Facebook

Archive for the ‘ಪಂಜು-ವಿಶೇಷ’ Category

“ಯುಗಾದಿ: ನಿನ್ನೆ-ನಾಳೆಗಳೆಂಬ ಬೇವು-ಬೆಲ್ಲಗಳು”: ಪೂಜಾ ಗುಜರನ್, ಮಂಗಳೂರು

ಮನುಷ್ಯ ಪ್ರತಿದಿನ ಹುಟ್ಟಿ ಪ್ರತಿದಿನ ಸಾಯುತ್ತಾನೆ. ಅವನಿಗೆ ಪ್ರತಿದಿನವೂ ಹೊಸ ಹುಟ್ಟು. ಹಾಗೇ ಈ ಪ್ರಕೃತಿ ಕೂಡ ಪ್ರತಿವರ್ಷವೂ ಹೊಸತನದ ಹೊಸ್ತಿಲಲ್ಲಿ ಸಂಭ್ರಮಿಸುವ ಹೊಸ ಯುಗದ ಆರಂಭವನ್ನು ಯುಗಾದಿಯಾಗಿ ಸಂಭ್ರಮಿಸಿ ಸಿಹಿ ಕಹಿಯನ್ನು ಸಮವಾಗಿ ಸವಿಯಲು ಕಲಿಸುತ್ತದೆ. ಬದುಕೆಂದರೆ ಹಾಗೇ ತಾನೆ ಒಮ್ಮೆ ಸುಖ ಒಮ್ಮೆ ದುಃಖ, ಸುಂದರ ಸ್ನೇಹ ಅಸಹ್ಯ ದ್ವೇಷ, ಮುಗಿಯದ ಆಸೆ. ಕಾಡಿಸುವ ಹತಾಶೆ, ನಿರಂತರ ಭಕ್ತಿ. ಕಾಣದ ಭಯ. ಹುಟ್ಟು ಸಾವಿನ ನಡುವೆ ಹಾದು ಹೋಗುವ ಸಣ್ಣ ಗೆರೆಯಂತೆ ಈ ಬದುಕು. […]

ಆರು ವರ್ಷದ ಬಾಲ ಪ್ರತಿಭೆ ಕುಮಾರಿ ಮೈತ್ರಿ : ನಿಯಾಜ್ ಪಡೀಲ್

ವಯಸ್ಸು ಆರು ಸಾಧನೆ ನೂರಾರು ಮಾಡಿದ ಬೇಲೂರಿನ ನಾಟ್ಯ ಶಾಂತಲೆ, ನಾಟ್ಯ ಮಯೂರಿ ಕುಮಾರಿ ಮೈತ್ರಿ ಎಸ್ ಮಾದಗುಂಡಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತು ಎಷ್ಟು ಸತ್ಯ. ಈ ಪದವನ್ನು ಕೇಳಲು ಹಿತ ಅನ್ನಿಸುತ್ತದೆ. ಸಾಧಕರಿಗೆ ಸಾಧನೆಯ ಹಾದಿಯಲ್ಲಿ ಇರುವವರಿಗೆ ಈ ಮಾತು ನಿಜಕ್ಕೂ ಅಕ್ಷರಶಃ ಹೇಳಿ ಮಾಡಿಸಿದಂತಿದೆ. ಇಂದಿನ ಬಾಲ ಪ್ರತಿಭೆಗಳಿಗೂ ಈ ಮಾತು ಹೊಂದಿಕೆಯಾಗುತ್ತದೆ. ಅದೆಷ್ಟೋ ಬಾಲ ಪ್ರತಿಭೆಗಳು ನಮ್ಮ ನಿಮ್ಮ ನಡುವೆ ಇದ್ದಾರೆ. ಅಂತಹ ಪ್ರತಿಭೆ ಬೇಲೂರಿನ ಆರು ವರ್ಷದ ಬಾಲ […]

