ಅಕ್ಷಯ ತೃತೀಯದಲ್ಲಿ ಚಿನ್ನ ಕೊಳ್ಳುವುದು ಅಂದರೆ…:ವಿ.ಆರ್.ಕಾರ್ಪೆಂಟರ್

ನನ್ನ ಸ್ನೇಹಿತನೊಬ್ಬ ಸೇನೆಯಲ್ಲಿದ್ದಾನೆ. ಕಳೆದ ವಾರವಷ್ಟೇ ರಜೆಯ ಮೇಲೆ ಊರಿಗೆ ಬಂದಿದ್ದಾನೆ. ಅವನಿಗೆ ಅವನ ತಂಗಿಯ ಕಡೆಯವರು ಅವನ ಮದುವೆಯ ವಾರ್ಷಿಕೋತ್ಸವ ಸಮಾರಂಭಕ್ಕೆಂದು ಸ್ವಲ್ಪ ದುಬಾರಿ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದನ್ನು ಹೆಚ್ಚಿಗೆ ಅನ್ನಿಸುವಷ್ಟು ಉಬ್ಬಿಕೊಂಡು ನನ್ನ ಬಳಿ ಹೇಳಿಕೊಂಡ. ಇಂದು ತನಗೆ ಸಿಕ್ಕ ಈ ಅನಿರೀಕ್ಷಿತ ಉಡುಗೊರೆಯ ಹಿನ್ನೆಲೆಯನ್ನು ಹೇಳಿಕೊಂಡ. ಅದು ಮುಂದಿನಂತಿದೆ. ಕಳೆದ ಎರಡು ವಾರದ ಯಾವುದೋ ದಿನ ಅಕ್ಷಯ ತೃತೀಯವಂತೆ. ಅಂದು ಅವನ ಹೆಂಡತಿ ’ರೀ ಇವತ್ತು ಅಕ್ಷಯ ತೃತೀಯ ಜಾಸ್ತೀ ಅಲ್ಲದಿದ್ದರೂ ಚೂರು … Read more

ಪಂಜು ಚುಟುಕ ಸ್ಪರ್ಧೆ:ಶಿವು.ಕೆ ಅವರ ಚುಟುಕಗಳು

೧. ಜೀನ್ ಜಿನುಗದೆ ಕವಿ ಹೃದಯದ ಜೀನ್ ಜಿನುಗದೆ ದಿನವೂ ತೊಳಲಾಡುತ್ತಿದ್ದೇನೆ ನಾ ಕವನ ಬರೆಯಲಾಗದೆ ಕಣ್ಣ ಕದ ತೆರೆದು ಓದುತ್ತೀಯಾ ನನ್ನೊಳಗಿನ ಕವಿತೆಗಳನ್ನು ೨. ಬೇರಿನೊಳಗೆ ಅಡಗಿ ಕುಳಿತ ಆಕಾಶದಗಲದ ದೊಡ್ಡಮರದಂತೆ ನನ್ನ ಪುಟ್ಟ ಹೃದಯದೊಳಗೆ ಬಚ್ಚಿಟ್ಟಿರುವ ಸಾಗರದಗಲದ ಒಲವು ನಿನಗೆ ಗೊತ್ತಾ? ೩. ಹಸಿರು-ಉಸಿರು ಆವಿಯಾದ ಸಾಗರದನಿಗಳು ಆಕಾಶಕ್ಕೇರಿ ಪರಸ್ಪರ ಡಿಕ್ಕಿಸಿದಾಗ ಮಳೆಸುರಿದು ನೆಲವೆಲ್ಲಾ ಹಸಿರು ದೈನಂದಿನ ಚಿತ್ರಗಳು ನನ್ನೆದೆಯಲ್ಲಿ ಭಾವಗಳಾಗ ಪರಸ್ಪರ ಡಿಕ್ಕಿಸಿದಾಗ ಪದ ಸುರಿದು ಕಾಗದದಲ್ಲಿ ಕವನದ ಉಸಿರು. ೪.  ಬದುಕು … Read more

