Facebook

Archive for the ‘ಪಂಜು-ವಿಶೇಷ’ Category

ಪುದೀನ ರೈಸ್ ಮತ್ತು ಹಲಸಿನ ಹಣ್ಣಿನ ಪಾಯಸ ರೆಸಿಪಿ: ವೇದಾವತಿ ಹೆಚ್. ಎಸ್.

ಪುದೀನ ರೈಸ್. ಬೇಕಾಗುವ ಸಾಮಾಗ್ರಿಗಳು: ಪುದೀನ ಸೊಪ್ಪು ½ ಕಟ್ಟು ಕೊತ್ತಂಬರಿ ಸೊಪ್ಪು ½ ಕಟ್ಟು ಬೆಳ್ಳುಳ್ಳಿ 3 ಶುಂಠಿ 1ಇಂಚು ಹಸಿ ಮೆಣಸಿನಕಾಯಿ 4 ಈರುಳ್ಳಿ 1 ತೆಂಗಿನ ತುರಿ ½ ಕಪ್ ನೀರು ¼ ಕಪ್ ಇಷ್ಟನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಉಳಿದ ಸಾಮಾಗ್ರಿಗಳು: ತುಪ್ಪ 3 ಚಮಚ ಗೋಡಂಬಿ ಸ್ವಲ್ಪ ಜೀರಿಗೆ 1 ಚಮಚ ಕಾಳುಮೆಣಸು 10 ಪಲಾವ್ ಎಲೆ 1 ಲವಂಗ 4 ಸ್ಟಾರ್ ಅನೈಸ್ 1 ಚಕ್ಕೆ ಒಂದಿಂಚು […]

ಪಂಜುವಿನ ಯುಗಾದಿ ವಿಶೇಷಾಂಕ

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ… ಪಂಜುವಿನ ಯುಗಾದಿ ವಿಶೇಷಾಂಕ ನಿಮ್ಮ ಓದಿಗೆ.. ಈ ಸಂಚಿಕೆಯಲ್ಲಿ…. ಕಾವ್ಯಧಾರೆ 1 ಮಮತಾ ಅರಸೀಕೆರೆ ಮೌಲ್ಯ ಎಂ. ಗೋವಿಂದ ಹೆಗಡೆ ಪ್ರವೀಣಕುಮಾರ್ .ಗೋಣಿ ಷಣ್ಮುಖ ತಾಂಡೇಲ್ ಬೀನಾ ಶಿವಪ್ರಸಾದ ಶಿವಕುಮಾರ ಕರನಂದಿ ಮಾ.ವೆಂ.ಶ್ರೀನಾಥ ನಂದೀಶ್ ಮಾಧವ ಕುಲಕರ್ಣಿ, ಪುಣೆ ಸಂದೀಪ ಫಡ್ಕೆ, ಮುಂಡಾಜೆ ವಿಭಾ ವಿಶ್ವನಾಥ್ ಜಹಾನ್ ಆರಾ ಎಚ್.ಕೊಳೂರು ಆದಿತ್ಯಾ ಮೈಸೂರು ರಂಜಿತ ದರ್ಶಿನಿ ಆರ್. ಎಸ್ ಯಲ್ಲಪ್ಪ ಎಮ್ ಮರ್ಚೇಡ್ ಕುರಿಯ ಕಾಲು: ಜೆ.ವಿ.ಕಾರ್ಲೊ ಉದಾತ್ತ ಜೀವಿ ಪ್ಲಾಟಿಪಸ್: […]

