Facebook

Archive for the ‘ಪ್ರೀತಿ ಪ್ರೇಮ’ Category

ಅವಳು ಮತ್ತು ಅಂಗಡಿ: ಅಕ್ಷಯ ಕಾಂತಬೈಲು

     ಮೊಬೈಲಿನ ಕರೆನ್ಸಿ ಖಾಲಿಯಾದರೆ, ರೀಚಾರ್ಚ್ ಮಾಡುವ ಅಂಗಡಿ ಎಷ್ಟು ದೂರವಿದ್ದರೂ ಅಲ್ಲಿಗೆ ದಾಪುಗಾಲಿಡುತ್ತೇವೆ. ದೇವಸ್ಥಾನದಲ್ಲಿ ಮಂಗಳಾರತಿಯ ಹೊತ್ತು ತಪ್ಪಬಾರದೆಂದು ತುರಾತುರಿಯಿಂದ ಹೊರಡುತ್ತೇವೆ. ಇನ್ನೇನು ಕೆಲವೇ ನಿಮಿಷದಲ್ಲಿ ಬಸ್ಸು ಹೊರಡುತ್ತದೆಂದು ಓಡೋಡಿ ಹೋಗುತ್ತೇವೆ. ಹಾಗೆಯೇ ನಾನಿಲ್ಲಿ ಅವಳನ್ನು ನೋಡಲು, ಉನ್ಮತ್ತನಾಗಿ ಬೆಳಗ್ಗೇ ತಪ್ಪದೆ ಅವಳು ಹೊರಡುವ ಹೊತ್ತ ಗೊತ್ತು ಮಾಡಿ ಹೋಗುತ್ತಿರುವೆ. ನಾನು ಹೋಗುವುದಕ್ಕೆ ಪವಿತ್ರ ಉದ್ದೇಶವಿದೆ ಮತ್ತು ಭಾರಿ ತೃಪ್ತಿಯಿದೆ.  ಅವಳೇನು ನೋಡಲು ಚಿತ್ರ ಸುಂದರಿಯರಾದ ಕತ್ರೀನಾ ಅಲ್ಲ, ಐಶ್ವರ್ಯ ರೈನೂ ಅಲ್ಲ. ಒಬ್ಬಳು; […]

ಪ್ರೀತಿಸುವವರು ಪುಣ್ಯವಂತರು: ಅಕ್ಷಯ ಕಾಂತಬೈಲು

         ಫಟಫಟನೆ ಚಿಟಿಕೆ ಹೊಡೆದಷ್ಟು ವೇಗದಲ್ಲಿ ನಮ್ಮ ಜೀವನದಲ್ಲೊಂದು ಒಳ್ಳೆಯ ಬದಲಾವಣೆಯು ಕಂಡುಬಿಟ್ಟರೆ, ಅದು ಅವನ ಅಥವಾ ಅವಳ ಪುಣ್ಯ ಮಾರಾಯ ಅಂತ ಹೇಳಿಸಿಕೊಳ್ಳುತ್ತೇವೆ. ಈ ಬದಲಾವಣೆಯ ಹಿಂದೆ ನಾವೆಷ್ಟು ಶ್ರಮವಹಿಸಿದ್ದೇವೆಂದು ಮತ್ತು ನಿಗಾವಹಿಸಿದ್ದೇವೆಂದು ನಮಗೆ ಮಾತ್ರವೆ ಗೊತ್ತು. ಬದಲಾವಣೆಗೊಂದು ಪ್ರೀತಿಯು ಕಾರಣವಾದರೆ ಅದರ ಸೊಗಸೇ ಬೇರೆ ಅನ್ನಿಸುವುದುಂಟು. ಗಟ್ಟಿಯಾಗಿ ನಮ್ಮ ಮನಸ್ಸು ಒಳಗೊಳಗೇ ಜಪಿಸುತ್ತಿರುತ್ತದೆ. ಅವಳಿಂದಾಗಿ ಮತ್ತೆ ನನಗೆ ಜೀವಿಸಬೇಕೆಂದೆನಿಸಿತು, ಅವನಿಂದಾಗಿ ನಾನು ಮತ್ತೆ ಉತ್ಸುಕಳಾದೆ, ಅವಳೆಂದರೆ ಪ್ರಾಣ, ಅವನೆಂದರೆ ಉಸಿರು […]

