ಓದುವ ಬರೆಯುವ ಸುಖಕ್ಕೆ ಸೀಮಾರೇಖೆಗಳ ಹಂಗೇಕೆ: ನಟರಾಜು ಎಸ್. ಎಂ.

ಕೋಲ್ಕತ್ತಾದಲ್ಲಿದ್ದ ದಿನಗಳಲ್ಲಿ ಕನ್ನಡ ಪೇಪರ್ ಗಳು ಸಿಗದ ಕಾರಣ ಟೈಮ್ಸ್ ಆಫ್ ಇಂಡಿಯಾ ಪೇಪರ್ ಓದುವ ಅಭ್ಯಾಸವಿತ್ತು. ಬೆನೆಟ್ ಕೋಲೆಮನ್ ಕಂಪನಿ ಹೆಸರಿನಲ್ಲಿ 390 ರೂಪಾಯಿಯ ಚೆಕ್ ಒಂದರ ಜೊತೆ ಆ ಪೇಪರ್ ನ ಚಂದಾದಾರರಾಗುವ ಅರ್ಜಿಯೊಂದನ್ನು ಸ್ಥಳೀಯ ಪೇಪರ್ ವೆಂಡರ್ ಗೆ ನೀಡಿದರೆ ಒಂದು ವರ್ಷ ಪೂರ್ತಿ ಆ ಪೇಪರ್ ಮನೆ ಬಾಗಿಲಿಗೆ ಬಂದು ಬೀಳುತ್ತಿತ್ತು. ಆ ಒಂದು ವರ್ಷದಲ್ಲಿ ಪಡೆದ ಪೇಪರ್ ಗಳನ್ನು ತೂಕಕ್ಕೆ ಹಾಕಿದರೆ ಸುಮಾರು 200 ರೂಪಾಯಿ ತೂಕ ಹಾಕಿದ ಪೇಪರ್ … Read more

ತಮಾಷೆ: ಮಾಲತಿ ಶೆಣೈ

“ಒಂದು ರೊಟ್ಟಿಯ ತುಣುಕು ಕೊಡಿ” “ಏನಾದರೂ ತಿನ್ನಲು ಕೊಡಿ " ಆಕೆ ದೈನ್ಯತೆಯಿಂದ ಬೇಡಿದಳು. ಗಟ್ಟಿ ಕಲ್ಲಿನ ಅಂಗಳದ ಸುಡು ಬಿಸಿಲಿನಲ್ಲಿ ನಿಂತಿದ್ದಳು ಹುಡುಗಿ. ಮೈಯಲ್ಲಿ ಮಾಂಸದ ಹೆಸರೇ ಇರಲಿಲ್ಲ, ಎಲುಬಿನ ಗೂಡು. ಮಕ್ಕಳಿಗೆ  ಅನಾಟಮಿಯ  ಪಾಠ ಕಲಿಸುವಷ್ಟು ಅವಳ ಎಲುಬು ನಿಚ್ಚಳವಾಗಿ ಮೈಯಿಂದ ಕಾಣುತ್ತಿದ್ದವು. “ಅಮ್ಮ ಅವಳಿಗೆ ಸ್ವಲ್ಪ ತಿಂಡಿ ಕೊಡು. ನಿನ್ನೆಯಿಂದ ತಿಂಡಿಗೋಸ್ಕರ ಆಕೆ ಬೀದಿ ಬೀದಿ ಅಲೆಯುತ್ತಿದ್ದಾಳೆ’ ಕನಿಕರದಿಂದ ತನ್ನ ಅಮ್ಮನಿಗೆ ಹೇಳಿದ ಅದಿಲ್. “ಹೋಗಾಚೆ”- ಅಮ್ಮ ಗಟ್ಟಿ ದನಿಯಿಂದ ಗದರಿದರು. “ನಮ್ಮ … Read more

