Facebook

Archive for the ‘ಪಂಜು-ವಿಶೇಷ’ Category

ಡಿಜಿಟಲ್ ಕನ್ನಡ: ಡಾ. ಹೆಚ್ಚೆನ್ ಮಂಜುರಾಜ್

ಹರಿತವಾದ ಆಯುಧದಿಂದ ಹಣ್ಣನ್ನೂ ಕೊಯ್ಯಬಹುದು; ಜೀವವನ್ನೂ ತೆಗೆಯಬಹುದು ಎಂಬ ಮಾತು ಕ್ಲೀಷೆಯೆನಿಸಿದರೂ ಆಧುನಿಕ ಡಿಜಿಟಲ್ ಮಾಧ್ಯಮಗಳಿಗೆ ಇದಕ್ಕಿಂತ ಸೂಕ್ತವಾದ ವ್ಯಾಖ್ಯಾನ ಬೇರೊಂದಿರಲಾರದು! ನಮ್ಮೆಲ್ಲರ ಕೈಯಲ್ಲೂ ಮೊಬೈಲು; ಮನೆಯಲ್ಲಿ ಕಂಪ್ಯೂಟರು ಇರುವಾಗ ಯಾರಾದರೂ ಹೀಗೆ ಹೇಳಲೇಬೇಕು. ಅದರಲ್ಲೂ ಇಂಥವನ್ನು ಬಳಸಿಕೊಂಡು ಯುವಜನತೆ ದಾರಿ ತಪ್ಪುವುದಿರಲಿ ದಿಕ್ಕೇ ತಪ್ಪುತ್ತಿದೆ ಎಂದು ಬೈಯ್ಯುವವರ ಕೈಯಲ್ಲೂ ಇವೇ ಇವೆ! ಆದರೆ ಇವನ್ನು ಸದ್ಬಳಕೆ ಮಾಡಿಕೊಂಡು ಬದುಕಿನ ಸಂವೇದನೆಯನ್ನು ಇನ್ನಷ್ಟು ನೇರ್ಪುಗೊಳಿಸಿಕೊಳ್ಳಬಹುದು; ದೈವತ್ವವನ್ನು ಧರಿಸಬಹುದು ಅಥವಾ ಅದರತ್ತ ಚಲಿಸಬಹುದು ಎಂದು ಆಲೋಚಿಸುವವರು ವಿರಳ. ಕವಿ […]

ಮೆಂಟಲ್ ಎಬಿಲಿಟಿ ಕೋಡಿಂಗ್ ಭಾಗ – 1: ಪ್ರವೀಣ್‌ ಕೆ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೋಡಿಂಗ್‌ ಕುರಿತ ಪ್ರಶ್ನೆಗಳನ್ನು ಉತ್ತರಿಸಲು ಈ ವಿಡಿಯೋ ನಿಮಗೆ ತುಂಬಾ ಸಹಕಾರಿ… ಕೋಡಿಂಗ್ ಭಾಗ – 1:    

20ನೇ ಶತಮಾನ ಕಂಡ ಸಂತ ಶ್ರೇಷ್ಠ- ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್: ಶ್ರೀವಲ್ಲಭ ರಾ. ಕುಲಕರ್ಣಿ

ಭಾರತೀಯ ಸಮಾಜದ ರೂಢ ಮೂಲ ನಂಬಿಕೆಗಳ ಮೂಲ ಸ್ವರೂಪವನ್ನು ಪ್ರಶ್ನಿಸಿದ, ಅಲುಗಾಡಿಸಿದ ತೀಕ್ಷ್ಣ ವಿಚಾರವಾದಿ, 20ನೇ ಶತಮಾನದ ಭಾರತೀಯ ಮಹಾನ್ ಚಿಂತಕ ದ್ರಾವಿಡ ನಾಡಿನ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್ 1879 ಸೆಪ್ಟೆಂಬರ್ 17ರಂದು ಮದ್ರಾಸ್ ರಾಜ್ಯದ ಕೊಯಿಮತ್ತೂರ್ ಜಿಲ್ಲೆಯ ಈರೋಡು ಎಂಬಲ್ಲಿ ಹುಟ್ಟಿದರು, ತಮ್ಮ ವಿಚಾರಗಳಿಗೆ ಚಳುವಳಿಯ ಸ್ಪರ್ಶ ನೀಡಿದ ಅವರ ಬದುಕು ಮತ್ತು ಚಿಂತನೆಗಳು ದ್ರಾವಿಡ ಅಸ್ಮಿತೆಯೊಂದನ್ನು ಹುಟ್ಟು ಹಾಕಿ, ತಮಿಳು ನಾಡಿನಲ್ಲಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಪಸರಿಸುವಂತೆ ಮಾಡಿದ್ದು ಇತಿಹಾಸ. ಪೆರಿಯಾರ್ ರಾಮಸ್ವಾಮಿಯವರ […]

