ಹೀಗೊಂದು ಗೆಳೆಯರ ಬಳಗ!: ಗುರುಪ್ರಸಾದ ಕುರ್ತಕೋಟಿ

ಮುಂಜ ಮುಂಜಾನೆ ಒಳ್ಳೆ ಸಕ್ಕರಿ ನಿದ್ದಿಯೊಳಗ ಕನಸ ಕಾಣ್ಲಿಕತ್ತಾಗ  ನನ್ನ ಫೋನು ಒದರಲಿಕ್ಕೆ ಶುರು ಹಚ್ಚಿಗೊಂಡು ನನಗ ಒದ್ದು ಎಬ್ಬಿಸ್ತು. ಹೊತ್ತಿಲ್ದ ಹೊತ್ತ್ನ್ಯಗ ಫೋನ್ ಮಾಡಾಂವ್ ಅಂದ್ರ ಪ್ರಶಾಂತ ನ್ನ ಬಿಟ್ಟು ಬ್ಯಾರೆ ಯಾರೂ ಇರ್ಲಿಕ್ಕೆ ಸಾಧ್ಯ ಇಲ್ಲ ಅಂತ ಕನಸಿನ್ಯಾಗನ ಡಿಸೈಡ್ ಮಾಡಿ ಎದ್ದು ನೋಡಿದ್ರ, ಅದು ಅವಂದ ಫೋನು!  "ಹೇಳಪಾ…" ಅಂದದ್ದಕ್ಕ, "ಯಾಕ್ರೀ ಸರ್ರ್ ಇನ್ನೂ ಮಲಗಿದ್ರೇನು" ಅಂತ ಹೇಳಿ ನಿದ್ದಿ ಕೆಟ್ಟಿದ್ದಕ್ಕ ಸಿಟ್ಟಿನ್ಯಾಗ ಬುಸಗುಡಕೋತ ಎದ್ದಂವ್ ಗ ಮತ್ತೊಂದಿಷ್ಟು ಸಿಟ್ಟು ಬರ್ಸಿದಾ. "ಇಲ್ಲಪಾ… … Read more

ಚೈತ್ರಳೆಂಬ ಚಿಗುರೆ ಮರಿ ಚಿಗುರಿದ ಹೊತ್ತು: ಷಡಕ್ಷರಿ ತರಬೇನಹಳ್ಳಿ

ಕಳೆದ ಕೆಲವು ತಿಂಗಳುಗಳಿಂದ ನಮ್ಮ ಮನೆಯಲ್ಲಿ ಯಾರು ಮಾತನಾಡಿದರೂ ಅವಳು ಗರ್ಭದರಿಸಿದ ಬಗ್ಗೆಯೇ ಚರ್ಚೆ. ಅವಳು ನಮ್ಮ ಮನೆಗೆ ಬಂದು ಎಷ್ಟು ತಿಂಗಳುಗಳಾದವು? ಆದರೂ ಯಾಕೆ ಅವಳು ಇನ್ನೂ ಮರಿ ಹಾಕಲಿಲ್ಲ? ಎಂಬೆಲ್ಲ ಅನೇಕರ ತೀರದ ಕುತೂಹಲಗಳಿಗೆ ಉತ್ತರವೆಂಬಂತೆ ಅವಳು ಗರ್ಭದರಿಸಿದ ಸೂಚನೆ ನೀಡಿ ನಮ್ಮೆಲ್ಲರ  ಪ್ರಶ್ನೆಗಳಿಗೆ ಉತ್ತರಿಸಿದ್ದಳು. ಅವಳು ನಮ್ಮ ಮನೆಗೆ ಬಂದ ಮೊದಲ ದಿನಗಳ ನೆನಪು ಇನ್ನೂ ಹಸಿರಾಗಿದೆ. ಇವಳ ಅಕ್ಕ ನನ್ನವಳ ತವರೂರಿನಿಂದ ಬಂದ ಶ್ವೇತ ನಮ್ಮ ತೋಟದಲ್ಲಿ ಅಂಡಲೆದು ಹಸಿರುಕ್ಕುವ ಸೊಪ್ಪು … Read more

