Facebook

Archive for the ‘ಕಾವ್ಯಧಾರೆ’ Category

ಪಂಜು ಕಾವ್ಯಧಾರೆ

ಒಡೆದ ನೆನಪಿನ ಚೂರುಗಳು…!! ಆ ತೋರು ಬೆರಳು ಸಹ ಕಣ್ಣ ಮಿಟಿಗಿಸುತ್ತ ಮೊಬೈಲ್ನ ಮೂರು ಗಳಿಗೆಯೂ ಬ್ಲಾಕ್ ಮಾಡಿರುವ ವಾಟ್ಸಾಪ್ ನಂಬರ್, ಫೇಸ್ಬುಕ್ನ ಐಡಿ ನೋಡುವುದ ಬಿಡೋದಿಲ್ಲ ಅದಕ್ಕೂ ತಿಳಿದಿರಬೇಕು ನಾವು ದೂರವಾಗಿರುವ ವಿಷಯವು ಪದೇ ಪದೇ ನಿನ್ನ ನೆನಪಿಸುತ್ತಿದೆ !! ನೋಡು ನಮ್ಮನಗಲಿಕೆಯ ಕಂಡು ಆ ಬಸ್ಸು – ಲಾರಿ, ಕಾರು- ಸ್ಕೂಟರುಗಳು ಒಂದೇ ಸಮನೇ ಜೋರು ಸದ್ದು ಮಾಡಿ ರಸ್ತೆಗುಂಟ ಕೇಕೆ ಹಾಕುತ್ತ ಹೊಟ್ಟೆ ಉರಿಸುತ್ತಿವೆ…!! ಒಡೆದ ಕನ್ನಡಿಯೂ ಹೇಳುತ್ತಿತ್ತು ಛಿದ್ರ -ಛಿದ್ರವಾದ ಚೂರುಗಳಲ್ಲಿಯೂ […]

ಪಂಜು ಕಾವ್ಯಧಾರೆ

**ಮಾರಿಬಲೆಯಾ ** ಬಲೆಯೆತ್ತಿ ಹೊರಟಿಹರು ಬೆಸ್ತರು ಸಡಗರದಿ ಜಡಿಮಳೇಲಿ ಕಡಲ ತಡಿಗೆ I ಇಂದು ಸಿಕ್ಕಾವೋ? ಭೂತಾಯಿ ಕೊಡವಾಯಿ ಕಂಡಿಕಿ ಜಾರಿ ನನ್ನ ಬಲಿಗೆ I ಬಂದಿಹುದು ಮಳೆಗಾಲ ಬೀಸುವುದೇ ಬಲೆ ಈಗ! ಸಿಕ್ಕೇ ಸಿಕ್ಕಾವು ಎಸುಡಿ ಸಿಗಡಿ I ಮರವಂತೆ ಕಡೆಹೋಪ ಬರುವುದು ಬಾರಿ ಬೆಲೆ ಸಿಕ್ಕರೆ ಭೂತಾಯಿ ಕಂಡಿಕಿ I ಬೋರ್ಗರೆವ ಕಡಲೆಡೆಗೆ ಬಂದಾನೋ ಮೊಗವೀರ ಬೀಸಿದಾ *ಮಾರಿ**ಬಲೆಯಾ I ನನ್ನಯ ಮನೆಯಿಂದ ದೂರಾದ ಮೈಲುವರೆಗೂ ಇಂದು ನನ್ನದೇ ಬಲೆಯೂ I ಬಲೆ ಬಿಡುವುದು […]

ಪಂಜು ಕಾವ್ಯಧಾರೆ

೧. *ಒಲವಿನ ಕನಸು * ಕಂಡಿರದ ಮೊಗದ ಮೂರ್ತಿಯನು ಕೆತ್ತಿ… ತನ್ನಿಷ್ಟದ ಭಾವಗಳ ಅದರೆದೆಗೆ ಮೆತ್ತಿ… ಕಣ್ಣಕಾಂತಿಯಲಿ ಸವಿದು ಒಲವ ಸೊಬಗನು… ನೆನಪು-ಕನಸುಗಳ ಜಂಟಿ ಓಲಗದಿ… ಸಾಕ್ಷ್ಯ ಬರೆದಿತ್ತು ಚಂದ್ರಮನ ಕಾಂತಿ… ೨. *ತೆರೆದ ಪುಸ್ತಕದಂತ ಬದುಕು* ತೆರೆದ ಪುಸ್ತಕದಂತ ಬದುಕು ಓದುಗರು ಹಲವರು ಹಲವು ತೆರನವರು ತೆಗಳುವವರು, ಹೊಗಳುವವರು ಓದಿಯು ಓದದಂತಿರುವವರು ಓದದೆಯು ಜರೆಯುವವರು ಓದದೆಯು ಹೊಗಳುವವರು ಎಲ್ಲರ ಬಾಯಿಗೆ ಆಹಾರವಾಗೋ ಬಾಳು ತೆರೆದ ಪುಸ್ತಕದಂತ ಬಾಳು ಎನ್ನ ನೋವುಗಳ ಜ್ವಾಲೆಯಲ್ಲಿ ಚಳಿ ಕಾಯಿಸಿಕೊಂಡವರೆಷ್ಟೋ ಎನ್ನ […]