ಯುಗಾದಿ ವಿಶೇಷಾಂಕಕ್ಕೆ ಬರಹ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ನಿಮ್ಮೆಲ್ಲರ ಸಹಕಾರದಿಂದ ಪಂಜು ತನ್ನ ಎಂಟನೇ ವರ್ಷದ ಯುಗಾದಿಯ ಸಂಭ್ರಮದಲ್ಲಿದೆ. ಕಳೆದ ವರ್ಷಗಳಂತೆ ಈ ಬಾರಿಯೂ ಯುಗಾದಿ ವಿಶೇಷಾಂಕವನ್ನು ತರಲು ಪಂಜು ಬಯಸುತ್ತದೆ. ಆದ ಕಾರಣ ಈ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ಮಾರ್ಚ್ 23 ರ ಸಂಜೆಯೊಳಗೆ ನಮಗೆ ತಲುಪಲಿ… ನಿಮ್ಮ ಬರಹಗಳನ್ನು editor.panju@gmail.com ಮತ್ತು smnattu@gmail.com ಮೇಲ್ ಐಡಿಗಳಿಗೆ ಕಳುಹಿಸಿಕೊಡಿ. ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ… […]

ಪಂಜು ಕಾವ್ಯಧಾರೆ

ಒಂದು ಟೋಪಿಯ ಸುತ್ತ… ಊರ ಕೇರಿಯಿಂದ ಉದ್ದುದ್ದ ಹೆಜ್ಜೆಯನ್ನಿಟ್ಟು ಹೊರಟ ಊರಗೌಡ ಅಂದು ಕಂಡವರ ಕಣ್ಣಿಗೆ ಒಬ್ಬ ಬ್ರಿಟಿಷ ದಂಡನಾಯಕನಂತೆ ಕಾಣುತ್ತಿದ್ದ ಯಾವದೋ ವಸ್ತುಸಂಗ್ರಹಾಲಯದಿಂದ ಹೊತ್ತುತಂದಂತೆ ಬೆತ್ತದಿಂದ ಗೋಲಾಕಾರವಾಗಿ ಹೆಣೆದ ಹಳೆಯ ಟೋಪಿಯೊಂದು ಆತನ ತಲೆಯ ಮೇಲೆ ಕೂತು ಇಡೀ ಪ್ರಪಂಚವನ್ನೇ ಕೊಂದುಬಿಡಬೇಕೆನ್ನುವ ಅವಸರದಲ್ಲಿತ್ತು ಈಗಷ್ಟೇ ಉದಯಿಸಿದ ಆತನ ಕಣ್ಣಲ್ಲಿನ ಕೆಂಪು ಸೂರ್ಯ, ಸೆಟೆದುನಿಂತ ಮೈಮೇಲಿನ ರೋಮಗಳು, ಬಿಳಿಯ ಮೀಸೆ ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗಿ ಆ ಮೀಸೆಯ ಬುಡದಲ್ಲಿ ಹುಟ್ಟಿಕೊಂಡ ಕೋರೆಹಲ್ಲಿನ ರಕ್ಕಸನಂತೆ ಒರಟು ಧ್ವನಿಯಲ್ಲಿ ನಕ್ಕ…. […]

