ಸಾವಿತ್ರಿ: ಸುರೇಶ್ ಮಲ್ಲಿಗೆ ಮನೆ

ಆವತ್ತು ಸೋಮಾರ ರಾತ್ರಿ ನಾನು ಒಬ್ಬಾಕೆ ಕತ್ತಲಾಗ ಹುಲಿಕಲ್ಲು ಕಾಡಾಗ ಒಣಗಿದ ಮರನಾ ಕಡೀತಿದ್ನ, ಆ ಬೆವರ್ಸಿ ಹುಲಿ ಗಿಡದ ಮಟ್ಟಿಂದ ಬಂದು ನನ್ನ ನೋಡಿ… ಘರ್… ಅಂತ ಘರ್ಜಿಸ್ತು…!!.. ಹಂಗೆ ಕತ್ತೀನ ಕೈಯಿಂದ ಹಿಡಿದು ಮೇಲಕ್ಕೆತ್ತಿ, ದೊಡ್ಡ ಕಣ್ಣುಬಿಡುತ್ತಾ, ಅಡ್ಡಿಡಿಡಿ……. ಅಡ್ಡಿಡಿಡಿ…… ಅಡ್ಡಿಡಿಡಿ…. ಅಂದೇ ನೋಡು……!!!ಅಹ್..ಹ್….ಹ್…ಹ್..ಹ್…ಹ…. ಇಲಿ ಮರಿತರ ಹೆದರಿ ಹಂದಿ ತರ ಬಿದ್ದು, ಕಾಡೊಳಗೆ ಓಡೋಯಿತು ನೋಡು…….ಅಹ್..ಹ್…ಹ್….ಹ್….ಹ್…ಹ….. ಅಂತ ನಗ್ತಾ,…… ಹುಲಿ ಮುಂದೆ ತಾನು ಒಬ್ಬಂಟಿಯಾಗಿ ತೋರಿದ ಪೌರುಷಾನ ಮುಂಜಾನೆ ತನ್ನ ಅಂಗೈ ಅಗಲದ … Read more

ಸುಶೀಲೆ: ವರದೇಂದ್ರ ಕೆ.

ಜಮೀನ್ದಾರರ ಒಬ್ಬನೇ ಮಗ, ಕಣ್ಣಲ್ಲಿ ಸನ್ನೆ ಮಾಡಿದರೆ ಸಾಕು ತಟಕ್ಕನೆ ಕೆಲಸವಾಗಿಬಿಡುತ್ತದೆ. ಮಾತು ಆಡಿದರಂತೂ ಊರಿನ ಯಾವ ಧನಿಕನೂ ಎದುರಾಡುವಂತಿಲ್ಲ. ಅಷ್ಟೇ ಸಹಜ ನಡೆಯುಳ್ಳ ಪ್ರಾಮಾಣಿಕ ಜೀವ. ಗಾಂಭೀರ್ಯತೆಯೊಂದಿಗೆ ಕನಿಕರವೂ ತುಂಬಿಕೊಂಡ ಮುಖ. ಚಿರ ಯುವಕ, ಓದಿನಲ್ಲೂ ಚತುರನಾಗಿ ವೈದ್ಯಲೋಕಕ್ಕೆ ಕಾಲಿಟ್ಟ ಉತ್ತಮ ಕೈಗುಣವಿದೆ ಎಂಬ ಪ್ರಶಂಸೆಗೆ ಪಾತ್ರನಾದ ಸ್ಫುರದ್ರೂಪಿ ತರುಣಸುರೇಶ್ ಗೌಡನಿಗೆ ತಮ್ಮ ಮಗಳನ್ನೇ ಧಾರೆಯೆರೆಯಲು ದುಂಬಾಲುಬಿದ್ದ ಅದೆಷ್ಟೋ ಸಂಬಂಧಿಕರು ಹಿರಿಗೌಡರನ್ನು ಕೇಳಿ ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂದು ಸೋತಮುಖದೊಂದಿಗೆ ಮರಳಿದ್ದಾರೆ. ಹಿರಿ ಧರ್ಮಗೌಡರು ತನ್ನ … Read more

ದೀಪಗೃಹದಲ್ಲಿ ಒಂದು ರಾತ್ರಿ…..: ಜೆ.ವಿ.ಕಾರ್ಲೊ.

ಇಂಗ್ಲಿಷ್ ಮೂಲ: ಜೆ.ಎಸ್.ಫ್ಲೆಚರ್ಅನುವಾದ: ಜೆ.ವಿ.ಕಾರ್ಲೊ. ‘ಶಿವರಿಂಗ್ ಸ್ಯಾಂಡ್’ ದೀಪಗೃಹಕ್ಕೆ ಮತ್ತೊಬ್ಬ ಕಾವಲುಗಾರನಾಗಿ ಮೊರ್ಡೆಕಾಯ್ ಚಿಡ್ಡೋಕ್ ಬಂದು ಇಳಿದಾಗ , ಜೆಝ್ರೀಲ್ ಕಾರ್ನಿಶ್ ತನ್ನ ಪಾಲಿನ ಪಾಳಿಯನ್ನು ಮುಗಿಸಿ ಆಗ ತಾನೇ ನಿದ್ದೆ ಹೋಗಿದ್ದ. ಕಾರ್ನಿಶ್ ನಿದ್ದೆಯಿಂದ ಏಳುವಾಗ ತಾನು ಎದುರುಗೊಳ್ಳಲಿರುವ ಮನುಷ್ಯ ಯಾರು, ಎಂತವನು ಎಂದು ಅವನಿಗೆ ಆ ಗಳಿಗೆಯಲ್ಲಿ ಗೊತ್ತಾಗಿರುವ ಸಂಭವವಿರಲಿಲ್ಲ. ಗೊತ್ತಿದ್ದರೆ ಅವನು ಆಗಷ್ಟೇ ತಿಂಗಳ ರೇಶನ್ ಮತ್ತು ಚಿಡ್ಡೋಕನನ್ನು ಇಳಿಸಿ ಹಿಂದುರಿಗಿದ ದೋಣಿಯನ್ನು ಹತ್ತುವುದರಲ್ಲಿ ಯಾವುದೇ ಸಂಶಯವಿರಲಿಲ್ಲ! ಚಿಡ್ಡೋಕ್ ಬರುವ ಮುನ್ನ ನಾವಿಬ್ಬರೇ … Read more

ಒಂದು ನಾಯಿಮರಿಗಾಗಿ….: ಜೆ.ವಿ.ಕಾರ್ಲೊ

ಅಂದು ಸಂಜೆ ಲಂಡನಿನಲ್ಲಿ ಮೈ ಕೊರೆಯುವಂತ ಚಳಿ. ಬಸ್ಸಿನೊಳಗೆ ಹಲ್ಲು ಕಚ್ಚಿಕೊಂಡು ಮುದುಡಿ ಕುಳಿತಿದ್ದ ಪ್ರಯಾಣಿಕರಿಗೆ ಯಾರೋ ಎಡೆಬಿಡದೆ ಚೂರಿಯಿಂದ ಕೊಚ್ಚುತ್ತಿರುವಂತ ಅನುಭವವಾಗುತ್ತಿತ್ತು. ಸದ್ದು ಮಾಡುತ್ತಾ ರೊಂಯ್ಯನೆ ಬಸ್ಸಿನೊಳಗೆ ನುಗ್ಗುತ್ತಿದ್ದ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಜನ ಹರಸಾಹಸ ಪಡುತ್ತಿದ್ದರು. ಬಸ್ಸು ಮುಂದಿನ ಸ್ಟಾಪಿನಲ್ಲಿ ನಿಂತಾಗ ಇಬ್ಬರು ಮಹಿಳೆಯರು, ಮತ್ತೊಬ್ಬ ಪುರುಷ ಬಸ್ಸು ಹತ್ತಿ ಖಾಲಿ ಇದ್ದ ಸೀಟುಗಳಲ್ಲಿ ಆಸೀನರಾದರು, ಮಹಿಳೆಯರಲ್ಲಿ ಒಬ್ಬಾಕೆಗೆ ಅಷ್ಟೇನೂ ವಯಸ್ಸಾಗಿರಲಿಲ್ಲ. ಆಕೆ ಸೀಲ್ ಚರ್ಮದ ಕೋಟು ಧರಿಸಿದ್ದಳು. ಅಂದಿನ ಮೇಲ್ಮಧ್ಯಮ ವರ್ಗದ ಸ್ತ್ರೀಯರ … Read more

