Facebook

Archive for the ‘ಕಾವ್ಯಧಾರೆ’ Category

ಪಂಜು ಕಾವ್ಯಧಾರೆ

ನೀವಲ್ಲವೆ… ಬದುಕಲ್ಲಿ ಸಖನಾಗಿ ಒಲವಲ್ಲಿ ಜೊತೆಯಾಗಿ ಮನದಲ್ಲಿ ಹಿತವಾಗಿ ಪ್ರೀತಿ ಅರಳಿಸಿದವರು ದ್ವಂದದಲಿ ನಾನಿರಲು ಕರವಹಿಡಿದೆನ್ನ ಸಿಹಿಕನಸು ಮನದಲ್ಲಿ ಮುಡಿಸಿದವರು ನಾ ಮುನಿಸುಗೊಂಡಾಗ ಮಲ್ಲಿಗೆಗೆ ಮುನಿಸೇಕೆ ಎಂದೆನುತಾ ಮುತ್ತಿಟ್ಟು ಒಳಗೊಳಗೆ ನಕ್ಕವರು ತವರೂರು ಹೊರಟಾಗ ಬಾಗಿಲಬಳಿ ನಿಂದು ಬೇಗ ಬಾ ಎಂದೆನುತಾ ಕಣ್ಣಂಚಲಿ ನೀರ ಹನಿಸಿದವರು ವಾರವೂ ಕಳೆಯುವ ಮುನ್ನ ಮತ್ತೆ ತವರಿಗೆ ಬಂದು ಬೇಗ ಬರುವೆಯಾ ಎನುತ ಬೇಸರದಿ ಎನ್ನ ಕರವ ಹಿಡಿದವರು ಮನದ ವೇದನೆಯ ಮೌನದಲೇ ಮುಟ್ಟಿಸಿ ಮನೆಯ ದಾರಿಯ ತೋರಿದವರು ನೀವಲ್ಲವೆ. -ರೇಷ್ಮಾ […]

ಪಂಜು ಕಾವ್ಯಧಾರೆ

ಸ್ವರ್ಗ ಸೃಷ್ಟಿಯಾಗುತಿರಲು ಸುಳಿಯುತಿರುವ ಗಾಳಿ ಗಂಧ ಬಳಿಯಲಿರುವ ಯಮುನೆ ಚಂದ್ರ ಸುಳಿಯದಿರುವ ಸಖನ ನೆನೆದು ನಳಿನೆ ಕಾಯುತಿದ್ದಳು ಅಂದುಗೆ ಧನಿ ‘ಘಲ್” ಎನಲು ಎದೆಯು ಮಿಡಿದು ‘ಝಲ್” ಎನಲು ಬಂದನೇನೆ………. ಮಾಧವನು ಎಂದು ರಾಧೆ ನೊಂದಳು ಸುತ್ತಮುತ್ತ ಭೃಂಗ ಪಾನ ಹೊತ್ತಿ ಎದೆಯ ರಸದ ಗಾನ ಮೆತ್ತನೊಮ್ಮೆ ಮುಖವನೆತ್ತಿ ಮುತ್ತನೊತ್ತ ಬಾರದೇ ಹಾರುತಿತುವ ಸೆರಗ ಬಿಟ್ಟು ಜಾರುತಿರುವ ನೆರಿಗೆ ಬಿಟ್ಟು ಹಾರಿ ಬರುವ ಮುರಳಿಯಡೆಗೆ ನೀರೆ ಓಡಿ ಬಂದಳು ಬಂದ ನಲ್ಲನೊಡನೆ ಕೂಡಿ ಒಂದು ಘಳಿಗೆ ಎಲ್ಲ […]

ಪಂಜು ಕಾವ್ಯಧಾರೆ

Me too ಮುಗಿದು ಹೋದ ಕಥೆಗೆ ಅನುಭವಿಸಿಯಾದ ವ್ಯಥೆಗೆ ಯಾಕೆ ಬೇಕಿತ್ತು ಈಗ Me too ಬಿಸಿ ಇರುವಾಗಲೇ ಮುಗಿಸಬೇಕಿತ್ತು ಕಂಪ್ಲೆಂಟ್ ಕೊಟ್ಟು ಆಗುತ್ತಿತ್ತಾಗಲೇ ಗುಟ್ಟು ರಟ್ಟು ಅಂದು ಅನುಭವಿಸುವಾಗ ಮಜ ಈಗ ಅದು ಸಜ ಇರಬಹುದು ಇದಕೆ ಕಾರಣ ದ್ವೇಷ ಜೊತೆಗೆ ಹಣದ ಆಮಿಷ ಯೋಚಿಸಲಿ ಪೂರ್ವಾಗ್ರಹ ಬದಿಗಿಟ್ಟು ಸತ್ಯಾಸತ್ಯತೆಗೆ ಬೆಲೆಕೊಟ್ಟು ಬಲಿಯಾಗದಿರಲಿ ಮರ್ಯಾದೆ ಸುಮ್ಮ ಸುಮ್ಮನೆ ತೆಗೆಯದಿರಲಿ ತಗಾದೆ ನಿಜಕೂ ಅನ್ಯಾಯವಾಗಿದ್ದರೆ ಅದು ಸರಿ ಬರಲಿ ಬೆಳಕಿಗೆ ರಕ್ಕಸರ ತೇವಲಿ ಅನ್ಯಾಯವಾದರೂ ಆಗಿಹರಾಗಲೇ ಬಲಿ […]

