ಬದಲಾಗುತ್ತಿದೆ ಅಡುಗೆ ಕಾನ್ಸೆಪ್ಟ್: ವೇದಾವತಿ ಹೆಚ್.ಎಸ್.

ಸ್ನೇಹಿತೆಯೊಬ್ಬಳು ನನ್ನಲ್ಲಿ “ನೀನೇಕೆ ಕ್ಯಾರಿಯರ‍್ ಮೀಲ್ಸ್ ಕಾನ್ಸೆಪ್ಟ್ ಅನ್ನು ಪ್ರಾರಂಭ ಮಾಡಬಾರದು?ಹೇಗಿದ್ದರೂ ರುಚಿ ರುಚಿಯಾಗಿ ಅಡುಗೆ ಮಾಡುತ್ತಿಯಾ.”ಎಂದಾಗ ಅದುವರೆಗೂ ನನ್ನ ತಲೆಯಲ್ಲಿ ಯೋಚಿಸದ ವಿಷಯವೊಂದು ತಲೆಯಲ್ಲಿ ಹೊಕ್ಕಿತು.ಅದನ್ನೇ ಯೋಚಿಸುತ್ತಾ ಅಡುಗೆ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ.ನನ್ನ ಗೆಳತಿಯಂತೆ ನಮ್ಮ ಮನೆಯ ನೆರೆಮನೆಯಾಕೆಯೂ ಒಮ್ಮೆ ನನ್ನಲ್ಲಿ “ನೀವೇನಾದರೂ ಮನೆಯಲ್ಲೇ ಅಡುಗೆ ಮಾಡಿ ಕ್ಯಾರಿಯರ್ ಮೀಲ್ಸ್ ತಯಾರಿಸಿ ಕೊಡುವುದಾದರೆ ನಾನು ಮೊದಲು ನಿಮ್ಮ ಗಿರಾಕಿಯಾಗುತ್ತೇನೆ”ಎಂದಿದ್ದರು.ಅವರ ಮಾತಿಗೂ ನಾನೇನು ಹೇಳಿರಲಿಲ್ಲ.ಪುನಃ ಇನ್ನೊಬ್ಬ ಗೆಳತಿ ನನ್ನಲ್ಲಿ “ಈಗ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ … Read more

ಮನೆ ಖಾಲಿಯಿದೆ: ವೇದಾವತಿ ಹೆಚ್. ಎಸ್.

ಮಧ್ಯಾಹ್ನದ ಬಿರಿ ಬಿಸಿಲಿನಲ್ಲಿ ಸುಮ ಮೂರು ವರ್ಷದ ಮಗುವನ್ನು ಜೊತೆಯಲ್ಲಿ ಕರೆದುಕೊಂಡು ನಮ್ಮ ಮನೆಗೆ ಬಂದಿದ್ದಳು.ಅವಳ ಮುಖ ಬಿಸಿಲಿನ ತಾಪಕ್ಕೆ ಕೆಂಪು ಕೆಂಪಾಗಿ ಬಾಡಿ ಹೋಗಿತ್ತು.ಅವಳನ್ನು ಮನೆಯ ಒಳಗೆ ಬರ ಮಾಡಿಕೊಂಡು ಕುಳಿತು ಕೊಳ್ಳಲು ಹೇಳಿ ಪ್ಯಾನನ್ನು ಹಾಕಿ ನಿಂಬೆ ಹಣ್ಣಿನ ಜ್ಯೂಸ್ ಮಾಡಲು ಅಡುಗೆ ಮನೆಯ ಕಡೆಗೆ ಹೋದೆ. ಜ್ಯೂಸನ್ನು ಮೆಲ್ಲನೆ ಹೀರುತ್ತಾ ತನ್ನ ಸಂಕಟ ಹೇಳಲು ಪ್ರಾರಂಭ ಮಾಡಿದಳು. “ಈ ಬೆಂಗಳೂರು ಎಂಬ ಮಹಾನಗರದಲ್ಲಿ ಒಂದು ನೆಟ್ಟಗೆ ಮನೆಗಳು ಬಾಡಿಗೆಗೆ ಸಿಗುತ್ತಿಲ್ಲ. ಒಂದು ಸರಿಯಾಗಿದ್ದರೆ … Read more

ಜೀರಾ ರೈಸ್ ಮತ್ತು ದಾಲ್ ಫ್ರೈ ರೆಸಿಪಿ: ವೇದಾವತಿ ಹೆಚ್. ಎಸ್.