ಒಂದು ಕದ್ದಾಲಿಕೆ: ಹರಿಪ್ರಸಾದ್

ನನಗೆ ನಾಲಿಗೆ ಬಗ್ಗೆ ಒಲವು ಇಲ್ಲದಿದ್ದರೂ ಕಿವಿಯ ಬಗ್ಗೆ ಅಪಾರ ಪ್ರೀತಿ. ಈ ಕಿವಿಗಳಾದರೋ ಎಲ್ಲೇ ಹೋದರೂ ಸುಮ್ಮನಿರುವುದಿಲ್ಲ. ಏನಾದರೂ ಕೇಳಿಸಿಕೊಳ್ಳುತ್ತಲೇ ಇರುತ್ತವೆ. ಕೇಳಿಸಿಕೊಂಡು ಅವು ಸುಮ್ಮನಿರುವುದಿಲ್ಲ. ನನ್ನನ್ನು ವಿನಾಕಾರಣ ಪೀಡಿಸುತ್ತಿರುತ್ತವೆ. ಒಂದಿನ ಟೀ ಅಂಗಡೀಲಿ ಯಾರೋ ಮಾತಾಡಿದ್ದು ಕೇಳಿಸಿಕೊಂಡು ಬಂದಿದ್ದವು. ರಾತ್ರಿ ನಿದ್ದೆ ಮಾಡಲು ಬಿಡದೆ ಪೀಡಿಸಿದವು. ಆ ಪೀಡನೆಯೇ ಸಾರಾಂಶವೇ ಈ ಬರಹ. ಅವನು ಏನೋ ಮದುವೆ ಆಕ್ಕುಲ್ವ? ಇವನು ಆಯ್ತಿನಿ ಅವನು ಅಂಗಾರೆ ಉಡ್ಗಿ ನೋಡ್ಕಂಡಿದೀಯ, ಯಾವ ಕ್ಯಾಷ್ಟು ಇವನು ನಿಂಗೆ ನನ್ … Read more

ಘಟಶ್ರಾದ್ಧ:ಮಹಾದೇವ ಹಡಪದ

ಗಿರೀಶ ಕಾಸರವಳ್ಳಿಯ “ಘಟಶ್ರಾದ್ಧ” ನನ್ನ ಕತೆಯ ಜೊತೆ ಅತ್ಯಂತ ನಿಕಟವಾದ ಸಂಬಂಧ ಇಟ್ಟುಕೊಂಡಿದೆ. ನಾನು ಬೆಳೆದ ಪರಿಸರ ಗಿರೀಶ ಕಾಸರವಳ್ಳಿ ಬೆಳೆದ ಪರಿಸರಗಳ ನಡುವೆ ಅನೇಕ ಸಾಮ್ಯಗಳಿವೆ. ಒಬ್ಬ ಹುಡುಗ ಬೆಳೆದು ದೊಡ್ಡವನಾಗುವ ಕಷ್ಟ, ಮುಗ್ಧತೆ ಕಳೆದುಕೊಳ್ಳಬೇಕಾದ ಅನಿವಾರ್ಯ, ಅದರ ಸಂಕಟ, ನೈತಿಕ ಪ್ರಜ್ಞೆ ಬೆಳೆಸುವ ಮಾನವೀಯ ಸಂಬಂಧಗಳಲ್ಲಿ ಹುಟ್ಟುವ ತೊಡಕುಗಳು – ಇಂಥ ವಿಷಯಗಳಲ್ಲಿ ನನ್ನ ಅನುಭವಗಳೆಲ್ಲ ತನ್ನ ಸ್ವಂತ ಅನುಭವಗಳು ಎನ್ನುವಂತೆ ಗಿರೀಶ ಕಾಸರವಳ್ಳಿ “ಘಟಶ್ರಾದ್ಧ ” ಮಾಡಿದ್ದಾರೆ. – ಯು.ಆರ್.ಅನಂತಮೂರ್ತಿ ಸಾರ್ವಕಾಲಿಕವಾದದ್ದು ಯಾವಾಗ ಕಂಡರೂ, ಕಾಣಿಸಿದರೂ … Read more

