Facebook

Archive for the ‘ಪ್ರೀತಿ ಪ್ರೇಮ’ Category

ದೇವರೆ ಇಲ್ಲ ಎಂದವನ ಬದುಕಿನಲ್ಲಿ ದೇವತೆಯಾಗಿ ಬಂದೆ ನೀ…!: ಸಿದ್ದುಯಾದವ್ ಚಿರಿಬಿ…,

ಪ್ರೀತಿಯ ಪ್ರಿಯಲತೆಯೇ ಯಾಕೋ ಏನೂ ಬರೆಯಲಾಗಿರಲಿಲ್ಲ ತುಂಬಾ ದಿನ. ಇವತ್ತು ಮನಸ್ಸು ಯಾಕೋ ತಂತಾನೆ ಪ್ರಪುಲ್ಲ. ಮಂಜು ಬಿದ್ದ ಗೂಡಿನಲ್ಲಿ ಮುದುರಿ ಮಲಗಿದ ಗುಬ್ಬಿ ಮರಿಯನ್ನು ಸೂರ್ಯ ತಾಕಿ ಎಚ್ಚರಿಸಿದಂತೆ ನನ್ನ ಮುಂಗೈ ಮೇಲೆ ನಿನ್ನ ಬಿಸಿಯುಸಿರು. ನಿನ್ನ ನೆನಪುಗಳನ್ನು ಎದೆಯಂತರಾಳದಿಂದ ಎಕ್ಕಿ ಮನದ ಪುಟದ ಮೇಲೆ ತಂದು ತೋರಿಸುತ್ತಲೆ ಇತ್ತು. ಎರಡು ವಿರಹದ ಕವಿತೆಗಳನ್ನು ಬರೆದರು ಸಮಧಾನವೆನ್ನಿಸಲಿಲ್ಲ. ಈ ಸಂಜೆಯ ಶ್ರಾವಣದ ಝಡಿ ಮಳೆಯು ನಿನ್ನ ನೆನಪುಗಳ ತಂದು ಮನೆಯಂಗಳದಲ್ಲಿ ಎಡೆಬಿಡದೆ ಸುರಿಯುತ್ತಿದೆ. ಯಾಕೊ ಬೇಸರ […]

ಬುಟ್ಟಿಗೊಂದು ಬುತ್ತಿ ಬಿದ್ದಾಗ…: ಮಂಗಳ ರವಿಕುಮಾರ್

ಬೆಂಗಳೂರಿನಲ್ಲಿ ಬದುಕುವುದು ಕಲಿತು ನಾಲ್ಕೈದು ವರ್ಷ ಆಗಿರಬಹುದು. ಆದರೆ ನನ್ನನ್ನು ನಾನು ಇಷ್ಟೊಂದು ಕಳೆದುಕೊಂಡಿದ್ದು ಇದೇ ಮೊದಲು. ಹಾಡು, ಕುಣಿತ, ಎಲ್ಲರನ್ನೂ ಆಕರ್ಷಿಸುತ್ತಿದ್ದ ನನ್ನ ತಮಟೆ ಸದ್ದು.. ಅವ್ಯಾವೂ ಈಗಿಲ್ಲ. ನಾನು, ನನ್ನ ಅಸ್ಮಿತೆ ಬೇರೆಬೇರೆಯಂತೆ ಅನಿಸುತ್ತಿದೆ. ನೋಡಿ, ಆಗ ಜೊತೆಗಿದ್ದ ಗೆಳೆಯ-ಗೆಳತಿಯರು ಈಗ ದೊಡ್ಡ ಸಾಧಕರಂತೆ, ಪತ್ರಕರ್ತರಂತೆ, ಅಥವಾ ತುಂಬಾ ಸುಖೀ ಜೀವಿಗಳಂತೆ ಕಾಣುತ್ತಾರೆ. ನಾನೂ ಅವರನ್ನೆಲ್ಲಾ ಸಂಪರ್ಕಿಸುವುದೇ ಕಡಿಮೆ. ಬಹುಶಃ ನಾನೀನ ಅವರಿಗೆ ತುಂಬಾ ದೂರದ ಗೆಳತಿಯಾಗಿದ್ದಿರಬಹುದು. ಅಥವಾ ನನಗೇ ನಾನೇ ಹಾಗಂದುಕೊಂಡಿರಬಹುದು! ಒಂದಿಷ್ಟು […]

