ನಾಡ ಭಾಷೆ, ಇತಿಹಾಸವೂ ನಮ್ಮ ಅಭಿಮಾನಶೂನ್ಯತೆಯು: ಪ್ರಶಸ್ತಿ

ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು, ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು.ಅಪಾರ ಕೀರ್ತಿಯೇ.. ಮಯೂರ ಚಿತ್ರದ ಈ ಹಾಡು, ಅದಕೆ ಹಿಮ್ಮೇಳವೆಂಬಂತೆ ನಾಗೋ ಕುದುರೆಯ ಪುಟಿತದ ಟಕ್, ಟಕ್, ಟಕ್ ಎಂಬ ಸದ್ದೂ ನಿಮ್ಮೆಲ್ಲರ ಮನಸ್ಸಲ್ಲೊಂದು ಭದ್ರ ಸ್ಥಾನ ಪಡೆದಿರಬಹುದು. ಚಾಲುಕ್ಯ, ಹೊಯ್ಸಳ, ವಿಜಯನಗರ, ಕೆಳದಿ ಸಾಮ್ರಾಜ್ಯ ಹೀಗೆ ಇಲ್ಲಿನ ನೆಲವಾಳಿದ ರಾಜರೆಲ್ಲಾ ಕಲೆ, ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಕೊಟ್ಟ ಪ್ರೋತ್ಸಾಹದ ಪರಿಯನ್ನು ನಮ್ಮ ಸುತ್ತೆಲ್ಲಾ ಈಗಲೂ ಕಾಣಬಹುದು, ಹೆಮ್ಮೆಪಡಬಹುದು. ಭಾಷೆ, ಜಾತಿ, ಧರ್ಮವೆಂಬ ಯಾದ … Read more

ಬಂದ್: ಪ್ರಶಸ್ತಿ ಪಿ.

ನಾ ಸಣ್ಣಕ್ಕಿದ್ದಾಗ ಕೇಳಿದೊಂದು ಹಾಡು ನೆನಪಾಗುತ್ತಿದೆ ಯಾಕೋ. ಗಾಂಧಿ ಹೇಳಿಕೊಟ್ಟ ಪಾಠ,ಗುರುವಿಗೆ ತಿರುಮಂತ್ರ ಮಾಟ.ಸತ್ಯಾಗ್ರಹ,ಸ್ಟ್ರೈಕ್, ಸ್ಟ್ರೈಕ್, ಸ್ಟ್ರೈಕ್. ಪೆಟ್ರೋಲ್ ದರ ಹೆಚ್ಚಳವನ್ನು ವಿರೋಧಿಸಿ ಬಂಧ್, ರಸ್ತೆ ಸುರಕ್ಷಾ ಮಸೂಧೆಯನ್ನು ವಿರೋಧಿಸಿ ಬಂದ್. ಕಾವೇರಿ ನೀರು ಬಿಟ್ಟರೆಂದು ಬಂದ್, ಮಹದಾಯಿಗಾಗಿ ಬಂದ್.. ಉಫ್ ! ಹೀಗೆ ತಿಂಗಳಿಗೆರೆಡು ದಿನ ಬಂದ್ ಆಚರಿಸುತ್ತಿರೋದನ್ನ ನೋಡಿ ಕರ್ನಾಟಕವೂ ಕಮ್ಯುನಿಸ್ಟರ ನಾಡಾದ ಕೇರಳದ ಹಾದಿ ಹಿಡಿತಾ ಇದಿಯಾ ಅಂತ ಒಮ್ಮೆಮ್ಮೆ  ದಿಗಿಲಾಗುತ್ತೆ. ದಿನವೊಂದರ ಬಂದಿನಿಂದ ಕೋಟ್ಯಾಂತರ ರೂ ನಷ್ಟವಾಗುತ್ತೆ. ಬಂದ್ಗಳು ಅಸಾಂವಿಧಾನಿಕ, ಬಂದ್ಗಳ … Read more

ಕುಕ್ಕೆಯಲ್ಲೊಂದು ಪಂಕ್ಚರ್ ಕತೆ: ಪ್ರಶಸ್ತಿ

ಹಿಂದಿನ ಭಾಗದಲ್ಲಿ ಓದಿದಂತೆ ಟ್ರಿಪ್ಪಿನುದ್ದಕ್ಕೂ ಯೋಗಾಯೋಗಗಳೆಂಬ ನಾಣ್ಯದ ಮುಖಗಳು ಕ್ಷಣಕ್ಷಣಕ್ಕೂ ನಮಗೆ ಮುಖಾಮುಖಿಯಾಗುತ್ತಲೇ ಇದ್ದವು. ಬಿಸಿಲೆಯಲ್ಲಿ ಹಾಸನ ಸಂರಕ್ಷಿತ ಅರಣ್ಯ ಪ್ರದೇಶ ಅನ್ನೋ ಬೋರ್ಡು ಕಂಡಿದ್ದರೂ ಅದರ ಕೆಳಗೆ ಸಣ್ಣಕ್ಕಿದ್ದ ಬಿಸಿಲೆ ವೀವ್ ಪಾಯಿಂಟಿಗೆ ದಾರಿಯೆಂಬ ಬೋರ್ಡು ಕಾಣದೇ ಬಿಸಿಲೆಯ ಮೊದಲ ವೀವ್ ಪಾಯಿಂಟ್ ಮಿಸ್ಸಾಗಿತ್ತು. ಕುಕ್ಕೆಗೆ ಬಂದ ಬಹುತೇಕ ಮಂದಿ ಬಂದೇ ಹೋಗುವ ಗಡಿಮಾರಮ್ಮನ ದೇವಸ್ಥಾನ ಮಿಸ್ಸಾಗೇ ಹೋಗ್ತಿತ್ತೇನೋ ಅಲ್ಲಿನ ಗೇಟು ಹಾಕಿ, ಅದನ್ನ ತೆಗಿಯೋಕೆ ಅಂತ ನಾನು ಕೆಳಗಿಳಿಯದೇ ಹೋಗಿದ್ದರೆ. ಮೊದಲೆರಡು ಪಂಕ್ಚರ್ರುಗಳಾಗದೇ ಹೋಗಿದ್ದರೆ … Read more

ಬ್ಯಾಕರವಳ್ಳಿ ಬಸವೇಶ್ವರ ಹೋಟೆಲ್ಲೂ ಮತ್ತು ಮೂರು ಪಂಕ್ಚರ್ರುಗಳ ಕತೆ: ಪ್ರಶಸ್ತಿ

ಹಾಸನಕ್ಕಿಂತ ೪ ಕಿ.ಮೀ ಮೊದಲು ಎಡಕ್ಕೆ ತಿರುಗಿ, ೧೪ ಕಿ.ಮೀ ಸಾಗಿ ನಂತರ ಬಲಕ್ಕೆ ಸಾಗಿ ಹಾಸನ ಗೊರೂರು/ಹಾಸನ ಪೆರಿಯಾಪಟ್ಟಣ ರಸ್ತೆಯಲ್ಲಿ ಸಾಗಿದ್ರೆ ಕೊಟ್ಟಾಯಕ್ಕಿಂತ ಮುಂದೆ ಸಾಗುವಾಗ ಶೆಟ್ಟಿಹಳ್ಳಿ ಸಿಗುತ್ತೆ. ಶೆಟ್ಟಿಹಳ್ಳಿಯ ಚರ್ಚಲ್ಲೊಂದು ಫೋಟೋ ಸೆಷನ್ನು ,ಬೆಳಬೆಳಗ್ಗೆಯೇ ಹೊಳೆದ ಒಂದಿಷ್ಟು ಯೋಗಾಸನಗಳ, ಜಂಪಿಂಗು, ಕ್ಲೈಂಬಿಂಗುಗಳ ಪೂರೈಸುವಾಗ ಹೊಟ್ಟೆ ಚುರುಗೊಟ್ಟಿದ, ಪ್ರಕೃತಿಯು ಕರೆದ ಅನುಭವ. ಬೇಗ ಹಾಸನಕ್ಕೆ ಹೋಗೋಣವೆಂದ್ರೆ ಹೊರಟ ಟಿ.ಟಿ ಎರಡನೇ ಬಾರಿ ಪಂಚರ್ರಾಗಿತ್ತು. ರಾತ್ರಿ ಟೋಲ್ ಗೇಟ್ ಬಳಿಯೇ ಪಂಚರ್ರಾದ ಹಿಂದಿನಿಂದ ಎಡಗಡೆಯ ಟೈರೇ ಈಗ … Read more

