಣ ಮಕ್ಕಳಿಂದ ಹಿಡದು ಹರೆದ ಹುಡುಗುರು ಸುಧ್ಧಾ ಓಣ್ಯಾಗೆಲ್ಲಾ " ಅಕ್ಕಾ ಅಕ್ಕಾ ಶಾಣ್ಯಾಕಿ… ಪಕ್ಷಕ್ಕ ಓಟ ಹಾಕಾಕಿ, ಮಾಮಾ ಭಾಳ ಶಾಣ್ಯಾಂವಾ… ಪಕ್ಷಕ್ಕ ಓಟ ಹಾಕಾಂವಾ, ಅಂಥೇಳಿ ಒದರಿಕೊತ ಪ್ರಚಾರ ಮಾಡಕೊತ ಅಡ್ಯಾಡಲಿಕತ್ತಿದ್ರು. ಎಲೆಕ್ಷನ್ ಅಂದ್ರ ಎಲ್ಲಾಕಡೆ ಅದೊಂದ ಥರಾ ಲಹರಿನ ಬ್ಯಾರೆ ಇರತದ. ಮನಿ ಮನಿಗೆ ಹೋಗಿ ಪ್ರಚಾರ ಮಾಡೊದು ನಡದಿತ್ತು. ಒಳಗಿಂದೊಳಗ ನಮಗ ಓಟ ಹಾಕ್ರಿ ಅಂಥೇಳಿ ಆಣಿ ಪ್ರಮಾಣಾ ಮಾಡಿಸ್ಕೊಳ್ಳೊದು … Read more

ನೀ ಬರುವ ದಾರಿ ತಿರುಗಾ ಮರುಗಾ!:ಹೃದಯಶಿವ ಅಂಕಣ

ಪ್ರೇಮಕವಿಯ ಪ್ರಸನ್ನ ಕಾವ್ಯ   ಏಳು ದಶಕಗಳ ಕಾಲ ಕಾವ್ಯಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಪ್ರಿಯರನ್ನು ಅಯಸ್ಕಾಂತದಂತೆ ಸೆಳೆದ ನವಿರುಕವಿ ಕೆ.ಎಸ್.ನರಸಿಂಹಸ್ವಾಮಿಯವರು ನಮ್ಮ  ನಡುವಿನ ಜೀವಂತ ಸೆಲೆ. ಇವರು ಜನಿಸಿದ್ದು ಮಂಡ್ಯ ಜಿಲ್ಲೆ ಯ ಕಿಕ್ಕೇರಿಯಲ್ಲಿ ೧೯೧೫ರ ಜನವರಿ ೨೬ ರಂದು, ನಿಧನರಾದದ್ದು ೨೦೦೩ರ ಡಿಸೆಂಬರ್ ೨೭ ರಂದು ಬೆಂಗಳೂರಿನಲ್ಲಿ. ತಮ್ಮ ಸರಳ ಪದಗಳ ಮೂಲಕ ಪ್ರೀತಿಗೆ ಹೊಸ ವ್ಯಾಖ್ಯಾನ ಬರೆದು ಹೃದಯ ಹೃದಯಗಳ ನಡುವೆ ಸೇತುವೆಯಾದರು.  ವಾಸ್ತವದ ತಳಪಾಯದ ಮೇಲೆ ನಿಂತು ಕಲ್ಪನೆಯ ಬಾವುಟ ಹಾರಿಸಿದ ಖ್ಯಾತಿ ಇವರದು. … Read more