ಪಂಜು ಕಾವ್ಯಧಾರೆ

ಆರದಿರಲಿ‌ ಬೆಳಕು ಒಲೆ ಉರಿಸುವುದು ಕಲೆಯೇ… ಬಲು ತಾದ್ಯಾತ್ಮಕತೆಯ ಅಲೆ ಮೆಲ್ಲನೆ ಕಡ್ಡಿ ಗೀರಿ ಇನ್ನೂ ಮೆಲ್ಲನೆ ಬೆಂಕಿ ನೀಡಿ ಉಸಿರ ಸಾರ ಹೀರಿ ಚಿಕ್ಕದಾಗಿ ಪೇರಿಸಿಟ್ಟ – ಗರಿ ಗರಿ ಕಾಯಿ ಸಿಪ್ಪೆ ಚಿಕ್ಕ ಚಿಕ್ಕ ಸೌದೆ ಚೂರು ಇದಕ್ಕೆಲ್ಲ ಕಿಚ್ಚು ಹಿಡಿಸಬೇಕೆಂದರೆ ಬೆಂಕಿ ತಲ್ಲೀನತೆಯ ಬೇಡುತ್ತದೆ ತಾಳ್ಮೆ ಪರೀಕ್ಷಿಸುತ್ತದೆ! ಈ ಕಲೆಯ ಅಸ್ಮಿತೆ ಉಳಿಸಲಿಕೋಸ್ಕರ ಏನೇನೆಲ್ಲ ಮಾಡಬೇಕಿದೆ… ಕಣ್ತುಂಬ ನೀರು ತಂದು ಕೊಳವೆ ತುಂಬ ಗಾಳಿ ಊದಿ ಸುರುಳಿ ಸುರುಳಿ ಹೊಗೆಯ ಹೊದೆದು ಬೂದಿಯೊಳಗಿನ […]

ಪಂಜು ಕಾವ್ಯಧಾರೆ

ಗುರುದಕ್ಷಿಣೆ ಬಿಳುಪಿಗೂ ಬಿಲ್ಲಿಗೂ ಹೊಸ್ತಿಲಾದ ಹನಿಗೆ ಹುದುಗಿದ್ದ ಚೈತನ್ಯದ ಗುರು ಕಿರಣವೇನೇ? ಮಳೆಹನಿಯ ರಭಸಕ್ಕೆ ತಾಳಿಕೆಯ ತೋರಿಸಿದ ಮರದೆಲೆಯು ಹನಿಗೆ ಗುರು ತಾನೇ? ಹರಿವ ಆಸೆಗೆ ತಗ್ಗಿಗೆ ನುಗ್ಗಿದೊಡೆ ಸಾಗರದ ಹಾದಿಗೊಯ್ದ ಗುರುವು ಭುವಿ ತಾನೇ? ಕಣ್ಣಹನಿ ಮುತ್ತೆಂದು ಒಡನೆ ಚಾಚಿದ ಬೊಗಸೆ ಮೌಲ್ಯದ ಮತಿಹೇಳೋ ಗುರು ತಾನೇ? ರಕ್ತ ಮಾಂಸವಂತೆ ಬುದ್ಧಿ ಭಾವಗಳಂತೆ ಪಂಚಭೂತಗಳಂತೆ ಜೀವದಾ ರಚನೆಗೆ. ಜೀವಿಯ ಜೀವಂತಿಕೆಗೆ ಪಂಚವೆಲ್ಲಾ ಕೊಂಚ! ಕಣಕಣದೊಳೊಕ್ಕಿ ಕಲಿಕೆ ಹುಚ್ಚ ಹಚ್ಚೋ ಅಸಂಖ್ಯಾಣು ಅದ್ಭುತಗಳೇ ಶಿಲ್ಪಿ ಬದುಕೀಗೆ. ದಕ್ಷಿಣೆಯ […]

