Facebook

Archive for the ‘ಕಥಾಲೋಕ’ Category

ಸೋಲು: ಗಿರಿಜಾ ಜ್ಞಾನಸುಂದರ್

ಸಪ್ಪೆ ಮೊರೆ ಹಾಕಿಕೊಂಡು ಬರುತ್ತಿದ್ದ ಪ್ರೀತಿಯನ್ನು ಪಕ್ಕದ ಮನೆ ಆಂಟಿ “ಏನ್ ಪುಟ್ಟಿ! ರಿಸಲ್ಟ್ ಏನಾಯ್ತು? ಯಾವಾಗ್ಲೂ ಫಸ್ಟ್ ಬರ್ತಿದ್ದೆ ಅಲ್ವಾ. ಈಸಲ ಏನು? ಸ್ವೀಟು ಕೊಡ್ಲಿಲ್ಲ?” ಸುಮ್ಮನೆ ತಲೆ ತಗ್ಗಿಸಿ ಅಲ್ಲಿಂದ ಹೊರಟು ಬಂದಿದ್ದಳು. ಶಾಲೆಯಲ್ಲಿ ಎಲ್ಲದರಲ್ಲೂ ಮುಂದಿದ್ದ ಹುಡುಗಿ. ಇಡೀ ಶಾಲೆಗೆ ೧೦ನೇ ತರಗತಿಯಲ್ಲಿ ಎರಡನೇ ಸ್ಥಾನದಲ್ಲಿ ಪಾಸಾಗಿದ್ದವಳು. ಅವರಪ್ಪ ಅದಕ್ಕಾಗಿ ತಮ್ಮ ಸುತ್ತಮುತ್ತಲಿನ ಮನೆಗಳಿಗೆಲ್ಲ ಒಂದೊಂದು ಸ್ವೀಟ್ ಡಬ್ಬವನ್ನೇ ಹಂಚಿದ್ದರು. ತಮ್ಮ ಶಾಲೆಯಿಂದ ಬೇರೆ ಶಾಲಿಗಳಿಗೂ ಬಹಳಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತಂದುಕೊಟ್ಟವಳು. […]

ಶೃತಿ ನೀ ಮಿಡಿದಾಗ (ಕೊನೆಯ ಭಾಗ): ವರದೇಂದ್ರ.ಕೆ ಮಸ್ಕಿ

ಇತ್ತ ಮನೆಯಲ್ಲಿ ಅಕ್ಕ ನಳಿನಿ ಕಡೆಯಿಂದ ಒಂದು ವಿಷಯ ಬಂತು. ಭಾವನ ತಮ್ಮ ನಿತಿನ್ ಅಮೇರಿಕಕ್ಕೆ ಹೋಗಿದ್ದ, ಇಂಜಿನಿಯರ್ ಕೆಲಸ, ಕೈತುಂಬಿ ಹಂಚಬಹುದಾದಷ್ಟು ಸಂಬಳ. ವಿದ್ಯಾವಂತ ಬುದ್ಧಿವಂತ. ನೋಡೋಕೆ ಸ್ಫುರದ್ರೂಪಿ, ಒಳ್ಳೆಯ ಮೈಕಟ್ಟು, ಸದಾ ಮುಗುಳ್ನಗೆಯ ಸರದಾರ, ನಿರಹಂಕಾರಿ, ಮಿತ ಮಾತುಗಾರ, ನಿಷ್ಕಲ್ಮಷ ಹೃದಯವಂತ, ಅಪ್ಪಟ ಬಂಗಾರದ ಗುಣವಂತ. ನಮ್ಮ ಶೃತಿಗೆ ತಕ್ಕುದಾದ ಜೋಡಿ; ಎಂದು ಅಕ್ಕ, ನಿತಿನ್ ಗೆ ಶೃತೀನ ತಂದುಕೊಳ್ಳೊ ವಿಚಾರ ಎತ್ತಿಬಿಟ್ಟಳು. ಇದ್ದಕ್ಕಿದ್ದ ಹಾಗೆ ಎರಗಿ ಬಂದ ವಿಷಯ ಶೃತಿ ಮನಸ್ಸಿಗೆ ತಳಮಳ […]