ಹರಟೆ ಕಟ್ಟೆಯ ಪದ್ಮಜಾ: ನಾಗರತ್ನಾ ಗೋವಿಂದನ್ನವರ

ಸುಮಾ : ಏನ್ರಿ ಆಶಾ ಇಷ್ಟೊತ್ತಾಯಿತು ಇನ್ನು ಪದ್ಮಜಾರ ಸುದ್ದಿನೇ ಇಲ್ಲಾ.   ಆಶಾ : ಹೌದು ಯಾಕೊ ಏನೋ ಇಷ್ಟೊತ್ತಾಯಿತು ಇನ್ನು ಬಂದಿಲ್ಲ ಅವರಿಲ್ಲ ಅಂದ್ರ ನಮ್ಮ ಹರಟೆ ಕಟ್ಟೆಗೆ ಕಳಾನ ಇರುದುಲ್ಲ ನೋಡ್ರಿ. ಸುಮಾ : ನೀವು ಹೇಳುವುದು ಖರೇ ಅದ ಏನರ ಹೊಸ ಸುದ್ದಿ ಚರ್ಚಾ ಮಾಡಾಕ ಸಿಗ್ತದ ಅಂದ್ರ ಅದು ಅವರಿಂದಾನ ಸಿಗೋದು ಅದಕ ಮತ್ತ ನಾವೆಲ್ಲ ಅವರನ್ನ ಹರಟೆ ಕಟ್ಟೆ ಪದ್ಮಜಾ ಅಂತ ಕರೆಯುದು…. ಹಾ ಹಾ ಹಾ!  ಅಲ್ಲಿ … Read more

ಕನ್ನಡೋದ್ಧಾರ!: ಗುರುಪ್ರಸಾದ್ ಕುರ್ತಕೋಟಿ

ಮದುವೆಯಾಗಿ ಬೆಂಗಳೂರಿಗೆ ಬಂದಮೇಲೆ ಇನ್ನೂ ಒಂದು ಸಲಾನೂ ಸಿನಿಮಾಗೇ ಕರೆದುಕೊಂಡು ಹೋಗಿಲ್ಲಾ ಅಂತ ಅವತ್ಯಾಕೋ ಅನಿರೀಕ್ಷಿತವಾಗಿ ನೆನಪಾಗಿ ಜಾನು ರಂಪ ಮಾಡಿಕೊಂಡಿದ್ದಳು. ಗಪ್ಪಣ್ಣನಿಗೆ ಅವಳ್ಯಾಕೋ ಸಿಕ್ಕಾಪಟ್ಟೆ ತವರನ್ನು ಮಿಸ್ ಮಾಡಿಕೊಳ್ಳುತ್ತಿರಬಹುದೇ ಎಂದು ಅನಿಸಿತಾದ್ದರಿಂದ, ತಡ ಮಾಡದೇ … "ಅದಕ್ಕೇನಂತ ಇವತ್ತ ಹೋಗೋಣ ನಡಿ" ಅಂದು ಜಾನುನಲ್ಲಿ ಜಾನ್ ತಂದ! ಕೂಡಲೇ ಜಾನು ಕಾರ್ಯಪ್ರವೃತ್ತಳಾಗಿ, ಪಲ್ಲಂಗದ ಕೆಳಗಿನ ಮೂಲೆಯಲ್ಲಿ ಜೋಪಾನವಾಗಿ ಎಸೆದಿದ್ದ ಅವತ್ತಿನ ಪೇಪರ್ ಅನ್ನು ಎತ್ತಿ ತಂದು ಅದರಲ್ಲಿನ ಸಾಪ್ತಾಹಿಕ ಪುರವಣಿಯಲ್ಲಿದ್ದ ಅಸಂಖ್ಯಾತ ಸಿನಿಮಾಗಳ ಯಾದಿಯಲ್ಲಿ ಒಂದಕ್ಕೆ … Read more