ವಿದ್ಯಾಕಾಶಿಯೊಳಗ ಉಗಾದಿ, ಬಾರೋ ವಸಂತ ಬಾ……..!!!!!: ಡಾ. ಅನಿರುದ್ಧ ಸು ಕುಲಕರ್ಣಿ

ವಿದ್ಯಾಕಾಶಿ ಧಾರವಾಡ, ರಾಜ್ಯದ ಎರಡನೇ ಸಾಂಸ್ಕೃತಿಕ ನಗರಿ, ಮಲೆನಾಡಿಗೆ ದ್ವಾರ ಅಂದ್ರೆ ಧಾರವಾಡ, ಧಾರವಾಡ ಅಂದ ಕೂಡಲೇ ಎಲ್ಲಾರಿಗೂ ಮೊದಲ ನೆನಪು ಆಗುದು ಧಾರವಾಡ ಪೇಢ, ಕರ್ನಾಟಕ ವಿಶ್ವವಿದ್ಯಾಲಯ, ಮಾಳಮಡ್ಡಿಯ ವನವಾಸಿ ರಾಮದೇವರ ಗುಡಿ, ಉತ್ತರಾದಿಮಠ, ಸಾಧನಕೇರಿಯ ಬೇಂದ್ರೆ ಅಜ್ಜ, ಗೋಪಾಲಪುರದ ಬೆಟಗೇರಿ ಕೃಷ್ಣ ಶರ್ಮ, ನುಗ್ಗಿಕೇರಿ ಹನುಮಪ್ಪ, ಸೋಮೇಶ್ವರ ಗುಡಿ, ವಿದ್ಯಾಗಿರಿ, ಧರ್ಮಸ್ಥಳ ಆಸ್ಪತ್ರೆ., ಇನ್ನು ಅನೇಕ ಅವ. ಹೋಳಿಹುಣ್ಣಿಮೆ ಮುಂದೆ ಹಳೆಯ ಡ್ರೆಸ್ ಯಾವ ಇರತಾವ ಅವನ್ನ ಸ್ವಲ್ಪ ಇಸ್ತ್ರಿ ಮಾಡಿ, ಬಣ್ಣ ಆಡಲಿಕ್ಕೆ […]

ಆಧುನಿಕ ವಿಜ್ಞಾನಕ್ಕೆ ಸವಾಲಾದ ಪುರಾತನ ಸಲಕರಣೆಗಳು: ಆರ್.ಬಿ.ಗುರುಬಸವರಾಜ ಹೊಳಗುಂದಿ

21ನೇ ಶತಮಾನದಲ್ಲಿ ನಮ್ಮ ಪೂರ್ವಜರ ಹೆಚ್ಚಿನ ಸಹಾಯವಿಲ್ಲದೇ ನಾವು ಮಹತ್ತರವಾದ ಮತ್ತು ಪ್ರಬಲವಾದ ತಾಂತ್ರಿಕ ಸಾಮ್ರಾಜ್ಯವನ್ನು ಸಾಧಿಸಿದ್ದೇವೆಂದು ಭಾವಿಸುತ್ತೇವೆ. ಆದರೆ ಭಾವಿಸಿದಂತೆ ಇದು ಸತ್ಯವಲ್ಲ. ಇತ್ತೀಚಿನ ಸಂಶೋಧನೆ ಎಂದು ಹೇಳುವ ಬಹುತೇಕ ವಸ್ತುಗಳನ್ನು ನಮ್ಮ ಪೂರ್ವಜರು ಆಗಲೇ ಬಳಸಿದ್ದರು ಮತ್ತು ನಾವು ಈಗ ಯೋಚಿಸುವುದಕ್ಕಿಂತ ಮುಂಚಿತವಾಗಿ ಅವರು ವೈಜ್ಞಾನಿಕವಾಗಿ ಮುಂದುವರೆದಿದ್ದರು ಎನ್ನುವುದಕ್ಕೆ ಕೆಲವೊಂದು ನಿದರ್ಶನಗಳು ದೊರೆಯುತ್ತವೆ. ಅಂತಹ ಕೆಲ ಸಲಕರಣೆಗಳೇ ನಮ್ಮ ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಹಾಗೂ ವಿವಿಧ ಸಂಶೋಧನೆಗಳಿಗೆ ಪ್ರೇರಣೆಯಾಗಿವೆ. ಹಾಗಾದರೆ ಆ ವಸ್ತುಗಳು ಯಾವುವು? […]