ಕೆಂಪು ನೆರಳು!: ಎಸ್.ಜಿ.ಶಿವಶಂಕರ್

ವಾಸುದೇವರಿಗೆ ಗಾಢ ನಿದ್ರೆ. ಅಂತಾ ನಿದ್ರೆಯನ್ನು ಎಂದೂ ಮಾಡಿಲ್ಲ ಎನ್ನಿಸುವ ನಿದ್ರೆ. ಮೂರು ದಿನದಿಂದ ನಿದ್ರೆಯಿಲ್ಲದೆ ಹೈರಾಣಾಗಿದ್ದಕ್ಕೋ ಏನೋ..ಗಾಢ ನಿದ್ರೆ ಅವರಿಸಿತ್ತು! ಅಸ್ತಿತವನ್ನೇ ಮರೆಸಿದ ನಿದ್ರೆ! ದೇಹದ ಅರಿವಿಲ್ಲದ ನಿದ್ರೆ! ದೇಹದ ಭಾರವೇ ಇರಲಿಲ್ಲ! ತನಗೆ ಶರೀರವೇ ಇಲ್ಲ-ಎನ್ನುವಷ್ಟು ಹಗುರ, ನಿರಾಳ ಭಾವನೆ! ತಾನು ಬದುಕಿರುವೆನೋ? ಇಲ್ಲವೋ? ಜಾಗ, ಜಾವಗಳ ಅರಿವೇ ಇಲ್ಲದ ವಿಚಿತ್ರ ಹೊಚ್ಚ ಹೊಸ ಅನುಭವ! ಇಂತದು ಹಿಂದೆಂದೂ ಆಗಿರಲೇ ಇಲ್ಲ! ಎಲ್ಲಿರುವೆ? ಸಮಯ ಎಷ್ಟು? ಹಗಲೋ? ರಾತ್ರಿಯೋ? ಎಚ್ಚರವೇ ಇಲ್ಲ ಎಂದರೆ ಅದು […]

ಸಾಫಲ್ಯ: ಉಮೇಶ್‌ ದೇಸಾಯಿ

ಅದು ಅಖಿಲ ಭಾರತ ಮಟ್ಟದ ಸಂಗೀತದ ಅಂತಿಮ ಕಾರ್ಯಕ್ರಮ. ಕನ್ನಡದ ಆ ವಾಹಿನಿ ಅನೇಕ ವರ್ಷಗಳಿಂದ ಈ ಸ್ಫರ್ಧೆ ಏರ್ಪಡಿಸುತ್ತ ಬಂದಿದೆ. ಇಂದು ಅಂತಿಮ ಸುತ್ತು. ಎಲ್ಲ ಸ್ಫರ್ಧಿಗಳಲ್ಲೂ ವಿಚಿತ್ರ ತಳಮಳ ಈಗಾಗಲೇ ಈ ವಾಹಿನಿಯ ಈ ಅಂತಿಮಸ್ಫರ್ಧೆಯ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಂತೆಯೇ ಇತರೇ ಸುದ್ದಿವಾಹಿನಿಗಳಲ್ಲಿ ಈ ಕುರಿತು ಅನೇಕ ಚರ್ಚೆಗಳಾಗಿವೆ…ಯಾರು ಗೆಲ್ಲಬಹುದು ಪ್ರಶಸ್ತಿಯನ್ನು ಈ ಕುರಿತಾಗಿ ಅಲ್ಲಲ್ಲಿ ಬೆಟಿಂಗ್ ಕೂಡ ನಡೆಯುತ್ತಿದೆ ಎಂಬ ಸುದ್ದಿಯೂ ಅನೇಕ ವಾಹಿನಿಗಳಲ್ಲಿ ಹರಿದಾಡುತ್ತಿತ್ತು. ಸ್ಫರ್ಧಿಗಳಲ್ಲಿ ತಳಮಳವಿತ್ತು ನಿಜ ಅಂತೆಯೇ […]

