Facebook

Archive for the ‘ಪ್ರವಾಸ-ಕಥನ’ Category

ಗುಲ್ಬರ್ಗ ವೈಷ್ಣೋದೇವಿ ಮಂದಿರ: ವೈ. ಬಿ. ಕಡಕೋಳ

ಗುಲ್ಬರ್ಗ ಕರ್ನಾಟಕದ ಹೈದ್ರಾಬಾದ್ ಕರ್ನಾಟಕ ಎಂದು ಕರೆಸಿಕೊಂಡ ಜಿಲ್ಲೆಗಳನ್ನೊಳಗೊಂಡ ಜಿಲ್ಲಾ ಪ್ರದೇಶ. ಇದು ಬೆಂಗಳೂರಿನಿಂದ 613 ಕಿ. ಮೀ ಅಂತರದಲ್ಲಿದ್ದು ಶರಣಬಸವೇಶ್ವರ ಅಪ್ಪ ಅವರಿಂದ ಪ್ರಸಿದ್ದಿ ಪಡೆದದ್ದು. ಬೀದರ ಶ್ರೀರಂಗಪಟ್ಟಣ ಹೆದ್ದಾರಿಯ ಫಲವಾಗಿ ಸಾಕಷ್ಟು ವಾಹನ ಸೌಕರ್ಯದ ಜೊತೆಗೆ ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಸಾಗುವ ರೈಲುಗಳು ಗುಲ್ಬರ್ಗ ಮೂಲಕ ಹಾಯ್ದು ಹೋಗುವ ಮೂಲಕ ಇದು ಸಾರಿಗೆ ಸೌಕರ್ಯಕ್ಕೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಇಸ್ಲಾಮಿಕ್ ಶೈಲಿಯ ಗುಂಬಜ್ಗಳು. ಬುದ್ದ ವಿಹಾರ ಮಂದಿರ. ಶರಣ ಬಸವೇಶ್ವರ ಅಪ್ಪ […]

ಅಲಪಿಯ ಹೌಸ್ ಬೋಟ್ ಎಂಬ ಸ್ವರ್ಗದತುಣುಕು!: ಭಾರ್ಗವ ಎಚ್ ಕೆ

ಸಮುದ್ರದದಂಡೆಗೆ ಬೌಂಡರಿ ಗೆರೆಗಳಂತೆ ಕಾಣುವ ಕಬ್ಬಿಣದ ರೈಲು ಹಳಿಗಳು!. ಅದರ ಮೇಲೆ ಎಡೆಬಿಡದೆ ಅತ್ತಿಂದಿತ್ತ ಓಡಾಡುವ ಕೊಂಕಣ ರೈಲುಗಳು. ಆ ಹಳಿಯ ದಾರಿಯಲ್ಲೊಂದು ಅಲಪಿ ಎಂಬ ಕುಟ್ಟ ನಾಡು!. ರೈಲಿನಲ್ಲಿ ಪಯಣಿಸುವಾಗ ಒಂದು ದಿಕ್ಕಿನಲ್ಲಿ ಮೀನು ಹಿಡಿಯುವ ಬೋಟ್ ಗಳು ಕಣ್ಣಿಗೆ ಕಂಡರೆ, ಇನ್ನೊಂದು ದಿಕ್ಕಿನಲ್ಲಿ ವೈಭವದ ಹವಾನಿಯಂತ್ರಿತ ನಯನ ಮನೋಹರ ಹೌಸ್ ಬೋಟ್ ಗಳ ಇರುವೆ ಸಾಲು! ಹೆಂಡತಿ, ಮಗಳೊಂದಿಗೆ ಕುಟುಂಬ ಸಮೇತ ದೇವರ ನಾಡಿನ ಪ್ರಸಿದ್ಧ ಹೌಸ್ ಬೋಟ್ ಪ್ರವಾಸಿ ತಾಣವಾದ ಅಲಪಿ ಊರಿಗೆ […]