ಆ ದಿನಗಳು: ವಾಸುಕಿ ರಾಘವನ್ ಅಂಕಣ

  “ಆ ದಿನಗಳು” ಚಿತ್ರದ ಬಜೆಟ್ಟಿನ ಮೂರನೇ ಒಂದು ಭಾಗ ಖರ್ಚಾಗಿದ್ದು ಯಾವುದಕ್ಕೆ ಗೊತ್ತಾ? ಹೀರೋ ಸಂಭಾವನೆಗೆ ಅಲ್ಲ, ಅದ್ಧೂರಿಯಾದ ಸೆಟ್ಟಿಗೆ ಅಲ್ಲ, ವಿದೇಶದಲ್ಲಿ ಚಿತ್ರೀಕರಣ ಮಾಡಲು ಅಲ್ಲ. ಅದು ಖರ್ಚಾಗಿದ್ದು ಚಿತ್ರದಲ್ಲಿ ಇಳಯರಾಜಾ ಅವರ ಹಿನ್ನೆಲೆ ಸಂಗೀತಕ್ಕೆ. “ಆ ದಿನಗಳು” ಅಂದಾಕ್ಷಣ ಕಣ್ಣು ಮುಚ್ಚಿಕೊಂಡರೆ ನನಗೆ ಆ ಚಿತ್ರದ ಟೈಟಲ್ ಸಾಂಗ್ ತಲೆಯಲ್ಲಿ ಬರುತ್ತೆ, ಅದರಲ್ಲೂ ಆರಂಭದಲ್ಲಿ ಬರುವ ಆ ಬಿಟ್. ಇಡೀ ಚಿತ್ರದಲ್ಲಿ ಅಲ್ಲಲ್ಲಿ ಕೇಳಿಬರುವ ಈ ಥೀಮ್ ಮ್ಯೂಸಿಕ್ಕಿನಲ್ಲಿ ಚಿತ್ರದ ಭಾವ ಅಡಗಿದೆ! … Read more

ಅಲ್ಲಿ ಫುಕೋಕಾ-ಇಲ್ಲಿ ಚೇರ್ಕಾಡಿ: ಅಖಿಲೇಶ್ ಚಿಪ್ಪಳಿ ಅಂಕಣ

ಬೀಳು ಭೂಮಿಯ ಭೀಷ್ಮ-ಕರ್ನಾಟಕದ ಹೆಮ್ಮೆಯ ಕೃಷಿ ಋಷಿ – ಚೆರ್ಕಾಡಿ ರಾಮಚಂದ್ರರಾವ್ ಭವ್ಯ ಭಾರತದ ಹೆಮ್ಮೆಯ ಕರ್ನಾಟಕದ ಕರಾವಳಿ ತೀರದಲ್ಲಿ ಬರೀ ಎರಡೂಕಾಲು ಎಕರೆ ಜಾಗದಲ್ಲಿ ಕೃಷಿ ಮಾಡುತ್ತಾ ನೆಮ್ಮದಿಯ ಜೀವನವನ್ನು ಸಾಗಿಸಿದ, ದೇಶಕ್ಕೇ ಮಾದರಿಯಾಗಬಲ್ಲ, ಯಾವುದೇ ಕೃಷಿ-ತೋಟಗಾರಿಕಾ ವಿಶ್ವವಿದ್ಯಾನಿಲಯಗಳು ಮಾಡದ ಸಾಧನೆಯನ್ನು ಮಾಡಿ ಸ್ವಾವಲಂಬಿ ಬದುಕನ್ನು ಬದುಕಿದ ವ್ಯಕ್ತಿ ಆಗಿ ಹೋಗಿದ್ದಾರೆ. ಸರ್ಕಾರದ ಭಿಕ್ಷೆಯಾದ ಸಬ್ಸಿಡಿಯನ್ನು ಧಿಕ್ಕರಿಸಿ, ಲೌಕಿಕ ಜಗತ್ತಿನ ಯಾವ ಆಧುನಿಕ ಉಪಕರಣಗಳನ್ನೂ ಬಳಸದೆ, ವಿದ್ಯುತ್ ಇಲ್ಲದೇ ಕೃಷಿಯಿಲ್ಲ, ರಾಸಾಯನಿಕಗಳಿಲ್ಲದೆ ಕೃಷಿ ಅಸಾಧ್ಯ ಎಂಬ … Read more