ಕನಸಿನಲ್ಲು ಕನವರಿಸುವಂತ ಪ್ರೀತಿ ಕೊಟ್ಟವಳೇ..: ಸಿದ್ದುಯಾದವ್ ಚಿರಿಬಿ.

ನೆಲದ ಮಣ್ಣು ಒಲುಮೆ ಕಣ್ಣು ತೆರಯಬಹುದು ಪ್ರೇಮದ ಹೆಣ್ಣು ಕನಸು ಮನಸುಗಳ ಬೆಸಗೆಯಲ್ಲಿ ನಮ್ಮಿಬ್ಬರ ಹೃದಯ ಮಿಲನದ ನವಿಲ ನರ್ತನವು ಪ್ರೇಮ ಕಾಶಿಯಲಿ…., ಜಗತ್ತಿನಲ್ಲಿ ಪ್ರೇಮವೇ ಧರ್ಮವೆಂದು ನಂಬಿಕೊಂಡು ಬಂದವರಲ್ಲಿ ಪ್ರೀತಿಯ ಜಲಪಾತ ಹೃದಯಂತರಾಳದಲ್ಲಿ ಧುಮ್ಮಿಕ್ಕುತ್ತದೆ. ನಿನ್ನೊಲವಿನ ಅಮಲಿನಲ್ಲೂ ಪ್ರೇಮ ನಳನಳಿಸುತ್ತದೆ ಸ್ವೀಟಿ. ಬಿರು ಬೇಸಿಗೆಯಲ್ಲೂ ಮುಂಗಾರಿನ ಅಭಿಷೇಕವಾಗುವಂತೆ ನಿನ್ನ ಒಲವಿನ ಮುಂಗಾರಿನ ಮಳೆ ನನ್ನೆದೆಯ ನೆಲದ ಮೇಲೆ ಸುರಿಯುತ್ತಿದೆ ಸಖಿ. ಕಾಡುವ ಕನಸಾಗಿ, ಪ್ರೀತಿಗೆ ಒಲವಾಗಿ, ಬದುಕಿಗೆ ಛಲವಾಗಿ ನನ್ನ ಜೀವನದ ಜ್ಯೋತಿ ನೀನಾಗಿ, ನನ್ನೊಂದಿಗೆ […]

ಹೃದಯಗಳ ಮಿಲನಮಹೋತ್ಸವವೆಂಬುದು: ಸಿದ್ದುಯಾದವ್ ಚಿರಿಬಿ

ಮೈ ಡಿಯರ್ ಸ್ವೀಟ್ ಸವಿ…, ಈ ನವಿರು ಮುಂಜಾವಿಗೆ ನಿನ್ನ ನೆನಪುಗಳಿಂದಲೆ ನೇಯ್ದ ಪ್ರೇಮದ ಬೆಡ್ ಶೀಟ್ ಹೊದ್ದು ಮಲಗಿದ್ದೇನೆ ಸಖಿ. ಸಿಹಿ ಕನಸುಗಳು ನೆನಪಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಆ ನೆನಪಿನ ಪುಟಗಳ ಸಾಲು ಸಾಲು ಅಕ್ಷರಗಳ ಬೀದಿಯಲಿ ಅಲೆದಂತೆ ಅಲ್ಲೆಲ್ಲೊ ನಿನ್ನ ನಗುವಿನ ವೀಣಾ ಲಹರಿ ತೇಲಿದರೆ, ಮತ್ತೆಲ್ಲೋ ನಿನ್ನ ನುಣುಪು ಪಾದಗಳ ಕಾಲ್ಗೆಜ್ಜೆಯ ಝೇಂಕಾರ ಧುಮ್ಮಿಕ್ಕುವುದು, ಕಿವಿಯ ಬಳಿ ಬಂದು ಪ್ರಿಯ ಎಂದು ನೀ ಉಸುರಿದಂತೆ, ಕೈ ಬಳೆಗಳ ಸರಿಗಮ ಚೆಲ್ಲಿದಂತೆ, ಮತ್ತೆಲ್ಲೊ […]

