ಸೂರ್ಯನ ಸುತ್ತುವ ಗ್ಲೋಬು ಮತ್ತು ನ್ಯೂಟನ್ನಿನ ಸೇಬು: ರೋಹಿತ್ ವಿ. ಸಾಗರ್

ಮೊನ್ನೆ ಹತ್ತಿರದ ಪ್ರಾಥಮಿಕ ಶಾಲೆಯೊಂದರ ಬಳಿ ಹೋಗುತ್ತಿದ್ದೆ, ಮೈದಾನದಲ್ಲಿ ‘ಸೂರ್ಯ’ ಎಂಬ ಫಲಕ ಹಿಡಿದ ಒಬ್ಬ ಹುಡುಗ ನಿಂತಿದ್ದ, ಆ ಶಾಲೆಯ ಮೇಷ್ಟ್ರು ಕೈಯಲ್ಲಿ ಒಂದು ಗ್ಲೋಬು ಹಿಡಿದು ಆ ಹುಡುಗನ ಸುತ್ತಾ ಸುತ್ತುತ್ತಿದ್ದರು ಉಳಿದವರು ಅವರಿಬ್ಬರನ್ನೇ ಬಾಯಿ ಕಳೆದುಕೊಂಡು ನೋಡುತ್ತಾ ನಿಂತಿದ್ದರು ನಾನೂ ಅವರನ್ನು ಸೇರಿಕೊಂಡೆ. ಅವರೇಕೆ ಹಾಗೆ ಮಾಡುತ್ತಿದ್ದಾರೆ ಎಂದು ಆ ಕ್ಷಣ ಅರ್ಥವಾಗಲಿಲ್ಲ, ಆಮೇಲೆ ವಿಷಯ ಹೊಳೆಯಿತು, ಗ್ರಹಗಳ  ಚಲನೆಯ ಬಗ್ಗೆ ಪಾಠ ಮಾಡಲು ಆ ಶಿಕ್ಷಕ ಈ ಚಟುವಟಿಕೆಯನ್ನು ಮಾಡಿಸುತ್ತಿದ್ದರು.  ಈಗ … Read more

ಸೂರ್ಯನ ಮೇಲೆ ಇರಲಿ ಭಕ್ತಿ, ಕೊಡುತಾನಂತೆ ಪುಗಸಟ್ಟೆ ಸೌರಶಕ್ತಿ: ರೋಹಿತ್ ವಿ. ಸಾಗರ್

ನಿಸರ್ಗದ ಅತೀ ಬುದ್ಧಿವಂತ ಕೂಸು ಎಂದೇ ಕರೆಯಲ್ಪಡುವ ಮಾನವನ ಅತೀ ಬುದ್ಧಿವಂತಿಕೆಯ ಪರಾಕಾಷ್ಟೆ ಆ ನಿಸರ್ಗದ ಬುಡವನ್ನೇ ಅಲುಗಾಡಿಸುವಂತದ್ದು. ಕುತೂಹಲ ಯೋಚನಾ ಸಾಮರ್ಥ್ಯದ ಬಲದಿಂದ  ಮೊದಲು ಬೆಂಕಿಯನ್ನು ಕಂಡುಹಿಡಿದ, ಅದರಿಂದ  ಬೇಕಾದದ್ದು, ಬೇಡವಾದದ್ದು ಎಲ್ಲವನ್ನೂ ಎಗ್ಗಿಲ್ಲದೆ ಮಾಡತೊಡಗಿದ. ಬೇಯಿಸಿದ ಆಹಾರ ರುಚಿಯೆನಿಸಿತು; ಬೆಂಕಿ ಉರಿಸಲು ಕಟ್ಟಿಗೆ ಬೇಕು ಕಾಡು ಕಡಿದ, ಬೆಂಕಿಯ ಬೆಳಕು ಬೇಕು ಕಾಡು ಕಡಿದ, ಮರಕ್ಕಿಂತ ಕಲ್ಲಿದ್ದಲು ಉತ್ತಮ ಎಂದು ಅರಿತ, ಗಣಿ ಬೇಕು, ಕಾಡು ಕಡಿದ, ವಿದ್ಯುತ್ ಕಂಡುಹಿಡಿದ, ಅದಕ್ಕೆ ಅಣೆಕಟ್ಟು ಬೇಕು, … Read more