ಕೆಂಗುಲಾಬಿ (ಭಾಗ 1): ಹನುಮಂತ ಹಾಲಿಗೇರಿ

ಒಬ್ಬೊಬ್ಬರ ಬದುಕು ಒಂದೊಂಥರಾ. ಒಂದರೊಳಗ ಸಿಕ್ಕ ಹಾಕ್ಕೊಂಡವರು ಅದರಿಂದ ಬಿಡಿಸಿಕೊಳ್ಳಾಕ ಅವರ ಹಿಂದಿನ ಬದುಕಿನ ಅಧ್ಯಾಯಗಳು ಅಷ್ಟು ಸರಳ ಬಿಡುದಿಲ್ಲ. ಸುತ್ತಲಿನ ಪ್ರಪಂಚವನ್ನು ಕಣ್ಣರಳಿಸಿ ನೋಡುವ ಮುನ್ನವೇ, ಯಾರದೋ ಹುನ್ನಾರಕ್ಕೆ ಬಲಿಯಾಗಿ, ತಾವು ಮಾಡದ ತಪ್ಪಿಗಾಗಿ, ಎಷ್ಟೋ ಹೆಣ್ಮಕ್ಕಳು ಇಂದು ತಮ್ಮ ಮೈಯನ್ನೇ ಸಂತೆಯೊಳಗ ಬಿಕರಿಗಿಟ್ಟು ತುತ್ತಿನ ಚೀಲ ತುಂಬಿಸಿಕೊಳ್ಳಾಕ ಹತ್ಯಾರ. ಅಂಥ ಮೈ ಮಾರೊಳ ಹೊಟ್ಟಿಯೊಳಗಿಂದ ಭೂಮಿಗೆ ಇಳಿದು ಬಂದವ ನಾ. ಹಿಂದೆ, ಇಂದು, ಮುಂದೆಂದೂ ಈ ಬ್ಯಾನಿ ನನ್ನನ್ನು ಬಿಟ್ಟು ಬಿಡದ ಕಾಡಕೋತನ ಇರತೈತಿ. … Read more

ಪ೦ಜು ನಾ ಕ೦ಡ೦ತೆ: ವೆಂಕಟೇಶ್ ಪ್ರಸಾದ್

ಅದು ೨೦೧೧ ನವ೦ಬರ ಆಗ ನಾನು ಅ೦ತಿಮ ವರ್ಷದ ಪದವಿಯಲ್ಲಿದ್ದೆ. ಎಲ್ಲಾ ಕಾಲೇಜು ಹುಡುಗರ೦ತೆ ನಾನೂ ಫೇಸ್ ಬುಕ್ಕನ್ನು ಬಲವಾಗಿ ಅ೦ಟಿ ಕೊ೦ಡಿದ್ದೆ. ದಿನಾ ಬೆಳಗಾದರೆ ಫೇಸ್ಬುಕ್ ನೋಡದೆ ಮುಖ ಪ್ರಕ್ಷಾಳನ ಮಾಡಿಕ್ಕೊಳ್ಳುತ್ತಿರಲಿಲ್ಲ. ಹೀಗೆ ಒ೦ದು ದಿನ  ಫೇಸ್ ಬುಕ್ ನಲ್ಲಿ ಸ೦ಚರಿಸುತ್ತಿದ್ದಾಗ ‘ಕನ್ನಡ ಬ್ಲಾಗ್’ ಎ೦ಬ ಮಿತ್ರರ ಸಮೂಹದ ಪರಿಚಯವಾಯಿತು. ‘ಕನ್ನಡದ ಕ೦ಪ’ನ್ನು ಪಸರಿಸುವ ತಾಣಕ್ಕೆ ನಾನೂ ಸೇರಿಕೊ೦ಡೆ. ಅದರಲ್ಲಿ ಪ್ರಕಟವಾಗುತ್ತಿದ್ದ ಕಥೆ , ಕವನ , ಹಾಸ್ಯ ಲೇಖನ ಇತ್ಯಾದಿಗಳನ್ನ ಓದಿ/ಓದದೇ ಒ೦ದು ‘ಲೈಕ್’ … Read more