ಯೂಟ್ಯೂಬ್‌ ನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದಲ್ಲಿ ಬ್ಯಾಂಕ್ ಪರೀಕ್ಷೆಯ ತರಬೇತಿ

ಆತ್ಮೀಯರೆ, ನನಗೆ ಬಹಳ ಖುಷಿ ಎನಿಸುತ್ತಿದೆ. ಯಾಕೆಂದರೆ ಕನ್ನಡ ಮಾಧ್ಯಮದಲ್ಲಿ ಉಚಿತವಾಗಿ ಬ್ಯಾಂಕ್ ಪರೀಕ್ಷೆ ತರಬೇತಿಯನ್ನು ಯೂಟ್ಯೂಬ್ ಮುಖಾಂತರ ಪ್ರಾರಂಭಿಸಿದ್ದೇನೆ. ನೀವೆಲ್ಲ ಕೈಜೋಡಿಸುವಿರಿ ಎಂದು ನಿರೀಕ್ಷಿಸುತ್ತೇನೆ. ನಾನು ಭಾರತೀಯ ಸ್ಟೇಟ್ ಬ್ಯಾಂಕಿನ ಸೇವೆಗೆ ರಾಜೀನಾಮೆ ನೀಡಿ ಸ್ಪರ್ಧಾಕಾಂಕ್ಷಿಗಳಿಗೆ ಬ್ಯಾಂಕ್ ಪರೀಕ್ಷೆಯ ತರಬೇತಿಯನ್ನು ಪ್ರಾರಂಭಿಸಿದೆ. ಬೆಳಗಾವಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಬಂದು ತರಬೇತಿ ಪಡೆದು ಕೆಲವರು ಯಶಸ್ಸನ್ನೂ ಗಳಿಸಿದರು. ಆದರೆ ನಾನು ಕ್ಲಾಸರೂಮಿನಲ್ಲಿ ಕಲಿಸಲು ಸಾಧ್ಯವಾಗುತ್ತಿರುವುದು ಕೇವಲ ನಲವತ್ತು ಐವತ್ತು ಜನರಿಗೆ ಮಾತ್ರ. ಅವಶ್ಯವಿದ್ದವರಿಗೆಲ್ಲ ನನ್ನಲ್ಲಿರುವ […]