ಬೆಂದಕಾಳೂರ ಟ್ರಾಫಿಕ್ಕೂ, ಗುಂಡಣ್ಣನ ಲಾಜಿಕ್ಕು: ಪ್ರಶಸ್ತಿ

ನಮ್ಮ ಗುಂಡಣ್ಣಂಗೆ ಬಗೆಹರಿಯದ ಸಮಸ್ಯೆಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ.  ನಾಲ್ಕು ಜನ ಯಾವುದಾದ್ರೂ ವಿಷಯದ ಬಗ್ಗೆ ಚರ್ಚಿಸ್ತಾ ಇದ್ದಾರೆ ಅಂದ್ರೆ ಇವರನ್ನ ಕರೆಯದೇ ಹೋದ್ರೂ ಅಲ್ಲಿಗೊಂದು ಎಂಟ್ರಿ ಕೊಟ್ಟು ಅವ್ರು ಯಾವ ಗಹನವಾದ ವಿಷಯದ ಬಗ್ಗೆ ಚರ್ಚಿಸ್ತಾ ಇದ್ದಾರೆ ಅಂತ ತಿಳಿದುಕೊಂಡು ಅದಕ್ಕೊಂದು ಪರಿಹಾರ ಸೂಚಿಸ್ಲಿಲ್ಲ ಅಂದ್ರೆ ಗುಂಡಣ್ಣಂಗೆ ಅವತ್ತು ತಿಂದ ಅನ್ನ ಜೀರ್ಣವಾಗೋಲ್ಲ. ಹೀಗೇ ಎಲ್ಲರೂ ಗುಂಡಣ್ಣನ ಬಗ್ಗೆ ಹೇಳೋದನ್ನ ಕೇಳಿ ಕೇಳೀ, ಸಂಜೆಯವರೆಗೂ ಯಾವ ಸಮಸ್ಯೆಗೂ ಪರಿಹಾರ ಸೂಚಿಸದ ದಿನ ತನಗೇನಾದ್ರೂ ಅಜೀರ್ಣವಾಗಿಬಿಡುತ್ತಾ ಎಂಬ … Read more

ಹಬ್ಬವೆಲ್ಲಿದೆ?: ಪ್ರಶಸ್ತಿ

ಮೊನ್ನೆ ವಾಟ್ಸಾಪು, ಫೇಸ್ಬುಕ್ಕುಗಳಲ್ಲಿ ನಾಗರಪಂಚಮಿ ಶುಭಾಶಯಗಳು ಅಂತ ನೋಡಿದ್ಮೇಲೇ ಇವತ್ತು ನಾಗರಪಂಚಮಿ ಅಂತ ನೆನಪಾಗಿದ್ದು. ಊರಲ್ಲಿದ್ದಾಗ ನಾಗರಪಂಚಮಿಯೆಂದ್ರೆ ಅದೆಷ್ಟು ಖುಷಿ. ಅಮ್ಮ ಮಾಡೋ ಮಂಡಕ್ಕಿ ಉಂಡೆಯ ರುಚಿಗಾಗಿ ಕಾಯೋದೇನು, ಪೂಜೆಗಾಗಿ ಹಿಂದಿನ ದಿನವೇ ನಾಗರಬನವನ್ನೆಲ್ಲಾ ಚೊಕ್ಕ ಮಾಡಿ, ಅದಕ್ಕೆ ಹೋಗೋ ದಾರಿಯಲ್ಲಿದ್ದ ಹುಲ್ಲನ್ನೆಲ್ಲಾ ಒಂದಿಷ್ಟು ಸವರಿ ಇಡೋ ಉಮೇದೇನು, ಶಾಲೆಗೊಂದಿನ ರಜೆಯೆಂಬ ಖುಷಿಯೇನು. ಇದರೊಂದಿಗೇ ಹಬ್ಬಗಳ ಸಾಲು ಶುರುವಾಗುತ್ತೆಂಬ ನಿರೀಕ್ಷೆಯೇನು. ಆಹಾ. ಒಂದು ಕಿರುಬೆರಳ ಉಗುರಿಗಾದ್ರೂ ಮದರಂಗಿ ಹಚ್ಚಿಕೊಳ್ಳಬೇಕೆಂಬ ಅಲಿಖಿತ ನಿಯಮದಿಂದಾಗಿ ಹುಡುಗರಾದ ನಮ್ಮ ಬೆರಳುಗಳೂ ಮದರಂಗಿಯ … Read more

ಕೆಂಪುಕೋಟೆಯ ಮೇಲಿಂದ ತಿರಂಗದ ಕೆಳಗಿಂದ ಕಂಡ ಕನಸಗಳ ಕುರಿತು: ಪ್ರಶಸ್ತಿ

ಇಂದು ಆಗಸ್ಟ್ ಹದಿನೈದು. ಭಾರತಕ್ಕೆ ಸ್ವಾತಂತ್ರ್ಯ ಬಂದು ೬೮ ವರ್ಷ ತುಂಬಿದ ಅಥವಾ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ೬೯ ನೇ ದಿನ. ರಜೆಯೆಂದು ಹೊದ್ದು ಮಲಗೋ ಬದಲು ಬೆಳಗಾಗೆದ್ದು ಟಿ.ವಿಯ ಮುಂದೆ ಪ್ರತ್ಯಕ್ಷನಾಗಿ ಕೆಂಪುಕೋಟೆಯ ಮೇಲೆ ನಮ್ಮ ಹೆಮ್ಮೆಯ  ತ್ರಿವರ್ಣ ಧ್ವಜ ರಾರಾಜಿಸುವ ಗಳಿಗೆಗಾಗಿ ಕಾಯೋದು ಈ ದೇಶದ ಅದೆಷ್ಟೋ ಕೋಟಿ ಜನರಲ್ಲೊಬ್ಬ ನಾನು. ಬಿಳಿಬಿಳಿಯ ಸಮವಸ್ತ್ರ ತೊಟ್ಟು ಕೈಗೊಂದು ತ್ರಿವರ್ಣದ ಬ್ಯಾಂಡೋ ಜೇಬಿಗೊಂದು ತ್ರಿವರ್ಣದ ಪಿನ್ನೋ ಚುಚ್ಚಿಕೊಂಡು ಬೋಲೋ ಭಾರತ್ ಮಾತಾ ಕೀ ಜೈ ಎನ್ನುತ್ತಾ ಶಾಲಾ … Read more