1.ಜೀರಾ ರೈಸ್.(ರೆಸ್ಟೋರೆಂಟ್ ಸ್ಟೈಲ್) ಬೇಕಾಗುವ ಸಾಮಾಗ್ರಿಗಳು: ಬಾಸುಮತಿ ಅಕ್ಕಿ 1ಕಪ್ ಎಣ್ಣೆ 1ಚಮಚ ಉಪ್ಪು 1/2ಚಮಚ ತುಪ್ಪ 2ಚಮಚ ಜೀರಿಗೆ 2ಚಮಚ ಕೊತ್ತಂಬರಿ ಸೊಪ್ಪು ಸ್ವಲ್ಪ ಅಕ್ಕಿ ಬೇಯಿಸಲು ನೀರು 5ಕಪ್ ತಯಾರಿಸುವ ವಿಧಾನ: ಬಾಸುಮತಿ ಅಕ್ಕಿಯನ್ನು 20ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಾಣಲೆಯಲ್ಲಿ ಐದು ಕಪ್ ನೀರನ್ನು ಹಾಕಿ. ಈ ನೀರಿಗೆ ಉಪ್ಪು ಮತ್ತು ಎಣ್ಣೆಯನ್ನು ಹಾಕಿ ನೀರನ್ನು ಕುದಿಸಿ. ನಂತರ ನೆನೆಸಿ ಕೊಂಡ ಅಕ್ಕಿಯ ನೀರನ್ನು ತೆಗೆದು ಕುದಿಯುವ ನೀರಿಗೆ ಹಾಕಿ. ಎಂಟರಿಂದ ಹತ್ತು … Read more

ವೆಜ್ ಬಿರಿಯಾನಿ ಮತ್ತು ತರಕಾರಿ ರಾಯಿತಾ: ವೇದಾವತಿ ಹೆಚ್.ಎಸ್.

1.ವೆಜ್ ಬಿರಿಯಾನಿ. ಬೇಕಾಗುವ ಸಾಮಾಗ್ರಿಗಳು: ತುಪ್ಪ ನಾಲ್ಕು ಚಮಚ ಪಲಾವ್ ಎಲೆ ಎರಡು ಚಕ್ಕೆ ಒಂದಿಂಚು ಸ್ಟಾರ್ ಅನೈಸ್ ಒಂದು ಲವಂಗ ಆರು ಏಲಕ್ಕಿ ನಾಲ್ಕು ಕಾಳುಮೆಣಸು ಒಂದು ಚಮಚ ಜೀರಿಗೆ ಒಂದು ಚಮಚ ಈರುಳ್ಳಿ ಎರಡು/ಕತ್ತರಿಸಿ ಕೊಳ್ಳಿ. ಬೆಳ್ಳುಳ್ಳಿ ಪೇಸ್ಟ್ ಒಂದು ಚಮಚ ಹುರುಳಿ ಕಾಳಿ ಆರು/ಒಂದಿಂಚಿಗೆ ಕತ್ತರಿಸಿ ಕೊಳ್ಳಿ ಹೂಕೋಸು ಹತ್ತು ಎಸೆಳು ಬಟಾಣಿ ಅರ್ಧ ಕಪ್ ಕ್ಯಾರೆಟ್ ಒಂದು/ಒಂದಿಂಚಿಗೆ ಕತ್ತರಿಸಿ. ಆಲೂಗಡ್ಡೆ ಎರಡು/ಒಂದಿಂಚಿಗೆ ಕತ್ತರಿಸಿ ಪನ್ನೀರ್ 200ಗ್ರಾಂ/ಚೌಕಾಕಾರವಾಗಿ ಒಂದೇ ರೀತಿಯಲ್ಲಿ ಕತ್ತರಿಸಿ. ಸಿಹಿ … Read more

ಯಾವ ವೃತ್ತಿಗೆ ಅತಿ ಹೆಚ್ಚು ವೇತನ ಸಿಗಬೇಕು ಮತ್ತು ಏಕೆ?: ವೇದಾವತಿ ಹೆಚ್. ಎಸ್.