ಶ್ರೇಷ್ಠ ಸಾಹಿತಿ ವಿಲಿಯಂ ಶೇಕ್ಸಪೀಯರ್ ಬದುಕು ಬರಹ ಮತ್ತು ಕಾಲ: ನಾಗರೇಖ ಗಾಂವಕರ

ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತಿ ವಿಲಿಯಂ ಶೇಕ್ಸಪಿಯರ ಎಲ್ಲ ಕಾಲ ದೇಶಗಳಿಗೂ ಪ್ರಶ್ತುತ ಎನ್ನಿಸುವ ಸಾಹಿತ್ಯ ಕೃತಿಗಳ ರಚಿಸುವ ಮೂಲಕ ಸರ್ವಮಾನ್ಯ ಸಾಹಿತಿ ಎಂದೇ ಪ್ರಸಿದ್ಧ. ತನ್ನ ಜೀವನ ಮತ್ತು ಬರವಣಿಗೆಗಳಲ್ಲಿ ಪ್ರೌಢತೆಯನ್ನು ಬಿಂಬಿಸಿದ್ದ ಶೇಕ್ಸಪಿಯರ ಜ್ಞಾನ, ಔದಾರ್ಯ, ನಂಬಿಕೆ, ಯುವ ಪ್ರೇಮದ ತುಡಿತ, ಕ್ಷಮೆ ಹೀಗೆ ಮಾನವ ಸಂವೇದನೆಗಳ ಸುತ್ತ ಹೆಣೆದ ಆತನ ಕೃತಿಗಳು ಲೋಕ ಪ್ರಸಿದ್ಧವಾಗಿವೆ. ಇಂಗ್ಲೀಷ ಸಾಹಿತ್ಯ ಲೋಕದಲ್ಲಿ ಎಲಿಜಬೆತನ್ ಯುಗ ಸುವರ್ಣ ಕಾಲ. ಐತಿಹಾಸಿಕವಾಗಿ ಜ್ಞಾನಪುನರುಜ್ಜೀವನ, ಧಾರ್ಮಿಕ ಸುಧಾರಣೆ, ಭೌಗೋಲಿಕ ಅನ್ವೇಷಣೆಗಳ […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 7): ಎಂ. ಜವರಾಜ್

-೭- ಈ ಅಯ್ನೋರು ಆ ಅವಳೂ ಕುಂತ ಜಾಗ್ದಲ್ಲೆ ಮುಸುಡಿ ಎಟ್ಗಂಡು ಈ ಅಯ್ನೋರ್ ಮೈ ಇನ್ನಷ್ಟು ಕಾಯ್ತಾ ನನ್ ಮೈಯೂ ಕಾದು ಕರಕಲಾಗುತ್ತಾ ಹೊತ್ತು ಮೀರ್ತಾ ಮೀರ್ತಾ ಆ ಅವಳು ಎದ್ದೋಗಿ ಈ ಅಯ್ನೋರೂ ಮೇಲೆದ್ದು ನನ್ನ ಭದ್ರವಾಗಿ ಮೆಟ್ಟಿ ನೆಲಕ್ಕೆ ಎರಡೆರಡು ಸಲ ಕುಟ್ಟಿ  ಅವಳೆಡೆ ಇನ್ನೊಂದು ನೋಟ ಬೀರಿ ಮೆಲ್ಲನೆ ತಿರುಗಿ ಮೋರಿ ದಾಟಿ  ಕಿರು ಓಣಿ ತರದ ಬೀದೀಲಿ  ಗಿರಿಕ್ಕು ಗಿರಿಕ್ಕು ಅಂತನ್ನಿಸಿಕೊಂಡು  ಬಿರಬಿರನೆ ನಡೆದರಲ್ಲೋ… ಆ ಅವಳ ನೋಟಕ್ಕೆ ಈ […]