ಕತ್ತಲ ಗುಮ್ಮ: ಶೀಲಾ ಗೌಡ

ಕಾಲೇಜ್, ಟುಟೋರಿಯಲ್ಸ್, ಟೆಸ್ಟ್, ಪರೀಕ್ಷೆ ಬರೀ ಇದೇ ಆಗಿದೆ ನಮ್ಮ ದೈನಂದಿನ ಕೆಲಸ. ಬೇಜಾರು ಮಾಡಿಕೊಳ್ಳೋ ಹಾಗಿಲ್ಲ, ಅಕಾಸ್ಮಾತ್ತಾದರೂ ಹೇಳುವ ಹಾಗಿಲ್ಲ. ಅಪ್ಪಿ ತಪ್ಪಿ ಹೇಳಿದರೆ ಕೇಳಿದವರ ಪುಕಸಟ್ಟೆ ಭೋದನೆ ಜೊತೆಗೆ ನಗು ಮೊಗದಿಂದ ಆಲಿಸುವ ಶಿಕ್ಷೆ. ಒಟ್ಟಿನಲ್ಲಿ ಓದೋ, ಮಾರ್ಕ್ಸ್ ತೆಗೆಯೋ ರೇಸಿನಲ್ಲಿ ಓಡ್ತಿದಿವಿ. ಹೀಗೆ ತಮ್ಮ ಬೇಸರವನ್ನು ಹಂಚಿಕೊಳ್ಳುತ್ತ ಟುಟೋರಿಯಲ್ಸ ಕಡೆ ಹೆಜ್ಜೆ ಹಾಕುತಿದ್ದರು ಐವರು ಗೆಳೆಯರು. ಅರವಿಂದನ ಹಾಗೆ ನಾವೆಲ್ಲ ಡಿಪ್ಲೋಮ ಮಾಡಬೇಕಿತ್ತು ಹೀಗೆ ಒಂದೆ ಸರಿ ಟೆನ್ನಷನ್ ಇರ್ತಿರ್ಲಿಲ್ಲ ಎಂದ ಸುನಿಲನ … Read more

ಸಾಲ: ಅನಂತ ರಮೇಶ್

1 ಹದಿನೈದು ವರ್ಷಗಳಿಂದ ಅಭ್ಯಾಸವಾಗಿ ಹೋಗಿದೆ. ಲತಾಳ ಅದೇ ವ್ಯಂಗ್ಯದ ಮಾತು. “ಸಾಹೇಬರ ಸವಾರಿ ಈವತ್ತು ಯಾವ ಕಡೆಗೆ?”. ನಾನು ಉತ್ತರಿಸುವ ಗೊಡವೆಗೆ ಹೋಗುವುದಿಲ್ಲ. ತಿಂಡಿಯೊಟ್ಟಿಗೆ ಕಾಫಿ ಲೋಟ ಟೇಬಲ್‌ಮೇಲೆ ಬಡಿಯುತ್ತಾಳೆ. ಸಾವಕಾಶ ತಿಂದು ಹೊರಡುತ್ತೇನೆ. ಆ ಸಮಯ ಮೀರುವುದಿಲ್ಲ. ಈಗ ಬೆಳಗಿನ 9:30. ಸಾಮಾನ್ಯವಾಗಿ ಎಲ್ಲರೂ ಆಫೀಸಿಗೆ ಹೊರಡುವ ಸಮಯ! ಹೊರಗೆ ರಸ್ತೆಯಲ್ಲಿ ನಡೆಯುವಾಗ, ಲತಾಳ ಬಗೆಗೆ ಕನಿಕರ ಅನ್ನಿಸುತ್ತೆ. ಅವಳಾದರೂ ಏನು ಮಾಡಿಯಾಳು? ನನಗಂತೂ ತಿಂಗಳಿಗೊಮ್ಮೆ ಸಂಬಳ ತರುವ ಕೆಲಸವಿಲ್ಲ. ಯಾವುದಾದರೂ ಮನೆ ಬಾಡಿಗೆ, … Read more

ಇಳಾ: ಗಿರಿಜಾ ಜ್ಞಾನಸುಂದರ್‌

“ಪಿಂಕಿ, ಬಬ್ಲೂ ಬನ್ನಿ ಮನೆಗೆ… ತುಂಬ ಹೊತ್ತಾಗಿದೆ.. ಆಶಾ ಆಂಟಿ ಮನೆಗೆ ಬಂದ್ರೆ ನಿಮಗೆ ಏನು ಬೇಡ” ಅಂತ ತಮ್ಮ ಮಕ್ಕಳನ್ನು ಕರೆದುಕೊಂಡು ಹೋದಳು ಪಿಂಕು ಬಬ್ಲೂ ಅಮ್ಮ. ಆಗಲೇ ರಾತ್ರಿ ಎಂಟು ಗಂಟೆ ಆಗಿದೆ… ಇನ್ನೊಂದು ಹತ್ತು ನಿಮಿಷಕ್ಕೆ ಇನ್ನು ಆಶಾ ಆಂಟಿ ಮನೆಯಲ್ಲಿ ಉಳಿದುಕೊಂಡಿದ್ದ ೫- ೬ ಮಕ್ಕಳನ್ನೆಲ್ಲ ಅವರವರ ಮನೆಯವರು ಕರೆದುಕೊಂಡು ಹೋದರು. ಆಶಾ ಎಲ್ಲ ಮಕ್ಕಳು ಹೋದಮೇಲೆ ಸಪ್ಪೆ ಮುಖ ಹಾಕಿಕೊಂಡು ಕುಳಿತಿದ್ದಳು. ಮನೆಯೆಲ್ಲ ಚಾಕಲೇಟ್ ಪೇಪರ್ಸ್, ತಿಂಡಿ ತಿನಿಸುಗಳನ್ನು ಚೆಲ್ಲಿ … Read more

ಸೇತುವೆ….: ಸತೀಶ್ ಶೆಟ್ಟಿ ವಕ್ವಾಡಿ.