ಈ ಪ್ರಶ್ನೆಯನ್ನು ವಿಶ್ವಸುಂದರಿ ಸ್ಫರ್ಧೆಯಲ್ಲಿ “ಮಾನುಷಿ ಛಿಲ್ಲರ್”ಗೆ ಕೇಳಿದ ಪ್ರಶ್ನೆ ಆಗಿತ್ತು. ಇದಕ್ಕೆ ಉತ್ತರವಾಗಿ “ನಾನು ನಮ್ಮ ಅಮ್ಮನಿಗೆ ತುಂಬಾ ಹತ್ತಿರವಾಗಿರುವುದರಿಂದ,ನನ್ನ ಪ್ರಕಾರ ತಾಯಿಗೇ ಆತಿ ಹೆಚ್ಚಿನ ಗೌರವ ಸಿಗಬೇಕು. ವೇತನ ಅಂದರೆ,ಅದು ಹಣ ಮಾತ್ರವಲ್ಲ,ಬೇರೆಯವರಿಗೆ ತೋರಿಸುವ ಪ್ರೀತಿ-ಗೌರವವೂ ಕೂಡ ಆ ಲೆಕ್ಕಕ್ಕೆ ಬರುತ್ತದೆ. ಅಮ್ಮನೇ ನನ್ನ ಜೀವನದ ದೊಡ್ಡ ಸ್ಫೂರ್ತಿ.ಎಲ್ಲ ತಾಯಂದಿರೂ ತಮ್ಮ ಮಕ್ಕಳಿಗಾಗಿ ತುಂಬಾ ತ್ಯಾಗ ಮಾಡುತ್ತಾರೆ,ಅತಿ ಹೆಚ್ಚು ವೇತನ, ಗೌರವ ಮತ್ತು ಪ್ರೀತಿ ಸಿಗಬೇಕಾಗಿದ್ದು ತಾಯಿಂದಿರಿಗೆ.”ಈ ಉತ್ತರದಿಂದ ಇಡೀ ವಿಶ್ವಕ್ಕೆ ವಿಶ್ವ ಸುಂದರಿ … Read more

ಕಿರುಲೇಖನಗಳು: ವೇದಾವತಿ ಎಚ್.ಎಸ್.

ಚಿಕ್ಕವರಿದ್ದಾಗ ಎಲ್ಲಾ ಮಕ್ಕಳು ಸಾಮಾನ್ಯವಾಗಿ ಆಡುತ್ತಿದ್ದ ಆಟ ಕಣ್ಣಾಮುಚ್ಚಾಲೆ. ತಂಡದಲ್ಲಿ ಯಾವುದಾದರೂ ಒಂದು ಮಗು ಕಣ್ಣು ಮುಚ್ಚಿಕೊಂಡು ಹಾಡನ್ನು ಹೇಳುವುದು ಸಾಮಾನ್ಯವಾಗಿರುತ್ತದೆ.ಆ ಹಾಡು ಒಬ್ಬರ ಬಾಯಿಂದ ಇನ್ನೋಬ್ಬರ ಬಾಯಿಗೆ ಆಟದ ಮುಖಾಂತರವಾಗಿ ಬಂದಿದೆ. ಈ ಹಾಡಿನ ಒಳಾರ್ಥ ಮಾತ್ರ ಮಕ್ಕಳಿಗೆ ತಿಳಿಸಿದವರು ವಿರಳ ಎನ್ನಬಹುದು. “ಕಣ್ಣಾ ಮುಚ್ಚೇ…ಕಾಡೇ ಗೂಡೇ…ಉದ್ದಿನ ಮೂಟೆ…ಉರುಳೇ ಹೋಯ್ತು…ನಮ್ಮಯ ಹಕ್ಕಿ…ನಿಮ್ಮಯ ಹಕ್ಕಿ…ಬಿಟ್ಟೇ ಬಿಟ್ಟೆ…”ಕೊನೆಯಲ್ಲಿ “ಕೂ”ಎಂದು ಕಣ್ಣು ಮುಚ್ಚಿಕೊಂಡ ಮಗು,ಕಣ್ಣು ಬಿಟ್ಟು ಕೊಂಡು ಬೇರೆಯವರನ್ನು ಹುಡುಕಿಕೊಂಡು ಹೋಗುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದರ ಅರ್ಥ ಹೀಗಿದೆ, … Read more

ಹುರುಳಿ ಕಾಳಿನ ಬಸ್ಸಾರು, ಹುರುಳಿ ಕಾಳಿನ ಉಸುಲಿ ರೆಸಿಪಿ: ವೇದಾವತಿ ಹೆಚ್. ಎಸ್.