ಅಂತರಂಗದಾ ಮೃದಂಗ: ರೇಣುಕಾ ಶಿಲ್ಪಿ

ಅಂದು ಮಧ್ಯಾಹ್ನ ಊಟ ಮಾಡಿ ಟಿ.ವಿ ಅನ್ ಮಾಡಿ ಕುಳಿತೆ.ಸಿಟಿ ಚಾನಲವೊಂದರಲ್ಲಿ ಕಿಚ್ಚ ಸುದೀಪನ 'ಸವಿ ಸವಿ ನೆನೆಪು' ಹಾಡು ಬರುತ್ತಿದ್ದಂತೆ ಕೆ.ಇ.ಬಿ ಯವರು ವಿದ್ಯುತ್ ಶಾಕ್ ಕೊಟ್ಟರು, ಏನ್ಮಾಡೋದು? ಅದೇ ಹಾಡನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಮಲಗುತ್ತಿದ್ದಂತೆಯೇ ನನಗರಿವಿಲ್ಲದಂತೆ ನನ್ನ. ಕಾಲೇಜು ದಿನಗಳ ನೆನಪುಗಳಿಗೆ ಜಾರಿಕೊಂಡೆ … ಹದಿಹರೆಯದ ದಿನಗಳು ಬಲು ಸೊಗಸು..! ಆಗಿನ ಆಕರ್ಷಣೆ-ವಿಕರ್ಷಣೆಗಳು, ಆಸೆ-ನಿರಾಸೆಗಳು, ಧಿಡೀರ್ ಬದಲಾಗುವ ಚಿತ್ತವೃತ್ತಿಗಳು, ಜಗತ್ತನ್ನೇ ಗೆಲ್ಲುವೆನೆಂಬ ಮನೋಇಚ್ಛೆಗಳು, ಸ್ನೇಹಿತರ ಒಡನಾಟಗಳು….ಹೀಗೆ ಎಲ್ಲವೂ ಅವಿಸ್ಮರಣೀಯ… 'ಹುಚ್ಚು ಕೋಡಿ … Read more

ನಾಟಕಕಾರರಾಗಿ ಕುವೆಂಪು (ಭಾಗ-20) : ಹಿಪ್ಪರಗಿ ಸಿದ್ದರಾಮ್, ಧಾರವಾಡ

                ಇಲ್ಲಿಯವರೆಗೆ   ಆತ್ಮೀಯ ಓದುಗಪ್ರಭುಗಳೇ,   ಮೋಡದ ಜೊತೆಗೆ ಆಟವಾಡ ಬಯಸುವ ಪುಟ್ಟ ಹುಡುಗ, ಮನುಷ್ಯರ ದುರಾಶೆಗೆ ಬಲಿಯಾಗುವ ಕಾಡು, ಮುಕ್ತವಾಗಿ ಆಕಾಶದಲ್ಲಿ ತೇಲಿ ಓಡಾಡುವ ಮೋಡ ಇವು ನಿಸರ್ಗದ ಸಹಜವಾದ ಮೂರು ರೂಪಗಳು. ಮಹಾಕವಿಗಳ ವಿಶ್ವಮಾನವ ಸಂದೇಶ, ಪೂರ್ಣದೃಷ್ಟಿ ಮತ್ತು ಅನಿಕೇತನವಾಗುವ ಪ್ರಕ್ರಿಯೆಯ ಬೀಜಗಳು ಕಳೆದ ಸಂಚಿಕೆಯಲ್ಲಿ ನಾವು ನೋಡಿದ ಚಿಣ್ಣರಿಗಾಗಿ ರಚಿಸಿದ ‘ಮೋಡಣ್ಣನ ತಮ್ಮ’ ರಂಗಕೃತಿಯಲ್ಲಿ ಮೊಳಕೆಯೊಡೆಯುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಲ್ಲಾ ಬಂಧನಗಳನ್ನು … Read more

ಚಿಲ್ರೆ ಸಮಸ್ಯೆಯೂ, ಗುಂಡಣ್ಣನ ಗ್ಯಾಂಗೂ:ಪ್ರಶಸ್ತಿ ಅಂಕಣ

ಕಾಲೇಜ್ ಗ್ರೌಂಡಲ್ಲಿ ಎಂದಿನಂತೆ ಇಳಾ ಮಂಗಳೂರು ಮಂಜ ಮತ್ತು ಸರಿತಾ ಮಾತಾಡ್ತಾ ಕೂತಿದ್ದಾಗ "ಏನ್ ಚಿಲ್ರೆ ಸಮಸ್ಯೆ ಗುರೂ, ಥೂ..!" ಅಂತ ಗುಂಡಣ್ಣ ಮತ್ತು ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ ಎಂಟ್ರಿ ಕೊಟ್ರು. "ತಿಪ್ಪ ಅವ್ರು ಬೆಳಬೆಳಗ್ಗೆ ಯಾರ್ಗೋ ಬಯ್ತಾ ಇರೋ ಹಾಗೆ ಉಂಟಲ್ಲಾ ಮಾರ್ರೆ" ಅಂದ ಮಂಜ. "ಹೂಂ ಕಣೋ ಮಂಜ. ಈ ಬಸ್ಸೋರು ಒಂದ್ರೂಪಾಯಿ, ಎರಡ್ರೂಪಾಯಿ ಚಿಲ್ರೆ ಇದ್ರೆ ಕೊಡಂಗೇ ಇಲ್ಲ. ಟಿಕೇಟ್ ಹಿಂದ್ಗಡೆ ಬರ್ದೇನೋ ಕೊಡ್ತಾರೆ, ಆದ್ರೆ ಇಳಿಯೋ ಹೊತ್ಗೆ ರಷ್ಷಾಗಿದ್ದಾಗ್ಲೇ ಕಂಡೆಕ್ಟರ್ … Read more

