Facebook

Archive for the ‘ಕೆ ಟಿ ಸೋಮಶೇಖರ್ ಅಂಕಣ’ Category

ತಂತ್ರಗಾರಿಕೆಯ ಚಕ್ರಮೇಘದಲ್ಲಿ ಮರೆಯಾದ ಜಯದ್ರತಭಾಸ್ಕರ!: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ಮಹಾಭಾರತ ತಂತ್ರಗಳ ಆಗರ! ಶ್ರೀಕೃಷ್ಣ ತಂತ್ರಗಾರಿಕೆಯ ಅರಸ! ಪಾಂಡವರಿಂದ ಜಯಿಸಲಸದಳವಾದ ಕುರುಕ್ಷೇತ್ರ ಯುದ್ದವ, ಅತಿರಥ ಮಹಾರಥರೆನಿಸಿದ ಭೀಷ್ಮ, ದ್ರೋಣ, ಕರ್ಣ, ದುರ್ಯೋಧನ ಮೊದಲಾದವರನ್ನು ತಂತ್ರಗಾರಿಕೆಯಿಂದಲೇ ಜಯಿಸುವಂತೆ ಮಾಡಿ ವಿಜಯ ಮಾಲೆ ಪಾಂಡವರಿಗೆ ಹಾಕಿಸಿದ ಮಹಾತಂತ್ರಿ! ಇದೆಲ್ಲಾ ಧರ್ಮ ಸಂಸ್ಥಾಪನಾರ್ಥಾಯ ದುಷ್ಟ ಶಿಕ್ಷಣಾರ್ಥಾಯ ಶಿಷ್ಟ ರಕ್ಷಣಾರ್ಥಾಯ! ದ್ರೋಣ ಪರ್ವ ಆರಂಭವಾಗಿರುತ್ತದೆ. ಪಾಂಡವರು ಮತ್ತು ಕೌರವರೆಲ್ಲರಿಗೂ ಬಿಲ್ವಿದ್ಯೆಯನ್ನು ಕಲಿಸಿದ ಗುರು ದ್ರೋಣ. ಇವರು ಕುರುಕ್ಷೇತ್ರ ಯುದ್ದದ ಸಂದರ್ಭದಲ್ಲಿ ಕೌರವರ ಪಕ್ಷದಲ್ಲಿ ಇರಬೇಕಾಗುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಸೇನಾ ನಾಯಕನಾಗಿದ್ದ ಭೀಷ್ಮರ […]

ಭಾರತವ ವಿಶ್ವವಿಖ್ಯಾತಗೊಳಿಸಿದ ಆ ಎರಡು ಘಟನೆಗಳು: ಕೆ ಟಿ ಸೋಮಶೇಖರ ಹೊಳಲ್ಕೆರೆ

ಸ್ವಾತಂತ್ರ್ಯಪೂರ್ವದಲ್ಲಿ ಜಗತ್ತಿನ ಬಹಳ ದೇಶಗಳಿಗೆ ಭಾರತದ ಧರ್ಮ, ಸಂಸ್ಕೃತಿಯ, ಉದಾತ್ತ ಗುಣಗಳ ಪರಿಚಯವೇ ಆಗಿರಲಿಲ್ಲ, ಆಗಲು ಸಾಧ್ಯವಿರಲಿಲ್ಲ! ಭಾರತಕ್ಕೆ ಸ್ವಾಯತ್ತತೆ ಇರದಿದ್ದರಿಂದ, ಬ್ರಿಟಿಷರೇ ಭಾರತವನ್ನು ಪ್ರತಿನಿಧಿಸುತ್ತಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಅವರ ಆಡಳಿತ ಇರುವಾಗಲೇ ಆ ಇಬ್ಬರು ಮಹಾನ್ ವ್ಯಕ್ತಿಗಳು, ಜಗತ್ತು ಕತ್ತೆತ್ತಿ ನೋಡುವಂತೆಯೂ, ನಿಬ್ಬೆರಗಾಗಿ ನಿಲ್ಲುವಂತೆಯೂ, ಭಾರತದ ಮಾನವೀಯತೆಯನ್ನು ಗುರುತಿಸುವಂತೆಯೂ, ಜಗತ್ತು ತನ್ನಷ್ಟಕ್ಕೆ ತಾನು ಎದ್ದು ನಿಂತು ತಲೆ ಬಾಗಿ ನಮಿಸುವಂತೆ, ಕೈಗಳು ತಮ್ಮಷ್ಟಕ್ಕೆ ತಾವೇ ಭಾರತವನ್ನು ವಂದಿಸುವಂತೆ ಮಾಡಿದರು. ಜನವರಿಯಲ್ಲೇ ಆ ಇಬ್ಬರಲ್ಲಿ ಒಬ್ಬರದು ಜಯಂತಿ, […]