ಪಂಜು ಕಾವ್ಯಧಾರೆ

ಇನ್ನಾದರೂ ತುಸು ಹೊತ್ತು ಖುಷಿಯಿಂದ ಉಳಿದುಬಿಡುತ್ತೇನೆ ಬದುಕಿಗೆ ಬೇಸರ ಬರುವಷ್ಟು .. ಈ ಬದುಕು ಸುರುವಿದ ಅಸಂಖ್ಯ ಅವಕಾಶಗಳ ಎಣಿಸುತ್ತಾ ಕೂತು ಕಳೆದಿದ್ದೇನೆ ಹೀಗೆ ಬಳಸಿಕೊಳ್ಳೋದ ಮರೆತು ಪ್ರತಿ ಖುಷಿಯ ಹಿಂದೊಂದು ಮುಗಿಯದ ಖಾಲಿತನವನ್ನು ಸುಮ್ಮನೇ ಉಳಿಸಿಕೊಂಡಿದ್ದೇನೆ ನನ್ನಂಥ ಕಡುಮೌನಿಯೂ ನಿನ್ನ ಮಾತಿಗೆ ಹಪಹಪಿಸಲು ಶುರುವಿಡುವ ಈ ಹೊತ್ತು ಇಲ್ಲೇ ಸ್ತಬ್ಧವಾಗಲಿ ಬಿಡು ಮಾತು ಮೀರಿದ ಘಳಿಗೆ ಎದುರಿಗಿದ್ದಾಗ … ಬೆರಳ್ಹಿಡಿದು ನಡೆಸಿದ ಕಾಲುಹಾದಿಯ ಬದುಕು ಜಾರಿಸಲು ಶುರುವಿಟ್ಟು ನಗುತಾ ನಿಂತ ಸಮಯ ಬೇಕೆನಿಸಿದೆ ನಿನ್ನ ಸಾಂಗತ್ಯ […]

ಪಂಜು ಕಾವ್ಯಧಾರೆ

ನೀವಲ್ಲವೆ… ಬದುಕಲ್ಲಿ ಸಖನಾಗಿ ಒಲವಲ್ಲಿ ಜೊತೆಯಾಗಿ ಮನದಲ್ಲಿ ಹಿತವಾಗಿ ಪ್ರೀತಿ ಅರಳಿಸಿದವರು ದ್ವಂದದಲಿ ನಾನಿರಲು ಕರವಹಿಡಿದೆನ್ನ ಸಿಹಿಕನಸು ಮನದಲ್ಲಿ ಮುಡಿಸಿದವರು ನಾ ಮುನಿಸುಗೊಂಡಾಗ ಮಲ್ಲಿಗೆಗೆ ಮುನಿಸೇಕೆ ಎಂದೆನುತಾ ಮುತ್ತಿಟ್ಟು ಒಳಗೊಳಗೆ ನಕ್ಕವರು ತವರೂರು ಹೊರಟಾಗ ಬಾಗಿಲಬಳಿ ನಿಂದು ಬೇಗ ಬಾ ಎಂದೆನುತಾ ಕಣ್ಣಂಚಲಿ ನೀರ ಹನಿಸಿದವರು ವಾರವೂ ಕಳೆಯುವ ಮುನ್ನ ಮತ್ತೆ ತವರಿಗೆ ಬಂದು ಬೇಗ ಬರುವೆಯಾ ಎನುತ ಬೇಸರದಿ ಎನ್ನ ಕರವ ಹಿಡಿದವರು ಮನದ ವೇದನೆಯ ಮೌನದಲೇ ಮುಟ್ಟಿಸಿ ಮನೆಯ ದಾರಿಯ ತೋರಿದವರು ನೀವಲ್ಲವೆ. -ರೇಷ್ಮಾ […]

