Facebook

Archive for the ‘ಕೆ ಟಿ ಸೋಮಶೇಖರ್ ಅಂಕಣ’ Category

ಗುರುಗಳನ್ನು ಗೌರವಿಸಿ ಗೌರವ ಹೆಚ್ಚಿಸಿಕೊಂಡವರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಸೆಪ್ಟಂಬರ್ 5 ಡಾ!! ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ. ಅದನ್ನೇ ಭಾರತದಲ್ಲಿ ಶಿಕ್ಷಕರ ದಿನ ಎಂದು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅಕ್ಟೋಬರ್ 5 ನ್ನು ವಿಶ್ವ ಶಿಕ್ಷಕರ ದಿನ ಎಂದು ಆಚರಿಸುವರು. ನಿಜವಾಗಿಯೂ ಶಿಕ್ಷಕರ ದಿನಾಚರಣೆಯನ್ನು ಸಮಾಜ ಆಚರಿಸಬೇಕು. ಸಮಾಜದಲ್ಲಿನ ಸಂಘ – ಸಂಸ್ಥೆಗಳು ಆಚರಿಸಿದರೆ ಶಿಕ್ಷಕರಿಗೆ ಗೌರವ. ಅಷ್ಟೇ ಅಲ್ಲ ಆ ಸಂಘ ಸಂಸ್ಥೆಗಳಿಗೂ ಗೌರವ ! ಸಮಾಜ ಶಿಕ್ಷಕರ ದಿನವನ್ನು ಆಚರಿಸದಿರುವುದರಿಂದ ಶಿಕ್ಷಕರೇ ಅವರ ದಿನವನ್ನು ಅವರೇ ಆಚರಿಸಿಕೊಳ್ಳುವಂತಾಗಿರುವುದು ಅವರೇ ಅವರ ಬೆನ್ನನ್ನು […]

ಸತ್ಯಮೇವಜಯತೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಜೀವನದಲ್ಲಿ ಸತ್ಯ ಬಹು ಅಮೂಲ್ಯವಾದುದು. ಸತ್ಯದ ನಡೆ – ನುಡಿ ಕಠಿಣವಾದರೂ, ಮೌಲ್ಯಯುತವಾದುದು. ಬದುಕನ್ನು ಪಾರದರ್ಶಕಗೊಳಿಸಿ ಸತ್ಯವಂತರನ್ನು ಪ್ರಾಕಾಶಿಸುವಂತೆ ಮಾಡುತ್ತದೆ. ಸತ್ಯಕ್ಕೆ ಪ್ರತ್ಯೇಕ ಅಸ್ಥಿತ್ವವಿಲ್ಲ. ಅದು ಅದನ್ನು ಉಳಿಸಿಕೊಳ್ಳಲು ಹೋರಾಡುವುದಿಲ್ಲ. ಅದು ಮಾನವರ ನಡವಳಿಯನ್ನು ಅವಲಂಭಿಸಿರುತ್ತದೆ. ಮಾನವರು ಸತ್ಯದ ಪರ ನಿಂತಂತೆ ಅವರ ವ್ಯಕ್ತಿತ್ವ ಉನ್ನತಿಗೇರುತ್ತಾ ಹೋಗಿ ಅವರದು ಪರಿಶುದ್ದ ಆತ್ಮ ಆಗುತ್ತಾ ಹೋಗುತ್ತದೆ. ಆದ್ದರಿಂದ ‘ ಸತ್ಯ’ ಜೀವಕ್ಕಿಂತ ಅಮೂಲ್ಯ ಎಂದು ಭಾವಿಸಿ ಅಮರರಾದವರು ನಮ್ಮ ಸುತ್ತ ಇದ್ದಾರೆ! ಸತ್ಯವನ್ನು ಬಹುಕಾಲ ಮುಚ್ಚಿಡಲಾಗದು. ಮುಚ್ಚಿಟ್ಟಷ್ಟೂ ಬಡಬಾಗ್ನಿಯಂತೆ […]