ಕಡಿದೊಗೆದ ಬಳ್ಳಿಯು ಕುಡಿಯೊಡೆಯುವಂತೆ: ಎಸ್. ಜಿ. ಸೀತಾರಾಮ್, ಮೈಸೂರು

“ತ್ಯಾಜ್ಯ ವಸ್ತು” ವಿಲೇವಾರಿಯ ಬಗ್ಗೆಯೇನೋ ಇಂದು ಎಲ್ಲೆಡೆ ಬಿಸಿಬಿಸಿ ಚರ್ಚೆಗಳಾಗುತ್ತಿವೆ; ಆದರೆ, ತಮ್ಮ ಕುಟುಂಬ, ಬಂಧು-ಬಳಗ, ಸಮುದಾಯ, ಯಾವುದಕ್ಕೂ ಬೇಡವಾದ “ತ್ಯಾಜ್ಯ ವ್ಯಕ್ತಿ”ಗಳ ಸ್ಥಿತಿಗತಿಯ ಬಗ್ಗೆ ‘ಕ್ಯಾರೇ?’ ಎನ್ನುವ ಮಂದಿ ಎಷ್ಟಿದ್ದಾರು? ಹಾಗೆನ್ನುವವರಲ್ಲೂ, ಈ ಪರಿಸ್ಥಿತಿಗೆ ಏನಾದರೊಂದು ಪರಿಹಾರ ಹೊಂದಿಸಬೇಕೆಂದು ನಿಜವಾಗಿ ‘ಕೇರ್’ ಮಾಡುವವರು ಅದೆಷ್ಟು ಇದ್ದಾರು? ಇಂಥ ದಾರುಣ ಅವಸ್ಥೆಯ ನಡುವೆ, ಸಮಾಜದ ಕುಪ್ಪೆಯಲ್ಲಿ ಕಾಲ ತೇಯುತ್ತ, ಬದುಕಾಟದ ಕೊಟ್ಟಕೊನೆಗೆ ಹೇಗೋ ‘ಜೋತುಬಿದ್ದಿರುವ’ ಸ್ತ್ರೀಯರಿಗೆ ಅನ್ನ, ಆರೈಕೆ, ನೆರಳು, ನೆಮ್ಮದಿ ನೀಡುವ ಸಲುವಾಗಿ, ವಿದ್ಯಾವಂತ, ದಯಾಶೀಲ, […]

ತಾಯಿಯ ಗರ್ಭವೆಂಬ ಪುಟ್ಟ ಪ್ರಪಂಚದಲ್ಲಿ: ಸಿಂಧು ಭಾರ್ಗವ್

ಒಂದು ಮಗುವಿನ ಜನನ ಯಾವ ತಾಯಿಯ ಗರ್ಭದಲ್ಲಿ ಆಗುತ್ತದೆ ಎಂಬುದು ಹೇಳಬರದು. ಹುಟ್ಟು ನಮ್ಮ ಕೈಯಲ್ಲಿ ಇರುವುದಿಲ್ಲ. ಜನಿಸಿದ ಮೇಲೆ ಹಡೆದ ಜನನಿಯ ಮುಖ ದರುಷನವಾಗುವುದು. ಅವಳು ನಮಗಾಗಿ ಎಷ್ಟೆಲ್ಲ ಕಷ್ಟ ಪಡುತ್ತಾಳೆ. ಅವಳ ತ್ಯಾಗ ಸಹನೆಗೆ ನಾವು ಎಂದಿಗೂ ಋಣಿಗಳಾಗಿರಬೇಕು. ಒಬ್ಬ ತಾಯಿ ತಾನು ಗರ್ಭವತಿ ಎಂದು ತಿಳಿದ ತತ್ಕ್ಷಣದಿಂದ ಮುಂದೆ ಜನಿಸುವ ಮಗುವಿನ ಬಗೆಗೆ ನೂರಾರು ಕನಸುಗಳನ್ನು ಕಟ್ಟಿಕೊಳ್ಳಲು ಶುರುಮಾಡುತ್ತಾಳೆ. ಜೊತೆಗೆ ತಂದೆಯಾಗುವವನೂ ಕೂಡ ಆ ಮಗುವಿನ ಬಗೆಗೆ ಸಾಕಷ್ಟು ಕನಸುಗಳನ್ನು ಹೆಣೆಯುತ್ತಾನೆ. ತಮ್ಮ […]

ಅಂಬೇಡ್ಕರ್ ಎಂಬ ಶಕ್ತಿಯೇ ನಿನ್ನೆಯ ಹೋರಾಟ ; ಇಂದಿನ ಬೆಳಕು, ನಾಳಿನ ಬಾಳ ಬುತ್ತಿ: ನಾಗರಾಜ್ ಹರಪನಹಳ್ಳಿ