ಕೆಂಗುಲಾಬಿ (ಭಾಗ 11): ಹನುಮಂತ ಹಾಲಿಗೇರಿ

  ಇಲ್ಲಿಯವರೆಗೆ ಯಾರೋ ಬಾಗಿಲು ಬಡಿದಂತಾಗಿ ಅವಸರವಾಗಿ ಮೇಲೆದ್ದು, ಮಲಗಿದ್ದ ಮಗುವನ್ನು ಎತ್ತುಕೊಂಡು ಹೊರ ಬಂದೆ. ಒಂದಿಬ್ಬರು ಗಿರಾಕಿ ಬಂದಿದ್ದರು. ಈ ಸಲ ವಠಾರದ ಮುಂದಿರುವ ಗಲ್ಲೆ ಮೇಲೆ ರತ್ನಮ್ಮ ಕುಳಿತಿದ್ದಳು. ನಾನು ಮಗುವನ್ನು ಎತ್ತಿಕೊಂಡು ಬಾಗಿಲಲ್ಲಿ ನಿಂತುಕೊಂಡಿದ್ದೆ. ರತ್ನಮ್ಮ ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದುದರಿಂದ ನನಗೆ ಮುಜುಗರವಾಗುತ್ತಿತ್ತು.    ಗಿರಾಕಿ ತಮ್ಮಿಷ್ಟದ ಹುಡುಗಿಯರನ್ನು ಆಯ್ದುಕೊಂಡು ರೂಮಿನೊಳಕ್ಕೆ ಮಾಯವಾದರು. ಅವರು ಒಳ ಹೋದ ತಕ್ಷಣ ನನ್ನಲ್ಲಿಗೆ ಬರಬರನೆ ಬಂದ ರತ್ನಮ್ಮ ನನ್ನ ರಟ್ಟೆಯನ್ನು ಹಿಡಿದುಕೊಂಡು ದರ ದರ ಎಳೆಯುತ್ತ … Read more

ಶಾಲೆಯಲ್ಲಿ ಮಕ್ಕಳಿದ್ದಾರೆ ಹುಷಾರ್: ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.

ಮೇಲಿನ ಮಾತಿನಿಂದ ಯಾರಿಗೆ ಹೆದರಿಸುತ್ತಿದ್ದಾರೆ? ಅಂದುಕೊಂಡಿರಾ. ಹೌದು ಇದು ಎಲ್ಲರಿಗೂ ಎಚ್ಚರಿಕೆ ಕೊಡುವ ಮಾತು ನಾವೆಲ್ಲಾ ತುಂಬಾ ತಿಳಿದು ಇಲ್ಲಿಯವರೆಗೂ ತುಂಬಾ ತಪ್ಪುಗಳನ್ನು ಮಾಡಿದ್ದೇವೆ. ಆದರೆ ಇನ್ನು ಮುಂದೆ ಹಾಗೆ ಆಗಲು ಬಿಡುವುದು ಅಪಾಯಕಾರಿ. ಏಕೆಂದರೆ ನಾವೆಲ್ಲಾ ಈಗ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯ ಅಡಿಯಲ್ಲಿ ಇದ್ದೇವೆ.  ಮರೆಯದಿರಿ ನಮ್ಮ ಮಕ್ಕಳ ಮುಂದೆ ಮಾತಾಡುವ ಸಮಯದಲ್ಲಿ ಹುಷಾರಾಗಿರಿ ಈಗ ನಮ್ಮ ಮಕ್ಕಳಿಗೂ ಒಂದು ಕಾನೂನು ಇದ್ದು ಅದು ಎಲ್ಲರ ಗಮನ ಸೆಳೆದಿದೆ. ಅದರ ಹಿನ್ನಲೆಯಲ್ಲಿ ನಾವೆಲ್ಲ ವಿಚಾರಿಸಬೇಕಾದ … Read more