ತಲ್ಲೀನತೆಯ ಪರಾಕಾಷ್ಠೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ತಲ್ಲೀನತೆಯೆಂದರೆ ವ್ಯಕ್ತಿ ಏನನ್ನು ಮಾಡಬಯಸುತ್ತಾನೋ ಅದರಲ್ಲಿಯೇ ಮನಸ್ಸು ಐಕ್ಯವಾಗುವುದು! ಮತ್ತೊಂದರ ಕಡೆಗೆ ಗಮನ ಹರಿಸದಂತೆ ಕೆಲಸದಲ್ಲಿ ಮುಳುಗುವುದು! ಯಾವುದೇ ಕೆಲಸವನ್ನು ಏಕಾಗ್ರತೆಯಿಂದ, ಇಷ್ಟಪಟ್ಟು, ಪ್ರೀತಿಸಿ ಮಾಡಿದಾಗ ಆ ಕೆಲಸ ಸುಂದರವಾಗುವುದು, ಮನಸ್ಸಿಗೆ ಮುದನೀಡುವುದು, ಇತರರ ಮನಸೂರೆಗೊಳ್ಳುವುದು! ಕಾಟಾಚಾರಕ್ಕೆ, ಒತ್ತಾಯಕ್ಕೆ, ಅಧಿಕಾರದ ದರ್ಪಕ್ಕೆ ಹೆದರಿ ಮಾಡುವ ಕೆಲಸಗಳು ಸುಂದರವಾಗವು, ಮಾಡಿದವರಿಗೂ ನೋಡುವವರಿಗೂ ಮೆಚ್ಚಿಗೆಯಾಗವು, ಯಾರಿಗೂ ತೃಪ್ತಿನೀಡವು. ಮಾಡಿದ್ದು ಸುಂದರವಾಗಬೇಕೆಂದರೆ ಗರಿಷ್ಟಮಟ್ಟದ ತಲ್ಲೀನತೆ ಅವಶ್ಯ! ಪ್ರಪಂಚದಲ್ಲಿ ಯಾವುವು ಪ್ರಸಿದ್ಧವಾದ, ಸುಂದರವಾದ ಕೆಲಸಗಳೋ ಅವು ತಲ್ಲೀನತೆಯ ಪರಾಕಾಷ್ಠೆಯ ಫಲಗಳಾಗಿವೆ. ಅವು ಯೋಗದ […]

 ಮತ್ತೆ ಮತ್ತೆ ಪ್ರತಿದ್ವನಿಸುವ  ಪ್ರತ್ಯೇಕ ರಾಜ್ಯದ ಕೂಗು: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ವಿಶಾಲ ಭೂಪ್ರದೇಶ ಹೊಂದಿದ ಕೆಲವು ರಾಜ್ಯಗಳು ಪ್ರಾದೇಶಿಕವಾಗಿ ನೆಲ, ಜಲ, ಖನಿಜ, ಸಂಪನ್ಮೂಲ ಮಳೆಯ ಹಂಚಿಕೆ ಮುಂತಾದವುಗಳಲ್ಲಿ ಭಿನ್ನವಾಗಿರುತ್ತವೆ! ಅವು ಅಲ್ಲಿ ವಾಸಿಸುವ ಜನರ ಜೀವನಮಟ್ಟ ವ್ಯತ್ಯಾಸವಾಗಲು ಅಸಮಾನತೆ ಉಂಟಾಗಲು ಕಾರಣವಾಗಿರುತ್ತವೆ. ಆದರೆ ಇದನ್ನು ಗುರುತಿಸಿ ಅಸಮಾನತೆಯ ಹೋಗಲಾಡಿಸಲು ರಾಜ್ಯ ಸರ್ಕಾರಗಳು ಅಗತ್ಯ ಕಾರ್ಯಕ್ರಮ ರೂಪಿಸಬೇಕಿದೆ. ರೂಪಿಸುತ್ತವೆ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ಸರ್ಕಾರಗಳು ಬೇಧಭಾವ ಮಾಡುವುದಿಲ್ಲ! ಕಾರಣಾಂತರದಿಂದ ಒಮ್ಮೊಮ್ಮೆ ಸರ್ಕಾರಗಳಿಂದನೇ ಬೇಧಭಾವ ಆಗಿಬಿಡುತ್ತದೆ. ಬೇಧಭಾವ ಎಲ್ಲಾ ಕಡೆ ಇದ್ದೇ ಇರುತ್ತದೆ. ಇಲ್ಲದಂತೆ ಇರಲು ಸಾಧ್ಯವಿಲ್ಲ! ಅದು ಸ್ವಲ್ಪ […]