ಅದು ಶರದೃತುವಿನ ಬೆಳಗಿನ ಜಾವ. ಮುಂಗಾರಿನ ಮೋಡಗಳು ತೆರೆಮರೆಗೆ ಸರಿದು ಆಕಾಶ ಶುಭ್ರವಾಗಿತ್ತು. ಹುಣ್ಣಿಮೆಯ ದಿನವಾಗಿದ್ದರಿಂದ ಚಂದಿರ ಬೆಳ್ಳಿಯ ಬಟ್ಟಲಂತೆ ಸುಂದರವಾಗಿ ಕಾಣಿಸುತ್ತಿದ್ದ. ಮೋಡಗಳ ಸವಾಲುಗಳಿಲ್ಲದ ಕಾರಣ ತಾರೆಗಳು ಇಡೀ ಆಗಸವನ್ನು ಆಕ್ರಮಿಸಿ ತಮ್ಮ ಆಧಿಪತ್ಯ ಸ್ಥಾಪಿಸಿ, ಭಾನ ತುಂಬೆಲ್ಲಾ ಬೆಳಕಿನ ಸರಪಳಿ ನಿರ್ಮಿಸಿದ್ದವು. ಹುಣ್ಣಿಮೆಯ ಚಂದಿರ, ರಾತ್ರಿಯ ಕತ್ತಲೆಯನ್ನೆಲ್ಲ ತನ್ನ ಒಡಲೊಳಗೆ ತುಂಬಿಕೊಂಡು ಬೆಳದಿಂಗಳ ಮಳೆಯನ್ನೇ ಸುರಿಸುತ್ತಿದ್ದ. ಪಶ್ಚಿಮದಿಂದ ಬೀಸುತ್ತಿದ್ದ ತಂಗಾಳಿ, ನುಸುಕಿನ ಮಂಜಿನ ಹನಿಗಳ ಸಾಂಗತ್ಯದಿಂದ ಚಳಿಯು ಅನ್ನಿಸಿದ ತಣ್ಣನೆಯ ವಾತಾವರಣ ಸೃಷ್ಟಿಸಿತ್ತು. ಮರಗಿಡಗಳ … Read more

ಪ್ರೇಮನಾದ: ಸುಮ ಉಮೇಶ್

ರಾಧಮ್ಮನವರ ನಂತರ ಬಹಳ ವರ್ಷಗಳ ಮೇಲೆ ಹುಟ್ಟಿದವನೇ ಅವರ ತಮ್ಮ ಸುಧಾಕರ್. ರಾಧಮ್ಮನಿಗೂ ಸುಧಾಕರ್ ಗೂ ಅಂತರ ಹೆಚ್ಚಾಗಿದ್ದರಿಂದ ಅವನನ್ನು ಕಂಡರೆ ಎಲ್ಲರಿಗೂ ಅತೀವ ಪ್ರೀತಿ. ಅಕ್ಕನ ಮುದ್ದಿನ ತಮ್ಮ ಅವನು. ರಾಧಮ್ಮನವರ ಮದುವೆ ಆದಾಗ ಸುಧಾಕರ್ಗೆ ಕೇವಲ ಎಂಟು ವರ್ಷ. ಮದುವೆ ಆದ ವರ್ಷದೊಳಗೆ ರಾಧಮ್ಮ ಹೆಣ್ಣು ಮಗುವಿನ ತಾಯಿ ಆದಾಗ ಎಲ್ಲರಿಗೂ ಸಂತಸ. ರಾಧಳ ತಂದೆ ತಾಯಿಗೆ ದೂರದ ಒಂದು ಆಸೆ ಮೊಳೆಯಲಾರಂಭಿಸುತ್ತದೆ. ಪುಟ್ಟ ಸುರಭಿಯೇ ಮುಂದೆ ಸುಧಾಕರ್ನ ಕೈ ಹಿಡಿದು ಮೊಮ್ಮಗಳು ಮನೆ … Read more

ಸಾರ್ಥಕ್ಯ: ಡಾ. ಅಜಿತ್ ಹರೀಶಿ

ಎಂದಿನಂತೆ ಊರ ಈಶ್ವರ ದೇವರ ಪೂಜೆ ಮುಗಿಸಿ ಜನಾರ್ದನ ಭಟ್ಟರು ದೇವಸ್ಥಾನದ ಮೆಟ್ಟಿಲಿಳಿಯುತ್ತಿದ್ದರು. ಅಲ್ಲಿಂದ ಕೂಗಳತೆಯ ದೂರದಲ್ಲೇ ಅವರ ಮನೆ. ಪೂಜೆ ಮುಗಿಸಿ ಏಳುವಾಗಲೇ ತಲೆಯಲ್ಲಿ ಏನೋ ಒಂಥರಾ ಭಾರವಾದ ಹಾಗೆ ಅವರಿಗೆ ಅನ್ನಿಸಿತ್ತು. ನಾಲ್ಕು ಹೆಜ್ಜೆ ಹಾಕಿದಾಗ ದೇಹ ತೂಗಿದಂತೆ ಭಾಸವಾಗಿತ್ತು. ಆದರೂ ಅಲ್ಲಿ ಕುಳಿತುಕೊಳ್ಳದೇ ಬೇಗ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಂಡರಾಯಿತು ಎಂದುಕೊಂಡು ಕೊನೆಯ ಮೆಟ್ಟಿಲು ಇಳಿಯುತ್ತಿದ್ದರು. ಇಡೀ ದೇಹವು ಬಾಳೆದಿಂಡನ್ನು ಕತ್ತಿಯಿಂದ ಕಡಿದಾಗ ಬೀಳುವಂತೆ ಕುಸಿದು ಬಿತ್ತು. ಕೆಲ ಕ್ಷಣಗಳ ಮಟ್ಟಿಗೆ ಅವರಿಗೆ … Read more

ಹಣ್ಣೆಲೆಯ ಹಾಡು: ಗಿರಿಜಾ ಜ್ಞಾನಸುಂದರ್

ಎಳೆ ಬಿಸಿಲು ಅಂದವಾದ ಬೆಳಕು ಬೀರುತ್ತಾ ಎಲ್ಲೆಡೆ ಹರಡುತ್ತಿದೆ. ಅಂಗಳದಲ್ಲಿ ಆರಾಮ ಖುರ್ಚಿಯಲ್ಲಿ ಬಿಸಿಲು ಕಾಯುತ್ತ ಮೈಯೊಡ್ಡಿರುವ ಕೃಷ ದೇಹದ ವೃದ್ಧ ಶ್ರೀನಿವಾಸ. ವಯಸ್ಸು ಸುಮಾರು ೮೯- ೯೦ ಆಗಿರಬಹುದು. ಸುಕ್ಕುಗಟ್ಟಿದ ಮುಖ, ಪೂರ್ತಿ ನರೆತ ಕೂದಲು. ಹಣೆಯಮೇಲೆ ಎದ್ದು ಕಾಣುವ ಗೆರೆಗಳು, ಬೊಚ್ಚು ಬಾಯಿ. ಇಷ್ಟೆಲ್ಲದರ ಮಧ್ಯೆ ಏನನ್ನೋ ಕಳೆದುಕೊಂಡು ಹುಡುಕುತ್ತಿರುವಂಥ ಕಣ್ಣುಗಳು. ತನ್ನ ಮಕ್ಕಳು ಮೊಮ್ಮಕ್ಕಳೊಂದಿಗೆ ಸುಖವಾದ ಜೀವನ ಕಾಣುತ್ತಿರುವ ಹಿರಿಯ ಜೀವ. ದಿನವೂ ವಿಶ್ರಮಿಸುತ್ತ, ತನ್ನ ಹಿಂದಿನ ದಿನಗಳನ್ನು ನೆನೆಯುತ್ತ ಮೆಲುಕು ಹಾಕುವ … Read more