ನನ್ನದಲ್ಲ…?: ಜಯರಾಮ ಚಾರಿ

 ಹಾಳು ಜಯಂತ ಮತ್ತೆ ಕಾಣೆಯಾಗಿದ್ದಾನೆ. ಆತನಿಗೆ ಕಾಣೆಯಾಗುವ ಕಾಯಿಲೆ ಹೊಕ್ಕಿಬಿಟ್ಟಿದೆ ಇತ್ತೀಚೆಗೆ. ಇದು ನಾಲ್ಕನೇ ಬಾರಿ ಕಾಣೆಯಾಗುತ್ತಿರುವುದು. ಅವನ ಅಮ್ಮ ದಿಗಿಲಾಗಿದ್ದಾಳೆ. ಆಕೆಗೊಂದು ಸಾಂತ್ವನ ಹೇಳಿ ಬರುವಾಗ ಆತನ ಸ್ಟಡಿ ಟೇಬಲ್ ಮೇಲಿನ ಬಿಳಿಹಾಳೆಗಳ ಗೊಂಚಲೊಂದು ಸಿಕ್ಕಿದೆ. ಅದಕ್ಕೆ "ನನ್ನದಲ್ಲ" ಎಂಬ ಶೀರ್ಷಿಕೆಯಿದೆ. ಅದನ್ನು ಅಲ್ಲಿಯೇ ಓದದೇ ರೂಮಿಗೆ ಬಂದು ಓದಲು ಬಿಚ್ಚಿದರೆ ಅದೊಂದು ಕತೆ. ಒಬ್ಬ ಕತೆಗಾರನ ಕತೆಯಲ್ಲಿ ಆತ ಹೊಕ್ಕುವುದು ತೀರ ಸಾಮಾನ್ಯ. ಅವನು ಬಾರದಿದ್ದರೂ ಆತನ ಜಂಭ,ಸ್ವಾರ್ಥ,ದಿಗಿಲು,ದ್ವಂದ್ವ,ಹುಚ್ಚು ಆದರ್ಶಗಳು, ಅವನ ಸ್ನೇಹಿತರು, ಆತನನ್ನು … Read more

ಪ್ರಜ್ವಲ್ ಫೋಟೋಗ್ರಾಫಿ

ನೀರ್ಗನ್ನಡಿ !   ನಮ್ಮ ಬೆಳಕು ಅಲ್ಲೇ ಇರತ್ತೆ, ಹೇಗೆ ನೋಡ್ತೀವಿ ಅನ್ನೋದು ಮುಖ್ಯ ಸೂರ್ಯ  – ಕಣ್ಣಾ ಮುಚ್ಚಾಲೆ ಆಟದ ಗುರು ಮ್ಯಾಜಿಕ್ ಬಣ್ಣಗಳು – ಸೂರ್ಯ ತನ್ನ ಇನ್ನೊಂದು ರೂಪದಲ್ಲಿ ಸ್ಟ್ರೀಟ್ ಸೂರ್ಯ – ಬೆಳಗಿನ ಜಾವದ ಸೂರ್ಯ, ಆಫ್ ಆಗಿರೋ ಸ್ಟ್ರೀಟ್ ಲೈಟ್ ಒಳಗಿನಿಂದ ಸೌತ್  ಇಂಡಿಯಾ ಮ್ಯಾಪ್ ಬಾರ್ಡರ್ !  ಪ್ರಕೃತಿ ನಮಗೆ ಏನನ್ನು ಬೇಕಾದರೂ ತೋರಿಸುತ್ತೆ, ಎಲ್ಲವನ್ನೂ ತೋರಿಸುತ್ತೆ 🙂 ಸಿಹಿನೀರಿನ ಬಸವನ ಹುಳು ಸಿರಿಮನೆ ಜಲಪಾತ – ಶೃಂಗೇರಿ, ಕರ್ನಾಟಕ ದ್ರಾಕ್ಷಿ ಹಣ್ಣಿನ ಗೊಂಚಲಿನಂತೆ … Read more