ಹುರುಳಿ ಕಾಳು ದ್ವಿದಳ ಧ್ಯಾನವಾಗಿದ್ದು, ಅನೇಕ ರೀತಿಯ ಆರೋಗ್ಯ ಸಂಗಾತಿ ಗುಣ ಹೊಂದಿದೆ. ಬಹಳ ರುಚಿಯಾದ ಹಾಗೂ ಪೋಷಕಾಂಶಯುಕ್ತ ಆಹಾರ ಪದಾರ್ಥಗಳಲ್ಲೊಂದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ವಿಟಮಿನ್, ಜೀವಸತ್ವ, ಖನಿಜ, ಕಬ್ಬಿಣ, ಫಾಸ್ಪರಸ್, ಕ್ಯಾಲ್ಸಿಯಂ ಹೊಂದಿದೆ. 1.ಹುರುಳಿ ಕಾಳಿನ ಬಸ್ಸಾರು. ಬೇಕಾಗುವ ಸಾಮಾಗ್ರಿಗಳು: ಮೊಳಕೆ ಕಟ್ಟಿದ ಹುರುಳಿ ಕಾಳು 1ಕಪ್ ತೆಂಗಿನ ತುರಿ ಅರ್ಧ ಕಪ್/ಆಗಲೇ ತುರಿದದ್ದು. ಹುಣುಸೆ ಹಣ್ಣಿನ ರಸ ಸ್ವಲ್ಪ ಜೀರಿಗೆ ಒಂದು ಟೀ ಚಮಚ ಸಾಸಿವೆ ಅರ್ಧ ಟೀ ಚಮಚ ಇಂಗು ಚಿಟಿಕೆ … Read more

ಬೆಸುಗೆ: ವೇದಾವತಿ ಹೆಚ್.ಎಸ್.

ಪಡುವಣದಂಚಿನಲ್ಲಿ ದಿನಕರನು ಮುಳುಗುತ್ತಿರುವ ಸಮಯದಲ್ಲಿ ಕಟಕಿಯಿಂದ ದೂರಾಚೆಯ ಗಿರಿ ಶಿಖರವನ್ನು ದಿಟ್ಟಿಸಿ ನೋಡುತ್ತಿದ್ದಾಗ ರಾಷ್ಟ್ರಕವಿ ಶಿವರುದ್ರಪ್ಪನವರ ಕವಿತೆ ನೆನಪಾಗುತ್ತದೆ. “ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ” ಎಷ್ಟೊಂದು ಅರ್ಥವಿದೆ. ಇಲ್ಲೋಬ್ಬರು ನಮ್ಮಲ್ಲಿ ಕೇಳುತ್ತಿದ್ದರು. “ಎಷ್ಟು ವರ್ಷವಾಯಿತು ಕಾರು ತೆಗೆದುಕೊಂಡು?ಇನ್ನೂ ಹೊಸದಾಗಿ ತೆಗೆದುಕೊಂಡು ಬಂದ ಹಾಗೆ ಇದೆಯಲ್ಲ?ವರ್ಷಕ್ಕೆ ಎಷ್ಟು ಬಾರಿ ಸರ್ವೀಸ್ ಮಾಡುತ್ತೀರಾ? ನಮ್ಮ ಕಾರು ನೋಡಿ ಹೇಗಿದೆಯೆಂದು. ಕಂಪನಿ ಚೆನ್ನಾಗಿಲ್ಲ. ಲಕ್ಷಗಟ್ಟಲೆ ಹಣ ಕೊಟ್ಟು … Read more

ಕಾರ್ನ್ ಪಲಾವ್ ಮತ್ತು ಕರಬೂಜದ ಹಣ್ಣಿನ ಮಿಲ್ಕ್ ಶೇಕ್: ವೇದಾವತಿ ಹೆಚ್.ಎಸ್.