ಪಂಜು ಕಾವ್ಯಧಾರೆ

ಶ್ರಾವಣ…. ಎಲ್ಲೆಲ್ಲೂ ಹಸಿರು, ತಳಿರು ತೋರಣ, ನೀ ಬಂದೊಡನೆ ಬಂಜರು ಭೂಮಿಯಲ್ಲೂ ಹಬ್ಬದ ವಾತಾವರಣ … ಎಲ್ಲೆಲ್ಲೂ ಸಂತೋಷ, ನಗು, ಸಂಭ್ರಮ, ಸ್ವರ್ಗ ವಾಗುವುದು ಧರೆ ಲೆಕ್ಕಿಸದೆ ಪಟ್ಟಣ ಗ್ರಾಮ … ಆದರಲ್ಲಿ ಸಂಭವಿಸಿದ್ದು ಕಾಲನ ತಾಂಡವ, ಹರಿಯಿತು ಜಲ ಧಾರೆ ಲೆಕ್ಕಿಸದೇ ನಿನ್ನಯ ಬರುವಿಕೆಯ… ಆಕ್ರಂಧನ ಮಾತ್ರ ಕೇಳುತಿತ್ತು, ಅಲ್ಲಿ ದೇವರ ಸ್ವಂತ ನಾಡು ಮುಳುಗುತಿತ್ತು…. ನಿಸ್ಸಹಾಯಕರಾದರು ಮನುಜರು, ದಡ ಸೇರದಾದರು ಈಜಿದರೂ…. ನಿನ್ನ ಆಗಮನಕ್ಕೆ ಕಾದಿದ್ದ ಹೂರಾಶಿಗಳೆಲ್ಲ, ನೆಲದ ಮೇಲಿನ ರಂಗೋಲಿಯಾಗದೆಯೇ ಅಸುನೀಗಿದವು… ಎಲ್ಲವನ್ನು […]

ಪಂಜು ಕಾವ್ಯಧಾರೆ

ತುಣುಕು ಧೂಪ . . . : ಮನದ ಬಾಗಿಲ ನಡುವೆ ಯಾವ ರೂಪವದು/ ಅಂತರಾಳದಿ ಇರಲಿ ಒಲವ ದೀಪವದು// ಬರಿದೆ ಬೇಸರವೇಕೆ ಇರುಳ ಉರುಳಿನಲಿ/ ಹಗುರವಾಗಲಿ ಎದೆಯು ಆರಿ ತಾಪವದು// ಒಳ ಬಿಕ್ಕ ಹಾವಳಿಗೆ ಒಡಲುರಿಯು ಬೇರೆ/ ಎಲ್ಲಿ ಕರಗಿತು ಹೇಳು ಸುಖದ ಲೇಪವದು// ಸಪ್ಪೆ ಸೂರ್ಯನ ಆಟ ಕತ್ತಲೆಯ ಕಾಟ/ ಯಾಕೆ ಸರಿಯದು ಮುಗಿಲು ಕವಿದ ಶಾಪವದು// ನೂರು ದೇವರ ಪೂಜೆ ಸಲ್ಲಿಸಿದ ಫಲವೇ/ ಕುದಿಯುವುದು ಕಡೆಯಿರದೆ ಮಡಿಲ ಕೋಪವದು// ಚೂರು ಘಮಿಸದೆ ಹೇಳು […]

ಪಂಜು ಕಾವ್ಯಧಾರೆ

ಕನಸು ಕನ್ನಡಿಯೊಳಗೆ… ನಮ್ಮ ಖಾಸಗೀ ಕನಸಿನ ಲೋಕದೊಳಗೆ ಪ್ರವೇಶ ಮಾಡುವರು ನಮ್ಮ ಖಾಸಾ ಮಂದಿ ಅಚ್ಚು ಮೆಚ್ಚಿನವರು ಪ್ರೀತಿಪಾತ್ರರು ಸಂಬಂಧಿಕರು ಸ್ನೇಹಿತರು ಮುಂತಾದವರು ಒಮೊಮ್ಮೇ ನಾವು ಕಂಡು ಹೃನ್ಮನ ತುಂಬಿಕೊಂಡ ಸಿನೇಮಾದವರು ಸಿಲೇಬ್ರಟಿಗಳು ಆದರ್ಶ ವ್ಯಕ್ತಿಗಳು ಸಮಾಜಕ್ಕೆ ಮಾದರಿ, ಮಾರಿಯಾದವರು ಹಾಗೇ ಒಮ್ಮೊಮ್ಮೇ ನಮ್ಮ ಸ್ವಪ್ನ ಲೋಕಕ್ಕೆ ಲಗ್ಗೆ ಇಟ್ಟು ಬೆಚ್ಚಿ ಬೀಳಿಸುವರು ಭಯಾನಕ ಚಹರೆಗಳು ವಿಕೃತ ಮನಸ್ಸುಗಳು ದುಷ್ಟರು, ಭ್ರಷ್ಟರು ಸಮಾಜ ಘಾತುಕರು ಖೂಳರು, ಪಿಶಾಚಿಗಳು ಧುತ್ತೆಂದು ಪ್ರಕಟವಾಗುವರು ಎಲ್ಲೋ ಮಾತಾಡಿ ಮರೆತು ಬಿಟ್ಟವರು ಹಗಲ್ಹೋತ್ತು […]