ನೈತಿಕತೆಯಿಲ್ಲದ ಮೇಲೆ ಬಹಳ ಕಠಿಣ ಕಾನೂನು ಕಾಯ್ದೆಗಳ ರೂಪಿಸಿಯೇನು ಫಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಅಗತ್ಯ, ಯೋಗ್ಯ ಕಾನೂನು ಕಾಯ್ದೆಗಳ ರೂಪಿಸುವುದು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಗಳ ಕರ್ತವ್ಯ! ಕಾನೂನು, ಕಾಯ್ದೆಗಳು ಸಮಾಜ ಸುವ್ಯವಸ್ಥಿತವಾಗಿರಲು, ನೆಮ್ಮದಿಯಿಂದಿರಲು ಸಹಕಾರಿ. ಅತಿ ಅವಶ್ಯಕ! ಹಾಗಂತ ಎಲ್ಲಾ ಅವುಗಳಿಂದನೇ ಅಲ್ಲಾ! ವ್ಯಕ್ತಿಯ, ಸಮಾಜದ, ದೇಶದ ಉದ್ಧಾರಕ್ಕೆ, ಆತ್ಮೋದ್ಧಾರಕ್ಕೆ ನೈತಿಕತೆಯೇ ಮೂಲ. ತಳಹದಿ! ಹಿಂದಿನವರು ನೈತಿಕತೆಯನ್ನು ಜೀವನದ ಉಸಿರು ಮಾಡಿಕೊಂಡಿದ್ದರಿಂದ ಉತ್ತಮ ಸಮಾಜ ನಿರ್ಮಾಣವಾಗಿತ್ತು. ಜನ ಶಾಂತಿ, ಸಹನೆ, ಸದಾಚಾರ, ಸದ್ಗುಣದಿಂದ ಬದುಕುತ್ತಿದ್ದರು. ಭಗವಂತನ ಮೇಲಿನ ಪರಮ ಭಕ್ತಿಯಿಂದ ಆತ್ಮೋದ್ಧಾರ ಮಾಡಿಕೊಂಡರು! ಅಂದು ಅಪರಾಧಗಳು ಇರಲಿಲ್ಲ ಎನ್ನುವುದಕ್ಕಿಂತ ಅವು ಅಲ್ಪ […]

ಸಡಿಲವಾಗುತ್ತಿರುವ ಸಂಬಂಧಗಳು !: ಕೆ ಟಿ ಸೋಮಶೇಖರ ಹೊಳಲ್ಕೆರೆ

ಬದಲಾವಣೆ ಜಗದ ನಿಯಮ! ಪ್ರಕೃತಿ ನಿತ್ಯನೂತನ. ನವನವೀನ! ಬದಲಾಗದಿದ್ದರೆ ಏಕತಾನತೆ ಉಂಟಾಗಿ ಬೇಸರ ಆವರಿಸಿ ಬದುಕಾಗುವುದು ಯಾತನಾಮಯ! ಬದಲಾವಣೆಯ ಗಾಳಿ ತರುವುದು ಉತ್ಸಾಹ. ನವ ಚೇತನ !ಹೊಸ ಚಿಗುರು ಹೂವು ಹಣ್ಣು! ಹೊಸತನ ತುಂಬಿ ಬದುಕಾಗುವುದು ನೂತನ! ಬದಲಾವಣೆಯೇ ಜೀವನಕೆ ಆಗುವುದು ಟಾನಿಕ್ ! ಅವಿಭಕ್ತಕುಟುಂಬಗಳು ಮಾಯವಾಗಿ ವಿಬಕ್ತಕುಟುಂಬಗಳು ಉಂಟಾಗಿರುವುದರಿಂದ, ಜಾತಿ ಧರ್ಮಗಳ ಕಪಿ ಮುಷ್ಟಿಯಿಂದ ಮಾನವ ಮುಕ್ತನಾಗುತ್ತಿರುವುದರಿಂದ, ಆಧುನಿಕ ಬದಲಾದ ಬದುಕಿನಿಂದ, ತಾಂತ್ರಿಕತೆ ಹೆಚ್ಚಾಗಿರುವುದರಿಂದ, ಶಿಕ್ಷಣಕ್ಕೆ, ಹಣಕ್ಕೆ ಪ್ರಾಧಾನ್ಯತೆ ಬಂದುದರಿಂದ, ವೈಯುಕ್ತಿಕ ಸ್ವಾತಂತ್ರ್ಯ ಅತಿಯಾಗಿರುವುದರಿಂದ, ಪಾಶ್ಚಿಮಾತ್ಯರ […]