ತಮ್ಮ ಭಾವಚಿತ್ರದ ಸೌಂದರ್ಯ ಹೆಚ್ಚಿಸುವ ಸ್ವಯಂ ಕಟ್ಟುಗಳು !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಎಲ್ಲರೂ ತಮ್ಮ ತಮ್ಮ ಭಾವಚಿತ್ರಗಳಿಗೆ ಸಾಮಾನ್ಯವಾಗಿ ಕಟ್ಟನ್ನು ಹಾಕುತ್ತಾರೆ, ಹಾಕಿಸುತ್ತಾರೆ. ಯಾಕೆಂದರೆ ಎಲ್ಲರಿಗೂ ತಮ್ಮ ಭಾವಚಿತ್ರಗಳು ಸುಂದರವಾಗಿ ಕಾಣಬೇಕೆಂಬ ಆಸೆ. ಅದಕ್ಕೆ ಹಾಕಿಸುತ್ತಾರೆ. ಕಟ್ಟುಗಳು ಭಾವಚಿತ್ರದ ಶೋಭೆಯನ್ನು ಹೆಚ್ಚಿಸುತ್ತವೆ. ಭಾವಚಿತ್ರವನ್ನು ವಿರೂಪಗೊಳ್ಳದಂತೆ ಬಹಳ ವರುಷಗಳ ಕಾಲ ಹಾಳಾಗದಂತೆ ರಕ್ಷಿಸುತ್ತವೆ. ಕಟ್ಟು ಹಾಕಿದ ಭಾವಚಿತ್ರಗಳು ತಮ್ಮನ್ನು ಇರಿಸಿದ ಸ್ಥಳ, ಶೋಕೇಸಿನ, ನೇತು ಹಾಕಿದ ಗೋಡೆಯ, ತಾವಿರುವ ಟೇಬಲ್ಲಿನ ಅಂದವನ್ನು ಹೆಚ್ಚಿಸುತ್ತವೆ . ಭಾವಚಿತ್ರಗಳು ಯಾವ ವಯೋಮಾನದಲ್ಲಿನ ಭಾವಚಿತ್ರಗಳೋ ಆ ವಯೋಮಾನದಲ್ಲಿನ, ಯಾವ ಸಂದರ್ಭದಲ್ಲಿನ ಭಾವ ಚಿತ್ರಗಳೋ ಆ ಸಂದರ್ಭದಲ್ಲಿನ […]

ಗುರಿ ಮುಟ್ಟಿಸಲು ಅವಶ್ಯಕ ಸಮಚಿತ್ತದ ಸಾರಥಿ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಾನವನ ಬದುಕು ಸಾರ್ಥಕ ಆಗಬೇಕಾದರೆ ಅವನು ಏನನ್ನಾದರೂ ಸಾಧಿಸಬೇಕು! ತನ್ನ ಜೀವನದಲ್ಲಿ ಉತ್ತಮವಾದುದನ್ನು ಸಾಧಿಸಿದರೆ ಅವನ ಜೀವನ ಸಾರ್ಥಕವಾಗುತ್ತದೆ. ಅವನಿಗೆ ಸಂತೃಪ್ತಿ ದೊರೆಯುತ್ತದೆ. ಸಾಧನೆಗೆ ಉತ್ತಮ ಸಲಕರಣೆ ಎಂದರೆ ಆರೋಗ್ಯವಂತ ಮನಸ್ಸು, ಸದೃಢ ದೇಹ. ಪ್ರಯುಕ್ತ ಆರೋಗ್ಯವನ್ನು ಕಾಪಾಡಿಕೊಂಡು ದೃಢ ಕಾಯವನ್ನು ಸಂಪಾದಿಸಿ ಸಾಧಿಸಲು ಲಪ್ರಯತ್ನಿಸಿದರೆ ಸಮಾಜದಲ್ಲಿ ಮಾನ ಮನ್ನಣೆಗಗಳು ದೊರೆಯುತ್ತವೆ. ಸಾಧಿಸಬೇಕಾಗಿರುವವನು ಮಾನಸಿಕ ದೈಹಿಕ ಸಾಮರ್ಥ್ಯ ಇರುವಾಗಲೇ ಗುರಿಯನ್ನು ಗುರುತಿಸಿಕೊಂಡು ಸಾಧಿಸಲು ಮುಂದಾಗಬೇಕು!. ಯೋಗ್ಯ ಗುರಿ ನಿರ್ಣಯವಾಗುತ್ತಿದ್ದಂತೆ ಅದನ್ನು ಸಾಧಿಸಲು ಅನೇಕ ದಾರಿಗಳು ಗೋಚರಿಸಲು ಆರಂಭಿಸುತ್ತವೆ. […]