“ಮಲ್ಲಿಗೆ ಮುಡಿದು ಸುಖದಿಂದುರು ಗೆಳತಿ”: ಸಿದ್ದುಯಾದವ್ ಚಿರಿಬಿ

ನಿನ್ನೊಲವಿನ ಹಸಿ ಮಳೆಗೆ, ನೆನಪುಗಳ ಅಭ್ಯುಂಜನಕೆ ಈಗ ಕೇದಿಗೆಯ ಘಮ ನಲ್ಲೆ. ಮುಂಗಾರಿನ ಮೊದಲ ಮಳೆಯ ಹನಿ ಸಿಂಚನದಿ ಇಳೆಯು ಮೆದುವಾದಂತೆ ಈ ಹೃದಯ ನಿನ್ನ ಒಲವಿ ಝಡಿ ಮಳೆಗೆ ಮೆದುವಾಗಿ ಘಮ್ಮೆನ್ನುತಿದೆ. ಪ್ರೀತಿಯ ಸಿಂಚನದ ಮಂಪರಿನಲಿ ಮನಸು ತೂಗುಯ್ಯಾಲೆಯಾಡುತಿದೆ. ಈ ಪ್ರೀತಿ ಎಲ್ಲಿ, ಯಾವಾಗ, ಹೇಗೆ ಉದ್ಬವಿಸಿಬಿಡುತ್ತದೋ ತಿಳಿಯದು. ನಯನಗಳ ಮಹಲಿನಲಿ ಹೊಕ್ಕು ಗೆಜ್ಜೆಕಟ್ಟಿ ಭರತ ನಾಟ್ಯವಾಡಿಬಿಡುತ್ತದೆ. ಅದೇಷ್ಟೋ ಮೋಹಕ ನಿನ್ನಾ ನಗೆ ಮೊಗ, ಗಲ್ಲದ ಮೇಲಿನ ಆ ಹೂ ದಳ, ಪದಗಳೆ ಇಲ್ಲದೆ ಪಾದಗಳು […]

ಕೆಂಡಸಂಪಿಗೆಯಂಥವಳ ನೆನಪಿನಲ್ಲಿ… : ಶಿವಕುಮಾರ ಓಲೇಕಾರ  

                  ಅಬ್ಬಾ ! ಆ ದಿನಗಳು ನನ್ನಲ್ಲಿ ಅದೆಷ್ಟು ಸಂತೋಷ, ಅದೆಷ್ಟು ಉಲ್ಲಾಸದಿಂದ ಕೂಡಿದ್ದವು ಎಂದು ಹೇಳೋದಕ್ಕೆ ಈಗ ಮನಸ್ಸು ಭಾರವಾಗುತ್ತದೆ.  ಈ ಜಗತ್ತಿನಲ್ಲಿ ಕಾಣದ ಸುಂದರ ವಸ್ತು ಕಂಡು ನನ್ನದೆಂದು ಭಾವಿಸಿ ಅದನ್ನು ಅತಿಯಾಗಿ ಹಚ್ಚಿಕೊಂಡಿದ್ದೆ ನಂದೆ ತಪ್ಪು.  ಈ ಹರಿದ ಜೀವನದಲ್ಲಿ ಯಾರು ನೆನಪಿಲ್ಲ ಎಂಬ ಭಾವನೆಯ ಮುಖಾಂತರ ನನ್ನಿಂದ ನಾನೆ ದೂರಾಗಿದ್ದು, ಭಾವದ್ವೇಗಕ್ಕೆ ಒಳಗಾಗಿದ ದಿನಗಳು ಅದೆಷ್ಟೋ ಇವೆ ಎಂಬದನ್ನು ಎಣಿಸಲು  ನೆನಪು ಉಳಿಯದೆ ಹೋಗಿದೆ. ಆ […]