ಕಣ್ಣಾ ಮುಚ್ಚಾಲೆ..: ಜೆ.ವಿ.ಕಾರ್ಲೊ

ಇಂಗ್ಲಿಶ್ ಮೂಲ: ಗ್ರಹಾಂ ಗ್ರೀನ್ಅನುವಾದ: ಜೆ.ವಿ.ಕಾರ್ಲೊ ಬೆಳಕು ಮೂಡುತ್ತಿದ್ದಂತೆ ಪೀಟರನಿಗೆ ತಕ್ಷಣ ಎಚ್ಚರವಾಯಿತು. ಕಿಟಕಿಯ ಗಾಜಿನ ಮೇಲೆ ಮಳೆ ರಪರಪನೆ ಬಡಿಯುತ್ತಿತ್ತು. ಅಂದು ಜನವರಿ ಐದುಅವನ ಕಣ್ಣುಗಳು ಪಕ್ಕದ ಮಂಚದ ಮೇಲೆ ಮುಸುಕು ಎಳೆದುಕೊಂಡು ಇನ್ನೂ ಮಲಗಿದ್ದ ಅವನ ತಮ್ಮ ಫ್ರಾನ್ಸಿಸನ ಮೇಲೆ ನೆಲೆಗೊಂಡವು. ಅವನಿಗೆ ತನ್ನ ಪ್ರತಿರೂಪವನ್ನೇ ನೋಡಿದಂತಾಯಿತು! ಅದೇ ಕೂದಲು, ಕಣ್ಣುಗಳು, ತುಟಿಗಳು, ಕೆನ್ನೆ.. ಅವನ ತುಟಿಗಳ ಮೇಲೆ ಮಂದಹಾಸ ಮೂಡಿತು.ಜನವರಿ ಐದು. ಮಿಸೆಸ್ ಫಾಲ್ಕನಳ ಮಕ್ಕಳ ಪಾರ್ಟಿ ನಡೆದು ಆಗಾಗಲೇ ಒಂದು ವರ್ಷವಾಯಿತೆಂದು … Read more

ಮೂಡಿದ ಬೆಳಕು…: ಭಾರ್ಗವಿ ಜೋಶಿ

ಎಲ್ಲ ಕಡೆ ಝಗಮಗಿಸುತ್ತಿದ್ದ ದೀಪಗಳ ಸಂಭ್ರಮ. ಸಾಲು ಸಾಲು ದೀಪಗಳು ಇಡೀ ಬೀದಿಯ ಸಂಭ್ರಮ ಸೂಚಿಸುತ್ತಿತ್ತು.. ಆ ಬೀದಿಯ ಕೊನೆಯ ಮನೆಯಲ್ಲಿ ಮಾತ್ರ ಮೌನ. ಬೆಳಕು ತುಸು ಕೊಂಚ ಕಡಿಮೆಯೇ ಇತ್ತು. ಬಡವ -ಬಲ್ಲಿದ ಯಾರಾದರೇನು ಜ್ಯೋತಿ ತಾನು ಬೆಳಗಲು ಬೇಧ ಮಾಡುವುದಿಲ್ಲ ಅನ್ನೋ ಮಾತು ನಿಜವೇ? ಎಣ್ಣೆಗೆ ಕಾಸು ಇಲ್ಲದ ಬಡವರ ಮನೆಯಲ್ಲಿ ಜ್ಯೋತಿ ಉರಿದಿತೇ? ಬೆಳಕು ಚಲ್ಲಿತೇ? ಹೀಗೆ ಕತ್ತಲು ಆವರಿಸಿದ ಆ ಮನೆ, ಮನೆಯೊಡತಿ ಜಾನಕಮ್ಮ, ಪತಿ ರಾಮಣ್ಣ ಅವರ ಒಬ್ಬನೇ ಮಗ … Read more

ಒಂಟೆ ಡುಬ್ಬ: ಡಾ. ಅಶೋಕ್. ಕೆ. ಆರ್

ಬೈಕೋಡಿಸುವಾಗ ರಶಿಕ ಕನ್ನಡ ಹಾಡುಗಳನ್ನು ಕೇಳುವುದಿಲ್ಲ.ಬ್ಲೂಟೂಥ್ ಹೆಲ್ಮೆಟ್ಟಿನಲ್ಲಿ ಸಣ್ಣಗಿನ ದನಿಯಲ್ಲಿ ಗುನುಗುತ್ತಿದ್ದುದು ಮಲಯಾಳಂ, ತಮಿಳು ಹಾಡುಗಳು.ಕನ್ನಡ ಹಾಡ್ ಹಾಕಂಡ್ರೆ ಪ್ರತಿ ಪದಾನೂ ಅರ್ಥವಾಗ್ತ ಆಗ್ತ ಹಾಡಿನ ಗುಂಗಲ್ಲಿ ಸುತ್ತಲಿನ ಪರಿಸರ ಮರ್ತೋಗ್ತದೆ, ಹಂಗಾಗಿ ಭಾಷೆ ಅರ್ಥವಾಗ್ದಿರೋ ಹಾಡುಗಳೇ ವಾಸಿ.ರಾತ್ರಿಯಿಂದ ಬೋರ್ಗರೆದಿದ್ದ ಮಳೆ ಬೆಳಿಗ್ಗೆ ವಿರಮಿಸಿತ್ತು.“ಈ ಕಡೆ ರೋಡಲ್ಲಿ ಒಂದ್ ಮೂವತ್ ಕಿಲೋಮೀಟ್ರು ಹೋದ್ರೆ ಕರ್ಮುಗಿಲು ಅನ್ನೋ ಊರು ಸಿಗ್ತದೆ. ಹೆಚ್ಚೇನಿಲ್ಲ ಅಲ್ಲಿ. ಒಳ್ಳೆ ಸನ್ ರೈಸ್ ಪಾಯಿಂಟಿದೆ ಅಲ್ಲಿ. ಮೋಡ ಇದ್ರೆ ನಿರಾಸೆಯಾಗ್ತದೆ. ನೋಡಿ. ಡಿಸೈಡ್ ಮಾಡಿ” … Read more

ಮತ್ತೆ ವಸಂತ: ಶ್ರೇಯ ಕೆ ಎಂ

ಸ್ಮಿತಾ ಹಾಗೆಯೇ ಚೇರ್ ಗೆ ಒರಗಿದ್ದಾಳೆ. ಕಣ್ಣಂಚಲ್ಲಿ ನೀರಾಡಿದೆ. ಹಾಗೇ ಹಿಂದಿನ ನೆನಪುಗಳತ್ತ ಜಾರುತ್ತಿದೆ ಮನಸು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಸ್ಮಿತಾ ಓದಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಎಲ್ಲದರಲ್ಲೂ ಮುಂದು. ಮನೆಯಲ್ಲಿ ಮುದ್ದಿನ ಮಗಳು. ಒಡಹುಟ್ಟಿದವರೊಂದಿಗೆ ಬೆಳೆದ ಸ್ಮಿತಾ ಮನೆಯವರೆಲ್ಲರ ಪಾಲಿನ ಅಚ್ಚುಮೆಚ್ಚು. ಮಧ್ಯಮವರ್ಗದ ಕುಟುಂಬವಾದರೂ ಇದ್ದುದರಲ್ಲಿಯೇ ಸುಖವಾಗಿದ್ದ ಸಂಸಾರ. ಪದವಿ ಓದಿನ ಜೊತೆಗೆ ಹಲವಾರು ಕಲೆಗಳನ್ನು ಕಲಿತವಳು. ಹೀಗೆ ಸಾಗುತ್ತಿದ್ದ ಸಂಸಾರದಲ್ಲಿ ಒಮ್ಮೆ ಅದೆಲ್ಲಿಂದಾನೋ ಒಂದು ಗಂಡಾಂತರ ಬಂದು ಸ್ಮಿತಾಳ ಬಾಳೇ ಛಿದ್ರವಾಗಿ … Read more

