Facebook

Archive for the ‘ಕಾದಂಬರಿ’ Category

ಕೆಂಗುಲಾಬಿ (ಭಾಗ 13): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಅವತ್ತು ಪೂರ್ತಿ ನಾನು ರೂಮಿನಲ್ಲಿ ಏಳಲೂ ಆಗದೆ ಮಲಗಲು ಆಗದೆ ಬಿದ್ದುಕೊಂಡಿದ್ದೆ. ಕಿವಿಯಲ್ಲಿ ಶಾರಿಯ ಮಾತುಗಳೆ ಗುಂಯ್ಗುಡುತ್ತಿದ್ದವು. ಒಂದಿಷ್ಟು ಮಂಪರು, ಒಂದಿಷ್ಟು ಅರೆ ಎಚ್ಚರ ಮತ್ತೆ ಮಂಪರು. ಶಾರಿ ಬದುಕಿನ ಗೋಳಿಗೆ ಇತಿಶ್ರೀ ಹಾಡುವುದೆಂತು ಎಂದು ಯೋಚಿಸಿದ್ದೇ ಬಂತು. ಒಮ್ಮೊಮ್ಮೆ ನೆಮ್ಮದಿಯಿಂದ ಇರುವ ನಾನು ಶಾರಿಯ ಗದ್ದಲದಲ್ಲಿ ಯಾಕೆ ಸಿಲುಕಿಕೊಳ್ಳಬೇಕು? ನಾನು ಮೊದಲಿನಂತಾಗಬೇಕಾದರೆ ಶಾರಿಯನ್ನು ಮತ್ತೆ ಭೇಟಿಯಾಗಲೇಬಾರದು ಎನಿಸಿತು. ಆದ್ರೆ ಮನಸ್ಸಿಗೆ ಒಗ್ಗಲಿಲ್ಲ. ವರದಿ ತಯಾರಿಸಿಕೊಂಡು ಬಾ ಎಂದ ರಾಜನ್ ಹೇಳಿದ್ದು ನೆನಪಾಯಿತು. ಈಗ ಆಗಿರೋದನ್ನ […]

ಕೆಂಗುಲಾಬಿ (ಭಾಗ 12): ಹನುಮಂತ ಹಾಲಿಗೇರಿ

  ಇಲ್ಲಿಯವರೆಗೆ   ಮರುದಿನ ನಮ್ಮನ್ನು ಹುಡುಕಿಕೊಂಡು ರತ್ನಮ್ಮನ ಪ್ರಿಯಕರನೆನಿಸಿಕೊಂಡಿದ್ದ, ರತ್ನಮ್ಮ ಇಲ್ಲದಿದ್ದಾಗ ಗಲ್ಲೆ ಮೇಲೆ ಕೂಡ್ರುತ್ತಿದ್ದ ಧರ್ಮಣ್ಣ ಪೊಲೀಸ್ ಸ್ಟೇಷನ್ನಿನೊಳಗೆ ನಾವಿರುವ ಕಡೆ ಬಂದಿದ್ದ. ಆತನನ್ನು ಅದ್ಹೇಗೋ ಪೋಲೀಸರು ಒಳಗೆ ಬಿಟ್ಟಿದ್ದರು. ಇಲ್ಲಿಂದ ಬಿಡಿಸಿಕೊಂಡು ಹೋಗಲು ಸಾವಿರಾರು ರೂಪಾಯಿ ಖರ್ಚಾಗುತ್ತವೆ. ರತ್ನಮ್ಮ ಹತ್ತು ಸಾವಿರ ಹೊಂದಿಸಿ ನಿಮ್ಮನ್ನು ಬಿಡಿಸಿಕೊಳ್ಳಾಕ ತಯಾರದಾಳ. ನೀವು ಮೇಲಿನ ಖರ್ಚುಗಳಿಗಾಗಿ ಪ್ರತಿಯೊಬ್ಬರು ಐದೈದು ನೂರು ಕೊಡಬೇಕು ಎಂದು ಕರಾರು ಮಾಡಿದ. ಆದರೆ ನಮ್ಮಲ್ಲಿ ಯಾರೊಬ್ಬರಲ್ಲಿಯೂ ಹಣವಿರಲಿಲ್ಲ. ಅದು ಅವನಿಗೂ ಗೊತ್ತಿತ್ತು. ‘ಈಗ […]