ಕಣ್ಣರಿಯದ ವಿಜ್ಞಾನ, ಈ ನ್ಯಾನೋ ತಂತ್ರಜ್ಞಾನ: ರೋಹಿತ್ ವಿ. ಸಾಗರ್

ಆಟೋ ರಿಕ್ಷಾಗಳ ರೀತಿ ಸದ್ದು ಮಾಡುತ್ತಾ, ಹಳ್ಳಿಯಿಂದ ದಿಲ್ಲಿವರೆಗಿನ ರಸ್ತೆಗಳಲ್ಲಿ ಇಲಿಮರಿಗಳಂತೆ ಓಡಾಡುತ್ತಿರುವ, ಹೆದ್ದಾರಿಗಳಲ್ಲಿ ಇನ್ನೇನು ಲಾರಿಗಳ ಅಡಿಯಲ್ಲೇ ದಾಟಿ ಬಿಡುತ್ತವೇನೋ ಎಂಬ ಕಲ್ಪನೆಗಳನ್ನ ಹುಟ್ಟುಹಾಕಿದ ನ್ಯಾನೋ ಎಂಬ ಕಾರುಗಳ ಬಗ್ಗೆ ಖಂಡಿತವಾಗ್ಯೂ ಕೇಳಿಯೇ ಇರುತ್ತೀರಿ. ಆ ಕಾರಿನ ಆಕಾರ ಕುಬ್ಜ ರೀತಿಯದ್ದು ಎಂಬುದನ್ನು ಸಾರಿ ಹೇಳಲಿಕ್ಕೆ ನ್ಯಾನೋ ಎಂಬ ಹೆಸರನ್ನು ಟಾಟಾ ಕಂಪನಿ ಬಳಸಿಕೊಂಡಿತು. ಗ್ರೀಕ್ ಬಾಷೆಯ ಪದವಾಗಿರುವ ಈ ’ನ್ಯಾನೊ’ದ ಅರ್ಥ ’ಕುಬ್ಜ’ ಎಂದು, ಆದರೆ ನಮ್ಮ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಕೇವಲ … Read more

ವಿದ್ಯುತ್ ಎಂಬ ಮಹದುಪಕಾರಿ ಯಾಮಾರಿದರೆ ಬಲು ಅಪಾಯಕಾರಿ: ರೋಹಿತ್ ವಿ. ಸಾಗರ್

ಕರೆಂಟ್ ಅಥವಾ ವಿದ್ಯುತ್ ಎಂಬ ಶಬ್ದ ಯಾರಿಗೆ ತಾನೆ ಗೊತ್ತಿಲ್ಲ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ತರಹೇವಾರಿ ವಿಧಗಳಲ್ಲಿ ನಾವು ಅವಲಂಬಿಸಿರುವ, ಅದಿಲ್ಲದ ಜೀವನವನ್ನು ಊಹಿಸಲೂ ಹೆದರಬೇಕಾಗಿರುವಂತಹ ಅಪೂರ್ವ ಶಕ್ತಿಯ ಆಕರವೇ ಈ ’ವಿದ್ಯುತ್’ ಅಥವಾ ’ಕರೆಂಟ್’.    ಹಗಲು ರಾತ್ರಿಗಳೆನ್ನದೆ ಸೂರ್ಯ ಚಂದ್ರರನ್ನೂ ನಾಚಿಸುವ ಬೆಳಕಿನ ದೀಪಗಳು, ಬೆಳಗ್ಗೆ ಎದ್ದಕೂಡಲೇ ಸುಪ್ರಭಾತ ಹಾಡುವ ರೇಡಿಯೋ, ಎಫ್.ಎಮ್ ಗಳು, ಮುಂದೆ ಕೂತವರ ಕಾಲವನ್ನೇ ಕರಗಿಸಬಲ್ಲ ಮೂರ್ಖರ ಪೆಟ್ಟಿಗೆ ಎಂದೇ ಖ್ಯಾತಿ ಪಡೆದ ಟಿ.ವಿ.ಗಳು, ಜಾಣರ ಪೆಟ್ಟಿಗೆಯಂತಿರುವ ನಮ್ಮ … Read more