ಬಯಲಾಗದ ಬಣ್ಣ: ಅನುರವಿಮಂಜು

ಶೋಭಿತಾಳ ಗಂಡ ತೀರಿಕೊಂಡು ವರ್ಷ ಕಳೆದಿದೆ, ಅವಳೀಗ ಒಂಟಿ ಜೀವನ ನಡೆಸುತ್ತಿದ್ದಾಳೆ. ನಿನ್ನ ಅಂದಿನ ಪ್ರೀತಿ ಇನ್ನು ಜೀವಂತ ಇರುವುದಾದರೆ ಅವಳನ್ನು ಮದುವೆಯಾಗಿ ಹೊಸ ಬದುಕನ್ನು ನೀಡು. ಆಕಸ್ಮಿಕವಾಗಿ ಭೇಟಿಯಾದ ಆತ್ಮೀಯ ಗೆಳೆಯ ಗೌತಮ್ ಆಚ್ಚರಿಯ ಸಂಗತಿ ತಿಳಿಸಿ ಸಲಹೆ ನೀಡಿದ. ಆತನ ಮಾತು ಕೇಳಿ ನನ್ನೊಳಗಿದ ಸೂಕ್ತ ಬಯಕೆಗಳು ಗರಿಗೆದರಿದವು. ಒಂದು ನಿರ್ಧಾರಕ್ಕೆ ಸಿದ್ದನಾದೆ, ಶೋಭಿತಾಳೊಂದಿಗೆ ಉತ್ತಮ ಸ್ನೇಹ ಸಂಬಂಧ ವಿರಿಸಿದ್ದರಿಂದ ನನ್ನ ಮಾತನ್ನು ತಿರಸ್ಕರಿಸಲಾರಳೆಂಬ ನಂಬಿಕೆ ಇತ್ತು. ಒಂಟಿ ಜೀವನ ಅವಳಿಗೂ ಬೇಸರ ತಂದಿರಬಹುದು. … Read more

ಕಿರುಗತೆಗಳು: ಜಯಂತ್ ದೇಸಾಯಿ

ಬಣ್ಣದ ಬಾರಿಗೆ( ಬಣ್ಣದ ಪೊರಕೆ) ಬಾರಿಗೆಮ್ಮೋ ಬಾರಿಗೆ 30 ರೂಪಾಯಿಗೆ ಜೊತಿ ಬಾರಿಗೆ ಸ್ವಲ್ಪವೇ ಅವ ನೋಡ್ರೆಮ್ಮೋ ಅಂತ ಕೂಗುತ್ತಾ ಹಳ್ಳಿಯ ಸಂದಿಸಂದಿಯ ಒಳಗೆ ನುಗ್ಗಿ ಹೋಗುತ್ತಿದ್ದ ಶರಣಪ್ಪ ನ ದ್ವನಿ ಕೇಳಿ ನಿರ್ಮಲ ನುಡಿದಳು ಹೇ ನಿಂದ್ರಪ್ಪ ನಿಂದ್ರು ಹೆಂಗ್ ಕೊಟ್ಟಿ ಅಂದಿ, 30 ರೂಪಾಯಿಗೆ ಅಂದ್ರ ಭಾಳಾ ಫೀರೆ ಆತು ಕಡಿಮೆ ಮಾಡು, ನೋಡಿದ್ರ ನಾಕು ಕಡ್ಡಿ ಇಲ್ಲ ಇದ್ರಾಗ, ಅವ್ವ ಹಂಗನ್ನ ಬ್ಯಾಡ ಗಿರಿ ಗಿರಿ ಹಾಕಿ ಎಳೆದು ಎಳೆದು ತೀಡಿ ನೆಲಕ್ಕೆ … Read more

ನನ್ನೊಳಗಿನವಳು ಅವಳು: ಮಸಿಯಣ್ಣ ಆರನಕಟ್ಟೆ.

ಕೂಡ್ಲಹಳ್ಳಿಯಲ್ಲಿ ಸಂಗಮೇಶ್ವರನ ಜಾತ್ರೆ ಸಾಗಿತ್ತು. ಕರೋನ ಅಬ್ಬರದಿಂದ ಜನ ಸೇರಿರಲಿಲ್ಲ. ಜಾತ್ರೆ ಎಂದರೆ ತಪ್ಪಾಗಬಹುದೇನೋ! ಒಂದು ದೇವಸಂತೆ ಎಂದರೆ ಸಮಂಜಸ ಅನ್ನಬಹುದು.ಆದ್ರೂ ಸಹ ಪೂಜೆ ಪುನಸ್ಕಾರಗಳೆಲ್ಲಾ ವಿಧಿವಿಧಾನದಂತೆ ಯತವತ್ತಾಗಿ ನಡೆಯುತ್ತಿದ್ದವು.ನಾನು ಹೋಗಿದ್ದೆ.ಸಾಮಾಜಿಕ ಅಂತರ ಕಾಯ್ದುಕೊಂಡೆ ಅಂದುಕೊಳ್ತಿನಿ ಕಾರಣ ನನಗೆ ಕರೋನ ಸಂಬಂಧ ಯಾವುದೇ ಪಾಸಿಟೀವ್ ತಂಟೆ ತಕರಾರೆದ್ದಿಲ್ಲ. ದರ್ಶನ ಆಯ್ತು, ಅವ್ವ ರೊಟ್ಟಿ ಕಟ್ಟಿ ಕೊಟ್ಟಿದ್ಲು . ಕಜ್ಜಾಯ ಸಹ ಮಾಡಿ ಕೊಟ್ಟಿದ್ಲು. ದೇವಸ್ಥಾನ ಬಿಟ್ಟು ಹತ್ತತ್ರ ೧ ಮೈಲಿ ನಡೆದರೆ ಅಜ್ಜಯ್ಯನ ಆಲದಮರದ ತೋಪು ಸಿಗುತ್ತೆ. … Read more

ವ್ಯಾಘ್ರತೀರ್ಥ ಮತ್ತು ಕೆಂಚಿ ಕಟ್ಟೆ: ಜಗದೀಶ ಸಂ.ಗೊರೋಬಾಳ

ಭುವನೇಶ್ವರದಿಂದ ಇನ್ನೂರೈವತ್ತು ಮೈಲು ದೂರದಲ್ಲಿ ವ್ಯಾಘ್ರತೀರ್ಥವೆಂಬ ಪುಟ್ಟ ಹಳ್ಳಿ. ಆ ಹಳ್ಳಿಯಲ್ಲಿ ಇರುವುದೇ ಬೆರಳೆಣಿಕೆಯಷ್ಟು ಮನೆಗಳು. ಇರುವ ಮನೆಗಳಲ್ಲೂ ದುಡಿವ ಶಕ್ತಿ ಇರುವವರೆಲ್ಲ ಸಮೀಪದ ನಗರಗಳಿಗೆ ವಲಸೆ ಹೋಗಿದ್ದರು. ಬರಗಾಲದ ಬಾದೆಯಿಂದ ಬೆಂದ ಕುಟುಂಬಗಳು ಇತ್ತ ಹಳ್ಳಿಯನ್ನೂ ಬಿಡದೆ ಗತಕಾಲದ ವೈಭವವನ್ನು ನೆನೆಯುತ್ತಾ ದಿನಕಳೆಯುತ್ತಿದ್ದವು. “ಹಿಂದೆ ಈ ಊರಲ್ಲಿ ಭಯಂಕರವಾದ ಕಾಡಿತ್ತು. ಕಾಡಿನಲ್ಲಿ ಕ್ರೂರಮೃಗಗಳಿದ್ದವು. ಅಲ್ಲಲ್ಲಿ ನೀರಿನ ಹೊಂಡಗಳೂ ಸಾಕಷ್ಟಿದ್ದವು. ಊರಾಚೆ ಇರುವ ದೊಡ್ಡ ಹೊಂಡವೇ ವ್ಯಾಘ್ರತೀರ್ಥ. ಇದಕ್ಕ ಆ ಹೆಸರು ಬರಲು ಕಾರಣ ಯಾವಾಗಲೂ ಈ … Read more