ಕೃಷ್ಣೆಯಿಂದ ಸಾಗಿ ಕೃಷ್ಣೆಯವರೆಗೆ: ಶ್ರೀ.ಎಂ.ಎಚ್.ಮೊಕಾಶಿ

ಒಂದು ದಿನ ಸಂಜೆ ತಂಪಾದ ಗಾಳಿ ಬೀಸುತ್ತಿತ್ತು, ಆಕಾಶದಲ್ಲಿ ಮೋಡಕವಿದ ವಾತಾವರಣವಿತ್ತು. ಇಂಥ ಚುಮುಚುಮು ಚಳಿಯಲ್ಲಿ ನಾವೆಲ್ಲ ನಾಲ್ಕೈದು ಗೆಳೆಯರು ಕೂಡಿ ಹರಟೆ ಹೊಡೆಯುತ್ತಿದ್ದೆವು. ಕೆಲ ಸಮಯದ ನಂತರ ಗೆಳೆಯರೆಲ್ಲರೂ ಕೂಡಿ ಟೀ ಕುಡಿಯಲು ಹೋಟೆಲ್ ಗೆ ಹೋದೆವು. ಅಲ್ಲಿ ಹಲವಾರು ವಿಷಯಗಳ ಚರ್ಚೆನಡೆಸುತ್ತಿರುವಾಗ ಗೆಳೆಯನೊಬ್ಬನು ಇಂಥ ಒಳ್ಳೆಯ ಕ್ಲೈಮೇಟ್ ನಲ್ಲಿ ಯಾಕೆ ನಾವೆಲ್ಲರೂ ಒಂದೆರಡು ದಿನ ಟೂರ್ ಗೆ ಹೋಗಬಾರದು ಎಂದನು. ಅದಕ್ಕೆ ಒಬ್ಬ ಗೆಳೆಯನು ಸಧ್ಯ ಮಳೆಗಾಲದಲ್ಲಿ ಟೂರ್ ಬೇಡ ಎಂದನು. ಆಗ ಇನ್ನೊಬ್ಬ […]

ಹಿಮಾಲಯವೆಂಬ ಸ್ವರ್ಗ (ಕೊನೆಯ ಭಾಗ): ವೃಂದಾ ಸಂಗಮ್

ಇಲ್ಲಿಯವರೆಗೆ ಮುಂದೆ ರಾಜಘಾಟ್ ಗೆ ತೆರಳಿದೆವು.  ದೆಹಲಿಯ ಸುಡು ಬಿಸಿಲಿಗೆ ನಾವಾಗಲೇ ಸುಸ್ತು ಹೊಡೆದಿದ್ದೆವು. ಹೆಚ್ಚಿನವರು ಗಾಡಿಯಲ್ಲಿಯೇ ಕುಳಿತಿದ್ದರು. ಮಹಾತ್ಮ ಗಾಂಧಿಯವರ ಸಮಾಧಿಯ ಮುಂದೆ ನಿಂತಾಗ ನನಗರಿವಿಲ್ಲದೆಯೇ ತ್ಯಾಗ, ಬಲಿದಾನಗಳ ನಮ್ಮ ಸ್ವಾತಂತ್ರ್ಯ ಚಳುವಳಿಯ ಹರಿಕಾರ ಗಾಂಧೀಜಿ. ಅಹಿಂಸೆ, ಸತ್ಯ ಎಂಬ ಎರಡು ಪ್ರಬಲವಾದ  ಅಸ್ತ್ರಗಳಿಂದ   ಬ್ರಿಟಿಷ್ ಸಾಮ್ರಾಜ್ಯವನ್ನು ಬಗ್ಗಿಸಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಚೇತನ. ಅಲ್ಲಿ ನಿಂತಾಗ ಮೂಡಿದ್ದು ಧನ್ಯತೆಯ ಕುಸುಮಗಳು – ಕಣ್ಣಲ್ಲಿ ಎರಡು ಹನಿಗಳು. ಹಿಂದಿರುಗುವಾಗ, ದಾರಿಯಲ್ಲಿ ಕಂಡು ಬಂದದ್ದು ಕಿಸಾನ್ ಘಾಟ್, […]