ಸ್ವಂತೀ(selpfie): ಪ್ರಶಸ್ತಿ

ಈ ಸ್ವಂತೀ ಅಥವಾ ಸೆಲ್ಪೀ ಅನ್ನೋ ಪದದ ಬಗ್ಗೆ ಕೇಳದ ಸಾಮಾಜಿಕ ತಾಣಗಳ ಬಳಕೆದಾರರು ಇಲ್ಲವೇ ಇಲ್ಲ ಅಂದರೆ ತಪ್ಪಾಗಲಾರದೇನೋ . ಗೆಳೆಯನೊಬ್ಬ ಅಥವಾ ಗೆಳತಿಯೊಬ್ಬಳು ನಮ್ಮ ಪಟ ತೆಗೆಯೋದಕ್ಕೆ ಕಾಯೋ ಬದಲು ನಮ್ಮ ಚಿತ್ರ ನಾವೇ ತೆಗೆದುಕೊಳ್ಳೋದಕ್ಕೆ  ಸೆಲ್ಫೀ ಅಥವಾ ಸ್ವಂತೀ(ಕೃಪೆ: ಮುಖಹೊತ್ತುಗೆಯ "ಪದಾರ್ಥ ಚಿಂತಾಮಣಿ" ಗುಂಪು)ಅಂತ ಕರೆಯುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತಿರುವಂತದ್ದೇ ಆದರೂ ಆ ಪದವನ್ನು ಮೊದಲು ಹುಟ್ಟುಹಾಕಿದ್ದು ಯಾರಂತ ಗೊತ್ತೇ ? ಆಕ್ಸವರ್ಡ ಪದಕೋಶದಿಂದ ೨೦೧೩ರ "ವರ್ಷದ ಪದ" ಎಂಬ ಬಿರುದು ಪಡೆದ … Read more

ಬರಹಗಾರರ ಭಾವವೂ, ಭಾಷೆಯ ನೋವೂ: ಪ್ರಶಸ್ತಿ

ಪೇಪರ್ರಲ್ಲಿ, ಇಂಟರ್ನೆಟ್ಟಲ್ಲಿ, ಮೊಬೈಲಲ್ಲಿ ಏನೋ ಓದುತ್ತೇವೆ, ಇನ್ನೇನೋ ನೋಡುತ್ತೇವೆ, ಮತ್ತಿನ್ನೇನೋ ಕೇಳುತ್ತೇವೆ, ಸಮಾಜದಲ್ಲಿನ ಆಗುಹೋಗುಗಳಲ್ಲಿ ಒಂದಾಗಿ ಏನೇನೋ ಅನುಭವಿಸುತ್ತಿರುತ್ತೇವೆ. ಈ ಘಟನೆಗಳಗಳಲ್ಲಿ ಯಾವುದೋ ಒಂದು ಇನ್ಯಾವುದೋ ಭಾವವನ್ನು ಸ್ಪುರಿಸಿರುತ್ತದೆ. ಹಿಂದಿನ ಓದಿನಿಂದ ಪ್ರಭಾವಿತರಾಗಿರುವಂತೆಯೇ ಆ ಕ್ಷಣಕ್ಕೆ ಹುಟ್ಟಿದ ಸ್ವಂತದ ಭಾವಕ್ಕೊಂದು ಅಕ್ಷರರೂಪ ಕೊಡಬೇಕೆಂಬ ಹಂಬಲವೂ ಹುಟ್ಟಬಹುದು. ಸರಿ, ಬರೆಯುತ್ತೇನೆ. ಆದರೆ ಬರೆಯುವುದು ಎಲ್ಲಿ ಎಂಬುದು ಆಗ ಮೂಡೋ ಮೊದಲ ಪ್ರಶ್ನೆ. ಶಾಲಾ ಕಾಲೇಜು ದಿನಗಳಲ್ಲಾದರೆ ಪುಸ್ತಕದ ಕೊನೆಯ ಪೇಜಿನಲ್ಲೋ, ಸಿಕ್ಕ ಖಾಲಿ ಹಾಳೆಯಲ್ಲೋ ಬರೆದು ಗೆಳೆಯರಿಗೆ ತೋರಿಸಿ … Read more

ಸಾವು: ಪ್ರಶಸ್ತಿ

ಸಾವೆಂಬುದು ಬೆನ್ನ ಹತ್ತಿ ಬರುತ್ತಿದೆಯಾ ಎಂಬ ಭಾವ ಪದೇ ಪದೇ ಕಾಡತೊಡಗಿತ್ತವನಿಗೆ. ಯದ್ವಾತದ್ವಾ ಟ್ರಾಫಿಕ್ ಜ್ಯಾಂನಿಂದ ರೈಲು ತಪ್ಪಿಸಿಕೊಂಡ ಬೇಜಾರಲ್ಲಿ ಬಸ್ಸಿಗೆ ಹೋದ ದಿನವೇ ರೈಲಿನ ಅಪಘಾತವಾಗಿ ಅದೆಷ್ಟೋ ಜನ ಅಸುನೀಗಿದ್ದರು. ಆ  ಆಘಾತ ಮನಸ್ಸಿನಿಂದ ಅಳಿಸೋ ಮುನ್ನವೇ ಇವ ರಿಸರ್ವ ಮಾಡಿಸಿದ್ದ ಬಸ್ಸು ಆಯತಪ್ಪಿ ಕೊರಕಲಿಗೆ ಜಾರಿದ ಸುದ್ದಿ ಕೇಳಿಬಂದಿತ್ತು. ಬೇಗ ಹೋಗಬೇಕಂದುಕೊಂಡ್ರೂ ಆ ಶುಕ್ರವಾರವೇ ವಿಪರೀತ ಲೇಟಾಗಿ ರಿಸರ್ವ್ ಮಾಡಿಸಿದ ಬಸ್ಸಿಗೆ ಹೋಗಲಾಗದ್ದಕ್ಕೆ ಅದೆಷ್ಟೋ ಶಾಪ ಹಾಕಿದ್ದವನಿಗೆ ಮಾರನೇ ದಿನದ ಪೇಪರ್ ನೋಡಿದಾಗ ಮತ್ತೊಮ್ಮೆ … Read more

ಕುಂದ್ಲಳ್ಳಿ ಕೆರೆ: ಪ್ರಶಸ್ತಿ

ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನೋದು ಉದ್ಯಾನನಗರಿ ಅನ್ನುವಂತೆಯೇ ಕೆರೆಗಳ ನಗರವೂ ಆಗಿತ್ತಂತೆ. ಈಗ ಕೆರೆಯಿದ್ದೆಡೆಯೆಲ್ಲಾ ಅಪಾರ್ಟುಮೆಂಟುಗಳೋ, ಸ್ಟೇಡಿಯಮ್ಮುಗಳೋ ತಲೆಯೆತ್ತಿ ಬೇಸಿಗೆ ಬರೋದ್ರೊಳಗೇ ನೀರಿಗೆ ಹಾಹಾಕಾರ. ಸಾವಿರ ಅಡಿ ಕೊರೆದ್ರೂ ಬೋರಲ್ಲಿ ನೀರಿಲ್ಲ ಅನ್ನೋ ಸಮಸ್ಯೆ ಒಂದೆಡೆಯಾದ್ರೆ ಇರೋ ಕೆರೆಗಳ ನೀರಿಗೂ ವಿಪರೀತ ಪ್ರಮಾಣದ ರಾಸಾಯನಿಕಗಳ ಸುರುವಿ ಅದನ್ನೂ ಹಾಲಾಹಲವಾಗಿಸುತ್ತಿರುವ ಸಮಸ್ಯೆ ಇನ್ನೊಂದೆಡೆ. ವೈಟ್ ಫೀಲ್ಡೆಂಬ ಏರಿಯಾವನ್ನೇ ತಗೊಂಡ್ರೆ ಸುತ್ತಲ ಏಳೆಂಟು ಕೆರೆಗಳಿದ್ದಿದ್ದನ್ನ ಕಾಣಬಹುದು(ಚಿತ್ರ:lakes around whitefield).ಇದ್ದಿದ್ದು ಅಂತ್ಯಾಕೇ ಹೇಳ್ತಿದೀನಾ ? ಇನ್ನೂ ಇಲ್ವಾ ಆ ಕೆರೆಗಳು ಅಂತ ಅಂದ್ರಾ … Read more