ಕೆಂಗುಲಾಬಿ (ಭಾಗ 11): ಹನುಮಂತ ಹಾಲಿಗೇರಿ

  ಇಲ್ಲಿಯವರೆಗೆ ಯಾರೋ ಬಾಗಿಲು ಬಡಿದಂತಾಗಿ ಅವಸರವಾಗಿ ಮೇಲೆದ್ದು, ಮಲಗಿದ್ದ ಮಗುವನ್ನು ಎತ್ತುಕೊಂಡು ಹೊರ ಬಂದೆ. ಒಂದಿಬ್ಬರು ಗಿರಾಕಿ ಬಂದಿದ್ದರು. ಈ ಸಲ ವಠಾರದ ಮುಂದಿರುವ ಗಲ್ಲೆ ಮೇಲೆ ರತ್ನಮ್ಮ ಕುಳಿತಿದ್ದಳು. ನಾನು ಮಗುವನ್ನು ಎತ್ತಿಕೊಂಡು ಬಾಗಿಲಲ್ಲಿ ನಿಂತುಕೊಂಡಿದ್ದೆ. ರತ್ನಮ್ಮ ನನ್ನನ್ನು ಕೆಕ್ಕರಿಸಿ ನೋಡುತ್ತಿದ್ದುದರಿಂದ ನನಗೆ ಮುಜುಗರವಾಗುತ್ತಿತ್ತು.    ಗಿರಾಕಿ ತಮ್ಮಿಷ್ಟದ ಹುಡುಗಿಯರನ್ನು ಆಯ್ದುಕೊಂಡು ರೂಮಿನೊಳಕ್ಕೆ ಮಾಯವಾದರು. ಅವರು ಒಳ ಹೋದ ತಕ್ಷಣ ನನ್ನಲ್ಲಿಗೆ ಬರಬರನೆ ಬಂದ ರತ್ನಮ್ಮ ನನ್ನ ರಟ್ಟೆಯನ್ನು ಹಿಡಿದುಕೊಂಡು ದರ ದರ ಎಳೆಯುತ್ತ […]

ಕೆಂಗುಲಾಬಿ (ಭಾಗ 10): ಹನುಮಂತ ಹಾಲಿಗೇರಿ

  ಇಲ್ಲಿಯವರೆಗೆ   ಅವತ್ತು ಹಾಗೆ ಆತ್ಮೀಯಳಾದ ಅವಳು ಸ್ವಲ್ಪ ದಿನಗಳವರೆಗೆ ಆಶ್ರಯದಾತಳು ಆದಳು. ತನ್ನ ಕಥೆಯನ್ನೆಲ್ಲ ಹೇಳಿಯಾದ ಮೇಲೆ ನನ್ನ ಕಥೆಯನ್ನು ಕೇಳಿದ ಅವಳು, ನಾನು ಕೂಡ ದಂಧÉಗೆ ಹಳಬಳೇ ಎಂಬುದನ್ನು ಅರ್ಥ ಮಾಡಿಕೊಂಡಾದ ಮೇಲೆ ‘ನಮ್ಮ ರತ್ನಮ್ಮನ ದಂಧೆಮನೆಗೆ ನೀನು ಸೈತ ಬರುವುದಾದರೆ ಬಾ' ಎಂದು ಕರೆದಳು. ಮರುಕ್ಷಣ ‘ಬೇಡ ಬೇಡ ನನ್ನ ಮಗನಿಗಾದ ದುರ್ಗತಿಯೇ ನಿನ್ನ ಮಗಳಿಗೂ ಆಗಬಹುದು, ಇಲ್ಲವೇ ನಿನ್ನ ಮಗಳನ್ನು ಸ್ವಲ್ಪ ದೊಡ್ಡವಳಾದ ತಕ್ಷಣವೆ ದಂಧೆಗೆ ಇಳಿಸಿಬಹುದು. ಈ ಕೂಪದಲ್ಲಿ […]