ಪ್ರೇಮ ಕಾವ್ಯಧಾರೆ

ರಾಗ-ರತಿ ಸೋನೆಸೋನೆಯಾಗಿ ಸುರಿವ ಸಂಜೆಮಳೆಗೆ ಕಣ್ಮಿಂಚಿನಲೆ ರಂಗೇರಿದ ರಾಗ-ರತಿ. ಬಾಗಿತಬ್ಬಿ ಬೆಸೆವ ಬಂಧದ ತವಕ ನಸು ಬಾಗಿದ ಬಾನು ತುಸು ಸರಿದ ಭುವಿ ಪ್ರತಿಕ್ಷಣಗಳ ಲೆಕ್ಕವಿಟ್ಟ ವಿರಹದುರಿಯಲ್ಲಿ ಹುಸಿಮುನಿಸು ನಸುಗೋಪ ಕಾದುಕುದ್ದ ಕ್ಷಣಗಳನೆಲ್ಲ ಕಾರಿ ಬಿಡುವ ತವಕ ರಾಜಿಸೂತ್ರದ ಸಂಭ್ರಮ ಕಣ್ಣ ತುದಿಗೇ ಕುಳಿತ ಸಾಂತ್ವ ಕಾಲಜಾರುವ ಮೊದಲೇ ಲೆಕ್ಕ ಕೂಡಿಸುವಾಟ ಸೋಲಬಾರದ ಹಠಕೆ ಸೋತುಗೆಲ್ಲುವ ಪ್ರೀತಿ ತುಟಿಯೊಡೆಯದೆಲೆ ಎದೆಮುಟ್ಟಿದ ಮಾತು ಕಣ್ಣನೋಟದ ಕೂಡುಬೇಟವ ದಾಟಿಬರುವ ಮೈಮರೆತ ಮುಟ್ಟಲಾರದ ಬೇಗುದಿಗೆ ಬಾಗಿ ಸೇರುವ ಬಯಕೆ ಶೃತಿಹಿಡಿದು ಒರತೆಯೊಡೆದು […]

ಥ್ಯಾಂಕ್ ಯೂ ಪೋಸ್ಟ್ ಮನ್: ಅಮರದೀಪ್. ಪಿ.ಎಸ್.

ಬರೆಯದ‌ ಪ್ರೇಮದ‌ ಕವಿತೆ ಹಾಡಾಯಿತು… ಎದೆಯಲಿ ನೆನಪಿನ ನೋವು ಸುಖ‌ ತಂದಿತು….. ಪಂಕಜ್‌ ಉಧಾಸ್‌ ಮತ್ತು ಕವಿತಾ ಕೃಷ್ಣಮೂರ್ತಿ ಹಾಡುತ್ತಿದ್ದರು. ನಾನು ಖಾಲಿ‌ ಕೂತ ಸಮಯದಲ್ಲಿ ಹಾಡು ಕೇಳುವುದು ಬಿಟ್ಟರೆ ಯಾವುದಾದರೂ ಪುಸ್ತಕ ನೆನಪಾಗಿ ಹುಡುಕುತ್ತೇನೆ. ಇವತ್ತು ಪುಸ್ತಕ ತಡಕಾಡಲು ಮನಸಾಗಲಿಲ್ಲ… ಹಾಡಿನ ಗುನುಗು ನಾಲಗೆಗೆ ನೆನಪಾಗಿದ್ದೇ ತಡ ಕೇಳುತ್ತಾ ಕುಳಿತೆ. ನಾನು ಡಿಪ್ಲೋಮಾ ಓದುವ ಕಾಲದಲ್ಲೂ ಏನೋ ಗೊತ್ತಿಲ್ಲ. ನನ್ನ ರೂಮೇಟ್ ನಾಗರಾಜ್ (ಡಿಂಗ್ರಿ) ಒಂದು ವಾಕ್ಮನ್ ತಂದಿದ್ದ. ಒಂದಿಷ್ಟು ಕೆಸೆಟ್ ಗಳಿದ್ದವು. ಅದೆಂಥ ಅಡಿಕ್ಷನ್‌ […]