ಪಂಜು ಕಾವ್ಯಧಾರೆ

ಸ್ವರ್ಗ ಸೃಷ್ಟಿಯಾಗುತಿರಲು ಸುಳಿಯುತಿರುವ ಗಾಳಿ ಗಂಧ ಬಳಿಯಲಿರುವ ಯಮುನೆ ಚಂದ್ರ ಸುಳಿಯದಿರುವ ಸಖನ ನೆನೆದು ನಳಿನೆ ಕಾಯುತಿದ್ದಳು ಅಂದುಗೆ ಧನಿ ‘ಘಲ್” ಎನಲು ಎದೆಯು ಮಿಡಿದು ‘ಝಲ್” ಎನಲು ಬಂದನೇನೆ………. ಮಾಧವನು ಎಂದು ರಾಧೆ ನೊಂದಳು ಸುತ್ತಮುತ್ತ ಭೃಂಗ ಪಾನ ಹೊತ್ತಿ ಎದೆಯ ರಸದ ಗಾನ ಮೆತ್ತನೊಮ್ಮೆ ಮುಖವನೆತ್ತಿ ಮುತ್ತನೊತ್ತ ಬಾರದೇ ಹಾರುತಿತುವ ಸೆರಗ ಬಿಟ್ಟು ಜಾರುತಿರುವ ನೆರಿಗೆ ಬಿಟ್ಟು ಹಾರಿ ಬರುವ ಮುರಳಿಯಡೆಗೆ ನೀರೆ ಓಡಿ ಬಂದಳು ಬಂದ ನಲ್ಲನೊಡನೆ ಕೂಡಿ ಒಂದು ಘಳಿಗೆ ಎಲ್ಲ […]

ಪಂಜು ಕಾವ್ಯಧಾರೆ

Me too ಮುಗಿದು ಹೋದ ಕಥೆಗೆ ಅನುಭವಿಸಿಯಾದ ವ್ಯಥೆಗೆ ಯಾಕೆ ಬೇಕಿತ್ತು ಈಗ Me too ಬಿಸಿ ಇರುವಾಗಲೇ ಮುಗಿಸಬೇಕಿತ್ತು ಕಂಪ್ಲೆಂಟ್ ಕೊಟ್ಟು ಆಗುತ್ತಿತ್ತಾಗಲೇ ಗುಟ್ಟು ರಟ್ಟು ಅಂದು ಅನುಭವಿಸುವಾಗ ಮಜ ಈಗ ಅದು ಸಜ ಇರಬಹುದು ಇದಕೆ ಕಾರಣ ದ್ವೇಷ ಜೊತೆಗೆ ಹಣದ ಆಮಿಷ ಯೋಚಿಸಲಿ ಪೂರ್ವಾಗ್ರಹ ಬದಿಗಿಟ್ಟು ಸತ್ಯಾಸತ್ಯತೆಗೆ ಬೆಲೆಕೊಟ್ಟು ಬಲಿಯಾಗದಿರಲಿ ಮರ್ಯಾದೆ ಸುಮ್ಮ ಸುಮ್ಮನೆ ತೆಗೆಯದಿರಲಿ ತಗಾದೆ ನಿಜಕೂ ಅನ್ಯಾಯವಾಗಿದ್ದರೆ ಅದು ಸರಿ ಬರಲಿ ಬೆಳಕಿಗೆ ರಕ್ಕಸರ ತೇವಲಿ ಅನ್ಯಾಯವಾದರೂ ಆಗಿಹರಾಗಲೇ ಬಲಿ […]

ಪಂಜು ಕಾವ್ಯಧಾರೆ

ಆರದಿರಲಿ‌ ಬೆಳಕು ಒಲೆ ಉರಿಸುವುದು ಕಲೆಯೇ… ಬಲು ತಾದ್ಯಾತ್ಮಕತೆಯ ಅಲೆ ಮೆಲ್ಲನೆ ಕಡ್ಡಿ ಗೀರಿ ಇನ್ನೂ ಮೆಲ್ಲನೆ ಬೆಂಕಿ ನೀಡಿ ಉಸಿರ ಸಾರ ಹೀರಿ ಚಿಕ್ಕದಾಗಿ ಪೇರಿಸಿಟ್ಟ – ಗರಿ ಗರಿ ಕಾಯಿ ಸಿಪ್ಪೆ ಚಿಕ್ಕ ಚಿಕ್ಕ ಸೌದೆ ಚೂರು ಇದಕ್ಕೆಲ್ಲ ಕಿಚ್ಚು ಹಿಡಿಸಬೇಕೆಂದರೆ ಬೆಂಕಿ ತಲ್ಲೀನತೆಯ ಬೇಡುತ್ತದೆ ತಾಳ್ಮೆ ಪರೀಕ್ಷಿಸುತ್ತದೆ! ಈ ಕಲೆಯ ಅಸ್ಮಿತೆ ಉಳಿಸಲಿಕೋಸ್ಕರ ಏನೇನೆಲ್ಲ ಮಾಡಬೇಕಿದೆ… ಕಣ್ತುಂಬ ನೀರು ತಂದು ಕೊಳವೆ ತುಂಬ ಗಾಳಿ ಊದಿ ಸುರುಳಿ ಸುರುಳಿ ಹೊಗೆಯ ಹೊದೆದು ಬೂದಿಯೊಳಗಿನ […]