ಜೀವ ಜೀವನದ ಭಿನ್ನತೆಯೊಳಗಿನ ಸಂಭ್ರಮ: ಪಿ. ಕೆ. ಜೈನ್ ಚಪ್ಪರಿಕೆ

ಅಂದು ಪ್ರಕೃತಿಯು ತನ್ನ ವಸಂತಕ್ಕೆ ಕಾಲಿಟ್ಟ ಸಮಯ. ಆ ತಾಯಿಯು ತನ್ನೆಲ್ಲ ನೋವುಗಳನ್ನು ಮರೆತು ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳುತ್ತಲ್ಲಿದ್ದಳು. ವಸಂತ ಎಂಬ ಪದವೇ ಹಾಗೆ. ಅವನಿಗೆ ಎಣೆ ಯಾರು? ಯಾರನ್ನಾದರೂ ಬಿಟ್ಟಿಹನೆ? ಸೃಷ್ಟಿಯ ರುವಾರಿಯಾದ ಬ್ರಹ್ಮನನ್ನೇ ಬಿಡದ ಮಾರ…ಪ್ರಕೃತಿಯನ್ನು ಬಿಡಬಲ್ಲನೆ? ಹಾಗೆಯೇ ವಸಂತಕ್ಕೆ ಕಾಲಿಟ್ಟ ಭೂಮಿ ತಾಯಿಯ ಜೊತೆ ಅನೋನ್ಯದಿಂದ ಜೀವಿಸುತ್ತಿದ್ದ ಪ್ರಾಣಿ ಪಕ್ಷಿಗಳು, ಗಿಡ ಮರಗಳಿಗೂ ಅದರ ಅನುಭವ ಆಗಬೇಕಲ್ಲವೇ… ಗಿಡ ಮರಗಳು ಮೈ ಕೊಡಗಿ ಚಿಗುರೊಡೆದು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದವು…ಅವುಗಳನ್ನು ಅವಲಂಬಿಸಿದ ಪ್ರಾಣಿ ಪಕ್ಷಿಗಳಲ್ಲೂ […]

ಪ್ರಕೃತಿಯ ಹಾಡು: ಧನು ಮಲ್ಪೆ

ನೀವು ಎಂದಾದರೂ ಪ್ರಕೃತಿಯ ಸಂಗೀತ ಕೇಳಿದ್ದೀರಾ. . ? ಪಾಪ್ ಗೊತ್ತು ರಾಕ್‌ ಗೊತ್ತು ಇದ್ಯಾವುದಪ್ಪಾ ಹೊಸ ಪ್ರಕಾರದ ಸಂಗೀತ ಅಂತೀರಾ? ಹಾಗಾದರೆ ಇಲ್ಲಿ ಕೇಳಿ. ಪ್ರಕೃತಿಯ ಪ್ರತಿಯೊಂದು ಶಬ್ಧವೂ ಮಧುರ ಸಂಗೀತವೆ. ಆದರೆ ಸಿಟಿಯಲ್ಲಿ ಇರುವವರಿಗೆ ಆಟೋರಿಕ್ಷಾ ಬಸ್ಸುಗಳ ಇಂಜಿನ್ ಶಬ್ಧ, ಕರ್ಕಶ ಹಾರ್ನ್ ಬಿಟ್ಟು ಬೇರೆ ಶಬ್ದ ಮರೆತೇ ಹೋಗಿರಬಹುದು. ಪ್ರಕೃತಿಯ ಹಾಡು ಕೇಳಬೇಕಿದ್ದರೆ ನೀವು ಮಾನವ ನಿರ್ಮಿತ ಕೃತಕ ಶಬ್ಧಗಳೇ ಇಲ್ಲದ ದೊಡ್ಡ ಪರ್ವತವನ್ನೇರಬೇಕು ಅಥವಾ ಬಿಸಿಲೇ ನೆಲ ತಾಗದ ದಟ್ಟ ಅರಣ್ಯವನ್ನು […]

ಕುವೆಂಪು ಮತ್ತು ಕನ್ನಡ: ದೊರೇಶ್

 ಡಿಸೆಂಬರ್ 29 ಕುವೆಂಪು ಅವರ ಹುಟ್ಟುಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಆದಿಕವಿ ಪಂಪನಿಂದ ಸಶಕ್ತ ಕಾವ್ಯ ಮಾರ್ಗವನ್ನು ಕಂಡುಕೊಂಡ ಕನ್ನಡ ಸಾಹಿತ್ಯವು ಅಗಾಧವಾಗಿ ಬೆಳೆದಿರುವುದಷ್ಟೇ ಅಲ್ಲದೆ ಅನುಪಮ ಕೊಡುಗೆಯನ್ನು ವಿಶ್ವ ಸಾಹಿತ್ಯಕ್ಕೆ ನೀಡಿದೆ. ಈ ಕನ್ನಡದ ಸಾಹಿತ್ಯ ನದಿಯು ತನ್ನ ಸುದೀರ್ಘ ಪಯಣದಲ್ಲಿ ಆಚೀಚೆಯಿಂದ ಜಲದ್ರವ್ಯಗಳನ್ನು ಪಡೆದು ಮುಂದೆ ಸಾಗಿ ಸಾಗರವಾಗಿ ರೂಪುಗೊಂಡಿತು. ಆ ಸಾಗರದಲ್ಲಿ ಮುತ್ತುರತ್ನಗಳು ನಿರ್ಮಾಣವಾದವು. ಅದರಲ್ಲೊಂದು ಅದ್ಭುತ ಮುತ್ತು ಕುವೆಂಪು.ಅವರ ಸಾಧನೆಯ ಪ್ರತಿಯೊಂದು ಹೆಜ್ಜೆಯಲ್ಲೂ ಕನ್ನಡ ಸಂಸ್ಕೃತಿಯ ದರ್ಶನವಾಗುತ್ತದೆ. ಕುವೆಂಪು ಅವರಷ್ಟು ಕನ್ನಡದ ಪರವಾಗಿ […]