ಕೆಂಗುಲಾಬಿ (ಭಾಗ 9): ಹನುಮಂತ ಹಾಲಿಗೇರಿ

ಇಲ್ಲಿಯವರೆಗೆ ಆ ಕಡೆಯಿಂದ ಒಮ್ಮಿಂದೊಮ್ಮೆಲೆ ಗಲಾಟೆ ಶುರುವಾಯಿತು. ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಕರ್ಚೀಫ್ ಅಂಗಡಿಯವನು ಕರ್ಚೀಫ್‍ಗಳೆಲ್ಲವನ್ನು ಬಾಚಿ ಎದೆಗೊತ್ತಿ ಓಡತೊಡಗಿದ. ಬಾಚಣಿಕೆ, ಕನ್ನಡಿ, ಬ್ರಷ್, ಸೀರಣಿಗೆ ಮಾರುತ್ತಿದ್ದ ಸಲೀಮ ಹರವಿದ್ದ ಪ್ಲಾಸ್ಟಿಕ್ ಕವರನ್ನೆ ಮಡಚಿ ಬಗಲಲ್ಲಿಟ್ಟುಕೊಂಡು ಮೆಲ್ಲನೆ ಕಾಲುಕಿತ್ತ. ಅದೆಲ್ಲೆಲ್ಲಿಂದಲೋ ಹೊಂದಿಸಿದ್ದ ಸೆಕೆಂಡ್ ಹ್ಯಾಂಡ್ ಚಪ್ಪಲಿಗಳನ್ನು ರಾಶಿ ಹಾಕಿ ಹರಾಜು ಹಾಕುತ್ತಿದ್ದ ರಾಜು ಒಂದೇ ಉಸಿರಿಗೆ ಗೋಣಿ ಚೀಲಕ್ಕೆ ಎಲ್ಲಾ ಚಪ್ಪಲಿಗಳನ್ನು ತುರುಕಿ ಹೊರಲಾರದೆ ಹೊತ್ತು ಅವಸರದಿಂದ ನಡೆಯತೊಡಗಿದ. ಎಲ್ಲವೂ ಕ್ಷಣಾರ್ಧದಲ್ಲಿಯೇ ನಮ್ಮ ಕಣ್ಮಂದೆ ನಡೆಯುತ್ತಿತ್ತು. […]

ಕೆಂಗುಲಾಬಿ (ಭಾಗ 8): ಹನುಮಂತ ಹಾಲಿಗೇರಿ

ಹಿಂದಿನ ಸಂಚಿಕೆಯಿಂದ… ಸುಮಾರು ಮುಕ್ಕಾಲು ಗಂಟೆ ಕಳೆದಿರಬಹುದು. ಏಳೆಂಟು ವರ್ಷದ ಹುಡುಗಿ ಏದುಸಿರು ಬಿಡುತಾ ಓಡೋಡಿ ಬಂದು ನನ್ನನ್ನು ಹೌದು ಅಲ್ಲವೋ ಎಂದು ಅನುಮಾನಿಸುತಾ "ಅಂಕಲ್ ಅವ್ವ ಕರಿತಿದಾರೆ" ಎಂದಿತು. ನಾನು ಆ ಮಗುವನ್ನು ಹಿಂಬಾಲಿಸುತ್ತಾ ಮಾತಿಗಿಳಿದೆ. ’ಪುಟ್ಟಿ ನಿನ್ನ ಹೆಸರು?’ ’ರಾಜಿ’ ಎಂದಿತು ನಾಚಿಕೊಂಡು. ’ನಿಮ್ಮ ಪಪ್ಪಾ ಎಲ್ಲಿದ್ದಾರೆ ರಾಜಿ?’ ’ಗೊತ್ತಿಲ್ಲ, ನಾ ಸಣ್ಣವಳಿದ್ದಾಗ ದಿನ ಕುಡಿದು ಬಂದು ಮಮ್ಮಿನ ಹೊಡಿತಿದ್ರು. ಆಗ ಅವ್ವ ಅಳತಿದ್ಲು. ಈಗೆಲ್ಲಿದ್ದಾರೋ ಗೊತಿಲ್ಲ. ಆದರೆ ಈಗ ದಿನಾಲೂ ಮನೆಗೆ ಹೊಸ […]