1.ಕಾರ್ನ್ ಪಲಾವ್. (Corn Pulao) ಮಕ್ಕಳಿಂದ ದೊಡ್ಡವರವರೆಗೂ ಇಷ್ಟವಾಗುವ ಕಾರ್ನ್ ಪಲಾವ್ ಆರೋಗ್ಯಕರವಾದ ಮತ್ತು ರುಚಿಕರವಾದ ಪಲಾವ್ ನಲ್ಲಿ ಒಂದಾಗಿದೆ. ಕಾರ್ನ್ ಪಲಾವ್ ವೊಂದಿಗೆ ರಯತಾ, ವೆಜ್ ಕೂರ್ಮ ಹಾಕಿ ಸವಿಯಲು ರುಚಿಯಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು: ಬಾಸುಮತಿ ಅಕ್ಕಿ ಒಂದು ಕಪ್ ಕಾರ್ನ್ ಒಂದು ಕಪ್ ಈರುಳ್ಳಿ ಎರಡು/ಚಿಕ್ಕದಾಗಿ ಕತ್ತರಿಸಿ. ಟೊಮೆಟೊ ಎರಡು/ಚಿಕ್ಕದಾಗಿ ಕತ್ತರಿಸಿ ಕ್ಯಾರೆಟ್, ಬೀನ್ಸ್ ಒಂದು ಕಪ್/ಚಿಕ್ಕದಾಗಿ ಕತ್ತರಿಸಿ ಕ್ಯಾಪ್ಸಿಕಂ ಒಂದು/ಚಿಕ್ಕದಾಗಿ ಕತ್ತರಿಸಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಟೀ ಚಮಚ ಗರಂಮಸಾಲೆ ಅರ್ಧ … Read more

ವೃದ್ದಾಪ್ಯದಲ್ಲಿ ಮಕ್ಕಳ ಜವಾಬ್ದಾರಿ: ವೇದಾವತಿ ಹೆಚ್. ಎಸ್.

ಹಳ್ಳಿಯಿಂದ ಡೆಲ್ಲಿಯವರೆಗೆ ವೃದ್ದಶ್ರಾಮಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಕಾರಣ ಬೇಕಾದಷ್ಟು ಇರಬಹುದು. ಇಂದಿನ ಮಕ್ಕಳ ನಡವಳಿಕೆ,ಹೊಂದಾಣಿಕೆಯ ಕೊರತೆಯಿಂದಲೂ ಇರಬಹುದು. ಮೂವತ್ತು ವರ್ಷಗಳ ಹಿಂದೆ ತುಂಬಿದ ಕುಟುಂಬ ಇರುತ್ತಿದ್ದ ದಿನಗಳವು. “ಮನೆ ತುಂಬಾ ಮಕ್ಕಳಿರಲವ್ವ”ಎನ್ನುವ ಕಾಲವಾಗಿತ್ತು. ಒಂದು ಮನೆಯಲ್ಲಿ ಐದಾರು ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಮಕ್ಕಳಿಗೆ ತಂದೆ ತಾಯಿಯು ಮನೆಯಲ್ಲಿ ಸಂಸ್ಕಾರವನ್ನು ಕಲಿಸುತ್ತಿದ್ದರು. “ಮನೆಯೇ ಮೊದಲ ಪಾಠ ಶಾಲೆ”ಎಂಬ ಹಾಗೆ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಬೆರೆತು ಬಾಳಬೇಕು ಎನ್ನುವುದು ಮನೆಯ ಜನರಿಂದಲೇ ನೋಡಿ … Read more

ನಿರಂತರ ಪರಿಶ್ರಮದಿಂದ “ಯಶಸ್ಸು”ಗಳಿಸಲು ಸಾಧ್ಯ: ವೇದಾವತಿ ಹೆಚ್. ಎಸ್.