ಪಂಜು ಕಾವ್ಯಧಾರೆ

ಸಹಜ-ಸುಧೆ ಸಾಗರದಾಚೆಗೆ ಏನೆಂದು ತೀರಕೇ ಅರಿವಿಲ್ಲ ಅಂಚಿನಾ ಚಿಂತೆಯ ಮಂಥನ ಬೇಕೇ? ಸಾಗರದಲೆಯಿರಲು ಒಂದೊಂದೂ ಅನನ್ಯ ಸೆರೆಯಾಗಲಿ ಕಣ್ಮನ ಅದಕೇ! ಅತಿ ಹೆಚ್ಚು! ಅತಿ ದೊಡ್ಡ! ಅತಿ ಜಾಣ! ಅತಿ ಭಾರ! ಅತಿ ಅವನತಿ ಅತೀತಗಳ ಗತಿಗಿದೆ ಕರ್ಮ ಅವಲೋಕನಗಳ ಕೊನೆ ನಿಲ್ದಾಣವಿಗೋ ಮರ್ಮ| ಜೀವ-ಜೀವವೂ ಆಗಿರೆ ಜೀವಾಳದನ್ವಯ ವ್ಯಾಖ್ಯಾನ ಚಿತ್ರಿಸುತಿದೆ ಅನುಭವದ ಅವ್ಯಯ|| ಸಾಧ್ಯತೆಯ ಸಲೀಸಿಗೆ ಸೋತರದು ಅಫಲ ಸಾಧಕದ ಸ್ಥಾಯಿಯ ಮೆಟ್ಟರೊಲೀತು ಸಫಲ| ಸಾಧು ತಾನೆಂದು ಹೊಳೆಯುತಿರೆ ಸಾರ್ಥಕತೆ ಸದ್ದು-ಸುದ್ದಿಯ ಹಂಗೇ ಸಾಧನೆಯನಳೆವ ಸಾಧನಕೆ? […]

ಪಂಜು ಕಾವ್ಯಧಾರೆ

ಗಝಲ್… ಹುಡುಕುತ್ತಾ ಹೊರಟ ನನಗೆ ಕಳೆದುಕೊಂಡಷ್ಟು ಸಿಕ್ಕಿತು ಸಖಾ.. ಬಯಸುತ್ತಾ ಹೊರಟ ನನಗೆ ಬಯಸಲಾರದಷ್ಟು ದಕ್ಕಿತು ಸಖಾ… ನಿನ್ನ ಗುಟ್ಟುಗಳೆಲ್ಲಾ ನನ್ನ ಪಿಸುದ್ವನಿಯಲಿ ರಟ್ಟಾದವು… ಮೆರೆದು ತುಳುಕಿದ ಒಂದೆರಡು ಹನಿ ಜೀವದ ಕೊನೆ ಹೊಕ್ಕಿತು ಸಖಾ… ನಿನ್ನ ಬಾಹುವಿನ ಮುದ ಬಂಧಿಸಿದೆ ಬಿಡದೆ ನನ್ನ ತಾರುಣ್ಯ… ತಾಜಮಹಲಿನ ಗೋರಿ ಇದ ಬಯಸಿ ಬಿಕ್ಕಿತು ಸಖಾ… ಯಮುನೆಯಲ್ಲಾ ಬಸಿದು ತಂದೆ ಬೊಗಸೆಯಲಿ ನನ್ನ ಕಣ್ಣ ಭಾವಕ್ಕೆ… ನನ್ನೆದೆಯ ಗಂಧ ನಿನ್ನ ಹುಮ್ಮಸ್ಸಿನ ಹೂಂ ಗುಟ್ಟುವಿಕೆಗೆ ಸೊಕ್ಕಿತು ಸಖಾ… ಬಡಿದ […]