ನಾನೋದಿದ ಹೊತ್ತುಗೆ ಪೆರುವಿನ ಪವಿತ್ರ ಕಣಿವೆಯಲ್ಲಿ: ಪ್ರಶಸ್ತಿ

ಬೇಸಿಗೆರಜೆ ಮತ್ತು ಚಳಿಗಾಲದ ರಜೆ ಬಂತು ಅಂದ್ರೆ ಎಲ್ಲಿಲ್ಲದ ಖುಷಿ ನಂಗೆ. ಅಜ್ಜಿ ಮನೆ, ದೊಡ್ಡಪ್ಪನ ಮನೆ ಅಂತ ಒಂದು ಕಡೆ ಇಂದ ಹೊರಟ್ರೆ ಅಲ್ಲಿಂದ ಹತ್ತಿರ ಇರ್ತಿದ್ದ ಮತ್ತೊಂದು ಮಾವನ ಮನೆ, ಅಲ್ಲಿಂದ ಮತ್ತೊಂದು ಚಿಕ್ಕಪ್ಪನ ಮನೆ ಅಂತ ಸುಮಾರಷ್ಟು ಕಡೆ ತಿರುಗಿ ರಜಾ ಮುಗಿಯೋ ಹೊತ್ತಿಗೆ ಮನೆ ತಲುಪುತ್ತಿದ್ದೆ. ದಿನಾ ಮನೆಗೆ ಫೋನ್ ಮಾಡಿ ಎಲ್ಲಿದ್ದೀನಿ ಅಂತ ಹೇಳ್ಬೋಕು ಅನ್ನೋದನ್ನ ಬಿಟ್ರೆ ಬೇರ್ಯಾವ ನಿರ್ಬಂಧಗಳೂ ಇಲ್ಲದ ಸ್ವಚ್ಛಂದ ಹಕ್ಕಿಯ ಭಾವವಿರುತ್ತಿದ್ದ ದಿನಗಳವು. ಮನೆ ಬಿಟ್ಟು … Read more

ನೇರಳೆ ಹಣ್ಣು: ಪ್ರಶಸ್ತಿ

ಸಣ್ಣವರಿದ್ದಾಗ ಜೂನ್ ಜುಲೈ ಅಂದ್ರೆ ನೆನ್ಪಾಗ್ತಿದ್ದಿದ್ದು ಹಸಿರೋ ಹಸಿರು. ಉಧೋ ಅಂತ ಸುರಿಯುತ್ತಿದ್ದ ಮಳೆಯಲ್ಲೊಂದು ಛತ್ರಿ ಹಿಡಿದು ಹಸಿರ ಹುಲ್ಲ ಮಧ್ಯದ ದಾರಿಯಲ್ಲಿ ಪಚಕ್ ಪಚಕ್ ಅಂತ ನೀರು ಹಾರಿಸ್ತಾ ನಡೀತಿದ್ರೆ ಗಮನವೆಲ್ಲಾ ದಾರಿ ಬದಿಯ ಕುನ್ನೇರಲೆ ಗಿಡಗಳ ಮೇಲೇ. ದೊಡ್ಡ ನೇರಳೇ ಮರದಿಂದ ಬಿದ್ದು ರಸ್ತೆಯಲ್ಲೆಲ್ಲಾ ಹಾಸಿ ಹೋದ ನೇರಲೇ ಹಣ್ಣುಗಳಲ್ಲಿ ಒಂದಿಷ್ಟು ಆರಿಸಿ ತಿಂದ, ಸಂಜೆ ಬಂದು ಇನ್ನೊಂದಿಷ್ಟು ಕೊಯ್ಯೋ ಪ್ಲಾನಿದ್ದರೂ ಕಣ್ಣಿಗೆ ಬಿದ್ದ ಕುನ್ನೇರಲೇ ಹಣ್ಣುಗಳು ಕರೆಯದೇ ಬಿಡುತ್ತಿರಲಿಲ್ಲ. ಮಳೆಗಾಲವೆಂದರೆ ತೋಟದಲ್ಲಿ ಕಾಣುತ್ತಿದ್ದ … Read more

ಮತ್ತೊಂದು ಹೊಟ್ಟೆ: ಪ್ರಶಸ್ತಿ

ಎಲ್ರಿಗೂ ಒಂದು ಹೊಟ್ಟೆ ಇರೋದು ಗೊತ್ತು. ಈ ಮತ್ತೊಂದು ಹೊಟ್ಟೆ ಯಾವುದು ಅಂದ್ರಾ ? ಒಂದು ಹೊಟ್ಟೆ ತುಂಬಿಸೋದೇ ಕಷ್ಟ, ಇನ್ನು ಈ ತರ ಮತ್ತೊಂದು ಹೊಟ್ಟೆ ಏನಾದ್ರೂ ಇದ್ರೆ ಅದನ್ನು ಹೇಗಪ್ಪಾ ತುಂಬಿಸೋದು ಅಂದ್ರಾ ? ತಾಯಿಯ ಹೊಟ್ಟೆಯೊಳಗಿರುವ ಮಗುವಿನ ಹೊಟ್ಟೆಯನ್ನು ಮತ್ತೊಂದು ಹೊಟ್ಟೆ ಅಂತೇನಾದ್ರೂ ಕರೆಯೋಕೆ ಹೊರಟಿದ್ದೀನಿ ಅಂತೇನಾದ್ರೂ ವಿಚಿತ್ರ ಆಲೋಚನೆ ಬಂತಾ ? ಊಟ ಹೆಚ್ಚಾಗಿ ಹೊಟ್ಟೆ ಕೆಳಗಾಗಿ ಮಲಗೋಕಾಗದೇ ಇದ್ದಾಗೆಲ್ಲಾ ಹೆತ್ತವ್ವ ನನ್ನ ಹೊತ್ತಾಗ ಹೇಗೆ ಹೊಟ್ಟೆ ಕೆಳಗೆ ಮಲಗಲಾಗದೇ ಬೋರಲು … Read more

ಸೂರ್ಯಾಸ್ತ: ಪ್ರಶಸ್ತಿ

ಆಫೀಸಿನ ಗಾಜಿನಾಚೆ ಕಾಣುತ್ತಿದ್ದ ಸಂಜೆಯ ಬಣ್ಣದೋಕುಳಿ ಖುಷಿಯ ಬದಲು ಜಿಗುಪ್ಸೆ ಹುಟ್ಟಿಸಿತ್ತವನಿಗೆ. ಎಷ್ಟು ದಿನವೆಂದು ಹೀಗೆ ಹೊತ್ತುಗೊತ್ತಿಲ್ಲದಂತೆ ಗೇಯುವುದು ? ಒಂದು ದಿನವಾದರೂ ಹೊತ್ತಿಗೆ ಸರಿಯಾಗಿ ಮನೆ ತಲುಪಬೇಕೆಂಬ ಕನಸು ಕನಸಾಗೇ ಉಳಿದುದನ್ನು ಪ್ರತಿದಿನದ ಸೂರ್ಯಾಸ್ತ ಚುಚ್ಚಿ ಚುಚ್ಚಿ ನೆನಪಿಸಿದಂತನಿಸುತ್ತಿತ್ತು ಅವನಿಗೆ.  ಕೆಂಪು, ಕೇಸರಿ, ಅರಿಷಿಣಗಳ ಬಣ್ಣ ಹೊದ್ದ ಮೋಡಗಳು ಒಂದೆಡೆ ಇರಲಾರದೇ ಮದುವೆ ಮನೆಯ ಸುಂದರಿಯರಂತೆ ಅತ್ತಿತ್ತ ಓಡಾಡುತ್ತಿದ್ದರೆ ಬೀಸುತ್ತಿದ್ದ ತಂಗಾಳಿ ಅಲ್ಲೇ ನಿಂತಿದ್ದ ಹೆಣ್ಣೊಬ್ಬಳ ಕೂದಲೊಂದಿಗೆ ಆಟವಾಡುತ್ತಿತ್ತು.  ಮೋಡಗಳ ಮೆರವಣಿಗೆಯಿಂದ ಕೊಂಚ ಕೆಳಗೆ ಕತ್ತು … Read more