ಪಂಜು ಕಾವ್ಯಧಾರೆ

ಗುರುದಕ್ಷಿಣೆ ಬಿಳುಪಿಗೂ ಬಿಲ್ಲಿಗೂ ಹೊಸ್ತಿಲಾದ ಹನಿಗೆ ಹುದುಗಿದ್ದ ಚೈತನ್ಯದ ಗುರು ಕಿರಣವೇನೇ? ಮಳೆಹನಿಯ ರಭಸಕ್ಕೆ ತಾಳಿಕೆಯ ತೋರಿಸಿದ ಮರದೆಲೆಯು ಹನಿಗೆ ಗುರು ತಾನೇ? ಹರಿವ ಆಸೆಗೆ ತಗ್ಗಿಗೆ ನುಗ್ಗಿದೊಡೆ ಸಾಗರದ ಹಾದಿಗೊಯ್ದ ಗುರುವು ಭುವಿ ತಾನೇ? ಕಣ್ಣಹನಿ ಮುತ್ತೆಂದು ಒಡನೆ ಚಾಚಿದ ಬೊಗಸೆ ಮೌಲ್ಯದ ಮತಿಹೇಳೋ ಗುರು ತಾನೇ? ರಕ್ತ ಮಾಂಸವಂತೆ ಬುದ್ಧಿ ಭಾವಗಳಂತೆ ಪಂಚಭೂತಗಳಂತೆ ಜೀವದಾ ರಚನೆಗೆ. ಜೀವಿಯ ಜೀವಂತಿಕೆಗೆ ಪಂಚವೆಲ್ಲಾ ಕೊಂಚ! ಕಣಕಣದೊಳೊಕ್ಕಿ ಕಲಿಕೆ ಹುಚ್ಚ ಹಚ್ಚೋ ಅಸಂಖ್ಯಾಣು ಅದ್ಭುತಗಳೇ ಶಿಲ್ಪಿ ಬದುಕೀಗೆ. ದಕ್ಷಿಣೆಯ […]

ಪಂಜು ಕಾವ್ಯಧಾರೆ

ಶ್ರಾವಣ…. ಎಲ್ಲೆಲ್ಲೂ ಹಸಿರು, ತಳಿರು ತೋರಣ, ನೀ ಬಂದೊಡನೆ ಬಂಜರು ಭೂಮಿಯಲ್ಲೂ ಹಬ್ಬದ ವಾತಾವರಣ … ಎಲ್ಲೆಲ್ಲೂ ಸಂತೋಷ, ನಗು, ಸಂಭ್ರಮ, ಸ್ವರ್ಗ ವಾಗುವುದು ಧರೆ ಲೆಕ್ಕಿಸದೆ ಪಟ್ಟಣ ಗ್ರಾಮ … ಆದರಲ್ಲಿ ಸಂಭವಿಸಿದ್ದು ಕಾಲನ ತಾಂಡವ, ಹರಿಯಿತು ಜಲ ಧಾರೆ ಲೆಕ್ಕಿಸದೇ ನಿನ್ನಯ ಬರುವಿಕೆಯ… ಆಕ್ರಂಧನ ಮಾತ್ರ ಕೇಳುತಿತ್ತು, ಅಲ್ಲಿ ದೇವರ ಸ್ವಂತ ನಾಡು ಮುಳುಗುತಿತ್ತು…. ನಿಸ್ಸಹಾಯಕರಾದರು ಮನುಜರು, ದಡ ಸೇರದಾದರು ಈಜಿದರೂ…. ನಿನ್ನ ಆಗಮನಕ್ಕೆ ಕಾದಿದ್ದ ಹೂರಾಶಿಗಳೆಲ್ಲ, ನೆಲದ ಮೇಲಿನ ರಂಗೋಲಿಯಾಗದೆಯೇ ಅಸುನೀಗಿದವು… ಎಲ್ಲವನ್ನು […]