ತಲಾಖ್: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

ಊರಿನ ಮುಂಭಾಗದಲ್ಲೇ ಶತಮಾನಗಳಷ್ಟು ಹಳೆಯದಾದ ಹುಣಸೀಮರದ ಬುಡದಲ್ಲಿ ಪೇಚು ಮಾರಿ ಹಾಕಿಕೊಂಡು ತಲೆ ಮೇಲೆ ಕೈ ಹೊತ್ತು ಕೂತ ಕರವೀರನನ್ನು ಸಮಾಧಾನ ಮಾಡಲು ಯಾರೊಬ್ಬರೂ ಮುಂದೆ ಬರಲಿಲ್ಲ. ಅಷ್ಟಕ್ಕೂ ಅಲ್ಲೇನಾಗಿತ್ತು ಎಂದು ಅದಾರಿಗೂ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಎಲ್ಲರ ಮುಖದಲ್ಲೂ ಭಯ, ಸಂಶಯ, ಆಶ್ಚರ್ಯ, ಸಂದೇಹವೇ ಮನೆ ಮಾಡಿದಂತಿತ್ತು. ಆಗಷ್ಟೇ ಕಚೇರಿಯಿಂದ ಬಂದ ಮಂಜನಿಗೆ ಇದಾವುದರ ಪರಿವೆಯೂ ಇರಲಿಲ್ಲವಾದರೂ ಅಲ್ಲಿ ಏನೋ ಒಂದು ದುರ್ಘಟನೆ ಜರುಗಿರಬಹುದೆಂಬ ಗುಮಾನಿಯಂತೂ ಮಂಜನ ತಲೆಯಲ್ಲಿ ಓಡುತ್ತಿತ್ತು. “ ಹಾಂ,, ನನ್ ಮಗಳು ಅಂಥಾದ್ದೇನು […]

ಶೃತಿ ನೀ ಮಿಡಿದಾಗ (ಭಾಗ ೨): ವರದೇಂದ್ರ.ಕೆ ಮಸ್ಕಿ

ಸುಶಾಂತನ ಪ್ರೇಮ ಪತ್ರ ಓದುತ್ತ ಓದುತ್ತ ಶೃತಿಯ ಅಂತರಂಗದಿ ಪ್ರೇಮದ ಬೀಜ ಮೊಳಕೆ ಒಡೆದು ಬಿಟ್ಪಿತು. ಇದು ಪ್ರೇಮವೋ, ಅಥವಾ ಪ್ರಥಮಬಾರಿಗೆ ಒಬ್ಬ ಹುಡುಗನ ಮನದ ಭಾವಕೆ ಸ್ಪಂದಿಸುವ ವಯೋಸಹಜ ಆಕಾಂಕ್ಷೆಯೋ ತಿಳಿಯದ ದ್ವಂದ್ವಕ್ಕೆ ಶೃತಿಯ ಮನಸು ಹೊಯ್ದಾಡಿ ವಯೋಸಹಜವಾಗಿ ಮೂಡುವ ಭಾವನೆಯೇ ಪ್ರೀತಿ ಅಲ್ಲವೆ? ಹೌದು ಎಂದುಕೊಂಡಳು. ಯವ್ವನ ದೇಹಕ್ಕೆ ಮಾತ್ರ ಆಗಿದ್ದ ಶೃತಿಯ ಮನಸಿಗೂ ಯವ್ವನ ಬಯಸುವ ಪ್ರೀತಿ, ಪ್ರೀತಿ ನೀಡುವ ಹೃದಯ ಒಂದಿದೆ ಎಂದು ತೋರಿಸಿದ ನಿಜ ಪ್ರೇಮಿ ಸುಶಾಂತ. ಅವನ ಪ್ರೇಮವನ್ನು […]