ಯಾರೂ ನೋಡಿರದ ಎವರ್-ಗ್ರೀನ್ ಕ್ಲಾಸಿಕ್:ವಾಸುಕಿ ರಾಘವನ್

ನಿಮಗೆ ಈ ಚಿತ್ರದ ಎಲ್ಲಾ ಹಾಡುಗಳು ಗೊತ್ತಿರಬಹುದು. ಕೇಳಿದ್ದರೆ ಮರೆತಿರಲಿಕ್ಕೆ ಸಾಧ್ಯಾನೇ ಇಲ್ಲ ಬಿಡಿ. ಆದರೂ ನೀವು ಈ ಸಿನಿಮಾ ನೋಡಿರೋ ಸಾಧ್ಯತೆಗಳು ಕಡಿಮೆ. ನಿಮಗೆ ಪರಿಚಯ ಇರೋರಲ್ಲಿ ಕೂಡ ಈ ಚಿತ್ರವನ್ನ ಯಾರೂ ನೋಡಿರಲಾರರು. ಚಾನ್ಸ್ ಸಿಕ್ಕರೆ ಈ ಚಿತ್ರವನ್ನ ನೋಡ್ತೀರಾ ಅಂದ್ರೆ ಇಲ್ಲಪ್ಪಾ ಅಂತೀರ! ಇದ್ಯಾವ ಚಿತ್ರನಪ್ಪಾ ಅಂತ ತಲೆ ಕೆರ್ಕೊತಾ ಇದೀರಾ? ತಡೀರಿ ಆ ಚಿತ್ರದ ಒಂದು ಹಾಡು ಇಲ್ಲಿದೆ: ಕಣ್ಣು ಕಡಲ ಹೊನ್ನು ನಸು ನಾಚಿದಾಗ ನೀನು ಸೌಂದರ್ಯ ನಿನ್ನ ನೋಡಿ … Read more

ಬೆಂಗಳೂರಿನ ದಾಖಲೆ ಮಳೆ: ಪ್ರಶಸ್ತಿ ಅಂಕಣ

  ಟ್ರಾಫಿಕ್ ಜಾಂಗೂ ಬೆಂಗ್ಳೂರಿಗೂ ಖಾಸಾ ಖಾಸಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯನೇ..ಆದರೆ ಬೆಂಗ್ಳೂರಲ್ಲಿ ದಾಖಲೆ ಮಳೆಯೆಂಬ ದಾಖಲೆಯಲ್ಲಿ ದಾಖಲಾಗಿದ್ದು, ಮುಕ್ಕಾಲು ಘಂಟೆಯ ಪಯಣ ಮಳೆರಾಯನಿಂದ ಮೂರು ಘಂಟೆಯಷ್ಟಾಗಿದ್ದು  ಮಾತ್ರ ಮರೆಯಲಾರದ ನೆನಪುಗಳು..   ಮೊನ್ನೆ ಎಂದಿನಂತೆ ಶುಭ ಶುಕ್ರವಾರ. ಅಕ್ಷರಶ: ಸೆಕೆಯಲ್ಲಿ ಬೇಯ್ತಿರೋ ಬೆಂಗಳೂರಿಂದ ದೂರ ನನ್ನ ಹುಟ್ಟೂರೆಡೆಗೆ ತೆರಳೋ ಖುಷಿಯಿಂದ ಸಹಜವಾಗೇ ಶುಕ್ರವಾರ ಶುಭದ್ದೆನಿಸಿತ್ತು. ಆದರೆ ಸಂಜೆ ಆರು ಘಂಟೆಯಾಗುತ್ತಿದ್ದಂತೆಯೇ ಎಲ್ಲಿಂದಲೋ ಕವಿದ ಮೋಡಗಳು ಅದ್ಯಾವ ಮಾಯೆಯಲ್ಲಿ ಮಳೆ ಸುರಿಸತೊಡಗಿದವೋ ತಿಳಿಯಲೇ ಇಲ್ಲ…ಯಾರೋ  ಬಾಗಿಲು … Read more