ನಾಟಕಕಾರರಾಗಿ ಕುವೆಂಪು (ಭಾಗ-10): ಹಿಪ್ಪರಗಿ ಸಿದ್ದರಾಮ್

ಆತ್ಮೀಯ ರಂಗಾಸಕ್ತ ಓದುಗಸ್ನೇಹಿತರೇ, ಇಲ್ಲಿಯವರೆಗೆ ಮಹಾಕವಿಗಳ ರಂಗಕೃತಿಗಳ ಪೌರಾಣಿಕ ಲೋಕದಲ್ಲಿ ವಿಹರಿಸುತ್ತಾ, ಅವರ ಪ್ರತಿಭಾಜ್ವಾಲೆಯಲ್ಲಿ ಅರಳಿದ ಹಲವು ಪೌರಾಣಿಕ ಪ್ರಸಂಗಗಳು ಆಧುನಿಕ ರಂಗರೂಪದೊಂದಿಗೆ ಹೊರಹೊಮ್ಮುವುದರೊಂದಿಗೆ, ಇಂದಿಗೂ ಕನ್ನಡ ರಂಗಭೂಮಿಯಲ್ಲಿ ಹೊಸತನಕ್ಕೆ ಪ್ರಚೋಧನಾತ್ಮಕವಾಗಿರುವ ಪೌರಾಣಿಕ ರಂಗಕೃತಿಗಳ ಕುರಿತಾಗಿ ಇಲ್ಲಿಯವರೆಗೆ ನೋಡಿದ್ದೇವೆ. ಮಹಾಕವಿಗಳು ಕೇವಲ ಪೌರಾಣಿಕ ಪ್ರಸಂಗಗಳಿಗೆ ಸೀಮಿತವಾಗದೇ ಮುಂದುವರೆದು ತಮ್ಮ ಲೇಖನಿಯಲ್ಲಿ ಐತಿಹಾಸಿಕ ಕಥನಕಗಳನ್ನು ಸಹ ಹೊಸ ರೂಪಾಂತರದೊಂದಿಗೆ ಇಂದಿನ ಕಾಲದ ರಂಗಕರ್ಮಿಗಳ ಪ್ರತಿಭೆಗೆ ಸವಾಲೊಡ್ಡುವಂತಹ ವಿಷಯಾಧಾರಿತ ಮತ್ತು ಪ್ರಸಂಗಾಧಾರಿವಾದ ರಂಗಕೃತಿಗಳನ್ನು ನೀಡಿದ್ದಾರೆ. ಅವುಗಳನ್ನು ನಾವೀಗ ಅವುಗಳ ರಚನೆಯ … Read more

‘ಪಂಜು’ ವಿಗೆ ಹೃದಯ ಪೂರ್ವಕ ಶುಭಾಶಯಗಳು: ಸುಮನ್ ದೇಸಾಯಿ

             ತನ್ನ ಪ್ರಖರ ಬೆಳಕಿನ ಸೊಬಗಿನಿಂದ ಹೊಳೆಯುತ್ತ ೨೫ ನೇ ವಾರಕ್ಕೆ ಕಾಲಿಡುತ್ತಿರುವ " ಪಂಜು" ವಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು. ಸಾಹಿತ್ಯದ ಮತ್ತ ಓದುವ ಹಪಹಪಿಯಿರುವ ನಾನು ಒಂದು ದಿನಾ ಹಿಂಗ ಕನ್ನಡ ವೆಬ್ ತಾಣಗಳನ್ನ ಹುಡಕಲಿಕತ್ತಾಗ ನನ್ನ ಕಣ್ಣಿಗೆ ಬಿದ್ದಿದ್ದು ಈ " ಪಂಜು" ಇ-ಪತ್ರಿಕೆ. ಆವಾಗಾಗಲೆ ಪತ್ರಿಕೆ ಶುರುವಾಗಿ ಒಂದ ೧೫ ವಾರ ಆಗಿದ್ವು ಅನಿಸ್ತದ. ಕೂತುಹಲದಿಂದ ಒಂದೊಂದ ವಾರದ ಸಂಚಿಕೆಗಳನ್ನ ತಗದು ನೋಡಿದ್ರ, ಹಬ್ಬದ … Read more