ಮೌನದೊಳಗೊಂದು ಜೀವಂತ ಪ್ರೀತಿ: ಸಿದ್ದುಯಾದವ್ ಚಿರಿಬಿ

ಅವಳು ಮತ್ತು ನಾನು ಕವಿತೆಗಳಲಿ ಬಳಸುವ ಪದ ಒಂದಿದೆ, ಯಾವ ಕವಿತೆಯೇ ಹಾಗಲಿ ಆ ಪದವಿಲ್ಲದೆ ಆರಂಭವಾಗುವುದಿಲ್ಲ, ಆ ಪದವಿಲ್ಲದೆ ಅಂತ್ಯಯಾಗುವುದಿಲ್ಲ. ನನಗರಿವಿಲ್ಲದೆ ಉದ್ಭವಿಸಿಬಿಡುವ ಆ ಒಂದೆ ಮಾತು ನಮ್ಮಿಬ್ಬರ ಮಧ್ಯೆ ಅದೇನೋ ಸಂಬಂಧಗಳನ್ನು ಸೃಷ್ಟಿಸಿದೆ. ನಮ್ಮಿಬ್ಬರಲ್ಲಿ ಮುಗಿಯಲಾಗದ ಸಂಭಾಷಣೆಯನ್ನು ಸೃಷ್ಟಿಮಾಡುತ್ತದೆ. ಒಲುಮೆ, ಪ್ರೀತಿ, ಮನಸು, ಕನಸು, ಭಾವನೆ, ಬದುಕು, ಉಸಿರು, ಇಂತಹ ಪದಗಳಿಗಿಂದ ಮೋದಲು ಮನಸಿನಲ್ಲಿ ಬಂದು ನಿಲ್ಲುವ ಆ ಒಂದು ಪದ ನಿಶ್ಶಬ್ದವಾದ ಹೃದಯ ಬಡಿತವನ್ನು ಶರವೇಗದಲ್ಲಿ ಭಾವನೆಗಳನ್ನು ಜಾಗೃತವಾಗಿಸಿಬಿಡುತ್ತದೆ. ನಮ್ಮಿಬ್ಬರ ಮಧ್ಯೆ ನೇರ […]

ಪ್ರೇಮದ Confession: ಚಂದನ್ ಶರ್ಮ

                    ತಂದೆ-ತಾಯಿ, ಬಂದು-ಬಳಗದ  ಪ್ರೀತಿ, ವಾತ್ಸಲ್ಯ, ಅಕ್ಕರೆ, ಮಮಕಾರ ಬಿಟ್ಟರೆ ಉಳಿಯೋದು ‘ಗಂಡು-ಹೆಣ್ಣಿನ’ ಪ್ರೇಮ; ಅದೇ ವಿಶ್ವದ ಹಲವಾರು ಕಾದಂಬರಿಗಳ, ನಾಟಕಗಳ, ಚಲನಚಿತ್ರಗಳಲ್ಲಿ ಕಂಡುಬರುವ ಪ್ರೀತಿ; ಇಲ್ಲ ಅದನ್ನ ಹಾಗೆ ಹೇಳಬಾರದು ಪ್ರೀತಿ ತುಂಬಾ ವಿಸ್ತಾರಾವಾದ ವಿಷಯ ಅದು ಮಾನವನ ಮೂಲ. ಈ ಪ್ರೀತಿ ಬಯಕೆಗಳ ಮೂಲ; ಒಂದು ಜೀವದ ಸುತ್ತ ಲಕ್ಷ ಆಕಾರಗಳನ್ನು ಪಡೆದು ಸುತ್ತುತ್ತಲೇ ಇರುತ್ತದೆ ಜೀವ ಹೋಗುವ ತನಕ. ಲಕ್ಷ […]