ವಿದ್ಯುತ್ ಅಪವ್ಯಯ ಬಿಟ್ಟುಬಿಡಿ , ಎಲ್.ಇ.ಡಿ ಬಂತು ದಾರಿ ಬಿಡಿ: ರೋಹಿತ್ ವಿ. ಸಾಗರ್

ವಿದ್ಯುತ್ ಅಥವಾ ಕರೆಂಟ್ ನಮಗೆ ತುಂಬಾ ಪರಿಚಿತವಾಗಿರುವ, ಅದಿಲ್ಲದೆ ಜೀವನವನ್ನು ಊಹಿಸಿಕೊಳ್ಳಲೂ ಆಗದಿರುವಂತಹ ಒಂದು ಮೂಲಭೂತ ಅಗತ್ಯತೆಯಾಗಿಬಿಟ್ಟಿದೆ. ಅದು ಹೇಗೆ ಎಂಬುದನ್ನ ಇಪ್ಪತ್ತೊಂದನೇ ಶತಮಾನದವರಾದ ನಮಗೆ ಬಿಡಿಸಿ ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ನಿತ್ಯ ಜೀವನದ ಹೆಚ್ಚು ಕಡಿಮೆ ಎಲ್ಲಾ ಕ್ರಿಯೆಗಳಿಗೂ ನಾವೀಗ ವಿದ್ಯುತ್ತನ್ನೇ ಅವಲಂಬಿಸಿದ್ದೇವೆ. ಯಾವುದೇ ಶೋಕಿಗಳಿಲ್ಲದಿದ್ದರೂ ಕನಿಷ್ಟ ಬೆಳಕಿಗಾಗಿಯಾದರೂ ನಮಗೆ ವಿದ್ಯುತ್ ಬೇಕೇ ಬೇಕು. ಸುತ್ತಲಿನ ಪರಿಸರದ ಅಂದ-ಚೆಂದಗಳನ್ನು, ಆಗು ಹೋಗುಗಳನ್ನು ಕಣ್ತುಂಬಿಕೊಳ್ಳಲು ಬೆಳಕು ಬೇಕು. ಹಗಲಿನಲ್ಲಿ ಸೂರ್ಯ ಪುಗಸಟ್ಟೆಯಾಗಿ, ಧಾರಾಕಾರವಾಗಿ ಬೆಳಕನ್ನು ನೀಡಿಬಿಡುತ್ತಾನೆ. ಆದರೆ … Read more