ತಂತ್ರಗಾರಿಕೆಯ ಚಕ್ರಮೇಘದಲ್ಲಿ ಮರೆಯಾದ ಜಯದ್ರತಭಾಸ್ಕರ!: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ಮಹಾಭಾರತ ತಂತ್ರಗಳ ಆಗರ! ಶ್ರೀಕೃಷ್ಣ ತಂತ್ರಗಾರಿಕೆಯ ಅರಸ! ಪಾಂಡವರಿಂದ ಜಯಿಸಲಸದಳವಾದ ಕುರುಕ್ಷೇತ್ರ ಯುದ್ದವ, ಅತಿರಥ ಮಹಾರಥರೆನಿಸಿದ ಭೀಷ್ಮ, ದ್ರೋಣ, ಕರ್ಣ, ದುರ್ಯೋಧನ ಮೊದಲಾದವರನ್ನು ತಂತ್ರಗಾರಿಕೆಯಿಂದಲೇ ಜಯಿಸುವಂತೆ ಮಾಡಿ ವಿಜಯ ಮಾಲೆ ಪಾಂಡವರಿಗೆ ಹಾಕಿಸಿದ ಮಹಾತಂತ್ರಿ! ಇದೆಲ್ಲಾ ಧರ್ಮ ಸಂಸ್ಥಾಪನಾರ್ಥಾಯ ದುಷ್ಟ ಶಿಕ್ಷಣಾರ್ಥಾಯ ಶಿಷ್ಟ ರಕ್ಷಣಾರ್ಥಾಯ! ದ್ರೋಣ ಪರ್ವ ಆರಂಭವಾಗಿರುತ್ತದೆ. ಪಾಂಡವರು ಮತ್ತು ಕೌರವರೆಲ್ಲರಿಗೂ ಬಿಲ್ವಿದ್ಯೆಯನ್ನು ಕಲಿಸಿದ ಗುರು ದ್ರೋಣ. ಇವರು ಕುರುಕ್ಷೇತ್ರ ಯುದ್ದದ ಸಂದರ್ಭದಲ್ಲಿ ಕೌರವರ ಪಕ್ಷದಲ್ಲಿ ಇರಬೇಕಾಗುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಸೇನಾ ನಾಯಕನಾಗಿದ್ದ ಭೀಷ್ಮರ […]

ಭಾರತವ ವಿಶ್ವವಿಖ್ಯಾತಗೊಳಿಸಿದ ಆ ಎರಡು ಘಟನೆಗಳು: ಕೆ ಟಿ ಸೋಮಶೇಖರ ಹೊಳಲ್ಕೆರೆ

ಸ್ವಾತಂತ್ರ್ಯಪೂರ್ವದಲ್ಲಿ ಜಗತ್ತಿನ ಬಹಳ ದೇಶಗಳಿಗೆ ಭಾರತದ ಧರ್ಮ, ಸಂಸ್ಕೃತಿಯ, ಉದಾತ್ತ ಗುಣಗಳ ಪರಿಚಯವೇ ಆಗಿರಲಿಲ್ಲ, ಆಗಲು ಸಾಧ್ಯವಿರಲಿಲ್ಲ! ಭಾರತಕ್ಕೆ ಸ್ವಾಯತ್ತತೆ ಇರದಿದ್ದರಿಂದ, ಬ್ರಿಟಿಷರೇ ಭಾರತವನ್ನು ಪ್ರತಿನಿಧಿಸುತ್ತಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಅವರ ಆಡಳಿತ ಇರುವಾಗಲೇ ಆ ಇಬ್ಬರು ಮಹಾನ್ ವ್ಯಕ್ತಿಗಳು, ಜಗತ್ತು ಕತ್ತೆತ್ತಿ ನೋಡುವಂತೆಯೂ, ನಿಬ್ಬೆರಗಾಗಿ ನಿಲ್ಲುವಂತೆಯೂ, ಭಾರತದ ಮಾನವೀಯತೆಯನ್ನು ಗುರುತಿಸುವಂತೆಯೂ, ಜಗತ್ತು ತನ್ನಷ್ಟಕ್ಕೆ ತಾನು ಎದ್ದು ನಿಂತು ತಲೆ ಬಾಗಿ ನಮಿಸುವಂತೆ, ಕೈಗಳು ತಮ್ಮಷ್ಟಕ್ಕೆ ತಾವೇ ಭಾರತವನ್ನು ವಂದಿಸುವಂತೆ ಮಾಡಿದರು. ಜನವರಿಯಲ್ಲೇ ಆ ಇಬ್ಬರಲ್ಲಿ ಒಬ್ಬರದು ಜಯಂತಿ, […]