ನನ್ನೊಲವಿನ ಗೆಳತಿಗೆ…: ರಮೇಶ್ ನೆಲ್ಲಿಸರ

ನನ್ನೊಲವಿನ ಗೆಳತಿಗೆ… ಹೌದು ನಿನಗೆ ಬರಿತಿರೋದು ಮಾರಾಯ್ತಿ ಇನ್ನು ಎಷ್ಟು ದಿನ ಅಂತಾ ಈ ಮೋಬೈಲ್ನಲ್ಲಿ ಮೆಸೇಜ್ ಟೈಪ್ ಮಾಡದು, ಅದ್ ನೋಡಿದ್ರೆ 135 ಕ್ಕಿಂತ ಜಾಸ್ತಿ ಲೆಟರ್ಸ್ ತಗೊಳಲ್ಲ 2-3 ಮೆಸೇಜ್ ಒಟ್ಟಿಗೆ ಕಳ್ಸಣ ಅಂದ್ರೆ ನಿಮ್ ಡಬ್ಬ ಊರಲ್ ನೆಟ್ವರ್ಕಾದ್ರೂ ಸಿಗ್ತದಾ? ಅದೂ ಇಲ್ಲ,ಹೋಗ್ಲಿ ಸಿಗೇ ಮಾರಾಯ್ತಿ ಸ್ವಲ್ಪ ಮಾತಾಡನಾ ಅಂದ್ರೆ ನೀನು ಅದ್ಕೂ ನಮ್ಮನೇಲ್ ಸ್ಟ್ರಿಕ್ಟು ಹಾಗೇ ಹೀಗೆ ಅಂತೀಯಾ,ಮೂರ್ -ನಾಲ್ಕ್ ಸತಿ ಸಿಕ್ಕಿದ್ರು ಅರ್ಧ ಗಂಟೆ ಮಾತಾಡ್ಸ್ ಓಡ್ತಿಯಾ,ವರ್ಷ ಆತಲೆ ಅದ್ರು […]

ದಶಕದ ನೆನೆಪಿಗೆ ಗೆಳೆಯನಿಗೊಂದು ಪ್ರೇಮ ಪತ್ರ: ಸುಮಲತಾ ನಾಯ್ಕ

ಗೆಳೆಯ..ಗೆಳೆಯ.. ಏ.. ಮರಿ .. ಮರಿ  ನಂಗೆ ತುಂಬ ಖುಷಿ ಆಗ್ತಾ ಇದೆ. ನಂಗೆ ನಂಬೋಕೆ ಆಗ್ತಾ ಇಲ್ಲ. ನಂಗೆ ನಗು ಬರ್ತಾ ಇದೆ. ಮತ್ತದೇ ನಾಚಿಕೆ ನನ್ನಲ್ಲಿ ಮೂಡುತ್ತಿದೆ. ಯಾಕೆ ಗೊತ್ತಾ  ನಮ್ಮ ಪ್ರೇಮಕ್ಕೆ 10 ವರ್ಷವಂv!!!É. ನಿಮಗೆ ನಂಬೋಕೆ ಆಗ್ತಾ ಇದ್ಯಾ. ನೀವ್ ಬಿಡಿ ನನಗಿಂತ ತುಂಬಾ ಹುಷಾರು . ಎಲ್ಲವನ್ನು ನೆನೆಪಿಡುವ ಮಹಾ ರಸಿಕ. ನೋಡಿ ಒಮ್ಮೆ ಹಿಂದೆ ಹೋಗಿ ಬರ್ಲಾ. ನಮ್ಮ ಪ್ರೇಮಕ್ಕೆ 10ವರ್ಷದ ಹೊಸ್ತಿಲು. ನೆನೆದಷ್ಟು ಮೊಗೆದಷ್ಟು, ಬೆರೆತಷ್ಟು, ಕಲೆತಷ್ಟು […]