ಹಿಮಾಲಯವೆಂಬ ಸ್ವರ್ಗ (ಭಾಗ 9): ವೃಂದಾ ಸಂಗಮ್

ಇಲ್ಲಿಯವರೆಗೆ ಮಥುರ ಶ್ರೀಕೃಷ್ಣನ ಜನ್ಮಸ್ಥಾನ. ಈ ಪ್ರದೇಶವನ್ನು ಬ್ರಜ್‌ಭೂಮಿ ಎಂದು ಕರೆಯುತ್ತಾರೆ. ಶ್ರೀಕೃಷ್ಣನ ಕಥೆಗಳು ಹಾಗು ಸ್ಥಳ ಪುರಾಣಗಳ ಬಗ್ಗೆಯೂ ನಾನೇನೇ ಹೇಳಿದರು ಅದು ಸಂಪೂರ್ಣವಾಗಲು ಸಾಧ್ಯವಿಲ್ಲ. ಮನುವಿನ ಮೊಮ್ಮಗ ಧ್ರುವ ತನ್ನ ತಾಯಿಯ ಸವತಿ ಸುರುಚಿ ಕೊಡುತ್ತಿದ್ದ ಹಿಂಸೆ ಅನುಭವಿಸುತ್ತಿದ್ದಾಗ ನಾರದರ ಉಪದೇಶದಂತೆ ಮಧುವನದಲ್ಲಿ ತಪಸ್ಸನ್ನು ಆಚರಿಸುತ್ತಾನೆ. ಇಲ್ಲಿ ನಿತ್ಯ ಹರಿಸಾನ್ನಿಧ್ಯವಿದೆ ಎಂದು ನಾರದರು ಧ್ರುವನಿಗೆ ತಿಳಿಸುತ್ತಾರೆ. "ಪುಣ್ಯಂ ಮಧುವನಂ ಯತ್ರ ಸಾನ್ನಿಧ್ಯಂ ನಿತ್ಯದಾ ಹರಿಃ ". ಮುಂದೆ ಮಧು ಎಂಬ ರಾಕ್ಷಸ ಇಲ್ಲಿ ಮಧುರಾ […]

ಹಿಮಾಲಯವೆಂಬ ಸ್ವರ್ಗ (ಭಾಗ 8): ವೃಂದಾ ಸಂಗಮ್

ಇಲ್ಲಿಯವರೆಗೆ  ರಾತ್ರಿ ಹರಿದ್ವಾರದಲ್ಲಿ ನಮ್ಮ ಕೊಚ ಕೊಚ ಕೊಯಾಂ ಕೊಯಾಂ ನೆಂಟರು, ಬಡೇ ಹನುಮಾನ ಮಂದಿರದಲ್ಲಿ, ನಮಗಿಂತ ಮೊದಲೇ. ಅವರೆಲ್ಲ ಬದರಿಯ ವಿಷಯ ಮಾತಾಡುತ್ತಿದ್ದರು. ನನ್ನ ಪಕ್ಕದಲ್ಲಿ ಊಟಕ್ಕೆ ಕುಳಿತವಳು, ಎದುರಿಗೆ ಇದ್ದವಳಿಗೆ ಆ ದಿನ ನಡೆದ ಘಟನೆಯ ಬಗ್ಗೆ ತನ್ನ ಗಂಡನ ಪ್ರಶಂಸೆ ಮಾಡುತ್ತಿದ್ದಳು. ನನಗೆ ಬದರಿ ದೇವಸ್ಥಾನದ ಮುಂದೆ ಫೋಟೋ ತೆಗೆಸಿಕೊಳ್ಳಬೇಕೆಂದಿತ್ತು. ಆದರೆ ಆತ ಬೇಡ ಎಂದು ಬಿಟ್ಟ. ನನಗೆ ತುಂಬಾ ಬೇಜಾರಾಯಿತು. ಆಮೇಲೆ ಎಲ್ಲರೂ ಫೋಟೋ ತೆಗೆಸಿಕೊಂಡಿದ್ದು ನೋಡಿ, ಬಾ ನಾವೂ ತೆಗೆಸಿಕೊಳ್ಳೋಣ […]