ತಾಯಿಯ ಮನಸ್ಸು: ಲಿಂಗರಾಜು

           ಅಂದು ಸೋಮವಾರ, ನಾನು ಒಬ್ಬ ಮುಖ್ಯ ವ್ಯಕ್ತಿಯೊಬ್ಬರನ್ನು ಬೇಟಿ ಮಾಡಲು ಬೆಂಗಳೂರಿನ ಗಾಂದಿನಗರದ ಕಡೆ ಹೋಗಬೇಕಾಗಿತ್ತು..ಬೆಳಿಗ್ಗೆ 10 ಗಂಟೆಯ ಸಮಯ, ಕೆಂಪೇಗೌಡ ಬಸ್ ನಿಲ್ಧಾಣದಲ್ಲಿ ಬಸ್ಸಿನಿಂದ ಇಳಿದು ನಿಂತೆ.  ಸುತ್ತಲೂ ನೋಡಿ ಒಮ್ಮೆ ಬೆರಗಾದೆ ಎತ್ತ ನೋಡಿದರೂ ಜನರ ಗಜಿಬಿಜಿ. ಒಂದು ರಸ್ತೆಯಿಂದ ಮತ್ತೂಂದು ರಸ್ತೆಗೂ ದಾಟಲು ಅಸಾದ್ಯವಾದ ವಾಹನಗಳ ಸಾಲು.          ಮನಸ್ಸಿನಲ್ಲಿ ಏನೋ ಗೊಂದಲ, ಒಂದು ಕಡೆ ಸುಮ್ಮನೆ ನಿಂತುಬಿಟ್ಟೆ. ತಕ್ಷಣ ಒಂದು … Read more

ಮೂವರ ಕವಿತೆಗಳು: ಪ್ರಭಾಕರ ತಾಮ್ರಗೌರಿ, ನಾಗರಾಜ್ ಹರಪನಹಳ್ಳಿ, ಸುಷ್ಮಾ ಮೂಡುಬಿದರೆ

ಕನ್ನಡಿ ಜಲ  ವಿಶಾಲವಾದ ತಿಳಿಗೊಳ ಅದರೊಳಗೆ ಇಣುಕಿ ನೋಡಿದರೆ ಕಾಣುವುದು ಮಿರಿಮಿರಿ ಮಿಂಚುವ ತಳ ಪ್ರತಿಬಿಂಬ ಕಾಣಲು ಸಾಕು ಈ ಕನ್ನಡಿ ಜಲ ..! ಅಪಾಯವೇನೂ ಇಲ್ಲವಾದರೂ ಇದರಲ್ಲಿ ಯಾರೂ ಸ್ನಾನ ಮಾಡಬೇಡಿ ; ಈಸಬೇಡಿ…. ಅತ್ತಿತ್ತ ಚಲಿಸುತ್ತಾ ಮನಕ್ಕೆ ಮುದ ನೀಡುವ ಬಣ್ಣ ಬಣ್ಣದ ಮೀನುಗಳ ಹಿಡಿದು ಕೊಲ್ಲಬೇಡಿ ಕಸಕಡ್ಡಿ , ಕಲ್ಲೆಸೆಯಬೇಡಿ ಕಾಲು , ಕೋಲು ಹಾಕಿ ಕಲಕಿ ತಿಳಿ ನೀರ ಕೆಡಿಸುವುದು ತಪ್ಪು ಕೊಳಕ ತೊಳೆಯಲು ಇದು ಜಾಗವೇ ಅಲ್ಲ ಶುದ್ದ ಜಲ…! … Read more