ವೈದ್ಯಕೀಯ ಲೋಕದ ಸಂಶೋಧನೆಗಳ ದಿಕ್ಕು ಬದಲಾಗಬೇಕು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಾನವನ ಚಿಂತನೆಗಳು ಪ್ರಕೃತಿಯ ನಿಯಮಗಳಿಗೆ ದೇಹ ಪ್ರಕೃತಿಗೆ ಪೂರಕವಾಗಿರಬೇಕು. ಸಹಜ ಚಿಂತನೆಗಳು ಪ್ರಕೃತಿಯ, ದೇಹ ಪ್ರಕೃತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುತ್ತವೆ. ಅಸಹಜ ಚಿಂತನೆಗಳು ಸಮಸ್ಯೆಗಳ ಸರಣಿಯನ್ನೇ ಸೃಷ್ಟಿಸುತ್ತವೆ! ಸಹಜ ಚಿಂತನೆಗಳಿದ್ದರೂ ಮಾನವ ತನ್ನ ದುರಾಸೆಯಿಂದ ದುಡ್ಡಿನ ಪಿಶಾಚಿ ಯಾಗಿರುವುದರಿಂದ ಉದ್ದೇಶಪೂರ್ವಕವಾಗಿ ಅಸಹಜವಾಗಿ ಚಿಂತಿಸಿ ಪ್ರಕೃತಿಯ, ದೇಹ ಪ್ರಕೃತಿಯ ನೋವು ಯಾತನೆಗಳಿಗೆ ಕಾರಣವಾಗುತ್ತಿದ್ದಾನೆ. ಪರಿಸರ ಮಾಲಿನ್ಯಕ್ಕೂ ಕಾರಣನಾಗಿದ್ದಾನೆ! ಇತ್ತೀಚೆಗೆ ಜಗತ್ತಿನಾದ್ಯಂತ ಇದೆ ವಿಜೃಂಭಿಸಿ ಜೀವಜಲ, ಅನಾರೋಗ್ಯ ಸಮಸ್ಯೆಗಳು ಅತಿ ಆಗಲು ಯಾತನೆ ಮುಗಿಲು ಮುಟ್ಟಲು ಕಾರಣವಾಗಿದೆ. ಇಡೀ […]

ಲೋಕದೊಳಗೆ ಹುಟ್ಟಿದ ಬಳಿಕ.. ಕೋಪವತಾಳದೆ ಸಮಾಧಾನಿಯಾಗಿರಬೇಕು: ಕೆ ಟಿ ಸೇಮಶೇಖರ ಹೊಳಲ್ಕೆರೆ!

ಅರಿಷಡ್ವರ್ಗಗಳು ಮಾನವನನ್ನು ಉತ್ತಮನಾಗಲಿಕ್ಕೆ ಬಿಡುವುದಿಲ್ಲ. ಉತ್ತಮನಾಗಿ ರೂಪಿಸದಿದ್ದರೂ ಪರವಾಗಿಲ್ಲ, ದುಷ್ಟನಾಗುವಂತೆ ಮಾಡುತ್ತವೆ! ಅರಿಷಡ್ವರ್ಗಗಳಲ್ಲಿ ಕೋಪವೂ ಒಂದು. ಕೋಪ ಬೆಂಕಿಯಿದ್ದಂತೆ. ಕೋಪಕ್ಕೆ ತುತ್ತಾದವರ ಮೇಲೆ ದುಷ್ಪರಿಣಾಮ ಬೀರುತ್ತದಲ್ಲದೆ ಕೋಪಗೊಂಡವರನ್ನೇ ಸುಟ್ಟುಬಿಡುತ್ತದೆ. ಆದುನಿಕ ಬದುಕಿನಲ್ಲಿ ಸಮಾಧಾನವಾಗಿರುವುದು ಕಷ್ಟ. ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಿದ್ದಂತೆ ಅಯ್ಯೋ! ಟೈಂ ಆಯ್ತು! ಅಯ್ಯೋ! ಟೈಂ ಆಯ್ತು! ನಿತ್ಯ ಕರ್ಮ ತೀರಿಸಬೇಕು, ಸ್ನಾನ ಇಲ್ಲ! ಪೂಜೆ ಇಲ್ಲ! ಆ ಕೆಲಸ ಆಗಿಲ್ಲ, ಈ ಕೆಲಸ ಆಗಿಲ್ಲ. ಎಲ್ಲಾ ಮುಗಿಸಿ ಹೊರಡುವುದು ಎಷ್ಟು ಹೊತ್ತಾಗುತ್ತದೋ ಏನೋ? ಎಂದು ಅವಸರ […]