ನಾ ನೋಡಿದ ಸಿನಿಮಾ ಹಮಾರಿ ಅದೂರಿ ಕಹಾನಿ: ಪ್ರಶಸ್ತಿ

ವಿದ್ಯಾ ಬಾಲನ್ ಅಂದ ತಕ್ಷಣ ಕೆಲವರಿಗೆ ಕಹಾನಿ ಚಿತ್ರ ನೆನಪಾದರೆ ಕೆಲವರಿಗೆ ಡರ್ಟಿ ಪಿಕ್ಚರ್ ನೆನಪಾಗಬಹುದು.ಅವೆರಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ ಅಂದ್ರಾ ? ಡರ್ಟಿಪಿಕ್ಚರ್(೨೦೧೨) ಮತ್ತು ಕಹಾನಿ(೨೦೧೩) ಎರಡಕ್ಕೂ ಫಿಲ್ಮಫೇರ್ ಮತ್ತು ಅಂತರರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ, ಸ್ಟಾರ್ ಗಿಲ್ಡ್, ಸ್ಟಾರ್ ಡಸ್ಟ್, ಜೀ ಸಿನಿ ಅವಾರ್ಡುಗಳ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ ಇವರು. ಸಿನಿಮಾ ರಂಗದಲ್ಲಿರುವವರಿಗೆ ಸಿನಿ ಪ್ರಶಸ್ತಿಗಳು ಬರುವುದು ಸಾಮಾನ್ಯ,ಅದರಲ್ಲೇನಿದೆ ಅಂದ್ರಾ ? ೨೦೧೪ರ ಸಾಲಿನ ಪದ್ಮಶ್ರೀ ಪ್ರಶಸ್ತಿಯೂ ಇವರಿಗೆ ಸಂದಿದೆ. ಗುರು, ಪಾ ಹೀಗೆ … Read more

ಕಾಡೋ ಕಾಡು: ಪ್ರಶಸ್ತಿ

ಅಡವಿ ದೇವಿಯ ಕಾಡು ಜನಗಳ ಈ ಹಾಡು.. ನಾಡಿನ ಜೀವ ತುಂಬಿದೆ..ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ಎಸ್.ಪಿ.ಬಿ ಸಂಗಡಿಗರು ಹಾಡಿದ ಮೇಲಿನ ಹಾಡು ಕೇಳದವರಿಲ್ಲ ಅನಿಸುತ್ತೆ(ಕೊಂಡಿ ೧). ಜಂಗಲ್ ಬುಕ್ಕಿನ ಮೋಗ್ಲಿಯ ಕತೆಗಳನ್ನು ಕೇಳದ ಒಂದು ಪೀಳಿಗೆಯವರೇ ಇಲ್ಲವೆನ್ನುವಷ್ಟು ಪ್ರಸಿದ್ದಿ ಪಡೆದಿತ್ತು ಒಂದು ಪುಸ್ತಕ ಒಂದು ಕಾಲಕ್ಕೆ. ಜೂಲಿಯಾನೆ ಕೊಪ್ಕೆ ಅವರ Girl against the jungle ಪುಸ್ತಕದ ಭಾಗವೊಂದು(ಕೊಂಡಿ ೨)ನಮ್ಮ ಹೈಸ್ಕೂಲಿನ ಇಂಗ್ಲೀಷಿನಲ್ಲಿ ಪಾಠವಾಗಿತ್ತು. ಲಾಕ್ ಹೀಡ್ ಎಲೆಕ್ಟ್ರಾವೆಂಬ ವಿಮಾನದಲ್ಲಿ ತಾಯಿಯ ಜೊತೆಗೆ ಹೊರಟ … Read more

ವೋಲ್ವೋ: ಪ್ರಶಸ್ತಿ

ವೋಲ್ವೋದ ಜಂಟಿ ಸೀಟಲ್ಲಿ ಒಂಟಿಯಾಗಿ ಕೂತು ಮಳೆಯಿಲ್ಲದ ಬೇಸಿಗೆಯ ತಂಪಾದ ಹವೆಯ ಸವಿ ಅನುಭವಿಸುತ್ತಾ ಹೆಚ್ಚು ಹೊತ್ತೇನಾಗಿರಲಿಲ್ಲ. ಪಕ್ಕದಲ್ಲೊಬ್ಳು ಮುಸುಕಿಣಿ ಅವತರಿಸಿದಳು. ವೈತರಿಣಿ, ಮಂಜೂಷಾ ಕಿಣಿ ಅನ್ನೋ ತರ ಇದ್ಯಾವ ಹುಡುಗಿ ಹೆಸ್ರಪ್ಪಾ ಅಂದ್ಕೊಂಡ್ರಾ ? ಅದು ಹೆಸರಲ್ಲ, ಮುಸುಕು ! ಈ ಮೊದ್ಲು ಹೇಳಿದ ಹೆಸ್ರು ಯಾರು ಅಂದ್ರಾ ? ಅದ್ರ ವಿಚಾರಕ್ಕೆ ಇನ್ನೊಮ್ಮೆ ಬರೋಣ. ಮುಸುಕುಧಾರಿಣಿ ಮುಸುಕು ತೆಗೆಯೋ ತನಕ ಅವಳನ್ನೇ ದುರುಗುಟ್ಟಿ ನೋಡೋದು ಸಜ್ಜನಿಕೆ ಅಲ್ಲವಂತ ಪಕ್ಕದಲ್ಲಿ ಏನೂ ಕಾಣದಿದ್ರೂ ಕಿಟಕಿಯ ಹೊರಗೆ … Read more

ವೈರಸ್ಸಿಲ್ಲದ ಲೋಕದಲ್ಲಿ: ಪ್ರಶಸ್ತಿ

ಏ ನನ್ನ ಕಂಪ್ಯೂಟರ್ ಸಿಕ್ಕಾಪಟ್ಟೆ ನಿಧಾನವಾಗ್ಬಿಟ್ಟಿದೆ, ಒಂದು ಫೋಲ್ಡರ್ ತೆರೆಯೋಕೆ ೨-೩ ನಿಮಿಷ ಬೇಕು. ಅದೆಂತದೋ ವೈರಸ್ ಬಂದು ಕೂತ್ಬಿಟ್ಟಿದೆ ಕಣೋ ಅಂತಿದ್ದ ಫ್ರೆಂಡು.ಹೂಂ, ಇವ ಯಾವುದೇ ಜಾಲತಾಣ ತೆರೆದ್ರೂ ಅದೆಂತದೋ ಜಾಹೀರಾತು ಬಂದು ಕುಣ್ಯತ್ತೆ ಮಾರಾಯ. ವೈರಸ್ಸು, ಟ್ರೋಜನ್ನು, ಮಾಲ್ವೇರು.. ಇನ್ನೆಂತೆಂತ ಹಾಳು ಮೂಳು ಬಂದು ಕೂತಿದ್ಯೋ ಇದ್ರಲ್ಲಿ ಅಂದ ಇನ್ನೊಬ್ಬ.ಈ ವಿಂಡೋಸು, ಇದ್ರ ದುಬಾರಿ ದುಡ್ಡು ಕೊಟ್ರೂ ಕೆಲಸ ಮಾಡದ . ಎಂಥದದು ? ಆಂಟಿ ವೈರಸ್ಸಾ ? ಅದ್ನ ಹಾಕೂ ಈ ಕತೆ … Read more

