Facebook

Archive for 2013

ಸೊಕ್ಕಿನ ಕೋಗಿಲೆ: ಚೇತನ್ ಕೆ ಹೊನ್ನವಿಲೆ

  ಅವಳು ಇದ್ದದ್ದು ಹಾಗೆ!! ಸೊಕ್ಕಿನ ಕೋಗಿಲೆ ಹಾಗೆ!! ಆ ಕೋಗಿಲೆಯ ಕಂಠಕ್ಕೆ ತೂಗದ ತಲೆಗಳಿಲ್ಲ, ಮಣಿಯದ ಮನಗಳಿಲ್ಲ.   ಹೆಸರು ಪೂರ್ವಿ!!  ಮನೆಯವರು ಪ್ರೀತಿಯಿಂದ ಇಟ್ಟ ಹೆಸರು. ಹಾಡೋದಕ್ಕೆ ಅಂತಲೇ ಹುಟ್ಟಿದವಳು.  ಹಾಡಲು ನಿಂತರೆ ಸಂಧಿಸುತ್ತಿದ್ದುದು, ಕರ್ಣಗಳನ್ನಲ್ಲ!! ತೊಯ್ದ ಆತ್ಮಗಳನ್ನ!! ಆ ತನ್ಮಯತೆಯನ್ನು, ಅವಳು ಅದನ್ನು ಅನುಭವಿಸುವ ಸೊಬಗನ್ನು ನೋಡಲು, ಕಲಾರಸಿಕರು ಹಾತೊರೆಯುವರು. ಸೊಕ್ಕಿನ ಕಂಠದಿಂದ ಬರುತ್ತಿದ್ದ ಧ್ವನಿ , ಹೃದಯ ಕಿತ್ತು ಬಂದಂತೆ. ಸಹಜ ಮಾತಿನಲ್ಲೂ, ದೂರಬೆಟ್ಟದ ದೇವಸ್ಥಾನದ ಗಂಟೆ ಹೊಡೆದಂತೆ. ಕೊರಳಿನ ಮಾಧುರ್ಯ!! […]

ನಾಲ್ವರ ಕವಿತೆಗಳು

  ಬಣ್ಣದ ಬದುಕು ಕಣ್ಣ ಕನ್ನಡಿಯಲ್ಲಿ ಇಂದು ಕಾಣುತಿಹುದು ನಿನ್ನ ಬಿಂಬ ಏರಬೇಕು ಮಲ್ಲಗಂಬ ಸಲ್ಲದೆಂದೂ ನಾನು ನನ್ನದೆಂಬ ಜಂಬ.   ಅವನೇ ಜಗದ ಸೂತ್ರಧಾರಿ ನೀನು ಇಲ್ಲಿ ಪಾತ್ರಧಾರಿ ಪ್ರಾಯ ಹೋಗೋ ಮುನ್ನ ಜಾರಿ ಬೆಳೆಯಬೇಕು ಎಲ್ಲ ಮೀರಿ ..!!   ಇದ್ದರೇನು ಪ್ರಾಯ ಸಣ್ಣ ಎಲ್ಲ ಹಚ್ಚ ಬೇಕು ಬಣ್ಣ ನಾವು ಹೆಜ್ಜೆ ಹಾಕಬೇಕು ತುತ್ತ ಚೀಲ ತುಂಬಬೇಕು.   ಕೆಂಪಾದರೇನು ಕಪ್ಪಾದರೇನು? ಹೆಚ್ಚಬೇಕು ಪಾತ್ರದಂದ ಬಣ್ಣಕಿಂತ ನಗುವೇ ಚಂದ ನಗುವು ಮಾಸದಿರಲಿ ಕಂದ […]