ನೈತಿಕತೆಯಿಲ್ಲದ ಮೇಲೆ ಬಹಳ ಕಠಿಣ ಕಾನೂನು ಕಾಯ್ದೆಗಳ ರೂಪಿಸಿಯೇನು ಫಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಅಗತ್ಯ, ಯೋಗ್ಯ ಕಾನೂನು ಕಾಯ್ದೆಗಳ ರೂಪಿಸುವುದು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಗಳ ಕರ್ತವ್ಯ! ಕಾನೂನು, ಕಾಯ್ದೆಗಳು ಸಮಾಜ ಸುವ್ಯವಸ್ಥಿತವಾಗಿರಲು, ನೆಮ್ಮದಿಯಿಂದಿರಲು ಸಹಕಾರಿ. ಅತಿ ಅವಶ್ಯಕ! ಹಾಗಂತ ಎಲ್ಲಾ ಅವುಗಳಿಂದನೇ ಅಲ್ಲಾ! ವ್ಯಕ್ತಿಯ, ಸಮಾಜದ, ದೇಶದ ಉದ್ಧಾರಕ್ಕೆ, ಆತ್ಮೋದ್ಧಾರಕ್ಕೆ ನೈತಿಕತೆಯೇ ಮೂಲ. ತಳಹದಿ! ಹಿಂದಿನವರು ನೈತಿಕತೆಯನ್ನು ಜೀವನದ ಉಸಿರು ಮಾಡಿಕೊಂಡಿದ್ದರಿಂದ ಉತ್ತಮ ಸಮಾಜ ನಿರ್ಮಾಣವಾಗಿತ್ತು. ಜನ ಶಾಂತಿ, ಸಹನೆ, ಸದಾಚಾರ, ಸದ್ಗುಣದಿಂದ ಬದುಕುತ್ತಿದ್ದರು. ಭಗವಂತನ ಮೇಲಿನ ಪರಮ ಭಕ್ತಿಯಿಂದ ಆತ್ಮೋದ್ಧಾರ ಮಾಡಿಕೊಂಡರು! ಅಂದು ಅಪರಾಧಗಳು ಇರಲಿಲ್ಲ ಎನ್ನುವುದಕ್ಕಿಂತ ಅವು ಅಲ್ಪ […]

ಸಡಿಲವಾಗುತ್ತಿರುವ ಸಂಬಂಧಗಳು !: ಕೆ ಟಿ ಸೋಮಶೇಖರ ಹೊಳಲ್ಕೆರೆ

ಬದಲಾವಣೆ ಜಗದ ನಿಯಮ! ಪ್ರಕೃತಿ ನಿತ್ಯನೂತನ. ನವನವೀನ! ಬದಲಾಗದಿದ್ದರೆ ಏಕತಾನತೆ ಉಂಟಾಗಿ ಬೇಸರ ಆವರಿಸಿ ಬದುಕಾಗುವುದು ಯಾತನಾಮಯ! ಬದಲಾವಣೆಯ ಗಾಳಿ ತರುವುದು ಉತ್ಸಾಹ. ನವ ಚೇತನ !ಹೊಸ ಚಿಗುರು ಹೂವು ಹಣ್ಣು! ಹೊಸತನ ತುಂಬಿ ಬದುಕಾಗುವುದು ನೂತನ! ಬದಲಾವಣೆಯೇ ಜೀವನಕೆ ಆಗುವುದು ಟಾನಿಕ್ ! ಅವಿಭಕ್ತಕುಟುಂಬಗಳು ಮಾಯವಾಗಿ ವಿಬಕ್ತಕುಟುಂಬಗಳು ಉಂಟಾಗಿರುವುದರಿಂದ, ಜಾತಿ ಧರ್ಮಗಳ ಕಪಿ ಮುಷ್ಟಿಯಿಂದ ಮಾನವ ಮುಕ್ತನಾಗುತ್ತಿರುವುದರಿಂದ, ಆಧುನಿಕ ಬದಲಾದ ಬದುಕಿನಿಂದ, ತಾಂತ್ರಿಕತೆ ಹೆಚ್ಚಾಗಿರುವುದರಿಂದ, ಶಿಕ್ಷಣಕ್ಕೆ, ಹಣಕ್ಕೆ ಪ್ರಾಧಾನ್ಯತೆ ಬಂದುದರಿಂದ, ವೈಯುಕ್ತಿಕ ಸ್ವಾತಂತ್ರ್ಯ ಅತಿಯಾಗಿರುವುದರಿಂದ, ಪಾಶ್ಚಿಮಾತ್ಯರ […]