ಮೊಬೈಲ್ ಫ್ಯಾಷನ್ನೋ ಕಾಡೋ ರೇಡಿಯೇಷನ್ನೋ ?: ಪ್ರಶಸ್ತಿ

  ಏ ಈ ಮೊಬೈಲ್ ತಗಳನ ಕಣೋ. ೨ ಜಿಬಿ ರ್ಯಾಮು,೮ ಎಂ.ಪಿ ಕ್ಯಾಮು, ಆಂಡ್ರಾಯ್ಡು ಇದೆ. ಇನ್ನೇನ್ ಬೇಕು ? ಹತ್ತು ಸಾವ್ರದ ಒಳಗೆ ಇಷ್ಟೆಲ್ಲಾ ದಕ್ಕೋವಾಗ ಬಿಡೋದ್ಯಾಕೆ ಅಂತ ತಗಂಡವನಿಗೆ ಈಗ ವಾರ ಕಳೆಯೋದ್ರೊಳಗೆ ಫುಲ್ ತಲೆ ನೋವು. ಯಾವಾಗ ನೋಡಿದ್ರೂ ಕಣ್ಣೆಲ್ಲಾ ಕೆಂಪಾಗಿಸಿಕೊಂಡು , ಹಾಸಿ ಕೊಟ್ರೆ ಇಲ್ಲೇ ಮಲಗಿಬಿಡೋಷ್ಟು ಸುಸ್ತಾದವನಂತೆ ಕಾಣ್ತಿದ್ದವನಿಗೆ ಏನಾಯ್ತಪ್ಪ ಅಂದ್ರೆ ಎಲ್ಲಾ ಮೊಬೈಲ್ ಮಾಯೆ. ಮೊಬೈಲ ಹೊರಗಣ ನೋಟಕ್ಕೆ ಮನಸೋತಿದ್ದ ಅವ ಅದರಿಂದಾಗೋ ರೇಡಿಯೇಷನ್ನಿನ ಬಗ್ಗೆ ನೋಡೋಕೆ … Read more

ಬುಡ್ಡಿ ದೀಪ: ಪ್ರಶಸ್ತಿ ಪಿ.

ವಿಭಿನ್ನ ಧೃವಗಳಂತೆ ಭಿನ್ನವಾಗಿರುತಿತ್ತು ಆ ಕೊಳ್ಳ ಹಗಲಿರುಳುಗಳ ಹೊತ್ತಿನಲ್ಲಿ. ಬೆಳಗಿನಲ್ಲಿ ಬಿಡುವಿಲ್ಲದಷ್ಟು ಚಟುವಟಿಕೆಯ ಚಿಲಿಪಿಲಿಯಾದರೆ ಸಂಜೆಯೆಂದರದು  ಕತ್ತಲ ತವರು . ಕಪ್ಪೆಗಳ ವಟರುವಿಕೆ, ಝೀರುಂಡೆಗಳ ಝೀಂಕಾರವ ಬಿಟ್ಟರೆ ಕೊಳ್ಳದೆಲ್ಲೆಡೆ ಸ್ಮಶಾನ ಮೌನ. ಮನೆಗಳ ಮಧ್ಯದಲ್ಲಿನ ಬುಡ್ಡಿದೀಪಗಳ ಬೆಳಕು ಹಂಚ ಸಂದಿಯಿಂದ ಹೊರಬರಲೋ ಬೇಡವೋ ಎಂಬಂತೆ ಅಲ್ಲಿಲ್ಲಿ ಹಣಿಕಿದ್ದು ಬಿಟ್ಟರೆ ಬೇರೆಲ್ಲೆಡೆ ಕತ್ತಲ ಸಾಮ್ರಾಜ್ಯ. ಚಂದ್ರ ಮೋಡಗಳ ಮರೆಯಿಂದ ಹೊರಬಂದು ಕರುಣೆ ತೋರಿ ಊರಿಗೊಂದಿಷ್ಟು ಬೆಳಗ ತೋರಿದರೆ ರಾತ್ರಿಯಲ್ಲಿ ಬೆಳಕೇ ಹೊರತು ಬೇರೇನೂ ಬೆಳಕಿಲ್ಲವಲ್ಲಿ. ಮನೆಯೊಳಗೆ ಬುಡ್ಡಿದೀಪ, ಲಾಂದ್ರಗಳು … Read more

ಮೌನಿ:ಪ್ರಶಸ್ತಿ ಪಿ.

ಬೆರೆವ ಭಾವಗಳ ಸರಳ ಸುಂದರಿಯು ಮೌನ ತಾಳಿದ್ದಾಳೆ. ಧುಮುಕಲನುವಾಗಿ ನಲ್ಲಿಯಂಚಲ್ಲಿ ನಿಂತ ಹನಿಯೊಂದು ಗುರುತ್ವವನ್ನೂ ಲೆಕ್ಕಿಸದೆ ನಲ್ಲಿಯನ್ನೇ ಅಂಟಿಕೊಂಡಂತೆ ತನ್ನ ಕಾದಿರುವವರ ನಿರೀಕ್ಷೆಗಳಿಗೆ ಸ್ಪಂದಿಸದಂತೆ ಮೌನವಾಗಿದ್ದಾಳೆ. ಉಕ್ಕಿ ಹರಿಯುತ್ತಿದ್ದ ಹುಚ್ಚುಹೊಳೆ, ಜೀವ ಸೆಲೆ, ತಾಯಿ ಮೌನಿಯಾಗಿದ್ದಾಳೆ. ಮಳೆಯೆಂದರೆ ಹುಚ್ಚೆದ್ದು ಹೊಡೆವ ದಿನಗಳವು. ಬೇಸಿಗೆಯೆಂದರೆ ಕಲ್ಲಂಗಡಿ ಹೋಳೋ,ಇಬ್ಬಟ್ಟಲ, ಮುರುಗನುಳಿ(ಕೋಕಂ) ಪಾನಕಗಳು ಮನೆಮನೆಯಲ್ಲೂ ಖಾಯಂ ಆಗಿರುತ್ತಿದ್ದ ದಿನಗಳವು. ಚಳಿಗಾಲವೆಂದ್ರೆ ಏಳರ ಮೇಲೆ ಮನೆಯಿಂದ ಹೊರಗೆ ಕಾಲಿಡಲು ಬೇಸರಿಸುತ್ತಿದ್ದ ಕಾಲವದು. ಒಂದೇ ದಿನದಲ್ಲಿ ಮೂರೂ ಋತುಗಳ ದರ್ಶನವಾಗುತ್ತಿದ್ದ ಚೌಚೌ ಬಾತ್ ದಿನಗಳಲ್ಲ. … Read more

ಕಾಣದ ಕಣ್ಣಿಗೊಂದು: ಪ್ರಶಸ್ತಿ ಪಿ.

ಬೆಳಗ್ಗೆ ಹೊಂಬಿಸಿಲಿನೊಂದಿಗೆ ಮಗುವ ನಗುವಿನಂತೆ ಸೌಮ್ಯವಾಗಿದ್ದ ವರುಣದೇವ ಸಂಜೆಯಾಗುತ್ತಿದ್ದಂತೆ ಕಾಳಿಯಂತೆ ಆರ್ಭಟಿಸತೊಡಗಿದ್ದ. ಒಂದಾನೊಂದು ಕಾಲದ ಕೆರೆಗಳನ್ನೇ ಆಪೋಷನ ತೆಗೆದುಕೊಂಡು ಎದ್ದು ನಿಂತ ಅಪಾರ್ಟುಮೆಂಟುಗಳನ್ನೆಲ್ಲಾ ಮತ್ತೆ ಕೆರೆಗಳನ್ನಾಗಿಸಿಯೇ ಬಿಡೋ ಸಂಕಲ್ಪದಲ್ಲಿದ್ದಾನಾ ಇವನಿಂದು ಎಂಬ ಭಯ ರಸ್ತೆಗಳಲ್ಲಿ ಹರಿಯುತ್ತಿದ್ದ ಮೊಣಕಾಲುದ್ದದ ನೀರ ನೋಡಿ ಕಾಡುತ್ತಿತ್ತು. ಹಿಂದಿನ ದಿನವಷ್ಟೇ ಹೊಸದಾಗಿ ಮಾಡಿದ ಟಾರ್ ರೋಡನ್ನೆಲ್ಲಾ ಅಗೆದು, ಮುಚ್ಚದೇ ಹಾಗೇ ಬಿಟ್ಟ ಗ್ಯಾಸ್ ಕೇಬಲ್ಲಿನವರಿಗೆ ಬಸ್ಸಿನ ಚಕ್ರ ಹೂತು ಕುಂತ ಡ್ರೈವರ್ರು ಶಾಪ ಹಾಕುತ್ತಿದ್ದ. ಹೊಂಡಗಳ ತಪ್ಪಿಸಿ ಸರಿ ರಸ್ತೆಯಲ್ಲಿ ನಡೆಸಲೋಸುಗ ನಿಧಾನವಾದ … Read more

ಭವ: ಪ್ರಶಸ್ತಿ ಪಿ.