ತೊಟ್ಟಿಕ್ಕೋ ಕಾವ್ಯದ ಹನಿಗಳು!: ಸಂತೆಬೆನ್ನೂರು ಫೈಜ್ನಟ್ರಾಜ್

1.ವೈಶಾಲ್ಯ ಮನೆ ಸುತ್ತಾ ಕಾಂಪೌಂಡ್ ಹಾಕಿಕೊಳ್ಳುವ ನಾವು ಮನದ ಅದಮ್ಯ ಬಯಕೆಗಳಿಗೆ ಯಾವ ಬೇಲಿಯೂ ಹಾಕದ ವಿಶಾಲಿಗಳು !   2.ಸಡಗರ ಬೀಳೋ ಮಳೆಗೆ ಭೂಮಿ ಸೇರೋ ತವಕ ಭೂಮಿಗೋ ಒಡಲ ತುಂಬಿಕೊಳ್ವ ತವಕ !   3.ಒಲವೇ ನಿನ್ನೊಲವೇ ನನ್ನ ಕಾಯುವುದು ಕಣ್ಮುಚ್ಚಿ ತೆರೆದರೆ ಬರಿ ನಿನ್ನ ನೆನಪೇ ಕಾಡುವುದು !   4.ವಿಪರ್ಯಾಸ ಕತ್ತಲ ವಾಸಕ್ಕಂಜಿ ಬೆಳಕ ಹಂಚುತ್ತಾ ಹೊರಟ ಹಣತೆ ಕೊನೆಗೆ ಅದೇ ಕತ್ತಲಲ್ಲಿ ಕಣ್ಮುಚ್ಚಿತು!   5.ಹೂ-ಚುಕ್ಕಿ ನಕ್ಕ ಹೂ ನೋಡಿ … Read more

ಒಂದು ತಂತಿ ಪರ್ಸಂಗ …. ! : ಶ್ರೀಕಾಂತ್ ಮಂಜುನಾಥ್

ಐದು ಮಂದಿ ಹಳ್ಳಿಕಟ್ಟೆಯಲ್ಲಿ ಬೀಡಿ ಸೇದುತ್ತಾ ಲೋಕಾಭಿರಾಮವಾಗಿ ಮಾತಾಡುತ್ತ ಕುಳಿತಿದ್ದರು…    "ನೀನು ಏನೇ ಹೇಳು.. ಈ ಪರ್ಪಂಚದಲ್ಲಿ ಏಟೊಂದು ಬದಲಾವಣೆ ಆಗಿ ಬಿಡ್ತು!"   "ಹೌದು ಕಣಣ್ಣ..  ಮೊದ್ಲು ಮೊದ್ಲು ಒಬ್ಬರನ್ನ ಒಬ್ಬರು ಭೇಟಿ ಮಾಡೋಕೆ ಆನಾಡಿ ಕಷ್ಟ ಪಡ್ತಾ ಇದ್ವಿ.. ಈಗ ಎಲ್ಲಾ ಚಿಟಿಕೆ ಚಿಟಿಕೆ ಹೊಡೆಯೋದರಲ್ಲಿ ಮುಗಿಯುತ್ತೆ"   "ಗುರುವೇ ನಿನಗೆ ಗೊತ್ತಾ… ಈ ಟೆಲಿಗ್ರಾಂ ಅಂದ್ರೆ ತಂತಿ ಸೇವೆ ಐತಲ್ಲ ಅದನ್ನ ನಿಲ್ಲಿಸಿ ಬಿಡ್ತಾರಂತೆ.. ಈ ತಂತಿ ಸೇವೆ ಬಗ್ಗೆ ನಿನ್ನ ಅನುಭವ ಹೇಳ್ರಣ್ಣಾ!"   "ಓಹ್ … Read more