ಕುಪ್ಪಳ್ಳಿಯ ಕವಿಶೈಲದ ಮರೆಯಲಾಗದ ನೆನಪುಗಳು: ವೈ.ಬಿ.ಕಡಕೋಳ

ಹತ್ತು ವರ್ಷಗಳ ಹಿಂದಿನ ನೆನಪು (2007) ಕುವೆಂಪುರ ಮನೆಯಲ್ಲಿ ಐದು ದಿನಗಳ ಕಾಲ ಸಂಶೋಧನ ವಿದ್ಯಾರ್ಥಿಗಳಿಗೆ ಕಮ್ಮಟವನ್ನು ಅನಿಕೇತನ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಐದು ದಿನಗಳು ಕಮ್ಮಟದ ಜೊತೆಗೆ ಕವಿಮನೆಯನ್ನು ನೋಡುತ್ತ ಅಲ್ಲಿನ ವಾತಾವರಣದ ಜೊತೆಗೆ ಕುವೆಂಪುರವರ ಬದುಕಿನ ಘಟ್ಟಗಳ ಹಾಗೂ ಅವರ ಕೃತಿಗಳ ಓದು ನನಗೆ ಹಿಡಿಸಿತ್ತು. ಆ ಐದು ದಿನಗಳ ಅವಧಿಯ ನಂತರ ಆ ಸ್ಥಳ ಪರಿಸರ ಬಿಟ್ಟು ಬರುವಾಗ ಕವಿಸ್ಮøತಿಯನ್ನು ಮನದಲ್ಲಿ ಹೊತ್ತು ಹೊರಬರಬೇಕಾಯಿತು.ಆ ದಿನ ಅವರ ಹುಟ್ಟು ಹಬ್ಬದ ಸಡಗರ ಎಲ್ಲ ಶಿಬಿರಾರ್ಥಿಗಳೊಡನೆ […]

ಲೇಡೀಸ್ ಬೋಗಿ: ಪ್ರೇಮಾ ಟಿ ಎಮ್ ಆರ್

ರೈಲು ಸಿಳ್ಳೆ ಹೊಡೆಯುತ್ತ ಹೊರಟಿದೆ. ಲೇಡೀಸ್ ಬೋಗಿ ತುಂಬಿ ತುಳುಕುತ್ತಿದೆ. ಮುಚ್ಚಿದ  ಕಿಟಕಿ ಗಾಜಿನಮೇಲೆ ಮಳೆನೀರು ಧಾರೆಯಾಗಿ ಹರಿಯುತ್ತಿದೆ. ಒಳಗೆ ಬದುಕಿನ ಕಥೆಗಳು  ಮಾತುಗಳಾಗಿ ಬಿಚ್ಚಿಕೊಳ್ಳುತ್ತಿವೆ. ಇನ್ನಷ್ಟು ಕಥೆಗಳು ಸರದಿಯಲ್ಲಿವೆ. ಅವಳು ಕಸ್ತೂರಿ.  ಕಾವೇರಿಯಂತೆ ತಂಪಿನ ಹುಡುಗಿ. ಅವಳ ನಗು ರೇಶಿಮೆಯಷ್ಟು ನವಿರು. ಜುಳುಗುಡುವ ನೀರ ಮೈಮೇಲೆ ಮೂಡುವ ಸುಳಿಯಂಥ ಕೆನ್ನೆಗುಳಿ. ಕಸ್ತೂರಿ ಏಳನೇ ತರಗತಿ ಮುಟ್ಟುವದರೊಳಗೆ ಅಮ್ಮ ಮತ್ತೆ ನಾಲ್ಕು ಹೆತ್ತಿದ್ದಳು. ನಿತ್ಯದ ಗಂಜಿಗೆ ಅಮ್ಮ ಅಪ್ಪನಿಗೆ ನೆರಳಾಗಿ ನಡೆಯಬೇಕು  ಹೊರಗಿನ ದುಡಿತಕ್ಕೆ. ತಮ್ಮ ತಂಗಿಯರು  […]