ಬೆಳಕು ಮತ್ತು ಅದರೊಂದಿಗೆ ಜೀವನದ ತಳುಕು: ರೋಹಿತ್ ವಿ. ಸಾಗರ್

ಬಹಳ ಹಿಂದಿನಿಂದಲೂ ಮಾನವನ ಕುತೂಹಲವನ್ನು ಅತಿಯಾಗಿ ಕೆರಳಿಸುತ್ತಿರುವ ವಿಷಯಗಳಲ್ಲಿ ಬೆಳಕು ಸಹ ಒಂದು. ನಮ್ಮ ಜೀವನದಲ್ಲಿ  ವಿವಿಧ ಮಜಲುಗಳಲ್ಲಿ ವಿವಿಧ ರೀತಿ-ನೀತಿಗಳಲ್ಲಿ ಬೆಳಕು ನಮ್ಮೊಂದಿಗೆ ಬೆರೆತು ಹೋಗಿದೆ. ಜೊತೆಗೆ ಅವೆಲ್ಲವಕ್ಕೂ ಸಂಬಂಧಪಟ್ಟ ವಿವಿಧ ಪ್ರಶ್ನೆಗಳನ್ನೂ ನಮ್ಮಲ್ಲಿ ಹುಟ್ಟು ಹಾಕುತ್ತಿದೆ. ಬೆಳಕಿನಲ್ಲಿ ಹಸಿರಾದ ಎಲೆ ಹಸಿರಾಗಿಯೇ ಏಕೆ ಕಾಣುತ್ತದೆ ? ಆಕಾಶ ಹಗಲಿನಲ್ಲಿ ನೀಲಿಯಾಗಿ ಬೆಳಗ್ಗೆ ಮತ್ತು ಸಂಜೆ ಕೆಂಪಾಗಿ ಹಾಗೂ ರಾತ್ರಿಯಲ್ಲಿ ಕಪ್ಪಾಗಿ ಕಾಣುವುದೇಕೆ ? ಎಂಬ ಎಷ್ಟೋ ಪ್ರಶ್ನೆಗಳು ನಮ್ಮ ನಿಮ್ಮೆಲ್ಲರ ಮನಗಳಲ್ಲಿ ಹುಟ್ಟುತ್ತವೆಯಾದರೂ, ಉತ್ತರ … Read more

ತಮಸೋಮ ಜ್ಯೋತಿರ್ಗಮಯ . . . ಓ ಬೆಳಕೇ ನೀನೆಷ್ಟು ವಿಸ್ಮಯ: ರೋಹಿತ್ ವಿ. ಸಾಗರ್

ಅಸತೋಮ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂ ಗಮಯ ಎಂದು ಶಾಂತಿ ಮಂತ್ರದಲ್ಲಿ ನಮ್ಮ ಹಿರಿಯರು ಬೆಳಕನ್ನು ಸತ್ಯಕ್ಕೆ, ಮನುಷ್ಯ ಜೀವನದ ಅಮೃತತ್ವಕ್ಕೆ ಹೋಲಿಸಿದ್ದಾರೆ. ಈ ಬೆಳಕು ಎಂಬುದು ಎಷ್ಟು ಬೆಲೆಬಾಳುತ್ತದೆ ಎಂದೇನಾದರು ನೀವು ಸರಳವಾಗಿ ತಿಳಿಯಬೇಕೆಂದರೆ, ಒಂದು ಕ್ಷಣ ಅದು ಇಲ್ಲದಿದ್ದರೆ ಏನಾಗುತ್ತಿತ್ತು ಯೋಚಿಸಿ? ಕತ್ತಲಲ್ಲಿ ನಮ್ಮ ಹಿತ್ತಲಲ್ಲಿ ಓಡಾಡಲೂ ಹಿಂಜರಿಯುತ್ತೇವೆ ನಾವು; ಅಂತಹದ್ದರಲ್ಲಿ ವಿಶ್ವದಲ್ಲೆಲ್ಲೂ ಬೆಳಕೇ ಇಲ್ಲದಿದ್ದರೆ ಏನಾಗುತಿತ್ತು ಎಂಬುದನ್ನು ಊಹಿಸಲು ಅಥವಾ ಕಲ್ಪಿಸಲೂ ಸಾಧ್ಯವಿಲ್ಲದಷ್ಟರ ಮಟ್ಟಿಗೆ ನಾವು ಬೆಳಕಿನೊಂದಿಗೆ ಬೆರೆತು ಬಿಟ್ಟಿದ್ದೇವೆ, ಅದೇ … Read more