ಪ್ರೇಮ ವೈಫಲ್ಯ: ವಾಸುಕಿ ರಾಘವನ್

ಎರಡು ಕನಸು, ಬಂಧನ, ಪಲ್ಲವಿ ಅನುಪಲ್ಲವಿ, ಅಮೆರಿಕಾ ಅಮೆರಿಕಾ, ನಮ್ಮೂರ ಮಂದಾರ ಹೂವೇ, ಅಮೃತವರ್ಷಿಣಿ, ಮಾನಸ ಸರೋವರ…ಹಾಗೂ “ಏ” ಚಿತ್ರಗಳಲ್ಲಿ ಮುಖ್ಯವಾಗಿ ಏನು ಕಾಮನ್ ಆಗಿದೆ? ಹೌದು, “ಪ್ರೇಮ ವೈಫಲ್ಯ”, ಅದರಲ್ಲೂ ಹೀರೋ ವೈಫಲ್ಯವನ್ನು ಅನುಭವಿಸೋದು! ಆದರೆ “ಏ” ಚಿತ್ರಕ್ಕೂ ಬೇರೆ ಚಿತ್ರಗಳಿಗೂ ಒಂದು ಪ್ರಮುಖ ವ್ಯತ್ಯಾಸ ಏನು ಗೊತ್ತಾ? ಈ ಸನ್ನಿವೇಶವನ್ನು ಹೀರೋ ಹ್ಯಾಂಡಲ್ ಮಾಡಿದ ರೀತಿ. “ಎರಡು ಕನಸು” ಚಿತ್ರದಲ್ಲಿ ತನ್ನ ಹಳೆಯ ಪ್ರೇಯಸಿಯನ್ನು ಮರೆಯಲಾಗದ ನಾಯಕ, ಹೆಂಡತಿಯನ್ನು ಕಡೆಗಣಿಸುತ್ತಾನೆ. “ಬಂಧನ” ಚಿತ್ರದಲ್ಲಿ ತಾನು … Read more

ದೀಪ: ದಿವ್ಯ ಆಂಜನಪ್ಪ

ಅಂಧಕಾರವನ್ನು ತೊಲಗಿಸಿ, ಬೆಳಕನ್ನು ನೀಡಿ ದಾರಿ ತೋರುವ 'ದೀಪ'ವು ಜ್ಞಾನದ ಸಂಕೇತವಾಗಿದೆ. ಸಾಂಪ್ರದಾಯಕ ದೃಷ್ಟಿಯಿಂದಲೂ ದೀಪವು ಶ್ರೇಷ್ಟ ಸ್ಥಾನವನ್ನು ಪಡೆದಿದೆ. ಪೂಜೆ ಆಚರಣೆಗಳಲ್ಲಿ, ಆರತಿ ಬೆಳಗುವಲ್ಲಿ, ಯಾವುದೇ ಒಂದು ಕಾರ್ಯಕ್ರಮದ ಉದ್ಘಾಟನೆಯಲ್ಲಿ, ದೀಪ ಬೆಳಗಿಸುವ ಕಾರ್ಯವೇ ಮೊದಲಾಗಿದೆ. ಹೀಗೆ ನಮ್ಮ ಮನಸ್ಸು, ನಮ್ಮ ಸಂಸ್ಕೃತಿ ಮತ್ತು ನಮ್ಮ ಬುದ್ಧಿಯೂ ದೀಪವನ್ನು ಶ್ರೇಷ್ಠ ಸ್ಥಾನದಲ್ಲಿಟ್ಟು ನೋಡುತ್ತದೆ. ಭಾವನಾತ್ಮಕವಾಗಿಯೂ ಮತ್ತು ಸಾಹಿತ್ಯಾತ್ಮಕವಾಗಿಯೂ ದೀಪವು ನಮ್ಮ ಮನಗಳನ್ನು ಬೆಳಗಿಸಿವೆ ಎಂದೇ ಹೇಳಬಹುದು. ದೀಪವು ಬೆಳಕಿನ, ಜ್ಞಾನದ, ಕ್ರಾಂತಿಯ ದ್ಯೋತಕವಾಗಿ ಅನೇಕ ಕವಿತೆಗಳಾಗಿವೆ. ಕವಿಗಳಿಗೆ ಸ್ಪೂರ್ತಿಯಾಗಿ … Read more

