Facebook

Archive for the ‘ಕಥಾಲೋಕ’ Category

ಮರೆಯಲಾಗದ ಮದುವೆ (ಭಾಗ 1): ನಾರಾಯಣ ಎಂ ಎಸ್

ಇದು ನೆನ್ನೆಮೊನ್ನೆಯ ಮಾತಲ್ಲ. ಸುಮಾರು ಹತ್ತಿಪ್ಪತ್ತು ವರ್ಷಗಳೇ ಕಳೆದಿರಬೇಕು. ಆ ಕಾಲಕ್ಕಾಗಲೇ ಊರ ಕಣ್ಣಲ್ಲಿ ರಾಜನ್ಅಯ್ಯರ್ ಒಬ್ಬ ಹಿರೀಕನೆನಿಸಿದ್ದರು. ಆಗಲೇ ಎರಡು ಮೊಮ್ಮಕ್ಕಳಿಗೆ ಅಜ್ಜನಾಗಿದ್ದ ಅಯ್ಯರನ್ನು ಊರ ಜನ ಹಿರಿಯನೆನ್ನದೆ ಮತ್ತಿನ್ನೇನು ತಾನೇ ಅಂದೀತು? ಆದರೆ ಅಜ್ಜನಾದ ಬೆನ್ನಲ್ಲೇ ರಸಿಕ ರಾಜನ್ ಅಯ್ಯರ್ ಆ ಇಳಿವಯಸ್ಸಿನಲ್ಲೂ ಮಡದಿ ಸೀತಮ್ಮಳನ್ನು ಮತ್ತೊಮ್ಮೆ ಬಸಿರಾಗಿಸಿ ಹಲ್ಗಿಂಜುತ್ತಲೇ ಊರವರು ಆತುರದಲ್ಲಿ ಕಟ್ಟಿದ ಹಿರೀಕನ ಪಟ್ಟವನ್ನು ಮುಗುಮ್ಮಾಗಿ ಪಕ್ಕಕ್ಕೆ ಸರಿಸಿಟ್ಟುಬಿಟ್ಟಿದ್ದರು. ಅದೇಕೋ ಅಯ್ಯರಿಗೆ ಈ ಹಿರಿಯನೆಂಬ ಹೊಸ ಗೌರವದ ಹಣೆಪಟ್ಟಿಗಿಂತ ಲಾಗಾಯ್ತಿನಿಂದ ತನಗಿದ್ದ […]

ಎಲ್ಲಿದೆ ನಮ್ಮ ಮನೆ?!: ಎಸ್.ಜಿ.ಶಿವಶಂಕರ್

ಸಮಯ ರಾತ್ರಿ ಏಳೂವರೆ ಸಮೀಪ. ಬಡಾವಣೆಯ ನಡುವಿನ ಆ ಪಾರ್ಕು ನಿರ್ಜನವಾಗುತ್ತಿತ್ತು. ಕತ್ತಲಾಗುವವರೆಗೂ ಅಲ್ಲಿ ಮಕ್ಕಳು, ಮಹಿಳೆಯರು ತುಂಬಿರುತ್ತಾರೆ. ಕತ್ತಲು ಕವಿಯುವ ಹೊತ್ತಿನ ನಂತರವೂ ಅಲ್ಲಿ ಉಳಿಯುತ್ತಿದ್ದವರೆಂದರೆ ಕೆಲವು ಹಿರಿತಲೆಗಳು. ಆರು ಜನರ ಆ ಹಿರಿಯರ ಗುಂಪು ಕಳೆದೈದು ವರ್ಷಗಳಿಂದ ಆ ಪಾರ್ಕಿನ ಅವಿಭಾಜ್ಯ ಅಂಗವಾಗಿದ್ದರು. ಅವರೆಲ್ಲ ಸರ್ವಿಸಿನಲ್ಲಿದ್ದು ರಿಟೈರ್ ಆದವರು. ಬೆಳಕಿರುವವರೆಗೂ ವಾಕಿಂಗ್ ಮಾಡಿ ನಂತರ ಪಕ್ಕಪಕ್ಕದಲ್ಲಿರುವ ಎರಡು ಕಲ್ಲು ಬೆಂಚುಗಳಲ್ಲಿ ಆಸೀನರಾಗುತ್ತಿದ್ದರು. ಏಳೂವರೆಯವರೆಗೂ ಅವರ ಹರಟೆ ಸಾಗುತ್ತಿತ್ತು. ನಂತರ ನಿಧಾನಕ್ಕೆ ಎಲ್ಲರೂ ತಂತಮ್ಮ ಮನೆಗಳತ್ತ […]