ಕುಮಧ್ವತಿಯ ತಟದಲ್ಲಿ: ಶಿವಕುಮಾರ ಚನ್ನಪ್ಪನವರ

ಕುಮಧ್ವತಿಯ ಸೋದರಿಗೆ, ಪ್ರೀತಿಯ ಭಾಗೀರಥಿಗೆ………… ತಟ್ಟಕ್ಕನೇ ಅಲೆಯೆಬ್ಬಿಸಿ ಮರೆಯಾಗುವ ಮೀನು ತುಂಬಿ ತುಳುಕಾಡುವ ಕುಮಧ್ವತಿಯ ದಡದಲ್ಲಿ ನೀನು ಕಟ್ಟುತ್ತಿದ್ದ ಗುಬ್ಬಚ್ಚಿ ಗೂಡ ಅಳಿಸುವ ಹುನ್ನಾರ ನಡೆಸಿದಂತೆ ಕಾಣುತ್ತದೆ.  ರಾತ್ರಿಯೆಲ್ಲಾ ಕಣ್ಣ ರೆಪ್ಪೆ ಮುಚ್ಚುತ್ತಿದ್ದಂತೆ ಕಣ್ಣ ಪರದೆಯ ಪಟಲದಲ್ಲಿ ಕುಣಿಯುವ ನಿನ್ನ ನೆನಪುಗಳು ಚಾಪೆಯಡಿ ಕುಳಿತ ತಿಗಣೆಗಳಿಗೂ ಅಳು ಬರಿಸುವಂತಿರುತ್ತದೆ. ಒಬ್ಬಂಟಿಯಾಗಿ ಬಿಚ್ಚಿ ಹರವಿಕೊಂಡ ಅವೇ ನೆನಪುಗಳ ಮಧ್ಯದಿಂದಲೇ ನಿನ್ನ ಸುಳಿವು ಗುಂಗಾಡಿ ಹುಳುವಿನಂತೆ ಗುಯ್ ಗುಟ್ಟುತ್ತಾ ತಲೆ ಹೊಕ್ಕು ದೇಹದ ಯಾವ ಭಾಗವನ್ನು ಬಿಡದೇ ಸಮಾಜವೆಲ್ಲದರಿಂದ ದೂರವಾಗಿ […]

ಎನ್ನರಸಿ, ಚೆನ್ನರಸಿ ಎಲ್ಲಿರುವೆ ? ಹೇಗಿರುವೆ ?: ನಂದೀಶ್ ಟಿ.ಜಿ.

ಕೆಲವು ವ್ಯಕ್ತಿಗಳು ನಮ್ಮ ಪಾಲಿಗೆ  ಎಂದಿಗೂ ನಿಲುಕದ ನಕ್ಷತ್ರವಾಗಿ ಉಳಿದುಬಿಡುತ್ತಾರೆ. ಮೊದಲಿಂದಲೂ ನಮ್ಮಿಂದ ಒಂದು ತೆರನಾದ ಅಂತರ ಕಾಯ್ದುಕೊಂಡು, ನಮ್ಮ ಬೇಕು ಬೇಡಗಳಿಗೆ ಸ್ಪಂದಿಸದೆ ಹಾಗೆಯೇ ಇದ್ದರೆ, ತೀರಾ ಈ ಪರಿ ನೋವು ಕಾಡುತ್ತಿರಲಿಲ್ಲ. ಒಂದು ಹೊತ್ತಲ್ಲಿ ನಮ್ಮಿರುವನ್ನೇ ಮರೆಸುವಷ್ಟು ನಮ್ಮವರಾಗಿ ಎಲ್ಲವು ಹಾಯೇನಿಸುವಂತಿರುವಾಗ ಸಂಬಂಧವನ್ನು ಕಳಚಿಕೊಂಡು  ಎದ್ದು ನಡೆದು ಬಿಡುತ್ತಾರೆ. ಒಂದಿನಿತು ಸುಳಿವು ಕೊಡದೆ, ಒಂದಿಷ್ಟು ನೊಂದುಕೊಳ್ಳದೆ ನಮ್ಮಿಂದ ನಮ್ಮವರು ದೂರ ದೂರಕ್ಕೆ ಹೆಜ್ಜೆ ಹಾಕುವಾಗ ನಮ್ಮೀ ಮನಸು ಅಕ್ಷರಶಃ  ಬೆಂಕಿಗೆ ಮೈಯೊಡ್ಡಿದ ಕಾವಲಿ.  ಮರೆತುಬಿಡಬೇಕು […]