ಗುರುತ್ವದ ಅಂಕಿತವಿರಬಹುದೇನೋ..? ಬ್ರಹ್ಮನೆಂಬ ಹೆಸರು…: ರೋಹಿತ್ ವಿ. ಸಾಗರ್

’ಕಾಲು ಜಾರಿದರೆ ಸೊಂಟ ಮುರಿಯುತ್ತದೆ’ ಎಂಬುವುದರಿಂದ ಹಿಡಿದು ’ಆಕಾಶಕ್ಕೆ ಉಗಿದರೆ ಮುಖಕ್ಕೆ ಬೀಳುತ್ತದೆ’ ಎಂಬ ಮಾತುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದರೆ, ಮೇಲಿದ್ದ ವಸ್ತು ಅಥವಾ ಮೇಲಕ್ಕೆಸೆದ ವಸ್ತು ಕೆಳಗೇ ಬೀಳಬೇಕು ಅನ್ನುವುದು ಎಷ್ಟೊಂದು ಸಹಜಕ್ರಿಯೆಯಲ್ಲವೇ ಎನಿಸಿಬಿಡುತ್ತದೆ. ನಾವು ಹುಟ್ಟಿದಾಗಿನಿಂದಲೂ ನೋಡುತ್ತಿರುವ, ನಾವು ಆಗಬಾರದೆಂದುಕೊಂಡರೂ ಆಗೇ ಆಗುವ ಹಲವು ಕ್ರಿಯೆಗಳಲ್ಲಿ ಇದೂ ಒಂದಾದ್ದರಿಂದ, ಇಂತಹ ವಿಷಯಗಳು ನಮ್ಮ ಕುತೂಹಲದಿಂದ ಪ್ರಾಯಶಃ ದೂರ ಸರಿದು ಬಿಟ್ಟಿವೆ. ಆದರೆ ನ್ಯೂಟನ್ ಎಂಬ ಭೌತಶಾಸ್ತ್ರಜ್ಞ ನಮ್ಮ ಹಾಗೆ ಸಹಜವಾಗಿ ನೋಡದೆ ಆ ಕ್ರಿಯೆಯಲ್ಲಿ ಅಡಗಿಕೊಂಡಿದ್ದ ವಿಶೇಷತೆಯನ್ನು … Read more

ಭೌತ ವಿಜ್ಞಾನದ ಬೆನ್ನೇರಿ, ನಿಸರ್ಗದಲ್ಲೊಂದು ಸವಾರಿ: ರೋಹಿತ್ ವಿ. ಸಾಗರ್

ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸುವು ಜನಜೀವನಕೆ ಎಂದು ಡಿ.ವಿ.ಜಿಯವರು ’ಮಂಕುತಿಮ್ಮನಕಗ್ಗ’ದಲ್ಲಿ ಹೇಳಿರುವಂತೆ ಯಾವ ಆಚರಣೆ, ಸಂಪ್ರದಾಯ ಮತ್ತು ತಿಳುವಳಿಕೆಗಳು ವಿಜ್ಞಾನದೊಂದಿಗೆ ಬೆಸೆಯುತ್ತವೆಯೋ ಅವುಗಳಿಂದ ಮಾತ್ರ ಮನುಕುಲದ ಉನ್ನತೀಕರಣ ಸಾಧ್ಯ. ಆದರೆ ಈ ವಿಜ್ಞಾನವನ್ನು ಜನರಿಗೆ ತಲುಪಿಸುವುದು ಪ್ರಯಾಸದ ಕೆಲಸ ಏಕೆಂದರೆ ಎಲ್ಲಾ ಜನರಿಗೂ ಇಂಗ್ಲೀಷ್ ಬರುವುದಿಲ್ಲ ; ವಿಜ್ಞಾನದ ಪದಗಳು ಕನ್ನಡದಲ್ಲಿ ಸಿಗುವುದೇ ಇಲ್ಲ ಎನ್ನುವುದು ಕೆಲವು ಜ್ಞಾನಿಗಳ ಆಂಬೋಣ. ಇಂತಹವರ ಬಗ್ಗೆ ಜಗದೀಶ್ಚಂದ್ರ ಬೋಸ್ ಹಿಂದೊಮ್ಮೆ ಹೇಳಿದ್ದರಂತೆ ನಿಮಗೆ ಬಂಗಾಳಿ ಬಾಷೆಯಲ್ಲಿ ವಿಜ್ಞಾನವನ್ನು … Read more