ಕವಡಿ ಈರಯ್ಯ..: ತಿರುಪತಿ ಭಂಗಿ

ನಮ್ಮೂರಲ್ಲಿ ದೇವರನ್ನ ನಂಬತಾರೋ ಬಿಡ್ತಾರೋ ಗೊತ್ತಿಲ್ಲ ಆದ್ರ ಕವಡಿ ಈರಯ್ಯನ ಮಾತಂತೂ ಯಾರೂ ಉಗಳ ಹಾಕಿ ದಾಟೂದಿಲ್ಲ. ಒಂದ ಲೆಕ್ಕದಾಗ ಹೇಳ್ಬೇಕಂದ್ರ ಕಣ್ಣಿಗೆ ಕಾಣುವ ದೇವ್ರಂದ್ರ ಅಂವ್ನ ಅಂತ ನಂಬಿದ ದಡ್ಡರೇನು ನಮ್ಮೂರಾಗ ಕಡಿಮಿಲ್ಲ. ಪಕ್ಕದ ರಾಜಗಳಾದ ಆಂದ್ರಪ್ರದೇಶ, ತಮೀಳನಾಡು, ಮಹರಾಷ್ಟದಿಂದ ಕಿಕ್ಕಿರದು ಮಂದಿ ಬರುದನ್ನು ಕಂಡು ಕೆಲವು ಪತ್ರಿಕೆಯವರು, ಟಿವಿ ಚಾನಲ್‍ದವರು ಈ ಕವಡಿ ಈರಯ್ಯನ ಸಂದರ್ಶನೂ ಮಾಡಿದ್ರು. “ನೀವ ಜನರ ದಿಕ್ಕ ತಪ್ಪಸಾಕತ್ತಿರೀ, ಮೂಢನಂಬಕೀನ ಜನರ ಮನಸನ್ಯಾಗ ಬಿತ್ತಾಕತ್ತಿರಿ” ಎಂದು ಅಬ್ಬರಸಿ ಬಂದು ದಡಕ್ಕ […]

ಗೆಳೆಯನಲ್ಲ (ಭಾಗ 1): ವರದೇಂದ್ರ ಕೆ.

ಕಮಲ ಬುದ್ಧಿವಂತೆ, ದಿಟ್ಟೆ ಜೊತೆಗೆ ಬಾಲ ವಿಧವೆ, ವಿವಾಹದ ಪರಿಕಲ್ಪನೆಯೂ ಇರದ ವಯಸ್ಸಲ್ಲಿ ಬಾಲ್ಯ ವಿವಾಹವಾಗಿ ಗಂಡನ ಉಸಿರನ್ನೂ ಸೋಕಿಸಿಕೊಳ್ಳದೆ, ತನ್ನ ಸೌಭಾಗ್ಯವನ್ನು ಅದರ ಮಹತ್ವ ಅರಿಯುವ ಮುನ್ನ ಕಳೆದುಕೊಂಡಾಕೆ. ತವರು ಮನೆಯೆಲ್ಲ ಸಂಪ್ರದಾಯಕ್ಕೆ ಕಟ್ಟು ಬಿದ್ದಿದ್ದರೂ ಓದಿಗೆ ಅಡ್ಡಿ ಆಗದ ಕಾರಣ, ಪದವೀಧರೆ ಆಗಿದ್ದಾಳೆ. ಪ್ರಾಯ ಬಂತು, ಪರಕಾಯ ಪ್ರವೇಶದಿಂದ ವಂಚಿತಳಾಗಿ; ಮನದ, ದೇಹದ ಭಾವನೆಗಳನ್ನು ಗಂಟು ಕಟ್ಟಿ ಎದೆಯೊಳಗೆ ಅಡಗಿಸಿಟ್ಟುಕೊಂಡಿದ್ದಾಳೆ. ಯಾರೂ ಅರಿಯದ ಕಮಲಳ ಭಾವನೆ, ತಂದೆ ತಾಯಿಯರ ಅರಿವಿಗೆ ಬರದಿರಲು ಸಾಧ್ಯವೇ? ತಂದೆಯ […]