ಸಂಬಂಧಗಳು: ವೈ. ಬಿ. ಕಡಕೋಳ

ಆ ದಿನ ಎಂದಿನಂತಿರಲಿಲ್ಲ. ವಿಜಯ ಪೂರ್ಣ ಆಯಾಸಗೊಂಡಿದ್ದ. ಮನೆಯಲ್ಲಿ ಕುಟುಂಬದ ಎಲ್ಲ ಸದಸ್ಯರಿಗೂ ಇವರ ಆರೋಗ್ಯದ ಕುರಿತು ಚಿಂತೆ ಆರಂಭವಾಗಿತ್ತು. ತಮ್ಮ ಪುಟ್ಟ ಹಳ್ಳಿಯಲ್ಲಿನ ವೈದ್ಯರು ‘ನಿಮೋನಿಯ’ ಆಗಿದೆ ಎಂದು ಮೂರು ದಿನಗಳ ಕಾಲ ಸೈಲಾಯಿನ್ ಹಚ್ಚಿದ್ದರು. ಆರೋಗ್ಯ ಬಿಗಡಾಯಿಸತೊಡಗಿತು. ಪಕ್ಕದ ಶಹರಕ್ಕೆ ಹೋದರೆ ಅವರು ಕೋವಿಡ್ ಟೆಸ್ಟ ಮಾಡಿಸಿಕೊಂಡು ಬರಲು ಸೂಚಿಸಿದರು. ಅಲ್ಲಿ ‘ನೆಗೆಟಿವ್’ ಬಂದರೂ ‘ನ್ಯೂಮೇನಿಯ’ ಇದೆ ಎಂದು ಗೊತ್ತಾದ ಮೇಲೂ ತಮ್ಮ ಆಸ್ಪತ್ರೆಯಲ್ಲಿ ಸೌಲಭ್ಯಗಳು ಇಲ್ಲ ನಗರ ಪ್ರದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ … Read more

ತುಂಬಿದ ಮಡಿಲು: ಭಾರ್ಗವಿ ಜೋಶಿ…..

ಅಂದು ನಸುಕಿನಲ್ಲಿ ನಾಲ್ಕನೇ ದಿನದ ನೀರು ಹಾಕಿಕೊಂಡು ಅಡುಗೆ ಮನೆ ಹತ್ತಿರ ಬರುತ್ತಿದ್ದ ಪದ್ಮಾವತಿಗೆ ಒಳಗಡೆ ಅತ್ತೆ ರಮಾಬಾಯಿ ಒಲೆ ಮುಂದೆ ಕುಳಿತು ಕಾಫಿ ಮಾಡುತ್ತ ಹೇಳುತ್ತಿದ್ದರು ಮಾತು ಜೋರು ಜೋರಾಗಿ ಕೇಳಿಸುತ್ತಿತ್ತು. ತಾಯಿ ಮಾತಿಗೆ ಎದುರು ಕುಳಿತ ಶ್ರೀನಿವಾಸ ಹೂಂ ಗುಟ್ಟುತ್ತಿದ್ದ. “ಅಲ್ಲೋ ಶ್ರೀನಿ, ನಿನ್ ಮದುವೆ ಆಗಿ ಐದು ವರ್ಷ ಆತು, ಇನ್ನು ಮಕ್ಕಳು, ಮರಿ, ಸುದ್ದಿನೇ ಇಲ್ಲೆಲ್ಲೋ? ನೋಡು ಇನ್ನು ತಡ ಮಾಡಬೇಡ. ನನ್ ಮಾತು ಕೇಳು. ಇನ್ನೊಂದು ಮದುವೆ ಮಾಡಿಕೊಂಡು ಬಿಡು … Read more

ಆಕ್ರಮಣ (ಕೊನೆಯ ಭಾಗ): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ಲೆನಿಂಜೆನ್ನನಿಗೆ ಒಮ್ಮೆಲೇ ಸಿಡಿಲು ಹೊಡೆದಂತೆ ಜ್ಞಾಪಕಕ್ಕೆ ಬಂದಿತು: ಔಟ್ ಹೌಸಿನಲ್ಲಿ ಈ ವರೆಗೆ ಉಪಯೋಗಿಸದಿದ್ದ ಎರಡು ಫೈರ್ ಎಂಜಿನುಗಳು ಹಾಗೇ ತುಕ್ಕು ಹಿಡಿದು ಬಿದ್ದಿದ್ದವು. ಲೆನಿಂಜೆನ್ ಅವಗಳನ್ನು ಹೊರಗೆಳೆಸಿ ಪೆಟ್ರೊಲ್ ಟ್ಯಾಂಕಿಗೆ ಜೋಡಿಸಿದ. ಅಷ್ಟರಲ್ಲಿ ಕೆಲವು ಇರುವೆಗಳು ಮೇಲೆ ಹತ್ತಿದ್ದವು. ಫೈರ್ ಎಂಜಿನುಗಳು ಸ್ಟಾರ್ಟ್ ಆಗುತ್ತಲೇ ಪೆಟ್ರೊಲನ್ನು ಇರುವೆಗಳ ಮೇಲೆ ಹರಿಸಿ ಮತ್ತೆ ಅವುಗಳನ್ನು ಕಾಲುವೆಗೆ ದಬ್ಬಲಾಯಿತು ಮತ್ತು ಕಾಲುವೆಗೆ ಮೊದಲಿನಂತೆ ಪೆಟ್ರೋಲು ಹರಿಯಲಾಂಭಿಸಿತು. ಕೆಲ ಹೊತ್ತಿನ ಮಟ್ಟಿಗಾದರೂ ಲೆನಿಂಜೆನ್ ಇರುವೆಗಳನ್ನು ತಡೆಯುವುದರಲ್ಲಿ ಯಶಸ್ವಿಯಾಗಿದ್ದ. ಆದರೂ … Read more

ಆಕ್ರಮಣ (ಭಾಗ ೩): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ಜಿಂಕೆಯ ಗ್ರಾಚ್ಚಾರ ಕೆಟ್ಟು ರಾಕ್ಷಸ ಇರುವೆಗಳ ಆಕ್ರಮಣಕ್ಕೆ ತುತ್ತಾಗಿತ್ತು. ಮೊಟ್ಟ ಮೊದಲಿಗೆ ಕಣ್ಣುಗಳ ಮೇಲೆ ಆಕ್ರಮಣ ನಡೆಸುವುದೇ ಈ ಇರುವೆಗಳ ವಿಶಿಷ್ಠತೆಯಾಗಿತ್ತು. ಬೇಟೆಯನ್ನು ಕುರುಡಾಗಿಸಿ ಅಸಹಾಯಕ ಸ್ಥಿತಿಗೆ ದೂಡುವುದೇ ಇರುವೆಗಳ ಕಾರ್ಯಾಚರಣೆಯ ಗುಟ್ಟಾಗಿತ್ತು. ತನ್ನ ಹೆಗಲಿನ ಮೇಲಿದ್ದ ಕೋವಿಯಿಂದ ಲೆನಿಂಜೆನ್ ಆ ಪ್ರಾಣಿಯನ್ನು ನೋವಿನಿಂದ ಮುಕ್ತಗೊಳಿಸಿ ತನ್ನ ಜೇಬುಗಡಿಯಾರವನ್ನು ಹೊರತೆಗೆದು ಸಮಯವನ್ನು ನೋಡಿ೮ದ. ನೋಡಲು ಕಿರಿಕಿರಿ ಅನಿ೯ಸಿದರೂ ಅವನೂ ಮುಂದಿದ್ದ ದೃಶ್ಯವನ್ನು ನೋಡಿದ.. ಆರು ನಿಮಿಷ. ಕೇವಲ ಆರು ನಿಮಿಷಗಳು. ಜಿಂಕೆಯ ಅಸ್ಥಿಪಂಜರ ಅವನ ಎದುರಿಗೆ … Read more

ಗೆಳೆಯನಲ್ಲ (ಕೊನೆಯ ಭಾಗ): ವರದೇಂದ್ರ ಕೆ.