ದೇವ್ರಾಟ..: ತಿರುಪತಿ ಭಂಗಿ

ಪ್ಯಾಟಿಗೆ ಹೋಗಿದ್ದ ಹನಮ್ಯಾ ಪೋಲಿಸರ ಕೈಯಾಗ ಸಿಕ್ಕಾಕ್ಕೊಂಡ ಬಲ್ಲಂಗ ಗಜ್ಜತಿಂದಿದ್ದ. ‘ಸತ್ನೋ ಯಪ್ಪಾ..’ ಅಂತ ನರಳ್ಯಾಡಕೋತ, ಕುಂಟಕೋತ, ಕುಂಡಿಮ್ಯಾಲ ಗಸಾಗಸಾ ತಿಕ್ಕೋತ ಮನಿಹಾದಿ ಹಿಡದಿದ್ದ. “ಈ ಪೋಲಸ್ರಿಗೆ ಮುಕಳಿ-ಮಾರಿ ಯಾವ್ದಂತ ಒಂದೂ ಗೊತ್ತಿಲ್ಲ, ದಬಾದಬಾ ದನಾ ಬಡ್ದಂಗ ಬಡಿತಾರ, ನಮ್ದ ಎಂತ ಸರಕಾರೋ,ಎಂತಾ ಕಾನೂನೋ..ಏನ್ ಆಡಳಿತಾನೋ..ನಮ್ಮ ದೇಶದಾಗ..! ಎಲ್ಲ ದೇವ್ರಾಟ. ಮೈತುಂಬ ಹಿಗ್ಗಾಮುಗ್ಗಾ ಪೋಲಿಸ್ರು ಥಳಸಿದ ಏಟಿಗೆ ಹನಿಮ್ಯಾನಿಗೆ ಎಂದೂ ನೆನಪಾಗದ ದೇಶದ ಸರಕಾರ, ಕಾನೂನು, ಆಡಳಿತಗಳೆಲ್ಲ ನೆನಪಾಗಿ ಮೈತುಂಬ ಪರಚಿದಂತಾದವು. ನಮಗ ರಕ್ಷಣಾ ಕೊಡವ್ರ ನಮಗ […]

ಶೃತಿ ನೀ ಮಿಡಿದಾಗ: ವರದೇಂದ್ರ.ಕೆ ಮಸ್ಕಿ

ಸದಾ ಕಪ್ಪು ಕೂದಲ ಗಡ್ಡಧಾರಿ ಮಿಂಚು ಮಾತುಗಳ ರಾಯಭಾರಿ ನಗುವಿನ ಸಮಯಗಳಿಗೆ ಸೂತ್ರಧಾರಿ. ರಸವತ್ತಾದ ಹೃದಯ ಸಿಂಹಾಸನದಿ ನೆಲೆ ಊರುವ ಅಧಿಕಾರಿ, ಅಂಗಾರಕನ ಬಣ್ಣ ಗರುವಿನ ವಿಶಾಲ ಮನ, ಅವನಿಯ ತಾಳ್ಮೆ ಸುಗುಣಗಳ ಗಣಿ ಸುಶಾಂತ ಒಲವಿನ ಪುಷ್ಪ ಹಿಡಿದು ಬದುಕೆಲ್ಲ ನೀನೆ, ನೀನಿಲ್ಲದೆ ಮತ್ತೇನಿದೆ ನಿನ್ನ ಒಲವಿನ ಒಂದು ಬೊಗಸೆಯಲಿ ನನ್ನ ಹಿಡಿದುಬಿಡು ಗೆಳತಿ ಎಂದು ದೊಂಬಾಲು ಬಿದ್ದವನ ಅಸ್ತಿತ್ವ ಅವಳ ಒಲುಮೆ ಪಡೆಯಲು ಕಳೆದುಹೋದರೂ ಪರವಾಗಿಲ್ಲ ಎನ್ನುವಷ್ಟು ಹುಚ್ಚು ಪ್ರೇಮ ಹಚ್ಚಿಕೊಂಡವನು. ಸದಾ ಕಣ್ಗಳಲಿ […]