ಪ್ರೀತಿ, ಪ್ರೇಮ, ಪ್ರಣಯ: ಗಣೇಶ್ ಖರೆ

೧. ನನಗಾಗ ಹದಿನೆಂಟು, ಅವಳಿಗೋ ಹದಿನೈದಿರಬಹುದು. ನೋಡಲು ಸುರಸುಂದರಿ. ಇನ್ನೇನು ಬೇಕು ಪ್ರೇಮಾಂಕುರವಾಗಲು? ನಮ್ಮ ಪ್ರೇಮಕ್ಕೆ ಕೆಲ ವರುಷಗಳೇ ಕಳೆದವು, ಅವಳಿಗೂ ನನ್ನ ಮೇಲೆ ಪ್ರೀತಿಯಿತ್ತು, ನನ್ನ ನೋಡಿದಾಗೆಲ್ಲ ಅವಳು ಬೀರುವ ಮುಗುಳ್ನಗೆಯೇ ಅದಕ್ಕೆ ಸಾಕ್ಷಿ. ಒಬ್ಬರಿಗೊಬ್ಬರು ಎಂದೂ ಪ್ರೇಮದ ಪ್ರಸ್ತಾಪವನ್ನು ಮಾಡಲಿಲ್ಲ. ಕೊನೆಗೆ ನಾನೇ ಮಡಿದೆ, ಅವಳಿಗೆ ಗುಲಾಬಿ ಕೊಟ್ಟಾಗ ನನಗೆ ವಯಸ್ಸು ಇಪ್ಪತ್ತೈದು. ಗುಲಾಬಿ ಪಡೆದು ನಾಚಿ ನಡೆದಿದ್ದಳು, ಅವಳ ಸಮ್ಮತಿ ಕಣ್ಣಲ್ಲೇ ವ್ಯಕ್ತಪಡಿಸಿದ್ದಳು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಅವಳಿಗೆ ಗುಲಾಬಿ ಅರ್ಪಿಸುತ್ತಿದ್ದೇನೆ. […]

ಈ ಸಂಜೆ ಯಾಕಾಗಿದೆ . . . ?: ಮಂಜುನಾಥ್ ಬಂಡಿಹೊಳೆ

ಸಂಜೆ ಸೂರ್ಯ ಮೆಲ್ಲನೆ ಮರೆಯಾಗುವುದನ್ನು ನೋಡಿದಾಗ, ಮನಸ್ಸಿನ ಆಸೆಗಳು ನಿಧಾನವಾಗಿ ಕರಗತೊಡಗಿದವು.  ನೀ ಬರುವ ಹಾದಿಯನ್ನು ದಿಟ್ಟಿಸಿದಾಗ ನಿರಾಸೆಯ ಕಾರ್ಮೋಡ ಕವಿಯಿತು.  ಈ ಸಂಜೆಯು ನೀ ಬರಲಿಲ್ಲ, ಪ್ರೀತಿಗಾಗಿ ಕಾಯುವುದರಲ್ಲಿ ಏನೋ ನೆಮ್ಮದಿ.  ನನ್ನ ತಾಳ್ಮೆಗೆ ಮನಸೋತ ಬಾನಿಂದ ಕಣ್ಣೀರ ಸಿಂಚನ. . . ! ಮತ್ತದೇ ಹಳೆಯ ನೆನಪುಗಳು ಒಂದೋದಾಗಿ ನೆನಪಾಗತೊಡಗಿದವು.   ಅಂದು ಯಾವುದೋ ಕೆಲಸದ ತರಾತುರಿಯಲ್ಲಿ ಹೋಗುತ್ತಿದ್ದ ನನಗೆ ನಾಲ್ಕಾರು ಹುಡುಗಿಯರ ಮದ್ಯೆ ನಗುತ್ತಾ ನಿಂತಿದ್ದ ನೀನು ಕಾಣಿಸಿದೆ. ಭೇಟಿ ಆಕಸ್ಮಿಕವಾದರೂ ಸಂಬಂಧ ಶಾಶ್ವತ ಅಲ್ಲವೇ?ಕ್ಷಣಕಾಲ […]