ಹಿಮಾಲಯವೆಂಬ ಸ್ವರ್ಗ (ಭಾಗ 7): ವೃಂದಾ ಸಂಗಮ್

ಇಲ್ಲಿಯವರೆಗೆ  ಬದರೀಕ್ಷೇತ್ರವು ಉತ್ತರ ಪ್ರದೇಶದ (ಈಗ ಉತ್ತರಾಂಚಲ್) ಚಮೋಲಿ ಜಿಲ್ಲೆಯ ಗಡ್‌ವಾಲ್ ಪ್ರದೇಶದಲ್ಲಿ ಅಲಕ್‌ನಂದಾ ನದಿಯ ತೀರದಲ್ಲಿದೆ. ಈ ಕ್ಷೇತ್ರವು ಸಮುದ್ರ ಮಟ್ಟಕ್ಕಿಂತ ಸುಮಾರು 103೦೦ ಅಡಿ ಎತ್ತರದಲ್ಲಿದ್ದು, ಊರು ಹಾಗೂ ದೇವಾಲಯದವರೆಗೂ ವಾಹನ ಚಲಿಸುವ ರಸ್ತೆಯಿದೆ. ನರ ಮತ್ತು ನಾರಾಯಣ ಎಂಬ ಎರಡು ಪರ್ವತಗಳು ಈ ಕಣಿವೆ ಪ್ರದೇಶದ ಕಾವಲುಗಾರರಂತೆ ನಿಂತಿವೆ. ಹಿನ್ನೆಲೆಯಲ್ಲಿ 215೦೦ ಅಡಿ ಎತ್ತರದ ಘನ ಗಾಂಭೀರ್ಯ ನೀಲಕಂಠ ಪರ್ವತ ತನ್ನ ತಲೆ ಮೋಡಗಳಲ್ಲಿ ಮುಚ್ಚಿಕೊಂಡು ನಿಂತಿದೆ. ದೇವಾಲಯದ ಮುಂದೆ ಕೊರೆಯುವ ಅಲಕ್‌ನಂದ […]

ಹಿಮಾಲಯವೆಂಬ ಸ್ವರ್ಗ (ಭಾಗ 6): ವೃಂದಾ ಸಂಗಮ್

ಇಲ್ಲಿಯವರೆಗೆ  ಸಾಯಂಕಾಲ ಹೃಷಿಕೇಶಕ್ಕೆ. ಇದು ಭಾರತದ ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಹಿಮಾಲಯಕ್ಕೆ ಹೆಬ್ಬಾಗಿಲೆನಿಸಿಕೊಳ್ಳುತ್ತದೆ ಹೃಷಿಕೇಶ ವಿಷ್ಣುವಿನ ಒಂದು ಹೆಸರು. ಇದರ ಅರ್ಥ ಇಂದ್ರಿಯಗಳ ಒಡೆಯ ಎಂಬುದಾಗಿದೆ. ಈ ಸ್ಥಳದಲ್ಲಿ ರೈಭ್ಯ ಋಷಿಯ ತಪಸ್ಸಿಗೆ ಒಲಿದು ವಿಷ್ಣು ಹೃಷಿಕೇಶನಾಗಿ ಪ್ರತ್ಯಕ್ಷನಾದನೆಂದು ಒಂದು ಕಥೆಯಿದೆ.  ಸ್ಕಂದ ಪುರಾಣದಲ್ಲಿ ಈ ಸೀಮೆಯು ಕುಬ್ಜಾಮ್ರಕ ಎಂದು ಹೆಸರಿಸಲ್ಪಟ್ಟಿದೆ. ಐತಿಹಾಸಿಕವಾಗಿ ಹೃಷಿಕೇಶ ಕೇದಾರ ಖಂಡದ ಭಾಗ. ಇಂದಿನ ಗಢ್ವಾಲ್ ಪ್ರದೇಶವು ಹಿಂದೆ ಕೇದಾರ ಖಂಡ ವೆಂದು ಕರೆಯಲ್ಪಡುತ್ತಿತ್ತು.         […]