ಮಂಗಳ: ಗಿರಿಜಾ ಜ್ಞಾನಸುಂದರ್

ಮಧ್ಯರಾತ್ರಿಯ ಹೊತ್ತು, ಹೊರಗೆ ನಾಯಿಗಳ ಕೆಟ್ಟ ಕೂಗು. ಕೇಳಲು ಹಿಂಸೆ ಅನಿಸುತ್ತಿದೆ. ನರಳುತ್ತಿರುವ ಗಂಡ. ದಿನವೂ ಕುಡಿದು ಬಂದು ಹಿಂಸೆ ಮಾಡುತ್ತಿದ್ದ ಮನುಷ್ಯ. ಅವನನ್ನು ಉಳಿಸಿಕೊಳ್ಳುವುದು ಅಸಾಧ್ಯ ಅನ್ನಿಸುತ್ತಿದೆ. ಅವನು ಕುಡಿದುಬಂದಿರುವುದರಲ್ಲಿ ಏನಾದರು ಬೆರೆತಿತ್ತೋ ಏನೋ ತಿಳಿದಿಲ್ಲ. ಅಥವಾ ಡಾಕ್ಟರ್ ಹೇಳಿದಂತೆ ಅವನು ಕುಡಿತ ನಿಲ್ಲಿಸದ ಕಾರಣದಿಂದ ಅವನ ಅಂಗಾಂಗಗಳು ತೊಂದರೆ ಆಗಿವೆಯೇನೋ. ಏನು ಮಾಡಲೂ ತೋಚುತ್ತಿಲ್ಲ ಅವಳಿಗೆ. ಹೆಸರಲ್ಲಷ್ಟೇ ಮಂಗಳ ಎಂದು ಉಳಿದಿತ್ತು. ಬೇರೆಲ್ಲವೂ ಅವಳಿಗೆ ಜೀವನದಲ್ಲಿ ಅಮಂಗಳವೇ. ಅವಳ ಜೀವನ ಹೀಗೆಯೇ 22 ವರ್ಷದಿಂದ […]

ಕಾಲದ ಚಿತ್ರ: ಎಂ. ಜವರಾಜ್

ರಾತ್ರಿ ಹತ್ತಾಯ್ತು. ಕರೆಂಟ್ ಇಲ್ಲದೆ ಊರು ಗಕುಂ ಎನುವ ಹೊತ್ತಲ್ಲಿ ಬೀದಿಯಲ್ಲಿ ನಿಂತ ಅಕ್ಕಪಕ್ಕದ ಮನೆಯವರು ಗುಸುಗುಸು ಮಾತಾಡುತ್ತ ಇದ್ದರು. ಕರೆಂಟ್ ಇಲ್ಲದ್ದರಿಂದ ಟಿವಿ ನ್ಯೂಸ್ ನೋಡಲು ಆಗದೆ ದಿಂಬಿಗೆ ತಲೆ ಕೊಟ್ಟೆ. ಕರೋನಾ ಭೀತಿಯಿಂದ ದೇಶ ಪ್ರಕ್ಷುಬ್ಧವಾಗಿ ನಾಳಿನ ಜನತಾ ಕರ್ಫ್ಯೂಗೆ ಸನ್ನದ್ಧವಾಗಿತ್ತು. ಆಗಲೇ ಹೆಂಡತಿ ನಿದ್ರೆಗೆ ಜಾರಿದ್ದಳು. ನನ್ನ ಮಗಳು ಸೆಕೆಗೊ ಸೊಳ್ಳೆ ಹೊಡೆತಕೊ ಹೊರಳಾಡುತ್ತ ಕೈ ಕಾಲು ಆಡಿಸುತ್ತಿದ್ದಳು.ಹಬ್ಬದ ಹೊತ್ತಲ್ಲಿ ಇದೆಂಥ ಕೆಲ್ಸ ಆಯ್ತು.. ಛೇ! ಈ ಸಾರಿ ಯುಗಾದಿಗೆ ಏನೇನು ಮಾಡಬೇಕು. […]