ಸವಿ ನೆನಪುಗಳ ಪ್ರಥಮ ಮಿಲನಗಳ ಮೀರುವುದ್ಹೇಗೆ: ಷಡಕ್ಷರಿ ತರಬೇನಹಳ್ಳಿ

ಶಾಲೆಯ ಮೆಟ್ಟಿಲು ತುಳಿದ ಮೊದಲ ದಿನ ಇನ್ನೂ ನೆನಪಿದೆ. ನನ್ನನ್ನು ತನ್ನ ಬುಜದ ಮೇಲೊತ್ತು ಜೇಬು ತುಂಬಾ ಚಾಕಲೇಟು ತುಂಬಿಕೊಂಡು ಶಾಲೆಗೆ ಬಿಡುವ ಮುನ್ನ ನನ್ನ ಸೋದರ ಮಾವ ಹೇಳಿದ ಮಾತು ಮರೆಯದಂತೆ ನೆನಪಿದೆ. “ಸಾರ್ ನಮ್ಮುಡುಗನಿಗೆ ಯಾವ ಕಾರಣಕ್ಕೂ ಹೊಡೆಯಬೇಡಿ. ಅವನು ಮನೆಗೆ ಹೋಗಲು ಹಠ ಹಿಡಿದರೆ ತಗೊಳ್ಳೀ ಈ ಚಾಕಲೇಟ್ ಅವನಿಗೆ ಕೊಡಿ. ಆಯ್ತೇನೋ ಬಾಬು, ನೀನು ಹೇಳಿದಂತೆಯೇ ಇವರಿಗೆ ಹೇಳಿದ್ದೀನಿ. ಸರೀನಾ ಇವತ್ತಿನಿಂದ ನೀನು ಬೆಳಗೆಲ್ಲಾ ಇಲ್ಲೇ ಇರಬೇಕು ಗೊತ್ತಾಯ್ತಾ? ಆಗಲಿ ಎಂದು […]

ಇಂತಿ: ಬಸವರಾಜು ಕ್ಯಾಶವಾರ

ಪ್ರೀತಿಯ ಚಂದ್ರು,   ಕಳೆದ ಹತ್ತು ವರ್ಷಗಳಿಂದ್ಲೂ ದಿನವೂ ಪುಸ್ತಕ ತೆಗೆದು ಮತ್ತೆ ಮತ್ತೆ ನೋಡ್ತಾನೇ ಇದ್ದೀನಿ, ಆದರೆ ನೀನು ಕೊಟ್ಟ ನವಿಲುಗರಿ ಮರಿ ಹಾಕಿಲ್ಲ. ಆದ್ರೆ ಇವತ್ತಲ್ಲ ನಾಳೆ ಅದು ಮರಿ ಹಾಕುತ್ತೆ ಅಂತ ಕಾಯುತ್ತಿದ್ದೇನೆ. ವಿಶೇಷ ಅಂದ್ರೆ ನಮ್ಮಿಬ್ಬರ ನಡುವೆ ಇದ್ದ ಗೆಳೆತನ ಮಾಗಿ ಪ್ರೇಮದ ಮರಿ ಹಾಕಿದೆ.   ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲೂ ಹಳ್ಳಿಯ ಆ ಹೈಸ್ಕೂಲಿನ ದಿನಗಳು, ನಮ್ಮಿಬ್ಬರ ಬಾಲ್ಯದ ಸಂತಸದ ಕ್ಷಣಗಳು ಮತ್ತೆ ಮತ್ತೆ ನೆನಪಾಗ್ತಿವೆ. ನನ್ನ ಕೋಣೆ ತುಂಬೆಲ್ಲಾ […]