ಕಾಯುವವ-ಕೊಲ್ಲುವವ: ಅಖಿಲೇಶ್ ಚಿಪ್ಪಳಿ

ಕೊಲ್ಲುವುದು ಸುಲಭ. ಕಾಯುವುದು ಕಷ್ಟ. ಒಂದು ಗಿಡವನ್ನು ನೆಟ್ಟು, ಪೋಷಿಸಿ, ರಕ್ಷಿಸಿ ಮರವಾಗುವತನಕ ನೋಡಿಕೊಳ್ಳುವುದು ತಪಸ್ಸಿನಂತೆ. ಕೊಲ್ಲುವುದಕ್ಕೆ ಒಂದು ಕತ್ತಿಯೇಟು ಸಾಕು. ಹಾಗೆ ಕೆಲಬಾರಿ ಪ್ರಕೃತಿಯಲ್ಲಿ ರಕ್ಷಿಸುವ ಪ್ರಯತ್ನವೂ ವಿಫಲಗೊಳ್ಳುವುದಕ್ಕೆ ಪ್ರತ್ಯಕ್ಷವಾಗಿ ನಾವೇ ಕಾರಣವಾಗುವುದು ಇದೆ. ಕಾಯುವ ಪ್ರಯತ್ನದಲ್ಲಿ ಸಫಲಗೊಂಡು ಸಂತೋಷದಿಂದ ಬೀಗಿದ ಘಟನೆಯ ಜೊತೆಗೆ ವಿಫಲಗೊಂಡು ದು:ಖ ಅನುಭವಿಸಿದ ಕತೆಯೂ ಇಲ್ಲಿದೆ. ನಾನು ಕೆಲಸ ಮಾಡುವ ಜಾಗದಲ್ಲಿ ಜನರ ತಿರುಗಾಟ ಹೆಚ್ಚು. ಜೋಡಿ ಪಿಕಳಾರಗಳಿಗೆ ಗೂಡು ಕಟ್ಟಲು ಜಾಗವೊಂದು ಬೇಕು, ಕಾಂಕ್ರೀಟ್ ಕಾಡಿನಲ್ಲಿ ಅವಕ್ಕೆ ಪ್ರಶಸ್ತ … Read more

ಆರ್ಕೆಸ್ಟ್ರಾಗಳೂ ಎಕ್ಸಾಮುಗಳೂ: ಪ್ರಶಸ್ತಿ ಅಂಕಣ

ಮೊನ್ನೆ ಬೆಳಗ್ಗೆ ಟೀವಿ ಹಾಕ್ತಿದ್ದ ಹಾಗೇ ಯಾವ್ದೋ ಕಾರ್ಯಕ್ರಮ. ನಿಮ್ಮ ಆರ್ಮ್ ನ ರೈಟ್ಗೆ ೪೫ ಡಿಗ್ರಿ ರೊಟೇಟ್ ಮಾಡಿ. ಆಮೇಲೆ ಲೆಗ್ಸ ನ ಹಾಗೇ ಪುಷ್ ಮಾಡಿ. ಹಾಗೇ ೨೦ ರೌಂಡ್ಸ್ ರಿಪೀಟ್ ಮಾಡಿ… ಯಪ್ಪಾ, ಇದ್ಯಾವ ಭಾಷೆಯೋ ಶಿವನೇ. ಬೆಂಗ್ಳೂರ ಕನ್ನಡ ಇಷ್ಟು ಕರಾಬ್ ಆಯ್ತಾ ಅಂತ ಬೇಜಾರಾಗಿ ಟೀವೀನೆ ಆಫ್ ಮಾಡ್ತೆ. ಸಂಜೆ ಮನೆಗೆ ವಾಫಾಸ್ ಬಂದ್ರೂ ಮತ್ತೆ ಟೀವಿ ಹಾಕೋ ಮಸಸ್ಸಾಗಿರ್ಲಿಲ್ಲ. ಮುಖಹೊತ್ತಿಗೆ(FB 🙂 ) ತೆಗಿತಾ ಇದ್ದೆ. ಅದೇ ಸಮಯಕ್ಕೆ … Read more

ಪ್ರಜ್ವಲ್ ಫೋಟೋಗ್ರಾಫಿ: ಪ್ರಜ್ವಲ್ ಕುಮಾರ್

ಯಶಸ್ವಿಯಾಗಿ ಬಾವುಟ ಹಾರಿಸಿದೆ  ಇಂಡಿಯನ್ ಬುಲ್ ಫ್ರಾಗ್ ಹೆಲಿಕ್ಯಾಪ್ಟರ್ ಚಿಟ್ಟೆಯ ಗಟ್ಟಿ ಹಿಡಿತ ಹಸಿರು ಹುಳ ಕರೆಂಟ್ ಇಲ್ಲದಿದ್ದಾಗ ಉಪಯೋಗಿಸುತ್ತಿದ್ದ ನಮ್ಮನೆ ದೀಪ ಮಲೆನಾಡ ನೆಲ ಓಟ ನಟ್ಟು ಬೋಲ್ಟು :))