ಪ್ರೇಮಿಗಳ ದಿನಾಚರಣೆಯನ್ನು ಹೇಗೆ ಆಚರಿಸಬೇಕು?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಪ್ರೀತಿ ಅತಿ ಅಮೂಲ್ಯ! ಜಗದ ತುಂಬ ತುಂಬಿದೆ. ಮಾನವನ ಜಗತ್ತನ್ನು ಆಳುತ್ತಿದೆ. ಸಕಲ ಜೀವಜಂತುಗಳಲ್ಲೂ ಮನೆ ಮಾಡಿದೆ. ಜಗತ್ತು ಆಗಿರುವುದೇ ಪ್ರೀತಿಯಿಂದ. ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಪ್ರೀತಿ, ಪ್ರೇಮ ತೋರಿಸುವಂಥವು ಆಗಿರದೆ ನಡೆ, ನುಡಿ, ಮಾಳ್ಕೆಗಳಲ್ಲಿ ಕಂಡುಬರುವಂಥವು ಆಗಿವೆ. ಅವರವರ ಸಂಬಂಧ, ಭಾವನೆ, ಇಬ್ಬರಲ್ಲಿರುವ ಇಷ್ಟವಾಗುವ ಗುಣಗಳಿಂದ ಅವರ ಪ್ರೀತಿಯ ಅನ್ಯೋನ್ಯತೆ ತೀರ್ಮಾನವಾಗುತ್ತದೆ. ಪ್ರೀತಿ ಎಲ್ಲಾ ಜೀವಿಗಳಲ್ಲೂ ಸಹಜವಾಗಿ ಇರುವಂತಹದ್ದೇ! ಆದ್ದರಿಂದ ಪ್ರೇಮಿಗಳ ದಿನ, ಅಪ್ಪಂದಿರ ದಿನ, ಸ್ನೇಹಿತರ ದಿನ, ಅಮ್ಮಂದಿರ ದಿನ… ಆಚರಿಸುವುದು ಭಾರತೀಯ ಪರಂಪರೆಯಲ್ಲಿಲ್ಲ! […]

ಆರೋಗ್ಯಕ್ಕಾಗಿ ಮರಳಬೇಕಿದೆ ಹಿಂದಿನ ಬದುಕಿಗೆ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಕಾಲಚಕ್ರ ಉರುಳುತ್ತನೇ ಇರುತ್ತದೆ. ಉರುಳುವಾಗ ಚಕ್ರದ ಭಾಗ ಹಿಂದಿನದು ಮುಂದಕ್ಕೆ, ಮುಂದಿನದು ಹಿಂದಕ್ಕೆ ಬರುವುದು ಸಹಜ! ಇತಿಹಾಸ ಸಹ ಪುನರಾವರ್ತನೆಯಾಗುತ್ತದೆ ಎನ್ನುತ್ತಾರೆ. ಹಾಗೇ ಮಾನವನ ಬದುಕಿನ ರೀತಿ ಸಹ ಪುನರಾವರ್ತನೆಯಾಗಬೇಕಿದೆ! ನಾವು ನಾಗರೀಕರು ತುಂಬಾ ಮುಂದುವರಿದವರು ಎಂಬುದು ನಾವು ಬಹಳ ಹಿಂದುಳಿದವರೆಂಬ ಧ್ವನಿಯನ್ನು ಒಳಗೊಂಡಿದೆಯಲ್ಲವೆ? ನಮಗೆ ಅನುಕೂಲವಾಗಲೆಂದು, ಸುಲಭವಾಗಿ ಬದುಕಬೇಕೆಂದು ಕಷ್ಟಕರ ಬದುಕನ್ನು ತೊರೆದು ಸುಲಭವಾಗಿ ಬದುಕಲು ಪ್ರಯತ್ನಿಸುವಾಗ ಹಿಂದಿನದಕ್ಕೆ ತಿಲಾಂಜಲಿ ಇತ್ತು ಹೊಸದನ್ನು ಬಿಗಿದಪ್ಪಿಕೊಂಡು ಜೀವಿಸುತ್ತಿದ್ದೇವೆ. ಅದರ ದುಷ್ಪರಿಣಾಮಗಳು ಈಗ ಅರಿತದ್ದರಿಂದ ಹಿಂದಿನ ಜೀವನದ ರೀತಿಯ […]