ಪ್ರಪಂಚದಲ್ಲಿ “ಯಶಸ್ಸು”ಎಂಬುದು ಯಾರಿಂದಲೂ ಎರವಲಾಗಿ ಪಡೆಯಲು ಸಾಧ್ಯವಿಲ್ಲ. ನಾವೇ ಕಷ್ಟಪಟ್ಟು ಗುರಿಯನ್ನು ಮುಟ್ಟಿದರೆ ಮಾತ್ರ “ಯಶಸ್ಸು”ನಮ್ಮ ಪಾಲಿಗೆ ಒಲಿಯುತ್ತದೆ. ಮನುಷ್ಯನ ಜೀವನದಲ್ಲಿ ಹಣ, ಕಾರು, ಬಂಗಲೆ, ಅಥವಾ ಬೇರೆಯವರಿಗೆ ಆಫೀಸ್ನಲ್ಲಿ ಕೆಲಸವನ್ನೂ ಕೊಡಿಸಬಹುದು! ಅದರ ಮುಂದಿನ ಗುರಿ, ಜೀವನದಲ್ಲಿ ಸಾಧನೆ ರೂಪದಲ್ಲಿ ಮೆಟ್ಟಿಲು ಏರುವುದೇ “ಯಶಸ್ಸು”. ಯಶಸ್ಸು ಎಂಬುದು ಎಲ್ಲಾ ವಸ್ತುಗಳು ಸಿಗುವಷ್ಟು ಸುಲಭವಾಗಿ ಯಾರಿಗೂ ದೊರಕುವುದಿಲ್ಲ. ಅದನ್ನು ಜಾಣತನದಿಂದ ಸಂಪಾದಿಸಲು ಕಲಿಯಬೇಕು. ಹೊಂಡಾ’ಕಂಪನಿಯ ಹೆಸರನ್ನು ಯಾರು ತಾನೇ ಕೇಳಿಲ್ಲ? ಹೊಂಡಾ ಒಬ್ಬ ಸರಳ ಸ್ವಭಾವದ ವ್ಯಕ್ತಿಯಾಗಿದ್ದ. … Read more

ಹೊಸ ವರುಷದೊಂದಿಗೆ ಬೆಸೆಯಲಿ ಸ್ನೇಹ- ಸಂಬಂಧಗಳು: ವೇದಾವತಿ ಹೆಚ್. ಎಸ್.

ಮನುಷ್ಯನ ಜೀವನ ಎಷ್ಟೊಂದು ವಿಚಿತ್ರ. ಬೇಕು ಬೇಕು ಎನ್ನುತ್ತಾ ಸಾಗುವಾಗ ವಯಸ್ಸಿನ ಅರಿವು ಮರೆತು ಹೋಗುತ್ತದೆ. ಹೊಸ ವರ್ಷದ ಸಂತೋಷ ಒಂದು ಕಡೆ ಇದ್ದರೆ, ಈ ಹಿಂದಿನ ವರುಷಗಳು ಹೇಗೆ ಕಳೆದು ಹೋದವು ಎಂಬುದು ಮೆಲುಕು ಹಾಕುವುದು ಮರೆತಿರುತ್ತಾನೆ. ನಾಗಾಲೋಟದಲ್ಲಿ ಸಾಗುತ್ತಿರುವ ಜೀವನ ಯಾವಾಗಲೂ ನಾಳೆಯದನ್ನೇ ಯೋಚಿಸಿ ಜೀವನದಲ್ಲಿ ತನಗಾಗಿ ಬರುವಂತಹ ಇಂದಿನ ದಿನದ  ಸಂತೋಷವನ್ನು ಕಳೆದು ಕೊಳ್ಳುತ್ತಾನೆ. ಹಿಂದಿನ ಕಾಲದಲ್ಲಿ ಹಬ್ಬಗಳಲ್ಲಿ ಹೊಸ ವರ್ಷಗಳ ಆಚರಣೆಯನ್ನು ಮಾಡುವ ಸಂಪ್ರದಾಯವಿತ್ತು. ಮನೆಯವರೆಲ್ಲ ಒಂದೆಡೆ ಸೇರಿ ಸಂಭ್ರಮಿಸುತ್ತಿದ್ದ ದಿನಗಳವು. … Read more

ಜಾಲತಾಣಗಳೆಂಬ ಮಾಯಾಲೋಕ: ವೇದಾವತಿ ಹೆಚ್. ಎಸ್.