ಫಿಟ್ಟಿಂಗ್ ನಲ್ಲಿ ಫಿಕ್ಸಿಂಗ್ ಫಿಕ್ಸು..!: ಎಂ. ಆರ್. ಸಚಿನ್

ಇವ ಸುಮ್ನೆ ಗೀಚ್ತಾನೆ, ಸೀರಿಯಸ್ ಆಗ್ಬೇಡಿ..!! ಮೊನ್ನೇ ದಾರೀಲಿ ಒಬ್ನೇ ನಡೆದುಕೊಂಡು ಹೋಗ್ತಾ ಇದ್ದೇ. ಎಳಿಯೋಕೆ ಯಾರ ಕಾಲೂ ಸಿಗದೇ, ಜೊತೆಗೆ ಯಾರೂ ಇಲ್ದೆ, ಸಿಕ್ಕಾಪಟ್ಟೆ ಬೋರಾಗ್ತಾ ಇತ್ತು. ಅದೇ ಸಮಯಕ್ಕೆ ಸರಿಯಾಗಿ ಒಂದು ನಾಲ್ಕೈದು ಮಂದಿ ಕೈಲಿ ಕೆಲ ಕ್ರಿಕೇಟ್ ಆಟಗಾರರ ಮಕಕ್ಕೆ ಮಸಿ ಬಳಿದ ಪಟ, ಬ್ಯಾನರ್ ಎಲ್ಲ ಹಿಡಿದು, ಘೋಷಣೆ ಕೂಗುತ್ತಾ ತಮ್ಮ ಹಳೇ ಚಪ್ಪಲಿಯಿಂದ ಪಟಪಟ ಅಂತಾ ಬಾರಿಸುತ್ತಿದ್ದರು. ನಾ ಕೇಳಿದೆ "ಸಾರ್ ಎಂಥಾ ಆಗ್ತಾ ಉಂಟು ಇಲ್ಲಿ? ನೀವ್ಯಾಕೆ ಈ … Read more

ಒಂದು ಲವ್ ಕಹಾನಿ!: ನವೀನ್ ಮಧುಗಿರಿ

ಸುಡು ಸುಡು ಬಿಸಿಲಿನ ಬೇಸಿಗೆಯ ಒಂದು ಮಧ್ಯಾಹ್ನ. ಸಿಮೆಂಟು ಕಾಡಿನ ಮಧ್ಯೆ ಅಪರೂಪಕ್ಕೆ ಅಲ್ಲಲ್ಲಿ ಕಾಣಿಸುವ ರಸ್ತೆ ಬದಿಯಲ್ಲಿರುವ  ಒಂದೆರಡು ಮರಗಳೂ ಸಹ ತಲೆಬಾಗುವುದನ್ನು ಮರೆತು ತಟಸ್ಥ ಧ್ಯಾನಕ್ಕೆ ಶರಣಾಗಿವೆ. ಸೂರ್ಯೋದಯದ ನಂತರ ಆ ಊರಿನಲ್ಲಿ ಒಮ್ಮೆಯೂ ಗಾಳಿ ಬೀಸಿಲ್ಲ. ಒಂದೆಲೆಯೂ ಅಲುಗಿಲ್ಲ. ಮರದ ರೆಂಬೆಗಳು  ಬಿಸಿಲ ಬೇಗೆಗೆ ಬೆಂದು, ಚಲನವಿಲ್ಲದೆ ನಿರ್ಜೀವ ವಸ್ತುವಿನಂತೆ (ಸತ್ತಂತೆ) ಮಲಗಿವೆ.  ಆ ಊರಿನ ಯಾವುದೋ ಒಂದು ಬೀದಿಯಲ್ಲಿನ ಒಂದು ಮೂಲೆಯಲ್ಲಿ ಆಗಷ್ಟೇ ಗೃಹ ಪ್ರವೆಶವೋ, ನಾಮಕರಣವೋ, ಅಥವಾ ಇನ್ನಾವುದೋ ಕಾರ್ಯಕ್ರಮವು ನಡೆದಿತ್ತು. ಬಂದ … Read more