ದೇವಾಲಯ, ದೇವರ .. ಸರಳವಾಗಿ ಅರ್ಥೈಸಿದ ವಚನಕಾರರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಇಂದು ಹಣ, ಅಧಿಕಾರ, ಆಸ್ಥಿ, ವಸ್ತು, ಒಡವೆ, ವಾಹನಗಳು ಇದ್ದವರಿಗೆ ಜನ ಹೆಚ್ಚು ಗೌರವ ಕೊಡುತ್ತಿದ್ದಾರೆ. ಮಾನ, ಮನ್ನಣೆ ನೀಡುತ್ತಿದ್ದಾರೆ. ಪ್ರಯುಕ್ತ ಜನ ಅದನ್ನು ಗಳಿಸಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಇವರು ಗಳಿಸುವ ಏಕಮೇವ ಉದ್ದೇಶ ಹೊಂದಿ ಶೀಘ್ರವಾಗಿ ಸಂಪತ್ತು ಗಳಿಸಲು ಇರುವ ಮಾರ್ಗಗಳು ಯಾವು ಎಂದು ಹುಡುಕುತ್ತಿದ್ದಾರೆಯೇ ವಿನಾ ಒಳ್ಳೆಯ, ನೀತಿಯುತ ಮಾರ್ಗ ಯಾವುದು ಎಂದು ಹುಡುಕುತ್ತಿಲ್ಲ! ಗಳಿಸುವುದು ಮುಖ್ಯ ವಿನಾ ಮಾರ್ಗ ಮುಖ್ಯವಲ್ಲ! ಎಂದು ಭಾವಿಸಿದುದರಿಂದ ಅನ್ಯ ಮಾರ್ಗದಿಂದ ದುಡಿಯುವಂತಾಗಿದೆ. ಧರ್ಮ, ಅರ್ಥ, ಕಾಮ, […]

ಬದುಕೆಂದರೆ ಪೂರ್ಣತ್ವದ ಕಡೆಗೆ ಸಾಗುವುದ?: ಕೆ ಟಿ ಸೋಮಶೇಖರ ಹೊಳಲ್ಕೆರೆ

 ‌ " ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಎಂದು ಗೋಪಾಲಕೃಷ್ಣ ಅಡಿಗರು ಹೇಳಿದ್ದಾರೆ. ಜೀವನ ಎಂದರೇನು ಎಂದು ಒಂದು ವ್ಯಾಖ್ಯೆಯಲ್ಲಿ ಹಿಡಿದಿಡುವುದು ಕಷ್ಟ. ಆದರೂ ಕೆಲವರು ಪ್ರಯತ್ನಿಸಿದ್ದಾರೆ ಅದು ಜೀವನವನ್ನೆಲ್ಲಾ ಒಂದೇ ವ್ಯಾಖ್ಯೆಯಲ್ಲಿ ಹಿಡಿದಿಟ್ಟಿದ್ದರೂ ಅವು ಪರಿಪೂರ್ಣ ಅನ್ನಿಸವು. ಏಕೆಂದರೆ ಜೀವನ ಹೇಗೆ ಬೇಕಾದರೂ ಇರಬಹುದು! ವಿಶಾಲವೂ ಆಗಬಹುದು, ಅತಿ ಕಿರಿದೂ ಆಗಬಹುದು! ಹಿಗ್ಗಿನ ಸುಗ್ಗಿಯಾಗಬಹುದು, ಬಿರು ಬಿಸಿಲ ಬೇಸಿಗೆಯಾಗಬಹುದು. ಕಷ್ಟಗಳ ಮಳೆಯಾಗಬಹುದು! ಸಾಧನೆಯ ಶಿಖರವೇ ಆಗಬಹುದು. ಭೂಮಿಯ ಮೇಲಿರುವವರಾರೂ ಪರಿಪೂರ್ಣರಲ್ಲ. ಹುಟ್ಟಿದ ಪ್ರಯುಕ್ತ […]