ಇಲ್ಲಿಯವರೆಗೆ (11) “ತಪ್ಪು ಮಾಡುವುದು ಸಹಜ, ಅದನ್ನು ಅರಿತು ಪಶ್ಚಾತ್ತಾಪದಿಂದ ಬದಲಾಗಿ ಉತ್ತಮ ವ್ಯಕ್ತಿ ಆಗುವವನೇ ನಿಜವಾದ ಮನುಜ. ನಾವು ಖಂಡಿತ ನಿಮ್ಮನ್ನು ಕ್ಷಮಿಸುತ್ತೇವೆ, ನಿಮ್ಮ ಮೇಲಿನ ಕೋಪವೆಲ್ಲ ಪ್ರೀತಿಗೆ ಇಂದು ಇಳಿದಿದೆ. ಅವಳ ಮನದಲ್ಲಿನ ನೋವು ಇಂದು ಹೊರ ಬಂದು ಅವಳ ಮನಸು ನಿರಾಳವಾಗಿದೆ. ಪ್ರೀತಿ ಇಷ್ಟು ನೊಂದಕೊಂಡ ಮನುಷ್ಯನಿಗೆ ಮತ್ತೆ ನೋವು ಕೊಡುವುದು ತರವಲ್ಲ. ನಿಮ್ಮ ಸ್ನೇಹ ಯಾವತ್ತಿಗೂ ಚಿರಾಯುವಾಗಿರಬೇಕು. ನೀನೂ ನಿನ್ನ ಸ್ನೇಹಿತನ ತಪ್ಪನ್ನು ಮನ್ನಿಸಬೇಕು ಎಂದು ಪ್ರೀತಿಗೆ ಹೇಳುತ್ತಾನೆ ಸಂಪತ್. ಸಂತೋಷ್ … Read more

ಆಕ್ರಮಣ (ಭಾಗ 2): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ತಾನೊಬ್ಬ ಮಹಾನ್ ಬುದ್ಧಿವಂತ ಎಂದು ತಿಳಿದುಕೊಂಡಿರುವ ಮನುಷ್ಯನಿಗೆ ಒಂದು ಯಕಃಶ್ಚಿತ್ ಇರುವೆ ಯೋಚಿಸಲು ಶಕ್ತವಾಗಿರುವುದಷ್ಟೇ ಅಲ್ಲದೆ ಯೋಜನೆಯನ್ನೂ ರೂಪಿಸಲೂ ಶಕ್ತವಾಗಿರುತ್ತದೆ ಎಂದರೆ ನಂಬುವುದು ಕಷ್ಟವೇ. ಲೆನಿಂಜೆನ್ನನ ಐರೋಪ್ಯ ಬುದ್ಧಿವಂತಿಕೆ ಮತ್ತು ಬ್ರೆಜಿಲಿನ್ನಿಯರರ ದೇಶಿ ಬುದ್ಧಿವಂತಿಕೆ ಈ ಇರುವೆಗಳ ಬುದ್ದಿವಂತಿಕೆಗೆ ಸರಿಸಾಟಿಯಾಗಬಲ್ಲುದೇ? ನಿಜ. ಲೆನಿಂಜೆನ್, ಇರುವೆಗಳು ಒಳಗೆ ಬರದಂತೆ ನೀರಿನ ಕಾಲುವೆಯನ್ನೇನೋ ನಿರ್ಮಿಸಿದ್ದ. ಲೆನಿಂಜೆನ್ನನ ಯೋಜನೆ ಏನೇ ಇರಲಿ.. ಅದನ್ನು ಹಾಳುಗೆಡುವುದೇ ಇರುವೆಗಳ ಪ್ರತಿಯೋಜನೆಯಾಗಿತ್ತು. ಸಂಜೆ ನಾಲ್ಕರಷ್ಟೊತ್ತಿಗೆ ಇರುವೆಗಳ ಆಕ್ರಮಣದ ಅಂತಿಮ ರೂಪುರೇಷೆಗಳು ತಯಾರಾದಂತೆ ಕಾಣಿಸಿತು. ಕಾಲುವೆಯೊಂದೇ … Read more

ಗೆಳೆಯನಲ್ಲ (ಭಾಗ 5): ವರದೇಂದ್ರ ಕೆ.

ಇಲ್ಲಿಯವರೆಗೆ… (9) ಪ್ರೀತಿಯ ತಂದೆ ಬಂದು “ಅಳಿಯಂದ್ರೆ, ಗೋಪಾಲಯ್ಯ ಎಂದರೆ ಯಾರು? ಒಂದೇ ಸಮನೆ ನಿಮ್ಮ ತಾಯಿಯವರು, ಗೋಪಾಲಯ್ಯ ಕೊಲೆ ಕೊಲೆ ಎನ್ನುತ್ತಿದ್ದಾರೆ. ಬೇಗ ಬನ್ನಿ” ಎನ್ನುತ್ತಾರೆ. ಗೋಪಾಲಯ್ಯ ಹೋ ನನ್ನ ತಂದೆಯವರನ್ನು ಕೊಲ್ಲಿಸಿದವನು ಎಂದು ಆಗಾಗ ಅಮ್ಮ ಹೇಳುತ್ತಿದ್ದರು. ಈಗ್ಯಾಕೆ ಅವನ ಹೆಸರು ಹೇಳುತ್ತಿದ್ದಾರೆ. ಎಂದು ಆಶ್ಚರ್ಯದಿಂದ ಒಳ ಓಡುತ್ತಾನೆ. ಕಮಲಮ್ಮಗೆಎಚ್ಚರವಾಗಿರುತ್ತೆ. ಅಮ್ಮಾ, ಏನಾಯಿತಮ್ಮ? ಎಂದಾಗ ಬೆಳಿಗ್ಗೆ ಗೋಪಾಲಯ್ಯನ ಹಾಗೆಯೇ ಇದ್ದವ ಯಾರೋ ನಮ್ಮ ಮನೆ ಮುಂದೆ ಬಂದಿದ್ದ, ನಿಮ್ಮಪ್ಪನನ್ನು ಕೊಲ್ಲಿಸಿದ್ದು ಸಾಕಾಗಲಿಲ್ಲವೇನೋ, ಮತ್ಯಾರನ್ನು ಕೊಲ್ಲಲು … Read more

ಜೀವನದ ಆಸೆ ಆಕಾಂಕ್ಷೆಗಳು ಹಾಗೂ…..?: ಶೀಲಾ ಎಸ್.‌ ಕೆ.