ಯಾವುದು ತಪ್ಪು? ಯಾವುದು ಸರಿ?: ಸುಬ್ರಹ್ಮಣ್ಯ ಹೆಗಡೆ

ಟಿಪ್ಪಣಿ: ನಮ್ಮ ಜೀವನವೇ ಹಾಗೆ ಅಲ್ಲವೇ, ಜೀವನಪೂರ್ತಿ ನಾವು ಬದುಕುವುದೇ ಹಾಗೆ. ನಮಗೆ ಯಾವುದು ಸರಿಯಾಗಿ ಕಾಣುತ್ತದೆಯೋ ಅದನ್ನೇ ನಾವು ಮಾಡುತ್ತೇವೆ. ನಮಗೆ ಸರಿಯಾಗಿ ಕಂಡ ನಿರ್ಧಾರ ನಮ್ಮೆದುರಲ್ಲಿರುವವರಿಗೆ ಸಹ ಸರಿಯಾಗಿ ಕಾಣಬೇಕೆಂದೇನಿಲ್ಲ. ಅಷ್ಟೇ ಅಲ್ಲ, ಸ್ವಲ್ಪ ಸಮಯದ ನಂತರ ನಮ್ಮ ನಿರ್ಧಾರ ನಮಗೇ ಸರಿಯಾಗಿ ಕಾಣದೇ ಹೋಗಬಹುದು. ಇಬ್ಬರ ನಡುವಿನ ಒಂದು ವಾದದಲ್ಲಿಯೇ ಆಗಲೀ, ಜೀವನದ ಅತಿಮುಖ್ಯ ನಿರ್ಧಾರಗಳಲ್ಲಿಯೇ ಆಗಲೀ, ಇನ್ನೊಬ್ಬರ ಬಗೆಗಿನ ಸರಿತಪ್ಪುಗಳ ನಿರ್ಣಯದಲ್ಲಿಯೇ ಆಗಲೀ, ಒಂದೇ ಸರಿ ಮತ್ತು ಒಂದೇ ತಪ್ಪು ಇರಲು … Read more

ನಾಟಕಕಾರರಾಗಿ ಕುವೆಂಪು (ಭಾಗ-5):ಹಿಪ್ಪರಗಿ ಸಿದ್ದರಾಮ್

1931ರಲ್ಲಿ ರಚನೆಯಾದ ಮಹಾಕವಿ ಕುವೆಂಪರವರ ‘ಸ್ಮಶಾನ ಕುರುಕ್ಷೇತ್ರಂ’ ರಂಗಕೃತಿಯು ಇಂದಿಗೂ ಅತ್ಯಂತ ಪ್ರಸ್ತುತವಾಗುತ್ತಾ, ನಮ್ಮನ್ನು ಸದಾಕಾಲ ಸಾಮಾಜಿಕ ಸನ್ನಿವೇಶಗಳೊಂದಿಗೆ ಅನುಸಂಧಾನ ಮಾಡುವ ಕಥಾವಸ್ತು ಹೊಂದಿರುವ ಈ ರಂಗಕೃತಿಯಲ್ಲಿ ಯುದ್ಧೋತ್ತರ ಮಹಾಭಾರತದ ಚಿತ್ರಣ, ಪಂಪ, ರನ್ನ ಮುಂತಾದ ಕವಿಗಳು ಕುರುಕ್ಷೇತ್ರದ ಯುದ್ಧದ ಕೊನೆಯ ದೃಶ್ಯಗಳನ್ನು ತಮ್ಮ ಕಾವ್ಯಗಳಲ್ಲಿ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿರುವುದನ್ನು ತಮ್ಮ ಪ್ರಾಂಜಲ ಮನದಿಂದ ಪರೋಕ್ಷವಾಗಿ ಮಹಾಕವಿಗಳು ಕೃತಜ್ಞತೆಯೊಂದಿಗೆ ಸ್ಮರಿಸಿಕೊಳ್ಳುತ್ತಾರೆ. ಇಂದಿನ ಜಾಗತೀಕರಣೋತ್ತರ ಭಾರತ ಮತ್ತು ಸಮಕಾಲೀನ ಸಂದರ್ಭದ ಜಗತ್ತಿನ ಪ್ರಭಲ ರಾಷ್ಟ್ರಗಳೆಲ್ಲವೂ ಸ್ವರಕ್ಷಣೆಯ ನೆಪದಲ್ಲಿ ಸಿಡಿಮದ್ದು, ಕ್ಷಿಪಣಿಗಳನ್ನು … Read more