ಸ್ನೇಹಿತೆಯ ಪೋನ್ ಕರೆ ಬಂದಿತ್ತು. “ನಿನ್ನ ಪ್ರೊಫೈಲ್ ಪಿಕ್ಚರ್ ತುಂಬಾ ಚೆನ್ನಾಗಿದೆ, ಎಲ್ಲಿಗೆ ಹೋಗಿದ್ದೆ, ಭಾವಚಿತ್ರದ ಹಿಂಬದಿಗೆ ಕಾಣುತ್ತಿರುವ ಫಾಲ್ಸ್ ನಾನು ನೋಡ ಬೇಕು, ಯಾವ ಸ್ಥಳ ಎಂಬುದು ವಾಟ್ಸಾಪ್ ನಲ್ಲಿ ಅಡ್ರೆಸ್ ಹಾಕಿ ತಿಳಿಸು, ಫೇಸ್ಬುಕ್ನಲ್ಲಿ ಬೇಡ. ಅಲ್ಲಿ ಕಾಮೆಂಟ್ ಮಾಡಿದರೆ. . ಎಲ್ಲರಿಗೂ ಗೊತ್ತಾಗುತ್ತದೆ”ಎಂದು ಒಂದೇ ಉಸಿರಿನಲ್ಲಿ ಬೇಕಾದ ಮಾಹಿತಿಯನ್ನು ಕಲೆ ಹಾಕಿದಳು. ಎಲ್ಲಿ ನೋಡಿದರೂ ವಾಟ್ಸಾಪ್, ಫೇಸ್ಬುಕ್ ಗಳ ಬಗ್ಗೆ ಮಾತುಗಳು. ಹಳ್ಳಿಯಿಂದ ಡೆಲ್ಲಿಯವರೆಗೆ ಜಾಸ್ತಿಯಾಗಿ ಜನ ಬಳಕೆ ಮಾಡುವ ಜಾಲತಾಣಗಳು ಎಂದರೆ … Read more

ಹೆಣ್ಣೆಂದರೆ ಪ್ರೀತಿ, ನಂಬಿಕೆ, ಹೊಂದಾಣಿಕೆಯ ಅಮೋಘ ಶಕ್ತಿ: ವೇದಾವತಿ ಹೆಚ್. ಎಸ್.

ಅಮ್ಮ, ಮಗಳು, ಹೆಂಡತಿ ಮತ್ತು ಅತ್ತೆ ಈ ನಾಲ್ಕು ಒಂದು ಹೆಣ್ಣಿನ ಬಾಳಲ್ಲಿ ಸಹಜವಾಗಿಯೇ ನಡೆಯುವ ಕ್ರಿಯೆ. ಅದರೆ ವ್ಯತ್ಯಾಸ ಮಾತ್ರ ಬೆಟ್ಟದಷ್ಟು. ಅಮ್ಮ ಅಂದರೆ ಕರುಣಾಮಯಿ. ತನ್ನ ಮಕ್ಕಳ ಒಳತಿಗಾಗಿ ಮತ್ತು ಸಂಸಾರದ ಸುಖಕ್ಕಾಗಿ ಜೀವನದ ಜೊತೆ ಹಗಲು ಇರುಳು ಎನ್ನದೆ ದುಡಿದು ತನ್ನ ಕಷ್ಟಗಳು ಬೆಟ್ಟದಷ್ಟು ಇದ್ದರು ತೋರಿಸಿ ಕೊಳ್ಳದೆ ದುಡಿಯುವ ಮಹಾತಾಯಿ. ಮಕ್ಕಳೊಂದಿಗೆ ಮಕ್ಕಳಾಗಿ ಅವರ ಮನಸ್ಸುಗಳನ್ನು ಅರಿತು ಅವರ ಸುಖದುಃಖಗಳಲ್ಲಿ ಬಾಗಿಯಾಗಿ ತನ್ನ ಕಷ್ಟಗಳನ್ನು ಮನಸ್ಸಿನಲ್ಲಿ ನುಂಗಿ ಪ್ರೀತಿಯಿಂದ ಮಕ್ಕಳಿಗೆ ಸ್ಫಂದಿಸುವ … Read more