ಒಂದು ಲೋಟ ಕಾಫಿ ಕೊಡ್ತಿಯಾ ಪದ್ಮ ಎಂದು ಹಜಾರಕ್ಕೆ ಬಂದು ಕುಳಿತರು ನಂಜುಂಡಪ್ಪ. ಕೈಯಲ್ಲಿ ಕಾಫಿ ಲೋಟ ಹಿಡಿದು ಬಂದ ಪದ್ಮ ತುಂಬ ಸುಸ್ತಾದವರಂತೆ ಕಾಣುತಿದ್ದಿರಿ ಎಂದು ಕೇಳಿದರು, ಆಗ ತಾನೇ ಕೆಲಸ ಮುಗಿಸಿ ಬಂದಿದ್ದ ತನ್ನ ಗಂಡನನ್ನ. ಸ್ವಲ್ಪ ಕೆಲಸ ಜಾಸ್ತಿ ಈಗ ಮೊದಲಿನಂತೆ ಅಲ್ಲ ಎಲ್ಲ ಹೊಸ ಹೊಸ ಪ್ರಯೋಗಗಳು, ಹೊಸ ಬಗೆಯ ಕೋಚಿಂಗ್ ಅಂತಾರೆ, ಈಗ ಅದನ್ನು ಕಲಿಯಲು ಅಥವಾ ಅಳವಡಿಸಿಕೊಳ್ಳಲು ಸ್ವಲ್ಪ ಸಮಯ ಹಾಗು ಶ್ರಮವಾಗುತ್ತಿದೆ ಅಷ್ಟೆ ಎಂದರು. ಸರಿ ಬೇಗ … Read more

ಬಂಜೆ ಪದಕ್ಕೆ ಪುಲ್ಲಿಂಗ ಏನು?: ಗಿರಿಜಾ ಜ್ಞಾನಸುಂದರ್

“ಚಪಾತಿ ಹೊತ್ತಿಹೋಗ್ತಿದೆ, ಸ್ವಲ್ಪ ನೋಡ್ಬಾರ್ದಾ?” ತನ್ನ ಅತ್ತೆಯ ಕೂಗಿನಿಂದ ವರ್ತಮಾನಕ್ಕೆ ಬಂದಳು ಪ್ರೀತಿ. “ಅಡುಗೆಮನೆಲ್ಲಿದೀಯ….. ಮಾಡೋ ಕೆಲ್ಸದ ಕಡೆ ಗಮನ ಇರ್ಲಿ” ಅಂದು ಯಾಕೋ ಅವಳ ಅತ್ತೆ ಕಮಲಾ ಸ್ವಲ್ಪ ಖಾರವಾಗಿಯೇ ಇದ್ದಳು. ಪ್ರೀತಿಗೆ ಏನು ಹೇಳಲು ತೋಚದೆ ಸುಮ್ಮನೆ ತಲೆ ಬಗ್ಗಿಸಿ ಚಪಾತಿ ಮಾಡುವ ಕಡೆ ಗಮನ ಮಾಡಿದ್ದಳು. ” ಏನ್ರಿ, ನೆನ್ನೆ ಸೀತಮ್ಮನ ಮನೆಗೆ ಕುಂಕುಮಕ್ಕೆ ಹೋಗಿದ್ದೆ. ಅವಳ ಮಗನ ಮಾಡುವೆ ಮಾಡಿ ಇನ್ನು ೩ ವರ್ಷ ಆಗಿಲ್ಲ…. ಆಗ್ಲೇ ಮನೆಲ್ಲಿ ಅವಳಿ ಜವಳಿ … Read more

ಆಕ್ರಮಣ (ಭಾಗ 1): ಜೆ.ವಿ. ಕಾರ್ಲೊ

ಮೂಲ: ಕಾರ್ಲ್ ಸ್ಟೀಫನ್ ಸನ್ ಅನುವಾದ: ಜೆ.ವಿ. ಕಾರ್ಲೊ “ಒಂದು ವೇಳೆ ಅವು ದಿಕ್ಕು ಬದಲಿಸಿದರೆ, ಬೇರೆ ಮಾತು.. ಆದರೆ ಹಾಗೆಂದು ಭಾವಿಸಲು ಯಾವುದೇ ಆಧಾರಗಳಿಲ್ಲ. ಅವು ನಿಮ್ಮ ತೋಟದ ಕಡೆಗೇ ಬರುತ್ತಿವೆ. ಹೆಚ್ಚೆಂದರೆ ಇನ್ನು ಎರಡು ದಿವಸ!” ಲೆನಿಂಜೆನ್ನನ ಮುಖದ ಮೇಲೆ ಆತಂಕದ ಗೆರೆಗಳು ಮೂಡಿದವು. ತನ್ನ ನಂದಿ ಹೋಗಿದ್ದ ದಪ್ಪನೆಯ ಚಿರೂಟನ್ನು, ಹಸಿದವನಂತೆ ಗಬಗಬನೆ ಸೇದತೊಡಗಿದ. ಅವನಿಗೆ ಸುದ್ಧಿ ಕೊಡಲು ಬಂದಿದ್ದ ಜಿಲ್ಲಾಧಿಕಾರಿಯ ಮುಖದ ಮೇಲೂ ಚಿಂತೆಯ ಗೆರೆಗಳು ಮೂಡಿದ್ದವಷ್ಟೇ ಅಲ್ಲದೆ ಅವನು ಯಥೇಚ್ಛವಾಗಿ … Read more

ಮರೆಯಲಾಗದ ಮದುವೆ (ಭಾಗ 6): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೬- ರಾತ್ರಿ ಎರಡು ಘಂಟೆಗೆ ರೈಲು ನೆಲ್ಲೂರನ್ನು ತಲುಪಿತು. ಅದು ಎಲ್ಲರೂ ಹೆಣಗಳಂತೆ ನಿದ್ರಿಸುವ ಹೊತ್ತು. ಕಳ್ಳ ಕಾಕರು ಸಕ್ರಿಯರಾಗುವ ಹೊತ್ತು. ಸಾಮಾನ್ಯವಾಗಿ ಆ ಸಮಯದಲ್ಲಿ ರೈಲ್ವೇ ಪೋಲೀಸರು ಪ್ರಯಾಣಿಕರನ್ನು ಜಾಗೃತಗೊಳಿಸುವುದು ಪದ್ಧತಿ. ಅದರಂತೆ ನೆಲ್ಲೂರಿನಲ್ಲಿ ರೈಲುಹತ್ತಿದ ಇಬ್ಬರು ರೈಲ್ವೇ ಪೋಲೀಸರು “ನಿಂ ನಿಂ ಬೆಲೆಬಾಳೋ ವಸ್ತು ಜೋಪಾನಾ… ಕಿಟ್ಕಿ ಬಾಗ್ಲು ಹಾಕ್ಕಳೀ…ಒಡವೆ ವಸ್ತ್ರ ಜೋಪಾನಾ…” ಎಂದು ಪ್ರತಿಬೋಗಿಯಲ್ಲೂ ಕೂಗುತ್ತಾ ಬರುತ್ತಿದ್ದರು. ಅಯ್ಯರ್ ಬೋಗಿಯಲ್ಲಿಯೂ ಬಂದು ಕೂಗುತ್ತಿದ್ದಂತೆ ಅಯ್ಯರ್ ತಂಡಕ್ಕೆ ಸೇರದ ಅಲ್ಲಿದ್ದ ಪ್ರಯಾಣಿಕನೊಬ್ಬ “ಬೋಗಿ … Read more