  ನಮ್ಮ ಕಣ್ಣ ಮುಂದಿನ ಬೆಳಕು ಅಂಬೇಡ್ಕರ್. ಅವರು ಭಾರತದ ಅಂತಃಶಕ್ತಿ ಹೆಚ್ಚಿಸಿದ ಮಹಾ ಮನವತಾವಾದಿ. ಅಂಬೇಡ್ಕರ್ ಪ್ರಜಾಪ್ರಭುತ್ವವಾದಿ. ಮಹಿಳಾವಾದಿ, ಕಾರ್ಮಿಕರ ಬಂಧು. ಮನುಷ್ಯತ್ವದ ಪ್ರತಿಪಾದಕ. ಶೋಷಿತರಿಗೆ ಪ್ರೀತಿ ಅಂತಃಕರಣದ ನದಿಯನ್ನೇ ಹರಿಸಿದ ಮನುಷ್ಯ, ಅಂಬೇಡ್ಕರ್ 1891ರಲ್ಲಿ ಜನಸಿದ್ದು. ಅವರ 128ನೇ ಜನ್ಮದಿನಕ್ಕೆ ನಾವಿಂದು ಅವರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ಬಾಬಾ ಸಾಹೇಬ್ ನಮ್ಮಿಂದ ಭೌತಿಕವಾಗಿ ದೂರವಾಗಿ 63 ವರ್ಷ ಕಳೆದಿದ್ದರೂ, ಅವರನ್ನು ದೇಶ ಪ್ರತಿ ದಿನ, ಪ್ರತಿಕ್ಷಣ ನೆನಪಿಸಿಕೊಳ್ಳುವ ಭಾರತದ ಬಹುಮುಖ ಪ್ರತಿಭೆ. ಅವರು ನೀಡಿದ ಸಂವಿಧಾನದ ಮಹಾಧರ್ಮದಲ್ಲಿ […]

ಗೆಲ್ಲಿಸುವ ದಾರಿಯಲ್ಲಿ – ಕೌಶಲ್ಯದ ಪರಿಚಯ: ರಘುನಂದನ ಕೆ. ಹೆಗಡೆ

SKILL, SPEED, SCORE ಕೌಶಲ್ಯ ವೇಗ ಗೆಲುವು ಕೌಶಲ್ಯ (Skill) ಎಂದ ತಕ್ಷಣ ನಮ್ಮ ಯೋಚನೆಯೆಲ್ಲ ವೃತ್ತಿ ಜೀವನಕ್ಕೆ ಹೊರಟು ಬಿಡುತ್ತೆ, ಇಲ್ಲಾ ಇದೆಲ್ಲಾ ಕಲಿಕೆಯ ಕೊನೆ ಹಂತದಲ್ಲಿರೋ ವಿದ್ಯಾರ್ಥಿಗಳಿಗೆ ಬೇಕಾಗಿರೋದು ಅನ್ಕೋತೇವೆ. ಹಾಗಾದರೆ ವೃತ್ತಿಯನ್ನ ಬಿಟ್ಟು, ಜೀವನಕ್ಕೆ ಕೌಶಲ್ಯ ಬೇಕಿಲ್ವಾ? ಹೆಂಗೆಂಗೋ ಬದುಕೋರಿಗೆ ಕೌಶಲ್ಯ ಬೇಕಿಲ್ಲ, ಕೌಶಲ್ಯ ಇದ್ದೋರಿಗೆ ಸ್ಕೂಲ್ ಶಿಕ್ಷಣ ಇಲ್ದೇ ಇದ್ರು ಗೆಲುವು ಸಿಗುತ್ತೆ. ನಂಬಿಕೆ ಆಗ್ತಿಲ್ವಾ, ಥಾಮಸ್ ಅಲ್ವಾ ಎಡಿಸನ್ ಗೊತ್ತಲ್ಲಾ, ಬಲ್ಬನ್ನು ಕಂಡು ಹಿಡಿದು ಬೆಳಕು ಕೊಟ್ಟ ವಿಜ್ಞಾನಿ, ಅವರು […]