ಮಧ್ಯಾಹ್ನದಿಂದಲೂ ಮಳೆಯ ಕಣ್ಣಾಮುಚ್ಚಾಲೆಯಾಟದಲ್ಲಿ ಕಾಮನಬಿಲ್ಲಿನ ಚಿತ್ತಾರಗಳ ಬಿಡಿಸಿ ಸುಸ್ತಾದ ಸೂರ್ಯ ಮೋಡಗಳ ಮರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೋ ಎಂಬಂತೆ ಕವಿದಿದ್ದ  ಮಬ್ಬುಗತ್ತಲು. ಇಲ್ಲಾಡಿ ಬೇಸರಗೊಂಡ ಮೋಡಗಳು ಇನ್ನೆಲ್ಲೋ ಹಾರಿದಂತೆ ಸೂರ್ಯ ಆಗಸವನ್ನೇ ಪಟವನ್ನಾಗಿಸಿ ಬಿಡುವು ಕಳೆಯುತ್ತಿದ್ದ . ಹಳದಿ ಕೇಸರಿಗಳ ಚಿತ್ತಾರ ಬಿಡಿಸುತ್ತಿದ್ದ ರವಿ, ಹೊಗೆಯುಗುಳುತ್ತಿದ್ದ ಬಸ್ಸುಗಳು, ದಿನವಿಡೀ ಸುರಿದ ಮಳೆಯಿಂದ ತಂಪಾದ ದಾರಿಪಕ್ಕದ ಮರಗಳು, ಕೊಚ್ಚೆಯಿಂದ ಕಾಲಿಡಲೂ ಆಗದಂತಹ ರಸ್ತೆಯ ಇಕ್ಕೆಲಗಳು..ಬದುಕೂ ಹೀಗೆ ಅಲ್ಲವೇ ? ಚಂದವೆಂದುಕೊಂಡ್ರೆ ಚಂದ ಚಂದ. ಗೋಳೆಂದುಕೊಂಡ್ರೆ ಗೋಳೇ ಗೋಳು ! ಪ್ರಕೃತಿಗೆ … Read more

ಲಿನಕ್ಸ್ install ಮಾಡೋದು ಹೇಗೆ ?: ಪ್ರಶಸ್ತಿ ಪಿ.

ಕಂಪ್ಯೂಟರನ್ನು ಹೆಚ್ಚೆಚ್ಚು ಬಳಸೋರಿಗೆ ಲಿನಕ್ಸೆನ್ನೋದು ಪರಿಚಿತವಾದ್ರೂ ಹೊಸದಾಗಿ ಬಳಸೋರಿಗೆ ಅದ್ರ ಬಗ್ಗೆ ಇಲ್ಲದ ಭಯ ಇರ್ಬೋದು.ಏ ಲಿನಕ್ಸು ಸಿಕ್ಕಾಪಟ್ಟೆ ಕಷ್ಟ ಮಾರಾಯ, ಎಲ್ಲದಕ್ಕೂ ಕಮಾಂಡ್ ಕೊಡ್ತಾ ಕೂರ್ಬೇಕು ಅಂತ ಓಬಿರಾಯನ ಕಾಲದಲ್ಲಿ ಯಾರೋ ಹೇಳಿದ್ದನ್ನೇ ನಂಬಿಕೊಂಡು ಕೂರೋರು ಅದ್ರಲ್ಲಿ ಎಷ್ಟು ಪ್ರತಿಶತ ಸತ್ಯವಿದೆ ಅಂತ ಪರೀಕ್ಷಿಸಲೂ ಹೋಗೋಲ್ಲ. ಕಂಪ್ಯೂಟರ್ ಕೊಳ್ಳುವಾಗ ಕೆಲವೇ ಕೆಲವು ಕಂಪ್ಯೂಟ್ರುಗಳ ಜೊತೆಗೆ ಮಾತ್ರ ಒರಿಜಿನಲ್ ವಿಂಡೋಸ್ ಬರುತ್ತೆ. ಉಳಿದಿದ್ದೆಲ್ಲಾ ಪೈರೇಟೆಡ್ ಅಥವಾ ಕಳ್ಳಮಾಲು ! ಚೈನಾ ಬಜಾರ್ಗೆ ಹೋಗಿ ಒಂದು ಕಳ್ಳಮಾಲಿನ ಶರ್ಟೋ … Read more

ಬೆಳಕ ಕನಸ ಬೆನ್ನೇರಿ: ಪ್ರಶಸ್ತಿ ಪಿ.

ಬೀದಿಗೆಲ್ಲಾ ಬೆಳಕೀಯುತ್ತಿದ್ದ ಪಾದರಸ ದೀಪದ ಅಂಚು ಕಪ್ಪುಗಟ್ಟಿತ್ತು. ಕಣ್ಣುರಿಸೋ ಪ್ರಖರ ಬೆಳಕ ಲೆಕ್ಕಿಸದೆ ಅತ್ತಲೇ ದಿಟ್ಟಿಸುವವರಿಗೆ ಆ ಕಪ್ಪೊಂದು ಸಾವರಾಶಿ ಅಂತ ಹೊಳೆಯುತ್ತಿತ್ತು. ಒಳಹೊಕ್ಕಲು ಜಾಗವೇ ಇಲ್ಲವೆಂಬಂತೆ ಭಾಸವಾಗುತ್ತಿದ್ದ ಮರ್ಕ್ಯುರಿ ದೀಪದ ಶಾಖವನ್ನೂ ಲೆಕ್ಕಿಸದೇ ಆ ಹುಳುಗಳು ಅದೇಗೆ ಒಳಹೊಕ್ಕವೋ, ಬೆಳಕ ಜೊತೆಗೇ ಇದ್ದ ಬಿಸಿಗೆ ಸುಟ್ಟು ಸತ್ತವೋ ಮೊದಮೊದಲ ನೋಡುಗನಿಗೆ ಸದಾ ಅಚ್ಚರಿಹುಟ್ಟಿಸುವಂತಿತ್ತು. ಬೆಳಕಿಗೆ ಕಾರಣವ ಹೊತ್ತು ನಿಂತ ಉದ್ದನೆ ಕಂಬಕ್ಕೆ ಕಾಡುತ್ತಿರೋ ಏಕತಾನತೆ, ಎಲ್ಲಾ ಮಲಗಿರುವಾಗ ಎದ್ದಿದ್ದು ಜಗಕೆ ಬೆಳಗ ತೋರೂ ನಿರ್ಲ್ಯಕ್ಷ್ಯಕ್ಕೊಳಗಾಗುತ್ತಿರೋ ಬೇಸರದ … Read more

ಹೂವ ತೋಟದ ಕತೆ: ಪ್ರಶಸ್ತಿ ಪಿ.