ಅನುಭೂತಿಗೊಲ್ಲದ ಬಂಧ: ರೇವತಿ ಶೆಟ್ಟಿ

ಆರ್ದ ಮಳೆಯ ಆರ್ಭಟಕ್ಕೆ, ಅಂಗಳದ ತುಂಬೆಲ್ಲಾ ಹರಡಿ ಹಿಪ್ಪೆಯಾದ ಪಾರಿಜಾತ,ಹೆಂಚಿನ ಛಾವಣಿಯಿಂದ ಬೆಳ್ಳಿ ತಂತಿಯಂತೆ ಧೋ ಬೀಳೋ ಮಳೆಸಾಲು, ಪಡಸಾಲೆಯ ಮಧ್ಯದಲ್ಲಿ ನೀಲಾಂಜನ,ಅಲ್ಲೇ ಪಕ್ಕದಲ್ಲಿ ಉಸಿರು ಮರೆತು ಮಲಗಿದ ದೇಹ, ಗುಸುಗುಸು ಮಾತಿನೊಂದಿಗೆ ಅತ್ತಿಂದಿತ್ತ ಸುಳಿದಾಡುತ್ತಾ ಶವ ಸಂಸ್ಕಾರಕ್ಕೆ ತಯಾರಿಯಲ್ಲಿರುವ ಮನೆಯವರು. ಅಷ್ಟರಲ್ಲಿ ಮನೆಯ ಹಿರಿಯರೊಬ್ಬರು ನಿರ್ಧಾರದ ದನಿಯಲ್ಲಿ, ಏನೇ ಆಗಲಿ, ಶಂಕರಪ್ಪ ಕೊನೆಗಾಲದಲ್ಲಿ ಅಂತ ಖರೀದಿ ಮಾಡಿದ್ದ ಜಮೀನಲ್ಲೆ ಶವ ಸಂಸ್ಕಾರ ಮಾಡೋಣ, ಅವನ ಆತ್ಮಕ್ಕೂ ಶಾಂತಿ ಸಿಗತ್ತೆ ಅಂತ ಅನ್ನಿಸತ್ತೆ, ಏನಂತೀರಿ? ಅಂತ ಶಂಕರಪ್ಪನ […]

ಸಮಾಧಾನ: ಗಿರಿಜಾ ಜ್ಞಾನಸುಂದರ್

ಘಂಟೆ ರಾತ್ರಿ 8.30 ಆಗಿತ್ತು. ಕುಮುದಳ ಶಿಫ್ಟ್ ಮುಗಿದು ಅವಳು ತನ್ನ ಕಂಪ್ಯೂಟರ್ ಮುಚ್ಚುತ್ತಿದ್ದಳು. ಅಷ್ಟರಲ್ಲಿ ಮೂರ್ತಿ ಅಂಕಲ್ ನ ಕರೆ. ಅವಳಿಗೆ ಅವರ ಕರೆಯನ್ನು ಸ್ವೀಕರಿಸಲು ಮನಸ್ಸಿಲ್ಲ. ಹಾಗೆ ಸುಮ್ಮನೆ ಮೊಬೈಲ್ ಕಂಪಿಸುತ್ತಿತ್ತು. ತನ್ನ ಆಫೀಸ್ ನ ಕ್ಯಾಬ್ ಗಳು ನಿಲ್ಲುವ ಜಾಗಕ್ಕೆ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದಳು. 15 ನಿಮಿಷದಲ್ಲಿ ಅವಳಿಗೆ ಅವಳ ಕ್ಯಾಬ್ ಹಿಡಿದು ಕೂರಬೇಕಿತ್ತು. ಮತ್ತೊಮ್ಮೆ ಮೂರ್ತಿ ಅಂಕಲ್ ನ ಕರೆ. ಅವಳಿಗೆ ಇಷ್ಟವೇ ಇಲ್ಲದ ಕರೆ. ಸುಮ್ಮನಾದಳು. ಕ್ಯಾಬ್ ಹಿಡಿದು […]