ಎಂದೆಂದಿಗೂ ಬೆಳಗುತಿರಲಿ ನನ್ನೊಡಲ ಮಿಹಿರ: ಸಂಗೀತ ರವಿರಾಜ್

ನನ್ನ ಒಲವೆ ಹೇಳೇ ಚೆಲುವೆ ಪ್ರೀತಿಯೊಂದೆ ಗೆಲ್ಲದೇ ನಾನು ನೀನು ಕೂಡಿ ಕಳೆದ ಬದುಕೆ ನಮ್ಮ ಕಾಯದೇ ಕೊಡಲು ಕೊಳ್ಳಲು ಒಲವು ಬಿಟ್ಟು ಬೇರೆ ಉಂಟೆ ಬಾಳಲಿ ಕೊಟ್ಟದೆಷ್ಟೋ ಪಡೆದದೆಷ್ಟೋ ನಮ್ಮ ನಂಟೆ ಹೇಳಲಿ ಜಯತೀರ್ಥ ಎಂಬುವರ ಕವಿವಾಣಿಯನ್ನು ನಾನು ಡೈರಿಯಲ್ಲಿ ಬರೆದಂದಿನಿಂದ ಅದೆಷ್ಟು ಬಾರಿ ಓದುತ್ತಿರುತ್ತೇನೋ ನನಗೆ ತಿಳಿಯದು. ಬೆಟ್ಟದಷ್ಟು ಇಷ್ಟಪಟ್ಟ ಈ ಸಾಲುಗಳಿಂದ ನನ್ನ ಹೃದಯಕ್ಕೆ ಏನೋ ಅರಿವಾಗದ ಆಪ್ತತೆ ಮತ್ತು ಕಕ್ಕುಲತೆ. ಇದಕ್ಕೊಂದು ಬಲವಾದ ಕಾರಣವಿದೆ. ನನ್ನ ಮದುವೆಯ ಆಮಂತ್ರಣ ಪತ್ರಿಕೆಗೆ ಪತ್ರಕರ್ತ […]

ಪ್ರೇಮ ಪ್ರೀತಿ ಇತ್ಯಾದಿ: ಶಮ್ಮಿ ಸಂಜೀವ್

ಹೂವೊಂದು ಬಳಿಬಂದು  ತಾಕಿತು ಎನ್ನೆದೆಯಾ  ಏನೆಂದು  ಕೇಳಲು  ಹೇಳಿತು ಜೇನಂಥ ಸವಿನುಡಿಯಾ …  ಎದೆ ತುಂಬಾ ಭಾವಗಳ ಧಾರೆ ಇತ್ತು…ಮೊದಲ ಪ್ರೇಮ ಪತ್ರಕ್ಕೆ ಅದೆಷ್ಟು ನಾಚಿಕೆಯ ಘಮವಿತ್ತು …ಕಾಲ ಓಡಿತು ..ಪ್ರೀತಿ ಪ್ರೇಮಕ್ಕೆ ಬೇರೆಯದೇ ಹೆಸರಿತ್ತು!! ಆಗಷ್ಟೇ ಅರಳಿದ ಹೂವೊಂದರ ಜೇನ  ಹೀರುವ ಮುನ್ನ ಪಿಸುನುಡಿಯಿತು ದುಂಬಿ .."ನೋವು ಮಾಡೋದಿಲ್ಲ ..ನಿನ್ನ ಪರಾಗ ಜೇನು ನನಗೆ..ನಿನ್ನ ಕಾಯಾಗಿಸಿ ಹಣ್ಣಾಗಿಸುವ ಜೀವನ ಪ್ರೀತಿ ನಿನಗೆ!!" ಅಂಜಲಿಲ್ಲ ಅಳುಕಲಿಲ್ಲ ತನ್ನ ಜೇನ ಒಡಲನ್ನ ಒಮ್ಮೆಗೆ ತೆರೆದು ಅರ್ಪಿಸಿ ಕೊಂಡಿತು .. […]