ಪ್ರೇಮಿಗಳಿಗೆ ದಿನವಿಲ್ಲ ! ದಿನವೆಲ್ಲಾ !!!!!: ಸತೀಶ್ ಶೆಟ್ಟಿ ವಕ್ವಾಡಿ

” ನಿನ್ನ ಬಿಟ್ಟು ಬದುಕುವ ಶಕ್ತಿ ನನಗಿಲ್ಲ ” ಆಕೆಯ ಬೆರಳಿಗೆ ತನ್ನ ಬೆರಳು ತೂರಿಸಿಕೊಂಡು, ಸಣ್ಣಗೆ ಕಂಪಿಸುತ್ತಿರುವ ಅದರದಿಂದ ಹೊರಬಿದ್ದ ಆತನ ಮಾತು, ಆಕೆಯ ಮೈಮನವನ್ನೆಲ್ಲ ರೋಮಾಂಚನಗೊಳಿಸಿತ್ತು.  “ಹೌದು ಕಾಣೋ ನೀನಿಲ್ಲದ ಬದುಕನ್ನು ನನಗೆ ಊಹಿಸಿಕೊಳ್ಳಲು ಆಗುತ್ತಿಲ್ಲ ” ಜೋರಾಗಿ ಬೀಸುತ್ತಿದ್ದ ಏರಿಕಂಡಿಷನಿನ ಗಾಳಿಯಲ್ಲಿ ಸಣ್ಣನೆ ಬೆವತ್ತಿದ್ದ ಆಕೆ ನುಡಿಯುತ್ತಾಳೆ. ಐಸ್ ಕ್ರೀಮ್ ಪಾರ್ಲರಿನ ಮೂಲೆಯ ಟೇಬಲಿನಲ್ಲಿ ಕುಳಿತ್ತಿದ್ದ ಅವರಿಬ್ಬರ  ಮುಂದಿದ್ದ ಅದೇ ಐಸ್ ಕ್ರೀಮ್ ಪಾರ್ಲರಿನ ಹೆಸರು ಹೊಂದಿರುವ ಸ್ಪೆಷಲ್ ಐಸ್ ಕ್ರೀಮನ್ನು ತನ್ನೊಡಲೊಗೆ […]

ಪ್ರೀತಿ…ಹಾಗೆಂದರೇನು!!: ಸಹನಾ ಪ್ರಸಾದ್

ಮಾನಸಳನ್ನು ವರಿಸಲು ಪ್ರಜ್ವಲನಿಗೆ ಸುತರಾಂ ಇಷ್ಟ ಇರಲಿಲ್ಲ. ಮೊದಲನೆಯದಾಗಿ, ಅವಳನ್ನು ನೋಡಿದ ತಕ್ಷಣ ಯಾವ ಭಾವನೆಯೂ ಉದಯಿಸಿರಲಿಲ್ಲ. ಅವನ ಆಫೀಸ್ನಲ್ಲಿ ಕೆಲಸ ಮಾಡುತ್ತಿದ್ದ ಅನೇಕ ಹೆಣ್ಣುಗಳ ಹಾಗೆ ಕಂಡಿದ್ದಳು. ಹೇಳಿಕೊಳ್ಳುವಂತಹ ವಿಶೇಷವೇನೂ ಅವಳಲ್ಲಿರಲಿಲ್ಲ. ವಯಸ್ಸು 28 ಆದರೂ ಮುಖದಲ್ಲಿ ಪ್ರೌಢ ಕಳೆ, ವಯಸ್ಸಿಗೆ ಮೀರಿದ ಗಾಂಭೀರ್ಯ..ಎರಡನೆಯದಾಗಿ ಅವನು ಪ್ರೀತಿಸಿದ್ದ ರಮ್ಯಳ ಚಿತ್ರ ಮನಸ್ಸಲ್ಲಿ ಇನ್ನು ಹಸಿಯಾಗಿತ್ತು. ಬೇರೊಬ್ಬನನ್ನು ವರಿಸಿ ಆಸ್ಟ್ರೇಲಿಯಾಗೆ ಹಾರಿದ ಅವಳ ನೆನಪಿನಿಂದ ಇನ್ನೂ ಹೊರಬರಲಾಗಿರಲಿಲ್ಲ. 34 ಹತ್ತಿರ ಬಂದ ವಯಸ್ಸು, ಆಗಲೇ ಬಿಳಿ ಆಗುತ್ತಿರುವ […]