ನಾನು ಅವನಲ್ಲ!: ಜೆ.ವಿ.ಕಾರ್ಲೊ

ಹಿಂದಿ ಮೂಲ: ಮುನ್ಶಿ ಪ್ರೇಮಚಂದ್ ಇಂಗ್ಲಿಶಿನಿಂದ: ಜೆ.ವಿ.ಕಾರ್ಲೊ ಇದು, ಹಿಂದಿನ ದಿನ ನಾನು ಕುದುರೆ ಗಾಡಿಯಲ್ಲಿ ಪೇಟೆಗೆ ಹೋಗುತ್ತಿದ್ದಾಗ ನಡೆದ ಘಟನೆ. ಗಾಡಿ ಸ್ವಲ್ಪ ಮುಂದೆ ಹೋಗಿತ್ತಷ್ಟೇ. ಯಾರೋ ಕೈ ಅಡ್ಡ ಹಾಕಿ ಗಾಡಿಯನ್ನು ಹತ್ತಿಕೊಂಡ. ಅವನನ್ನು ಹತ್ತಿಸಿಕೊಳ್ಳಲು ಗಾಡಿಯವನಿಗೆ ಸ್ವಲ್ಪವೂ ಇಷ್ಟವಿರಲಿಲ್ಲವಾದರೂ ಬೇರೆ ದಾರಿ ಇರಲಿಲ್ಲ. ಹತ್ತಿದವನು ಒಬ್ಬ ಪೊಲೀಸ್ ಆಫೀಸರನಾಗಿದ್ದ. ಕೆಲವು ಖಾಸಗಿ ಕಾರಣಗಳಿಂದಾಗಿ ಖಾಕಿ ಧರಿಸಿದವರೆಂದರೆ ನನಗೆ ಮೊದಲಿನಿಂದಲೂ ಅಷ್ಟಕಷ್ಟೇ. ಅವರ ನೆರಳು ಕಂಡರೂ ದೂರ ಓಡಿಹೋಗುತ್ತೇನೆ! ಗಾಡಿಯ ಒಂದು ತುದಿಗೆ ಕುಳಿತು […]

ಕೊರೋನಾ ಕಾಲುಗಳು!: ಎಸ್.ಜಿ.ಶಿವಶಂಕರ್

ಏನು? ಕೊರೊನಾಕ್ಕೂ ಕಾಲುಗಳಿವೆಯೆ ಎಂದು ಹುಬ್ಬೇರಿಸಬೇಡಿ. ನಾನೀಗ ಹೇಳುತ್ತಿರುವುದು ಕೊರೋನಾ ಲಾಕ್ಡೌನ್ ಸಮಯದಲ್ಲಿ ಬರುತ್ತಿದ್ದ ಫೋನ್ ಕಾಲುಗಳ ಬಗೆಗೆ! ಕೊರೋನಾ ಮಾರಿ ಇಡೀ ವಿಶ್ವವನ್ನೇ ನಡುಗಿಸಿ, ಸಾವಿನ ಗಾಣದಲ್ಲಿ ಹಾಕಿ ಅರೆಯುತ್ತಿರೋವಾಗ ಅನಿವಾರ್ಯವಾಗಿ ಲಾಕ್‍ಡೌನ್ ಅಮರಿಕೊಂಡಿದೆ! ಎಲ್ಲೆಲ್ಲೂ ಲಾಕ್‍ಡೌನ್!! ಅಲ್ಲೂ ಲಾಕ್ಡೌನ್! ಇಲ್ಲೂ ಲಾಕ್‍ಡೌನ್, ಎಲ್ಲಾ ಕಡೆಯೂ ಲಾಕ್‍ಡೌನ್! ವಾರವೊ, ಹದಿನೈದು ದಿನವೊ ಆಗಿದ್ದರೆ ಹೇಗೋ ಜನ ತಡ್ಕೋಬಹುದು. ಅದು ತಿಂಗಳುಗಳನ್ನೂ ಮೀರಿ, ವಿಸ್ತರಿಸುತ್ತಾ..ವಿಸ್ತರಿಸುತ್ತಾ..ಮನೆಯೊಳಗೆ ಧಿಗ್ಭಂದಿಯಾದ ಜನ ಹೇಗೆ ಕಾಲ ಕಳೀಬೇಕೂಂತ ಪರಿತಪಿಸೋ ಹಾಗಾಗಿಬಿಡ್ತು. ಟಿ.ವಿ ವಾಹಿನಿಗಳೂ […]