ಭಾವಗಳ ತೋಟದಲ್ಲೊಂದು ಹೂವ ಬಯಸಿದ ಮನಕೆ ಆ ಹೂವೊಂದು ಮಾಲೆ ಸೇರಿದ ದಿನ ಬಹಳ ಬೇಸರ. ಹೂವಾಗೋ ಸಮಯದಲ್ಲಿ ಮೊಗ್ಗಾಗುತ್ತಿದ್ದ ಭಾವಗಳೆಲ್ಲಾ ಯಾವಾಗ ನವಿರಾಗಿ ಹೂವಾದವೋ ಗೊತ್ತೇ ಆಗದಂತೆ ಕಳೆದುಹೋಗಿತ್ತಲ್ಲ ಕಾಲ. ಮೊಗ್ಗಾಗಿದ್ದ ಜೀವಗಳೆಲ್ಲಾ ಹೂವಾಗಿ ಒಂದೊಂದಾಗಿ ತೋಟದಿಂದ ಖಾಲಿಯಾಗುತ್ತಿದ್ದರೂ ಮಾಲೆಯಾದರೆ ಆ ಹೂವೊಂದಿಗೇ ಆಗಬೇಕೆಂಬ ಕನಸು ಬೇಸಿಗೆಯ ಬೆವರಂತೆ ಹೆಚ್ಚಾಗುತ್ತಲೇ ಇತ್ತು.ಇನ್ನೊಂದು ಹೊಸ ಮಾಲೆ, ಎನ್ನೆಷ್ಟು ಸಮಯದಲ್ಲಿ ನನ್ನದಿರಬಹುದೆನ್ನುತ್ತಾ ಸುಮ್ಮನೇ ದಿಟ್ಟಿಸಿದವನಿಗೊಮ್ಮೆ ದಿಗ್ರ್ಭಾಂತಿ. ಬಯಕೆ ಬೇಸಿಗೆಯಲ್ಯಾವ ಮಾಯೆಯಲ್ಲಿ ಮಳೆ ಬಂತೋ, ಗೊತ್ತೇ ಆಗದಂತೆ ಕನಸಿನಾಕೃತಿ ಕರಗಿಸಿದ … Read more

ಕಿರಿ ಕಿರಿ ಕೆಟ್ಟು: ಪ್ರಶಸ್ತಿ ಪಿ.

ಓದುಗ ಮಿತ್ರರಿಗೆಲ್ಲಾ ಯುಗಾದಿ ಶುಭಾಶಯಗಳು ಎನ್ನುತ್ತಾ ಮನ್ಮಥನಾಮ ಸಂವತ್ಸರದಲ್ಲಿ ಹೊಸದೇನು ಬರೆಯೋದು ಅಂತ ಯೋಚಸ್ತಿರುವಾಗ್ಲೇ ಹೋ ಅಂತ ಪಕ್ಕದ ಪೀಜಿ ಹುಡುಗ್ರೆಲ್ಲಾ ಕೂಗಿದ ಸದ್ದು. ಓ ಇನ್ನೊಂದು ವಿಕೆಟ್ ಬಿತ್ತು ಅನ್ಸತ್ತೆ ಅಂತ ಹಾಸಿಗೆಯಿಂದ ತಟ್ಟನೆದ್ದ ರೂಂಮೇಟು ಟೀವಿ ರಿಮೇಟ್ ಹುಡುಕಹತ್ತಿದ್ದ. ನಿನ್ನೆಯಷ್ಟೇ ಒರಿಜಿನಲ್ ಆಧಾರ್ ಕಾರ್ಡ್ ಹೊಂದಿರುವವರು ಮತ್ತು ಡೂಪ್ಲಿಕೇಟ್ ಆಧಾರ್ ಕಾರ್ಡ್ ಹೊಂದಿರೋರ ನಡುವಿನ ಕದನ ಅಂತಲೇ ಬಿಂಬಿತವಾಗಿದ್ದ ಚೆಂಡುದಾಂಡಿನಾಟದಲ್ಲಿ ಮುಳುಗಿದ್ದ ನನಗೆ ಇವತ್ತು ಮತ್ತೊಂದು ಪಂದ್ಯವಿದೆಯೆನ್ನೋದೇ ಮರೆತು ಹೋಗಿತ್ತು. ಟೀವಿ ಹಾಕುತ್ತಲೇ ಮತ್ತೆ … Read more

ಮಲೆಗಳಲ್ಲಿ ಮದುಮಗಳು ಮತ್ತು ನಾವು: ಪ್ರಶಸ್ತಿ ಪಿ.

೨೦೦೬-೦೭ ನೇ ಇಸವಿ. ಸಾಗರದ ಶಿವಲಿಂಗಪ್ಪ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ (ಕಳೆದ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ ಡಿಸೋಜ)ರ ಭಾಷಣ. ಸಾಹಿತ್ಯದ ಬಗ್ಗೆ ಮಾತನಾಡುತ್ತಾ ಅವರು ಕುವೆಂಪು ಅವ್ರ ಎರಡು ಮುಖ್ಯ ಕಾದಂಬರಿಗಳು ಯಾವುದು ಗೊತ್ತಾ ಅಂತ ಸಭೆಗೆ ಕೇಳಿದ್ದರು. ತಕ್ಷಣ ಕೈಯಿತ್ತಿದ್ದ ನಾನು ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡತಿ ಅಂದಿದ್ದೆ. ಶ್ರೀ ರಾಮಾಯಣ ದರ್ಶನಂ ಕೂಡಾ ಮಹತ್ಕೃತಿಯಾಗಿದ್ದರೂ ಅದು ಕಾವ್ಯ, ಕಾದಂಬರಿಯಲ್ಲ ಎಂಬ ಸಾಮಾನ್ಯ ಜ್ನಾನ … Read more

ಕೆಂಗುಲಾಬಿಯೂ, ಊರ ಗುಬ್ಬಿಯೂ: ಪ್ರಶಸ್ತಿ

ಒಂದೂರಲ್ಲೊಂದು ಗುಬ್ಬಿಯಿತ್ತಂತೆ. ಆ ಗುಬ್ಬಿಗೆ ಸಿಕ್ಕಾಪಟ್ಟೆ ಗೆಳೆಯರು. ಗುಬ್ಬಿ ಪ್ರತೀ ಸಾರಿ ಚೀಂವ್ಗುಟ್ಟಿದಾಗಲೂ ಆಹಾ ಎಂತಾ ಮಧುರ ಗಾನ. ನಿನ್ನ ಚೀಂಗುಟ್ಟುವಿಕೆಯ ಮುಂದೆ ಕೋಗಿಲೆಯ ಗಾಯನವನ್ನೂ ನಿವಾಳಿಸಿ ಎಸೆಯಬೇಕೇನೋ ಎಂದು ಹೊಗಳುತ್ತಿದ್ದರಂತೆ. ಮೊದಮೊದಲು ಸುಮ್ಮನೇ ಹೊಗಳುತ್ತಿದ್ದಾರೆಂದುಕೊಂಡಿದ್ದ ಗುಬ್ಬಿಗೆ ನಿಧಾನಕ್ಕೆ ಅವರು ಹೇಳಿದ ಮಾತುಗಳೇ ಸತ್ಯವೆನಿಸಲಾರಂಭಿಸಿತು. ಅಷ್ಟೆಲ್ಲಾ ಜನ ಸುಳ್ಳು ಹೇಳುತ್ತಾರಾ ಅಂತ. ನಾನೆಂದ್ರೇನು ? ನಾ ಚೀಂಗುಟ್ಟುವುದೆಂದ್ರೇನು.. ಆಹಾ ಯಾರಾದ್ರೂ ನನಗೆ ಸಾಟಿಯುಂಟೆ ಅನ್ನೋ ಭಾವ ಅದಕ್ಕೇ ಅರಿವಿಲ್ಲದಂತೆ ಅದರೊಳಗೆ ಬೆಳೆಯಲಾರಂಭಿಸಿತು. ಒಂದಿನ ಹಿಂಗೇ ಆಹಾರ ಹುಡುಕುತ್ತುಡುಕುತ್ತಾ … Read more