ಕೆಂಗುಲಾಬಿ (ಭಾಗ 7): ಹನುಮಂತ ಹಾಲಿಗೇರಿ

ಹಾವೇರಿಯ ಸಂವರ್ಧನ ಎನ್‍ಜಿಓದಲ್ಲಿ ನನಗೆ ತರಬೇತಿಯಾದ ಮೇಲೆ ಹಾವೇರಿ ಮೂಲೆಯೊಂದರಲ್ಲಿರುವ ಹಳ್ಳಿಯ ಸ್ವಸಹಾಯ ಸಂಘಗಳ ಸಮುದಾಯ ಅಧಿಕಾರಿ ಎಂದು ಕಳುಹಿಸಿಕೊಟ್ಟಿದ್ದರು. ನಾನು ಹಲಗೇರಿಗೆ ಬಂದಿಳಿದಾಗ ನನ್ನನ್ನು ಆ ಸುಡು ಬಿಸಿಲಿನಲ್ಲಿ ಎದುರುಗೊಂಡವನು ತಿಪ್ಪೇಶಿ. ಅವನು ಅಲ್ಲಿ ನನಗೆ ಆ ಹಳ್ಳಿಯ ಮಾಹಿತಿ ನೀಡುವ ಫೀಲ್ಡ್ ಗೈಡ್ ಆಗಿ ಕೆಲಸ ಮಾಡತಿದ್ದ. ನಮ್ಮ ಸಂಸ್ಥೆ ಕೆಲಸ ಮಾಡುವ ಪ್ರತಿ ಹಳ್ಳಿಯಿಂದಲೂ ತಿಪ್ಪೇಶಿಯಂತಹ ಒಬ್ಬರನ್ನು ಸಂಘಗಳ ಅಧಿಕಾರಿ ಎಂದು ನೇಮಿಸಿಕೊಂಡಿರುತ್ತಿದ್ದರು. ತಿಪ್ಪೇಶಿ ಹೊರಲಾರದಂತಹ ನನ್ನ ಎರಡು ಬ್ಯಾಗುಗಳನ್ನು ಹೆಗಲಿಗೆ ನೇತು […]

ಕೆಂಗುಲಾಬಿ (ಭಾಗ 6): ಹನುಮಂತ ಹಾಲಿಗೇರಿ

[ಇಲ್ಲಿಯವರೆಗೆ…] ಈ ಎಲ್ಲ ವಿವರಗಳನ್ನು ಸವಿವರವಾಗಿ ಬರೆದುಕೊಂಡು ನಾನು ರಾಜನ್ ಸರ್ ಚೇಂಬರಿಗೆ ಹೋದೆ. ನನ್ನ ವರದಿ ಮೇಲೆ ಸುಮ್ಮನೆ ಒಮ್ಮೆ ಕಣ್ಣಾಡಿಸಿದ ಅವರು ನನ್ನ ಕಡೆ ಒಂದು ಮೆಚ್ಚುಗೆಯ ನೋಟ ಬೀರಿ, ’ವೆರಿ ಗುಡ್ ಮಲ್ಲೇಶಿ. ಆದ್ರೆ, ನೀನು ಈ ದಂದೆಯ ಬಗ್ಗೆ ಇನ್ನಷ್ಟು ತಿಳಕೊಬೇಕಾದರೆ ಒಂದಿಷ್ಟು ದಂದೆಯಲ್ಲಿದ್ದ ಮಹಿಳೆಯರನ್ನು ಮಾತಾಡಿಸಬೇಕಿತ್ತು’ ಎಂದು ನನ್ನ ಕಣ್ಣುಗಳನ್ನು ಕೆಣಕಿದರು. ’ನಾನು ಮಾತಾಡಿಸಬೇಕೆಂದೇ ಆ ನಡು ವಯಸ್ಸಿನವಳ ಹಿಂದ್ಹಿಂದೆ ಹೋಗಿ ಆಟೊ ಹತ್ತಿದ್ದು ಸರ್. ಆದ್ರೆ, ನ್ನನ್ನು ಅವರು […]