ಅಳಿಯದ ಸಂಬಂಧ: ಶೀಲಾ ಎಸ್. ಕೆ.

“ಅಂಜು, ಅಂಜು‌” ಎಂದು ಹೊರಗಡೆಯಿಂದ ಬಂದ ಕೂಗಿಗೆ, “ಅಮ್ಮಾ ಸಂತು ಬಂದ ನಾನ್ ಶಾಲೆಗೆ ಹೊರಟೆ ಬಾಯ್” ಎಂದು ಒಳಗಿನಿಂದ ತುಂಟ ಹುಡುಗಿ ಓಡಿ ಬಂದಳು. ತಿಂಡಿ ತಿಂದು ಹೋಗು ಎಂದು ಕೂಗಿದ ಅಮ್ಮನ ದನಿ ಕಿವಿಯ ಮೇಲೆ ಬೀಳಲೇ ಇಲ್ಲ. “ಇವತ್ತು ತಿಂಡಿ ತಿನ್ನದೆ ಬಂದ್ಯ ? ನನ್ನ ಬೈಸೋಕೆ ಹೀಗೆ ಮಾಡ್ತೀಯ” ಎಂದು ದಿನದ ಮಾತು ಆರಂಭಿಸಿದ ಸಂತು. ಯಥಾಪ್ರಕಾರ ಇದಕ್ಕೆ ಕಿವಿಕೊಡದ ಪೋರಿ “ಫಸ್ಟ್‌ ಪೀರಿಯಡ್ ಗಣಿತ ಇದೆ ಹೋಮ್ ವರ್ಕ್ ಮಾಡಿದ್ಯ” […]

ಪುಟ್ರಾಜು: ಅಭಿಜಿತ್. ಎಮ್

ಪುಟ್ರಾಜುಗೆ ಪರೀಕ್ಷೆ ಹತ್ತಿರ ಬಂದಿದೆ. ಪುಸ್ತಕ ಹಿಡಿದು ಓದಲು ಕುಳಿತರೆ ಭಯ ಮನಸ್ಸು, ಮೆದುಳನ್ನು ಆವರಿಸುತ್ತದೆ. ಐದನೇ ತರಗತಿಯಲ್ಲಿ ಓದುತ್ತಿರುವ ಪುಟ್ರಾಜು ಗೆ ಈ ಬಾರಿಯೂ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಗಳಿಸಿದರೆ ಏನಪ್ಪಾ ಗತಿ ಅನ್ನುವುದೇ ಚಿಂತೆಯಾಗಿರುತ್ತದೆ. ಶಾಲೆಯಲ್ಲಿ ಟೀಚರ್ ಗಳು, ಮನೆಯಲ್ಲಿ ಹೆತ್ತವರ ಬೈಗುಳ ತಿಂದು. . ತಿಂದು. . . ಹೈರಾಣಾಗಿರುತ್ತಾನೆ. ಅದಕ್ಕೆ ಓದಲು ಕುಂತರೂ ಪುಟ್ರಾಜುಗೆ ಅದೇ ಚಿಂತೆ. ಜಾಸ್ತಿ ಅಂಕ ಹೇಗೆ ಗಳಿಸುವುದು ಎಂದು ಆಲೋಚಿಸುತ್ತಿರುತ್ತಾನೆ. ಅವನ ತಲೆಯಲ್ಲಿ ಹಲವಾರು […]