ರಾಮಂದ್ರ: ಹರಿ ಪ್ರಸಾದ್

ರಾಮಮಂದಿರ ಅಂದರೆ ಏನೇನೋ ಚಿತ್ರಗಳು ಮೂಡುವ ಈ ಕಾಲದಲ್ಲಿ, ನನಗಂತೂ ನಮ್ಮ ಸೋದರತ್ತ್ತೆ  ಊರಿನ ಮಧ್ಯದಲ್ಲಿದ್ದ ರಾಮಮಂದಿರವೇ ಕಣ್ಮುಂದೆ ಬರುತ್ತದೆ. ಸುಮಾರು ನೂರೈವತ್ತು ಮನೆಗಳ ಪುಟ್ಟ ಊರದು. ನನ್ನ ಬಾಲ್ಯ ಬಹುಪಾಲು ಕಳೆದಿದ್ದು ಆ ಊರಿನಲ್ಲೆ. ನನ್ನ ಬಾಲ್ಯದ ಅನೇಕ ಚಟುವಟಿಕೆಗಳು ಅದರ ಸುತ್ತಮುತ್ತ ಹರಡಿಹೋಗಿವೆ. ಆದ್ದರಿಂದ ಆ ಚಿತ್ರ ಮನಸಿನಿಂದ ಹೋಗಲೊಲ್ಲದು. ಕೆಮ್ಮಣ್ಣು ಗೋಡೆಯ ಅದರ ಒಳಭಾಗದಲ್ಲಿ ಇಪ್ಪತ್ತು ಜನ ಕೂರುವಷ್ಟು ಜಾಗ. ಈಚೆ ಪಡಸಾಲೆಯಲ್ಲಿ ಒಳಕ್ಕಿಂತ ತುಸು ಚಿಕ್ಕದಾದ ಜಾಗ. ಬೀದಿಭಾಗಕ್ಕೆ ಮರ ಮತ್ತು … Read more

ಹೀಗೊ೦ದು ವಧು ಪರೀಕ್ಷೆ: ಶ್ರೀವಲ್ಲಭ ಆರ್ ಕುಲಕರ್ಣಿ

ಇತ್ತಿತ್ಲಾಗ ಗ೦ಡಿಗೆ ಹೆಣ್ಣು ಹುಡುಕೋದು ಕಷ್ಟ ಆಗೇದ. ಹ೦ತಾದ್ರಾಗ ಗ೦ಡು ಸಾದಾ ಕೆಲಸದಾಗ ಇದ್ರ೦ತೂ ಯಾವ ಕಪಿ (ಕನ್ಯಾ ಪಿತೃ)ಗಳೂ ತಿರುಗಿ ಸುದ್ದಾ ನೊಡ೦ಗಿಲ್ಲ. ಮೊದ್ಲಿನ್ ಕಾಲದಾಗ ಗ೦ಡಿನ ಕಡೆಯ ಜ್ವಾಳದ ಚೀಲಾ ಎಣಿಸಿ ಅವರಿಗೆ ಬಾಳೆ ಮಾಡೋ ಶಕ್ತಿ ಎಷ್ಟರಮಟ್ಟಿಗೆ ಅದ ಅ೦ತ ಲೆಕ್ಕಾ ಹಾಕಿ ಹೆಣ್ಣು ಕೊಡ್ತಿದ್ರ೦ತ. ಗ೦ಡಿನ ಕಡೆಯವರು ರ೦ಗೋಲಿ ಕೆಳಗ ಹೋಗೊ ಮ೦ದಿ, ಅಕ್ಕ ಪಕ್ಕದವರ ಮನ್ಯಾಗಿನ ಜ್ವಾಳದ ಚೀಲಾ ಗುಳೇ ಹಾಕಿ ಮದುವಿ ಮಾಡ್ಕೋತಿದ್ರ೦ತ. ಕಪಿಗಳದೂ ಏನೂ ತಪ್ಪಿಲ್ಲಾ ಬಿಡ್ರಿ … Read more