ಕೆಂಗುಲಾಬಿ (ಭಾಗ 5): ಹನುಮಂತ ಹಾಲಿಗೇರಿ

ಹುಬ್ಬಳ್ಳಿಯೊಳಗ ಮಂಡೇ ಬಜಾರಕ ದೊಡ್ಡ ಹೆಸರು. ಅವತ್ತು ಸೋಮವಾರವಾದ್ದರಿಂದ ಮಂಡೇ ಬಜಾರ್‌ನತ್ತ ಹೆಜ್ಜೆ ಬೆಳೆಸಿದೆ. ಇಲ್ಲಿ ೧೦ ರೂ.ಗಳಿಗೆ ಏನಿಲ್ಲ, ಏನುಂಟು. ಒಂದೊಳ್ಳೆಯ ಅಂಗಿ, ಹವಾಯಿ ಚಪ್ಪಲಿ, ಲುಂಗಿ, ಟವೆಲ್ಲು, ಒಳ ಉಡುಪು, ಬಾಂಡೆ ಸಾಮಾನುಗಳು ಏನೆಲ್ಲವನ್ನು ಖರೀದಿಸಬಹುದು. ಆದರೆ ಇವೆಲ್ಲ ಸೆಕೆಂಡ್ ಹ್ಯಾಂಡ್‌ಗಳು, ನಿಜವಾಗಿ ಹೇಳಬೇಕೆಂದರೆ ಜಾತ್ಯತೀತತೆ ಆಚರಣೆಗೆ ಮಂಡೆ ಬಜಾರ್ ಒಂದು ಸಂಕೇತವಿದ್ದಂತೆ. ಇಲ್ಲಿನ ಒಳ ಉಡುಪುಗಳನ್ನು ಮೊದಲ್ಯಾರೋ ಧರಿಸಿರತಾರೆ. ಈಗ ಅದು ಮತ್ಯಾರ ಮೈಗೋ ಅದು ಅಂಟಿಕೊಂಡು ಅವರ ಬೆವರು ವಾಸನೆಗೆ ಹೊಂದಿಕೊಳ್ಳುತ್ತದೆ. […]

ಕೆಂಗುಲಾಬಿ (ಭಾಗ 4): ಹನುಮಂತ ಹಾಲಿಗೇರಿ

(ಹಿಂದಿನ ಭಾಗ ಇಲ್ಲಿದೆ) ಅವತ್ತು ಉಜ್ಜಳಪ್ಪನ ಜಾತ್ರಿ ಈ ಮೊದಲಿನಂಗ ಅದ್ದೂರಿಯಾಗಿಯ ನಡೆದಿತ್ತು. ಸುತ್ತು ಊರು ಕೇರಿಯವರೆಲ್ಲ ಸೇರಿದ್ದರು. ದೇವರಿಗೆ ಬಿಡುವ ಹುಡುಗಿರನ್ನು ಉಜ್ಜಳಪ್ಪನ ಮುತ್ಯಾನ ಗುಡಿಯೊಳಗ ಇರೋ ಅಂತಪುರಕ್ಕೆ ಹೋಗಿ ಅಲ್ಲಿ ಹುಡುಗಿಯರ ಗುಪ್ತಾಂಗವನ್ನು ಗಾಯಗೊಳಿಸುವ ಪದ್ದತಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಕೆಲವು ಪ್ರತಿಭಟನಾಕಾರರ ಪ್ರಯತ್ನದಿಂದಾಗಿ ನಿಂತಿತ್ತಾದರೂ ಹುಡುಗಿಯರನ್ನು ದೇವರಿಗೆ ಬಿಡೋದು ಮತ್ತು ಪ್ರಾಣಿಗಳನ್ನು ಬಲಿ ಕೊಡೋದು ಇನ್ನು ಮುಂದುವರೆದಿತ್ತು. ಅಂದು ಉಜ್ಜಳಪ್ಪನ ಅಣ್ಣ ತಮ್ಮಂದಿರು ಸಂಬಂಧಿಕ ದೇವರುಗಳನ್ನು ಸುತ್ತಲಿನ ಹಳ್ಳಿಯ ಭಕ್ತರು ಪಲ್ಲಕ್ಕಿಗಳಲ್ಲಿ ಹೊತ್ತು ತಂದಿದ್ದರು. […]