ಅನಕೃ ಮಹಾನ್ ಮೇರು ಕಾದಂಬರಿ ಸಾರ್ವಭೌಮರು: ಹೊರಾ.ಪರಮೇಶ್ ಹೊಡೇನೂರು

ಸಂಗೀತ, ನಾಡು ನುಡಿಗೆ ಅನಕೃ ಕೊಡುಗೆ “ಅನಕೃ”ಎಂಬ ಹೃಸ್ವ ಪದಪುಂಜದಲ್ಲಿಯೇ ಅಗಾಧವಾದ ಸಾಹಿತ್ಯ ಅನಾವರಣಗೊಳ್ಳುತ್ತದೆ. ಕನ್ನಡ ಸಾಹಿತ್ಯದ ಕೃಷಿಯ ಜೊತೆಗೆ ಕನ್ನಡ ಭಾಷೆಯ ಬಳಕೆ-ಉಳಿಕೆಗೆ ಅಕ್ಷರಶಃ ಶ್ರಮಿಸಿದ ಅಪೂರ್ವ ಸಾಹಿತಿ ಅ.ನ.ಕೃಷ್ಣರಾಯರು. ಹುಟ್ಟಿದ್ದು ಕೋಲಾರವೇ ಆದರೂ ತಂದೆ ನರಸಿಂಗರಾಯರು-ತಾಯಿ ಅನ್ನಪೂರ್ಣಮ್ಮನವರು ಮೂಲತಃ ಅರಕಲಗೂಡಿನವರಾದುದರಿಂದ ಅನಕೃ ಅವರು ಅರಕಲಗೂಡಿನವರೇ ಎಂಬುದಾಗಿ ಪರಿಭಾವಿಸಲ್ಪಟ್ಟಿದ್ದಾರೆ. ಬಳ್ಳಿಯು ಎಷ್ಟೇ ಬೃಹದಾಕಾರವಾಗಿ ಬೆಳೆದರೂ ಅದರ ಹುಟ್ಟಿದ ಜಾಗವೇ ಅಸ್ತಿತ್ವವನ್ನು ಹೇಳುವಂತೆ ಅನಕೃ ಅರಕಲಗೂಡು ಭಾಗದವರೇ ಎಂಬುದಾಗಿ ಪರಿಗಣಿತವಾಗಿದ್ದಾರೆ. 190೮ ರ ಮೇ 9 ರಂದು […]

ಯುವಜನರ ಹಕ್ಕುಗಳ ರಕ್ಷಣೆಗೂ ಆಯೋಗ ಬೇಕಲ್ಲವೇ?: ರುಕ್ಮಿಣಿ ನಾಗಣ್ಣವರ

ಫಕ್ಕೀರಪ್ಪ. ಹುಟ್ಟಿ-ಬೆಳೆದದ್ದು ಬೆಳಗಾವಿ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ. ದೊಡ್ಡ ವ್ಯಕ್ತಿಯಾಗುವ ಅಥವಾ ಉನ್ನತ ಸಾಧನೆ ಮಾಡುವ ಅದಮ್ಯ ಕನಸುಗಳೇನೂ ಇರಲಿಲ್ಲ. ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಪೂರ್ಣಗೊಳಿಸಿದ ಅವರಿಗೆ ವಿಶ್ವವಿದ್ಯಾಲಯದ ಮೆಟ್ಟಿಲೇರುವ ಗುರಿ ಇರಲಿಲ್ಲ. ಅಷ್ಟೇ ಅಲ್ಲ, ಪಿಯು ಕಾಲೇಜಿಗೆ ಹೋಗುವ ಸ್ಪಷ್ಟ ಕಲ್ಪನೆಯೂ ಇರಲಿಲ್ಲ. ಆಯಾ ದಿನದ ದುಡಿಮೆಯನ್ನೇ ನಂಬಿದ್ದ ತಂದೆ, ತಾಯಿಗೂ ಮಗನಿಗೆ ಉನ್ನತ ಶಿಕ್ಷಣ ಕೊಡಿಸುವ ಶಕ್ತಿ ಇರಲಿಲ್ಲ. ಸಾಂವಿಧಾನಿಕ ಹಕ್ಕು ಇದ್ದರೂ ಆರ್ಥಿಕ ಮತ್ತು ಇನ್ನಿತರ ಸೌಲಭ್ಯದ ಕೊರತೆಯಿಂದ ಫಕ್ಕೀರಪ್ಪಗೆ ಶಾಲೆಯ […]