ಹಿಮಾಲಯವೆಂಬ ಸ್ವರ್ಗ (ಭಾಗ 5): ವೃಂದಾ ಸಂಗಮ್

ಇಲ್ಲಿಯವರೆಗೆ  ಅದು ಥಮ್ಸಾ ನದಿಯಂದು ಹೇಳಿದರು. ಲಂಡನ್ ನಗರದ ಥೇಮ್ಸ ನದಿಯನ್ನು ನೆನಪಿಸಿಕೊಂಡು ಥಮ್ಸಾ ನದಿಯನ್ನು ನೋಡಿದೆವು. ಭಾರತದಲ್ಲಿಲ್ಲದ್ದು ಲಂಡನ್ ನಲ್ಲೇನಿದೆ.  ದೇವಸ್ಥಾನದ ಸುತ್ತಲು ಹುಲ್ಲು ಚಿಕ್ಕ ಚಿಕ್ಕ ಗುಡ್ಡೆಯಾಗಿ ಬೆಳೆದಿತ್ತು. ಸೀತೆ ಭೂಮಿಯ ಒಳಗೆ ಸೇರುವ ಸಮಯದಲ್ಲಿ, ಸೀತೆಯನ್ನು ಮೇಲೆತ್ತಲು ಆಕೆಯ ಕೂದಲನ್ನು ಹಿಡಿದು ಎಳೆದರಂತೆ ರಾಮ ಲಕ್ಷ್ಮಣರು. ಅದು ಹಿಡಿ ಹಿಡಿಯಾಗಿ ಅವರ ಕೈಲ್ಲಿಯೇ ಉಳಿಯಿತಂತೆ. ಅದೇ ಈ ಹುಲ್ಲು. ಅದನ್ನು ಈಗ ದನ ಕರುಗಳೂ ತಿನ್ನಲಾರವು ಎಂದರು. ಈಗ ಕೆಲ ದಿನಗಳ ಹಿಂದೆ […]

ಹಿಮಾಲಯವೆಂಬ ಸ್ವರ್ಗ (ಭಾಗ 4): ವೃಂದಾ ಸಂಗಮ್

ಇಲ್ಲಿಯವರೆಗೆ ನಾವು ಮೊದಲು ಹೋದದ್ದು ಥಾಯ್ಲ್ಯಾಂಡ್ ದೇಶದ ಚೈತ್ಯಕ್ಕೆ. ಇದು ಥಾಯಿ ಶೈಲಿಯ ಕಟ್ಟಡವಾಗಿದ್ದು ಸುಮಾರು ದೊಡ್ಡದಾಗಿದೆ. ಇದನ್ನು ಕಟ್ಟಿ 4೦ ವರ್ಷಗಳಾಗಿದ್ದವು (1998 ರಲ್ಲಿ). ಬುದ್ಧನ ಪ್ರತಿಮೆ ನಾಲ್ಕುವರೆ ಟನ್ ಭಾರದ ಅಷ್ಟಧಾತು ಎಂಬ ಸಾಮಗ್ರಿಯಿಂದ ಮಾಡಲ್ಪಟ್ಟಿದೆಯಂತೆ. ಚಿನ್ನದ ಪಾಲೀಶ್ ಹಾಕಿರುವ ಈ ಪ್ರತಿಮೆಯ ವೆಚ್ಚ ಹದಿನಾರು ಲಕ್ಷ ರುಪಾಯಿಗಳಾಗಿದ್ದವಂತೆ. ಪ್ರತಿಮೆಯನ್ನು ಇಲ್ಲಿಯ ರೀತಿಯಂತೆ ಒಂದು ಗಾಜಿನ ಪೆಟ್ಟಿಗೆಯಲ್ಲಿರಿಸಲಾಗಿದೆ. ಚೈತ್ಯವು ಬಹಳ ಸುಂದರವಾಗಿದೆ – ಗೋಡೆಗಳು, ನೆಲ, ಮೇಲಿನ ಛಾವಣಿ ಎಲ್ಲ ಸುಂದರವಾದ ರಂಗು-ರಂಗಾದ ಕೆತ್ತನೆ/ಚಿತ್ರಕಲೆಗಳಿಂದ […]