ಸೀರೆ ಎಕ್ಸ್‌ಚೇಂಜ್: ರಶ್ಮಿ.ಆರ್. ಕುಲಕರ್ಣಿ

ಮಹಿಳೆಯರು ಒಂದು ಕಡೆ ಸೇರಿದರೆ ಅವರಲ್ಲಿ ಚರ್ಚಿಸುವ ಮುಖ್ಯವಾದ ವಿಷಯಗಳೆಂದರೆ, ಸೀರೆ ಮತ್ತು ಚಿನ್ನದ ವಡವೆಗಳು,ಚಿನ್ನದ ಬೆಲೆ ಗಗನಕ್ಕೇರಿದ ಮೇಲೆ ಸೀರೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು  ಕೊಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ವಿಶಿಷ್ಟವಾದ ಸ್ಥಾನ ನೀಡಲಾಗಿದೆ. ಹಿಂದಿನ ಕಾಲದಲ್ಲಿ ಒಂಭತ್ತು ವಾರಿ ಸೀರೆಗಳಿದ್ದವು,  ಮುಂದೆ ಆರು ವಾರಿ ಸೀರೆಗಳು ಬಂದವು. ಈಗೀಗ ರೆಡಿ ಸೀರೆಗಳು ಮಾರುಕಟ್ಟೆಗೆ ಬಂದಿವೆ. ಸಲ್ವಾರ ಕಮೀಜ,ಸೀರೆ ಜೊತೆಗೆ ಪೈಪೋಟಿಗಿಳಿದರೂ ಕೂಡ ಸೀರೆ ತನ್ನದೇ ಆದ  ಸ್ಥಾನ ಉಳಸಿಕೊಂಡಿದೆ ಎನ್ನುವದಕ್ಕೆ ನಮ್ಮ ಮಹಿಳೆಯರೇ ಸಾಕ್ಷಿ.   … Read more

ಸಾಲದ ವಿಷಯ (ಭಾಗ 1): ಸೂರಿ ಹಾರ್ದಳ್ಳಿ

ಕೆಲವರಿದ್ದಾರೆ, ಅವರಿಗೆ ಒಣ ಪ್ರತಿಷ್ಠೆ. ಯಾವುದೇ ಕಿವಿ ಸಿಕ್ಕರೂ, ಅದು ಮರದ್ದೇ ಆಗಿರಬಹುದು, ಮಣ್ಣಿನದ್ದೇ ಆಗಿರಬಹುದು, ಬೊಗಳೆ ಬಿಡುತ್ತಾರೆ: ತಾನು ಯಾವ ಸಾಲವನ್ನೂ ಮಾಡಿಲ್ಲ, ಹಾಲಪ್ಪನಿಂದ ಕೂಡಾ. ಹಾಗಾಗಿ ಸಾಲ ಕೊಟ್ಟವರು ಯಾರೂ ತನ್ನ ಮನೆಯ ಬಾಗಿಲನ್ನು ತಟ್ಟುವಂತಿಲ್ಲ, ಎಂದು, ಎದೆ ತಟ್ಟಿಕೊಂಡು, ತಲೆ ಎತ್ತಿಕೊಂಡು! ಆದರೆ ಹಾಗೆ ಯಾರೂ ಹೇಳುವಂತಿಲ್ಲ. ಯಾಕೆಂದರೆ ಸಿನೆಮಾ ಹಾಡೊಂದು ಹೇಳುತ್ತದೆ, ‘ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯಾ ಜನ್ಮವ ತಳೆದು…’ ಎಂದು. ಸಾಲ ತೀರಿದ ನಂತರವೇ ಮರುಜನ್ಮದ ಸರಣಿಯಿಂದ ಬಿಡುಗಡೆ ಎಂಬುದು … Read more

ವ್ಯವಸಾಯ ಎಂದರೆ: ಚೇತನ್ ಹೊನ್ನವಿಲೆ

ಕುಂಟೆಯ ಮೇಲೆ ಕೂತು, ಎತ್ತಿನ ಬಾಲ ಮುರಿದು, ' ಹೋಯ್ ' ಎಂದು ಅಬ್ಬರಿಸುವಾಗ, ಕುಂಟೆಯ ಅಲುಗಿಗೆ ತಗಲುವ ಮಣ್ಣಿನ ಎಂಟೆಗಳನು ಒಡೆದು ಪುಡಿ ಮಾಡುತ್ತಾ ಓಟ ಕೀಳುವ..' ಎತ್ತುಗಳ ಸ್ಟೇರಿಂಗು ಹಿಡಿದರೆ… ಅದೊಂತರ ರೋಲರ್ ಕೋಸ್ಟರ್ ರೈಡಿನ ಅನುಭವ. ದೂರದ ಊರಿನಲ್ಲಿ ಆದ ಬಸ್ಸಿನ ಹಾರನ್ನು ಕೇಳಿ, ಊಟದ ನೆನಪಾಗಿ, ಬಾಳೆಎಲೆ-ಅಡಿಕೆಆಳೆ ಕುಯ್ದು, ಸಣ್ಣಗೆ ಹರಿಯುವ ಕಾಲುವೆಯ ಪಕ್ಕದಲ್ಲಿಯೇ ಕುಳಿತು, ಸಾರು ಚೆಲ್ಲಿರುವ ಡಬ್ಬಿಯನ್ನು ಉಗುರಿನ ಕೈಯಲ್ಲಿ ತೆಗೆದು, ಒಂದಕ್ಕೊಂದು ಅಂಟಿಕೊಂಡು ಚಪ್ಪಟೆಯಮ್ತಾಗಿರುವ ಮುದ್ದೆಯನ ಬಿಡಿಸಿ … Read more

ತುರುಬಿಗೆ ತರುಬಿದ ಮನಸು: ನಾಗರಾಜ ಅಂಗಡಿ

ನಾನು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಮಾಡುತ್ತಿದ್ದೆ. ಅದು ಚಂದ್ರಶೇಖರ ಕಂಬಾರವರ ಆಹ್ವಾನವೆಂಬ ಪದ್ಯವನ್ನು  ವಿಶ್ಲೇಷಿಸುತ್ತಿರುವಾಗ ಆ ಪದ್ಯದಲ್ಲಿಯ ಒಂದು ಸಾಲು  ಹಳೆಯ ಪ್ರಕೃತಿಯ ತುರುಬು ಜಗ್ಗಿ ಆಚೆಗೆ ನೂಕಿ ಎಂಬುದು ಗಕ್ಕನೆ ನನ್ನ ಮನಸ್ಸು ತರುಣಿಯ ತುರುಬಿಗೆ ವಾಲಿಸಿತು. ಪಾಠವನ್ನು ಮುಗಿಸಿ ಬಂದ ಮೇಲೆ ತುರುಬಿನ ಬಗ್ಗೆಯೇ ಚಿಂತೆಯೇ ಶುರುವಾಯಿತು. ಹಾಗೆ ನೋಡಿದರೆ ಪಂಪನಿಂದ ಹಿಡಿದು ಕುವೆಂಪುವರೆಗೆ ಕೂದಲಿನ ಬಗ್ಗೆ ಬರೆಯದವರೇ ಇಲ್ಲವೆಂದು ಹೇಳಬೇಕು. ನಾರಿಗೆ ಗುಣವೇ ಶೃಂಗಾರವೆಂಬಂತೆ ನಾರಿಗೆ ಕೇಶವೇ ಶೃಂಗಾರವೆಂದು ಹೇಳಬಹುದು. ನಾರಿಗೆ … Read more